Search
  • Follow NativePlanet
Share
» »ಪ್ರಸಿದ್ಧ ಕನ್ನಡ ಸಾಹಿತಿಗಳ ಹುಟ್ಟೂರುಗಳು

ಪ್ರಸಿದ್ಧ ಕನ್ನಡ ಸಾಹಿತಿಗಳ ಹುಟ್ಟೂರುಗಳು

By Vijay

ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆಯ ಶ್ರೀಮಂತಿಕೆ ಅಪಾರವಾದದ್ದು. ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲಾಗುವ ಕನ್ನಡ ಭಾಷೆಯ ಸುಮಾರು 2000 ಕ್ಕೂ ಅಧಿಕ ವರ್ಷಗಳಷ್ಟು ಪುರಾತನವಾದದ್ದು ಎಂದು ಹೇಳಲಾಗುತ್ತದೆ.

ಅಲ್ಲದೆ ಕನ್ನಡ ಭಾಷೆಯು ಅದ್ಭುತ ಭಾಷಾ ಸಾಮರ್ಥ್ಯ ಹೊಂದಿದ್ದು ಕೇಳಲು ಇಂಪಾಗಿದ್ದು ಬರೆಯಲು ಸುಲಲಿತವಾಗಿದೆ. ಕನ್ನಡ ಭಾಷೆಯ ನೈಜತೆಯನ್ನು, ಶ್ರೀಮಂತಿಕೆಯನ್ನು ಲೋಕಕ್ಕೆ ಅನಾವರಣಗೊಳಿಸಿದವರಲ್ಲಿ, ಸಾಹಿತಿಗಳು ಹಾಗೂ ಕವಿಗಳ ಪಾತ್ರ ಪ್ರಮುಖವಾಗಿದೆ.

ಕನ್ನಡದಲ್ಲಿ ಈ ವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದನ್ನು ನೋಡಿದಾಗ ಈ ಭಾಷೆಯ ಅಗಾಧತೆ ಹಾಗೂ ಕನ್ನಡದ ಸಾಹಿತಿಗಳ ಮತ್ತು ಕವಿಗಳ ಮೇಲೆ ಅಪಾರ ಗೌರವ, ವಿಶ್ವಾಸ ಬರದೆ ಇರಲಾರದು. ಪ್ರಸ್ತುತ ಲೇಖನದ ಮೂಲಕ ಕನ್ನಡ ಕಂಡ ಕೆಲವು ಆಯ್ದ ಪ್ರಖ್ಯಾತ ಸಾಹಿತಿಗಳ ಹಾಗೂ ಕವಿಗಳ ಹುಟ್ಟೂರುಗಳು ಯಾವುವು ಎಂಬುದು ತಿಳಿಯಿರಿ.

ರಾಷ್ಟ್ರಕವಿ

ರಾಷ್ಟ್ರಕವಿ

ಮೊದಲ ರಾಷ್ಟ್ರಕವಿ ಎಂಬ ಗೌರವವನ್ನು ಪಡೆದ ಕನ್ನಡ ಕಂಡ ಅತ್ಯಂತ ಪ್ರತಿಭಾವಂತ ಕವಿ ಶ್ರೀ ಮಂಜೇಶ್ವರ ಗೋವಿಂದ ಪೈ ಅವರು. ಇವರು ಮಾರ್ಚ್ 23, 1883 ರಂದು ಮಂಜೇಶ್ವರದಲ್ಲಿ ಜನಿಸಿದ್ದರು. ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಮಂಜೇಶ್ವರವು ಭಾಷಾವಾರು ರಾಜ್ಯಗಳಾದ ನಂತರ, ಕೇರಳದಲ್ಲಿ ಸೇರಿತು. ಮಂಜೇಶ್ವರ ಕಾಸರಗೋಡು ಜಿಲ್ಲೆಯಲ್ಲಿದ್ದು ಕರ್ನಾಟಕದ ಗಡಿಗೆ ಬಲು ಹತ್ತಿರದಲ್ಲಿದೆ. ಕವನ ಸಾಹಿತ್ಯ, ಕವಿಗಳ ಅಭಿಮಾನಿಗಳು ಮಂಜೇಶ್ವರಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ.

ಕುವೆಂಪು

ಕುವೆಂಪು

ಕನ್ನಡ ಕಂಡ ಮತ್ತೊಬ್ಬ ಶ್ರೇಷ್ಠ ಕವಿ, ಚಿಂತಕ, ಕಾದಂಬರಿಕಾರ, ಲೇಖಕ ಶ್ರೀ ಕುವೆಂಪುರವರು. ತಮ್ಮ ಶ್ರೀರಾಮಾಯಣದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿಗಳಿಸಿರುವ ಕೆ.ವಿ ಪುಟ್ಟಪ್ಪನವರು ಜನಸಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೆಕೊಡಿಗೆ ಎಂಬ ಗ್ರಾಮದಲ್ಲಾದರೂ ಇವರು ಪೂರ್ಣವಾಗಿ ಬೆಳದದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಗ್ರಾಮದಲ್ಲಿ.

ಬಹುಮುಖ ಪ್ರತಿಭೆ

ಬಹುಮುಖ ಪ್ರತಿಭೆ

ಇವರ ಪುತ್ರರಾದ ಪೂರ್ಣಚಂದ್ರ ತೇಜಸ್ವಿಯವರೂ ಸಹ ಪ್ರಖ್ಯಾತ ಸಾಹಿತಿಗಳು ಹಾಗೂ ಬರಹಗಾರರು. ಬಹುಮುಖ ಪ್ರತಿಭಾವಂತರಾಗಿದ್ದ ಇವರು ಹುಟ್ಟಿದ್ದು ಕುಪ್ಪಳಿ ಗ್ರಾಮದಲ್ಲಿಯೆ. ಇಂದು ಇಲ್ಲಿ ಕುವೆಂಪು ಹಾಗೂ ತೇಜಸ್ವಿಯವರ ಸಮಾಧಿ ಸ್ಮಾರಕಗಳಿದ್ದು ಕುವೆಂಪುರವರ ಮನೆಯನ್ನು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವನ್ನಾಗಿ ಪರಿವರ್ತಿಸಲಾಗಿದೆ. ಇದೊಂದು ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ.

ನವ್ಯ ಕನ್ನಡ

ನವ್ಯ ಕನ್ನಡ

ನವ್ಯ ಕನ್ನಡ ಕಾವ್ಯಭೂಮಿಯಲ್ಲಿ ಹೆಚ್ಚು ಗಮನಸೆಳೆವ ಪ್ರತಿಭಾವಂತ ಕವಿಗಳಾದ ಶ್ರೀ ಗೋಪಾಲ ಕೃಷ್ಣ ಅಡಿಗರು ಜನಿಸಿದ್ದು ಉಡುಪಿ ಜಿಲ್ಲೆಯ ಮೋಗೇರಿ ಗ್ರಾಮದಲ್ಲಿ. ಕುಂದಾಪುರದಿಂದ 25 ಕಿ.ಮೀ ಹಾಗೂ ಉಡುಪಿ ನಗರಕೇಂದ್ರದಿಂದ 64 ಕಿ.ಮೀ ದೂರವಿರುವ ಮೋಗೇರಿಯು ಅರಬ್ಬಿ ಸಮುದ್ರಕ್ಕೆ ಬಹು ಹತ್ತಿರದಲ್ಲಿದೆ.

ಚಿತ್ರಕೃಪೆ: wikimapia

ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಜನಿಸಿರುವ ಯು ಆರ್ ಅನಂತಮೂರ್ತಿ ಕರ್ನಾಟಕದ ಪ್ರಸಿದ್ಧ ಸಾಗಿತಿಗಳಲೊಬ್ಬರು.

ಚಿತ್ರಕೃಪೆ: Manjeshpv

ಬರಹಗಾರ

ಬರಹಗಾರ

ಬರಹಗಾರ, ನಾಟಕ ಕಲಾವಿದ, ವಿಮರ್ಶಕ, ಚಿಂತಕರಾದ ಜ್ಞಾನಪೀಠ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ ಹುಟ್ಟಿದ್ದು ಮಹಾರಾಷ್ಟ್ರದ ಪ್ರಸಿದ್ಧ ಹಾಗೂ ಆಕರ್ಷಕ ಗಿರಿಧಾಮವಾದ ಮಾಥೇರಾನ್ ಊರಿನಲ್ಲಿ.

ಚಿತ್ರಕೃಪೆ: Virendra Harmalkar

ಚಿತ್ರಕೃಪೆ: Srtejaswi

ಸವಣೂರು

ಸವಣೂರು

ಕನ್ನಡ ಕಂಡ ಧೀಮಂತ ಬರಹಗಾರ, ಲೇಖಕ, ಸಾಹಿತಿಗಳ ಪೈಕಿ ವಿನಾಯಕ ಕೃಷ್ಣ ಗೋಕಾಕ ಅವರೂ ಸಹ ಒಬ್ಬರು. ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಪಾಂಡಿತ್ಯಗಳಿಸಿದ್ದ ಇವರು ತಮ್ಮ ಅದ್ಭುತ ಕೃತಿಯಾದ ಭಾರತ ಸಿಂಧುರಷ್ಮಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು. ದ.ರಾ ಬೇಂದ್ರಯವರಿಂದ ಪ್ರಭಾವಿತರಾಗಿದ್ದ ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ. ಇಂದು ಸವಣೂರು ತನ್ನಲ್ಲಿ ದೊರಕುವ ಖಾರಕ್ಕೆ ಬಲು ಹೆಸರುವಾಸಿಯಾಗಿದೆ. ಸವಣೂರು ಗೇಟ್.

ಚಿತ್ರಕೃಪೆ: GubbiHakki

ಧಾರವಾಡ

ಧಾರವಾಡ

ಇವರನ್ನು ಕರ್ನಾಟಕದ ವರಕವಿ ಎಂತಲೆ ಕರೆಯುತ್ತಾರೆ. ನವೋದಯ ಕಾಲದ ಧೀಮಂತ ಕವಿಗಳಲ್ಲಿ ಒಬ್ಬರಾಗಿದ್ದವರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಥವಾ ದ.ರಾ ಬೇಂದ್ರೆಯವರು. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಬೇಂದ್ರೆಯವರು ಹುಟ್ಟಿದ್ದು ಉತ್ತರ ಕರ್ನಾಟಕದ ಧಾರವಾಡ ಪಟ್ಟಣದಲ್ಲಿ. ಇವರೂ ಸಹ ಜ್ಞಾನಪೀಠ ಪ್ರಶಸ್ತಿ ವಿಜೇತರು.

ಕೋಲಾರ

ಕೋಲಾರ

ಕನ್ನಡ ಭಾಷೆಯ ಉತ್ಕೃಷ್ಟ ಸಾಹ್ತಿಗಳಲ್ಲಿ ಒಬ್ಬರಾಗಿ ಪರಿಗಣಿಸಲ್ಪಡುತ್ತಾರೆ. ಶ್ರೀಯುತ ಮಾಸ್ತಿ ವೆಂಕಟೇಶ ಅಯ್ಯಂಗಾರರು. ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದ ಇವರನ್ನು ಸಮಸ್ತ ಕನ್ನಡ ಜನತೆಯು ಪ್ರೀತಿಯಿಂದ "ಮಾಸ್ತಿ ಕನ್ನಡದ ಆಸ್ತಿ" ಎಂದೆ ಕರೆಯುತ್ತಿದ್ದರು. ಮಾಸ್ತಿಯವರು ಜನಿಸಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ.

ಚಿತ್ರಕೃಪೆ: Hariharan Arunachalam

ಉಡುಪಿ

ಉಡುಪಿ

ಸಾಮಾಜಿಕ ಕಾರ್ಯಕರ್ತ, ಪರಿಸರವಾದಿ, ಯಕ್ಷಗಾನ ಕಲಾವಿದ ಎಲ್ಲಕ್ಕೂ ಮಿಗಿಲಾಗಿ ಕನ್ನಡ ಧಿಮಂತ ಸಾಹಿತಿ ಹಾಗು ಬರಹಗಾರರಾಗಿದ್ದ ಕೆ ಶಿವರಾಮ ಕಾರಂತರು ಜ್ಞಾನಪೀಠ ಪ್ರಶಸ್ತಿ ವಿಜೇತರು. ಈ ಮಹಾನುಭಾವ ಬರಹಗಾರರು ಜನಿಸಿದ್ದು ಉಡುಪಿಯ ಸುಂದರ ಕರಾವಳಿ ತೀರ ಹೊಂದಿರುವ ಕೋಟಾ ಗ್ರಾಮದಲ್ಲಿ.

ಚಿತ್ರಕೃಪೆ: Manoj Vasanth

ಚಿತ್ರಕೃಪೆ: Vishwanatha Badikana

ಹುಕ್ಕೇರಿ

ಹುಕ್ಕೇರಿ

ಉಪನ್ಯಾಸಕ, ಕವಿ ಹಾಗೂ ನಾಟಕಕಾರರಾದ ಶ್ರೀಯುತ ಚಂದ್ರಶೇಖರ ಕಂಬಾರರು ಕನ್ನಡಕ್ಕೆ ಎಂಟನೇಯ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಧೀಮಂತರಾಗಿದ್ದಾರೆ. ಹಲವು ಕನ್ನಡ ಚಿತ್ರಗಳನ್ನು ನಿರ್ದೇಶಿಸಿರುವ ಈ ಕವಿ ಹುಟ್ಟಿದ್ದು ಗೊಡಗೇರಿ ಹಳ್ಳಿಯಲ್ಲಿ. ಇದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿದೆ. ಹುಕ್ಕೇರಿ ಬಳಿಯಿರುವ ಹಿಡ್ಕಲ್ ಜಲಾಶಯ. ಇದೊಂದು ಆಕರ್ಷಕ ಪಿಕ್ನಿಕ್ ತಾನವಾಗಿದೆ.

ಚಿತ್ರಕೃಪೆ: Shil.4349

ಚಿತ್ರಕೃಪೆ: Subhashish Panigrahi

ಚೆನ್ನರಾಯಪಟ್ಟಣ

ಚೆನ್ನರಾಯಪಟ್ಟಣ

ಆಧುನಿಕ ಭಾರತದ ನವ್ಯ ಕಾದಂಬರಿಕಾರ, ಚಿಂತಕ ಹಾಗೂ ವಿಮರ್ಶಕರಾದ ಶ್ರೀ ಎಸ್ ಎಲ್ ಭೈರಪ್ಪನವರು ಜನಿಸಿದ್ದು ಸಂತೇಶಿವರ ಎಂಬ ಗ್ರಾಮದಲ್ಲಿ. ಸಂತೇಶಿವರ ಗ್ರಾಮವು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನಲ್ಲಿದೆ. ಭೈರಪ್ಪನವರ ಕಾದಂಬರಿಗಳು ಕೇವಲ ಕರ್ನಾಟಕದಲ್ಲದೆ ಭಾರತ ಹಾಗೂ ಸಾಗರದಾಚೆಯ ಅಮೇರಿಕೆಯಲ್ಲೂ ಸಹ ಹೆಸರುವಾಸಿಯಾಗಿವೆ.

ಚಿತ್ರಕೃಪೆ: Vpsmiles

https://commons.wikimedia.org/wiki/File:Mavnur_Mallappa_Temple.JPG

ಮುಳಬಾಗಿಲು

ಮುಳಬಾಗಿಲು

ಮಂಕು ತಿಮ್ಮನ ಕಗ್ಗ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಇದನ್ನು ಆಧುನಿಕ ಭಗವದ್ಗೀತೆ ಎಂತಲೂ ಸಹ ಕರೆಯುವುದುಂಟು. ಇದರ ನಿರ್ಮಾತೃ ಹಾಗೂ ಕನ್ನಡನಾಡು ಕಂಡ ಧೀಮಂತ ವಿದ್ವಾಂಸ, ಬರಹಗಾರ, ಕವಿ ಹಾಗೂ ಆಧ್ಯಾತ್ಮಪ್ರಿಯ ಪುರುಷ ಡಿ.ವಿ ಗುಂಡಪ್ಪನವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲುವಿನಲ್ಲಿ. ಇವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಎಂದು. ಮುಳಬಾಗ್ಲುವಿನ ಪ್ರಸಿದ್ಧ ಸೋಮೇಶ್ವರ ದೇವಾಲಯ.

ಚಿತ್ರಕೃಪೆ: Dineshkannambadi

ಚಿತ್ರಕೃಪೆ: Concave Media

ಮಂಡ್ಯ

ಮಂಡ್ಯ

ಸುಮಧುರ ಗೀತೆಗಳು, ಪ್ರೀತಿಯನ್ನು ಬಿಂಬಿಸುವ ಕವನಗಳು, ಕಾದಂಬರಿಗಳು ಹೀಗೆ ಸೊಗಸಾದ ಮನಸಿ ತಂಪನ್ನೀಯುವ ಕವನಗಳಿಂದ ಪ್ರಸಿದ್ಧಿಗಳಿಸಿರುವ ಶ್ರೀಯುತ ಕೆ ಎಸ್ ನರಸಿಂಹಸ್ವಾಮಿಯವರು ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿ ಜನಿಸಿದವರು. ಕಿಕ್ಕೇರಿಯ ಪ್ರಖ್ಯಾತ ಬ್ರಹ್ಮೇಶ್ವರ ದೇವಾಲಯ.

ಚಿತ್ರಕೃಪೆ: Dineshkannambadi

ಶಿಕಾರಿಪುರ

ಶಿಕಾರಿಪುರ

ಗುಗ್ಗರಿ ಶಾಂತವೀರಪ್ಪಾ ಶಿವರುದ್ರಪ್ಪ ಕನ್ನಡದ ಪ್ರಖ್ಯಾತ ಕವಿಗಳಲ್ಲಿ ಒಬ್ಬರು. ಕೇವಲ ಕವಿಗಳಲ್ಲದೆ ಇವರೊಬ್ಬ ಉತ್ತಮ ಸಂಶೋಧಕರು ಹಾಗೂ ಬರಹಗಾರರು. ಕರ್ನಾಟಕ ಸರ್ಕಾರವು ಇವರಿಗೆ 2006 ರಲ್ಲಿ ರಾಷ್ಟ್ರಕವಿ ಎಂಬ ಬಿರುದನ್ನು ನೀಡಿ ಸನ್ಮಾನಿಸಿದೆ. 2013 ರಲ್ಲಿ ಇಹ ಲೋಕ ತ್ಯಜಿಸಿರುವ ಇವರು ಹುಟ್ಟಿದ್ದು 1926 ರಲ್ಲಿ ಹಾಗೂ ಹುಟ್ಟಿದ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಇಸ್ಸೂರು ಹಳ್ಳಿಯಲ್ಲಿ. ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನ.

ಚಿತ್ರಕೃಪೆ: MikeLynch

ದೇವನಹಳ್ಳಿ

ದೇವನಹಳ್ಳಿ

ನಿತ್ಯೋತ್ಸವ ಹಾಡು ಯಾರಿಗೆ ತಾನೆ ಗೊತ್ತಿಲ್ಲ. ನಿಸಾರ್ ಅಹ್ಮದ್ ರಚಿತ ಈ ಹಾಡು ಮೊದಲ ಬಾರಿಗೆ ಸಂಯೋಜನೆಗೊಂಡು ಧ್ವನಿ ಸುರುಳಿ ಬಿಡುಗಡೆಯಾದಾಗ ಎಲ್ಲೆಡೆ ಯಶಸ್ವಿಯಾಯಿತು. ಹೀಗೆ ನಿತ್ಯೋತ್ಸವ ಹಾಡು ನಿಸಾರ್ ಅಹ್ಮದ ರವರಿಗೆ ಅಪಾರ ಜನಪ್ರೀಯತೆಗಳಿಸಿ ಕೊಟ್ಟಿತು. ನಿಸಾರ್ ಅಹ್ಮದ್ ಅವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ. ಕನ್ನಡದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದ ಇವರ ಪೂರ್ಣ ಹೆಸರು ಕೊಕ್ಕರೆ ಹೊಸಹಳ್ಳಿ ಶೇಖ್ ಹೈದರ್ ನಿಸಾರ್ ಅಹ್ಮದ್. ದೇವನಹಳ್ಳಿ ಕೋಟೆ.

ಚಿತ್ರಕೃಪೆ: Placidsun

ನಗೆ ಸಾಹಿತ್ಯ

ನಗೆ ಸಾಹಿತ್ಯ

ರಾಯಸಂ ಭೀಮಸೇನರಾವ್ ಹೆಸರಿನ ಆದರೆ ಎಲ್ಲರಿಗೂ ಬಿಚಿ / ಬೀchi ಎಂಬ ಹೆಸರಿನಿಂದಲೆ ಚಿರಪರಿಚಿತರಾದರಿವರು ದಾವಣಗೆರೆಯ ಹರಪನಹಳ್ಳಿಯಲ್ಲಿ ಹುಟ್ಟಿದವರು. ಕೇವಲ ಹತ್ತನೇಯ ತರಗತಿವರೆಗೆ ಓದಿದ್ದ ಬೀಚಿಯವರು ಆಕಸ್ಮಿಕವಾಗಿ ಸಂಧ್ಯಾರಾಗ ಕಾದಂಬರಿ ಓದುತ್ತ ಕನ್ನಡ ಸಾಹಿತ್ಯದಲ್ಲಿ ಒಲವು ಬೆಳೆಸಿಕೊಂಡು ಮುಂದೆ 60 ಕೃತಿಗಳನ್ನು ರಚಿಸುವಷ್ಟರ ಮಟ್ಟಿಗೆ ಪ್ರಬುದ್ಧರಾದರು. ಇವರ ಸಾಹಿತ್ಯವು ಹಾಸ್ಯ ಪ್ರಧಾನವಾಗಿರುವುದು ವಿಶೇಷ. ದಾವಣಗೆರೆಯ ಕಲ್ಲೇಶ್ವರ ಸ್ವಾಮಿ ದೇವಾಲಯ.

ಚಿತ್ರಕೃಪೆ: Arun Saakare

ಕನ್ನಡಕ್ಕೊಬ್ಬರೆ

ಕನ್ನಡಕ್ಕೊಬ್ಬರೆ

ಮೈಸೂರಿನಲ್ಲಿ ಜನಿಸಿದ ಇವರು ಮೂಲತಃ ತಮಿಳು ದಮ್ಪತಿಗಳಿಗೆ ಜನಸಿದ ಪುತ್ರ. ಆದರೆ ತಂದೆಯು ಮೈಸೂರು ಸಾಮ್ರಾಜ್ಯದ ಸೇವೆಯಲ್ಲಿದ್ದರು. ಮೈಸೂರು ರಾಜರ ಸಹಕಾರದೊಂದಿಗೆ ಉತ್ತಮ ಶಿಕ್ಷಣ ಪಡೆದ ಇವರು ಲಂಡನ್ ಗೆ ತೆರಳಿ ವಿದ್ಯಾಭ್ಯಾಸ ಮುಗಿಸಿ ಮರಳಿ ಮೈಸೂರಿಗೆ ಬಂದು ಸರ್ಕಾರಿ ಉದ್ಯೋಗದಲ್ಲಿ ಸೇರಿದರಾದರೂ ಶೀಘ್ರದಲ್ಲಿ ಅದರಲ್ಲಿ ಅವರಿಗೆ ಬೇಸರ ಮೂಡಿ ತಾವು ಇಷ್ಟಪಡುತ್ತಿದ್ದ ನಾಟಕಗಳಲ್ಲಿ ಗಮನಹರಿಸಿದರು. ಮುಂದೆ ಸಮಯಕಳೆದಂತೆ ಒಬ್ಬ ಉತ್ತಮ ಹಾಸ್ಯ ಬರಹಗಾರರಾಗಿ ಹೆಸರುವಾಸಿಯಾದರು. ಇವರ ಜನಪ್ರೀಯತೆ ಎಷ್ಟಿತ್ತೆಂದರೆ ಕನ್ನಡಕೊಬ್ಬರೆ ಕೈಲಾಸಂ ಎಂದು ಹೇಳಲಾಗುತ್ತದೆ. ಮೈಸೂರಿನ ಚಾಮುಂಡಿ ಬೆಟ್ಟದ ನಂದಿ.

ಚಿತ್ರಕೃಪೆ: Sanjay Acharya

ಮಾಗಡಿ

ಮಾಗಡಿ

ಕನ್ನಡದ ಪ್ರಸಿದ್ಧ ಕವಿಗಳಲ್ಲೊಬ್ಬರಾದ ಸಿದ್ಧಲಿಂಗಯ್ಯನವರು ಜನಿಸಿದ್ದು ಮಾಗಡಿಯಲ್ಲಿ. ದಲಿತ ಕಾರ್ಯಕರ್ತ ಹಾಗೂ ರಾಜಕಾರಿಣಿಯೂ ಆಗಿ ಸೇವೆ ಸಲ್ಲಿಸಿರುವ ಇವರು ದಲಿತ ಬರಹಗಾರರಾಗಿ ಗಮನಸೆಳೆದವರು. ಮಾಗಡಿಯ ಪ್ರಖ್ಯಾತ ರಂಗನಾಥಸ್ವಾಮಿ ದೇವಾಲಯ.

ಚಿತ್ರಕೃಪೆ: Dineshkannambadi

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more