Search
  • Follow NativePlanet
Share
» »ಚಾಮುಂಡೇಶ್ವರಿ ದೇವಾಲಯ ಮತ್ತು ಕ್ಷೇತ್ರ ಮಹಿಮೆ

ಚಾಮುಂಡೇಶ್ವರಿ ದೇವಾಲಯ ಮತ್ತು ಕ್ಷೇತ್ರ ಮಹಿಮೆ

By Vijay

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಸಂಬೋಧಿಸಲಾಗುವ ಮೈಸೂರು ನಗರದಿಂದ ಸುಮಾರು ಹದಿನಾಲ್ಕು ಕಿ.ಮೀ ದೂರದಲ್ಲಿರುವ ಚಾಮುಂಡೇಶ್ವರಿ ಬೆಟ್ಟ ಒಂದಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು ತಾಯಿ ಚಾಮುಂಡೇಶ್ವರಿ ದೇವಿಯು ನೆಲೆಸಿರುವ ಪುಣ್ಯ ಕ್ಷೇತ್ರವಾಗಿದೆ.

ಮೈಸೂರು ಮೊದಲೆ ಪ್ರವಾಸದ ದೃಷ್ಟಿಯಿಂದ ಸಾಕಷ್ಟು ಹೆಸರುವಾಸಿಯಾದ ನಗರ. ಸಾಕಷ್ಟು ಆಕರ್ಷಕವಾದ ಪ್ರವಾಸಿ ಕೇಂದ್ರಗಳು ಮೈಸೂರು ನಗರ ಹಾಗೂ ಸುತ್ತಮುತ್ತಲು ಕಂಡುಬರುತ್ತವೆ. ಇನ್ನೂ ಧಾರ್ಮಿಕವಾಗಿಯೂ ಹಲವು ದೇಗುಲ ಹಾಗೂ ಪುಣ್ಯ ತಾಣಗಳನ್ನು ಮೈಸೂರಿನಲ್ಲಿ ಕಾನಬಹುದಾಗಿದೆ.

ಇವೆ ಆ 18 ಮಹಾಶಕ್ತಿಪೀಠಗಳು!

ಅಂತಹ ಕೆಲವು ಧಾರ್ಮಿಕ ತಾಣಗಳ ಪೈಕಿ ಚಾಮುಂಡಿ ಬೆಟ್ಟ ಹಾಗೂ ಅದರ ಮೇಲೆ ನೆಲೆಸಿರುವ ಚಾಮುಂಡೇಶ್ವರಿಯ ದೇವಾಲಯವೂ ಸಹ ಒಂದು. ಈ ಚಾಮುಂಡಿ ಬೆಟ್ಟವು ಮೈಸೂರಿನ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದ್ದು ಸಾಮಾನ್ಯವಾಗಿ ಮೈಸೂರಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಂದ ಭೆಟಿ ನೀಡಲ್ಪಡುತ್ತದೆ.

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಮೈಸೂರಿನ ಈ ಚಾಮುಂಡಿ ಬೆಟ್ಟ ಹಾಗೂ ಅದರ ಮೇಲೆ ನೆಲೆಸಿರುವ ಚಾಮುಂಡೇಶ್ವರಿ ದೇವಾಲಯದ ಕುರಿತು ಮಾಹಿತಿ ಪಡೆಯಿರಿ.

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟದ ಮೇಲೆ ನೆಲೆಸಿರುವ ಚಾಮುಂಡೇಶ್ವರಿ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಕ್ರೌಂಚಪೀಠ ಎಂದೂ ಸಹ ಕರೆಯಲಾಗುವ ಈ ಶಕ್ತಿ ದೇವಿಯು ಮೈಸೂರು ಸಂಸ್ಥಾನದ ಅರಸರು ಹಿಂದಿನಿಂದಲೂ ಪ್ರಮುಖವಾಗಿ ಪೂಜಿಸಿಕೊಂಡು ಬರುತ್ತಿರುವ ದೇವಿಯಾಗಿದ್ದಾಳೆ. ಸಾಂದರ್ಭಿಕ.

ಚಿತ್ರಕೃಪೆ: Jonoikobangali

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಮೈಸೂರು ನಗರದ ಅರಮನೆಯ ತಾಣದಿಂದ ದೂರದಲ್ಲಿ ಅದ್ಭುತವಾಗಿ ಕಂಡುಬರುವ ಚಾಮುಂಡಿ ಬೆಟ್ಟವು ತನ್ನ ಅಗಾಧ ವೈಭವದಿಂದಲೆ ಜನರನ್ನು ತನ್ನೆಡೆಗೆ ಬರಲು ಆಕರ್ಷಿಸುತ್ತದೆ ಅಥವಾ ಪ್ರೇರೆಪಿಸುತ್ತದೆ ಎಂದರೆ ತಪ್ಪಾಗಲಾರದು.

ಚಿತ್ರಕೃಪೆ: Prof tpms

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ದಂತಕಥೆಯ ಪ್ರಕಾರ, ರಂಭನೆಂಬ ಬಲಶಾಲಿ ಅಸುರನೊಬ್ಬನು ಮಹಿಷಿ ಎಂಬ ಅರ್ಧ ಮನುಷ್ಯ ಹಾಗೂ ಅರ್ಧ ಎಮ್ಮೆಯ ರೂಪದ ರಾಕ್ಷಸಿಯನ್ನು ನೋಡಿ ಮೋಹಿತನಾದನು ಹಾಗೂ ಅವಳನ್ನು ಸೇರಿದನು. ಇವರಿಬ್ಬರ ಮಿಲನದಿಂದ ಹುಟ್ಟಿದ ರಾಕ್ಷಸನೆ ಮಹಿಷಾಸುರ.

ಚಿತ್ರಕೃಪೆ: Jonoikobangali

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಹಿಂದೆ ರಂಭನು ಅಗ್ನಿಯ ಕುರಿತು ಕಠಿಣವಾದ ತಪಸ್ಸನ್ನಾಚರಿಸಿ ಅತ್ಯಂತ ಬಲಶಾಲಿಯಾದ ಪುತ್ರ ಪಡೆಯುವ ವರದಾನ ಪಡೆದಿದ್ದನು. ಅದರಂತೆ ಮಹಿಷಿಯಿಂದ ಹುಟ್ಟಿದ ರಂಭನ ಮಗನಾದ ಮಹಿಷಾಸುರನು ಅತ್ಯಂತ ಬಲಶಾಲಿಯಾಗಿದ್ದನು ಹಾಗೂ ಅವನೂ ಸಹ ತಪಸ್ಸು ಮಾಡಿ ಇನ್ನಷ್ಟು ಶಕ್ತಿಶಾಲಿಯಾಗಿ ಮೂರು ಲೋಕಗಳಲ್ಲಿ ತನ್ನ ಸಾರ್ವಭೌಮತ್ವ ಸ್ಥಾಪಿಸಿದನು.

ಚಿತ್ರಕೃಪೆ: Sanath Kumar

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಇದರಿಂದ ದೇವತೆಗಳು ಪಡಬಾರದ ಕಷ್ಟ ಪಟ್ಟರು ಹಾಗೂ ಲೋಕದ ಜನರೆಲ್ಲ ಮಹಿಷಾಸುರನ ಅತ್ಯಾಚಾರದಿಂದ ಬಳಲಿ ಬೆಂಡಾದರು. ಕೊನೆಗೆ ಎಲ್ಲ ದೇವತೆಗಳು ತ್ರಿಮೂರ್ತಿಗಳ ಬಳಿ ತೆರಳಿ ವಸ್ತುಸ್ಥಿತಿ ವಿವರಿಸಿದಾಗ ತ್ರಿಮೂರ್ತಿಗಳು ತಮ್ಮೆಲ್ಲ ಶಕ್ತಿಯನ್ನು ಒಂದೆಡೆ ಧಾರೆ ಎರೆದರು. ಈ ಶಕ್ತಿಯಿಂದ ಅತ್ಯಂತ ಭಯಂಕರ ರೂಪದ ನೊಡಿದರೆ ಬೆಚ್ಚಿ ಬೀಳುವಂತಹ ಶಕ್ತಿ ದೇವಿಯೊಬ್ಬಳು ಪ್ರತ್ಯಕ್ಷಳಾದಳು. ಅವಳೆ ಚಾಮುಂಡಿ.

ಚಿತ್ರಕೃಪೆ: Philip Larson

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಹೀಗೆ ಪ್ರತ್ಯಕ್ಷಳಾದ ಚಾಮುಂಡಿ ಹೂಂಕರಿಸುತ್ತ ಮಹಿಷಾಸುರನ ಬಳಿ ತೆರಳಿ ಭೀಕರ ಯುದ್ಧ ಮಾಡ ತೊಡಗಿದಳು. ಅತ್ಯಂತ ಬಲಶಾಲಿಯಾಗಿದ್ದ ಮಹಿಷಾಸುರನು ಸಾಕಷ್ಟು ಪ್ರತಿರೋಧವನ್ನು ಒಡ್ಡಿದನು. ಹೀಗೆ ಒಂಭತ್ತು ದಿನಗಳ ಕಾಲ ಯುದ್ಧ ನಡೆದು ಕೊನೆಗೆ ಚಾಮುಂಡಿಯು ಮಹಿಷಾಸುರನನ್ನು ವಧಿಸಿದಳು.

ಚಿತ್ರಕೃಪೆ: Mariyath

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಈ ಮಹಾಯುದ್ಧವು ಒಂಭತ್ತು ದಿನಗಳ ಕಾಲ ಚಾಮುಂಡಿ ಬೆಟ್ಟದ ಮೇಲೆ ಜರುಗಿತೆಂಬ ಪ್ರತೀತಿಯಿದೆ. ಹೀಗಾಗಿ ದೇವಿಯು ತದನಂತರ ಈ ಬೆಟ್ಟವನ್ನೆ ಆಯ್ಕೆ ಮಾಡಿ ಅಲ್ಲಿ ಶಾಶ್ವತವಾಗಿ ನೆಲೆಸಿದಳು ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣ.

ಚಿತ್ರಕೃಪೆ: Jithesh

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಮಹಿಷನು ಈ ಸ್ಥಳದಲ್ಲಿಯೆ ತನ್ನ ಸಾಮ್ರಾಜ್ಯ ಹೊಂದಿದ್ದನು ಹಾಗೂ ಅದು ಮಹಿಷನ ಊರು ಎಂದು ಕರೆಯಲ್ಪಡುತ್ತಿತ್ತು. ಈ ಶಬ್ದವೆ ಕ್ರಮೇಣವಾಗಿ ಮಹಿಷೂರು ತದ ನಂತರ ಮೈಸೂರು ಎಂದಾಯಿತು ಎಂದು ಹೇಳಲಾಗುತ್ತದೆ ಹಾಗೂ ಚಾಮುಂಡೇಶ್ವರಿಯನ್ನು ಮಹಿಷಾಸುರ ಮರ್ದಿನಿ ಎಂತಲೂ ಸಹ ಕರೆಯಲಾಗುತ್ತದೆ. ಚಾಮುಂಡಿ ಬೆಟ್ಟದ ಮೇಲಿಮ್ದ ಕಂಡುಬರುವ ನೋಟ.

ಚಿತ್ರಕೃಪೆ: Rishabh Mathur

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟದ ಮೆಲಿರುವ ಚಾಮುಂಡೇಶ್ವರಿಯ ಈ ದೇವಾಲಯವು ಹೊಯ್ಸಳ ವಾಸ್ತುಶೈಲಿಗೆ ಸಾಕ್ಷಿಯಾಗಿದ್ದು ಹೊಯ್ಸಳ ದೊರೆ ವಿಷ್ಣುವರ್ಧನನಿಂದ ನಿರ್ಮಿಸಲ್ಪಟ್ಟಿದೆ. ತದ ನಂತರ ಈ ಪ್ರದೇಶವನ್ನಾಳಿದ ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಅರಸರುಗಳಿಂದ ಮತ್ತಷ್ಟು ನವೀಕರಣಗೊಳಿಸಲ್ಪಟ್ಟಿತು. ಚಾಮುಂಡೇಶ್ವರಿ ದೇವಾಲಯದ ರಥ.

ಚಿತ್ರಕೃಪೆ: Ranjithsiji

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಈ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ ಅದ್ಭುತವಾಗಿ ನಿರ್ಮಿಸಲಾಗಿರುವ ದೇವಾಲಯ ಗೊಪುರ. ಮೊದ ಮೊದಲು ಇಷ್ಟು ಸುಂದರವಾದ ಗೋಪುರ ಈ ದೇವಾಲಯಕ್ಕಿರಲಿಲ್ಲ. 1825-26 ರ ಸಂದರ್ಭದಲ್ಲಿ ಮೂರನೇಯ ಕೃಷ್ಣರಾಜ ವಡೇಯರ್ ಅವರಿಂದ ಈ ಗೋಪುರವು ನಿರ್ಮಿಸಲ್ಪಟ್ಟಿತು.

ಚಿತ್ರಕೃಪೆ: Sanjay Acharya

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಇದೆ ಸಂದರ್ಭದಲ್ಲಿ ಭಕ್ತಾದಿಗಳು ದೇವಿಯ ದರ್ಶನಕ್ಕೆ ಬರಲು ಅನುಕೂಲವಾಗುವಂತೆ ವಡೇಯರ್ ಅರಸರುಗಳಿಂದಲೆ ಬೆಟ್ಟ ಏರಲು ಸಾವಿರ ಮೆಟ್ಟಿಲುಗಳನ್ನು ಕೊರೆಯಲಾಯಿತು. ಬೆಟ್ಟ ಏರುವ ಸಂದರ್ಭದಲ್ಲಿ ಶಿವನ ವಾಹನವಾದ ನಂದಿಯನ್ನು ಕಾಣಬಹುದು. ಏಕಶಿಲೆಯಲ್ಲಿ ಅದ್ಭುತವಾಗಿ ಕೆತ್ತಲಾದ ಈ ಬಸವನ ಪ್ರತಿಮೆ ಇನ್ನೊಂದು ಆಕರ್ಷಣೆಯಾಗಿದೆ.

ಚಿತ್ರಕೃಪೆ: Spiros Vathis

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಮತ್ತೊಂದು ಗಮನಸೆಳೆವ ಪ್ರತಿಮೆಯೆಂದರೆ ಕೀಚಕನದ್ದು. ಮಹಿಷಾಸುರನನ್ನು ಭಯಂಕರ ರೂಪದಲ್ಲಿ ನಿರ್ಮಿಸಲಾದ ಪ್ರತಿಮೆ ಇದಾಗಿದ್ದು ಪ್ರವಾಸಿಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Ramesh NG

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡೇಶ್ವರಿ ದೇವಾಲಯದ ಬಳಿಯಲ್ಲೆ ಶಿವನಿಗೆ ಮುಡಿಪಾದ ಮಹಾಬಲೇಶ್ವರನ ದೇವಾಲಯವಿದೆ. ಇದು ಚಾಮುಂಡೇಶ್ವರಿ ದೇವಾಲಯಕ್ಕಿಂತಲೂ ಪುರಾತನವಾದ ದೇವಾಲಯ ಎನ್ನಲಾಗಿದೆ.

ಚಿತ್ರಕೃಪೆ: Saravana Kumar

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇಗುಲ:

ಮೈಸೂರು ನಗರ ಕೇಂದ್ರ ಬಸ್ಸು ನಿಲ್ದಾಣದಿಂದ ನಿರಂತರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಲು ಹಾಗೂ ಅಲ್ಲಿಂದ ಮರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಬಾಡಿಗೆ ರಿಕ್ಷಾ ಹಾಗೂ ಕಾರುಗಳೂ ಸಹ ದೊರೆಯುತ್ತವೆ. ಚಾಮುಂಡೇಶ್ವರಿ ಬಸ್ಸು ನಿಲ್ದಾಣ.

ಚಿತ್ರಕೃಪೆ: Prof tpms

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X