• Follow NativePlanet
Share
Menu
» »2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

Written By:

ಹೊಸವರ್ಷಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಹೊಸವರ್ಷವನ್ನು ತಮ್ಮ ನೆನಪಿನಲ್ಲಿ ಉಳಿಯುವ ಹಾಗೆ ಯಾವುದಾದರೂ ಸುಂದರವಾದ ಪ್ರದೇಶದಲ್ಲಿ ಸಂಭ್ರಮ ಆಚರಿಸಬೇಕು ಎಂದು ಅಂದುಕೊಳ್ಳುವುದು ಸಹಜ. ಆ ಸ್ಥಳದಲ್ಲಿ ಹೊಸವರ್ಷದ ಸಂಭ್ರಮವನ್ನು ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭೂತಿಯನ್ನು ಪಡೆಯಬೇಕಾದರೆ ಲೇಖನದಲ್ಲಿನ ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ.

ಲೇಖನದಲ್ಲಿ ಹೇಳಬೇಕಾಗಿರುವ ತಾಣಗಳೆಲ್ಲಾ ಜಲಾಶಯಗಳಾಗಿದ್ದು, ಸುಂದರವಾದ ಜಲಾಶಯಗಳ ಮಧ್ಯೆ ಸಂಭ್ರಮ ಆಚರಣೆ ಮಾಡಲು ಸೂಕ್ತವಾದ ಸ್ಥಳಗಳ ಬಗ್ಗೆ ಲೇಖನದಲ್ಲಿ ಮಾಹಿತಿಯನ್ನು ಪಡೆಯೋಣ ಬನ್ನಿ.

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ತೆಲಂಗಾಣ ರಾಜ್ಯದ ರಾಜಧಾನಿ ನಗರವಾದ ಹೈದರಾಬಾದ್ ನಗರದ ಬಳಿ ಸ್ಥಿತವಿರುವ ಹುಸೈನ್ ಸಾಗರ ಜಲಾಶಯದ ಸುಂದರ ನೋಟ. ಇದು ಹೈದರಾಬಾದ್ ನಗರ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ.

Poreddy Sagar

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಆಂಧ್ರದ ಬಂದರು ನಗರಿ ವೈಜಾಗ್ ಅಥವಾ ವಿಶಾಖಾಪಟ್ಟಣದಲ್ಲಿರುವ ಮುಡಸರ್ಲೋವಾ ಜಲಾಶಯದ ಸುಂದರ ನೋಟ.

Adityamadhav83

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ವ್ಯಾಪಿಸಿರುವ ಭದ್ರಾ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಭದ್ರಾ ಜಲಾಶಯವು ನಿಸರ್ಗಪ್ರಿಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

balu

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಳಿಯಿರುವ ನವಿಲುತೀರ್ಥ ಜಲಾಶಯವು ಸಾಕಷ್ಟು ನಯನಮನೋಹರವಾದ ತಾಣವಾಗಿದೆ. ಇದನ್ನು ರೇಣುಕಾಸಾಗರ ಜಲಾಶಯ ಎಂತಲೂ ಸಹ ಕರೆಯುತ್ತಾರೆ.

Manjunath Doddamani Gajendragad

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣ ರಾಜ ಸಾಗರ ಜಲಾಶಯವು ಮೈಸೂರು ನಗರಕ್ಕೆ ಬಲು ಹತ್ತಿರದಲ್ಲಿದೆ. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಈ ಜಲಾಶಯಕ್ಕೆ ಭೇಟಿ ನೀಡದೆ ಇರಲಾರರು.

Ashwin Kumar

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಕೃಷ್ಣ ರಾಜ ಸಾಗರವು ಮುಖ್ಯವಾಗಿ ಬೃಂದಾವನ ಉದ್ಯಾನಕ್ಕೆ ಹೆಚ್ಚು ಪ್ರಖ್ಯಾತಿಗಳಿಸಿದೆ. ಜಲಾಶಯದ ಮುಂಭಾಗದಲ್ಲಿರುವ ಈ ವಿಶಾಲ ಉದ್ಯಾನವು ಕಾರಂಜಿಗಳನ್ನು ಒಳಗೊಂಡಿದ್ದು ರಾತ್ರಿಯ ಸಮಯದಲ್ಲಿ ಅತ್ಯಾಕರ್ಷಕವಾಗಿ ಕಂಡುಬರುತ್ತದೆ.

Ashwin Kumar

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮುಳ್ಳಪೆರಿಯಾರ್ ಆಣೆಕಟ್ಟಿನ ಹಿಂಭಾಗದಲ್ಲಿ ಸಂಗ್ರಹಿತವಾದ ತೆಕ್ಕಡಿ ಹಿನ್ನೀರು ಜಲಾಶಯವು ನೋಡಲು ಬಲು ನಯನ ಮನೋಹರವಾಗಿದೆ. ದೋಣಿ ವಿಹಾರದ ಸೌಲಭ್ಯ ಇಲ್ಲಿದ್ದು ಜನಪ್ರೀಯ ಪ್ರವಾಸಿ ಆಕರ್ಷಣೆಯಾಗಿ ಗಮನಸೆಳೆಯುತ್ತದೆ.

Girlxplorer

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಇಡುಕ್ಕಿ ಜಿಲ್ಲೆಯ ಪೂಪಾರ ಹಳ್ಳಿಯಿಂದ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿರುವ ಆನಯಿರಂಕಲ್ ಜಲಾಶಯ ತನ್ನ ಸುತ್ತುವರೆದಿರುವ ಅದ್ಭುತ ಪ್ರಾಕೃತಿಕ ಸೊಬಗಿನಿಂದ ಕಣ್ಮನ ಸೆಳೆಯುತ್ತದೆ. ದೋಣಿ ವಿಹಾರದ ಸೌಲಭ್ಯ ಇಲ್ಲಿದ್ದು ಮುನ್ನಾರ್ ನಿಂದ ಕೇವಲ 22 ಕಿ.ಮೀ ಗಳಷ್ಟು ದೂರದಲ್ಲಿದೆ.

Rameshng

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದ ಬಳಿ ಕಬಿನಿಯ ಉಪನದಿಯಾದ ಕರಮನತೋಡು ನದಿಯಿಂದಾದ ಜಲಾಶಯ ಇದಾಗಿದ್ದು ಸಾಕಷ್ಟು ನಯನಮನೋಹರವಾಗಿದೆ.

Vaibhavcho

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಅಳಿಯಾರ್ ಜಲಾಶಯ ಒಂದು ಜನಪ್ರೀಯ ಪ್ರವಾಸಿ ಕೇಂದ್ರವಾಗಿದೆ. ಈ ಜಲಾಶಯದ ವ್ಯಾಪ್ತಿಯಲ್ಲಿ ಸುಂದರವಾದ ಉದ್ಯಾನವಿದ್ದು ಸುತ್ತಲಿನ ಸೃಷ್ಟಿ ಸೌಂದರ್ಯವು ನೋಡುಗರ ಮನಸ್ಸನ್ನು ಸೆಳೆಯುತ್ತದೆ.

Siva301in

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ