Search
  • Follow NativePlanet
Share
» »ಹಣೆಬರಹವನ್ನು ಬದಲಾಯಿಸುತ್ತಾನಂತೆ ಇಲ್ಲಿನ ಬ್ರಹ್ಮ ದೇವ!

ಹಣೆಬರಹವನ್ನು ಬದಲಾಯಿಸುತ್ತಾನಂತೆ ಇಲ್ಲಿನ ಬ್ರಹ್ಮ ದೇವ!

ನಮ್ಮ ದೇಶದಲ್ಲಿ ಒಂದು ಮಾಹಿಮಾನ್ವಿತವಾದ ದೇವಾಲಯವಿದೆ. ಈ ದೇವಾಲಯದಲ್ಲಿ ನಮ್ಮ ಹಣೆಬರಹವನ್ನು ಬದಲಾವಣೆ ಮಾಡುವ ದೇವತಾ ಮೂರ್ತಿ ಇದ್ದಾನೆ. ಅಲ್ಲಿ ಮಹಾಶಿವನ ಜೊತೆ ಜೊತೆಗೆ ಬ್ರಹ್ಮ ದೇವನು ಕೂಡ ನೆಲೆಸಿದ್ದಾನೆ.

ನಮ್ಮ ಹಣೆಬರಹವಿದ್ದಂತೆ ಸಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಇದಕ್ಕೆ ಮುಖ್ಯವಾಗಿ ಮನುಷ್ಯನಾದವನು ತನ್ನ ಪಾಪ, ಪುಣ್ಯಗಳ ಲೆಕ್ಕಾಚಾರದಂತೆ ತಮ್ಮ ಹಣೆಬರಹಗಳನ್ನು ಮುಂದಿನ ಜನ್ಮದಲ್ಲಿ ಪಡೆದುಬರುತ್ತಾರೆ ಎಂದು ನಂಬಿಕೆ. ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬ ಜೀವಿಯ ಹಣೆ ಬರಹವನ್ನು ಬ್ರಹ್ಮ ದೇವನೇ ಬರೆಯುತ್ತಾನೆ. ಆತನೆ ಸೃಷ್ಟಿಕರ್ತನಾಗಿದ್ದಾನೆ. ಆಹಾರ, ಅದೃಷ್ಟ, ದುರಾದೃಷ್ಟ, ಸಂಪತ್ತು, ಉದ್ಯೋಗ, ವಿವಾಹ, ಸಂತಾನ, ವಯಸ್ಸು, ಯಶಸ್ಸು ಇವೆಲ್ಲಾ ಆತನೆ ನಿರ್ಧರಿಸುತ್ತಾನೆ.

ನಮ್ಮ ದೇಶದಲ್ಲಿ ಒಂದು ಮಾಹಿಮಾನ್ವಿತವಾದ ದೇವಾಲಯವಿದೆ. ಈ ದೇವಾಲಯದಲ್ಲಿ ನಮ್ಮ ಹಣೆಬರಹವನ್ನು ಬದಲಾವಣೆ ಮಾಡುವ ದೇವತಾ ಮೂರ್ತಿ ಇದ್ದಾನೆ. ಅಲ್ಲಿ ಮಹಾಶಿವನ ಜೊತೆ ಜೊತೆಗೆ ಬ್ರಹ್ಮ ದೇವನು ಕೂಡ ನೆಲೆಸಿದ್ದಾನೆ. ಈ ಮಾಹಿಮಾನ್ವಿತವಾದ ದೇವಾಲಯಕ್ಕೆ ತೆರಳಿದರೆ ನಮ್ಮ ದೂರಾದೃಷ್ಟಗಳು ಅದೃಷ್ಟವಾಗುತ್ತದೆ ಎಂದು ಹೇಳುತ್ತಾರೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯಕ್ಕೆ ಒಂದು ಸ್ಥಳ ಪುರಾಣವು ಕೂಡ ಇದೆ. ಅದೇನು? ಎಂಬುದರ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ.

ಬ್ರಹ್ಮ ದೇವ

ಬ್ರಹ್ಮ ದೇವ

ಬ್ರಹ್ಮ ದೇವನ ಆರ್ಶಿವಾದವಿದ್ದರೆ ಜೀವನದಲ್ಲಿ ಕಷ್ಟಗಳು ತೊಲಗಿ ಉತ್ತಮವಾದ ಅದೃಷ್ಟವನ್ನು ನೀಡುತ್ತಾನೆ ಎಂದು ನಂಬುತ್ತಾರೆ. ಈ ದೇವಾಲಯಕ್ಕೆ ಸಂಬಧಿಸಿದಂತೆ ಪುರಾಣದಲ್ಲಿ ಒಂದು ಕಥೆ ಇದೆ. ಆ ಕಥೆಯ ಬಗ್ಗೆ ಏನು? ಎಂಬುದನ್ನು ತಿಳಿಯೋಣ. ಅದನೆಂದರೆ ಒಮ್ಮೆ ಬ್ರಹ್ಮ ದೇವನಿಗೆ ಈ ಸೃಷ್ಟಿಗೆ ಮೂಲ ತಾನೇ ಎಂಬ ಗರ್ವ ಮೂಡುತ್ತದೆ ಎಂತೆ.

PC:Official Site


ಶಾಪ

ಶಾಪ

ಆಗ ಪರಮಶಿವನು ಶಿವನ ಪ್ರತಿರೂಪವಾಗಿ ಭಾವಿಸುವ ಕಾಳಭೈರವನು ಬ್ರಹ್ಮ ದೇವನ 5ನೇ ತಲೆಯನ್ನು ಕತ್ತರಿಸುತ್ತಾನೆ. ಅಷ್ಟೇ ಅಲ್ಲದೇ ಪರಮಶಿವನು ಬ್ರಹ್ಮ ದೇವನಿಗೆ ತನ್ನ ಸೃಷ್ಟಿ ನಿರ್ಮಾಣ ಶಕ್ತಿಯನ್ನು ಕಳೆದುಹೋಗಬೇಕು ಎಂದು ಶಪಿಸುತ್ತಾನೆ. ಪಾಶ್ಚತ್ತಾಪದಿಂದ ಬ್ರಹ್ಮ ದೇವನು ಶಾಪ ವಿಮೋಚನೆಗಾಗಿ ಈ ದೇವಾಲಯವಿರುವ ಸ್ಥಳದಲ್ಲಿ 12 ಶಿವಲಿಂಗವನ್ನು ಪ್ರತಿಷ್ಟಾಪಿಸಿ ಪಾರ್ಥಿಸುತ್ತಾನೆ.


PC:Official Site

ಬ್ರಹ್ಮಪುರಿ

ಬ್ರಹ್ಮಪುರಿ

ಹಾಗಾಗಿಯೇ ಈ ದೇವಾಲಯವಿರುವ ಸ್ಥಳವನ್ನು ಬ್ರಹ್ಮಪುರಿ ಎಂದು ಕರೆಯುತ್ತಾರೆ. ಬ್ರಹ್ಮದೇವನ ಪಾಶ್ಚತ್ತಾಪವನ್ನು ಗ್ರಹಿಸಿದ ಪಾರ್ವತಿ ಪರಮೇಶ್ವರರು ಪ್ರತ್ಯಕ್ಷವಾಗಿ ಬ್ರಹ್ಮ ದೇವನಿಗೆ ನೀಡಿದ್ದ ಶಾಪವನ್ನು ವಿಮೋಚನೆ ಮಾಡುತ್ತಾರೆ. ತದನಂತರ ಬ್ರಹ್ಮ ದೇವನಿಗೆ ಸೃಷ್ಟಿ ನಿರ್ಮಾಣ ಮಾಡುವ ಶಕ್ತಿಯನ್ನು ನೀಡುತ್ತಾರೆ.


PC:Official Site

ಏಕೈಕ ಬ್ರಹ್ಮ ದೇವಾಲಯ

ಏಕೈಕ ಬ್ರಹ್ಮ ದೇವಾಲಯ

ಈ ದೇವಾಲಯದಲ್ಲಿ ಬ್ರಹ್ಮ ದೇವನಿಗೆ ಪ್ರತ್ಯೇಕವಾದ ದೇವಾಲಯ ಕೂಡ ಇದೆ. ಸಾಮಾನ್ಯವಾಗಿ ಬ್ರಹ್ಮ ದೇವನಿಗೆ ಭೂಮಿಯಲ್ಲಿ ಪೂಜೆಗಳನ್ನು ಮಾಡುವುದಿಲ್ಲ ಎಂದು ಹಲವಾರು ಜನರು ಭಾವಿಸಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಏಕೈಕ ಬ್ರಹ್ಮ ದೇವಾಲಯವಿದೆ. ಆ ದೇವಾಲಯವು ಅತ್ಯಂತ ಮಾಹಿಮಾನ್ವಿತವಾದುದಾಗಿದೆ.


PC:Official Site

12 ಶಿವಲಿಂಗ

12 ಶಿವಲಿಂಗ

ಈ ದೇವಾಲಯವಿರುವ ಪ್ರದೇಶದಲ್ಲಿ ಬ್ರಹ್ಮ ದೇವನು ತನ್ನ ತಲೆಬರಹವನ್ನೇ ತಿರುಗಿ ಬರೆದುಕೊಂಡ ಪ್ರದೇಶ ಎಂದು ಗುರುತಿಸಲಾಗಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಭಕ್ತರು ಬ್ರಹ್ಮ ದೇವನು ಪ್ರತಿಷ್ಟಾಪಿಸಿದ 12 ಶಿವಲಿಂಗವನ್ನು ದರ್ಶನ ಮಾಡಿದರೆ ಅಂಥಹವರೆಗೆ ದುರಾದೃಷ್ಟ ದೂರವಾಗಿ ಅದೃಷ್ಟ ಒಲಿಯುತ್ತದೆ ಎಂದು ಭಕ್ತರು ನಂಬುತ್ತಾರೆ. ಈ ಪವಿತ್ರವಾದ ದೇವಾಲಯಕ್ಕೆ ಹಲವರು ಮಂದಿ ಭಕ್ತರು ಭೇಟಿ ನೀಡುತ್ತಾರೆ.

PC:Official Site

ಕಷ್ಟಗಳು ದೂರವಾಗುತ್ತದೆ

ಕಷ್ಟಗಳು ದೂರವಾಗುತ್ತದೆ

ಹಲವಾರು ಮಂದಿ ತಮ್ಮ ಜೀವನದಲ್ಲಿ ತಾವು ಅಂದುಕೊಂಡಿರುವುದು ಸಾಧಿಸದೇ ಇದ್ದಾಗ ದುರಾದೃಷ್ಟ ಎಂಬುದು ಅಂಟಿಕೊಂಡಿದ್ದಾಗ ಈ ದೇವಾಲಯಕ್ಕೆ ಭೇಟಿ ನೀಡಿ. ಇಲ್ಲಿನ ಬ್ರಹ್ಮ ದೇವನಿಗೆ ದರ್ಶನ ಭಾಗ್ಯ ಪಡೆದರೆ ತಮ್ಮ ಕಷ್ಟಗಳನ್ನು ತೊಲಗಿಸಿಕೊಳ್ಳುತ್ತಾರೆ. ಇಷ್ಟೇ ಅಲ್ಲದೇ ಈ ದೇವಾಲಯದಲ್ಲಿ ಸ್ವಯಂ ಭೂ ಶಿವಲಿಂಗ ಕೂಡ ಇದೆ.

ಮತ್ತೊಮ್ಮ ಹಣೆಬರಹ ಬರೆಯುವುದು

ಮತ್ತೊಮ್ಮ ಹಣೆಬರಹ ಬರೆಯುವುದು

ಮಹಾಶಿವನು ಶಾಪ ವಿಮೋಚನೆ ಮಾಡಿದ ನಂತರ ಬ್ರಹ್ಮ ದೇವನಿಗೆ ಈ ದೇವಾಲಯಕ್ಕೆ ಯಾರು ಪ್ರಾರ್ಥಿಸಲು ಬರುತ್ತಾರೆಯೋ ಅವರಿಗೆ ಮತ್ತೊಮ್ಮ ಒಳ್ಳೆಯ ಹಣೆಬರಹವನ್ನು ಬರೆಯಬೇಕು ಎಂದು ಹೇಳುತ್ತಾನೆ. ಇದಕ್ಕೆ ಒಪ್ಪಿದ ಬ್ರಹ್ಮ ದೇವನು ಈ ದೇವಾಲಯದಲ್ಲಿಯೇ ನೆಲೆಸಿದ್ದಾನೆ.

PC:Official Site

ಪತಂಜಲಿ ಮಹರ್ಷಿಯ ಜೀವ ಸಮಾಧಿ

ಪತಂಜಲಿ ಮಹರ್ಷಿಯ ಜೀವ ಸಮಾಧಿ

ಬ್ರಹ್ಮ ದೇವ ಪ್ರತಿಷ್ಟಾಪಿಸಿದ 12 ಶಿವಲಿಂಗಗಳು ಇವೆ. ಅಷೇ ಅಲ್ಲದೇ ದೇವಾಲಯದ ಪ್ರಾಂಗಣದಲ್ಲಿ ಪತಂಜಲಿ ಮಹರ್ಷಿಯ ಜೀವ ಸಮಾಧಿ ಕೂಡ ಇಲ್ಲಿ ಕಾಣಬಹುದು. ಪತಂಜಲಿ ಮಹರ್ಷಿ ಹಲವಾರು ಯೋಗ ಸೂತ್ರಗಳನ್ನು, ಆರ್ಯುವೇದ ವಿಧಾನಗಳನ್ನು ಪ್ರಪಂಚಕ್ಕೆ ತಿಳಿಸಿದ ದೊಡ್ಡ ಯೋಗಿ ಆಗಿದ್ದಾರೆ. ಆತನಿಗೆ ಸಂಬಂಧಿಸಿದ ಜೀವ ಸಮಾಧಿ ಕೂಡ ದೇವಾಲಯದ ಪ್ರಾಂಗಣದಲ್ಲಿಯೇ ಇದೆ.

PC:Official Site

ಎಲ್ಲಿದೆ ದೇವಾಲಯ?

ಎಲ್ಲಿದೆ ದೇವಾಲಯ?

ಅಸಲಿಗೆ ಈ ದೇವಾಲಯ ಇರುವುದು ಎಲ್ಲಿ ಎಂದು ಯೋಚಿಸುತ್ತಿದ್ದೀರಾ? ಈ ಮಾಹಿಮಾನ್ವಿತವಾದ ದೇವಾಲಯದ ಹೆಸರು ಬ್ರಹ್ಮಪುರೀಶ್ವರರ್ ದೇವಾಲಯ. ಇದು ತಮಿಳುನಾಡು ರಾಜ್ಯದ ತಿರುಚ್ಚಿಯ ಸಮೀಪದಲ್ಲಿ ತಿರುಪಟ್ಟೂರಿನ ಬಳಿ ಇದೆ. ಇದೊಂದು ಹಿಂದು ದೇವಾಲಯವಾಗಿದ್ದು, ಬ್ರಹ್ಮನ ಆಶೀರ್ವಾದ ಪಡೆಯಲು ಒಬ್ಬ ವ್ಯಕ್ತಿಯು ತನ್ನ ಅದೃಷ್ಟವನ್ನು ಬದಲಾಯಿಸಿಕೊಳ್ಳಲು ಭಕ್ತರು ಭೇಟಿ ನೀಡುತ್ತಾರೆ.


PC:Official Site

ಬ್ರಹ್ಮಪುರೀಶ್ವರರ್ ದೇವಾಲಯ

ಬ್ರಹ್ಮಪುರೀಶ್ವರರ್ ದೇವಾಲಯ

ಈ ದೇವಾಲಯ ಮತ್ತೊಂದು ಪಾವಡವೆನೆಂದರೆ ಪ್ರತಿವರ್ಷ ತಮಿಳು ತಿಂಗಳು ಪಂಗೂನಿ (ಮಾರ್ಚ್-ಏಪ್ರಿಲ್)ನಲ್ಲಿ ಮೂರು ದಿನಗಳವರೆಗೆ ಸೂರ್ಯನ ಬೆಳಕು ನೇರವಾಗಿ ದೇವತೆಯ ಮೇಲೆ ಬೀಳುತ್ತದೆ. ಸೂರ್ಯನ ಕಿರಣಗಳು ಗರ್ಭಗುಡಿಯ ದೇವರ ಮೇಲೆ ಬೀಳಬೇಕು ಎಂದರೆ 7 ಪ್ರವೇಶ ದ್ವಾರವನ್ನು ದಾಟಿ ಬರಬೇಕಾಗುತ್ತದೆ. ಇದೊಂದು ಪವಾಡವೇ ಸರಿ.

ಬ್ರಹ್ಮನ ಮೂರ್ತಿ

ಬ್ರಹ್ಮನ ಮೂರ್ತಿ

ಶ್ರೀ ಬ್ರಹ್ಮಪುರೇಶ್ವರ ದೇವಾಲಯಕ್ಕೆ ಪಕ್ಕದಲ್ಲಿರುವ ಬ್ರಹ್ಮ ಸಂಪತ್ ಗೌರಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಭಗವಾನ್ ಬ್ರಹ್ಮನಿಗೆ ಒಂದು ಧಾರ್ಮಿಕ ಭಂಗಿಯ ಅಂದರೆ ಕಮಲದ ಮೇಲೆ ಕುಳಿತಿದ್ದಾನೆ. ಬ್ರಹ್ಮನ ಮೂರ್ತಿಯು 6 ಅಡಿ ಎತ್ತರವನ್ನು ಅರಿಶಿಣದಿಂದ ಅಲಂಕರಿಸಲಾಗುತ್ತದೆ.


PC:Official Site

12 ಶಿವಲಿಂಗಗಳು

12 ಶಿವಲಿಂಗಗಳು

ಬ್ರಹ್ಮ ದೇವ ಪ್ರತಿಷ್ಟಾಪಿಸಿದ ಆ 12 ಶಿವಲಿಂಗಗಳು ಯಾವುವು ಎಂದರೆ ಶ್ರೀ ಭರಮಪುರೀಶ್ವರ, ಶ್ರೀ ಪಜಮಲೈನಥರ್, ಶ್ರೀ ಪಥಲೇಶ್ವರರ್, ಶ್ರೀ ಸುಂದರೇನೇಶ್ವರರ್, ಶ್ರೀ ತಾಯುಮಣ್ಣರ್, ಶ್ರೀ ಸಬ್ಬಥೇಶ್ವರಶ್ವರ, ಶ್ರೀ ಕಳತಿನಾಥರ್, ಶ್ರೀ ಜಂಬುಕೇಶ್ವರರ್, ಶ್ರೀ ಕೈಲಾಸನಾಥರ್, ಶ್ರೀ ಅರುಣಾಚಲೇಶ್ವರರ್, ಶ್ರೀ ಏಕಾಂಬರೇಶ್ವರರ್ ಮತ್ತು ಶ್ರೀ ಮಂಡುಗನಾಥರ್.


PC:Official Site

ಬ್ರಹ್ಮೋತ್ಸವಗಳು

ಬ್ರಹ್ಮೋತ್ಸವಗಳು

ಈ ದೇವಾಲಯದಲ್ಲಿ ಬ್ರಹ್ಮೋತ್ಸವಗಳು, ಮಹಾಶಿವರಾತ್ರಿ, ವಿನಾಯಕ ಚತುರ್ಥಿ ಇಲ್ಲಿ ಪ್ರಮುಖವಾಗಿ ನಡೆಯುವ ಉತ್ಸವಗಳಾಗಿವೆ. ಈ ದೇವಾಲಯಕ್ಕೆ ಸ್ವಾಮಿಯ ದರ್ಶನ ಪಡೆಯಲು ಅತ್ಯಂತ ಸೂಕ್ತವಾದ ದಿನಗಳು ಎಂದರೆ ಅದು ಸೋಮವಾರ ಮತ್ತು ಗುರುವಾರದಂದು. ಇದು ಸ್ವಾಮಿಗೆ ಅತ್ಯಂತ ಇಷ್ಟವಾದ ದಿನ ಎಂದು ಕೂಡ ಹೇಳುತ್ತಾರೆ.

ಪ್ರವೇಶ ಸಮಯ

ಪ್ರವೇಶ ಸಮಯ

ಪ್ರಸ್ತುತ ಈ ದೇವಾಲಯವನ್ನು ತಮಿಳುನಾಡು ಸರ್ಕಾರ "ದಿ ಹಿಂದೂ ರಿಲಿಜಿಯಸ್ ಆಂಡ್ ಚಾರಿಟಬಲ್ ಎಂಡೋಮೆಂಟ್ ಡಿಪಾರ್ಟ್‍ಮೆಂಟ್" ಆಡಳಿತದಲ್ಲಿದ್ದು, ಕಾರ್ಯ ನಿರ್ವಹಿಸುತ್ತಿದೆ. ಈ ದೇವಾಲಯದ ಪ್ರವೇಶ ಸಮಯವು ಬೆಳಗ್ಗೆ 7 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ಬೆಂಗಳೂರಿನಿಂದ ಈ ಬ್ರಹ್ಮಪುರೀಶ್ವರ ದೇವಾಲಯಕ್ಕೆ ತೆರಳು ಸುಮಾರು 357 ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ತೆರಳಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ತಿರುಚಿ ಆಗಿದೆ. ಇಲ್ಲಿಂದ ದೇವಾಲಯಕ್ಕೆ ಸುಮಾರು ಸುಮಾರು 38 ಕಿ.ಮೀ ದೂರದಲ್ಲಿದೆ. ಕೇವಲ 45 ನಿಮಿಷದಲ್ಲಿ ದೇವಾಲಯಕ್ಕೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X