Search
  • Follow NativePlanet
Share
» »ದೆವ್ವಗಳ ವಾಸಸ್ಥಾನ ರಾಜಸ್ಥಾನದ ಭನ್‍ಗ್ರಾಹ್ ಕೋಟೆ

ದೆವ್ವಗಳ ವಾಸಸ್ಥಾನ ರಾಜಸ್ಥಾನದ ಭನ್‍ಗ್ರಾಹ್ ಕೋಟೆ

ನಮ್ಮ ಜೀವನ ಎಷ್ಟೇ ಆಥುನಿಕತೆಗೆ ಕೊಂಡ್ಯೂತ್ತಿದ್ದರು ನಮ್ಮಲ್ಲಿ ದೇವರು, ಭೂತಗಳ ಪರಿಕಲ್ಪನೆಗಳಿವೆ. ಸಾಮಾನ್ಯವಾಗಿ ನಾವು ಚಿಕ್ಕ ಮಕ್ಕಳಿಂದಲೂ ಸರಣಿ ಪ್ರಕಾರವಾಗಿ ವಿಧ ವಿಧದ ದೆವ್ವ ಭೂತಗಳ ಬಗ್ಗೆ ಕಥೆಗಳನ್ನು ಕೇಳುತ್ತಾ ಬರುತ್ತಿದ್ದೆವೆ. ದೆವ್ವ,

ನಮ್ಮ ಜೀವನ ಎಷ್ಟೇ ಆಥುನಿಕತೆಗೆ ಕೊಂಡ್ಯೂತ್ತಿದ್ದರು ನಮ್ಮಲ್ಲಿ ದೇವರು, ಭೂತಗಳ ಪರಿಕಲ್ಪನೆಗಳಿವೆ. ಸಾಮಾನ್ಯವಾಗಿ ನಾವು ಚಿಕ್ಕ ಮಕ್ಕಳಿಂದಲೂ ಸರಣಿ ಪ್ರಕಾರವಾಗಿ ವಿಧ ವಿಧದ ದೆವ್ವ ಭೂತಗಳ ಬಗ್ಗೆ ಕಥೆಗಳನ್ನು ಕೇಳುತ್ತಾ ಬರುತ್ತಿದ್ದೆವೆ. ದೆವ್ವ, ಭೂತ ಎಂದರೆ ಮನಸ್ಸಿನಲ್ಲಿ ಅತಂಕ, ಕುತೂಹಲ ಉಂಟಾಗುತ್ತದೆ. ಆದರೆ ಧೈರ್ಯವಾಗಿ ನೋಡಬೇಕು ಎಂದು ಎನಿಸಿದರೂ ಅದೇಕೂ ಭಯ. ದೆವ್ವಗಳು ನಿಜವಾಗಿ ಇದೆಯೇ ಇಲ್ಲವೆ ಎಂಬ ಹಲವಾರು ಅನುಮಾನಗಳು ಸೃಷ್ಠಿಯಾಗುತ್ತವೆ. ಪ್ರಪಂಚದಲ್ಲಿ ಹಲವಾರು ಅತ್ಯಂತ ಭಯಾನಕ ಸ್ಥಳಗಳಿವೆ. ಹಾಗೆಯೇ ಭಾರತದಲ್ಲಿಯೂ ಸಾಕಷ್ಟು ಭಯಾನಕ ಸ್ಥಳಗಳಿವೆ ಅವುಗಳಲ್ಲಿ ಪ್ರಸಿದ್ದವಾದುವು ಎಂದರೆ ದೆಹಲಿಯ ಜಾತ್, ಗುಜಾರಾತ್‍ನ ದುಮಸ್ ಬೀಚ್ ಇನ್ನೂ ಹಲವಾರು. ಪ್ರಸುತ್ತ ಲೇಖನದಲ್ಲಿ ರಾಜಸ್ಥಾನದಲ್ಲಿರುವ ಭಯಾನಕವಾದ ಭನ್‍ಗ್ರಾಹ್ ಕೋಟೆಯ ಬಗ್ಗೆ ತಿಳಿಯೋಣ.

ಭನ್‍ಗ್ರಾಹ್ ಕೋಟೆ

PC:A Frequent Traveller

ಭನ್‍ಗ್ರಾಹ್ ಕೋಟೆಯ ಇತಿಹಾಸ
ಭನ್‍ಗ್ರಾಹ್ ಕೋಟೆಯು ರಾಜಸ್ಥಾನದಲ್ಲಿನ ಮರುಭೂಮಿಯ ಸರಿಸ್ಕಾ ಟೈಗರ್ ರಿಸರ್ವ್‍ನ ಸರಹದ್ದಿನಲ್ಲಿದೆ. ಭನ್‍ಗ್ರಾಹ್ ಕೋಟೆ ಜೈಪುರ್ ಮತ್ತು ಅಲವಾರ್ ಪ್ರಸಿದ್ದ ನಗರಗಳ ಮಧ್ಯೆ ಇದೆ. ಈ ಕೋಟೆಗೆ ಭಾರತೀಯ ಪ್ರವಾಸಿಗರೆ ಅಲ್ಲದೇ ವಿದೇಶಿ ಪ್ರವಾಸಿಗರು ಸಹಾ ಭೇಟಿ ನೀಡುವ ಪ್ರಸಿದ್ದ ತಾಣವಾಗಿದೆ. ಈ ಕೋಟೆಯ ಇತಿಹಾಸ ಅತ್ಯಂತ ರೋಚಕತೆಯಿಂದ ಕೂಡಿದೆ. ಭನ್‍ಗ್ರಾಹ್ ಎಂಬ ಪ್ರದೇಶವನ್ನು 1573 ರಲ್ಲಿ ರಾಜ ಭಗವಂತ್ ದಾಸ್ ಸ್ಥಾಪಿಸಿದನು. ಈತನಿಗೆ ಇಬ್ಬರು ಗಂಡು ಮಕ್ಕಳು ಇದ್ದು, ದೊಡ್ಡ ಮಗ ಮಾನ್ ಸಿಂಗ್ ಮತ್ತು ಚಿಕ್ಕ ಮಗ ಮಧು ಸಿಂಗ್. ರಾಜ ಭಗವಂತ್ ದಾಸ್ ತನ್ನ ಎರಡನೇ ಮಗ ಮಧು ಸಿಂಗ್‍ಗಾಗಿ ಭನ್‍ಗ್ರಾಹ್ ಪ್ರದೇಶವನ್ನು ಬಳುವಳಿಯಾಗಿ ನೀಡಿದ. ಮಧು ಸಿಂಗ್ ಇಲ್ಲಿ ಭನ್‍ಗ್ರಾಹ್ ಕೋಟೆಯನ್ನು 1613 ರಲ್ಲಿ ನಿರ್ಮಿಸಿದ. ತನ್ನ ಜೀವನ ಪೂರ್ತಿ ಈ ಕೋಟೆಯಲ್ಲೇ ಆಡಳಿತ ಮಾಡಿದನು. ಈ ಕೋಟೆಯು ಭಯಾನಕವೇ ಅಲ್ಲದೇ ಅತ್ಯಂತ ಸುಂದರವಾಗಿ ಕೂಡ ಇದೆ.

ಭನ್‍ಗ್ರಾಹ್ ಕೋಟೆ

PC:Shahnawaz Sid

ಭನ್‍ಗ್ರಾಹ್ ಕೋಟೆಯು ಏಕೆ ದೆವ್ವದ ತಾಣವಾಯಿತು.
ಈ ಕೋಟೆಗೆ ಸೂರ್ಯೋದಯದ ನಂತರ ಹಾಗೂ ಸೂರ್ಯಾಸ್ತದ ಮುಂಚೆ ಮಾತ್ರ ಭೇಟಿ ನೀಡಬಹುದಾಗಿದೆ, ಸ್ಥಳೀಯರ ಅಭಿಪ್ರಾಯದಂತೆ ಈ ಕೋಟೆಯು ಅತ್ಯಂತ ಭಯಾನಕವಾದ ಸ್ಥಳವಾಗಿದ್ದು ಸಂಜೆಯಾಗುತ್ತಿದ್ದಂತೆ ಭನ್‍ಗ್ರಾಹ್ ಕೋಟೆಯ ಬಳಿ ಹೋಗುವ ಧೆರ್ಯ ಯಾರು ಮಾಡುವುದಿಲ್ಲ ಎಂದು ತಿಳಿಸುತ್ತಾರೆ. ಈ ಕೋಟೆಯ ಬಗ್ಗೆ ಹಲವಾರು ದಂತ ಕಥೆಗಳಿವೆ. ಇವುಗಳಲ್ಲಿ ಯಾವುದು ಸತ್ಯವೋ ಸುಳ್ಳು ಎಂಬುದೇ ಒಂದು ನಿಗೂಢವಾದುದಾಗಿದೆ.

ಭನ್‍ಗ್ರಾಹ್ ಕೋಟೆ

PC:A Frequent Traveller

ಶಾಪ ನೀಡಿದ ಗುರು ಬಾಲುನಾಥ್
ಈ ಭನ್‍ಗ್ರಾಹ್ ಕೋಟೆಯನ್ನು ನಿರ್ಮಾಣ ಮಾಡಲು ರಾಜ ಮಧು ಸಿಂಗ್‍ನು ಹುಡುಕುತ್ತಿದ್ದಾಗಾ ಒಂದು ಸ್ಥಳವನ್ನು ಕಂಡು ಇಲ್ಲೇ ತನ್ನ ಕನಸಿನ ಕೋಟೆ ನಿರ್ಮಾಣ ಮಾಡಬೇಕು ಎಂದು ಅಲ್ಲಿದ್ದ ಸನ್ಯಾಸಿ ಗುರು ಬಾಲುಬಾಥ್‍ನ ಮಂಜೂರಾತಿ ಪಡೆದನು. ಆದರೆ ಬಾಲುನಾಥ್ ಒಂದು ಷರತ್ತನ್ನು ವಿಧಿಸಿದ ಅದೆನೆಂದರೆ ತಾನು ದಿನನಿತ್ಯ ಧ್ಯಾನ ಮಾಡುವಾಗ ಭನ್‍ಗ್ರಾಹ್ ಕೋಟೆಯ ನೆರಳು ತನ್ನ ಮೇಲೆ ಬೀಳಬಾರದು, ಒಂದು ಪಕ್ಷ ತನ್ನ ಮೇಲೆ ಕೋಟೆಯ ನೆರಳು ಬಿದ್ದರೆ ಶಾಪಗ್ರಸ್ತವಾದ ಕೋಟೆಯಾಗಿ ಪರಿವರ್ತನೆಯಾಗುತ್ತದೆ ಎಂದು ತಿಳಿಸಿದನು. ಇದಕ್ಕೆ ಒಪ್ಪಿದ ಮಧು ಸಿಂಗ್‍ನು ತನ್ನ ಬುದ್ದಿ ಹಾಗೂ ಐಶ್ವರ್ಯದಿಂದ ಕೋಟೆ ಕಟ್ಟಲು ಪ್ರಾರಂಬಿಸಿದನು. ಆದರೆ ಕೆಲವು ದಿನಗಳ ಬಳಿಕ ಧ್ಯಾನದಲ್ಲಿ ಮಗ್ನನಾಗಿದ್ದ ಗುರು ಬಾಲುನಾಥ್‍ನ ಮೇಲೆ ಕೋಟೆ ನೆರಳು ಬಿದ್ದಿತು ಹೀಗಾಗಿ ಕೋಟೆಯು ದೆವ್ವಗಳ ತಾಣವಾಯಿತು ಎಂಬುದು ರಾಜಸ್ಥಾನದ ಒಂದು ದಂತಕಥೆಗಳಲ್ಲಿ ಇದು ಒಂದಾಗಿದೆ.

ಯುವರಾಣಿ ರತ್ನಾವತಿ

PC:Walters Art Museum Illuminated Manuscripts

ಯುವರಾಣಿ ರತ್ನಾವತಿ ಮತ್ತು ಮಾಂತ್ರಿಕ ಸಿಂಗ್ಯಾ
ಭನ್‍ಗ್ರಾಹ್ ಕೋಟೆಯ ಯುವರಾಣಿಯಾಗಿದ್ದ ರತ್ನಾವತಿಯು ಅತ್ಯಂತ ರೂಪವತಿಯಾಗಿದ್ದಳು. ಇವಳಿಗೆ ಹಲವಾರು ರಾಜರು ವರಿಸಲು ಇಷ್ಟ ಪಡುತ್ತಿದ್ದರು. ಈ ಪ್ರದೇಶಕ್ಕೆ ಬಂದ ಸಿಂಗ್ಯಾ ಎಂಬ ಮಾಂತ್ರಿಕ ಯುವರಾಣಿ ರತ್ನಾವತಿಯ ಅಪೂರ್ವ ಸೌಂದರ್ಯವನ್ನು ಕಂಡು ಬೆರಗಾದನು. ಹೇಗಾದರೂ ಮಾಡಿ ಈಕೆಯನ್ನು ವರಿಸಬೇಕು ಎಂದು ನಿಶ್ಚಯಿಸಿದನು. ತದನಂತರ ಒಂದು ಬಗೆಯ ಎಣ್ಣೆಯನ್ನು ತನ್ನ ಮಾಂತ್ರಿಕ ವಿದ್ಯೆಯಿಂದ ತಯಾರಿಸಿ ಯುವರಾಣಿಗೆ ನೀಡುವಂತೆ ಸೇವಕಿಗೆ ನೀಡಿದನು. ಈ ಎಣ್ಣೆಯನ್ನು ಸ್ವಿಕರಿಸಿದರೆ ರಾಣಿ ಸಂಪೂರ್ಣವಾಗಿ ಮಾಂತ್ರಿಕನ ಪಾಶದಲ್ಲಿ ಸಿಲುಕುವುದರಲ್ಲಿದ್ದಳು. ಆದರೆ ರತ್ನಾವತಿಯು ಮಾಂತ್ರಿಕ ಸಿಂಗ್ಯಾನ ಕುತಂತ್ರ ಅರ್ಥವಾಗಿತ್ತು ಅದ್ದರಿಂದ ಆ ಎಣ್ಣೆಯನ್ನು ನೆಲಕ್ಕೆ ಚೆಲ್ಲಿದಳು. ಆಗ ಆ ಎಣ್ಣೆಯು ಕಲ್ಲಾಗಿ ಪರಿವರ್ತನೆಗೊಂಡಿತು. ಇದರಿಂದ ಕೋಪಗೊಡ ಮಾಂತ್ರಿಕ ಈ ಕೋಟೆಯು ಪಿಶಾಚದಿಂದ ತುಂಬಿದ ಕೋಟೆಯಗಲಿ ಎಂದು ಶಪಿಸಿದ. ಈ ಕೋಟೆಯ ಶಾಪವನ್ನು ವಿಮೋಚನೆ ಮಾಡಲು ರಾಣಿ ರತ್ನಾವತಿ ಪುರ್ನಜನ್ಮ ತಾಳಿ ಈ ಕೋಟೆಯನ್ನು ಶಾಪದಿಂದ ವಿಮುಕ್ತ ಮಾಡುತ್ತಾಳೆ ಎಂದು ಸ್ಥಳಿಯರು ತಿಳಿಸುತ್ತಾರೆ.

 ಆಗೋಚರ ಶಕ್ತಿಗಳು

PC:Mani Binelli

ರಾತ್ರಿ ಹೋತ್ತು ಭನ್‍ಗ್ರಾಹ್ ಕೋಟೆಯಲ್ಲಿ ನಡೆಯುವುದಾದರೂ ಏನು?
ರಾತ್ರಿಯ ವೇಳೆಯಲ್ಲಿ ಭನ್‍ಗ್ರಾಹ್ ಕೋಟೆಯ ಒಳಗೆ ಆಗೋಚರ ಶಕ್ತಿಗಳು ಹಲವಾರು ಬಗೆಯ ಶಬ್ದಗಳನ್ನು ಮಾಡುತ್ತವೆ. ಇಲ್ಲಿ ಕಿರುಚಾಡುವ, ನೃತ್ಯ ಮಾಡುವ, ಆಳುವ, ಒಡಾಡುವ, ಶಬ್ದಗಳು ಬರುತ್ತವೆಯಂತೆ. ಹಲವಾರು ಜನರು ಈ ಆಗೋಚರ ಶಕ್ತಿಗಳನ್ನು ಕಣ್ಣಾರೆ ಕಂಡಿರುವ ಹಲವಾರು ನಿರ್ದಶಗಳಿವೆ. ರಾಜಸ್ಥಾನ ಸರ್ಕಾರವು ಈ ಕೋಟೆಗೆ ಮುದ್ರೆಯನ್ನು ಹಾಕಿದ್ದು. ಈ ಸಂಜೆ 6 ಗಂಟೆಯ ಮೇಲೆ ಇಲ್ಲಿ ಯಾರು ಇರಬಾರದು ಎಂದು ಸೂಚನೆಯನ್ನು ಹೊರಡಿಸಿದೆ.

ಭೇಟಿ ನೀಡಲು ಉತ್ತಮ ಸಮಯ
ಈ ಕೋಟೆಯು ರಾಜಸ್ಥಾನದಲ್ಲಿರುವುದರಿಂದ ಅತ್ಯಂತ ಬೇಸಿಗೆಯ ತಾಣ. ಭನ್‍ಗ್ರಾಹ್ ಕೋಟೆಗೆ ಚಳಿಗಾಲದ ಅವಧಿ ಅಕ್ಟೋಬರ್‍ನಿಂದ ಫೆಬ್ರವರಿ ಈ ಕೋಟೆಗೆ ಭೇಟಿ ನೀಡಲು ಸೂಕ್ತವಾದುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X