Search
  • Follow NativePlanet
Share
» »ಕುದುರೆಮುಖದಲ್ಲಿರುವ ಈ ಎಲ್ಲಾ ಸುಂದರ ತಾಣಗಳನ್ನು ನೋಡಿದ್ದೀರಾ?

ಕುದುರೆಮುಖದಲ್ಲಿರುವ ಈ ಎಲ್ಲಾ ಸುಂದರ ತಾಣಗಳನ್ನು ನೋಡಿದ್ದೀರಾ?

ಕುದುರೆಮುಖ ಚಿಕ್ಕಮಗಳೂರಿನಲ್ಲಿರುವ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಬಹಳಷ್ಟು ಜನರು ಚಿಕ್ಕಮಗಳೂರಿಗೆ ಹೋದಾದ ಕುದುರೆಮುಖ, ಮುಳ್ಳಯ್ಯನ ಗಿರಿ, ಬಾಬಾ ಬುಡಂಗಿರಿಗೆ ಮಾತ್ರ ಹೋಗಿ ಬರುತ್ತಾರೆ. ಆದರೆ ಕುದುರೆ ಮುಖದಲ್ಲೇ ಸಾಕಷ್ಟು ತಾಣಗಳಿವೆ ಅನ್ನೋದು ಅವರಿಗೆ ತಿಳಿದಿರೋದಿಲ್ಲ. ಹಾಗಾಗಿ ನಾವಿಂದು ಬರೀ ಕುದುರೆ ಮುಖ ಹಾಗೂ ಸುತ್ತಮುತ್ತಲು ನೀವು ನೋಡಲೇ ಬೇಕಾಗಿರುವ ಪ್ರಮುಖ ತಾಣಗಳ ಬಗ್ಗೆ ತಿಳಿಸಲಿದ್ದೇವೆ.

ಹನುಮಾನ್ ಗುಂಡಿ ಜಲಪಾತ

ಹನುಮಾನ್ ಗುಂಡಿ ಜಲಪಾತ

PC:vinay
ಕುದ್ರೆಮುಖದಿಂದ 15 ಕಿ.ಮೀ ದೂರದಲ್ಲಿರುವ ಹನುಮಾನ್ ಗುಂಡಿ ಜಲಪಾತ ಶೃಂಗೇರಿ ಮತ್ತು ಕುದುರೆಮುಖದ ನಡುವಿನ ಮುಖ್ಯರಸ್ತೆಗೆ ಹತ್ತಿರದಲ್ಲಿದೆ. 100 ಅಡಿ ಎತ್ತರದಿಂದ ಬೀಳುವ ಈ ಜಲಪಾತವು ಪ್ರಶಾಂತವಾದ ಸ್ಥಳದಲ್ಲಿದೆ. ಮುಖ್ಯ ರಸ್ತೆಯಿಂದ ಸ್ವಲ್ಪ ದೂರ ನಡೆದರೆ ಫಾಲ್ಸ್ ತಲುಪ ಬಹುದು . ಸ್ನಾನ ಮಾಡಲು ಇದು ಸುರಕ್ಷಿತ ಸ್ಥಳವಾಗಿದೆ ಮತ್ತು ಜಲಪಾತದ ಅಡಿಯಲ್ಲಿ ನೇರವಾಗಿ ಹೋಗಲು ಸಾಧ್ಯವಿದೆ. ಮಾನ್ಸೂನ್ ನಂತರ ಈ ಜಲಪಾತವನ್ನು ಭೇಟಿ ಮಾಡಲು ಅತ್ಯುತ್ತಮ ಕಾಲವಾಗಿದೆ. ಈ ಜಲಪಾತವು ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ ಮತ್ತು ಪ್ರವೇಶ ಶುಲ್ಕವನ್ನು ಗೇಟ್‌ನಲ್ಲಿ ವಿಧಿಸಲಾಗುವುದು.

ಕಳಸ

ಕಳಸ

PC:Wind4wings
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕಲಶವನ್ನು ದೇವಾಲಯದ ಪಟ್ಟಣ ಎಂದೂ ಕರೆಯಲ್ಪಡುತ್ತದೆ. ಈ ಸುಂದರ ನಗರವು ಭದ್ರಾ ನದಿಯ ತೀರದಲ್ಲಿದೆ. ಕಳಸವು ಶಿವನಿಗೆ ಸಮರ್ಪಿತವಾದ ಶ್ರೀ ಕಲಾಶೇಶ್ವರ ದೇವಾಲಯಕ್ಕೆ ನೆಲೆಯಾಗಿದೆ. ದಕ್ಷಿಣ ಭಾರತದ ವಾಸ್ತುಶಿಲ್ಪದ ಪರಂಪರೆಯನ್ನು ಪ್ರದರ್ಶಿಸುವ ಕಳಸವು ವಿವಿಧ ರೀತಿಯ ಶೈಲಿಗಳು ಮತ್ತು ಸಮೃದ್ಧ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿನ್ಯಾಸ ತತ್ತ್ವಗಳನ್ನು ಒಳಗೊಂಡಿದೆ. ಈ ಪ್ರಾಂತ್ಯದ ಎಲ್ಲಾ ಯಾತ್ರಿಗಳು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ದೇವಾಲಯದ ಪಟ್ಟಣಕ್ಕೆ ಬರುತ್ತಾರೆ.

ಗಂಗಾ ಮೂಲ

ಗಂಗಾ ಮೂಲ

PC: Ashwatham
ವರಾಹ ಪರ್ವತ ಎಂದೂ ಕರೆಯಲ್ಪಡುವ ಈ ಪರ್ವತವು ಸಮುದ್ರ ಮಟ್ಟದಿಂದ 1458 ಮೀಟರ್ ಎತ್ತರದಲ್ಲಿದೆ. ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದೆ. ತುಂಗಾ, ಭದ್ರ ಮತ್ತು ನೇತ್ರಾವತಿ ನದಿಗಳ ಮೂಲ ಇಲ್ಲಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳು ಎಂದರೆ ಭಗವತಿ ದೇವಸ್ಥಾನ ಮತ್ತು ವರಾಹದ 6 ಅಡಿ ಎತ್ತರವಿರುವ ಒಂದು ಗುಹೆ. ಇದು ಮ್ಯಾಗ್ನಾಟೈಟ್-ಕ್ವಾರ್ಟ್ಜೈಟ್ ನಿಕ್ಷೇಪಗಳೊಂದಿಗೆ ಸಮೃದ್ಧವಾಗಿದೆ. ಇದು 107 ಕ್ಕಿಂತ ಹೆಚ್ಚು ಜಾತಿಯ ಪಕ್ಷಿಗಳಿಂದ ಕೂಡಿದ ಸುಂದರ ತಾಣವಾಗಿದೆ. ಶೃಂಗೇರಿ ಹಾಗೂ ಕುದುರೆಮುಖ ರಸ್ತೆಯ ಮಧ್ಯದಲ್ಲಿ 2 ಕಿ.ಮೀ ಟ್ರೆಕ್ಕಿಂಗ್ ಮೂಲಕ ಈ ತಾಣವನ್ನು ತಲುಪಬಹುದು.

ಜನತ ಮಾರ್ಕೇಟ್

ಜನತ ಮಾರ್ಕೇಟ್

PC:Prof tpms
ಕುದ್ರೆಮುಖದ ಜನತ ಮಾರ್ಕೆಟ್ ಚಿಕ್ಕದಾದ ಪ್ರಮುಖವಾದ ಶಾಪಿಂಗ್ ಸೆಂಟರ್ ಆಗಿದ್ದು, ಸುಂದರವಾದ ಪಟ್ಟಣ ಮತ್ತು ಸಣ್ಣ ಸ್ಮಾರಕಗಳನ್ನು ಇಲ್ಲಿ ಕಾಣಬಹುದು. ಇದನ್ನು ಮೊದಲು ಭದ್ರಾ ಮಾರ್ಕೆಟ್ ಎಂದು ಕರೆಯಲಾಗುತ್ತಿತ್ತು. ಕುದುರೆಮುಖದಲ್ಲಿರುವ ಸಿಟಿ ಶಾಪಿಂಗ್‌ನಲ್ಲಿ ಗಮಗಮಿಸುವ ಟೀ ಪುಡಿ ಸಿಗುತ್ತದೆ. ಹಾಗೆಯೇ ಮಸಾಲೆ ಪದಾರ್ಥಗಳೂ ಸಿಗುತ್ತವೆ. ಕುದುರೆಮುಖಕ್ಕೆ ಬಂದರೆ ಟೀ ಪುಡಿಯನ್ನು ಮನೆಗೆ ಕೊಂಡೊಯ್ಯುವುದನ್ನು ಮಾತ್ರ ಮರೆಯಬೇಡಿ.

ಲಕ್ಯಾ ಅಣೆಕಟ್ಟು

ಲಕ್ಯಾ ಅಣೆಕಟ್ಟು

PC:Vikas.rumale
ಭದ್ರಾ ನದಿಯ ಉಪನದಿಯಾದ ಲಕ್ಯಾದಲ್ಲಿ ಕಟ್ಟಲಾಗಿರುವ ಈ ಅಣೆಕಟ್ಟು 100 ಮೀ ಎತ್ತರದಲ್ಲಿದೆ. ಕುದ್ರೆಮುಖ ಕಬ್ಬಿಣದ ಗಣಿ ಕಂಪೆನಿಯು ತನ್ನ ಗಣಿಗಾರಿಕೆ ಕಾರ್ಯಾಚರಣೆಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಈ ಅಣೆಕಟ್ಟನ್ನು ನಿರ್ಮಿಸಿದೆ. ಬೆಟ್ಟದ ಭೂಪ್ರದೇಶಗಳು ಮತ್ತು ತೇಲುವ ನದಿಗಳಿಂದ ಈ ಪ್ರದೇಶದ ಸುಂದರವಾದ ಸೌಂದರ್ಯವು ಪ್ರವಾಸಿಗರಿಗೆ ಭೇಟಿ ನೀಡುವ ಸ್ಥಳವಾಗಿದೆ.

ಹೊರನಾಡು ಅನ್ನಪೂರ್ಣೇಶ್ವರಿ

ಹೊರನಾಡು ಅನ್ನಪೂರ್ಣೇಶ್ವರಿ

PC:Gnanapiti
ಕುದುರೆಮುಖದಿಂದ 29 ಕಿ.ಮೀ ದೂರದಲ್ಲಿರುವ ಹೊರಾನಾಡು ಬಸ್ ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿರುವ ಪ್ರಸಿದ್ಧ ದೇವಾಲಯವೇ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ. ಶ್ರೀ ಅನ್ನಪೂರ್ಣೇಶ್ವರಿ ದೇವಾಲಯವು ಭದ್ರಾ ನದಿಯ ದಡದಲ್ಲಿದೆ ಮತ್ತು ಶ್ರೀ ಕ್ಷೇತ್ರದ ಹೊರನಾಡು ಎಂದೂ ಕರೆಯಲ್ಪಡುತ್ತದೆ. ಹೊರನಾಡು ಆದಿ ಶಕ್ತಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ, ಈ ಪವಿತ್ರ ನಗರವು ಯಾತ್ರಾರ್ಥಿಗಳು ಮತ್ತು ಭಕ್ತರನ್ನು ಆಕರ್ಷಿಸುತ್ತದೆ. ದೇವಾಲಯದೊಳಗೆ ಶುದ್ಧ ಚಿನ್ನದ ಪ್ರತಿಮೆಯನ್ನು ಪ್ರತಿನಿಧಿಸುವ ಅನ್ನಪೂರ್ಣೇಶ್ವರಿ ವಿಗ್ರಹವಿದೆ. ಈ ದೇವಿಯನ್ನು ಪೂಜಿಸಿದರೆ ಅನ್ನಕ್ಕೆ ಕೊರತೆ ಉಂಟಾಗಲಾರದು ಎನ್ನಲಾಗುತ್ತದೆ. ಈ ದೇವಾಲಯವನ್ನು ಅಗಸ್ತ್ಯ ಮಹರ್ಷಿ ಸ್ಥಾಪಿಸಿದರೆಂದು ನಂಬಲಾಗಿದೆ.

ಕಡಂಬಿ ಜಲಪಾತ

ಕಡಂಬಿ ಜಲಪಾತ

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಡಂಬಿ ಜಲಪಾತವು ಅದ್ಭುತವಾದ ಜಲಪಾತವಾಗಿದೆ. ಇದು ಕುದುರೆಮುಖದಿಂದ 12ಕಿ.ಮೀ ದೂರದಲ್ಲಿದೆ. ಕಡಂಬಿ ಜಲಪಾತವು ಬಂಡೆಗಳ ಮೂಲಕ 30 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಇದು ಶೃಂಗೇರಿ ಮತ್ತು ಕುದುರೆಮುಖದ ನಡುವಿನ ಪ್ರಮುಖ ರಸ್ತೆಯ ಸಮೀಪದಲ್ಲಿದೆ ಮತ್ತು ಹತ್ತಿರದ ಸೇತುವೆಯಿಂದ ಇದನ್ನು ಕಾಣಬಹುದು. ಸುತ್ತಮುತ್ತಲಿನ ಸೌಂದರ್ಯ ಮತ್ತು ನೀರಿನ ಸೌಂದರ್ಯವನ್ನು ಆನಂದಿಸಲು ಪ್ರವಾಸಿಗರು ಈ ಜಲಪಾತಕ್ಕೆ ಹೋಗುತ್ತಾರೆ. ಮಾನ್ಸೂನ್ ಸಮಯದಲ್ಲಿ ಜಲಪಾತದಲ್ಲಿ ನೀರಿನ ಪ್ರವಾಹವು ಹೆಚ್ಚು ಇರುತ್ತದೆ. ಕದಂಬಿ ಜಲಪಾತವು ಮಳೆಗಾಲದಲ್ಲಿ ಅದ್ಭುತ ದೃಶ್ಯವನ್ನು ನೀಡುತ್ತದೆ.

ಕುದುರೆಮುಖ ಚಾರಣ

ಕುದುರೆಮುಖ ಚಾರಣ

PC:Wind4wings
ಕರ್ನಾಟಕದ ಅತ್ಯುತ್ತಮ ಚಾರಣ ತಾಣಗಳಲ್ಲಿ ಕುದುರೆಮುಖವು ಒಂದು. ಈ ಬೆಟ್ಟವು 1894 ಮೀಟರ್ ಎತ್ತರದಲ್ಲಿದೆ. ಇದು ಪಶ್ಚಿಮ ಘಟ್ಟದ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿದೆ . ಕುದುರೆಮುಖ ಪಟ್ಟಣದಲ್ಲಿ ಚಾರಣ ಮಾಡಲು ಫಾರೆಸ್ಟ್‌ ಆಫೀಸರ್‌ನ ಅನುಮತಿ ಪಡೆಯುವುದು ಅವಶ್ಯಕವಾಗಿದೆ. ನಿರ್ದಿಷ್ಟ ಋತುಗಳಲ್ಲಿ ಕ್ಯಾಂಪಿಂಗ್ ಅನ್ನು ಇಲ್ಲಿ ಅನುಮತಿಸಲಾಗುವುದಿಲ್ಲ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Vikas.rumale

ಕುದುರೆಮುಖಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಮಂಗಳೂರು ರೈಲು ನಿಲ್ದಾಣ. ಇದು ಅನೇಕ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ ಮತ್ತು ಟ್ಯಾಕ್ಸಿಗಳಿಂದ ಸುಲಭವಾಗಿ ಕುದುರೆಮುಖವನ್ನು ತಲುಪಬಹುದು. ಮಂಗಳೂರಿನಿಂದ ನಿಯಮಿತವಾಗಿ ಬಸ್ಸುಗಳ ಮೂಲಕ ಕುದುರೆಮುಖ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X