Search
  • Follow NativePlanet
Share
» »ಬೆಂಗಳೂರಲ್ಲೂ ರಜನಿಕಾಂತ್ , ಅಮಿತಾಬ್‌ ಬಚ್ಚನ್ ಸಿನಿಮಾ ಶೂಟಿಂಗ್ ಆಗಿದೆ ಗೊತ್ತಾ?

ಬೆಂಗಳೂರಲ್ಲೂ ರಜನಿಕಾಂತ್ , ಅಮಿತಾಬ್‌ ಬಚ್ಚನ್ ಸಿನಿಮಾ ಶೂಟಿಂಗ್ ಆಗಿದೆ ಗೊತ್ತಾ?

ಬೆಂಗಳೂರು ನಗರವು ಸ್ಯಾಂಡಲ್‌ವುಡ್‌ನ ಮನೆ ಎಂಬಂತಾಗಿದೆ. ಈಗ ಬಾಲಿವುಡ್‌ ಅಂದ್ರೆ ಮುಂಬೈ ಅಂತಾ ಹೇಗೆ ಗುರುತಿಸ್ತಾರೋ ಹಾಗೆಯೇ ಸ್ಯಾಂಡಲ್‌ವುಡ್ ಅಂದ್ರೆ ಬೆಂಗಳೂರು ಅಂತಾ ಹೇಳ್ತಾರೆ. ಬೆಂಗಳೂರಿನಲ್ಲಿ ಎಷ್ಟೆಲ್ಲಾ ಸಿನಿಮಾಗಳು ಶೂಟಿಂಗ್ ಆಗಿವೆ. ಆಗುತ್ತಿವೆ ಅನ್ನೋದು ನಿಮಗೆಲ್ಲಾ ಗೊತ್ತಿರುವ ವಿಚಾರನೇ. ಆದ್ರೆ ಬೆಂಗಳೂರಲ್ಲಿ ಈ ಶೂಟಿಂಗ್ ನಡೆಯೋ ಸ್ಥಳಗಳು ಯಾವುವು , ಎಲ್ಲೆಲ್ಲಾ ಶೂಟಿಂಗ್ ನಡೆಯುತ್ತೆ ಅನ್ನೋದು ಗೊತ್ತಾಗೋದೇ ಇಲ್ಲ.

ಬಾಲಿವುಡ್‌ ಸಿನಿಮಾ

ಬಾಲಿವುಡ್‌ ಸಿನಿಮಾ

PC:SMit224

ಬಹುತೇಕರಂತೂ ಈ ಸಿನಿಮಾ ಹುಚ್ಚರಾಗಿರುತ್ತಾರೆ. ಅವರಿಗೆ ಸಿನಿಮಾ ಶೂಟಿಂಗ್ ನೋಡಬೇಕು. ನಟ, ನಟಿಯನ್ನು ನೋಡಬೇಕು ಎನ್ನುವ ಸಿಕ್ಕಾಪಟ್ಟೆ ಆಸೆ ಇರುತ್ತದೆ. ಆದ್ರೆ ಏನ್ಮಾಡೋದು, ಶೂಟಿಂಗ್ ನೋಡೋಕೆ ಆಗೋಲ್ಲ. ಕಾರಣ. ಬೆಂಗಳೂರಲ್ಲಿ ಎಲ್ಲೆಲ್ಲಾ ಶೂಟಿಂಗ್ ನಡೆಯೋತ್ತೆ ಅನ್ನೋದೇ ಗೊತ್ತಿರೋಲ್ಲ. ಬೆಂಗಳೂರಿನಲ್ಲಿ ಕೇವಲ ಸ್ಯಾಂಡಲ್‌ವುಡ್‌ ಸಿನಿಮಾಗಳು ಮಾತ್ರವಲ್ಲ, ಬಾಲಿವುಡ್‌ ಸಿನಿಮಾಗಳ ಚಿತ್ರೀಕರಣವೂ ನಡೆದಿದೆ. ಅವು ಯಾವ್ಯಾವ ಸಿನಿಮಾ ಹಾಗೂ ಎಲ್ಲೆಲ್ಲಿ ಶೂಟಿಂಗ್ ನಡೆದಿವೆ ಅನ್ನೋದು ನಿಮಗೆ ತಿಳಿದಿದ್ಯಾ. ಇಲ್ಲಾ ಎಂದಾದಲ್ಲಿ ಇಲ್ಲಿದೆ ಓದಿ. ನಾವಿಂದು ಬಾಲಿವುಡ್‌ ಸಿನಿಮಾಗಳೂ ಶೂಟಿಂಗ್ ಆಗಿರುವ ಕೆಲವು ಬೆಂಗಳೂರಿನ ಶೂಟಿಂಗ್ ತಾಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಬೆಣ್ಣೆಯಂತಿರುವ ಬೆಣ್ಣೆ ಹೊಳೆ ಫಾಲ್ಸ್‌ಗೆ ಹೋಗಿದ್ದೀರಾ?ಬೆಣ್ಣೆಯಂತಿರುವ ಬೆಣ್ಣೆ ಹೊಳೆ ಫಾಲ್ಸ್‌ಗೆ ಹೋಗಿದ್ದೀರಾ?

ಯಾವೆಲ್ಲಾ ಸಿನಿಮಾ ಚಿತ್ರೀಕರಣವಾಗಿದೆ

ಯಾವೆಲ್ಲಾ ಸಿನಿಮಾ ಚಿತ್ರೀಕರಣವಾಗಿದೆ

ಅಮೀರ್ ಖಾನ್ ಮತ್ತು ಜುಹಿ ಚಾವ್ಲಾ ಅಭಿನಯದ ಖಯಾಮತ್ ಸೇ ಖಯಾಮತ್ ತಕ್ ಸಿನಿಮಾವನ್ನೂ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಘಾಯಾಲ್, ಕೂಲಿ, ಅಂಧಾ ಕಾನೂನ್ ಮತ್ತು ಗೊರಿ ತೇರೆ ಪ್ಯಾರ್ ಮೇನ್ ಮುಂತಾದ ಚಲನಚಿತ್ರಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅಭಿನಯದ ಶೋಲೆ ಸಿನಿಮಾವು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.

ಶೋಲೆ

ಶೋಲೆ

PC: L. Shyamal

ಬೆಂಗಳೂರಿನಲ್ಲಿ ಬಾಲಿವುಡ್ ಚಲನಚಿತ್ರಗಳನ್ನು ಸಹ ಚಿತ್ರೀಕರಿಸಲಾಗಿದೆ. ಅಮಿತಾಬಚ್ಚನ್‌ರ ಬಹಳ ಫೇಮಸ್‌ ಆದಂತಹ ಸಿನಿಮಾಗಳಲ್ಲಿ ಶೋಲೆ ಕೂಡಾ ಒಂದು . ಬೆಂಗಳೂರಿನ ಬಳಿ ಇರುವ ರಾಮನಗರ್ ಎಂಬ ಹಳ್ಳಿಯಲ್ಲಿ ಈ ಚಲನಚಿತ್ರವನ್ನು ಚಿತ್ರೀಕರಿಸಲಾಯಿತು. ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರಿಯಗೊಳಿಸಿದ ಕೆಲವು ಹಿಟ್ ಚಿತ್ರಗಳಲ್ಲಿ ಇದೂ ಒಂದಾಗಿದೆ.

ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್‌ ಸಂಬಂಧ ಗೊತ್ತಾ?ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್‌ ಸಂಬಂಧ ಗೊತ್ತಾ?

ಗೋರಿ ತೆರೆ ಪ್ಯಾರ್ ಮೇ

ಗೋರಿ ತೆರೆ ಪ್ಯಾರ್ ಮೇ

PC:sarang

ಇಮ್ರಾನ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಗೋರಿ ತೆರೆ ಪ್ಯಾರ್ ಮೇನ್ ಸಿನಿಮಾವು ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದ್ದು. ಇದರಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ಅನ್ನು ತೋರಿಸಲಾಗಿದೆ. ಜೊತೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ತೋರಿಸಲಾಗಿದೆ.

ಅಂಧಾ ಕಾನೂನು

ಅಂಧಾ ಕಾನೂನು

PC: Kuskela

ರಜನೀಕಾಂತ್, ಹೇಮಮಾಲಿನಿ ಅಭಿನಯದ ಅಂಧಾ ಕಾನೂನು ಸಿನಿಮಾ ಕೂಡಾ ಬೆಂಗಳೂರಿನಲ್ಲಿ ಶೂಟಿಂಗ್ ಆಗಿದ್ದು ಈ ಸಿನಿಮಾದಲ್ಲಿ ಕರ್ನಾಟಕ ಹೈ ಕೋರ್ಟ್‌ನ್ನು ತೋರಿಸಲಾಗಿದೆ.

ಕೂಲಿ

ಕೂಲಿ

PC: Ashwin Kumar

ಅಮಿತಾಭ್ ಬಚ್ಚನ್ ಅಭಿನಯದ ಕೂಲಿ ಸಿನಿಮಾದಲ್ಲಿ ಬೆಂಗಳೂರು ರೈಲ್ವೆ ಪ್ಲ್ಯಾಟ್‌ಫಾರ್ಮ್‌ನ್ನು ತೋರಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X