Search
  • Follow NativePlanet
Share
» »12 ವರ್ಷಕ್ಕೊಮ್ಮೆ ಅರಳುವ ಹೂವು ; ನೀಲಗಿರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು?

12 ವರ್ಷಕ್ಕೊಮ್ಮೆ ಅರಳುವ ಹೂವು ; ನೀಲಗಿರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು?

ನಮ್ಮ ದೇಶದಲ್ಲಿ ಎಷ್ಟೊಂದು ಜಾತಿಯ ಹೂವುಗಳಿವೆ. ಈ ಹೂವುಗಳಲ್ಲಿ ಕೆಲವು ಪ್ರತಿ ಸೀಸನ್‌ನಲ್ಲೂ ಪ್ರತಿನಿತ್ಯ ಹೂಬಿಡುತ್ತಿದ್ದರೆ ಇನ್ನೂ ಕೆಲವು ಸೀಸನ್‌ ಪ್ರಕಾರ ಹೂ ಬಿಡುತ್ತವೆ. ಮೇ ತಿಂಗಳಲ್ಲಿ, ಡಿಸೆಂಬರ್ ತಿಂಗಳಲ್ಲಿ ಅರಳಿದರೆ ಇನ್ನೂ ಕೆಲವು ಮಳೆಗಾಲದಲ್ಲಿ ಹೂ ಬಿಡುತ್ತವೆ. ಹೀಗೆ ಒಂದೊಂದು ಹೂವು ಅರಳಲು ಅದರದ್ದೇ ಕಾಲವಿದೆ. ನಾವು ಇಂದು ಹೇಳ ಹೊರಟಿರುವುದು ಅಂತಹದ್ದೇ ಒಂದು ವಿಶೇಷ ಹೂವಿನ ಬಗ್ಗೆ ಇದು 12 ವರ್ಷಗಳಿಗೊಮ್ಮೆ ಅರಳುತ್ತದೆ.

12 ವರ್ಷಕ್ಕೊಮ್ಮೆ ಅರಳುವ ಹೂವು

12 ವರ್ಷಕ್ಕೊಮ್ಮೆ ಅರಳುವ ಹೂವು

PC: Vinayaraj

ನೀಲಕುರಿಂಜಿ ಹೂವಿನ ಬಗ್ಗೆ ನೀವು ಕೇಳಿದ್ದೀರಾ ಇದು 12 ವರ್ಷಗಳಿಗೊಮ್ಮೆ ಅರಳುವ ಹೂವು.ಇದು ದಕ್ಷಿಣ ಭಾರತದಲ್ಲಿರುವ ನೀಲಗಿರಿ ಬೆಟ್ಟದಲ್ಲಿರುವ ಸೋಲಾ ಕಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ವೈಜ್ಞಾನಿಕ ಹೆಸರು ಸ್ಟ್ರೊಬಿಯಾಂತಸ್ ಕುಂತಿಯಾನ.

ಶ್ರೀರಾಮ ರಾವಣನನ್ನು ಸಂಹರಿಸಿ ಬಂದು ತನ್ನ ಜಡೆಯನ್ನು ತೊಳೆದದ್ದು ಇಲ್ಲೇ

ನೀಲಗಿರಿ ಬೆಟ್ಟ ಹೆಸರು ಬರಲು ಕಾರಣವೇನು?

ನೀಲಗಿರಿ ಬೆಟ್ಟ ಹೆಸರು ಬರಲು ಕಾರಣವೇನು?

PC:Simynazareth

ನೀಲಗಿರಿ ಬೆಟ್ಟವನ್ನು ಈ ಹೆಸರಿನಲ್ಲಿ ಗುರುತಿಸಲ್ಪಡಲು ಈ ಹೂವೇ ಕಾರಣ ಎನ್ನಲಾಗುತ್ತದೆ. ಈ ಹೂವು ಅರಳಿದಾಗ ಇದು ನೀಲಿ ಬಣ್ಣದಲ್ಲಿರುತ್ತದೆ. ಹಾಗಾಗಿ ಬೆಟ್ಟವಿಡೀ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಹಾಗಾಗಿ ನೀಲಗಿರಿ ಎನ್ನಲಾಗಿದೆ.

ಈ ಹೂವನ್ನು ಮೊದಲು ಗುರುತಿಸಿದ್ದು ಯಾರು?

ಈ ಹೂವನ್ನು ಮೊದಲು ಗುರುತಿಸಿದ್ದು ಯಾರು?

PC:Aruna Radhakrishnan

ಹತ್ತೊಂಬತ್ತನೇ ಶತಮಾನದಲ್ಲಿ ಕ್ರಿಶ್ಚಿಯನ್ ಗಾಟ್ಫ್ರೈಡ್ ಡೇನಿಯಲ್ ನೀಸ್ ವಾನ್ ಎಸೆನ್ಬೆಕ್ ಎಂಬ ವ್ಯಕ್ತಿ ಈ ಹೂವನ್ನು ಮೊದಲು ಗುರುತಿಸಿದ್ದರು. ಈ ಕುರುಂಜಿ ಹೂವು 250 ಜಾತಿಗಳಲ್ಲಿ ಕಂಡುಬರುತ್ತದೆ. ಅದರಲ್ಲಿ 46 ಜಾತಿಯ ಹೂವುಗಳು ನಮ್ಮ ಭಾರತದಲ್ಲಿ ಕಂಡುಬರುತ್ತದೆ.

ಈ ಗಿಡ ಎಷ್ಟು ಉದ್ದ ಬೆಳೆಯುತ್ತದೆ

ಈ ಗಿಡ ಎಷ್ಟು ಉದ್ದ ಬೆಳೆಯುತ್ತದೆ

PC:Simynazareth

ಈ ಹೂವು 1300ರ ರಿಂದ 2400ಪರ್ವತಗಳಲ್ಲಿ ಕಂಡು ಬರುತ್ತದೆ. ಈ ಗಿಡ ಮೂವತ್ತರಿಂದ ಅರವತ್ತು ಸೆಂ.ಟಿ ಮೀಟರ್ ಉದ್ದ ಬೆಳೆಯುತ್ತದೆ. ಆದರೆ ಇದಕ್ಕೆ 180 ಸೆಂ.ಟಿ ಮೀಟರ್ ತನಕ ಬೆಳೆಯುವ ಕ್ಷಮತೆ ಇದೆ. ಈ ಹೂವಿನ ಸೌಂದರ್ಯ ವನ್ನು ಸವಿಯಲು ಪ್ರಪಂಚದ ನಾನಾ ಭಾಗಗಳಿಂದ ಬರುತ್ತಾರೆ. ಹಾಗಾಗಿ ನೀಲಗಿರಿ ಬೆಟ್ಟವು ಒಂದು ಪ್ರವಾಸಿ ತಾಣವಾಗಿದೆ.

ಎಲ್ಲಿ ಕಾಣ ಸಿಗುತ್ತದೆ ಈ ಕುರಿಂಜೀ ಹೂವು

ಎಲ್ಲಿ ಕಾಣ ಸಿಗುತ್ತದೆ ಈ ಕುರಿಂಜೀ ಹೂವು

PC: matthieu-aubry

ಈ ಹೂವು ಅತೀ ಹೆಚ್ಚಾಗಿ ಪೂರ್ವ ಘಟ್ಟ ಹಾಗೂ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಸಂದುರ್ ಬೆಟ್ಟದಲ್ಲಿ ಕಂಡುಬರುತ್ತದೆ. ಈ ಹೂವು ಕೊನೇಯದಾಗಿ 2006 ರಲ್ಲಿ ಕೇರಳ ಹಾಗೂ ತಮಿಳು ನಾಡಿನಲ್ಲಿ ಅರಳಿತ್ತು. ಇದು 2018ರಲ್ಲಿ ಮತ್ತೆ ಅರಳುತ್ತದೆ . ಕುರಿಂಜಿಮಾಲ ಅಭಯಾರಣ್ಯದಲ್ಲಿ ಕುರಿಂಜಿ ಹೂವಿನ ಮರಗಳು ಸರಾಸರಿ 32ಕಿಲೋ ಮೀಟರ್ ಸ್ಥಳವನ್ನು ಆವರಿಸಿಕೊಂಡಿದೆ. ಕುರಿಂಜಿಮಾಲ ಅಭಯಾರಣ್ಯವು ಕೇರಳದ ಹಿಡುಕ್ಕಿ ಜಿಲ್ಲೆಯ ಕೊತ್ತಕಂಬುರ್ ಮತ್ತು ವತವಾಡ ಹಳ್ಳಿಯಲ್ಲಿದೆ.

ವೀಕ್ಷಣೆಗೆ ಅವಕಾಶ

ವೀಕ್ಷಣೆಗೆ ಅವಕಾಶ

PC: Vinayaraj

ಕೊನೆಯದಾಗಿ 2006 ರಲ್ಲಿ ಮೂನಾರ್‌ನಲ್ಲಿ ಕೋವಿಲೂರ್, ಕಡವರಿ, ರಾಜಮಲ ಮತ್ತು ಎರಾವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಅದ್ಭುತ ದೃಶ್ಯ ಕಂಡುಬಂದಿತ್ತು. ಆಗಸ್ಟ್‌ನಿಂದ ಅಕ್ಟೋಬರ್ ವರೆಗೆ ಇದರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more