Search
  • Follow NativePlanet
Share
» »ಭಾರತದ ಎರಡು ದೊಡ್ಡ ಲಗೂನುಗಳು

ಭಾರತದ ಎರಡು ದೊಡ್ಡ ಲಗೂನುಗಳು

By Vijay

ಚಿಲ್ಕಾ ಹಾಗೂ ಪುಲಿಕಾಟ್ ಕೆರೆಗಳು ಭಾರತದಲ್ಲಿರುವ ಎರಡು ದೊಡ್ಡ ಲಗೂನುಗಳಾಗಿವೆ. ಅಂದರೆ ಲವಣ (ಉಪ್ಪು) ಯುಕ್ತ ಅತಿ ದೊಡ್ಡ ಕೆರೆಗಳಾಗಿವೆ. ಸಾಮಾನ್ಯವಾಗಿ ಲಗೂನು ಎಂದರೆ, ತಗ್ಗಾದ ಮರಳು ದಂಡೆ, ಹವಳದ ದಿಬ್ಬ, ಕಂದಕಗಳ ಮೂಲಕ ಸಮುದ್ರದಿಂದ ಬೇರ್ಪಟ್ಟಿರುವ ಲವಣ ಕೆರೆಗಳು ಎಂದರ್ಥ.

ಚಿಲ್ಕಾ ಅಥವಾ ಚಿಲಿಕಾ ಅಂತಹ ದೇಶದ ಅತಿ ದೊಡ್ಡ ಕೆರೆಯಾಗಿದ್ದರೆ, ಪುಲಿಕಾಟ್ ಎರಡನೇಯ ದೊಡ್ಡ ಕೆರೆಯಾಗಿದೆ. ಅಲ್ಲದೆ ಚಿಲ್ಕಾ ಜಗತ್ತಿನಲ್ಲೆ ಎರಡನೇಯ ಅತಿ ದೊಡ್ಡ ಲಗೂನಾಗಿರುವುದು ವಿಶೇಷವಾಗಿದೆ. ಈ ಎರಡೂ ಕೆರೆಗಳು ಆನಂದದಾಯಕ, ಮನರಂಜನಾಭರಿತ ರೋಮಾಂಚಕ ಪ್ರವಾಸಿ ತಾಣಗಳಾಗಿರುವುದೂ ಅಲ್ಲದೆ ವೈವಿಧ್ಯಮಯ ಪಕ್ಷಿಗಳ ವೀಕ್ಷಣೆಗೂ ಅಪಾರವಾದ ಖ್ಯಾತಿ ಪಡೆದಿವೆ.

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಎರಡೂ ಕೆರೆಗಳ ಕುರಿತು ಕೆಲ ಪ್ರವಾಸಿ ವಿವರಗಳು ಮತ್ತು ಅವುಗಳ ಸುಂದರವಾದ ಚಿತ್ರಗಳನ್ನು ಸ್ಲೈಡುಗಳ ಮೂಲಕ ತಿಳಿದುಕೊಳ್ಳೋಣ.

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಒಡಿಶಾ ರಾಜ್ಯದಲ್ಲಿರುವ ಅತಿ ವಿಶಾಲವಾದ ಚಿಲ್ಕಾ ಕೆರೆ ಪುರಿ, ಖುರ್ದಾ ಮತ್ತು ಗಂಜಾಂ ಜಿಲ್ಲೆಗಳನ್ನು ತನ್ನ ಒಡಲಿನಲ್ಲಿ ಹಂಚಿಕೊಂಡಿದೆ.

ಚಿತ್ರಕೃಪೆ: Arpan Bhowmick

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಭಾರತದ ಪೂರ್ವ ಕರಾವಳಿ ತೀರದ ಪ್ರದೇಶದಲ್ಲಿ ದಯಾ ನದಿಯು ಬಂಗಾಳ ಕೊಲ್ಲಿಯ ಸೇರುವ ಪ್ರದೇಶದಲ್ಲಿ ಈ ವಿಶಾಲ ಕೆರೆಯು 1100 ಚ.ಕಿ.ಮೀ ಗಳಷ್ಟು ವಿಸ್ತಾರದಲ್ಲಿ ಚಾಚಿದೆ.

ಚಿತ್ರಕೃಪೆ: Shayan (USA)

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಭಾರತ ಉಪಖಂಡದಲ್ಲೆ ಈ ವಿಶಾಲ ಕೆರೆ ಭೂಮಿಯು ವಲಸೆ ಬರುವ ಪಕ್ಷಿಗಳಿಗೆ ಚಳಿಗಾಲದ ಅತಿ ದೊಡ್ಡ ಆವಾಸ ಸ್ಥಾನವಾಗಿದೆ. ಅಳಿವಿನಂಚಿನಲ್ಲಿರುವ ಸಾಕಷ್ಟು ಬಗೆಯ ಸಸ್ಯ ಹಾಗೂ ಜೀವರಾಶಿಗಳಿಗೆ ಚಿಲ್ಕಾ ಆಶ್ರಯ ನೀಡಿದೆ.

ಚಿತ್ರಕೃಪೆ: Steve Browne & John Verkleir

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಹಲವು ಚಿಕ್ಕ ಪುಟ್ಟ ನಡುಗಡ್ಡೆಗಳನ್ನು ಹೊಂದಿರುವ ಚಿಲ್ಕಾ ಅಪಾರ ಪ್ರಮಾಣದ ಮೀನುಗಳಿಗೆ ಹೆಸರುವಾಸಿಯಾಗಿದ್ದು, ಸುತ್ತ ಮುತ್ತಲಿರುವ ಸುಮಾರು 132 ಹಳ್ಳಿಗಳ ಬೆಸ್ತರಿಗೆ ಜೀವನಾಶ್ರಯವಾಗಿದೆ.

ಚಿತ್ರಕೃಪೆ: PlaneMad

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ರಾಮ್ಸಾರ್ ಸಮಾವೇಶದಲ್ಲಿ ಮೊದಲ ಬಾರಿಗೆ 1981 ರಲ್ಲಿ ಚಿಲ್ಕಾಗೆ "ಅಂತಾರಾಷ್ಟ್ರೀಯ ಮಹತ್ವವುಳ್ಳ ಜೌಗು ಪ್ರದೇಶ" ಎಂಬ ಗೌರವ ನೀಡಲಾಯಿತು.

ಚಿತ್ರಕೃಪೆ: Steve Browne & John Verkleir

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಸಮೀಕ್ಷೆಯ ಪ್ರಕಾರ, ಚಿಲ್ಕಾದಲ್ಲಿ 45 ಪ್ರತಿಶತದಷ್ಟು ಭೂಚರ ಪಕ್ಷಿಗಳು, ಶೇ. 32 ರಷ್ಟು ನೀರಹಕ್ಕಿಗಳು, ಶೇ. 23 ರಷ್ಟು ಉದ್ದಕಾಲಿನ ಹಕ್ಕಿಗಳು ಕಂಡುಬರುತ್ತವೆ. ಅಲ್ಲದೆ 14 ಬಗೆಯ ಬೇಟೆ ಪಕ್ಷಿಗಳು ಹಾಗೂ ಸುಮಾರು 152 ಸಂಖ್ಯೆಗಳಷ್ಟು ಇರ್‍ರಾವಾಡಿ ಡಾಲ್ಫಿನ್ ಮೀನುಗಳು ಇಲ್ಲಿ ಕಂಡುಬರುತ್ತವೆ. ಸಮುದ್ರದ ಭಾಗದಲ್ಲಿ.

ಚಿತ್ರಕೃಪೆ: Anirban Biswas

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ನಲಬನ್ ನಡುಗಡ್ಡೆ ಚಿಲ್ಕಾ ಕೆರೆಯಲ್ಲಿರುವ ಪ್ರಮುಖ ಆಕರ್ಷಣೀಯ ನಡುಗಡ್ಡೇಯಾಗಿದೆ. ಇದನ್ನು ಪಕ್ಷಿ ಧಾಮವನ್ನಾಗಿ ಘೋಷಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ವಲಸೆ ಹಕ್ಕಿಗಳನ್ನು ಕಾಣಬಹುದು. ಮಳೆಗಾಲದ ಸಮಯದಲ್ಲಿ ಈ ನಡುಗಡ್ಡೆ ನೀರಿನಲ್ಲಿ ಮುಳುಗಿದ್ದು, ಬೇಸಿಗೆಯ ಸಮಯದಲ್ಲಿ ಮತ್ತೆ ಹೊರಬಂದಿರುತ್ತದೆ. ಪ್ರಯಾಣಿಕ ದೋಣಿ.

ಚಿತ್ರಕೃಪೆ: rajkumar1220

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯಲ್ಲಿ 220 ಕ್ಕೂ ಹೆಚ್ಚಿನ ಬಗೆಯ ಮೀನುಗಳಿವೆ. ಅಲ್ಲದೆ ಚಿಲ್ಕಾ ಭಾರತದ ಅತಿ ಉತ್ತಮ ಪಕ್ಷಿ ವೀಕ್ಷಣಾ ಸ್ಥಳಗಳ ಪೈಕಿ ಒಂದಾಗಿದ್ದು, ಮೀನು ಹಿಡಿಯುವಿಕೆ (ಆಂಗ್ಲಿಂಗ್)ಗೂ ಅಪಾರವಾದ ಖ್ಯಾತಿ ಗಳಿಸಿದೆ.

ಚಿತ್ರಕೃಪೆ: Steve Browne & John Verkleir

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪರಿಸರ ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಚಿಲ್ಕಾ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿ ಆಕರ್ಷಣೆಗಳನ್ನು ಕೆರೆಯಲ್ಲಿ ವಿಂಗಡಿಸಲಾಗಿದೆ. ಕೆಲವು ಪಕ್ಷಿ ವೀಕ್ಷಣೆಗೆ ಖ್ಯಾತಿ ಪಡೆದಿದ್ದರೆ, ಕೆಲವು ಮೀನುಗಳಿಗಾಗಿ ಹೆಸರುವಾಸಿಯಾಗಿದೆ. ಇನ್ನೂ ಕೆಲವು ಹನಿಮೂನ್ ವಿಶೇಷದ ಸ್ಥಳಗಳೂ ಆಗಿವೆ.

ಚಿತ್ರಕೃಪೆ: Aditya Bhattacharjee

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾಗೆ ತೆರಳುವುದು ಸುಲಭವಾಗಿದ್ದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 5 ರ ಮೂಲಕ ಚೆನ್ನೈ ಹಾಗೂ ಕೊಲ್ಕತ್ತ ನಗರಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಅಲ್ಲದೆ ಒಡಿಶಾದ ಪುರಿ ನಗರದ ನೈರುತ್ಯ ದಿಕ್ಕಿನಿಂದ ಈ ಕೆರೆ ಕೇವಲ 50 ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ಕೊಲ್ಕತ್ತಾದಿಂದ ಚಿಲ್ಕಾಗೆ ರೈಲು ಸಂಪರ್ಕವೂ ಇದೆ.

ಚಿತ್ರಕೃಪೆ: Jayanta

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಪ್ರದೇಶದಲ್ಲಿರುವ ಕಾಲಿಜೈ ದೇವಿಯ ದೇವಾಲಯದ ಒಂದು ನೋಟ.

ಚಿತ್ರಕೃಪೆ: Amlantapan1

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯಲ್ಲಿ ಕಂಡುಬರುವಂತಹ ಇರ್‍ರಾವಾಡಿ ಡಾಲ್ಫಿನ್ ಮೀನು.

ಚಿತ್ರಕೃಪೆ: Steve Browne & John Verkleir

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Aditya Bhattacharjee

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು. ಈ ಪ್ರದೇಶದಲ್ಲಿ ಈ ಜೀವಿಗಳು ಕಂಡುಬರುತ್ತವೆ. (ಸಾಂದರ್ಭಿಕ ಚಿತ್ರ)

ಚಿತ್ರಕೃಪೆ: Svdmolen

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು. ಈ ಪ್ರದೇಶದಲ್ಲಿ ಈ ಜೀವಿಗಳು ಕಂಡುಬರುತ್ತವೆ. (ಸಾಂದರ್ಭಿಕ ಚಿತ್ರ)

ಚಿತ್ರಕೃಪೆ: Julien Willem

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು. ಈ ಪ್ರದೇಶದಲ್ಲಿ ಈ ಜೀವಿಗಳು ಕಂಡುಬರುತ್ತವೆ. (ಸಾಂದರ್ಭಿಕ ಚಿತ್ರ)

ಚಿತ್ರಕೃಪೆ: Tokugawapants

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು. ಈ ಪ್ರದೇಶದಲ್ಲಿ ಈ ಜೀವಿಗಳು ಕಂಡುಬರುತ್ತವೆ. (ಸಾಂದರ್ಭಿಕ ಚಿತ್ರ)

ಚಿತ್ರಕೃಪೆ: Ginkgo100

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: J.M.Garg

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Bikash Das

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Aditya Bhattacharjee

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Aditya Bhattacharjee Supratik Sircar

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಕೆರೆಯ ಅದ್ಭುತ, ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Aditya Bhattacharjee Supratik Sircar

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆ: ಪುಲಿಕಾಟ್ ದೇಶದ ಎರಡನೇಯ ದೊಡ್ಡ ಲಗೂನಾಗಿದ್ದು ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಚಾಚಿದೆ. ತಮಿಳಿನಲ್ಲಿ ಇದನ್ನು ಪಳವೇರ್ಕಾಡು ಎರಿ ಎಂದು ಕರೆಯಲಾಗುತ್ತದೆ. ಶ್ರೀಹರಿಕೋಟಾದ ಬ್ಯಾರೀಯರ್ ದ್ವೀಪ ಈ ಕೆರೆಯನ್ನು ಬಂಗಾಳ ಕೊಲ್ಲಿ ಸಮುದ್ರದಿಂದ ಪ್ರತ್ಯೇಕಿಸುತ್ತದೆ.

ಚಿತ್ರಕೃಪೆ: Srikaanth Sekar

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್, ಪುಲಿಕಾಟ್ ಕೆರೆ ಪಕ್ಷಿಧಾಮದಿಂದ ಅಪಾರವಾದ ಖ್ಯಾತಿಗಳಿಸಿದೆ. ಸತೀಶ್ ಧವನ್ ಸ್ಪೇಸ್ ಸೆಂಟರ್ ಕೂಡ ಇರುವುದು ಇಲ್ಲಿನ ಬ್ಯರೀಯರ್ ದ್ವೀಪದಲ್ಲಿ. ಸಾಕಷ್ಟು ಜನ ಪ್ರವಾಸಿಗರು ಪುಲಿಕಾಟ್ ಕೆರೆಗೆ ಭೇಟಿ ನೀಡಲು ಬರುತ್ತಾರೆ.

ಚಿತ್ರಕೃಪೆ: Raj

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಮೂರು ಪ್ರಮುಖ ನದಿಗಳು ಪುಲಿಕಾಟ್ ಕೆರೆಗೆ ಮೂಲವಾಗಿದೆ. ಅವುಗಳೆಂದರೆ ಅರನಿ, ಕಾಲಂಗಿ ಹಾಗೂ ಸ್ವರ್ಣಮುಖಿ ನದಿಗಳು. ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ ಎಂಬ ಸ್ಥಳದಲ್ಲಿರುವ ಬಕ್ಕಿಂಗ್ ಹ್ಯಾಮ್ ಕಾಲುವೆಯು ಈ ಲಗೂನಿನ ಪಶ್ಚಿಮದ ಭಾಗವಾಗಿದೆ.

ಚಿತ್ರಕೃಪೆ: McKay Savage

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್, ಜೈವಿಕವಾಗಿ ವೈವಿಧ್ಯಮಯ ತಾಣವಾಗಿದ್ದು ಅನೇಕ ಬಗೆಯ ಪಕ್ಷಿಗಳು ಹಾಗೂ ಜಲಚರಗಳಿಗೆ ಇದು ಆಶ್ರಯ ತಾಣವಾಗಿದೆ.

ಚಿತ್ರಕೃಪೆ: McKay Savage

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ತಮಿಳುನಾಡು ಭಾಗದ ಪುಲಿಕಾಟ್ ಕೆರೆಯು ಚೆನ್ನೈ ಉತ್ತರದಿಂದ 60 ಕಿ.ಮೀ ಗಳಷ್ಟು ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಐದರ ಮೂಲಕ ಪುಲಿಕಾಟ್ ತಲುಪಬೇಕಿದ್ದರೆ ನೆಲ್ಲೂರು ಮಾರ್ಗವಾಗಿ ಪೊನ್ನೇರಿ ಹಳ್ಳಿ ತಲುಪಿ ಅಲ್ಲಿಂದ ಪುಲಿಕಾಟ್ ಗ್ರಾಮಕ್ಕೆ ತೆರಳಬಹುದು.

ಚಿತ್ರಕೃಪೆ: McKay Savage

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆಯ ಹಾಗೂ ಅಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳ ಸುಂದರ ಚಿತ್ರಗಳು.

ಚಿತ್ರಕೃಪೆ: Srikaanth Sekar

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆಯ ಹಾಗೂ ಅಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳ ಸುಂದರ ಚಿತ್ರಗಳು.

ಚಿತ್ರಕೃಪೆ: Srikaanth Sekar

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆಯ ಹಾಗೂ ಅಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳ ಸುಂದರ ಚಿತ್ರಗಳು.

ಚಿತ್ರಕೃಪೆ: shrikant rao

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆಯ ಹಾಗೂ ಅಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳ ಸುಂದರ ಚಿತ್ರಗಳು.

ಚಿತ್ರಕೃಪೆ: Srikaanth Sekar

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆಯ ಹಾಗೂ ಅಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳ ಸುಂದರ ಚಿತ್ರಗಳು.

ಚಿತ್ರಕೃಪೆ: Srikaanth Sekar

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆಯ ಹಾಗೂ ಅಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳ ಸುಂದರ ಚಿತ್ರಗಳು.

ಚಿತ್ರಕೃಪೆ: Srikaanth Sekar

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆಯ ಹಾಗೂ ಅಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳ ಸುಂದರ ಚಿತ್ರಗಳು.

ಚಿತ್ರಕೃಪೆ: Srikaanth Sekar

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆಯ ಹಾಗೂ ಅಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳ ಸುಂದರ ಚಿತ್ರಗಳು.

ಚಿತ್ರಕೃಪೆ: Santhosh Janardhanan

ಚಿಲ್ಕಾ ಮತ್ತು ಪುಲಿಕಾಟ್:

ಚಿಲ್ಕಾ ಮತ್ತು ಪುಲಿಕಾಟ್:

ಪುಲಿಕಾಟ್ ಕೆರೆಯ ಹಾಗೂ ಅಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳ ಸುಂದರ ಚಿತ್ರಗಳು.

ಚಿತ್ರಕೃಪೆ: Lalithamba

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X