Search
  • Follow NativePlanet
Share
» »2020 ರಲ್ಲಿ ಮಿಜೋರಾಂ ನಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮವಾದ ಸ್ಥಳಗಳು

2020 ರಲ್ಲಿ ಮಿಜೋರಾಂ ನಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮವಾದ ಸ್ಥಳಗಳು

ಮಿಜೋರಾಂ ಬಗ್ಗೆ ಹೇಳಲು ಬಹಳಷ್ಟಿದೆ, ಯಾಕೆಂದರೆ ಅದರ ನೈಸರ್ಗಿಕ ಕೊಡುಗೆಗಳು, ಅಲ್ಲಿಯ ವರ್ಣರಂಜಿತ ಉಡುಗೆ ತೊಡುಗೆಗಳು, ವಿವಿಧ ಬಗೆಯ ಆಹಾರಗಳು ಇತ್ಯಾದಿಗಳಿಂದ ಈ ಪ್ರದೇಶವನ್ನು ವಿಭಿನ್ನವಾಗಿಸಿವೆ. ಇದರ ಜೊತೆಗೆ ಮಿಜೋರಾಂನ ಜನರು ಮತ್ತು ಅಲ್ಲಿಯ ವಿಭಿನ್ನ ಶೈಲಿಯ ಸಂಸ್ಕೃತಿ ಇವೆಲ್ಲ ಸೇರಿ ಈ ಸ್ಥಳಕ್ಕೆ ಒಂದು ವಿಶಿಷ್ಟವಾದ ಸೆಳೆತವನ್ನು ಉಂಟು ಮಾಡುತ್ತದೆ.

ಈ ಸ್ಥಳದಲ್ಲಿಯ ಬೆಟ್ಟಗಳು, ಬಯಲು ಪ್ರದೇಶಗಳಲ್ಲಿ ಈ ಸ್ಥಳದ ಸೌಂದರ್ಯತೆಯು ಅಡಗಿವೆ, ನಿಮ್ಮ ಮನಸ್ಸಿನಲ್ಲಿ ಇನ್ನೂ ಮಿಜೋರಾಂ ಬಗ್ಗೆ ಇನ್ನೂ ಏನೂ ಯೋಚನೆ ಮೂಡದಿದ್ದಲ್ಲಿ, ನೀವು ಮಿಜೋರಾಂಗೆ ಭೇಟಿ ಏಕೆ ಕೊಡಬೇಕು ಎನ್ನುವುದಕ್ಕೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯಿದೆ.

ಮಿಝೋರಾಂ ಗೆ ಭೇಟಿ ನೀಡಲು ಉತ್ತಮ ಸಮಯ

ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಚಳಿಗಾಲದ ಅವಧಿಯಲ್ಲಿ, ಅಂದರೆ, ಅಕ್ಟೋಬರ್‌ನಿಂದ ಜನವರಿವರೆಗೆ. ಈ ಅಭಯಾರಣ್ಯವು ಹುಲಿ, ಆನೆಗಳು ಮತ್ತು ಲ್ಯಾಂಗರ್‌ಗಳಂತಹ ಅನೇಕ ವಿಶಿಷ್ಟ ಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ. ಒಟ್ಟಾರೆಯಾಗಿ, ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ಉತ್ತಮವಾದ ವನ್ಯಜೀವಿಗಳನ್ನು ಕಂಡುಹಿಡಿಯಲು ದಂಪಾ ವನ್ಯಜೀವಿ ಅಭಯಾರಣ್ಯವು ಅತ್ಯುತ್ತಮ ಸ್ಥಳವಾಗಿದೆ.

ಈ ವರ್ಷ ಅಂದರೆ 2020ರಲ್ಲಿ ನೀವು ಮಿಜೋರಾಂಗೆ ಪ್ರವಾಸ ಮಾಡಲು ಯೋಚಿಸುತ್ತಿದ್ದಲ್ಲಿ ಇಲ್ಲಿ ಭೇಟಿಗೆ ಯೋಗ್ಯವಾದ ಎಂಟು ಅತ್ಯುತ್ತಮವಾದ ಸ್ಥಳಗಳ ಬಗ್ಗೆ ಈ ಲೇಖನದಲ್ಲಿ ಓದಿ ತಿಳಿಯಿರಿ.


1. ಖ್ವಾಂಗ್ಲುಂಗ್ ವನ್ಯಜೀವಿ ಅಭಯಾರಣ್ಯ

1. ಖ್ವಾಂಗ್ಲುಂಗ್ ವನ್ಯಜೀವಿ ಅಭಯಾರಣ್ಯ

ನಿಮ್ಮ ರಜೆಯನ್ನು ನೀವು ಪ್ರಕೃತಿಯ ಜೊತೆ ಕಳೆಯಲು ಬಯಸುವಿರಾದರೆ ಖ್ವಾಂಗ್ಲುಂಗ್ ವನ್ಯಜೀವಿ ಅಭಯಾರಣ್ಯವು ನೀವು ಭೇಟಿ ಕೊಡಲು ಯೋಗ್ಯವಾದ ಸ್ಥಳವಾಗಿದೆ. ಐಜಾಲ್ ನಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಈ ಅಭಯಾರಣ್ಯವು ಜೀವವೈವಿಧ್ಯತೆ ಮತ್ತು ಅರಣ್ಯ ಪ್ರದೇಶದಿಂದಾಗಿ ಮಿಜೋರಾಂ ನ ಅತೀ ಹೆಚ್ಚು ಭೇಟಿ ಮಾಡುವ ಸ್ಥಳಗಳಲ್ಲಿ ಒಂದೆನಿಸಿದೆ.

ವನ್ಯಜೀವಿಗಳಿಗೆ ಮೀಸಲಾಗಿರುವ ಈ ಬೃಹತ್ ಸ್ಥಳವು 35 ಚದರ ಕಿ.ಮೀ ವಿಸ್ತಾರವಾಗಿದೆ ಮತ್ತು ಹಲವಾರು ಅಪರೂಪದ ಮತ್ತು ವಿಲಕ್ಷಣ ಪ್ರಾಣಿಗಳಾದ ರಾಯಲ್ ಬಂಗಾಳ ಟೈಗರ್, ಗಿಬ್ಬನ್, ಸಂಬಾರ್, ಬಾರ್ಕಿಂಗ್ ಜಿಂಕೆ, ಸಿರೊ ಮತ್ತು ಹೂಲಾಕ್‌ಗಳ ವಾಸಸ್ಥಾನವಾಗಿದೆ. ವನ್ಯಜೀವಿಗಳಲ್ಲದೆ ಈ ಪ್ರದೇಶವು ಸೊಂಪಾದ ಕಣಿವೆಗಳು ಮತ್ತು ಅಭಯಾರಣ್ಯದ ಅದ್ಭುತ ನೋಟಗಳನ್ನು ಹೊಂದಿದ್ದು ಇದನ್ನು ನೋಡುವುದನ್ನು ತಪ್ಪಿಸಿಕೊಳ್ಳುವುದು ಕಷ್ಟ!

2. ಸೊಲೊಮನ್ ದೇವಾಲಯ

2. ಸೊಲೊಮನ್ ದೇವಾಲಯ

ಐಜ್ವಾಲ್ ಜಿಲ್ಲೆಯ ಹೃದಯ ಭಾಗದಲ್ಲಿರುವ ಸೋಲೊಮನ್ ದೇವಾಲಯವು ಕ್ರೈಸ್ತ ಧರ್ಮದ ಒಂದು ಅತ್ಯಂತ ಪ್ರಮುಖವಾದ ಸ್ಥಳವಾಗಿದೆ. ಕೊಹ್ರಾನ್ ಥಿಯಾಂಗ್ಲಿಮ್ ಎನ್ನುವ ಧಾರ್ಮಿಕ ಪಂಥವು ಈ ಪ್ರಸಿದ್ದ ಪ್ರವಾಸಿ ಆಕರ್ಷಣೆಯನ್ನು ನಿರ್ಮಿಸಿತು. ಇದನ್ನು 1997 ರಲ್ಲಿ ನಿಯೋಜಿಸಲಾಯಿತು ಮತ್ತು ಇದನ್ನು ಪ್ರಯಾಸದಿಂದ ವಾಸ್ತವಾಂಶಕ್ಕೆ ತರುವಲ್ಲಿ ಸುಮಾರು ಎರಡು ದಶಕಗಳನ್ನು ತೆಗೆದುಕೊಂಡಿತು. ಪ್ರಾಚೀನ ಬಿಳಿ ಅಮೃತಶಿಲೆಯಿಂದ ನಿರ್ಮಾಣವಾದ ಮತ್ತು ಅಸಾಧಾರಣ ಕೌಶಲ್ಯಗಳನ್ನು ಹೊಂದಿರುವ ಕಲಾವಿದರು ರಚಿಸಿರುವ ಸೊಲೊಮನ್ ದೇವಾಲಯವು ಮಿಜೋರಾಂನಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.

3. ಮಿಜೋರಾಂ ಸ್ಟೇಟ್ ಮ್ಯೂಸಿಯಂ

3. ಮಿಜೋರಾಂ ಸ್ಟೇಟ್ ಮ್ಯೂಸಿಯಂ

ಸೊಲೊಮಾನ್ ದೇವಾಲಯದಿಂದ ಸುಮಾರು 5ಕಿ.ಮೀ ದೂರದಲ್ಲಿರುವ ಮಿಜೋರಾಂ ಸ್ಟೇಟ್ ಮ್ಯೂಸಿಯಂ ಸ್ಥಳೀಯ ಇತಿಹಾಸವನ್ನು ಇಷ್ಟಪಡುವವರಿಗೆ ಸಂತೋಷವನ್ನು ನೀಡುತ್ತದೆ. ಮಿಜೋರಾಂ ನ ಅತ್ಯ್ತುತ್ತಮ ಪ್ರವಾಸಿ ಸ್ಥಳಗಳಲ್ಲಿ ಈ ವಸ್ತುಸಂಗ್ರಹಾಲಯವೂ ಒಂದಾಗಿದ್ದು ಇಲ್ಲಿನ ಜನರ ಕಲಾಕೃತಿಗಳು ಮತ್ತು ಪ್ರಾಚೀನ ವಸ್ತು ಸಂಗ್ರಹಗಳನ್ನು ಉಳಿಸಿಕೊಂಡು ರಕ್ಷಣೆ ಮಾಡುತ್ತಿರುವ ಅಧಿಕಾರಿಗಳಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

ಈ ವಸ್ತುಸಂಗ್ರಹಾಲಯವು ಮೀಜೋ ಜನರ ಸಾಂಪ್ರದಾಯಿಕ ಜೀವನ ಶೈಲಿಯನ್ನು ಹಡಗುಗಳು, ಬಟ್ಟೆ ಮತ್ತು ಪರಿಕರಗಳಂತಹ ದೈನಂದಿನ ವಸ್ತುಗಳ ಮೂಲಕ ಪ್ರದರ್ಶಿಸುತ್ತದೆ ಅಲ್ಲದೆ ಮೀಜೋ ಬುಡಕಟ್ಟು ಜನರ ಇತಿಹಾಸವನ್ನು ತಿಳಿಯಲು ಆಸಕ್ತಿ ಉಳ್ಳವರು ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವುದು ನಿಜವಾಗಿಯೂ ಯೋಗ್ಯವಾದುದಾಗಿದೆ.

 4. ಫಾಂಗ್ ಪುಯಿ ತ್ಲಾಂಗ್ (ನೀಲಿ ಪರ್ವತ)

4. ಫಾಂಗ್ ಪುಯಿ ತ್ಲಾಂಗ್ (ನೀಲಿ ಪರ್ವತ)

ಐಜಾಲ್ ನಿಂದ ಸುಮಾರು 230 ಕಿ.ಮೀ ದೂರದಲ್ಲಿ ಹಾಗೂ ಸಮುದ್ರ ಮಟ್ಟದಿಂದ ಸುಮಾರು 2,330 ಮೀ ಎತ್ತರದಲ್ಲಿ ರುವ ಫ್ಹಾಂಗ್ ಫುಯಿತ್ಲಾಂಗ್ ಅಥವಾ ನೀಲಿ ಪರ್ವತವೆಂದು (ಬ್ಲೂ ಮೌಂಟನ್) ಕರೆಯಲ್ಪಡುತ್ತದೆ ಇದು ಮಿಜೋರಾಂ ಅತ್ಯಂತ ಎತ್ತರವಾದ ಶಿಖರವೆಂದು ಕರೆಯಲ್ಪಡುತ್ತದೆ.

ಪ್ರಶಾಂತವಾದ ಪರ್ವತ ರಾಜ್ಯದಲ್ಲಿ ಜನರು ಮತ್ತು ಪ್ರಕೃತಿಯ ಜೊತೆಗೆ ನಿಕಟ ಸಂಬಂಧವನ್ನು ಕಾಣಬಹುದಾಗಿದ್ದು, ಇದು ಅತ್ಯಂತ ಅದ್ಬುತವಾದ ಮತ್ತು ವಿಭಿನ್ನವಾದ ಅನುಭವವನ್ನು ಇಲ್ಲಿಗೆ ತಂದು ಕೊಡುತ್ತದೆ. ಪರ್ವತ, ಆಡುಗಳ ಹಿಂಡುಗಳು ಮತ್ತು ಪಕ್ಷಿಗಳ ಹಿಂಡುಗಳಿಂದ ತುಂಬಿಹೋಗಿರುವ ಈ ಸುಂದರವಾದ ಪರ್ವತದ ಇಳಿಜಾರುಗಳಲ್ಲಿ ಕನಿಷ್ಠ ಅಥವಾ ಯಾವುದೇ ಜನರ ವಾಸವಿಲ್ಲದಿರುವುದರಿಂದ ಅವುಗಳು ನಿಷ್ಕಳಂಕವಾಗಿ ಸ್ವಚ್ಚವಾಗಿದೆ. ಆದ್ದರಿಂದ, ಫಾಂಗ್‌ಪುಯಿ ತ್ಲಾಂಗ್ ಚಾರಣದ ಸರ್ಕ್ಯೂಟ್‌ನಲ್ಲಿ ಮಿಜೋರಾಂನಲ್ಲಿ ಭೇಟಿ ನೀಡುವ ಜನಪ್ರಿಯ ಸ್ಥಳವಾಗಿದೆ.

5. ವಾಂಟಾಂಗ್ ಫಾಲ್ಸ್

5. ವಾಂಟಾಂಗ್ ಫಾಲ್ಸ್

750 ಅಡಿ ಎತ್ತರದಿಂದ ಬೀಳುವ ವಾಂಟಾಂಗ್ ಫಾಲ್ಸ್ ಮಿಜೋರಾಂನ ಅತಿ ಎತ್ತರದ ಜಲಪಾತವಾಗಿದೆ. ಇದು ಐಜಾಲ್‌ನಿಂದ 135 ಕಿ.ಮೀ ದೂರದಲ್ಲಿದೆ ಮತ್ತು ಇದು ಪ್ರಪಂಚದಾದ್ಯಂತ ಪ್ರಕೃತಿ ಪ್ರೇಮಿಗಳು ಮತ್ತು ಪ್ರವಾಸಿಗರ ಜನಪ್ರಿಯ ಆಕರ್ಷಣೆಯ ಸ್ಥಳಗಿದೆವಾಗಿದೆ.ಅಲ್ಲದೆ, ಸುತ್ತಮುತ್ತಲಿನ ಬೆಟ್ಟಗಳು ಮತ್ತು ದಟ್ಟವಾದ ಕಾಡುಗಳನ್ನು ಆನಂದಿಸಲು ಪಾದಯಾತ್ರೆ ಅಥವಾ ಚಾರಣದಂತಹ ಚಟುವಟಿಕೆಗಳಲ್ಲಿ ಒಬ್ಬರು ತೊಡಗಬಹುದು. ಇದಲ್ಲದೆ ಈ ಮನೋಹರ ಜಲಪಾತವನ್ನು ದೂರದಿಂದಲೇ ನೋಡಬಹುದು ಇದು ದೂರದಿಂದ ನಿಜಕ್ಕೂ ಮೋಡಿಮಾಡುವ ದೃಶ್ಯವಾಗಿದೆ.

6. ರಿಹ್ ದಿಲ್

6. ರಿಹ್ ದಿಲ್

ಮಯಾನ್ಮಾರ್ ಮತ್ತು ಮಿಜೋರಾಂ ನ ಗಡಿಯಲ್ಲಿ ನೆಲೆಯಾಗಿರುವ ಈ ಹೃದಯಾಕೃತಿಯ ರಿಹ್ ದಿಲ್ ಒಂದು ಸುಂದರವಾದ ಕೊಳವಾಗಿದೆ. ಮಿಜೋ ಜನಪದ ಕಥೆಯ ಪ್ರಕಾರ ಈ ಸರೋವರವು ಮರಣಾನಂತರದ ಜೀವನಕ್ಕೆ ದಾಟುವ ಮೊದಲು ಆತ್ಮಗಳು ವಿಶ್ರಾಂತಿ ಪಡೆಯುವ ಸ್ಥಳವೆಂದು ನಂಬಲಾಗಿದೆ. ಈ ಸರೋವರವು ಮಿಜೋ ಜನರಿಗೆ ಮತ್ತು ವಿಶೇಷ ಪರವಾನಗಿ ಹೊಂದಿರುವ ಪ್ರವಾಸಿಗರಿಗೆ ಮುಕ್ತವಾಗಿದೆ. ಪ್ರವಾಸಿಗರು ಈ ನೈಸರ್ಗಿಕ ಧಾಮವನ್ನು ಅನ್ವೇಷಿಸಲು, ವಿಶೇಷ ಆಯುಕ್ತರ ಕಚೇರಿಯಿಂದ ವಿಶೇಷ ಅನುಮತಿಯನ್ನು ಪಡೆಯಬೇಕಾಗಿದೆ.

7. ಟಾಮ್ದಿಲ್

7. ಟಾಮ್ದಿಲ್

ಟಾಮ್ದಿಲ್ (ಟಾಮ್ ಕೊಳ) ಒಂದು ನೈಸರ್ಗಿಕ ಸರೋವರವಾಗಿದ್ದು, ವಿಶೇಷವಾದ ಪ್ರಬೇಧದ ಮೀನುಗಳು ಮತ್ತು ಸಿಗಡಿಗಳಿಗೆ ಹೆಸರುವಾಸಿಯಾಗಿದೆ ಈ ಸ್ಥಳಕ್ಕೆ ಐಜಾಲ್ ನಿಂದ ಸುಮಾರು 90 ನಿಮಿಷಗಳ ಪ್ರಯಾಣವಿರುತ್ತದೆ ಈ ಅದ್ಭುತವಾದ ಸರೋವರವು ತನ್ನಲ್ಲಿ ಅನೇಕ ಉತ್ತಮವಾದ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಮಾಡುತ್ತದೆ.

ಅವುಗಳಲ್ಲಿ ದೋಣಿವಿಹಾರ, ಕಾಡುಗಳಲ್ಲಿ ಸಫಾರಿ,(ಕೊಳದ ಪಕ್ಕದಲ್ಲಿರುವ ಕಾಡಿನಲ್ಲಿ), ಅಥವಾ ಕ್ಯಾಂಪಿಂಗ್ ಮಾಡುವ ಆಯ್ಕೆಗಳನ್ನೂ ಕೂಡಾ ಇಲ್ಲಿ ಒದಗಿಸಲಾಗುತ್ತದೆ ಈ ಎಲ್ಲಾ ಚಟುವಟಿಕೆಗಳನ್ನು ಈ ಸರೋವರದಲ್ಲಿರುವಾಗ ಮಾಡಬಹುದಾಗಿದೆ. ಟಾಮ್ದಿಲ್ ಎಲ್ಲಾ ತರಹದ ಮತ್ತು ಎಲ್ಲಾ ವಯೋಮಾನದ ಜನರನ್ನು ಆಕರ್ಷಣೆ ಮಾಡುತ್ತದೆ.

8. ದಂಪಾ ವನ್ಯಜೀವಿ ಅಭಯಾರಣ್ಯ

8. ದಂಪಾ ವನ್ಯಜೀವಿ ಅಭಯಾರಣ್ಯ

ದಂಪಾ ಹುಲಿ ಸಂರಕ್ಷಣಾ ಕೇಂದ್ರವಾಗಿದ್ದು, ಇದು ಐಜಾಲ್ ನಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಪಶ್ಚಿಮ ಫೈಲೆಂಗ್ ಜಿಲ್ಲೆಯಲ್ಲಿದೆ. ಪಶ್ಚಿಮ ಫೈಲೆಂಗ್‌ನಲ್ಲಿ ಉಳಿದುಕೊಂಡಿರುವ ಅರಣ್ಯ ಅಧಿಕಾರಿಯನ್ನು ಭೇಟಿ ಮಾಡುವ ಮೂಲಕ ದಂಪಾ ಅರಣ್ಯಕ್ಕೆ ಭೇಟಿ ನೀಡುವ ಪರವಾನಗಿಯನ್ನು ನೇರವಾಗಿ ಪಡೆಯಬಹುದು ಅಥವಾ ಐಜಾಲ್‌ನಲ್ಲಿರುವ ಅರಣ್ಯ ಇಲಾಖೆಯಿಂದ ತೆಗೆದುಕೊಳ್ಳಬಹುದು.


Read more about: mizoram ಮಿಜೋರಾಂ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X