Search
  • Follow NativePlanet
Share
» »ದ್ರೌಪದಿಗಾಗಿ ಭೀಮ ನಿರ್ಮಿಸಿದ ಸೇತುವೆ ಎಲ್ಲಿದೆ ನೋಡಿ?

ದ್ರೌಪದಿಗಾಗಿ ಭೀಮ ನಿರ್ಮಿಸಿದ ಸೇತುವೆ ಎಲ್ಲಿದೆ ನೋಡಿ?

ಉತ್ತರಖಂಡದಲ್ಲಿ ಬದ್ರಿನಾಥ್‌ನಿಂದ ಸ್ವಲ್ಪವೇ ದೂರದಲ್ಲಿದೆ ಮಾನ ಎನ್ನುವ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಎರಡು ಬೆಟ್ಟಗಳಿಂದ ನಿರ್ಮಿಸಲಾದ ಸೇತುವೆ ಕಾಣಸಿಗುತ್ತದೆ. ಈ ಬ್ರಿಡ್ಜ್‌ನ ವಿಶೇಷತೆ ಏನೂ ಅನ್ನೋದನು ನಿಮಗೆ ಗೊತ್ತಾ? ಇದಕ್ಕೆ ಇದೊಂದು ಪೌರಾಣಿಕ ಕಥೆಯನ್ನು ಒಳಗೊಂಡಿದೆ.

ಭೀಮ್‌ ಪುಲ್

ಭೀಮ್‌ ಪುಲ್

ಈ ಸೇತುವೆಯನ್ನು ಭೀಮ್‌ ಪುಲ್ ಎನ್ನಲಾಗುತ್ತದೆ. ಇದನ್ನು ಭೀಮನು ನಿರ್ಮಿಸಿದನು ಎನ್ನಲಾಗುತ್ತದೆ. ಈ ಸೇತುವೆಯನ್ನು ಸರಸ್ವತಿ ನದಿಗೆ ಕಟ್ಟಲಾಗಿದೆ.

ಪೌರಾಣಿಕ ಕಥೆ

ಪೌರಾಣಿಕ ಕಥೆ

PC: Ramanarayanadatta astri

ಮಾನ ಹಳ್ಳಿಯಿಂದ ಸ್ವಲ್ಪವೇ ದೂರದಲ್ಲಿ ಸರಸ್ವತಿ ನದಿ ಹರಿಯುತ್ತದೆ. ಪಾಂಡವರು ಸ್ವರ್ಗಕ್ಕೆ ಹೋಗುವಾಗ ಸರಸ್ವತಿ ನದಿಯನ್ನು ದಾಟಿ ಹೋಗಬೇಕಿತ್ತು. ದ್ರೌಪದಿಗೆ ನದಿಯನ್ನು ದಾಟಲು ಹೆದರಿಕೆ ಆಗುತ್ತದೆ. ಆದ ಸರಸ್ವತಿ ನದಿಯಲ್ಲಿ ದಾರಿ ಬಿಡುವಂತೆ ಕೋರುತ್ತಾರೆ. ಆದರೆ ಸರಸ್ವತಿ ಅವರಿಗೆ ದಾರಿ ಬಿಡುವುದಿಲ್ಲ.

ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರುಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು

ಭೀಮನು ನಿರ್ಮಿಸಿದ ಬ್ರಿಡ್ಜ್

ಭೀಮನು ನಿರ್ಮಿಸಿದ ಬ್ರಿಡ್ಜ್

PC: Ravi Varma Press B

ಆಗ ಭೀಮನು ಎರಡು ಶಿಲೆಗಳನ್ನು ಎತ್ತಿ ಆ ನದಿಯ ಮೇಲೆ ಇಟ್ಟು ಸೇತುವೆನಿರ್ಮಿಸಿದನು. ಭೀಮ ಪುಲ್ ಎನ್ನುತ್ತಾರೆ. ಅಲ್ಲಿ ಸರಸ್ವತಿ ದೇವಿಯ ಮಂದಿರವಿದೆ. ಇಲ್ಲಿ ಸರಸ್ವತಿಯ ವಿಗ್ರಹವಿದೆ. ಸರಸ್ವತಿ ನದಿ ಇಲ್ಲಿಂದ ಕೆಳಗೆ ಹರಿಯುವುದು ಕಾಣಿಸುತ್ತದೆ. ಆದರೆ ಇದರ ಸಂಗಮ ಕಾಣಿಸೋದಿಲ್ಲ.

ಶಿವಮೊಗ್ಗದ ಅಂಬುತೀರ್ಥದ ಬಗ್ಗೆ ನಿಮಗೆಷ್ಟು ಗೊತ್ತು?ಶಿವಮೊಗ್ಗದ ಅಂಬುತೀರ್ಥದ ಬಗ್ಗೆ ನಿಮಗೆಷ್ಟು ಗೊತ್ತು?

ಸರಸ್ವತಿ ನದಿ ಕಾಣೆಯಾಗಲು ಕಾರಣವೇನು?

ಸರಸ್ವತಿ ನದಿ ಕಾಣೆಯಾಗಲು ಕಾರಣವೇನು?

PC: Shashankk Rai

ಭೀಮನು ಕೋಪಗೊಂಡು ಗಧೆಯನ್ನು ನೆಲಕ್ಕೆ ಬಡಿದಿದ್ದನು ಆ ಕಾರಣ ಸರಸ್ವತಿಯು ಪಾತಾಳಲೋಕಕ್ಕೆ ಹೋದಳು ಎನ್ನಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ ಗಣೇಶ ಮಹಾಭಾರತವನ್ನು ರಚಿಸುತ್ತಿದ್ದಾಗ ಸರಸ್ವತಿ ನದಿ ಬಹಳ ಘರ್ಜಿಸುತ್ತಿದ್ದಳು. ಗಣೇಶನು ಸದ್ದು ಮಾಡದಂತೆ ಸರಸ್ವತಿ ನದಿಯನ್ನು ಕೇಳಿಕೊಂಡನು ಆದರೆ ನದಿ ಗಣೇಶನ ಮಾತನ್ನು ಕೇಳಲಿಲ್ಲ, ಹಾಗಾಗಿ ಗಣೇಶ ಸರಸ್ವತಿಗೆ ಇಲ್ಲಿಂದ ಬೇರೆಯಾರಿಗೂ ಕಾಣದಂತೆ ಶಾಪ ಇತ್ತನು ಎನ್ನಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಮಾನ ಹಳ್ಳಿಯು ಬದ್ರಿನಾಥ್‌ನಿಂದ 3 ಕಿ.ಮೀ ದೂರದಲ್ಲಿರುವುದರಿಂದ ಬದ್ರಿನಾಥ್‌ನಿಂದ ಎನ್‌ಹೆಚ್‌ 58ರಲ್ಲಿ ನಡೆದುಕೊಂಡೇ ಮಾನ ಹಳ್ಳಿಯನ್ನು ತಲುಪಬಹುದು. ಈ ಬ್ರಿಡ್ಜ್‌ ಮಾನ ಹಳ್ಳಿಯಲ್ಲಿರುವ ವ್ಯಾಸ ಗುಹೆಯ ವಿರುದ್ಧವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X