Search
  • Follow NativePlanet
Share
» »ಬೇತಾಬ್ ಕಣಿವೆ - ಬಾಲಿವುಡ್ ಚಿತ್ರದ ಹೆಸರಿಡಲಾದ ಒಂದು ಆಕರ್ಷಕ ಕಣಿವೆ

ಬೇತಾಬ್ ಕಣಿವೆ - ಬಾಲಿವುಡ್ ಚಿತ್ರದ ಹೆಸರಿಡಲಾದ ಒಂದು ಆಕರ್ಷಕ ಕಣಿವೆ

By Manjula Balaraj Tantry

ಜಗತ್ತಿನ ಎಲ್ಲಾ ಸ್ಥಳಗಳು ಸ್ವರ್ಗವನ್ನು ಹೋಲುವುದಿಲ್ಲ ಆದರೆ ಜಮ್ಮು ಮತ್ತು ಕಾಶ್ಮೀರ ಅಂತಹ ಸ್ವರ್ಗವನ್ನು ಹೋಲುವ ಸ್ಥಳಗಳಲ್ಲೊಂದಾಗಿದ್ದು, ಇದು ಪ್ರಯಾಣಿಕರಿಗೆ ಒಂದು ಅತ್ಯುತ್ತಮವಾದ ನಿಲುಗಡೆಯ ಸ್ಥಳವೆನಿಸಿದೆ.

ಆದುದರಿಂದ ಇದನ್ನು ದೇವರ ಸರ್ವೋತ್ಕೃಷ್ಟವಾದ ವಾಸಸ್ಥಾನವೆಂದು ನಂಬಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಂದು ಸ್ಥಳದಲ್ಲು ಪ್ರಕೃತಿಯ ಮೂಲಭೂತ ಮತ್ತು ಶುಷ್ಕ ಸೌಂದರ್ಯತೆಯನ್ನು ಪ್ರದರ್ಶಿಸುತ್ತದೆ.

ಹುಲ್ಲುಗಾವಲು ಪ್ರದೇಶದಿಂದ ಎತ್ತರವಾದ ಪರ್ವತಗಳವರೆಗೆ ಮತ್ತು ಸುಂದರವಾದ ನದಿಗಳಿಂದ ಮಂತ್ರಮುಗ್ದಗೊಳಿಸುವ ಸರೋವರಗಳವರೆಗೆ ಈ ಸ್ವರ್ಗ ಸದೃಶ್ಯವಾದ ರಾಜ್ಯದಲ್ಲಿ ಎಲ್ಲವೂ ಇರುವುದರಿಂದ ಈ ಸುಂದರವಾದ ಸ್ಥಳಕ್ಕೆ ಜಗತ್ತಿನಾದ್ಯಂತದ ಪ್ರವಾಸಿಗರು ಭೇಟಿ ನೀಡುತ್ತಾರೆ.

1. ಬೇತಾಬ್ ಕಣಿವೆ

1. ಬೇತಾಬ್ ಕಣಿವೆ

PC- Nandanupadhyay

ವರ್ಷವಿಡೀ ತಾಪಮಾನ ಮತ್ತು ಹವಾಮಾನವು ಅನುಕೂಲಕರವಾಗಿರುವುದರಿಂದ ಬೇತಾಬ್ ಕಣಿವೆಯನ್ನು ವರ್ಷದ ಯಾವುದೇ ಸಮಯದಲ್ಲಿಯೂ ಭೇಟಿ ಕೊಡಬಹುದಾಗಿದೆ. ಇದೊಂದು ಬಹಳ ಮೆಚ್ಚಿನ ಬೇಸಿಗೆಯ ತಾಣವಾಗಿದುವುದರಿಂದ ಈ ಸ್ಥಳವು ಬೇಸಿಗೆಯ ಸಮಯದಲ್ಲಿ ಪ್ರವಾಸಿಗರನ್ನು ಬರಮಾಡಿಕೊಳ್ಳುವುದರಲ್ಲಿ ನಿರತವಾಗಿರುತ್ತದೆ.

ನೀವು ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಂಡು ಯಾವುದಾದರೂ ತಣ್ಣಗಿನ ಕಣಿವೆಗಳಿಗೆ ಹೋಗಲು ಇಚ್ಚಿಸಿದಲ್ಲಿ ಬೇತಾಬ್ ಕಣಿವೆಯು ಈ ಋತುವಿನಲ್ಲಿ ನಿಮಗೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ.

2. ಬೇತಾಬ್ ಕಣಿವೆಯ ಕುರಿತಾದ ಸಣ್ಣ ವಿವರ.

2. ಬೇತಾಬ್ ಕಣಿವೆಯ ಕುರಿತಾದ ಸಣ್ಣ ವಿವರ.

PC- Nandanupadhyay

ಇದನ್ನು ಮೊಘಲರ ಸಮಯದಲ್ಲಿ ಹಾಗನ್ ಕಣಿವೆ ಎಂದು ಕರೆಯಲಾಗುತ್ತಿದ್ದು, ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮೃತಾ ಸಿಂಗ್ ಅವರು ನಟಿಸಿದ ಚಲನಚಿತ್ರವಾದ ಬೇತಾಬ್ ಅನ್ನು ಇಲ್ಲಿ ಚಿತ್ರೀಕರಿಸಿದ ನಂತರ ಈ ಕಣಿವೆಗೆ ಬೇತಾಬ್ ಕಣಿವೆ ಎಂದು ಕರೆಯಲಾಯಿತು. ಇದು 1960ರಿಂದಲೂ ಚಲನಚಿತ್ರ ಮಾಡುವವರಿಗೆ ಒಂದು ಅಚ್ಚುಮೆಚ್ಚಿನ ಸ್ಥಳವಾಗಿದೆ. ಇಲ್ಲಿಯ ಕೆಲವು ಸ್ಥಳಗಳಿಗೆ ಬಾಲಿವುಡ್ ಚಲನಚಿತ್ರಗಳ ಹೆಸರಿಡಲಾಗಿದೆ.

ಸುಂದರವಾದ ಹಿಮದಿಂದ ಆವೃತವಾದ ಮತ್ತು ಹಸಿರು ಹುಲ್ಲುಗಾವಲುಗಳಿಂದ ಸುತ್ತುವರಿಯಲ್ಪಟ್ಟ ಬೇತಾಬ್ ಕಣಿವೆಯು ಖಚಿತವಾಗಿಯೂ ನಿವೃತ್ತಿ ಹೊಂದಿದ ಬಳಿಕ ವಿಶ್ರಾಂತಿ ಪಡೆಯಲು ಬಯಸಿದಲ್ಲಿ ಒಂದು ಅತ್ಯಂತ ವಿಶ್ರಾಂತಿಯನ್ನು ಮತ್ತು ಶಾಂತಿಯನ್ನು ಹೊಂದಬಹುದಾದಂತಹ ಸ್ಥಳವೆಂದು ಪರಿಗಣಿಸ ಬಹುದಾಗಿದೆ.

ಬೇತಾಬ್ ಕಣಿವೆಯ ಪ್ರತಿಯೊಂದು ಮೂಲೆಯಲ್ಲಿಯೂ ಶಾಂತತೆ ಮತ್ತು ಪ್ರಶಾಂತತೆಯ ಸಾರವನ್ನು ಅನುಭವಿಸಬಹುದಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಹತ್ತಿರದಲ್ಲಿರುವ ಬೇತಾಬ್ ಕಣಿವೆಯನ್ನು ಪ್ರತೀ ವರ್ಷ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಬೇತಾಬ್ ಚಲನಚಿತ್ರದ ಹೊರತಾಗಿಯೂ ಇಲ್ಲಿ ಅನೇಕ ಚಲನಚಿತ್ರಗಳನ್ನು ಇಲ್ಲಿಯ ಅದ್ಬುತವಾದ ಪ್ರಕೃತಿಯಲ್ಲಿ ಚಿತ್ರೀಕರಿಸಲಾಗಿದೆ.

3. ಬೇತಾಬ್ ಕಣಿವೆಯ ಸುತ್ತಮುತ್ತಲಿರುವ ಆಸಕ್ತಿದಾಯಕ ಸ್ಥಳಗಳು

3. ಬೇತಾಬ್ ಕಣಿವೆಯ ಸುತ್ತಮುತ್ತಲಿರುವ ಆಸಕ್ತಿದಾಯಕ ಸ್ಥಳಗಳು

PC- Narender9

ಬೇತಾಬ್ ಕಣಿವೆಯ ಸುತ್ತಲಿರುವ ಹುಲ್ಲುಗಾವಲು ಪ್ರದೇಶದಲ್ಲಿ ಸುತ್ತಾಡಿ ಅಲ್ಲಿಯ ಮನಮೋಹಕ ಸೌಂದರ್ಯವನ್ನು ಸೆರೆಹಿಡಿಯುವ ಹೊರತಾಗಿಯೂ ಇಲ್ಲಿ ಅನೇಕ ಇನ್ನಿತರ ಸ್ಥಳಗಳೂ ಪ್ರಯಾಣಿಕರು ಮತ್ತು ಪ್ರವಾಸಿಗರನ್ನು ಸೆಳೆಯುತ್ತದೆ.

ಇಲ್ಲಿ ನೀವು ಭೇಟಿ ಕೊಡುವುದನ್ನು ತಪ್ಪಿಸಲೇ ಬಾರದಂತಹ ಕೆಲವು ಪ್ರಮುಖವಾದ ಸ್ಥಳಗಳಿವೆ ಅವುಗಳಲ್ಲಿ ಲಿಡ್ಡರ್ ನದಿ, ಪಹಲ್ಗಾಮ್, ಒವೆರಾರು ವನ್ಯಜೀವಿ ಧಾಮ, ತುಲಿಯನ್ ಸರೋವರ, ಮತ್ತು ಲಿಡ್ಡರ್ ಅಮ್ಯೂಸ್ ಮೆಂಟ್ ಪಾರ್ಕ್ ಇತ್ಯಾದಿಗಳು ಸೇರಿವೆ.

5. ಬೇತಾಬ್ ಕಣಿವೆಯನ್ನು ತಲುಪುವುದು ಹೇಗೆ?

5. ಬೇತಾಬ್ ಕಣಿವೆಯನ್ನು ತಲುಪುವುದು ಹೇಗೆ?

ವಾಯುಮಾರ್ಗ: ಬೇತಾಬ್ ಕಣಿವೆಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು ಸುಮಾರು 96 ಕಿ.ಮೀ ದೂರದಲ್ಲಿರುವ ಶ್ರೀನಗರದ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ನೀವು ಬಾಡಿಗೆ ವಾಹನದ ಮೂಲಕ ಬೇತಾಬ್ ಕಣಿವೆಗೆ ಪ್ರಯಾಣಿಸಬಹುದಾಗಿದೆ.

ರೈಲಿನ ಮೂಲಕ: ಕಣಿವೆಯಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಶ್ರೀನಗರ ರೈಲ್ವೆ ನಿಲ್ದಾಣಕ್ಕೆ ನೀವು ರೈಲಿನಲ್ಲಿ ಹೋಗಬಹುದು. ರೈಲ್ವೇ ನಿಲ್ದಾಣದಿಂದ, ಬೇತಾಬ್ ಕಣಿವೆಗೆ ಕ್ಯಾಬ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು. ಹೀಗೆ ಪ್ರಯಾಣವು ಈ ಕಣಿವೆಯನ್ನು ತಲುಪಲು ನಿಮಗೆ 2 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತದೆ.

ರಸ್ತೆ ಮೂಲಕ: ಬೇತಾಬ್ ಕಣಿವೆಯನ್ನು ರಸ್ತೆ ಮೂಲಕ ಸುಲಭವಾಗಿ ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X