Search
  • Follow NativePlanet
Share
» »ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ರಂಗಮಂದಿರಗಳು.

ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ರಂಗಮಂದಿರಗಳು.

ರಂಗಮಂದಿರಗಳು, ನಾಟಕಗಳು, ಕಥಾನಕಗಳು: ಮೋಜು ಮಸ್ತಿಗಳನ್ನು ತುಂಬಿಕೊಂಡಿರುವ ಬೆಂಗಳೂರು ಹಲವಾರು ರಂಗಭೂಮಿ ಕಲಾವಿದರು ಮತ್ತು ಉತ್ಸಾಹಿಗಳಿಗೆ ನೆಲೆಯಾಗಿದ್ದು ಹಲವಾರು ರಂಗಮಂದಿರಗಳಿಗೆ ನೆಲೆಯಾಗಿದೆ. ಇಂದು ಅನೇಕ ಮಂದಿ ಈಗ ಚಲನಚಿತ್ರಗಳಿಂದ ನಾಟಕಗಳು ಮತ್ತು ನೇರ ಪ್ರದರ್ಶನಗಳತ್ತ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ಅದ್ಭುತವಾದ ದೀಪಾಲಂಕಾರ ಮತ್ತು ಉತ್ತಮವಾದ ಡೈಲಾಗ್ ಡೆಲಿವರಿಯೊಂದಿಗೆ(ಸಂವಾದವನ್ನು ಹೇಳುವ ರೀತಿ) ವೇದಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಹಲವಾರು ಅದ್ಭುತ ತಂಡಗಳು ನಮ್ಮಲ್ಲಿ ಪ್ರತಿಯೊಬ್ಬರನ್ನು ಭಾವನೆಗಳಲ್ಲಿ ತೇಲುವಂತೆ ಮಾಡುತ್ತದೆ . ಕಲಾವಿದನಿಗೆ ಚಪ್ಪಾಳೆ ಮುಖ್ಯವಾದರೆ ಪ್ರೇಕ್ಷಕರಿಗೆ ನಾಟಕ ನೋಡಲು ಭೇಟಿನೀಡುವ ಸ್ಥಳ ಹಾಗೂ ಅಲ್ಲಿನ ವಾತಾವರಣ ಮುಖ್ಯವಾಗಿರುತ್ತದೆ.

ಆದುದರಿಂದ ನಾವು ಬೆಂಗಳೂರಿನ ಕೆಲವು ಸಭಾಂಗಣಗಳಲ್ಲಿ ಸುತ್ತಾಡಿ ಅಲ್ಲಿಯ ವಿವರಗಳನ್ನು ಏಕೆ ಸಂಗ್ರಹಿಸಬಾರದು?

ravindrakalamandir

ರವೀಂದ್ರ ಕಲಾಕ್ಷೇತ್ರ

ರಾಷ್ಟ್ರಕವಿ ರಬೀಂದ್ರನಾಥ ಟಾಗೋರರಿಗೆ ಸಮರ್ಪಿತವಾದ ಸಭಾಂಗಣವು ಬೆಂಗಳೂರು ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಈ ರಂಗಭೂಮಿಯು ಸಾಕಷ್ಟು ಪ್ರಸಿದ್ದ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಸೃಷ್ಟಿಮಾಡಿದೆ. 900 ಆಸನಗಳ ಸಾಮರ್ಥ್ಯವನ್ನು ಹೊಂದಿರುವಂತಹ ಈ ಸಭಾಂಗಣದಲ್ಲಿ ಉತ್ತಮವಾದ ಧ್ವನಿಯ ವ್ಯವಸ್ಥೆಯೊಂದಿಗೆ ದೊಡ್ಡ ದೊಡ್ಡ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಲು ಅನುಕೂಲವಾಗುವಂತಹ ವೇದಿಕೆಯನ್ನು ಒದಗಿಸಿಕೊಡಲಾಗಿದೆ. ರವೀಂದ್ರ ಕಲಾಕ್ಷೇತ್ರವು ನಿಮ್ಮ ವಾರಾಂತ್ಯವನ್ನು ಜೀವಂತಗೊಳಿಸಲು ಭೇಟಿ ನೀಡಲೇಬೇಕಾದ ರಂಗಮಂದಿರಗಳಲ್ಲಿ ಒಂದಾಗಿದೆ.

ವಿಳಾಸ: ಟೌನ್ ಹಾಲ್ ಎದುರು, ಜಯಚಾಮರಾಜ ಒಡೆಯರ್ ರಸ್ತೆ, ಸಂಪಂಗಿ ರಾಮ ನಗರ, ಬೆಂಗಳೂರು, ಕರ್ನಾಟಕ 560002.

ಇನ್ನಿತರ ವಿವರಗಳು: ಪಾರ್ಕಿಂಗ್ ಸೌಲಭ್ಯಗಳು/ಲಭ್ಯವಿದೆ: ಶೌಚಾಲಯಗಳು - ಲಭ್ಯವಿವಿದೆ / ಆಹಾರ ಮಳಿಗೆಗಳು : ಸ್ಥಳದ ಸುತ್ತಲೂ ಅನೇಕ ಆಹಾರ ಮಳಿಗೆಗಳನ್ನು ಕಾಣಬಹುದಾಗಿದೆ.

ಕೆ.ಹೆಚ್. ಕಲಾಸೌಧ

ನಮಗೆ ಒಂದು ಮನೆಯಲ್ಲಿರುವ ಅನುಭವವನ್ನು ಕೊಡುವ ರಂಗಮಂದಿರವೆಂದರೆ ಅದು ಕೆ.ಹೆಚ್ ಕಲಾಸೌಧ. ಬೆಂಗಳೂರು ನಗರದ ಪ್ರಮುಖ ಸ್ಥಳದಲ್ಲಿರುವ ಈ ಸಭಾಂಗಣವು 300 ಜನರಿಗೆ ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ, ಇದು ವಾಹನಗಳ ಸದ್ದುಗದ್ದಲಗಳಿಂದ ಸ್ವಲ್ಪ ಮಟ್ಟಿಗೆ ದೂರವಿದೆ. ನೀವು ಆಡಿಟೋರಿಯಂನ ಮೆಟ್ಟಿಲುಗಳನ್ನು ಏರುವಾಗ ಅದು ನಿಮಗೆ ಹಳೆಯ ಬೆಂಗಳೂರಿನಲ್ಲಿರುವುದರ ಅನುಭವವನ್ನು ನೀಡುತ್ತದೆ; ಸುಂದರವಾದ ರಾಮಾಂಜನೇಯ ಗುಡ್ಡ ಮತ್ತು ವಾಯುವಿಹಾರ ಮಾಡಲು ಇಲ್ಲಿರುವ ಉದ್ಯಾನವನವು ಈ ಸಭಾಂಗಣದ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಬೆಂಗಳೂರು ರಂಗತಂಡ, ಕಲಗಂಗೋತ್ರಿ, ಸಂಚಾರಿ, ಪ್ರಕಾಶಂ, ವಾಸ್ಪ್ ನಂತಹ ಅನೇಕ ಪ್ರಸಿದ್ಧ ತಂಡಗಳು ಈ ಸಭಾಂಗಣದಲ್ಲಿ ತಮ್ಮ ಪ್ರದರ್ಶನಗಳನ್ನು ನೀಡಿವೆ.

ವಿಳಾಸ: ರಾಮಾಂಜನೇಯ ದೇವಾಲಯ ಆವರಣ, ಹನುಮಂತನಗರ, ಬಸವನಗುಡಿ ಬೆಂಗಳೂರು - ಕರ್ನಾಟಕ 560019.

ಇನ್ನಿತರ ವಿವರಗಳು: ಪಾರ್ಕಿಂಗ್ ಸೌಲಭ್ಯ/ಲಭ್ಯವಿದೆ /ಶೌಚಾಲಯಗಳು - ಲಭ್ಯವಿದೆ / ಆಹಾರ ಮಳಿಗೆಗಳು : ಸ್ಥಳದ ಸುತ್ತಲೂ ಅನೇಕ ಆಹಾರ ಮಳಿಗೆಗಳನ್ನು ಕಾಣಬಹುದಾಗಿದೆ.

rangasankara

ರಂಗಶಂಕರ

ಸುಂದರವಾದ ಮತ್ತು ಅತ್ಯಾಧುನಿಕವಾಗಿ ನಿರ್ಮಾಣಗೊಂಡಿರುವ ಈ ರಂಗಭೂಮಿಯು ಕನ್ನಡದ ಚಲನಚಿತ್ರರಂಗದ ಪ್ರಸಿದ್ದ ನಟರಾಗಿದ್ದಂತಹ ಶಂಕರ್ ನಾಗ್ ಅವರ ನೆನಪಿಗಾಗಿ ಸಮರ್ಪಿತವಾದುದಾಗಿದೆ. ಈ ರಂಗಮಂದಿರವು 350 ಜನರಿಗೆ ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಮ್ಮೆ ಈ ರಂಗಮಂದಿರವು ಬೆಂಗಳೂರಿನ ದಕ್ಷಿಣಭಾಗದ ಪ್ರಮುಖವಾದ ಭಾಗದಲ್ಲಿ ನೆಲೆಸಿದ್ದು ಈ ರಂಗಭೂಮಿಯು ಹೆಚ್ಚಾಗಿ ಪ್ರತೀ ಸಲವೂ ತುಂಬಿ ತುಳುಕುತ್ತಿರುತ್ತದೆ. ರಂಗಶಂಕರವು ರಂಗಪ್ರದರ್ಶನಗಳನ್ನು ಪ್ರದರ್ಶಿಸುವುದರ ಜೊತೆಗೆ, ಪ್ರತಿ ವರ್ಷವೂ ವಿಷಯಾಧಾರಿತ ಕಾರ್ಯಕ್ರಮಗಳನ್ನು ಸಹ ನಡೆಸುತ್ತದೆ.

ವಿಳಾಸ : 36/2, ನಂ.36/2, 8ನೇ ಅಡ್ಡರಸ್ತೆ, ಜೆ.ಪಿ.ನಗರ, 2ನೇ ಹಂತ, ಬೆಂಗಳೂರು, ಕರ್ನಾಟಕ 560078

ಇತರ ವಿವರಗಳು : ಪಾರ್ಕಿಂಗ್ ಸೌಲಭ್ಯ : ಲಭ್ಯವಿದೆ / ವಿಶ್ರಾಂತಿ ಕೊಠಡಿಗಳು - ಲಭ್ಯವಿದೆ /

ಆಹಾರ ಮಳಿಗೆಗಳು : ಸ್ಥಳದ ಸುತ್ತಲೂ ಮತ್ತು ಆವರಣದ ಒಳಗೆ ಅನೇಕ ಕೆಫೆಗಳನ್ನು ಕಾಣಬಹುದು / ಪುಸ್ತಕ ಅಂಗಡಿ : ಲಭ್ಯವಿದೆ.

ಜಾಗೃತಿ ರೆನೆಸಾನ್ಸ್ ಥಿಯೇಟರ್

ಜಾಗೃತಿ ರಂಗಮಂದಿರವು ೨೦೦ ಆಸನ ಸಾಮರ್ಥ್ಯ ಮತ್ತು ಉತ್ತಮ ಧ್ವನಿ ಮತ್ತು ಧ್ವನಿಯ ಸೌಲಭ್ಯವನ್ನು ಹೊಂದಿರುವ ಅತ್ಯಂತ ಸುಸಜ್ಜಿತ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ ಕಲಾ ರಂಗಮಂದಿರಗಳಲ್ಲಿ ಒಂದಾಗಿದೆ, ಈ ಸ್ಥಳವು ಸಣ್ಣ ಕೆಫೆ ಮತ್ತು ಮೀಟಿಂಗ್ ಗಳಿಗೆ ಬೇಕಾಗುವ ಪ್ರತ್ಯೇಕ ಸ್ಥಳವನ್ನು ಸಹ ಹೊಂದಿದೆ, ಜಾಗೃತಿ ನಾಟಕ ಮತ್ತು ರಂಗಭೂಮಿಗೆ ಸಂಬಂಧಿಸಿದ ಕಾರ್ಯಾಗಾರಗಳನ್ನು ಸಹ ನಡೆಸುತ್ತದೆ. ನೀವು ನಾಟಕದ ಅನುಭವವನ್ನು ಈ ವಾರಾಂತ್ಯದಲ್ಲಿ ಹುಡುಕುತ್ತಿದ್ದರೆ, ಜಾಗೃತಿಗೆ ಏಕೆ ಭೇಟಿ ಕೊಡಬಾರದು?

ವಿಳಾಸ : ಜಾಗೃತಿ ರೆನೆಸಾನ್ಸ್ ಥಿಯೇಟರ್ , ವರ್ತೂರು ರಸ್ತೆ, ಆದರ್ಶ ಪಾಮ್ ಮಿಡೋಸ್ ಹತ್ತಿರ, ರಾಮಗೊಂಡನಹಳ್ಳಿ, ವೈಟ್ ಫೀಲ್ಡ್, ಬೆಂಗಳೂರು, ಕರ್ನಾಟಕ 56006.

ಇತರ ವಿವರಗಳು: ಪಾರ್ಕಿಂಗ್ ಸೌಲಭ್ಯ : ಲಭ್ಯವಿರುತ್ತದೆ / ವಿಶ್ರಾಂತಿ ಕೊಠಡಿಗಳು - ಲಭ್ಯವಿರುವ / ಆಹಾರ ಮಳಿಗೆಗಳು :ಇದರ ಆವರಣದೊಳಗೆ ಕೆಫೆ "ದಿ ಫ್ಯಾಟ್ ಚೆಫ್" ಮತ್ತು ಇದರ ಸುತ್ತಮುತ್ತಲೂ ಅನೇಕ ಆಹಾರ ಮಳಿಗೆಗಳನ್ನು ಹೊಂದಿದೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X