Search
  • Follow NativePlanet
Share
» »ಚಿತ್ರದುರ್ಗದಲ್ಲಿರುವ ಚಂದ್ರವಳ್ಳಿ ಗುಹಾ ದೇವಾಲಯದ ಒಳಗೆ ಹೋಗಿದ್ದೀರಾ?

ಚಿತ್ರದುರ್ಗದಲ್ಲಿರುವ ಚಂದ್ರವಳ್ಳಿ ಗುಹಾ ದೇವಾಲಯದ ಒಳಗೆ ಹೋಗಿದ್ದೀರಾ?

ಚಿತ್ರದುರ್ಗದಲ್ಲಿ ಒಂದು ಅರೆ ಚಂದ್ರಾಕೃತಿಯಲ್ಲಿರುವ ಗುಹೆಯನ್ನು ನೋಡಿದ್ದೀರಾ? ಇದನ್ನು ಚಂದ್ರವಳ್ಳಿ ಗುಹೆ ಎನ್ನುತ್ತಾರೆ. ಇದು ಚಿತ್ರದುರ್ಗ ಜಿಲ್ಲೆಯಲ್ಲಿರುವ ಒಂದು ಇತಿಹಾಸ ಪೂರ್ವ ಸ್ಥಳವಾಗಿದೆ. ಇಲ್ಲಿರುವ ದೇವಸ್ಥಾನವು ಅರೆ-ಚಂದ್ರನ ಆಕಾರದಲ್ಲಿದೆ ಮತ್ತು ಚಿತ್ರದುರ್ಗದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ಮೂರು ಬೆಟ್ಟಗಳಾದ ಚಿತ್ರದುರ್ಗ, ಚೋಳಗುಡ್ಡ ಮತ್ತು ಕಿರಾಬನಕಲ್ಲುಗಳಿಂದ ರೂಪುಗೊಂಡ ಒಂದು ಕಣಿವೆಯಾಗಿದೆ. ಈ ಪ್ರದೇಶವು ಶಿಲಾ ಯುಗದಿಂದಲೂ ನೆಲೆಸಿದೆ ಎಂಬುದು ಇಲ್ಲಿ ದೊರೆತಿರುವ ಶಿಲಾಶಾಸನಗಳು ಬಹಿರಂಗಪಡಿಸುತ್ತವೆ.

 ಚಂದನವತಿ ಎನ್ನಲಾಗುತ್ತಿತ್ತು

ಚಂದನವತಿ ಎನ್ನಲಾಗುತ್ತಿತ್ತು

ಚಂದ್ರವಳ್ಳಿಯನ್ನು ಹಿಂದೆ ಚಂದನವತಿ ಎಂದು ಕರೆಯಲಾಗುತ್ತಿತ್ತು. ಚಂದನವತಿ ಎಂದರೆ ಚಂದ್ರನ ಆಕಾರದಲ್ಲಿರುವುದು ಎಂದರ್ಥ. ಇಲ್ಲಿ ಕಂಡು ಬಂದ ಮಣ್ಣಿನ ಮಡಿಕೆಗಳು, ನಾಣ್ಯಗಳು, ಬಟ್ಟಲುಗಳು ಮತ್ತು ಇತರ ವಸ್ತುಗಳು ಈ ಸ್ಥಳದ ಶ್ರೀಮಂತ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿನ ಗುಹೆ ದೇವಾಲಯವು ಸಮುದ್ರ ಮಟ್ಟಕ್ಕಿಂತ 80 ಅಡಿಗಳಷ್ಟು ಕೆಳಗಿದೆ ಮತ್ತು ರಹಸ್ಯಗಳನ್ನು ಹೊಂದಿದೆ ಎಂದು ನಂಬಲಾಗಿದೆ.

ನಾಗದೇವರು ಮನುಷ್ಯ ರೂಪದಲ್ಲಿ ಬರುವ ಕ್ಷೇತ್ರವನ್ನು ಕಂಡಿದ್ದೀರಾ?

ಗುಹೆಯೊಳಗೆ ಬೆಳಕಿಲ್ಲ

ಗುಹೆಯೊಳಗೆ ಬೆಳಕಿಲ್ಲ

ಚಂದ್ರವಲ್ಲಿಯಲ್ಲಿ ಭೈರವವೇಶ್ವರ ದೇವಸ್ಥಾನದಲ್ಲಿ ಕಂಡುಬರುವ ಮೊದಲ ಕನ್ನಡ ಸಾಮ್ರಾಜ್ಯದ ಕದಂಬ ಸಂಸ್ಥಾಪಕ ಮಯೂರಶರ್ಮ ನ ಶಿಲಾಶಾಸನವಿದೆ. ಚಿತ್ರದುರ್ಗದಲ್ಲಿನ ಚಂದ್ರವಲ್ಲಿ ಗುಹೆಯ ದೇವಾಲಯದ ಒಳಾಂಗಣಗಳು ಸಂಪೂರ್ಣವಾಗಿ ಗಾಢವಾಗಿದ್ದು, ಈ ದೇವಾಲಯವನ್ನು ಅನ್ವೇಷಿಸಲು ಟಾರ್ಚ್ ಅಗತ್ಯವಿದೆ. ದೇವಾಲಯದ ನಿರ್ಮಾಣ ಮತ್ತು ಸ್ಥಳದಿಂದಾಗಿ ಈ ದೇವಾಲಯವು ಸಂತರು ಮತ್ತು ಋಷಿಗಳಿಗೆ ಧ್ಯಾನ ಮಾಡುವ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ.

ಉಸಿರುಗಟ್ಟುವ ಅನುಭವ ಆಗುವುದಿಲ್ಲ

ಉಸಿರುಗಟ್ಟುವ ಅನುಭವ ಆಗುವುದಿಲ್ಲ

ದೇವಸ್ಥಾನದ ಮೂಲಕ ಹಾದುಹೋಗುವಾಗ ಯಾವುದೇ ಬೆಳಕು ಇಲ್ಲವಾದರೂ ಉಸಿರುಗಟ್ಟುವ ಅನುಭವ ಆಗುವುದಿಲ್ಲ. ತಂಪಾದ ತಂಗಾಳಿಯು ಯಾವಾಗಲೂ ಇರುತ್ತದೆ, ವಾತಾವರಣವು ತಂಪಾಗಿರುತ್ತದೆ. ಈ ಬಂಡೆಯನ್ನು ಸರಿಯಾದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಬಂಡೆಗಳ ಸಂಧಿಯಿಂದ ಗಾಳಿ ಬೀಸುತ್ತದೆ ಮತ್ತು ದೇವಸ್ಥಾನದ ಒಳಗೆ ಉಸಿರುಗಟ್ಟುವುದನ್ನು ನೀವು ಎಂದಿಗೂ ಅನುಭವಿಸುವುದಿಲ್ಲ.

ಕಾರವಾರದಲ್ಲಿರುವ ಆಮೆ ಆಕಾರದ ದ್ವೀಪವನ್ನು ನೋಡಿದ್ದೀರಾ?

ಗುಹೆಯಲ್ಲಿನ ಕೋಣೆಗಳು

ಗುಹೆಯಲ್ಲಿನ ಕೋಣೆಗಳು

ಈ ಗುಹೆಯಲ್ಲಿ ಶಿವಲಿಂಗವನ್ನು ಇರಿಸಲಾಗಿರುವ ಸ್ಥಳವಿದೆ. ಭೇಟಿ ನೀಡುವವರ ಕೋಣೆ, ಸಾಧುಗಳು, ವರ್ಣಚಿತ್ರಗಳು ಮತ್ತು ಪೂರ್ವ-ಐತಿಹಾಸಿಕ ಕಾಲದಿಂದಲೂ ಇತರ ಕೆತ್ತನೆಗಳು, ವಸ್ತು, ಗ್ರಂಥಾಲಯ, ಪೂಜಾ ಕೋಣೆ, ಮಲಗುವ ಕೋಣೆ ಮತ್ತು ಬಾತ್‌ರೂಮ್‌ಗಳು ಕೂಡ ಇವೆ.

ಶಿವ ದೇವಸ್ಥಾನದ ವಿಶೇಷತೆ

ಶಿವ ದೇವಸ್ಥಾನದ ವಿಶೇಷತೆ

ಶಿವ ದೇವಸ್ಥಾನದಿಂದ ಎಡಕ್ಕೆ ಮುಖ್ಯ ಗುಹೆಯಲ್ಲಿ ಪ್ರವೇಶಿಸಿದಾಗ ಹೊರಗಿನ ಸಾಮಾನ್ಯ ಗುಹೆಯಂತೆ ಕಾಣುವ ಈ ಗುಹೆಯ ಹೃದಯದಲ್ಲಿ ಅದ್ಭುತಗಳು ಮತ್ತು ರಹಸ್ಯಗಳು ಅಡಗಿವೆ. ಶಿವನ ವಾಹನ ನಂದಿಯ ಮೂರ್ತಿಯೊಂದಿಗೆ ಮುಖ್ಯ ದ್ವಾರ ಇದೆ. ಆದ್ದರಿಂದ ನಂದಿ ಈ ಗುಹೆಯ ಮೊದಲ ಕಾವಲುಗಾರ ಆಗಿದ್ದಾನೆ. ಈ ಬಾಗಿಲು ಪ್ರವೇಶಿಸಿದಾಗ, ಕುಳಿತುಕೊಳ್ಳುವ ಕೋಣೆಗಳ ಪರಿಕಲ್ಪನೆಯನ್ನು ಹೋಲುವ ಕೊಠಡಿಯಿದೆ. ಇಲ್ಲಿ ನೀವು ಋಷಿಯನ್ನು ಭೇಟಿಯಾಗಲು ಬಯಸಿದರೆ ಮಾತ್ರ ಜನರಿಗೆ ಮುಂದಿನ ಬಾಗಿಲು ದಾಟಲು ಅವಕಾಶ ನೀಡಲಾಗುವುದು. ಇದನ್ನು ಸಿಂಹ ದ್ವಾರ ಎನ್ನಲಾಗುತ್ತದೆ. ಇದು ನೇರವಾಗಿ ಗುರುಕುಲ ಮತ್ತು ಪ್ರಾರ್ಥನಾ ಕೋಣೆಗೆ ಸಂಪರ್ಕ ಹೊಂದುತ್ತದೆ.

ಯಮಯಿ ದೇವಸ್ಥಾನದಲ್ಲಿರುವ 7 ಕೆ.ಜಿ ಚಿನ್ನದ ಕಲಶ ನೋಡಿದ್ದೀರಾ?

ಅದ್ಭುತ ವಾಸ್ತುಶಿಲ್ಪ

ಅದ್ಭುತ ವಾಸ್ತುಶಿಲ್ಪ

ಈ ಕೋಣೆಯ ಒಳ ವಾಸ್ತುಶಿಲ್ಪವು ಈ ಗುಹೆಗಳಲ್ಲಿ ಅಳವಡಿಸಲಾಗಿರುವ ಕಟ್ಟಡ ವಿಧಾನಗಳ ಉತ್ತಮ ಪರಿಚಯ ನೀಡುತ್ತದೆ. ಆವೆ ಮಣ್ಣು, ಸುಣ್ಣ, ಮೊಟ್ಟೆಯ ಹಳದಿ ಲೋಳೆಯನ್ನು ಮಿಶ್ರಣ ಮಾಡಿ ಹಲವು ತಿಂಗಳುಗಳವರೆಗೆ ಬಲಪಡಿಸಲು ಇಟ್ಟು ಪ್ರಕ್ರಿಯೆಯ ಕೊನೆಯಲ್ಲಿ ಅವರು ಬಲವಾದ ಸಿಮೆಂಟ್ ತರಹದ ವಸ್ತುವನ್ನು ಹಾಕಿ ಗೋಡೆಯನ್ನು ನಿರ್ಮಿಸಲಾಗಿದೆ. ನಂತರ ಅದಕ್ಕೆ ವಿವಿಧ ಬಣ್ಣವನ್ನು ಹಾಕಲಾಗಿದೆ.

ರಾಜ ಚಂದ್ರಹಾಸ

ರಾಜ ಚಂದ್ರಹಾಸ

PC:Kandukuru Nagarjun

ಇಂದು, ಈ ಗುಹೆ ದೇವಾಲಯವು ಭಾರತದ ಪುರಾತತ್ವ ಸರ್ವೆ ರಕ್ಷಣೆಯಡಿಯಲ್ಲಿದೆ. ಕುನ್ತಾಳವನ್ನು ಆಳಿದ ಚಂದ್ರಹಾಸನ ಕಾರಣದಿಂದ ಈ ಗುಹೆಗೆ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಕಂಡುಬರುವ ಕೆಲವು ಶಾಸನಗಳಲ್ಲಿ ಈ ಪ್ರದೇಶವು ಶಿಲಾಯುಗದ ಕಾಲದಿಂದಲೂ ನೆಲೆಸಿದೆ ಎಂದು ತಿಳಿಸುತ್ತದೆ. ಇದರ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊರತುಪಡಿಸಿ, ಗುಹೆಯು ರಹಸ್ಯ ಕಥೆಗಳ ಮನೆಯಾಗಿದೆ. ಗುಹೆಯಲ್ಲಿ ಕೆಳಗಿಳಿಯುತ್ತಿರುವಾಗ ಯಾರೋ ನಿಮ್ಮನ್ನು ಅಂಡರ್‌ಗ್ರೌಂಡ್‌ಗೆ ಎಳೆದಂತಹ ಅನುಭವವಾಗುತ್ತದೆ. ಕೆಲವು ಪ್ರವೇಶದ್ವಾರಗಳನ್ನು ಹೊರತುಪಡಿಸಿ ನೀವು ಪ್ರತಿಯೊಂದು ಪ್ರವೇಶವನ್ನು ಕಷ್ಟ ಪಡದೆ ಸಾಗಬಹುದು.

ಅದ್ಭುತ ರಚನೆ

ಅದ್ಭುತ ರಚನೆ

ಈ ಸೃಷ್ಟಿಯ ಹಿಂದೆ ಅದ್ಭುತ ಎಂಜಿನಿಯರಿಂಗ್‌ ಕೈ ಚಳಕವಿದೆ. ಈ ಗುಹೆಯು ಸುಮಾರು 120 ಅಡಿ ಎತ್ತರದ ಬೃಹತ್ ಬಂಡೆಗಳ ಅಡಿಯಲ್ಲಿ ರಚಿಸಲ್ಪಟ್ಟಿದೆ ಮತ್ತು ನೀವು ಮಾರ್ಗದರ್ಶಿ ಇಲ್ಲದೇ ಈ ಗುಹೆಯನ್ನು ಪ್ರವೇಶಿಸಿದರೆ ಅಲ್ಲಿ ದಾರಿ ತಪ್ಪುವ ಎಲ್ಲಾ ಸಾಧ್ಯತೆಗಳು ಇವೆ. ಇಲ್ಲಿರುವ ಪ್ರತಿಯೊಂದು ಬಾಗಿಲು ಒಂದನ್ನೊಂದು ಹೋಲುತ್ತವೆ. ನೀವು ಯಾವ ದಾರಿಯಿಂದ ಬಂದಿದ್ದೀರೀ ಅನ್ನೋದೆ ತಿಳಿಯುವುದಿಲ್ಲ.

ರಾಜರು ಸೋತಾಗ ಅಡಗಿಕೊಳ್ಳುತ್ತಿದ್ದದ್ದು ಇಲ್ಲೇ

ರಾಜರು ಸೋತಾಗ ಅಡಗಿಕೊಳ್ಳುತ್ತಿದ್ದದ್ದು ಇಲ್ಲೇ

ಗುಹೆಯ ಒಳಗೆ ಒಂದು ರಹಸ್ಯ ಸ್ಥಳವಿದೆ. ಈ ರಹಸ್ಯ ಸ್ಥಳದಲ್ಲಿ ರಾಜರು ಯುದ್ಧದಲ್ಲಿ ಸೋತಾಗ ಅಡಗಿಕೊಳ್ಳುತ್ತಿದ್ದ ಸ್ಥಳ ಎನ್ನಲಾಗುತ್ತದೆ. ಜೊತೆಗೆ ಯಾವುದಾದರೂ ರಹಸ್ಯ ಸಭೆಗಳು ನಡೆಯುತ್ತಿದ್ದ ಸ್ಥಳ ಎನ್ನಲಾಗುತ್ತದೆ. ಈಗ ಅಲ್ಲಿ ಸಾಕಷ್ಟು ಬಾವಲಿಗಳು ಮನೆ ಮಾಡಿವೆ. ಹಾಗಾಗಿ ನೀವು ಈ ಕತ್ತಲೆಯ ರಹಸ್ಯ ಸ್ಥಳಕ್ಕೆ ಹೋಗುವಾಗ ಸ್ವಲ್ಪ ಜಾಗರೂಕತರಾಗಿರ ಬೇಕು.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಚಂದ್ರವಲ್ಲಿ ಗುಹೆ ದೇವಾಲಯ ಹೊರತುಪಡಿಸಿ, ಚಿತ್ರದುರ್ಗದಲ್ಲಿ ಶೋಧಿಸಬಹುದಾದ ಇತರ ಸ್ಥಳಗಳಲ್ಲಿ ಹಿರಿಯೂರು, ಹೋಳಲ್ಕೆರೆ, ಸಿರಿಗರೆ ಮತ್ತು ಮೊಲಕಾಲ್ಮುರು ಸೇರಿವೆ. ಚಿತ್ರದುರ್ಗವು ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರದಲ್ಲಿದೆ ಮತ್ತು ಭಾರತದ ಇತರ ಪ್ರಮುಖ ನಗರಗಳಿಗೆ ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಚಿತ್ರದುರ್ಗಕ್ಕೆ ಭೇಟಿ ನೀಡಲು ಉತ್ತಮ ಸಮಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X