Search
  • Follow NativePlanet
Share
» »ವೀರಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನದ ಬಗ್ಗೆ ಈ ನಿಜ ನಿಮಗೆ ಗೊತ್ತ?

ವೀರಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನದ ಬಗ್ಗೆ ಈ ನಿಜ ನಿಮಗೆ ಗೊತ್ತ?

ವೀರಬ್ರಹ್ಮೇಂದ್ರ ಸ್ವಾಮಿಯು ಕರ್ನೂಲು ಜಿಲ್ಲೆಯಲ್ಲಿನ ಬನಗಾನಪಲ್ಲಿಮಂಡಲದಲ್ಲಿ ಗರಿಮಿರೆಡ್ಡಿ ಅಚಮ್ಮ ಮನೆಯಲ್ಲಿ ಪಶುಗಳು ಕಾವಲಾಗಿದ್ದು, ರವ್ವಕಬೆಟ್ಟದಲ್ಲಿಕಾಲಜ್ಞಾನವನ್ನು ಬರೆದರು. ಗೋವುಗಳ ಸುತ್ತ ಒಂದು ಗೆರೆಯನ್ನು ಬರೆದು ರವ್ವಲಬೆಟ್ಟದ ಮೇಲ

By Sowmyabhai

ವೀರಬ್ರಹ್ಮೇಂದ್ರ ಸ್ವಾಮಿಯು ಕರ್ನೂಲು ಜಿಲ್ಲೆಯಲ್ಲಿನ ಬನಗಾನಪಲ್ಲಿ ಮಂಡಲದಲ್ಲಿ ಗರಿಮಿರೆಡ್ಡಿ ಅಚಮ್ಮ ಮನೆಯಲ್ಲಿ ಪಶುಗಳು ಕಾವಲಾಗಿದ್ದು, ರವ್ವಕಬೆಟ್ಟದಲ್ಲಿ ಕಾಲಜ್ಞಾನವನ್ನು ಬರೆದರು. ಗೋವುಗಳ ಸುತ್ತ ಒಂದು ಗೆರೆಯನ್ನು ಬರೆದು ರವ್ವಲಬೆಟ್ಟದ ಮೇಲೆ ಕಾಲಜ್ಞಾನ ಬರೆದರು ಬ್ರಹ್ಮೇಂದ್ರ ಸ್ವಾಮಿ. ರವ್ವಲಕೊಂಡ ಬನಗಾನಪಲ್ಲಿಗೆ ಕೇವಲ 1.5 ಕಿ.ಮೀ ದೂರದಲ್ಲಿದೆ ಒಂದು ಬೆಟ್ಟದ ಮೇಲೆ ಇದೆ. ಈ ಬೆಟ್ಟದ ಗುಹೆಯಲ್ಲಿ ಕುಳಿತುಕೊಂಡು ಸ್ವಾಮಿಯು ಕಾಲಜ್ಞಾನವನ್ನು ಬರೆದಾದ್ದರಿಂದ "ಬ್ರಹ್ಮಗಾರಿ ಕೊಂಡಲು" ಎಂದೇ ಕರೆಯುತ್ತಾರೆ.

ವೀರಬ್ರಹ್ಮೇಂದ್ರ ಸ್ವಾಮಿಯು ತೆಲುಗು ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಹೊಂದಿರುವ ಪುಣ್ಯ ಪುರುಷ. ಇವರು ದೇಶ ಪರ್ಯಾಟನೆ ಮಾಡಿ ಕಾಲಜ್ಞಾನವನ್ನು ಬರೆದರು. ಪ್ರಾಣಿಗಳ ಕಾವಲುಗಾರನಾಗಿಯೂ ಕೂಡ ತನ್ನ ಭಾದ್ಯತೆಗಳನ್ನು ನಿರ್ವಹಿಸಿದರು. ಸ್ವಾಮಿಯು ಭವಿಷ್ಯತ್ತಿನಲ್ಲಿ ನಡೆಯುವ ಅನೇಕ ಸಂಘಟನೆಗಳನ್ನು, ವಿಷಯಗಳನ್ನು ಮೊದಲೇ ತಿಳಿದುಕೊಂಡು ತಾಳೆ ಗ್ರಂಥದಲ್ಲಿ ಭದ್ರಗೊಳಿಸಿದರು.

ಪ್ರಸ್ತುತ ನಡೆಯುತ್ತಿರುವ ಅನೇಕ ವಿಷಯಗಳು ಆತನ ಗ್ರಂಥದಲ್ಲಿ ಇರುವುದೇ ಆಗಿದೆ..!, ಆತನು ಬರೆದ ಕಾಲಜ್ಞಾನ ಎಲ್ಲಿದೆ? ಅಲ್ಲಿಗೆ ಹೋಗಬಹುದು? ಎಂಬುದನ್ನು ಲೇಖನದ ಮೂಲಕ ತಿಳಿದುಕೊಳ್ಳೋಣ.

1.ಬನಗಾಪಲ್ಲೆ

1.ಬನಗಾಪಲ್ಲೆ

PC : indian railinfo

ತಾಯಿಯನ್ನು ಬಿಟ್ಟು ಪುಣ್ಯಕ್ಷೇತ್ರಗಳ ಯಾತ್ರೆಗೆಂದು ಹೊರಟ ಸ್ವಾಮಿಯು ಬನಗಾನಪಲ್ಲೆ ಸೇರಿಕೊಂಡರು. ಹಗಲೆಲ್ಲಾ ಪ್ರಯಾಣ ಮಾಡಿದ್ದರಿಂದ ಅತ್ಯಂತ ಬಳಲಿದ್ದ ಸ್ವಾಮಿಯವರು ಅಲ್ಲಿ ಕಾಣಿಸಿದ ಕಟ್ಟೆಯ ಮೇಲೆ ಮಲಗಿದರು. ಆ ಕಟ್ಟೆಯು ಗರಿಮಿರೆಡ್ಡಿ ಅಚ್ಚಮಾಂಬ ಮನೆಯದ್ದು.

2.ಕಾವಲು

2.ಕಾವಲು

PC:Raghuramacharya

ಬೆಳಗ್ಗೆಯೇ ಅಚ್ಚಮ್ಮ, ತನ್ನ ಮನೆಯ ಕಟ್ಟೆಯ ಮೇಲೆ ನಿದ್ರಿಸುತ್ತಿದ್ದ ಸ್ವಾಮಿಯನ್ನು ಕಂಡು ಆತನ ವಿವರಗಳನ್ನು ಕೇಳಿ ತಿಳಿದುಕೊಂಡಳು. ಅದಕ್ಕೆ ಉತ್ತರವಾಗಿ ಜೀವನ ಸಾಗಿಸಲು ಬಂದಿದ್ದೇನೆ ಎಂದೂ ತನಗೆ ಯಾವುದಾದರೂ ಕೆಲಸವನ್ನು ಕೊಡಿಸು ಎಂದು ಕೋರಿದ ಕಾರಣ....ತನ್ನ ಹತ್ತಿರವಿರುವ ಪಶುಗಳನ್ನು ನೋಡಿಕೋ ಎಂದು ಹೇಳಿದಳು ಅಚ್ಚಮ್ಮ.

3.ರವ್ವಲಕೊಂಡ

3.ರವ್ವಲಕೊಂಡ

ಹಾಗೆ ಪಶುಗಳ ಕಾವಲುಗಾರನಾಗಿ ಮಾರ್ಪಟಾದ ವೀರಬ್ರಹ್ಮೇಂದ್ರ ಸ್ವಾಮಿ ಅವರು ದಿನನಿತ್ಯವು ರವ್ವಲಬೆಟ್ಟದ ಮೇಲೆ ಪಶುಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಪ್ರದೇಶವು ಅತ್ಯಂತ ಪ್ರಶಾಂತವಾಗಿ ಇದ್ದ ಕಾರಣವಾಗಿ ಅಲ್ಲಿಯೇ ಕಾಲಜ್ಞಾನವನ್ನು ಬರೆಯಬೇಕು ಎಂದು ನಿಶ್ಚಯಿಸಿಕೊಂಡರು.

4.ಬರವಣಿಗೆ

4.ಬರವಣಿಗೆ

ತಾನಷ್ಟಕ್ಕೆ ತಾನು ಕಾಲಜ್ಞಾನವನ್ನು ಬರೆದುಕೊಂಡು ಕುತರೆ ಪಶುಗಳ ಸಂಗತಿ ಏನು? ಎಂದು ಗ್ರಹಿಸಿದ ವೀರಬ್ರಹ್ಮೇಂದ್ರ ಸ್ವಾಮಿಯವರು ....ಅವುಗಳನ್ನು ಒಂದು ಮೈದಾನದಲ್ಲಿ ಬಿಟ್ಟು ಅವುಗಳ ಸುತ್ತ ಒಂದು ಗೆರೆಯನ್ನು ಹಾಕುತ್ತಿದ್ದರು. ಗೋವುಗಳು ಆ ಗೆರೆಯನ್ನು ದಾಟದೇ ಮೇವುಗಳನ್ನು ಸ್ವೀಕರಿಸುತ್ತಿದ್ದರು.

5.ರವ್ವಲಕೊಂಡ

5.ರವ್ವಲಕೊಂಡ

ಒಂದು ದಿನ ಈ ವಿಷಯವನ್ನು ಗ್ರಹಸಿದ ಕೆಲವು ಮಂದಿ ಜನರು ಅಚ್ಚಮ್ಮಳಿಗೆ ಈ ವಿಷಯವನ್ನು ಹೇಳಿದರು. (ಕೆಲವರು ಮಾತ್ರ ಆಕೆಯೇ ಸ್ವಯಂ ಆಗಿ ಆತನ ಕೆಲಸವನ್ನು ಕಾಣಲು ಹೋದಳು ಎಂದೂ ಕೂಡ ಹೇಳುತ್ತಾರೆ) ಅಚ್ಚಮ್ಮ ಬೆಟ್ಟದ ಮೇಲೆ ಹೋಗಿ ನೋಡಿದರೆ ಪಶುಗಳು ಏಕಾಗ್ರತೆಯಾಗಿ ಹುಲ್ಲು ಮೇಯುವುದನ್ನು ಗ್ರಹಿಸಿದಳು.

6.ಕಾಲಜ್ಞಾನ ಬರೆಯುತ್ತಾ...

6.ಕಾಲಜ್ಞಾನ ಬರೆಯುತ್ತಾ...

ಗುಹೆಯಲ್ಲಿ ಹೋಗಿ ನೋಡಿದರೆ, ವೀರಬ್ರಹ್ಮೇಂದ್ರ ಸ್ವಾಮಿಯು ಧ್ಯಾನ ಮುದ್ರೆಯಲ್ಲಿ ಇದ್ದು ಎಲೆಗಳ ಮೇಲೆ ಕಾಲಜ್ಞಾನವನ್ನು ಬರೆಯುತ್ತಾ ಕಾಣಿಸಿಕೊಂಡರು. ಅದನ್ನು ಕಂಡ ಆಕೆಯು ಆತನನ್ನು ಒಂದು ಜ್ಞಾನಿಯಾಗಿ ಭಾವಿಸಿದಳು. ತಾನು ಇಷ್ಟು ದಿನಗಳ ಕಾಲ ಸೇವೆಗಳನ್ನು ಮಾಡಿಕೊಂಡಿದ್ದು ಒಂದು ಜ್ಞಾನಿಯ ಕೈಯಲ್ಲಿಯೇ? ಎಂದು ನೊಂದುಕೊಂಡಳು. ಸ್ವಾಮಿಯ ಬಳಿ ಹೋಗಿ ತನ್ನನ್ನು ಕ್ಷಮಿಸು ಎಂದು ಕೇಳಿಕೊಂಡಳು. ತಮಗೆ ಜ್ಞಾನದ ಭೋದನೆಯನ್ನು ಮಾಡು ಎಂದು ಕೇಳಿಕೊಂಡಳು.

7.ಕಾಲಜ್ಞಾನವನ್ನು ಅಡಗಿಸಿದರು

7.ಕಾಲಜ್ಞಾನವನ್ನು ಅಡಗಿಸಿದರು

ವೀರ ಬ್ರಹ್ಮೇಂದ್ರ ಸ್ವಾಮಿಯವರು ಕಾಲಜ್ಞಾನದ ಬಗ್ಗೆ ಒಮ್ಮೆ ಕೂಡ ಹೇಳಲಿಲ್ಲ. ಅನೇಕ ಸಂದರ್ಭಗಳಲ್ಲಿಯೂ ಕೂಡ ಬೇರೆ ಯಾವುದೇ ವ್ಯಕ್ತಿಗಳಿಗೂ ತಿಳಿಸಲಿಲ್ಲ. ಅಷ್ಟೇ ಅಲ್ಲ ಕಾಲಜ್ಞಾನದ ಅನೇಕ ಭಾಗವನ್ನು ಒಂದು ಹುಣಸೇ ಮರದ ಕೆಳಗೆ ಅಡಗಿಸಿದರು.

8.ಉತ್ತರ ದೊರೆಯಲಿಲ್ಲ

8.ಉತ್ತರ ದೊರೆಯಲಿಲ್ಲ

ಆತನ ಕಾಲಜ್ಞಾನವನ್ನು ಏಕೆ ಅಡಗಿಸಿದರು? ಹೀಗೆ ಏಕೆ ಮಾಡಿದರು? ಎಂಬುದಕ್ಕೆ ಮಾತ್ರ ಇಂದಿಗೂ ಉತ್ತರ ದೊರೆಯಲಿಲ್ಲ.

9.ಬನಗಾನಪಲ್ಲೆ ಉಣಸೇಮರ

9.ಬನಗಾನಪಲ್ಲೆ ಉಣಸೇಮರ

PC: LRBurdak

ಅಚ್ಚಮ್ಮ ಮನೆಯಲ್ಲಿ ಯಥಾಪ್ರಕಾರವಾಗಿ ಕಾಲಜ್ಞಾನವನ್ನು ಬರೆದು, ಒಂದು ಸ್ಥಳದಲ್ಲಿ ಅಡಗಿಸುತ್ತಾ ಇರುತ್ತಿದ್ದರು. ಆ ಪತ್ರಗಳನ್ನು ಹೂತು ಹಾಕಿದ ಸ್ಥಳದ ಮೇಲೆ ಒಂದು ಮರವನ್ನು ನಾಟಿದರು. ಆ ಗ್ರಾಮಕ್ಕೆ ಏನಾದರೂ ಅನಾಹುತ, ತೊಂದರೆ ಬಂದರೆ ಮುನ್ಸೂಚನೆಯ ಮೇರೆಗೆ ಆ ಮರದ ಪುಷ್ಪಗಳು ಒಣಗಿ ಹೋಗುತ್ತದೆ ಎಂದು ಅಲ್ಲಿನ ಪ್ರಜೆಗಳ ಪ್ರಬಲವಾದ ನಂಬಿಕೆಯಾಗಿದೆ.

10.ಅಚ್ಚಮಾಂಬ

10.ಅಚ್ಚಮಾಂಬ

ಮನೆ ವೀರಬ್ರಹ್ಮೇಂದ್ರ ಸ್ವಾಮಿ ಇದ್ದರೂ ಕೂಡ ಗರಿಮಿರೆಡ್ಡಿ ಅಚ್ಚಮಾಂಬ ಅವರ ಮನೆಯಾಗಿತ್ತು. ಇಲ್ಲಿನ ಮರದ ಕೆಳಗೆ ಕಾಲಜ್ಞಾನ ತಾಳೆಪತ್ರೆಗಳ ನಿಕ್ಷೇಪವನ್ನು ಮಾಡಿದರು. ಮನೆಯನ್ನು ಪ್ರಸ್ತುತ ಮ್ಯೂಸಿಯಂ ಆಗಿ ಮಾರ್ಪಟು ಮಾಡಿದ್ದಾರೆ.

11.ಜೀವನಕ್ಕೆ ಸಂಬಂಧಿಸಿದ

11.ಜೀವನಕ್ಕೆ ಸಂಬಂಧಿಸಿದ

ಮನೆ ವೀರಬ್ರಹ್ಮೇಂದ್ರ ಸ್ವಾಮಿ ಅವರ ಜೀವನಕ್ಕೆ ಸಂಬಂಧಿಸಿದ ವಿಶೇಷಗಳನ್ನು ಕಾಣಬಹುದು. ಬ್ರಹ್ಮಂ ಅವರು ಹಸುಗಳನ್ನು ಮೇಯಲು ಒಂದು ಸ್ಥಳದಲ್ಲಿ ಬಿಟ್ಟು ಒಂದು ಗುಹೆಯಲ್ಲಿ ಕಾಲಜ್ಞಾನವನ್ನು ಬರೆಯುತ್ತಿದ್ದರು.

12.ಆ ವೃಕ್ಷ ಯಾವುದು ಗೊತ್ತ?

12.ಆ ವೃಕ್ಷ ಯಾವುದು ಗೊತ್ತ?

ರವ್ವಲಕೊಂಡ ಪ್ರದೇಶದಲ್ಲಿ ವೀರಬ್ರಹ್ಮೇಂದ್ರ ಸ್ವಾಮಿಯವರು ಈ ಮರದ ಕೆಳಗೆ ಹಸುಗಳನ್ನು ಕಟ್ಟುತ್ತಿದ್ದರು.

13.ಬಾವಿ

13.ಬಾವಿ

ರವ್ವಕೊಂಡದ ಸಮೀದಲ್ಲಿದ್ದ ಬಾವಿ. ಇದು ಇಂದು ಉಪಯೋಗಕ್ಕೆ ಬಾರದ ರೀತಿಯಲ್ಲಿದೆ. ಇದನ್ನು ವಿಗ್ರಹದ ಪಕ್ಕದಲ್ಲಿ ಹೊರಭಾಗದಲ್ಲಿ ಕಾಣಬಹುದು.

14.ಗುಹೆ

14.ಗುಹೆ

ವೀರಬ್ರಹ್ಮೇಂದ್ರ ಸ್ವಾಮಿಯವರು ಕಾಲಜ್ಞಾನವನ್ನು ಬರೆದ ಗುಹೆಗೆ ದಾರಿ ಇದು.,, ಬ್ರಹ್ಮ ಅವರು ಕಾಲಜ್ಞಾನವನ್ನು ಬರೆದ ಪ್ರಾಂತ್ಯವಿದು. ಇದನ್ನು ಆನಂದಾಶ್ರಮ ಎಂದು ಕೂಡ ಕರೆಯುತ್ತಾರೆ.

15.ಪ್ರವೇಶ ಶುಲ್ಕ

15.ಪ್ರವೇಶ ಶುಲ್ಕ

ಗುಹೆಯ ಒಳಗೆ ಹೋಗುವುದಕ್ಕೆ ವಿಶೇಷವಾಗಿ ಟಿಕೆಟ್ ಅನ್ನು ತೆಗೆದುಕೊಳ್ಳಬೇಕು. ಪ್ರವೇಶ ಶುಲ್ಕ ಕೇವಲ 2 ರೂಪಾಯಿ.

16.ಸ್ನಾನದ ಕೊಳ

16.ಸ್ನಾನದ ಕೊಳ

ವೀರ ಬ್ರಹ್ಮೇದ್ರ ಸ್ವಾಮಿಯವರು ಬಳಸುತ್ತಿದ್ದ ಸ್ನಾನದ ಕೊಳ.

17.ಗುಹೆಯಲ್ಲಿ ವಿವಿಧ ಪ್ರದೇಶಗಳಿಗೆ ತೆರಳಬಹುದು

17.ಗುಹೆಯಲ್ಲಿ ವಿವಿಧ ಪ್ರದೇಶಗಳಿಗೆ ತೆರಳಬಹುದು

ಗುಹೆಯಿಂದ ಶ್ರೀ ಶೈಲ, ಮಹಾನಂದಿ, ಯಾಗಂಟಿ ಹೋಗುವುದಕ್ಕೆ ಮಾರ್ಗಗಳು ಕೂಡ ಇವೆ. ಈ ದಾರಿಯ ಬಗ್ಗೆ ತಿಳಿದಿದ್ದ ಸ್ವಾಮಿಯು ಆ ಪ್ರದೇಶಗಳಿಗೆಲ್ಲಾ ಭೇಟಿ ನೀಡುತ್ತಿದ್ದರು.

18.ಸ್ವಾಮಿಯನ್ನು ನೋಡಿದ ಪ್ರದೇಶ

18.ಸ್ವಾಮಿಯನ್ನು ನೋಡಿದ ಪ್ರದೇಶ

ಈ ಸ್ಥಳದಿಂದಲೇ ಅಚ್ಚಮಾಂಬ ವೀರಬ್ರಹ್ಮೇಂದ್ರ ಸ್ವಾಮಿಯು ಕಾಲಜ್ಞಾನವನ್ನು ಬರೆಯುತ್ತಿದ್ದನು ಕಂಡಳು.

19.ಮುಚ್ಚಟ್ಲ ಗುಡ್ಡ

19.ಮುಚ್ಚಟ್ಲ ಗುಡ್ಡ

PC:Ashwin Kumar

ವೀರಬ್ರಹ್ಮೇಂದ್ರ ಸ್ವಾಮಿಯವರು ವಿವಿಧ ಸಂದರ್ಭದಲ್ಲಿ ಜ್ಞಾನ ಭೋದನೆಯನ್ನು ಮಾಡಿದ್ದಾರೆ. ಅವರುಗಳಲ್ಲಿ ಅಚ್ಚಮ್ಮ, ಬನಗಾನಪಲ್ಲಿ ನವಾಬ, ಹೈದ್ರಾಬಾದ್ ನವಾಬರು ಮುಖ್ಯ. ನವಾಬರಿಗೆ ಅವರ ಅಧೀನದಲ್ಲಿಯೇ, ಅಚ್ಚಮಾಂಬಳಿಗೆ ಯಾಂಗಟಿ ಕ್ಷೇತ್ರದಲ್ಲಿ ಮುಚ್ಚಟ್ಲ ಗುಡ್ಡದ ಮೇಲೆ ಜ್ಞಾನವನ್ನು ಭೋದನೆಯನ್ನ ಮಾಡಿದರು.

20.ಬನಗಾನಪಲ್ಲಿಯಲ್ಲಿ ನೋಡಬೇಕಾಗಿರುವ ಇತರೆ ಆಕರ್ಷಣೆಗಳು

20.ಬನಗಾನಪಲ್ಲಿಯಲ್ಲಿ ನೋಡಬೇಕಾಗಿರುವ ಇತರೆ ಆಕರ್ಷಣೆಗಳು

pc: Raghuramacharya

ಯಾಗಂಟಿ ಕ್ಷೇತ್ರವು ಪಟ್ಟಣದಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಯಾಗಂಟಿಗೆ ಹೋಗುವ ಮಾರ್ಗದಲ್ಲಿ ಬನಗಾನಪಲ್ಲೆ ನವಾಬ ಬಂಗ್ಲಾ, ರವ್ವಲಕೊಂಡದಲ್ಲಿ ಬಾಲಾಂಜನೇಯಸ್ವಾಮಿ, ಪಟ್ಟಣದಲ್ಲಿನ ಆಂಜನೇಯಸ್ವಾಮಿ ದೇವಾಲಯ, ಭಾನುಮುಕ್ಕಲದಲ್ಲಿನ ಶ್ರೀ ಪೆದ್ದ ಆಂಜನೇಯಸ್ವಾಮಿ ದೇವಾಲಯ, ಇಲ್ಲೂರು ಕೊತ್ತಪೇಟ ಗ್ರಾಮದಲ್ಲಿನ ಹನುಮಂತರಾಯ ದೇವಾಲಯ, ಇನ್ನು ಅನೇಕ.

21.ವಸತಿ

21.ವಸತಿ

ಬನಗಾನಪಲ್ಲಿಯಲ್ಲಿ ತಂಗಲು ಖಾಸಗಿ ಲಾಡ್ಜುಗಳ ಜೊತೆ ಬ್ರಹ್ಮೇಂದ್ರ ಅವರ ಮಠ ವಸತಿ ಗೃಹಗಳು ಇವೆ. ಮಠದವರು ವಸತಿ ಗೃಹದಲ್ಲಿ ಅಚ್ಚಮಂಬಳ ಮನೆ, ರವ್ವಲಕೊಂಡ ಪ್ರದೇಶಗಳು ಕೂಡ ಇವೆ. ಇಲ್ಲಿ ಎ.ಸಿ ಸದುಪಯೋಗವು ಕೂಡ ಇದೆ.

22.ರವ್ವಲಕೊಂಡ ಸೇರಿಕೊಳ್ಳವ ಬಗೆ ಹೇಗೆ?

22.ರವ್ವಲಕೊಂಡ ಸೇರಿಕೊಳ್ಳವ ಬಗೆ ಹೇಗೆ?

PC: Reuleaux

ರವ್ವಲಕೊಂಡ ಸೇರಿಕೊಳ್ಳುವುದಕ್ಕಿಂತ ಮುಂದೆ ಬನಗಾನಪಲ್ಲೆ ಸೇರಿಕೊಳ್ಳಬೇಕು. ಬನಗಾನಪಲ್ಲೆಯಿಂದ ರವ್ವಲಕೊಂಡಕ್ಕೆ 1.5 ಕಿ.ಮೀ ದೂರದಲ್ಲಿದೆ. ರಸ್ತೆ ಮಾರ್ಗದಲ್ಲಿ ತಿರುಗುವ ಆಟೋ ಅಥವಾ ಕಾಲ್ನಡಿಗೆಯ ಮೂಲಕವು ಬೆಟ್ಟದ ಮೇಲೆ ಸೇರಿಕೊಳ್ಳಬಹುದು. ಬನಗಾನಲ್ಲೆಗೆ ಹೈದ್ರಾಬಾದ್, ಕರ್ನೂಲ್, ಡೋನ್, ನಂದ್ಯಾಲ, ಬೆಂಗಳೂರು, ತಾಡಿಪತಿ ಇನ್ನು ಅನೇಕ ಪ್ರದೇಶಗಳಿಂದ ಸರ್ಕಾರಿ ಸರ್ಕಾರಿ ಬಸ್ಸುಗಳು ಹತ್ತಿ ಸೇರಿಕೊಳ್ಳಬಹುದು. ಬನಗಾನಪಲ್ಲೆಯಲ್ಲಿ ರೈಲ್ವೆ ನಿಲ್ದಾಣವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X