Search
  • Follow NativePlanet
Share
» »ಆತ್ಮವು ಕಪಾಳಮೋಕ್ಷ ಮಾಡುವ ರಾಜಸ್ಥಾನದ ಅರಮನೆ ಇದು...

ಆತ್ಮವು ಕಪಾಳಮೋಕ್ಷ ಮಾಡುವ ರಾಜಸ್ಥಾನದ ಅರಮನೆ ಇದು...

By Sowmyabhai

ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಾತ್ಮಕ ಹಾಗು ನಿಗೂಢ ಸ್ಥಳಗಳು ಇರುವುದನ್ನು ಕಾಣಬಹುದು. ಕೆಲವು ಸ್ಥಳಗಳು ಅಪಾಯಕಾರಿ ಎಂದು ತಿಳಿದಿದ್ದರು ಕೂಡ ಆ ಸ್ಥಳಕ್ಕೆ ಹೋಗಿ ತಮ್ಮ ಧೈರ್ಯವನ್ನು ಪ್ರದರ್ಶಿಸಿಕೊಳ್ಳುವ ಸಲುವಾಗಿ ಅನೇಕ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕೆಲವು ಪ್ರೆಶ್ನೆಗಳಿಗೆ ಉತ್ತರ ಕಂಡು ಹಿಡಿಯುವುದಕ್ಕಿಂತ ಸುಮ್ಮನೆ ಇರುವುದು ಒಳ್ಳೆಯದು. ನಮ್ಮ ಸುತ್ತ-ಮುತ್ತ ಅನೇಕ ಆಗೋಚರವಾದ ಶಕ್ತಿಗಳು ಇರಬಹುದು. ಅವುಗಳಲ್ಲಿ ಕೆಲವು ಕಣ್ಣಿಗೆ ಕಾಣಿಸುವುದು, ಅನುಭವ ಎಲ್ಲವೂ ಆಗುತ್ತದೆ.

ಹಾಗಾದರೆ ಬನ್ನಿ ಲೇಖನದ ಮೂಲಕ ಸಂಕ್ಷೀಪ್ತವಾಗಿ ಕೆಲವು ನಿಗೂಢವಾದ ಹಾಗು ಭಯಾನಕವಾದ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ.

1.ಬ್ರಿಜ್ ರಾಜ್ ಭವನ ಅರಮನೆ

1.ಬ್ರಿಜ್ ರಾಜ್ ಭವನ ಅರಮನೆ

PC:YOUTUBE

ಬ್ರಿಜ್ ರಾಜ್ ಅರಮನೆಯು ರಾಜಸ್ಥಾನದ ಕೋಟಾದಲ್ಲಿದೆ. ಇದೊಂದು ಪ್ರೇತದಿಂದ ಕೂಡಿರುವ ಸ್ಥಳ ಎಂದೇ ನಂಬಲಾಗಿದೆ. ಏಕೆಂದರೆ ಇಲ್ಲೊಂದು ಭಯಾನಕವಾದ ಆತ್ಮದ ಸಂಚಾರವಿದೆಯಂತೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಕಪಾಳ ಮೋಕ್ಷ ಕೂಡ ಆಗಿವೆ ಎಂತೆ. ಆದರೆ ಹಿಂದೆ-ಮುಂದೆ ಯಾರು ಕೂಡ ಕಾಣಿಸುವುದಿಲ್ಲ.

ಒಂದು ನಂಬಿಕೆಯ ಪ್ರಕಾರ, ಮೇಜರ್ ಬರ್ಟನ್ ಕೋಟಾದ ಬ್ರಿಟೀಷ್ ನಿವಾಸಿ ಈ ಭವನದಲ್ಲಿ ಸೇವೆ ಸಲ್ಲಿಸುತ್ತಿದ್ದನಂತೆ. 1857 ರ ದಂಗೆಯ ಸಂದರ್ಭದಲ್ಲಿ ಭಾರತೀಯ ಸಿಪಾಯಿಗಳಿಂದ ಆತನನ್ನು ಕೊಲ್ಲಲಾಯಿತಂತೆ. ಆತನೇ ಇಲ್ಲಿ ಆತ್ಮನಾಗಿ ಸಂಚಾರ ಮಾಡುತ್ತಿದ್ದಾನೆ ಎಂದು ನಂಬಲಾಗಿದೆ. ಈ ಬ್ರಿಜ್ ರಾಜ್ ಭವನವು ಸುಮಾರು 178 ವರ್ಷಗಳ ಹಳೆಯ ಅರಮನೆಯಾಗಿದೆ. ಈ ಅರಮನೆಗೆ ತೆರಳಲು ಜನರು ಭಯಗೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ತಲುಪುವ ಬಗೆ ಹೇಗೆ?

ಈ ಬ್ರಿಜ್ ರಾಜ್ ಭವನ ಅರಮನೆ ರಾಜಸ್ಥಾನ ರಾಜ್ಯದಲ್ಲಿದ್ದು, ಜೈಪುರಕ್ಕೆ ವಿಮಾನದ ಮೂಲಕ ತೆರಳಬಹುದು. ಅಲ್ಲಿಂದ ಕೋಟಾಗೆ ಕ್ಯಾಬ್ ಅಥವಾ ಸಾರ್ವಜನಿಕ ಸಾರಿಗೆಯ ಮೂಲಕ ತೆರಳಬಹುದಾಗಿದೆ.

2.ಅಲಿಯಾ ಘೋಸ್ಟ್

2.ಅಲಿಯಾ ಘೋಸ್ಟ್

PC:YOUTUBE

ಅಲಿಯಾ ಘೋಸ್ಟ್ ಎಂಬ ಪದವನ್ನು ಪಶ್ಚಿಮ ಬಂಗಾಳದಲ್ಲಿ ಕೇಳಬಹುದು. ಬೆಳಕಿನ ಅಥವಾ ದೀಪಗಳ ರೀತಿಯಲ್ಲಿ ಆತ್ಮಗಳು ಇಲ್ಲಿ ಸಂಚಾರ ಮಾಡುತ್ತವೆ ಎಂದು ನಂಬಲಾಗಿದೆ. ಇದೊಂದು ಭಯಾನಕವಾದ ದೀಪಗಳು ಎಂದು ಅಲ್ಲಿನ ಸ್ಥಳೀಯರು ನಂಬಿದ್ದಾರೆ. ಇವು ಮಧ್ಯ ರಾತ್ರಿಯ ಸಮಯದಲ್ಲಿ ಕಾಣಿಸುತ್ತವೆ. ಅವುಗಳನ್ನು ಕಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

ಕೆಲವು ಸ್ಥಳೀಯರ ಪ್ರಕಾರ ಆ ಭಯಾನಕವಾದ ದೀಪಗಳು ಸತ್ತ ಮೀನುಗಾರರು ಎಂದು ನಂಬುತ್ತಾರೆ. ಇವುಗಳನ್ನು ಹೆಚ್ಚಾಗಿ ಜೌಗು ಪ್ರದೇಶಗಳಲ್ಲಿ ಕಾಣಿಸುತ್ತವೆ. ಆದರೆ ಕೆಲವು ವಿಜ್ಞಾನಿಗಳ ಪ್ರಕಾರ ಈ ದೀಪಗಳ ಬಗ್ಗೆ ಸಂಶೋಧನೆಯನ್ನು ನಡೆಸಿದರು. ಅವುಗಳು ಜೈವಿಕ ವಸ್ತುಗಳಿಂದ ರಚಿಸ್ಪಲ್ಪಟ್ಟ ಅನಿಲಗಳು ಎಂದು ವೈಜಾನಿಕ ಸಿದ್ಧಾಂತವು ತಿಳಿಸಿತು.

3.ದುಮಾಸ್ ಬೀಚ್

3.ದುಮಾಸ್ ಬೀಚ್

PC:Harshal 04

ಗುಜರಾತಿನಲ್ಲಿರು ದುಮಾಸ್ ಕಡಲತೀರವು "ಬ್ಯಾಕ್ ಸ್ಯಾಂಡ್" ಎಂದು ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಅಗೋಚರ ಶಕ್ತಿಗಳ ಸಂಚಾರವಿದೆ ಎಂದು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ. ಇಲ್ಲಿ ಆತ್ಮಗಳ ಸಂಚಾರವಾಗಲು ಮುಖ್ಯ ಕಾರಣವೆನೆಂದರೆ ಹಿಂದೆ ಈ ದುಮಾಸ್ ಬೀಚ್‍ನ ಸ್ಥಳದಲ್ಲಿ ಒಂದು ಸಮಾಧಿ ಇತ್ತು ಎನ್ನಲಾಗಿದೆ. ರಾತ್ರಿಯ ಸಮಯದಲ್ಲಿ ಅಲ್ಲಿನ ಸ್ಥಳೀಯರಿಗೆ ಹಾಗು ಪ್ರವಾಸಿಗರಿಗೆ ವಿಚಿತ್ರವಾದ ಅನುಭವಗಳಾಗಿವೆ ಎಂತೆ. ಹೀಗಾಗಿಯೇ ಬೆಳಗ್ಗೆ ಜನಜಂಗುಳಿಯಿಂದ ಕೂಡಿರುವ ದಮಾಸ್ ಬೀಚ್, ರಾತ್ರಿಯಾಗುತ್ತಿದ್ದಂತೆ ಸ್ಮಶಾನ ಮೌನ ಅವರಿಸುತ್ತದೆ.

ಆಶ್ಚರ್ಯ ಏನಪ್ಪ ಎಂದರೆ ಈ ದುಮಾಸ್ ಬೀಚ್‍ನಲ್ಲಿ ಮನುಷ್ಯರು ಇದ್ದಕ್ಕಿದ್ದಂತೆ ಕಾಣೆಯಾಗುವುದು. ಹೀಗಾಗಿಯೇ ಯಾರು ಸಹ ಈ ಬೀಚ್‍ನ ಹತ್ತಿರ ರಾತ್ರಿಯಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತಾರೆ.

ತಲುಪುವ ಬಗೆ ಹೇಗೆ?

ಈ ದುಮಾಸ್ ಬೀಚ್‍ಗೆ ತೆರಳಬೇಕಾದರೆ ಮೊದಲು ಗುಜರಾತ್‍ನ ಅಹಮದಾಬಾದ್‍ಗೆ ವಿಮಾನದ ಮೂಲಕ ತಲುಪಿ ಅಲ್ಲಿಂದ ಯಾವುದಾದರೂ ಬಸ್ಸು ಅಥವಾ ಟ್ಯಾಕ್ಸಿಯ ಮೂಲಕ ದುಮಾಸ್ ಬೀಚ್‍ಗೆ ತೆರಳಬಹುದು. ದುಮಾಸ್ ಬೀಚ್ ಅಹಮದಾಬಾದ್‍ನಿಂದ ಸುಮಾರು 298 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more