• Follow NativePlanet
Share
Menu
» »ಭೈರವಕೋನದಲ್ಲಿ ಪೌರಣಮಿಯಂದು ನಡೆಯುವ ಅದ್ಭುತವಾದ ರಹಸ್ಯ

ಭೈರವಕೋನದಲ್ಲಿ ಪೌರಣಮಿಯಂದು ನಡೆಯುವ ಅದ್ಭುತವಾದ ರಹಸ್ಯ

Written By:

ನಮ್ಮ ಭಾರತ ದೇಶದಲ್ಲಿ ಹಲವಾರು ರಹಸ್ಯಗಳು ಇಂದಿಗೂ ಅಡಗಿಸಿಕೊಂಡಿವೆ. ಅವುಗಳನ್ನು ಭೇಧಿಸುತ್ತಾ ಹೋದರೆ ಕೆಲವೊಮ್ಮೆ ಉತ್ತರ ದೊರೆತರೆ ಇನ್ನೂ ಕೆಲವೊಮ್ಮೆ ತಮ್ಮ ಪ್ರಾಣವನ್ನೇ ಅರ್ಪಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪ್ರವಾಸಿಗರು ಆಧ್ಯಾತ್ಮಿಕ, ಪ್ರಕೃತಿಯನ್ನು ಆರಾಧಿಸುವವರು ಹಾಗು ಸಾಹಸವನ್ನು ಇಷ್ಟ ಪಡುವವರು ಲೇಖನದಲ್ಲಿ ಹೇಳಲಾಗುವ ತಾಣಕ್ಕೆ ಒಮ್ಮೆಯಾದರೂ ಭೇಟಿ ನೀಡಿ. ಆ ಪ್ರಯಾಣ ಜೀವನದಲ್ಲಿ ಎಂದೂ ಮರೆಯಲಾಗದ ಅನುಭುತಿಯನ್ನು ಉಂಟುಮಾಡುತ್ತದೆ.


ಹಾಗಾದರೆ ಆ ಸ್ಥಳ ಯಾವುದು ಎಂದು ಯೋಚಿಸುತ್ತಿದ್ದೀರಾ? ಅದೇ ಭೈರವ ಕೋನ ದೇವಾಲಯ. ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿದರೆ ಮಧುರವಾದ ಅನುಭೂತಿಯನ್ನು ಪಡೆಯಬಹುದಾಗಿದೆ. ದಟ್ಟವಾದ ಅಡವಿ ಪ್ರದೇಶ, ಸುಂದರವಾದ ಜಲಪಾತಗಳು ಇನ್ನೂ ಹಲವಾರು ಆರ್ಕಷಣೆಗಳನ್ನು ಇಲ್ಲಿ ಪಡೆಯಬಹುದಾಗಿದೆ.

ಪ್ರಸ್ತುತ ಲೇಖನದಲ್ಲಿ ಭೈರವಕೋನ ದೇವಾಲಯದ ರಹಸ್ಯವನ್ನು ನಾವು ತಿಳಿಯೊಣ.

ಎಲ್ಲಿದೆ?

ಎಲ್ಲಿದೆ?

ಈ ಭೈರವಕೋನ ದೇವಾಲಯವು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಪವಿತ್ರವಾದ ದೇವಾಲಯವಿದೆ. ಸುಮಾರು 200 ಅಡಿ ಎತ್ತರದಲ್ಲಿ ದೇವಾಲಯವಿರುವುದನ್ನು ಕಾಣಬಹುದಾಗಿದೆ. ಭೈರವ ಎಂದರೆ ಮಹಾ ಶಿವನು. ಇಲ್ಲಿ ನೆಲೆಸಿರುವುದು ಕೂಡ ಶಿವನೇ ಆಗಿದ್ದಾನೆ.

250 ಚದರ ಕಿ.ಮೀ

250 ಚದರ ಕಿ.ಮೀ

ಈ ಭೈರವಕೋನ 250 ಚದರ ಕಿ.ಮೀ ವೀಸ್ತಿರ್ಣ ಹೊಂದಿದ್ದು, ಎಲ್ಲಿ ನೋಡಿದರು ದೇವಿ, ದೇವತೆಗಳ ಶಿಲಾ ರೂಪಗಳೇ ಕಾಣಿಸುತ್ತದೆ. ಮುಖ್ಯವಾಗಿ ಪರ್ವತದ ಮೇಲೆ 8 ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ.

ಗುಹೆ

ಗುಹೆ

ಇಲ್ಲಿನ ಗುಹೆಗಳು ಭೈರವಕುಂಡದ ಅತ್ಯಂತ ಪ್ರಸಿದ್ಧವಾದ ಆಕರ್ಷಣಿಯವಾಗಿದೆ. ಇಲ್ಲಿನ ಗುಹೆಗಳಿಗೆ ಪೌರಣಿಕವಾದ ಚಾರಿತ್ರೆಗಳು ಇವೆ. ಆಶ್ಚರ್ಯ ಏನಪ್ಪ ಎಂದರೆ ಒಂದೇ ಪರ್ವತದ ಮೇಲೆ 8 ದೇವಾಲಯಗಳು ಇರುವುದು. ಅದರಲ್ಲೂ ಆ 8 ದೇವಾಲಯಗಳಲ್ಲಿಯೂ ಕೂಡ ನೆಲೆಸಿರುವುದು ಮಹಾ ಶಿವನೇ...

ಪೂರ್ವದಿಕ್ಕಿಗೆ

ಪೂರ್ವದಿಕ್ಕಿಗೆ

8 ದೇವಾಲಯಗಳಲ್ಲಿ 7 ಶಿವಾಲಯಗಳು ಪೂರ್ವ ದಿಕ್ಕಿಗೆ ಇದೆ. ಇನ್ನೂ ಉಳಿದ ಒಂದು ದೇವಾಲಯ ಮಾತ್ರ ಉತ್ತರ ದಿಕ್ಕಿಗೆ ಇರುವುದನ್ನು ಕಾಣಬಹುದಾಗಿದೆ. ಸ್ತಂಭಗಳೆಲ್ಲವೂ ಬೆಟ್ಟದಲ್ಲಿಯೇ ಕೆತ್ತನೆ ಮಾಡಿರುವುದು ವಿಶೇಷವಾಗಿದೆ.

ಭರ್ಗೇಶ್ವರ

ಭರ್ಗೇಶ್ವರ

ಈ ಗುಹಾ ದೆವಾಲಯದಲ್ಲಿ ಪ್ರಧಾನವಾಗಿ ನೆಲೆಸಿರುವ ದೈವವೆಂದರೆ ಅದು ಭರ್ಗೇಶ್ವರ. ಈ ಪ್ರದೇಶಕ್ಕೆ ಕ್ಷೇತ್ರ ಪಾಲಕ ಭೈರವನಾಗಿದ್ದಾನೆ. ಹಾಗಾಗಿಯೇ ಆತನ ಹೆಸರಿನಿಂದಲೇ ಈ ಪ್ರದೇಶವನ್ನು ಭೈರವಕೋನ ಎಂದು ಕರೆಯುತ್ತಾರೆ.

ಕಾಳಭೈರವ ಚಕ್ರವರ್ತಿ

ಕಾಳಭೈರವ ಚಕ್ರವರ್ತಿ

ಒಂದು ಕಾಲದಲ್ಲಿ ಕಾಳಭೈರವ ಎಂಬ ಚಕ್ರಮರ್ತಿ ಆಳ್ವಿಕೆ ಮಾಡಿದ್ದನು ಹಾಗಾಗಿಯೇ ಇದನ್ನು ಭೈರವಕೋನ ಎಂದು ಹೇಳುತ್ತಾರೆ ಎಂದು ಕೆಲವರು ಹೇಳುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಪ್ರದೇಶದ ಸುತ್ತ ಆನೇಕ ಕೋಟೆಗಳನ್ನು ಕಾಣಬಹುದಾಗಿದೆ.

ಶಿವಲಿಂಗ

ಶಿವಲಿಂಗ

ಈ ಗುಹಾ ದೇವಾಲಯದಲ್ಲಿನ ಶಿವಲಿಂಗಗಳು ಸುಪ್ರಸಿದ್ಧ ಕ್ಷೇತ್ರಗಳಲ್ಲಿನ ಶಿವಲಿಂಗಕ್ಕೆ ಹೋಲಿಕೆಯಾಗುವುದರಿಂದ ಈ ಲಿಂಗಗಳಿಗೆ ಕೂಡ ಅಂತಹ ಹೆಸರುಗಳಿಂದಲೇ ಕರೆಯಬೇಕು ಎಂದು ಭಕ್ತರು ಕರೆಯುತ್ತಾರೆ.

ಲಿಂಗಗಳು

ಲಿಂಗಗಳು

ಅವುಗಳೆಂದರೆ ಮಧ್ಯ ಪ್ರದೇಶದ ಅಮರನಾಥದಲ್ಲಿ ಕಾಣಿಸುವ ಶಶಿನಾಗ ಲಿಂಗ, ರುದ್ರಲಿಂಗ, ಕಾಶಿಯ ವಿಶ್ವೇಶ್ವರ ಲಿಂಗ, ತಿರುಮಲದ ನಗರೀಶ್ವರ ಲಿಂಗ ಮತ್ತು ಭಾರ್ಗೇಶ್ವರ ಲಿಂಗ. ರಾಮನಾಥ ಪುರದ ಸಮುದ್ರ ತೀರ ಪ್ರದೇಶದಲ್ಲಿನ ರಾಮೇಶ್ವರ ಲಿಂಗ, ಶ್ರೀ ಶೈಲದ ಮಲ್ಲಿಕಾರ್ಜುನ, ಪಕ್ಷಗಾತಲಿಂಗ, ಹೆಸರುಗಳಿಂದ ಈ ದೇವಾಲಯದಲ್ಲಿನ ಲಿಂಗಗಳಿಗೆ ಆರಾಧಿಸುತ್ತಾರೆ.

ಉತ್ತರ ದಿಕ್ಕು

ಉತ್ತರ ದಿಕ್ಕು

ಉತ್ತರ ದಿಕ್ಕಿಗೆ ಇರುವುದು ಮೊದಲ ಗುಹೆ. ಈ ದೇವಾಲಯದ ಎದುರಿಗೆ ನಂದಿಯು ನೆಲೆಸಿದ್ದಾನೆ. 8 ನೇ ಗುಹೆಯಲ್ಲಿ ಲಿಂಗದ ಜೊತೆ ಬ್ರಹ್ಮ, ವಿಷ್ಣುರ ಮೂರ್ತಿಗಳನ್ನು ಕೂಡ ಪ್ರತಿಷ್ಟಾಪನೆಯನ್ನು ಮಾಡಿದ್ದಾರೆ. ತ್ರಿಮೂರ್ತಿಗಳು ಒಂದೇ ಸ್ಥಳದಲ್ಲಿ ಇರುವ ದೇವಾಲಯ ಎಂದೂ ಕೂಡ ಪ್ರಸಿದ್ಧಿಯನ್ನು ಪಡೆದಿದೆ.

ಸ್ವಯಂ ಭೂ

ಸ್ವಯಂ ಭೂ

ಈ ದೇವಾಲಯದಲ್ಲಿನ ವಿಶೇಷವೆನೆಂದರೆ ಇಲ್ಲಿ ಸ್ವಯಂ ಭೂವಾಗಿ ಪಾರ್ವತಿ (ದುರ್ಗಾ) ದೇವಿಯು ನೆಲೆಸಿದ್ದಾಳೆ. ಇಲ್ಲಿ ಪ್ರತಿ ಕಾರ್ತಿಕ ಪೌರ್ಣಮಿಯಂದು ಮಾತ್ರವೇ ಚಂದ್ರ ಕಿರಣಗಳು ದುರ್ಗಿಯ ವಿಗ್ರಹದ ಮೇಲೆ ಬೀಳುವುದು ವಿಶೇಷವಾಗಿದೆ.

ಭಕ್ತರು

ಭಕ್ತರು

ಹಾಗಾಗಿಯೇ ಭಕ್ತರು ಈ ವಿಶೇಷವನ್ನು ಕಾಣಲು ಕಾರ್ತಿಕ ಪೌರ್ಣಮಿಯಂದು ಭೇಟಿ ನೀಡುತ್ತಾರೆ. ಶಿವರಾತ್ರಿಯ ಸಮಯದಲ್ಲಿ ಪಕ್ಕದಲ್ಲೇ ಇರುವ ಜಲಪಾತದಲ್ಲಿ ಸ್ನಾನವನ್ನು ಮಾಡಿ ಶಿವನನ್ನು ದರ್ಶನ ಮಾಡಿಕೊಳ್ಳುತ್ತಾರೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಈ ಭೈರವ ಕೋನಗೆ ತೆರಳಬೇಕಾದರೆ ಮೊದಲು ಅಂಗೋಲಿಗೆ ತಲುಪಬೇಕು. ಅಲ್ಲಿಂದ ಪಾಮೂರು ಮಾರ್ಗವಾಗಿ ಸಿ.ಎಸ್ ಪುರಂಗೆ ತಲುಪಿ ಬೈರವಕೋನಗೆ ತಲುಪಬಹುದು.

ಇನ್ನೊಂದು ಮಾರ್ಗವೆಂದರೆ ಅದು ಅಂಗೋಲಿಯಿಂದ ಕನಿಗಿರಿ. ಅಲ್ಲಿಂದ ಸಿ.ಎಸ್ ಪುರಂ ಮಾರ್ಗವಾಗಿ ಭೈರವಕೋನಗೆ ತಲುಪಬಹುದಾಗಿದೆ. ಕಾರ್ತಿಕ ಮಾಸದ ದಿನ ಮಾತ್ರ ನೇರವಾದ ಬಸ್ಸುಗಳ ಸೌಕರ್ಯವಿರುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ