Search
  • Follow NativePlanet
Share
» »ಲಕ್ನೋದ ಈ ತಾಣದಲ್ಲಿ ಮಾರ್ಗದರ್ಶಿ ಇಲ್ಲದೆ ಸುತ್ತಾಡುವುದು ಕಷ್ಟ ಕಷ್ಟ…

ಲಕ್ನೋದ ಈ ತಾಣದಲ್ಲಿ ಮಾರ್ಗದರ್ಶಿ ಇಲ್ಲದೆ ಸುತ್ತಾಡುವುದು ಕಷ್ಟ ಕಷ್ಟ…

ಲಕ್ನೋ, ನವಾಬ್‌ಗಳ ನಗರ. ಲಕ್ನೋ ಎಷ್ಟು ಸುಂದರವಾಗಿದೆಯೋ ಅಷ್ಟೇ ಸುಂದರವಾಗಿದೆ ಇಲ್ಲಿನ ಆಸಕ್ತಿದಾಯಕ ಸ್ಥಳಗಳು. ಪ್ರತಿ ವರ್ಷವೇಕೆ ಪ್ರತಿ ತಿಂಗಳು ಪ್ರಪಂಚದಾದ್ಯಂತ ಜನರನ್ನು ಲಕ್ನೋ ಆಕರ್ಷಿಸುತ್ತದೆ. ಅಂದಹಾಗೆ ಲಕ್ನೋದಲ್ಲಿ ವಿಶ್ವದಾದ್ಯಂತ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ, 200 ವರ್ಷಗಳಷ್ಟು ಹಳೆಯದಾದ ಒಂದು ಅದ್ಭುತ ಸ್ಥಳವಿದ್ದು, ಇದು ಸದಾ ಪ್ರವಾಸಿಗರಿಂದ ತುಂಬಿರುತ್ತದೆ.

ನಿಮಗೀಗ ಆ ಸ್ಥಳ ಯಾವುದೆಂಬ ಕುತೂಹಲ ಹೆಚ್ಚಾಗುತ್ತಿರಬೇಕಲ್ಲವೇ, ಆ ಸ್ಥಳ ಬೇರಾವುದೂ ಅಲ್ಲ, ಇಲ್ಲಿನ ಮೇಜ್. ಹೌದು, ಈ ಮೇಜ್ ಬಡಾ ಇಮಾಂಬರದೊಳಗೆ ಇದೆ. ನಿಜ ಹೇಳಬೇಕೆಂದರೆ ಈ ಸ್ಥಳವು ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಪ್ರತಿಯೊಬ್ಬ ಪ್ರವಾಸಿಗ ಕೂಡ ಇದನ್ನು ನೋಡಿ ಆಶ್ಚರ್ಯಚಕಿತರಾಗುತ್ತಾನೆ.

ಗೋಡೆಗಳ ಮೇಲೆ ನಡೆದಾಡುವಂತೆ ಭಾಸ

ಗೋಡೆಗಳ ಮೇಲೆ ನಡೆದಾಡುವಂತೆ ಭಾಸ

ಈ ಮೇಜ್'ನಲ್ಲಿ ನಾಲ್ಕು ಮಾರ್ಗಗಳಿವೆ, ಮೂರು ತಪ್ಪು ಮತ್ತು ಒಂದು ಸರಿ. 15 ಅಡಿ ದಪ್ಪದ ಗೋಡೆಗಳು ಮತ್ತು ಎರಡೂವರೆ ಅಡಿ ಅಗಲದ ಮಾರ್ಗವಿದೆ. ಪ್ರವಾಸಿಗರು ಈ ಮೇಜ್'ಗೆ ಭೇಟಿ ನೀಡಿದಾಗ, ಈ ಗೋಡೆಗಳಲ್ಲಿ ನಡೆದಾಡುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಕುತೂಹಲಕಾರಿ ಅಂಶವೆಂದರೆ ಕಿರಿದಾದ ಗೋಡೆಗಳಿದ್ದರೂ ನಿಮಗೆ ಉಸಿರುಗಟ್ಟಿದಂತೆ ಅನಿಸುವುದಿಲ್ಲ. ಇಲ್ಲಿಂದಲೇ ಭೂಲ್ ಭುಲೈಯಾ ಎಂಬ ಚಕ್ರವ್ಯೂಹ 45 ಹಂತಗಳೊಂದಿಗೆ ಪ್ರಾರಂಭವಾಗುತ್ತದೆ. ಹಾಗಾಗಿ ಈ ರಚನೆಯನ್ನು ನೋಡಿ ಪ್ರತಿಯೊಬ್ಬರು ಕೂಡಿ ತಲೆಕೆಡಿಸಿಕೊಳ್ಳದೆ ಇರಲು ಸಾಧ್ಯವಿಲ್ಲ.

ಒಳಗಿದೆ 330 ಅಡಿ ಉದ್ದದ ಸುರಂಗ

ಒಳಗಿದೆ 330 ಅಡಿ ಉದ್ದದ ಸುರಂಗ

ನೀವು ಭೂಲ್ ಭುಲೈಯಾ ಚಕ್ರವ್ಯೂಹವನ್ನು ಪ್ರವೇಶಿಸಿದಾಗ, ಮೊದಲ ಗ್ಯಾಲರಿಯನ್ನು ನೋಡುತ್ತೀರಿ. ಇದು 330 ಅಡಿ ಉದ್ದದ ಸುರಂಗದಿಂದ ಪ್ರಾರಂಭವಾಗುತ್ತದೆ, ಕಿಟಕಿಗಳನ್ನು "ಶತ್ರುಗಳ ನೋಟ" ಎಂದು ಹೆಸರಿಸಲಾಗಿದೆ. ಇನ್ನು ಈ ಕಿಟಕಿಗಳ ಬಗ್ಗೆ ಹೇಳುವುದಾದರೆ ನವಾಬರ ಸೈನಿಕರು ಈ ಕಿಟಕಿಗಳಿಂದ ಇಮಾಂಬರ ಮತ್ತು ಭೂಲ್ ಭುಲೈಯಾದ ಮುಖ್ಯ ದ್ವಾರವನ್ನು ನೋಡಬಹುದು. ಆದರೆ ನೀವು ಈ ಕಿಟಕಿಗಳನ್ನು ಕೆಳಗಿನಿಂದ ನೋಡಿದಾಗ, ನಿಮಗೆ ಮೇಲೆ ಏನೂ ಕಾಣುವುದಿಲ್ಲ. ಬೇಕಾದರೆ ನೀವು ಕೆಳಗಿನಿಂದ ಕಿಟಕಿಗಳನ್ನು ನೋಡಲು ಪ್ರಯತ್ನಿಸಿದರೆ ಬರೀ ಕತ್ತಲೆ ಮಾತ್ರ ಕಾಣಿಸುತ್ತದೆ.

ಅಡುಗೆ ವಸ್ತುಗಳಿಂದ ಮಾಡಿದ ಗೋಡೆ

ಅಡುಗೆ ವಸ್ತುಗಳಿಂದ ಮಾಡಿದ ಗೋಡೆ

ನಿಮಗೆ ಈ ಶೀರ್ಷಿಕೆ ನೋಡಿ ಆಶ್ಚರ್ಯವಾಗುತ್ತಿರಬಹುದು. ಆದರೆ ಈ ಮೇಝ್ ಅನ್ನು ಅಡುಗೆಗೆ ಬಳಸುವ ಪದಾರ್ಥಗಳಿಂದ ಮಾಡಲಾಗಿದೆ. ಅಷ್ಟೇ ಅಲ್ಲ, ಇದು 200 ವರ್ಷಗಳಷ್ಟು ಹಳೆಯದಾಗಿದೆ. ಇದರ ಪ್ರತಿ ಗೋಡೆಯು ಉದ್ದಿನ ಬೇಳೆ, ಬೆಲ್ಲ, ಬೇಲ್, ಕಬ್ಬಿನ ರಸ, ವಾಟರ್ ಚೆಸ್ಟ್ನಟ್ ಹಿಟ್ಟು ಮತ್ತು ಜೇನುತುಪ್ಪವನ್ನು ಬೆರೆಸಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಇದನ್ನೆಲ್ಲಾ ಕೇಳಿದ ನಂತರ ಪ್ರತಿಯೊಬ್ಬರೂ ಮೂಗಿನ ಬೆರಳಿಟ್ಟಿಕೊಳ್ಳುತ್ತಾರೆ. ಏಕೆಂದರೆ ಇದರಲ್ಲೆಲ್ಲಾ ಗೋಡೆ ಕಟ್ಟೋದು ಹೇಗೆ ಅಂತ? ಆದ್ರೆ ಇದೇ ಸತ್ಯ.

ಮಾರ್ಗದರ್ಶಕರಿಲ್ಲದೆ ಹೊರಬರುವುದು ಕಷ್ಟ

ಮಾರ್ಗದರ್ಶಕರಿಲ್ಲದೆ ಹೊರಬರುವುದು ಕಷ್ಟ

ಈ ಮೊದಲೇ ಹೇಳಿದ ಹಾಗೆ ಮೇಜ್'ನಲ್ಲಿ ಅನೇಕ ಮಾರ್ಗಗಳು ಇರುವ ಕಾರಣ, ಜನರು ಸಾಮಾನ್ಯವಾಗಿ ಮಾರ್ಗದರ್ಶಕರಿಲ್ಲದೆ ಹೋದರೆ ದಾರಿಯನ್ನು ಖಂಡಿತ ಮರೆತುಬಿಡುತ್ತಾರೆ. ಇನ್ನು ಅಚ್ಚರಿಯ ಸಂಗತಿಯೆಂದರೆ, ಪ್ರತಿ ದಿನ ಸಂಜೆ ಶೋಧ ಕಾರ್ಯದ ಮೂಲಕ ಇಲ್ಲಿ ಸುತ್ತಾಡಿದ ಜನರನ್ನು ಒಳಗಿನಿಂದ ಹೊರ ತೆಗೆಯಲಾಗುತ್ತದೆ. ಇಲ್ಲಿ ಕೆಲಸ ಮಾಡುವ ಕೆಲವು ಗೈಡ್‌ಗಳು ಭೇಟಿ ನೀಡುವ ಪ್ರವಾಸಿಗರಿಗೆ ಹಲವು ರಹಸ್ಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಗೋಡೆಗಳ ಮೂಲಕವೂ ಧ್ವನಿ ಕೇಳಬಹುದು

ಗೋಡೆಗಳ ಮೂಲಕವೂ ಧ್ವನಿ ಕೇಳಬಹುದು

20 ಅಡಿ ದೂರದಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡದೆ ಎದುರಿಗಿರುವ ವ್ಯಕ್ತಿಯೊಂದಿಗೆ ಸುಲಭವಾಗಿ ಮಾತನಾಡುವ ರೀತಿಯಲ್ಲಿ ಭೂಲ್ ಭುಲೈಯಾವನ್ನು ವಿನ್ಯಾಸಗೊಳಿಸಲಾಗಿದೆ. ಆ ಸಮಯದಲ್ಲಿ ಸೈನಿಕರು ತಮ್ಮ ನಡುವೆ ಸ್ವಲ್ಪ ದೂರದಲ್ಲಿ ನಿಂತು ಈ ಗೋಡೆಗಳ ಉದ್ದಕ್ಕೂ ಪರಸ್ಪರ ಸಂವಹನ ನಡೆಸುತ್ತಿದ್ದರು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಸೈನಿಕರು ಗೋಡೆಗಳ ಮೇಲೆ ಕಿವಿ ಇಟ್ಟಾಗ ಮತ್ತೊಬ್ಬ ಸೈನಿಕನ ಧ್ವನಿಯು ಕೇಳಿಸುತ್ತಿತ್ತು. ಇಲ್ಲಿ ಗಾಳಿಯ ಸಹಾಯದಿಂದ, ವಸ್ತುಗಳು ಸುಲಭವಾಗಿ ಅಕ್ಕಪಕ್ಕಕ್ಕೆ ಚಲಿಸುತ್ತವೆ. ಆದರೆ ಜನರು ಇದನ್ನು ದೊಡ್ಡ ರಹಸ್ಯವೆಂದೇ ಪರಿಗಣಿಸುತ್ತಾರೆ.

ಮುಚ್ಚಿದ ಬಾಲ್ಕನಿ

ಮುಚ್ಚಿದ ಬಾಲ್ಕನಿ

ಇಲ್ಲಿ ಬಾಲ್ಕನಿಯೂ ಇದೆ.ಆದರೆ ಪ್ರವಾಸಿಗರು ಬಹಳ ದಿನಗಳಿಂದ ಇಲ್ಲಿಗೆ ಬಂದು ನಿರಾಸೆ ಅನುಭವಿಸುತ್ತಿದ್ದಾರೆ. ಏಕೆಂದರೆ ಈ ಬಾಲ್ಕನಿಯಲ್ಲಿ ಬೆಂಕಿಕಡ್ಡಿಯನ್ನು ಹೊತ್ತಿಸಿದ ನಂತರ 20 ಅಡಿ ದೂರದಲ್ಲಿದ್ದವರು ಬೆಂಕಿಕಡ್ಡಿಯನ್ನು ಸುಡುವ ಶಬ್ದವನ್ನು ಕೇಳುತ್ತಿದ್ದರು. ಆದರೆ ಇದು ಶಿಥಿಲಗೊಂಡಿರುವ ಕಾರಣ ಪುರಾತತ್ವ ಇಲಾಖೆ ಮುಚ್ಚಿದೆ. ಈ ಮೇಜ್ ಬಾಲ್ಕನಿಯು ತುಂಬಾ ಆಸಕ್ತಿದಾಯಕವಾಗಿತ್ತು.

ಇದು ಲಕ್ನೋ ಪ್ರವಾಸೋದ್ಯಮದ ಪ್ರಮುಖ ಸ್ಥಳ

ಹೌದು, ಈ ಮೇಜ್ ಲಕ್ನೋ ಪ್ರವಾಸೋದ್ಯಮದ ದೊಡ್ಡ ಕೇಂದ್ರವಾಗಿದೆ. ಸ್ಥಳೀಯರು ಮಾತ್ರವಲ್ಲದೆ ವಿದೇಶದಿಂದಲೂ ಜನರು ಇದನ್ನು ನೋಡಲು ಇಲ್ಲಿಗೆ ಬರುತ್ತಾರೆ. ಈ ಚಕ್ರವ್ಯೂಹವು ಬೆಳಿಗ್ಗೆ 6 ಗಂಟೆಗೆ ತೆರೆಯುತ್ತದೆ ಮತ್ತು ಸಂಜೆ 5 ಗಂಟೆಗೆ ಮುಚ್ಚುತ್ತದೆ. ಲಕ್ನೋ ನಗರದ ಚೌಕ್ ಪ್ರದೇಶದಲ್ಲಿ ಇರುವ ಈ ಸ್ಥಳದ ಟಿಕೆಟ್ ಬೆಲೆ ಪ್ರತಿ ವ್ಯಕ್ತಿಗೆ ಕೇವಲ 50 ರೂ.ಅಷ್ಟೇ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X