Search
  • Follow NativePlanet
Share
» »ದಂಗುಬಡಿಸುವ ಭಂಡಾರದರಾ ಪ್ರವಾಸ

ದಂಗುಬಡಿಸುವ ಭಂಡಾರದರಾ ಪ್ರವಾಸ

By Vijay

ಮಳೆಗಾಲ ಬಂತೆಂದರೆ ಸಾಕು ಮಹಾರಾಷ್ಟ್ರ ಸೇರಿದಂತೆ, ದಕ್ಷಿಣ ಭಾರತವು ಸಾಕಷ್ಟು ಕಳೆಗಟ್ಟಿ, ಎಲ್ಲೆಡೆ ಹಸಿರಿನ ಹಾಸಿಗೆಯಿಂದ ಸಿಂಗರಿಸಿಕೊಂಡು ಪ್ರವಾಸಿಗರನ್ನು ಕೈಬಿಸಿ ಕರೆಯತೊಡಗುತ್ತವೆ. ಈ ಸಮಯದಲ್ಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳೂ ಸಹ ಅದ್ಭುತವಾಗಿ ಕಂಗೊಳಿಸುತ್ತದೆ.

ಮೊದಲೆ ಬೆಟ್ಟದ ಕೋಟೆಗಳಿಂದ ಶ್ರೀಮಂತವಾಗಿರುವ ಮಹಾರಾಷ್ಟ್ರ ರಾಜ್ಯದ ಕೊಂಕಣ ಕರಾವಳಿ ಹಾಗೂ ಪಶ್ಚಿಮಘಟ್ಟಗಳು ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳು, ಚಿಕ್ಕಪುಟ್ಟ ನೀರಿನ ತೊರೆಗಳು ಹಾಗೂ ಅಹ್ಲಾದಕರ ಪರಿಸರದಿಂದಾಗಿ ಮತ್ತಷ್ಟು ರಮಣೀಯವಾಗಿ ಕಂಡುಬರುತ್ತದೆ.

ನಿಮಗಿಷ್ಟವಾಗಬಹುದಾದ : ಭವ್ಯ ಬೆಟ್ಟ ಕೋಟೆಯಲೊಂದು ಪ್ರಳಯ ಸೂಚಕ!

ಪ್ರಸ್ತುತ ಲೇಖನದಲ್ಲಿ ಮಹಾರಾಷ್ಟ್ರದಲ್ಲಿ ಅದರಲ್ಲೂ ವಿಶೇಷವಾಗಿ ಮಳೆಗಾಲ ಹಾಗೂ ನಂತರದ ಸಮಯದಲ್ಲಿ ರೋಮಾಂಚನ ಉಂಟುಮಾಡುವಂತಹ ಭಂಡಾರದರಾ ಎಂಬ ಪ್ರವಾಸಿ ವಿಶ್ರಾಂತಿ ಗ್ರಾಮದ ಪ್ರವಾಸ ಮಾಡಿದರೆ ಆ ನೆನಪನ್ನು ಖಂಡಿತವಾಗಿಯೂ ಬಹಳ ಕಾಲದವರೆಗೆ ಮರೆಯಲು ಸಾಧ್ಯವೆ ಇಲ್ಲ.

ಈ ಗ್ರಾಮವು ಮೊದಲೆ ಪಿಕ್ನಿಕ್ ಮಾಡಲು ಅತಿ ಆಕರ್ಷಕ ಸ್ಥಳ ಎಂಬ ಖ್ಯಾತಿ ಪಡೆದಿದೆ. ಅದರ ಹೊರತಾಗಿಯೂ ಇಲ್ಲಿಂದ ಕೆಲವು ಅದ್ಭುತ ಚಾರಣಗಳೂ ಸಹ ಲಭ್ಯವಿರುವುದರಿಂದ ಇಲ್ಲಿಗೆ ಭೆಟಿ ನೀಡುವ ಸಾಹಸಪ್ರಿಯ ಪ್ರವಾಸಿಗರಿಗಂತೂ ಹೆಚ್ಚುವರಿಯಾಗಿ ಪ್ರವಾಸದಾನಂದ ದೊರೆಯುವುದರಲ್ಲಿ ಸಂಶಯವಿಲ್ಲ.

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಪಶ್ಚಿಮಘಟ್ಟದ ಭವ್ಯ ಪರಿಸರದಲ್ಲಿ ನೆಲೆಸಿರುವ ಭಂಡಾರದರಾ ಒಂದು ಪ್ರವಾಸಿ ಗ್ರಾಮವಾಗಿದ್ದು ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಪಶ್ಚಿಮ ಕರಾವಳಿ ತೀರದ ಸನಿಹವಿದೆ. ರಾಜಧಾನಿ ಮುಂಬೈ ನಗರದಿಂದ ಸುಮಾರು 185 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ನಿಮಗೇನಾದರೂ ಜಲಪಾತ ತಾಣಗಳು, ಕೋಟೆ ಕೊತ್ತಲಗಳು, ದಟ್ಟ ಹಸಿರು, ತಾಜಾ ವಾತಾವರಣ, ಶಾಂತಮಯ ಪರಿಸರ, ಕೆರೆ ಹಾಗೂ ಅದ್ಭುತ ಚಾರಣ ಮಾರ್ಗಗಳು ಹೆಚ್ಚು ಕಡಿಮೆ ಒಂದೆ ಸ್ಥಳದಲ್ಲಿ ಬೇಕೆಂದಿದ್ದರೆ ನೀವೊಮ್ಮೆ ಭಂಡಾರದರಾಗೆ ತೆರಳಲೇಬೇಕು.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಸುಂದರವಾಗಿ ಹರಿಯುವ ಪ್ರವರಾ ನದಿ, ಆಣೆಕಟ್ಟು ಹಾಗೂ ಮಳೆಗಾಲದಲ್ಲಿ ಅಲ್ಲಲ್ಲಿ ಸೃಷ್ಟಿಯಾಗುವ ಮನಸೂರೆಗೊಳ್ಳುವ ಜಲಪಾತಗಳು ಎಲ್ಲವನ್ನು ಭಂಡಾರದರಾದ ಬಳಿ ನೋಡಬಹುದು. ಹೀಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಜನ ಪ್ರವಾಸಿಗರು ಭಂಡಾರದರಾಕೆ ಭೇಟಿ ನೀಡುತ್ತಲೆ ಇರುತ್ತಾರೆ.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಒಂದು ದಂತಕಥೆಯ ಪ್ರಕಾರ, ಹಿಂದೆ ಈ ಸ್ಥಳದಲ್ಲಿ ಅಗಸ್ತ್ಯ ಋಷಿಗಳು ಕೇವಲ ನೀರು ಹಾಗೂ ಗಾಳಿಯನ್ನು ಸೇವಿಸುತ್ತ ಒಂದು ವರ್ಷದವರೆಗೆ ಕಠಿಣ ತಪಸ್ಸನ್ನಾಚರಿಸಿದ್ದರಂತೆ. ಇದರಿಂದ ಪ್ರಸನ್ನನಾದ ದೇವರು ಇವರ ಭಕ್ತಿಯನ್ನು ಮೆಚ್ಚಿ ಗಂಗಾ ಧಾರೆಗಳನ್ನು ಇವರಿಗೆ ಕರುಣಿಸಿದನಂತೆ. ಇಂದು ಆ ಧಾರೆಯೆ ಪ್ರವರ ನದಿಯಾಗಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಇನ್ನೂ ನೀವು ಚಾರಣ ಮಾಡಬಯಸ್ಸಿದ್ದಲ್ಲಿ ರತನ್ಗಡ್, ಹರ್ಶ್ಚಂದ್ರಗಡ್ ಹಾಗೂ ಮಹಾರಾಷ್ಟ್ರದ ಅತಿ ಎತ್ತರ ಶಿಖರವಾದ ಕಳಸುಬಾಯಿ ಶಿಖರಕ್ಕೂ ಸಹ ಇಲ್ಲಿಂದ ಚಾರಣ ಕೈಗೊಳ್ಳಬಹುದು.

ಚಿತ್ರಕೃಪೆ: Ankur P

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡರದರಾ ಮುಂಬೈನಿಂದ 185 ಕಿ.ಮೀ, ಪುಣೆಯಿಂದ 191 ಕಿ.ಮೀ ಹಾಗೂ ಇಗತ್ಪುರಿ ಪಟ್ಟಣದಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಇಗತ್ಪುರಿ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಹೊಂದಿರುವ ಸ್ಥಳವಾಗಿದೆ ಹಾಗೂ ಇಗತ್ಪುರಿ, ಮುಂಬೈ ಮತ್ತು ಪುಣೇಗಳಿಂದಲೂ ಸಹ ಭಂಡಾರದರಾಗೆ ತೆರಳಲು ಮಹಾರಾಷ್ಟ್ರ ರಾಜ್ಯ ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ಇನ್ನೂ ನೀವು ಸ್ವಂತ ವಾಹನ ಹಾಗೂ ಬಾಡಿಗೆ ವಾಹನದಲ್ಲಿ ತೆರಳುತ್ತಿದ್ದರೆ ಜಾಗರೂಕತೆಯಿಂದ ಇಲ್ಲಿಗೆ ತೆರಳಿ ಏಕೆಂದರೆ ಇಲ್ಲಿನ ರಸ್ತೆಗಳು ಚಿಕ್ಕದಾಗಿದ್ದು ಕಡಿದಾದ ಬೆಟ್ಟಗುಡ್ಡಗಳು ಹಾಗೂ ಪ್ರಪಾತಗಳಿಂದ ಕೂಡಿದೆ.

ಚಿತ್ರಕೃಪೆ: Ninad Chaudhari

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ವಿಲ್ಸನ್ ಆಣೆಕಟ್ಟು ಹಾಗೂ ಜಲಾಶಯ ಭಂಡಾರದರಾದಲ್ಲಿ ನೋಡಬಹುದಾದ ಎಲ್ಲರ ನೆಚ್ಚಿನ ಒಂದು ಸುಂದರ ಆಕರ್ಷಣೆ. 1910 ರಲ್ಲಿ ಪ್ರವರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಆಣೆಕಟ್ಟು ಭಾರತದ ಹಳೆಯ ಆಣೆಕಟ್ಟುಗಳಲ್ಲೊಂದಾಗಿದೆ.

ಚಿತ್ರಕೃಪೆ: Kiran SRK

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಆಣೆಕಟ್ಟಿನಿಂದ ಹೊರ ಬಿಡಲಾಗುವ ನೀರು ಮುಂದೆ ಹರಿದಂತೆ ಕೊಡೆಯ ರೀತಿಯಲ್ಲಿ ಜಲಪಾತವನ್ನು ಸೃಷ್ಟಿಸಿ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ಜಲಾಪತದ ಸುತ್ತಲೂ ನಯನಮನೋಹರ ವೃತ್ತಾಕಾರದ ಉದ್ಯಾನವಿದ್ದು ಒಟ್ಟಾರೆ ಸೌಂದರ್ಯವು ಮನದಲ್ಲಿ ಸಂತಸ ಉತ್ಸಾಹಗಳುಂಟಾಗುವಂತೆ ಮಾಡುತ್ತದೆ. ಇದನ್ನು "ಅಂಬ್ರೆಲಾ" ಜಲಪಾತ ಎಂತಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Desktopwallpapers

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಮಳೆಗಾಲದ ಸಂದರ್ಭದಲ್ಲಿ ವಿಲ್ಸನ್ ಜಲಾಶಯದಲ್ಲಿ ಈ ರೀತಿಯಾಗಿ ನೀರು ತುಂಬಿರುವುದನ್ನು ನೋಡಿದಾಗ ರೋಮಾಂಚನವಾಗುವುದು ಖಚಿತ.

ಚಿತ್ರಕೃಪೆ: Ameyawiki

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಅಲ್ಲದೆ ಭಂಡಾರದರಾದ ಸುತ್ತಲೂ ಪ್ರಕೃತಿಯಲ್ಲಿ ಬೆರೆತಿರುವಂತೆ ಗೋಚರಿಸುವ ಚಿಕ್ಕ ಪುಟ್ಟ ಗ್ರಾಮಗಗಳನ್ನು ನೋಡುವುದೆ ಒಂದು ಚೆಂದದ ಅನುಭವ.

ಚಿತ್ರಕೃಪೆ: Akkida

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಅರ್ಥರ್ ಕೆರೆ ಭಂಡಾರದರಾದಲ್ಲಿ ನೋಡಬಹುದಾದ ಒಂದು ಸುಂದರ ಪ್ರೇಕ್ಷಣೀಯ ಸ್ಥಳ ಪ್ರವರಾ ನದಿಯಿಂದುಂಟಾದ ಈ ಕೆರೆ ತಾಣವು ಹಾಯಾಗಿ ಸಮಯ ಕಳೆಯಲು ಹೇಳಿ ಮಾಡಿಸಿದಂತಿದೆ. ನಿಮ್ಮ ಕುಟುಂಬದವರೊಡನೆ ಉತ್ತಮವಾದ ಸಮಯ ಕಳೆಯಲು ಇದೊಂದು ಆದರ್ಶಮಯ ಸ್ಥಳ.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ರಾಂಧಾ ಜಲಪಾತ, ಭಂಡಾರದರಾಗೆ ತೆರಳಿದಾಗ ನೋಡಬಹುದಾದ ಒಂದು ಸುಂದರ ಜಲಪಾತ. ಮಳೆಗಾಲ ಗರಿಷ್ಠ ಮಟ್ಟದಲ್ಲಿರುವ ಸಂದರ್ಭದಲ್ಲಿ ಈ ಜಲಪಾತವು ನಿಜಕ್ಕೂ ಸುಂದರವಾಗಿ ಕಾಣುತ್ತದೆ. ಇನ್ನುಳಿದ ಸಮಯದಲ್ಲಿ ಇದರ ನೀರು ಬಲು ಕಡಿಮೆ. ಇದೊಂದು ಅದ್ಭುತವಾದ ಮಳೆಗಾಲಕ್ಕೆ ಮಾತ್ರ ಸೀಮಿತವಾದ ಜಲಪಾತವೆಂದೆ ಹೇಳಬಹುದು.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ನಿಮಗೆ ಚಾರಣ ಮಾಡಲು ಮನಸ್ಸಿದ್ದಲ್ಲಿ ಭಂಡಾರದರಾದಿಂದ ರತನ್ಗಡ್ ಗೆ ತೆರಳಬಹುದು. ಇಲ್ಲಿರುವ ರತನ್ವಾಡಿ ಎಂಬ ಇನ್ನೊಂದು ಗ್ರಾಮದಿಂದ ದೋಣಿಯ ಮೂಲಕ ಸಾಗಿ ಬೆಟ್ಟದ ಬುಡ ತಲುಪಿ ಅಲ್ಲಿಂದ ಚಾರಣ ಕೈಗೊಳ್ಳಬಹುದು.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾದ ಬಳಿಯಿರುವ ರತನ್ವಾಡಿ ತನ್ನಲ್ಲಿರುವ ದೋಣಿ ವಿಹಾರಗಳು ಹಾಗೂ ಪುರಾತನ ಅಮೃತೇಶ್ವರ ದೇವಾಲಯಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Desktopwallpapers

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ರತನ್ವಾಡಿಯಿಂದ ರತನ್ಗಡ್ ಬೆಟ್ಟ ಕೋಟೆಯ ತಾಣಕ್ಕೆ ಚಾರಣ ಚಟುವಟಿಕೆ ಕೈಗೊಳ್ಳಬಹುದು. ಈ ಚಾರಣ ಮಾರ್ಗವು ಸಾಕಷ್ಟು ಚಿಕ್ಕ ಪುಟ್ಟ ಗುಹಾ ರಚನೆಗಳು, ಕಡಿದಾದ ಬಂಡೆಗಳು ಹಾಗೂ ನೀರಿನ ಚಿಕ್ಕ ಪುಟ್ಟ ಸಂಗ್ರಹಗಳ ಮಧ್ಯೆ ಸಾಗುತ್ತ ಸುಂದರ ಅನುಭವವನ್ನು ಕರುಣಿಸುತ್ತದೆ.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಇಲ್ಲಿ ಆನಂದವನ ಎಂಬ ರಿಸಾರ್ಟ್ ಇದ್ದು ಇದರಲ್ಲಿ ಬೇಕಾದರೆ ಪ್ರವಾಸಿಗರು ತಂಗಬಹುದು. ಇಲ್ಲಿಂದ ರತನ್ವಾಡಿ ಗ್ರಾಮ, ಕೆರೆ ಹಾಗೂ ಕೋಟೆಯ ಅದ್ಭುತ ದೃಶ್ಯಾವಳಿಗಳನ್ನು ಸವಿಯಬಹುದು.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ನೀವೊಬ್ಬ ಸಾಹಸಪ್ರಿಯ ಪ್ರವಾಸಿಗನಾಗಿದ್ದರೆ ಸ್ವಲ್ಪ ಮಟ್ಟಿನ ಸವಾಲು ಹಾಕುವಂತಹ ಕಳಸುಬಾಯಿ ಶಿಖರಕ್ಕೆ ಚಾರಣ ಕೈಗೊಳ್ಳಲು ಯೋಚಿಸಬಹುದು. ಭಂಡಾರದರಾದಿಂದ ಈ ಶಿಖರವು ಅದ್ಭುತವಾಗಿ ಗೋಚರಿಸುತ್ತದೆ. ಉತ್ಸಾಹಿ ಯುವ ಪ್ರವಾಸಿಗರಿಗೆ ಈ ಚಾರಣ ಹೆಚ್ಚು ಆಕರ್ಷಕವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Ankur P

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಕಳಸುಬಾಯಿ ಶಿಖರವು ಪಶ್ಚಿಮಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಯ ಅತಿ ಎತ್ತರದ ಶಿಖರವಾಗಿದ್ದು ಇದಕ್ಕೆ ಚಾರಣವನ್ನು ಭಂಡಾರದರಾದ ಬಳಿಯಿರುವ ಬಾರಿ ಗ್ರಾಮದಿಂದ ಕೈಗೊಳ್ಳಬೇಕು.

ಚಿತ್ರಕೃಪೆ: Ankur P

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಕಳಸುಬಾಯಿ ಶಿಖರದ ಮೇಲೆ ಕಳಸುಬಾಯಿ ಎಂಬಾಕೆಗೆ ಮುಡಿಪಾದ ಚಿಕ್ಕ ದೇವಾಲಯವೊಂದಿದೆ. ಈ ಚಾರಣ ಮಾರ್ಗವು ಅಲ್ಲಲ್ಲಿ ಕಷ್ಟಕರವಾಗಿದ್ದು ಕಬ್ಬಿಣದ ಏಣಿಗಳನ್ನು ಆಧಾರಕ್ಕೆಂದು ನಿರ್ಮಿಸಲಾಗಿದೆ.

ಚಿತ್ರಕೃಪೆ: Elroy Serrao

ಭಂಡಾರದರಾ ಹಾಗೂ ಸುತ್ತಮುತ್ತಲು:

ಭಂಡಾರದರಾ ಹಾಗೂ ಸುತ್ತಮುತ್ತಲು:

ಒಂದೊಮ್ಮೆ ಶಿಖರ ತಲುಪಿದರೆ ಅಲ್ಲಿಂದ ಕಂಡುಬರುವ ನೋಟ ನಿಜಕ್ಕೂ ವರ್ಣನಾತೀತ. ಪಟ್ಟ ಶ್ರಮದ ಸಾರ್ಥಕತೆ ಮನದಲ್ಲಿ ಮೂಡುವುದು ಖಚಿತ. ಕಳಸುಬಾಯಿ ಶಿಖರದ ಮೇಲಿರುವ ಕಳಸುಬಾಯಿ ದೇವಾಲಯ.

ಚಿತ್ರಕೃಪೆ: Elroy Serrao

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more