Search
  • Follow NativePlanet
Share
» »ರಜನಿಕಾಂತ್‌ಗೆ ಹಿಮಾಲಯ ಅಂದ್ರೆ ಇಷ್ಟವಂತೆ ಹಾಗಾದ್ರೆ ಇವ್ರಿಗೆಲ್ಲಾ...

ರಜನಿಕಾಂತ್‌ಗೆ ಹಿಮಾಲಯ ಅಂದ್ರೆ ಇಷ್ಟವಂತೆ ಹಾಗಾದ್ರೆ ಇವ್ರಿಗೆಲ್ಲಾ...

ಪ್ರತಿದಿನದ ಆಫೀಸ್‌, ಮನೆ ಕೆಲಸ ಅಂತಾ ಇರುವ ಸಾಮಾನ್ಯ ಜನರಿಗೆನೇ ಬ್ರೇಕ್‌ನ ಅಗತ್ಯವಿರುತ್ತದೆ. ಮನಸ್ಸಿಗೆ ನೆಮ್ಮದಿ ಅನ್ನೋದು ಬೇಕಿರುತ್ತದೆ. ಎಲ್ಲಾದರೂ ಸುತ್ತಾಡಲು ಹೋಗೋಣ ಅನ್ನಿಸೋದು ಸಹಜ. ಹೀಗಿರುವಾಗ ಇನ್ನು ಪ್ರತೀ ದಿನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸಿನಿಮಾ ಸ್ಟಾರ್‌ಗಳಿಗೆ ಬ್ರೇಕ್ ಬೇಕು ಅನಿಸದೇ ಇರುತ್ತಾ? ಒಂದು ವಾರ ರಜಾ ಹಾಕಿ ಎಲ್ಲಾದರೂ ಸುತ್ತಾಡಲು ಹೋಗೋದನ್ನು ನೀವು ನೋಡಿರುವಿರಿ, ಪತ್ರಿಕೆಗಳಲ್ಲಿ ಸಿನಿಮಾ ಸ್ಟಾರ್‌ಗಳು ವಿದೇಶಗಳಲ್ಲಿ ರಜಾ ದಿನಗಳನ್ನು ಕಳೆಯುವುದರ ಬಗ್ಗೆ ಓದಿರುವಿರಿ. ಈ ಸಿನಿಮಾ ಸ್ಟಾರ್‌ಗಳಿಗೆ ಬರೀ ವಿದೇಶಗಳು ಮಾತ್ರವಲ್ಲ, ನಮ್ಮ ದೇಶದಲ್ಲಿನ ಹಲವು ಸ್ಥಳಗಳು ಫೇವರೆಟ್ ಇರುತ್ತದೆ. ತಮ್ಮ ಬ್ಯುಸಿ ಶೆಡ್ಯೂಲ್‌ನಿಂದ ರಿಲಾಕ್ಸ್ ಪಡೆಯಲು ತಮಗೆ ಇಷ್ಟವಾಗುವ ತಾಣಗಳಿಗೆ ಹೋಗಿ ಕಾಲ ಕಳೆಯುತ್ತಾರೆ. ಯಾವ್ಯಾವ ಸೆಲೆಬ್ರಿಟಿಗೆ ಯಾವ ತಾಣಗಳು ಇಷ್ಟವಾಗುತ್ತದೆ ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ.

ಸೋನಮ್ ಕಪೂರ್

ಸೋನಮ್ ಕಪೂರ್

ಬಾಲಿವುಡ್‌ನ ಆಕರ್ಷಕ ನಟಿಯರಲ್ಲಿ ಒಬ್ಬರಾಗಿರುವ ಸೋನಮ್ ಕಪೂರ್‌ಗೆ ಕಾಡಿನ ಪ್ರವಾಸ ಅಂದರೆ ಇಷ್ಟವಂತೆ. ಅದರಲ್ಲೂ ಕಾನ್ಹಾರಾಷ್ಟ್ರೀಯ ಉದ್ಯಾನವನಕ್ಕೆ ಹೋಗೋದಂದ್ರೆ ಇಷ್ಟವಂತೆ. ಸೋನಾಮ್ ಕಪೂರ್ ಮತ್ತು ಅವಳ ಸಹೋದರಿ ರಿಯಾ ಕಪೂರ್ ಮಧ್ಯ ಪ್ರದೇಶದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನವಾದ ಕನ್ಹಾವನ್ನು ಭೇಟಿ ಮಾಡಲು ಇಚ್ಚಿಸುತ್ತಾರೆ. ಜಂಗಲ್ ಬುಕ್‌ನಲ್ಲಿ ತೋರಿಸಲಾಗಿರುವ ಪ್ರದೇಶ ಇದೆ ಎನ್ನಲಾಗುತ್ತದೆ. ಈ ಹುಲಿ ಸಂಖ್ಯೆ ಹೊಂದಿರುವ ಕಾಡು ಕಳೆದ ಕೆಲವು ವರ್ಷಗಳಿಂದ ಪ್ರಸಿದ್ಧ ವ್ಯಕ್ತಿಗಳಿಗೆ ಪ್ರಮುಖ ಆಕರ್ಷಣೀಯ ತಾಣವಾಗಿದೆ.

ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ

PC: FB

ಈ ತಾಣವನ್ನು ಇನ್ನು ಸಾಕಷ್ಟು ಸೆಲೆಬ್ರಿಟಿಗಳು ಇಷ್ಟ ಪಡುತ್ತಾರೆ. ಸೋನಾಕ್ಷಿ ಸಿನ್ಹಾ ಅವರು ಬಾಲ್ಯದಲ್ಲಿ ಕಾನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಕುಟುಂಬದೊಂದಿಗೆ ರಜಾದಿನಗಳನ್ನು ಕಳೆಯಲು ಹೋಗುತ್ತಿದ್ದರಂತೆ. ಸಫಾರಿಗಳು, ಪಕ್ಷಿ ವೀಕ್ಷಣೆ ಮತ್ತು, ಕೆಲವು ಐಷಾರಾಮಿ ರೆಸಾರ್ಟ್‌ಗಳು ಈ ಸ್ಥಳವನ್ನು ಭೇಟಿ ನೀಡುವಂತೆ ಮಾಡುತ್ತದೆ, ಲೈಫ್ ಚೆನ್ನಾಗಿ ಎಂಜಾಯ್ ಮಾಡಬಹುದು ಎನ್ನುತ್ತಾರೆ ಸೋನಾಕ್ಷಿ.

ಕಾನ್ಹಾರಾಷ್ಟ್ರೀಯ ಉದ್ಯಾನ

ಕಾನ್ಹಾರಾಷ್ಟ್ರೀಯ ಉದ್ಯಾನ

PC: சொந்த முயற்சி
ಕಾನ್ಹಾರಾಷ್ಟ್ರೀಯ ಉದ್ಯಾನವು ಮಧ್ಯಪ್ರದೇಶದ ಸತ್ಪುರಾಗಳ ಮೈಕಲ್ ವ್ಯಾಪ್ತಿಯಲ್ಲಿ ನೆಲೆಗೊಂಡಿದೆ. ಭಾರತದ ಹೃದಯಭಾಗವು ಮಧ್ಯ ಭಾರತೀಯ ಎತ್ತರದ ಪ್ರದೇಶಗಳನ್ನು ರೂಪಿಸುತ್ತದೆ. ರಾಷ್ಟ್ರೀಯ ಉದ್ಯಾನವನ ಹುಲಿ ಮೀಸಲು ಎಂದು ಜನಪ್ರಿಯಗೊಂಡಿದೆ. ಅಷ್ಟೇ ಅಲ್ಲದೆ ಈ ಪ್ರದೇಶದ ಅತ್ಯುತ್ತಮ ವನ್ಯಜೀವಿ ಪ್ರದೇಶಗಳಲ್ಲಿ ಒಂದಾಗಿ ಘೋಷಿಸಲಾಗಿದೆ. ಕಾನ್ಹಾ ರಾಷ್ಟ್ರೀಯ ಉದ್ಯಾನವನವು ಕಾಡು ಪ್ರಾಣಿಗಳ ವ್ಯಾಪಕ ಶ್ರೇಣಿಯ ಆದರ್ಶ ತಾಣವಾಗಿದೆ. ಹೆಚ್ಚಿನ ಸಂಖ್ಯೆಯ ಬಲಶಾಲಿ ಹುಲಿಗಳು ಮತ್ತು ಅಸಂಖ್ಯಾತ ಸಸ್ಯಗಳು, ಹಕ್ಕಿಗಳು, ಸರೀಸೃಪಗಳು ಮತ್ತು ಕೀಟಗಳನ್ನು ಹೊಂದಿದೆ.

ಅಲಿಯಾ ಭಟ್‌

ಅಲಿಯಾ ಭಟ್‌

ಅಲಿಯಾ ಭಟ್‌ಗೆ ವಿದೇಶ ಪ್ರವಾಸ ಅಂದ್ರೆ ಇಷ್ಟ. ಆದರೆ ಕುಟುಂಬದ ಜೊತೆ ಒಟ್ಟಾಗಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದಾಗ, ಅವರು ನಿಜಾಮರ ನಗರವನ್ನು ಅಂದರೆ ಹೈದರಾಬಾದ್‌ನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೈದರಾಬಾದ್‌ನ ತಾಜ್ ಫಾಲಕ್ನಾಮಾ ಅರಮನೆಯನ್ನು ಆಯ್ಕೆ ಮಾಡಿಕೊಂಡರು. 2014 ರಲ್ಲಿ, ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾರ ವಿವಾಹವೂ ಕೂಡಾ ಇಲ್ಲೇ ಅನೇಕ ಸೆಲೆಬ್ರಿಟಿ ಅತಿಥಿಗಳ ಸಮ್ಮುಖದಲ್ಲಿ ನಡೆದಿತ್ತು.

ಫಲಾಕ್-ನಾಮ , ಹೈದರಾಬಾದ್

ಫಲಾಕ್-ನಾಮ , ಹೈದರಾಬಾದ್

PC: Wiki
ಹೈದರಾಬಾದ್ ಎಲ್ಲಾ ರೀತಿಯ ಪ್ರಯಾಣಿಕರಿಗೆ ಇಷ್ಟವಾಗುವಂತಹ ತಾಣವಾಗಿದೆ. ಅಲ್ಲಿನ ಪ್ರಸಿದ್ಧ ಆಹಾರ ಪದ್ಧತಿಯಿಂದ ಹಿಡಿದು ಐತಿಹಾಸಿಕ ಕಟ್ಟಡಗಳು, ತಾಣಗಳು ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸುವ ಅವಕಾಶವನ್ನು ನೀಡುತ್ತದೆ. ಹೈದರಾಬಾದ್ ಪ್ರಧಾನಮಂತ್ರಿಯಾಗಿದ್ದ ನವಾಬ್ ಸರ್ ವಿಖರ್-ಉಲ್-ಉಮ್ರಾ ಮತ್ತು ಚಿಕ್ಕಪ್ಪ ಮತ್ತು ಆರನೇ ನಿಜಾಮ್ನ ಸೋದರ ಸಂಬಂಧಿ ಈ ಅರಮನೆಯನ್ನು ನಿರ್ಮಿಸಿದ್ದಾರೆ. ಫಲಾಕ್-ನಾಮ ಎಂದರೆ "ಲೈಕ್ ದ ಸ್ಕೈ" ಅಥವಾ ಉರ್ದು ಭಾಷೆಯಲ್ಲಿ "ಮಿರರ್ ಆಫ್ ಸ್ಕೈ" ಎಂದರ್ಥ.

ಗೋವಾ

ಗೋವಾ

ಭಾರತದಲ್ಲಿ, ಪ್ರಸಿದ್ಧ ವ್ಯಕ್ತಿಗಳೂ ಸೇರಿದಂತೆ ಎಲ್ಲರಿಗೂ ಗೋವಾ ರಜಾದಿನದ ಅಚ್ಚುಮೆಚ್ಚಿನ ತಾಣವಾಗಿದೆ. ಅಮಿತಾಭ್ ಬಚ್ಚನ್, ಮಲೈಕಾ ಅರೋರಾ, ಬಿಪಾಶಾ ಬಸು ಮತ್ತು ಇತರ ಬಾಲಿವುಡ್ ಖ್ಯಾತನಾಮರ ಮೆಚ್ಚಿನ ತಾಣ ಗೋವಾ ಎಂದು ಹೇಳಿದ್ದಾರೆ. ಈ ಹಿಂದೆ ಲಾರಾ ದತ್ತಾ ಮತ್ತು ಮಹೇಶ್ ಭೂಪತಿ ಅವರು ತಮ್ಮ ವಿವಾಹಗಳಿಗೆ ಈ ಸ್ಥಳವನ್ನು ಆಯ್ಕೆ ಮಾಡಿದ್ದರು. ನೈಟ್‌ ಲೈಫ್‌ ಸಮುದ್ರಾಹಾರಗಳು, ಜಲಕ್ರೀಡೆಗಳಿಗೆ ಗೋವಾ ಫೇಮಸ್ ಆಗಿದೆ.

ಲಡಾಖ್

ಲಡಾಖ್

PC:hamon jp
ಲಡಾಖ್ ನ ಅತಿವಾಸ್ತವಿಕ ಭೂದೃಶ್ಯ, ಮೊನಚಾದ ಪರ್ವತಗಳು, ಶುಷ್ಕ ಮೇಲ್ಮೈ ಮತ್ತು ಸ್ಪಷ್ಟವಾದ ಆಕಾಶದಿಂದ ಸಂಪೂರ್ಣವಾಗಿದ್ದು, ಹೆಚ್ಚಿನ ಚಲನಚಿತ್ರಗಳಿಗೆ ಈ ಪ್ರದೇಶವು ನೆಚ್ಚಿನ ಶೂಟಿಂಗ್ ಸ್ಥಳಗಳಾಗಿದ್ದರೂ ಸಹ, ರಜಾ ದಿನಗಳನ್ನು ಕಳೆಯಲು ಹೆಚ್ಚಿನವರು ಇಲ್ಲಿಗೆ ಬರುತ್ತಾರೆ. ಈ ಸ್ಥಳಕ್ಕೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದವರಲ್ಲಿ ಗುಲ್ ಪನಾಗ್ ಕೂಡಾ ಒಬ್ಬರು. ಈ ಸ್ಥಳಕ್ಕೆ ಪ್ರಯಾಣಿಸುವ ಮತ್ತೊಂದು ಪ್ರಸಿದ್ಧ ವ್ಯಕ್ತಿ ಮಿಲಿಂದ್ ಸೋಮನ್. ಬೈಕಿಂಗ್, ಟ್ರೆಕ್ಕಿಂಗ್, ಛಾಯಾಗ್ರಹಣಕ್ಕಾಗಿ ಲೆಕ್ಕವಿಲ್ಲದಷ್ಟು ಜನರು ಲಡಾಖ್‌ನ್ನು ಆಯ್ಕೆ ಮಾಡುತ್ತಾರೆ.

ಮಸ್ಸೂರಿ

ಮಸ್ಸೂರಿ

PC:RajatVash
ಪ್ರಸಿದ್ಧ ಆಟಗಾರ ಸಚಿನ್ ತೆಂಡೂಲ್ಕರ್ ಈ ಗಿರಿಧಾಮದ ಅಭಿಮಾನಿ. ಸಣ್ಣ ಟಿಪ್ ಟಾಪ್ ಮಳಿಗೆ ಎಂಬ ಸಣ್ಣ ಆಹಾರದ ಅಂಗಡಿಯನ್ನೂ ಸಹ ಇದು ಹೊಂದಿದೆ.ಗಿರಿಧಾಮಗಳನ್ನು ಇಷ್ಟಪಡುವ ಜನರು ಈ ಜನಪ್ರಿಯ ಸ್ಥಳಕ್ಕೆ ಭೇಟಿ ಮಾಡಲು ಇಷ್ಟಪಡುತ್ತಾರೆ. ಡೂನ್ ಕಣಿವೆಯಲ್ಲಿ ಮಾಲ್ ರೋಡ್ ಅನ್ನು ಸುತ್ತಾಡ ಬಹುದು ಇಲ್ಲಿ ಲೆಕ್ಕವಿಲ್ಲದಷ್ಟು ಸಣ್ಣ ಮಾರಾಟಗಾರರು ಮತ್ತು ತಿನಿಸುಗಳ ಅಂಗಡಿಗಳನ್ನು ಕಾಣಬಹುದು.

ಜೈಪುರ

ಜೈಪುರ

ಲೊನಾವ್‌ಲಾ

ಲೊನಾವ್‌ಲಾ

PC: Ravinder Singh Gill
ಮುಂಬೈಗೆ ಹತ್ತಿರವಾಗಿರುವ ಲೊನಾವ್‌ಲಾ ಸ್ಥಳವು ಬಾಲಿವುಡ್ ಖ್ಯಾತ ವ್ಯಕ್ತಿಗಳ ನಡುವೆ ನೆಚ್ಚಿನ ತಾಣವಾಗಿದೆ. ಕಾಜೊಲ್ ಮತ್ತು ಅಜಯ್ ದೇವಗನ್, ಮತ್ತು ಅಮೀರ್ ಖಾನ್ ಸೇರಿದಂತೆ ಕೆಲವು ಚಿತ್ರ ತಾರೆಯರು ಇಲ್ಲಿ ತಮ್ಮದೇ ಆದ ಆಸ್ತಿಯನ್ನು ಹೊಂದಿದ್ದಾರೆ. ಈ ಸ್ಥಳವು ಮುಂಬೈನಲ್ಲಿರುವವರಿಗೆ ಪರಿಪೂರ್ಣವಾದ ವಾರಾಂತ್ಯದ ಸ್ಥಳವಾಗಿದೆ. ಇದು ಕಾರ್ಲಾ ಮತ್ತು ಬೆಡ್ಸೆ ಗುಹೆಗಳನ್ನು ಭೇಟಿ ಮಾಡಬಹುದು ಅಥವಾ ಬೆಟ್ಟದ ಸುತ್ತಲೂ ಸಂಚರಿಸಬಹುದು.

ಹಿಮಾಲಯ

ಹಿಮಾಲಯ

ತಮಿಳು ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಹಿಮಾಲಯ ಅಂದ್ರೆ ಅಚ್ಚುಮೆಚ್ಚು. ಇವರು ವರ್ಷಕ್ಕೊಮ್ಮೆಯಾದರೂ ಹಿಮಾಲಕ್ಕೆ ಹೋಗಿ ಬರುತ್ತಾರೆ. ಜೀವನದಲ್ಲಿ ಸಿಂಪಲ್ ಆಗಿರುವ ರಜನಿಗೆ ಹಿಮಾಲಯವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X