Search
  • Follow NativePlanet
Share
» »ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!

ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!

ನಮ್ಮ ಭಾರತ ದೇಶದ ದೇವಾಲಯದಲ್ಲಿ ಸಾವಿರಾರು ವರ್ಷದ ಪುರಾತನವಾದ ದೇವಾಲಯದ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲಿಯೇ ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಶಿವಲಿಂಗವಿರುವ ದೇವಾಲಯವಿದೆ. ಆ ದೇವಾಲಯವೇ ಬೃಹದೀಶ್ವರ ದೇವಾಲಯ. ಇದೊಂದು ಪ್ರಾಚೀನವಾದ ದೇವಾಲಯ

ಮ್ಮ ಭಾರತ ದೇಶದ ದೇವಾಲಯದಲ್ಲಿ ಸಾವಿರಾರು ವರ್ಷದ ಪುರಾತನವಾದ ದೇವಾಲಯದ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲಿಯೇ ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಶಿವಲಿಂಗವಿರುವ ದೇವಾಲಯವಿದೆ. ಆ ದೇವಾಲಯವೇ ಬೃಹದೀಶ್ವರ ದೇವಾಲಯ. ಇದೊಂದು ಪ್ರಾಚೀನವಾದ ದೇವಾಲಯವಾಗಿದ್ದು, ಸುಮಾರು 1000 ವರ್ಷಗಳ ಇತಿಹಾಸ ಹೊಂದಿದೆ. ಈ ಅದ್ಭುತವಾದ ದೇವಾಲಯವಿರುವುದು ತಮಿಳು ನಾಡು ರಾಜ್ಯದ ತಂಜಾವೂರಿನಲ್ಲಿ. ಈ ದೇವಾಲಯವನ್ನು ಕ್ರಿ.ಶ 11 ನೇ ಶತಮಾನದಲ್ಲಿ ಚೋಳರ ಆಳ್ವಿಕೆಯ ಸಮಯದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಗುರುತಿಸಲಾಗಿದೆ.

ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!

ಈ ದೇವಾಲಯದ ನಿರ್ಮಾಣದ ಕುರಿತು ಹಲವಾರು ಕುತೂಹಲಗಳು ಇವೆ. ನಮ್ಮ ದೇಶದಲ್ಲಿನ ಅತ್ಯಂತ ದೊಡ್ಡ ಗರ್ಭಗುಡಿಯನ್ನು ಹೊಂದಿರುವ ಹಾಗು ಅತಿ ದೊಡ್ಡ ವಿಮಾನ ಗೋಪುರವನ್ನು ಹೊಂದಿರುವ ದೇವಾಲಯ ಇದೆ. ಅದ್ಭುತವಾದ ಶಿಲ್ಪಕಲೆಗಳನ್ನು ಹೊಂದಿರುವ ಈ ದೇವಾಲಯವು ಹಲವಾರು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಇಂದಿಗೂ ಈ ದೇವಾಲಯದ ನಿರ್ಮಾಣದ ಬಗ್ಗೆ ಕುತೂಹಲ ಎಲ್ಲರಿಗೂ ಇದೆ.

350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ350 ವರ್ಷಗಳ ಹಿಂದಿನ ಅದ್ಭುತವಾದ ಶಿವಾಲಯ

ಪ್ರಸ್ತುತ ಲೇಖನದಲ್ಲಿ ಈ ಬೃಹದೀಶ್ವರ ದೇವಾಲಯದ ಬಗ್ಗೆ ಕೆಲವು ಕುತೂಹಲಕಾರಿಯಾದ ಮಾಹಿತಿಯನ್ನು ಪಡೆಯೋಣ.

ಕಟ್ಟಡದ ನಿರ್ಮಾಣ

ಕಟ್ಟಡದ ನಿರ್ಮಾಣ

ಮಿಸ್ಟರಿ ದೇವಾಲಯ ಎಂದೇ ಹೆಸರುವಾಸಿಯಾಗಿರುವ ಈ ದೇವಾಲಯವು ತಂಜಾವೂರಿನಲ್ಲಿದೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯವನ್ನು ಸಿಮೆಂಟ್, ಉಕ್ಕು ವಂತಹ ಯಾವುದನ್ನು ಉಪಯೋಗಿಸದೇ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡ ದೇವಾಲಯ ಇದಾಗಿದೆ. ಈ ದೇವಾಲಯವನ್ನು ಕಂಡರೆ ಆಗಿನ ಕಾಲದ ಟೆಕ್ನಾಲಜಿಗೆ ಸಲಾಂ ಎಂದೇ ಹೇಳಬೇಕು.

PC: Jean-Pierre Dalbéra

ಶಿವಲಿಂಗ

ಶಿವಲಿಂಗ

ಸಾವಿರ ವರ್ಷಕ್ಕಿಂತ ಹಿಂದೆ ನಿರ್ಮಾಣ ಮಾಡಿದ ಈ ದೇವಾಲಯವನ್ನು ಒಂದು ಕಾಲದಲ್ಲಿ ಅತ್ಯಂತ ದೊಡ್ಡ ಕಟ್ಟಡವಾಗಿತ್ತು. ಸುಮಾರು 13 ಅಂತಸ್ತುಗಳನ್ನು ಹೊಂದಿರುವ ಈ ದೇವಾಲಯದಲ್ಲಿ ಭಾರತ ದೇಶದಲ್ಲಿಯೇ ಅತಿ ದೊಡ್ಡ ಶಿವಲಿಂಗವನ್ನು ಹೊಂದಿದೆ. ಶಿವಲಿಂಗದ ಎತ್ತರ 3.7 ಮೀಟರ್ ಅಷ್ಟಿದೆ.

Vsvs2233

ನಂದಿ

ನಂದಿ

ಶಿವನ ವಾಹನವಾದ ನಂದಿ ಕೂಡ ಕಡಿಮೆ ಏನು ಅಲ್ಲ. ಈ ನಂದಿ ಸ್ವಾಮಿಯು ಏಕಶಿಲಾ ವಿಗ್ರಹವಾಗಿದೆ. ಇದು ಸರಿಸುಮಾರು 20 ಟನ್ನು ಭಾರ, 2 ಮೀಟರ್ ಎತ್ತರ, 6 ಮೀಟರ್ ಅಗಲವಿದೆ.

MADHURANTHAKAN JAGADEESAN

ಗ್ರಾನೈಟ್ ಕಲ್ಲು

ಗ್ರಾನೈಟ್ ಕಲ್ಲು

ಈ ಅದ್ಭುತವಾದ ದೇವಾಲಯದ ನಿರ್ಮಾಣಕ್ಕೆ ಸಿಮೆಂಟ್, ಉಕ್ಕು ಉಪಯೋಗಿಸಿಲ್ಲ. ಬದಲಾಗಿ ಪೂರ್ತಿಯಾಗಿ 13 ಅಂತಸ್ತು ಕೂಡ ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಿದ್ದಾರೆ.

Gmuralidharan

ಗೋಪುರ

ಗೋಪುರ

ಪ್ರಧಾನ ದೇವಾಲಯದ ಗೋಪುರವೇ ಈ ದೇವಾಲಯದ ಮುಖ್ಯ ಆಕರ್ಷಣೆ. 13 ಅಂತಸ್ತುಗಳನ್ನು ಯಾವುದೇ ಸಾಹಯವಿಲ್ಲದೇಯೇ ನಿರ್ಮಾಣ ಮಾಡಿರುವುದು ಆಶ್ಚರ್ಯವಾಗಿದೆ.

Ryan

ಮಧ್ಯಾಹ್ನ

ಮಧ್ಯಾಹ್ನ

ಇಲ್ಲಿ ಆಶ್ಚರ್ಯಗೊಳಿಸುವ ಮತ್ತೊಂದು ವಿಷಯವೆನೆಂದರೆ ಮಧ್ಯಾಹ್ನದ ಸಮಯದಲ್ಲಿ ಗೋಪುರದ ನೆರಳು ಭೂಮಿಗೆ ತಾಕುವುದಿಲ್ಲವಂತೆ. ಒಂದು ವೇಳೆ ದೇವಾಲಯದ ನೆರಳು ಬಿದ್ದರು ಸಹ, ಗೋಪುರದ ನೆರಳು ಮಾತ್ರ ಯಾವುದೇ ಕಾರಣಕ್ಕೂ ಬೀಳುವುದಿಲ್ಲವಂತೆ.

Kochapz

ಪ್ರಶಾಂತತೆ

ಪ್ರಶಾಂತತೆ

ದೇವಾಲಯದ ಅತ್ಯಂತ ಪ್ರಶಾಂತತೆಯಿಂದ ಕೂಡಿರುತ್ತದೆ. ದೇವಾಲಯದ ಪ್ರಾಂಗಣವು ವಿಶಾಲವಾಗಿದ್ದು, ನಾವು ಮತಾನಾಡಿದ ಮಾತುಗಳು ಪ್ರತಿಧ್ವನಿಸುತ್ತದೆ.

ಸುರಂಗಗಳು

ಸುರಂಗಗಳು

ದೇವಾಲಯದಲ್ಲಿ ಹಲವಾರು ಸುರಂಗ ಮಾರ್ಗಗಳನ್ನು ಕಾಣಬಹುದಾಗಿದೆ. ಕೆಲವು ಮಾರ್ಗಗಳು ತಂಜಾವೂರಿನಲ್ಲಿನ ದೇವಾಲಯಕ್ಕೆ ಮಾರ್ಗವಾಗಿದ್ದರೆ, ಇನ್ನು ಕೆಲವು ಮರಣಕ್ಕೆ ದಾರಿಯನ್ನು ನೀಡುತ್ತದೆ ಎಂತೆ. ಈ ಸುರಂಗ ಮಾರ್ಗವನ್ನು ಚೋಳ ರಾಜನು ತನ್ನ ಜಾಗ್ರತೆಗಾಗಿ ನಿರ್ಮಾಣ ಮಾಡಿದ್ದಾಗಿದೆ.

Vengolis

ಕಲ್ಲಿನ ತೋರಣಗಳು

ಕಲ್ಲಿನ ತೋರಣಗಳು

ದೇವಾಲಯದಲ್ಲಿನ ಮತ್ತೊಂದು ಆಶ್ಚರ್ಯಕ್ಕೆ ಒಳಪಡಿಸುವ ಟೆಕ್ನಾಲಜಿ ಏನೆಂದರೆ ಅದು ದೇವಾಲಯದ ಸುತ್ತವಿರುವ ಕಲ್ಲಿನ ತೋರಣಗಳು. ಈ ತೋರಣಗಳು ಅತ್ಯಂತ ಸೂಕ್ಷ್ಮವಾಗಿ ಕೆತ್ತನೆ ಮಾಡಿದ್ದಾರೆ. ಅಂದರೆ 6 ಮಿ.ಮಿ ಗಿಂತ ಕಡಿಮೆ ಸೈಜಿನಲ್ಲಿ ಕೆತ್ತನೆ ಮಾಡಿರುವುದು.

MADHURANTHAKAN JAGADEESAN

ವಿಶೇಷಗಳು

ವಿಶೇಷಗಳು

1000 ವರ್ಷಗಳ ಹಿಂದಿನ ದೇವಾಲಯಗಳು ಪ್ರಸ್ತುತ ದೇಶದಲ್ಲಿ ಶಿಧಿಲಾವಸ್ಥೆಯಲ್ಲಿದೆ. ಆದರೆ ಈ ದೇವಾಲಯ ಮಾತ್ರ ಇನ್ನು ನವ ವಧುವಿನ ಹಾಗೆ ಕಂಗೊಳಿಸುತ್ತಿದೆ. ಇಷ್ಟು ವಿಶೇಷಗಳು, ವಿಭಿನ್ನಗಳಿರುವ ಈ ದೇವಾಲಯವು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿದೆ.

brehadeesh kumar

ರಹಸ್ಯ

ರಹಸ್ಯ

ಒಂದು ಕಾಲದಲ್ಲಿ ಸುವಿಶಾಲ ಎಂಬ ರಾಜ್ಯಕ್ಕೆ ಕೇಂದ್ರಬಿಂದುವಾಗಿದ್ದ ತಂಜಾವೂರು, ಪ್ರಸ್ತುತ ಒಂದು ಕುಗ್ರಾಮವಾಗಿದೆ. ಈ ನಗರ ಹೇಗೆ ನಾಶವಾಯಿತು ಎಂಬುದು ಕೂಡ ಒಂದು ಮಿಸ್ಟರಿಯಾಗಿಯೇ ಉಳಿದಿದೆ.

Mdjaveed01

ಶಿಲ್ಪ

ಶಿಲ್ಪ

ದೇವಾಲಯದ ಸುತ್ತಮುತ್ತ ಪ್ರದೇಶದಲ್ಲಿ ಇಂದಿಗೂ ಪುರಾತತ್ವ ಶಾಖೆಯವರು ಸಂಶೋಧನೆಯನ್ನು ಮಾಡುತ್ತಿದ್ದಾರೆ. ಹುಡುಕುವ ಪ್ರತಿ ಬಾರಿಯು ಯಾವುದಾದರೂ ಒಂದು ಶಿಲ್ಪ ಅಥವಾ ಆ ಕಾಲಕ್ಕೆ ಸಂಬಂಧಿಸಿದ ವಸ್ತು ದೊರೆಯುತ್ತಾಲಿದೆ ಎಂತೆ.

Ryan

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ತಂಜಾವೂರಿಗೆ ಸಮೀಪವಾಗಿ ಟ್ರಿಚಿ, ಚೆನ್ನೈ ವಿಮಾನ ನಿಲ್ದಾಣಗಳು ಇವೆ. ರೈಲ್ವೆ ಜಂಕ್ಷನ್‍ಗಳು ಕೂಡ ಇವೆ. ಇಲ್ಲಿಂದ ಸರ್ಕಾರಿ ಅಥವಾ ಖಾಸಗಿ ಬಸ್ಸಿನ ಮುಖಾಂತರ ಸುಲಭವಾಗಿ ತಂಜಾವೂರಿನ ಈ ದೇವಾಲಯಕ್ಕೆ ತಲುಪಬಹುದು.

Mugilkmv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X