Search
  • Follow NativePlanet
Share
» »ರಾಜಸ್ಥಾನದಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇದನ್ನೆಲ್ಲಾ ಮಾಡ್ಲೇ ಬೇಕು

ರಾಜಸ್ಥಾನದಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇದನ್ನೆಲ್ಲಾ ಮಾಡ್ಲೇ ಬೇಕು

ಮೊನ್ನೆಯಷ್ಟೇ ಮದುವೆಯಾಯಿತು.ಈಗಷ್ಟೇ ನವಜೋಡಿಗಳಾಗಿದ್ದೇವೆ. ಹನಿಮೂನ್ ಗಾಗಿ ಎಲ್ಲಿ ಹೋಗುವುದು ಎಂದು ನಿಮಗೆ ನೀವೇ ಕನಸು ಕಾಣುತ್ತಿದ್ದೀರಾ ? ಹಾಗಿದ್ದರೆ ನಿಮ್ಮ ರೋಮ್ಯಾಂಟಿಕ್ ಕನಸಿಗೆ ಹೊಸ ಆಯಾಮ ಕೊಡುವ ಸ್ಥಳ ನಮ್ಮ ಭಾರತ ದೇಶದ ರಾಜಸ್ಥಾನದಲ್ಲಿದೆ.

ವೈಭವೋಪೇರಿತ ಹನಿಮೂನ್

ವೈಭವೋಪೇರಿತ ಹನಿಮೂನ್

PC: Flicka
ಹೌದು. ಹೆಸರೇ ಹೇಳುವಂತೆ ರಾಜಸ್ಥಾನ, ರಾಜನ ಆಸ್ಥಾನವೇ ಸರಿ . ಅಂತಹ ವೈಭವೋಪೇರಿತ ಹನಿಮೂನ್ ನಿಮ್ಮದಾಗಬೇಕೆಂದರೆ ಒಮ್ಮೆ ರಾಜಸ್ಥಾನಕ್ಕೆ ಭೇಟಿ ಕೊಡಿ. ಒಂಟೆಯ ಸವಾರಿ ಆಗಿರಬಹುದು ಅಥವಾ ಏರ್ ಬಲೂನ್ ನಲ್ಲಿ ತೇಲುವುದಾಗಿರಬಹುದು ಅಥವಾ ಮರಳು ಭೂಮಿಯಲ್ಲಿ ಕ್ಯಾಂಪ್ ಮಾಡುವುದಾಗಿರಬಹುದು. ಹೀಗೆ ರಾಜಸ್ತಾನ ನಿಮ್ಮ ಹನಿಮೂನ್ ಅನ್ನು, ನಿಮ್ಮ ಸಂಗಾತಿಯ ಜೊತೆ ಕಳೆದ ಕ್ಷಣಗಳನ್ನು ವಿಶೇಷ ಮತ್ತು ವಿಭಿನ್ನ , ಅದ್ಬುತ ಕ್ಷಣಗಳಾಗಿ ಪರಿವರ್ತಿಸುತ್ತದೆ . ಮತ್ತೆ ಇನ್ನೇಕೆ ತಡ ಕೂತಲ್ಲೇ ರೋಮ್ಯಾಂಟಿಕ್ ಆಗಿ ಕನಸು ಕಾಣುವುದನ್ನು ಬಿಟ್ಟು ಅದನ್ನು ಕಾರ್ಯರೂಪಕ್ಕೆ ತರಲು ರಾಜಸ್ಥಾನಕ್ಕೆ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಈಗಲೇ ಟಿಕೆಟ್ ಬುಕ್ ಮಾಡಿ.

ಜೈಪುರ

ಜೈಪುರ

PC: Srshiva2

ಭಾರತದ "ಪಿಂಕ್ ಸಿಟಿ" ಎಂದೇ ಪ್ರಖ್ಯಾತವಾಗಿರುವ ಜೈಪುರ ನವಜೋಡಿಗಳಿಗಂತೂ ಸ್ವರ್ಗವೇ ಸರಿ. ನಿಮ್ಮ ಹನಿಮೂನ್ ಅನ್ನು ಬಹಳವೇ ವಿಶೇಷವಾಗಿಸುವ ಸ್ಥಳ .ನಿಮ್ಮ ಹನಿಮೂನ್ ದಿನಗಳನ್ನು ಎಂದೂ ಮರೆಯಲಾಗದ ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂಥಹ ದಿನಗಳನ್ನಾಗಿ ಮಾಡುವ ಸ್ಥಳ. ಏಕೆಂದರೆ ನವ ಜೋಡಿಗಳು ತಮ್ಮ ಹನಿಮೂನ್ ಅನ್ನು ಅತ್ಯಂತ ಖುಷಿ ಸಂಭ್ರಮದಿಂದ ಆಚರಿಸಲು ಮತ್ತು ತಮಗೆ ಏನು ಬೇಕೋ ಅದೆಲ್ಲವೂ ಈ ಸ್ಥಳದಲ್ಲಿ ಸಿಗುತ್ತದೆ. ಅದ್ದೂರಿ ಹೋಟೆಲ್ ಗಳು, ಅಲ್ಲಿಂದಲೇ ನಯನ ಮನೋಹರವಾದ ಅದ್ಭುತ ಮರುಭೂಮಿಯ ನೋಟಗಳು, ಪ್ರಾಚೀನ ಕೋಟೆಗಳನ್ನು ಹೊಂದಿರುವ ಜೈಪುರ ಲೆಕ್ಕವಿಲ್ಲದಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೇವಲ ಭಾರತದಿಂದಲ್ಲದೆ ವಿದೇಶದಿಂದಲೂ ಪ್ರತಿದಿನವೂ ಇಲ್ಲಿಗೆ ಪ್ರವಾಸಿಗರು ಬಂದು ಹೋಗುತ್ತಾರೆ. ದಶಕಗಳಿಂದಲೂ ಜೈಪುರ ತನ್ನ ಈ ಹಿರಿಮೆಯನ್ನು ಕಾಪಾಡಿಕೊಂಡು ಬಂದಿದೆ ಮತ್ತು ರಾಜಸ್ಥಾನದಲ್ಲಿ ಹನಿಮೂನ್ ಗಾಗಿ ಇರುವ ಒಳ್ಳೆಯ ಸ್ಥಳಗಳನ್ನು ಹೊಂದಿರುವ ಪ್ರದೇಶ ಎಂದು ಗುರುತಿಸಿದೆ. ಹಾಗಾಗಿ ನೀವು ಜೈಪುರಕ್ಕೆ ಹನಿಮೂನ್ ಹೋಗುವುದನ್ನು ಮಾತ್ರ ಮಿಸ್ ಮಾಡಬೇಡಿ.

ರೋಮ್ಯಾಂಟಿಕ್ ಡೇಟಿಂಗ್

ರೋಮ್ಯಾಂಟಿಕ್ ಡೇಟಿಂಗ್

PC: Marcin Białek
"ರಾಜ್ ಮಂದಿರ್" ಎಂಬ ಬಹಳ ಪ್ರಸಿದ್ಧವಾದ ಚಲನಚಿತ್ರ ಮಂದಿರ ನಿಮ್ಮನ್ನು ಬಾಲಿವುಡ್ ಚಿತ್ರಗಳನ್ನು ನಿಮ್ಮ ಸಂಗಾತಿಯ ಜೊತೆ ವೀಕ್ಷಿಸಲು ಕೈ ಬೀಸಿ ಕರೆಯುತ್ತದೆ. ಏರ್ ಬಲೂನ್ ನಲ್ಲಿ ನಿಮ್ಮ ಸಂಗಾತಿಯ ಜೊತೆ ಮುಗಿಲೆತ್ತರಕ್ಕೆ ಹಾರಾಡಬಹುದು ಮತ್ತು ಇಡೀ ಜೈಪುರದ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಬಹುದು. "ಫೇರ್ಮೋನ್ಟ್ ಜೈಪುರ್ " ಎಂಬಲ್ಲಿ ರೋಮ್ಯಾಂಟಿಕ್ ಡೇಟಿಂಗ್ ಮಾಡಬಹುದು. ಅಲ್ಲೇ ಇರುವ ಮುಖ್ಯ ಮಾರುಕಟ್ಟೆಯಲ್ಲಿ ಬಗೆಬಗೆಯ ರುಚಿಕರವಾದ ರಾಜಸ್ತಾನಿ ಶೈಲಿಯ ತಿಂಡಿತಿನಿಸುಗಳನ್ನು ಸವಿಯಬಹುದು ಮತ್ತು ನೀವು ಮಾಂಸ ಪ್ರಿಯರಾಗಿದ್ದರೆ ಅಲ್ಲೇ ಎಂ.ಐ. ರಸ್ತೆಯಲ್ಲಿ ಇರುವ ಅಂಗಡಿಗಳು ಮತ್ತು ಹೋಟೆಲ್ ಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತವೆ.

ಜೈಪುರ ಸುಂದರ ತಾಣಗಳು

ಜೈಪುರ ಸುಂದರ ತಾಣಗಳು

PC: Rakesh Krishna Kumar

ಶೀಷಾ ರೆಸ್ಟೋರೆಂಟ್, ನಹಾರ್ಗಡ್ ಕೋಟೆ, ಸೆಂಟ್ರಲ್ ಪಾರ್ಕ್, ಸ್ಮೃತಿ ವ್ಯಾನ್, ಸಿಸೋಡಿಯಾ ರಾಣಿಯ ಉದ್ಯಾನವನ ನವಜೋಡಿಗಳಿಗೆ ಎಂದೇ ಜೈಪುರದಲ್ಲಿರುವ ಸುಂದರ ಸ್ಥಳಗಳು. ಜೈಪುರ ದಲ್ಲಿರುವ ನವಜೋಡಿಗಳಿಗೆ ಅತ್ಯಂತ ಪ್ರಿಯವಾದ ಹನಿಮೂನ್ ಹೋಟೆಲ್‌ಗಳು ರಾಮಭಾಗ್ ಪ್ಯಾಲೇಸ್, ಒಬೆರಾಯ್ ರಾಜವಿಲಾಸ್, ಜೈ ಮಹಲ್ ಪ್ಯಾಲೇಸ್, ರಾಯಲ್ ಹೆರಿಟೇಜ್ ಹವೇಲಿ, ಮತ್ತು ಹೋಟೆಲ್ ಮೇಘನಿವಾಸ್. "ಟ್ರಾವೆಲ್ ಟ್ರಯಾಂಗಲ್ " ಎಂಬ ಟೂರಿಸ್ಟ್ ಸಂಸ್ಥೆಯಿಂದ ರಾಜಸ್ತಾನಕ್ಕೆ ಬರುವ ಜೋಡಿಗಳಿಗೆ ಹನಿಮೂನ್ ಪ್ಯಾಕೇಜ್ ಗಳೂ ಲಭ್ಯವಿವೆ

ಶ್ರೀಮಂತ ರಾಜ ಪರಂಪರೆ

ಶ್ರೀಮಂತ ರಾಜ ಪರಂಪರೆ


ರಾಜಸ್ಥಾನ ಹಿಂದಿನಿಂದಲೂ ಅತಿ ಶ್ರೀಮಂತ ರಾಜ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿರುವ ಸ್ಥಳವಾಗಿದೆ. ಇಲ್ಲಿ ಕಟ್ಟಿರುವಂಥಹ ಭವ್ಯವಾದ ಕೋಟೆಗಳು ಮತ್ತು ಅರಮನೆಗಳು, ಐಷಾರಾಮಿ ಹೋಟೆಲ್ ಗಳೂ ,ಒಂಟೆ ಸಫಾರಿಗಳು, ನಯನಮನೋಹರವಾದ ಸರೋವರಗಳು ಹೀಗೆ ಇನ್ನೂ ಹಲವಾರು ಪ್ರದೇಶಗಳು ನವಜೋಡಿಗಳನ್ನು ಮೂಕ ವಿಸ್ಮಿತರನ್ನಾಗಿಸುತ್ತವೆ. ಟ್ರಾವೆಲ್ ಟ್ರಯಾಂಗಲ್ ಎಂಬ ಸಂಸ್ಥೆಯ ಸಹಾಯ ತೆಗೆದುಕೊಂಡರೆ ಸಾಕು , ಅವರು ನಿಮಗೆ ಅವರ ಹನಿಮೂನ್ ಪ್ಯಾಕೇಜ್ ಗಳಲ್ಲಿ ಇವೆಲ್ಲವನ್ನೂ ಕವರ್ ಮಾಡುವುದರ ಜೊತೆಗೆ ಜೈಪುರ, ಉದೈಪುರ್, ಜೋಧ್ಪುರ್, ಜೈಸಲ್ಮೇರ್, ಪುಷ್ಕರ್ ಮತ್ತು ರಣಥಂಬೋರ್ ಎಂಬೆಲ್ಲ ಸ್ಥಳವೀಕ್ಷಣೆಯನ್ನೂ ಮಾಡಿಸಿ ನಿಮ್ಮಗಳ ಸುರಕ್ಷತೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.

ಪುಷ್ಕರ್

ಪುಷ್ಕರ್

PC:Tonyystarcreations

ಈ ಸ್ಥಳ ಪ್ರಕೃತಿ ಸೌಂದರ್ಯದ ಆಗರವಾಗಿದೆ. ನವಜೋಡಿಗಳಿಗಂತೂ ಹೇಳಿ ಮಾಡಿಸಿದ ಮತ್ತು ನೋಡಲೇಬೇಕಾದ ಜಾಗ. ಪ್ರಕೃತಿ ರಮಣೀಯತೆಯ ಜೊತೆಗೆ ಇಂಪಾದ ಹಕ್ಕಿಗಳ ಕಲರವ , ಎತ್ತ ತಿರುಗಿದರೂ ಸೊಂಪಾದ ಮರ ಗಿಡಗಳು ಇದರ ಸೌಂದರ್ಯವನ್ನು ಇನ್ನಷ್ಟು ಹೊಳೆಯುವಂತೆ ಮಾಡುತ್ತದೆ. ಪುಷ್ಕರ್ ಪ್ರದೇಶ ಮೂರು ಕಡೆಯಲ್ಲಿ ಮರಗಿಡಗಳಿಂದ ಕೂಡಿದ್ದರೆ ಮತ್ತೊಂದು ಕಡೆಯಲ್ಲಿ ಮರುಭೂಮಿಯಿಂದ ಕೂಡಿದೆ. ಆದ್ದರಿಂದ ಇದು ಕೇವಲ ನವಜೋಡಿಗಳಿಗೆ ರೋಮ್ಯಾಂಟಿಕ್ ಸ್ಥಳವಾಗಿರದೆ ಅವರ ಬಜೆಟ್ ಗೆ ಅನುಕೂಲವಾಗುವಂಥಹ ಭಾರತದಲ್ಲಿನ ಹನಿಮೂನ್ ಸ್ಥಳಗಳಲ್ಲಿ ಇದೂ ಒಂದು.

ಪುಷ್ಕರ್‌ನ ಸುಂದರ ಸ್ಥಳಗಳು

ಪುಷ್ಕರ್‌ನ ಸುಂದರ ಸ್ಥಳಗಳು

PC: Singh92karan
ಪುಷ್ಕರ್ ಸರೋವರ , ಸನ್ಸೆಟ್ ಕೆಫೆ ಹೋಟೆಲ್, ವರಾಹ ಘಾಟ್, ಥಾರ್ ಮರುಭೂಮಿ ನವವಿವಾಹಿತರು ಪುಷ್ಕರ್ಗೆ ಭೇಟಿ ನೀಡಬೇಕಾದ ಸುಂದರ ಸ್ಥಳಗಳು. ಹಾಗಿದ್ದರೆ ನೀವು ಪುಷ್ಕರ್‌ನಲ್ಲಿ ನಿಮ್ಮ ಸಂಗಾತಿಯ ಜೊತೆ ರೋಮ್ಯಾಂಟಿಕ್ ಆಗಿ ಏನೇನು ಸವಿಯಬಹುದು ?
ಬಹಳ ದಿನಗಳಿಂದ ನನ್ನ ಪ್ರೇಯಸಿಯ ಜೊತೆ ಖುಷಿಯಾಗಿ ಒಂಟೆಯ ಸವರಿ ಮಾಡಬೇಕು ಎಂದು ಕನಸು ಕಾಣುತ್ತಿದ್ದರೆ ಇಲ್ಲಿ ಆ ಕನಸು ನನಸಾಗುವುದು . ಏಕೆಂದರೆ ಹೊಸಜೋಡಿಗಳಿಗೆಂದೇ ಇಲ್ಲಿರುವ ಜನಾಂಗದವರು ಒಂಟೆಸವಾರಿಗಳನ್ನು ಆಯೋಜಿಸಿರುತ್ತಾರೆ. ಅವರ ಸಹಾಯವನ್ನು ಪಡೆದು ನೀವು ಒಂಟೆ ಸವಾರಿಯನ್ನು ಮಾಡಬಹುದು. ಇಲ್ಲಿನ ಭಾಷೆಯಲ್ಲಿ ಅದನ್ನು "ಸಾವನ್ ಕೆ ಜುಲೆ" ಎಂದು ಕರೆಯುತ್ತಾರೆ.

 ಸೂರ್ಯ ಮುಳುಗುವ ಅದ್ಬುತ ಕ್ಷಣ

ಸೂರ್ಯ ಮುಳುಗುವ ಅದ್ಬುತ ಕ್ಷಣ

PC:Bernard Gagnon

ಪುಷ್ಕರ್ ಒಂದು ಚಿಕ್ಕದಾದ ಮತ್ತು ಚೊಕ್ಕವಾದ ಪಟ್ಟಣವಾಗಿದೆ. ಮೊದಲೇ ಮನೋಹರವಾದ ಜಾಗ ಬೇರೆ. ಇನ್ನೇಕೆ ತಡ ? ಒಂದು ಬೈಕ್ ಅನ್ನು ಬಾಡಿಗೆ ಪಡೆದುಕೊಂಡು ನಿಮ್ಮ ಸಂಗಾತಿಯ ಜೊತೆ ಒಂದು ಲಾಂಗ್ ರೈಡ್ ಹೋಗಬಾರದೇ ? ನೀವು ಉಳಿದುಕೊಂಡಿರುವ ಹೋಟೆಲ್‌ನ ಮಹಡಿಯ ಮೇಲೆ ನಿಂತು ಸೂರ್ಯ ಮುಳುಗುವ ಅದ್ಬುತ ಕ್ಷಣವನ್ನು ನಿಮ್ಮ ಕಣ್ಣುಗಳಲ್ಲಿ ಮತ್ತು ನಿಮ್ಮ ಕ್ಯಾಮೆರಾ ಕಣ್ಣಿನಲ್ಲಿ ನಿಮ್ಮ ಸಂಗಾತಿಯ ಜೊತೆ ಬಹಳ ಚೆನ್ನಾಗಿ ಸೆರೆಹಿಡಿಯಬಹುದು .ಈಗಿನ ಸೆಲ್ಫಿ ಪ್ರಿಯರಿಗೆಂದೇ ಹೇಳಿ ಮಾಡಿಸಿದ ಜಾಗ. ರತ್ನಗಿರಿ ಬೆಟ್ಟದಿಂದ ಸಾವಿತ್ರಿ ದೇವಸ್ಥಾನಕ್ಕೆ ನಿಮ್ಮ ಸಂಗಾತಿಯ ಕೈ ಹಿಡಿದುಕೊಂಡು ಅಕ್ಕಪಕ್ಕದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಸಾಗಬಹುದು. ಪುಷ್ಕರ್‌ನಲ್ಲಿರುವ ನವಜೋಡಿಗಳಿಗೆ ಅತ್ಯಂತ ಪ್ರಿಯವಾದ ಹನಿಮೂನ್ ಹೋಟೆಲ್ಗಳು: ಹೋಟೆಲ್ ಪ್ರೇಮ್ ವಿಲ್ಲಾಸ್, ಗುಲಾಬಾ ನಿವಾಸ್ ಪ್ಯಾಲೇಸ್, ಪುಷ್ಕರ್ ರೆಸಾರ್ಟ್ಸ್, ಮತ್ತು ವೆಸ್ಟಿನ್ ಪುಷ್ಕರ್ ರೆಸಾರ್ಟ್ ಮತ್ತು ಸ್ಪಾ.

ಜೋಧ್ಪುರ್

ಜೋಧ್ಪುರ್

PC: Knowledge Seeker

ಮದುವೆಯ ನಂತರ ನಿಮ್ಮ ಜೀವನದ ಒಂದು ಅದ್ಧೂರಿ ಪ್ರಾರಂಭಕ್ಕೆ ಇದು ಹುಮ್ಮಸ್ಸು ತುಂಬುತ್ತದೆ. ಅಚ್ಚುಕಟ್ಟಾದ ಹಳ್ಳಿಗಾಡು, ಪ್ರಾಚೀನ ಕಾಲದ ಅರಮನೆಗಳು, ಎಲ್ಲೆಲ್ಲೂ ಚಿನ್ನದ ಹೊಳಪನ್ನು ಹೊಂದಿರುವಂತಹ ಮರಳು. ಇವೆಲ್ಲಾ ಜೋದ್ಪುರದ ವೈಶಿಷ್ಟ್ಯಗಳು.ಈ ಚಿಕ್ಕ ರಮಣೀಯವಾದ ತಾಣ ಎಂತಹ ಪ್ರೇಮಿಗಳಿಗೂ ಮತ್ತು ಜೋಡಿಗಳಿಗೂ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿಯ ವಾತಾವರಣ ಬಹಳ ಪ್ರಶಾಂತವಾಗಿರುತ್ತದೆ ಮತ್ತು ಇದೊಂದು ರೋಮ್ಯಾಂಟಿಕ್ ಸ್ಥಳ ಎಂಬ ಹಿರಿಮೆಯನ್ನು ಉಳಿಸಿಕೊಂಡಿದೆ.

ಜೋಧ್ಪುರ್ ನಲ್ಲಿ ನೋಡಲೇಬೇಕಾದ ಸ್ಥಳಗಳು

ಜೋಧ್ಪುರ್ ನಲ್ಲಿ ನೋಡಲೇಬೇಕಾದ ಸ್ಥಳಗಳು

PC: Chrisi1964

ಉಮಾಯಿದ್ ಭವನ್, ಪ್ಯಾಲೇಸ್ ಮ್ಯೂಸಿಯಂ, ಉಮೈದ್ ಗಾರ್ಡನ್, ಉದಯ್ ಮಂದಿರ, ಮ್ಯಾಂಡೋರ್ ಗಾರ್ಡನ್ಸ್ ಜೋದ್ಪುರದಲ್ಲಿ ನವಜೋಡಿಗಳು ನೋಡಬಹುದಾದ ಸ್ಥಳಗಳಾಗಿವೆ. ತಖತ್ ಸಾಗರದಲ್ಲಿ ನೀವು ಸುಂದರವಾದ ಸಂಜೆಯನ್ನು ಸವಿಯಬಹುದು. ಕೈಲಾನ ಸರೋವರದ ಬಳಿ ಸೂರ್ಯ ಮುಳುಗುವ ಕ್ಷಣವನ್ನು ಸವಿಯಬಹುದು. ಮೆಹ್ರಾನ್ ಟೆರೇಸ್ ರೆಸ್ಟೊರೆಂಟ್ನಲ್ಲಿ ರಾತ್ರಿಯ ರುಚಿಕರವಾದ ಊಟವನ್ನು ನಿಮ್ಮ ಜೊತೆಗಾರ/ ಜೊತೆಗಾತಿಯೊಂದಿಗೆ ರೋಮ್ಯಾಂಟಿಕ್ ಆಗಿ ಸವಿಯಬಹುದು. ಜೋಧ್ಪುರದಲ್ಲಿನ ಕೆಲವು ಅತ್ಯುತ್ತಮ ಹನಿಮೂನ್ ಹೋಟೆಲ್ಗಳು ಮ್ಯಾಂಗೋ ಹೊಟೇಲ್ ಜೋಧ್ಪುರ್ - ರತಾನಡಾ, ಮರೂಗರ್ಹ್ ರೆಸಾರ್ಟ್, ವಿವಾಂತಾ ತಾಜ್ - ಹರಿ ಮಹಲ್, ಜೋಧ್ಪುರ್, ಮತ್ತು ಉಮೈದ್ ಭವನ್ ಅರಮನೆ ಜೋಧಪುರ್.

ಜೈಸಲ್ಮೇರ್

ಜೈಸಲ್ಮೇರ್

PC: Adrian Sulc

ಮರುಭೂಮಿ ಕ್ಯಾಂಪ್, ಜಾನಪದ ನೃತ್ಯ, ಮತ್ತು ಒಂಟೆ ಸಫಾರಿ, ಇವೆಲ್ಲಾ ಒಂದೇ ಕಡೆ ನಿಮಗೆ ಅನುಭವ ಆಗಬೇಕಾದರೆ ನೀವು ಒಮ್ಮೆ ಈ ಸ್ಥಳದಲ್ಲಿ ತಂಗಲೇಬೇಕು. ಏಕೆಂದರೆ ಇದು ಪ್ರಸಿದ್ಧ ದುಬೈ ದೇಶವನ್ನು ನೆನೆಪಿಗೆ ತರುತ್ತದೆ.ಜೈಸಲ್ಮೇರ್ ಅರೇಬಿಯನ್ ನೈಟ್ಸ್ ಕಥೆ ಜ್ಞಾಪಕಕ್ಕೆ ತಂದು ನವಜೋಡಿಗಳ ಹನಿಮೂನ್ ರಾಜಸ್ಥಾನ್ನಲ್ಲಿ ಸಾರ್ಥಕ ರೀತಿಯಲ್ಲಿ ನಡೆಯುವಂತೆ ಮಾಡುತ್ತದೆ.ಪ್ರತಿಯೊಬ್ಬ ಪ್ರವಾಸಿಗನೂ ಕೂಡ ಜೈಸಲ್ಮೇರ್ನಲ್ಲಿ ನಿಂತು ಬೆಳಗಿನ ಸೂರ್ಯೋದಯವನ್ನು ನೋಡಲು ಮರೆಯಬಾರದೆಂದು ಗುನುಗುತ್ತಿರುತ್ತಾರೆ.

 ಜೈಸಲ್ಮೇರ್ನಲ್ಲಿ ನೋಡಲೇಬೇಕಾದ ಸ್ಥಳಗಳು

ಜೈಸಲ್ಮೇರ್ನಲ್ಲಿ ನೋಡಲೇಬೇಕಾದ ಸ್ಥಳಗಳು

PC:Nagarjun Kandukuru

ಜೈಸಲ್ಮೇರ್ ಕೋಟೆ, ಬಡಾ ಬಾಗ್, ಬೃಹತ್ ಐದು ಅಂತಸ್ತಿನ ಪ್ಯಾಟ್ವಾನ್-ಕೀ-ಹವೇಲಿ, ಡೆಸರ್ಟ್ ನೇಷನ್ ಪಾರ್ಕ್ ಮತ್ತು ಗ್ಯಾಡ್ಸಿಸರ್ ಸರೋವರ .ಇಲ್ಲಿಯೂ ಕೂಡ ಒಂಟೆ ಸವಾರಿ ಮಾಡಬಹುದು. ಮರುಭೂಮಿಯಲ್ಲಿ ಒಂದು ಅಥವಾ ಎರಡು ರಾತ್ರಿ ಕ್ಯಾಂಪ್ ಹಾಕಿ ಜಾನಪದ ನೃತ್ಯಗಾರರ ಜೊತೆ ನೀವೂ ನೃತ್ಯ ಮಾಡಬಹುದು. ಮರಳುಗಾಡಿನಲ್ಲಿ ನಡೆದು ಅದರಲ್ಲೇ ಮುಳುಗೇಳುವ ಬೆಚ್ಚನೆಯ ಅನುಭವ ನಿಮ್ಮದಾಗಿಸಿಕೊಳ್ಳಬಹುದು. ಜೈಸಲ್ಮೇರ್ನಲ್ಲಿರುವ ಕೆಲವು ಅತ್ಯುತ್ತಮ ಹನಿಮೂನ್ ಹೋಟೆಲ್ಗಳು ಹೋಟೆಲ್ ಪ್ಲೆಸೆಂಟ್ ಹವೇಲಿ, ಜಾಸ್ಮಿನ್ ಹೋಮ್, ಹೆಲ್ಸಿಂಕಿ ಹೌಸ್, ದಿ ಗುಲಾಲ್, ಮತ್ತು ಜೈಸಲ್ಮೇರ್ ಮ್ಯಾರಿಯೊಟ್ ರೆಸಾರ್ಟ್ ಮತ್ತು ಸ್ಪಾ.

ಮೌಂಟ್ ಅಬು

ಮೌಂಟ್ ಅಬು

PC: Malaiya
ರಾಜಸ್ತಾನದ ಏಕೈಕ ಮತ್ತು ಪ್ರಸಿದ್ದವಾದ ಗಿರಿಧಾಮ ಮೌಂಟ್ ಅಬು. ತನ್ನ ಸೌಂದರ್ಯದಿಂದಲೇ ಸಾವಿರಾರು ಪ್ರೇಮಿಗಳನ್ನು ಮತ್ತು ನವ ಜೋಡಿಗಳನ್ನು ತನ್ನತ್ತ ಪ್ರತಿವರ್ಷ ಸೆಳೆಯುವಲ್ಲಿ ಇಂದಿಗೂ ಯಶಸ್ವಿಯಾಗಿದೆ. ಅದರಲ್ಲೂ ಮೌಂಟ್ ಅಬು ವಿನ ಹಸಿರು ಗಿರಿಧಾಮ ಮತ್ತು ನಕ್ಕಿ ಸರೋವರ ಪ್ರೀತಿಸುವ ಪ್ರೇಮಿಗಳ ಮೆರಗನ್ನು ಇನ್ನೂ ಹೆಚ್ಚಿಸಿ ರಾಜಸ್ತಾನ ಹನಿಮೂನ್ ಗೆ ಪ್ರಶಸ್ತವಾದ ಮತ್ತು ಅದ್ಬುತ ಸ್ಥಳ ಎಂದು ಮತ್ತೊಮ್ಮೆ ಸಾಬೀತು ಮಾಡಿದೆ. ಈ ಸ್ಥಳದಲ್ಲಿ ಬರುವ ಒಂದೊಂದು ಪ್ರದೇಶವೂ ಬಹಳ ಚಮತ್ಕಾರಿಯಾಗಿದೆ.ಅದರಲ್ಲೂ ಅರವಲ್ಲಿ ಬೆಟ್ಟದ ತುತ್ತ ತುದಿ ಯಲ್ಲಿ ನಿಂತು ಸೂರ್ಯಾಸ್ತದ ಅನುಭವವನ್ನು ಸವಿಯುತ್ತ ನಿಮ್ಮ ಸಂಗಾತಿಯ ಜೊತೆ ಪಿಸುಮಾತುಗಳನ್ನಾಡುತ್ತಾ ಕಾಲ ಕಳೆಯುವುದನ್ನು ಎಂದಾದರೂ ಮರೆಯುವುದುಂಟೆ ?

ಮೌಂಟ್ ಅಬುವಿನ ಸುಂದರ ತಾಣಗಳು

ಮೌಂಟ್ ಅಬುವಿನ ಸುಂದರ ತಾಣಗಳು

PC: Andreas Kleemann
ನವಜೋಡಿಗಳಿಗಾಗಿ ಮೌಂಟ್ ಅಬುವಿನ ಸುಂದರ ತಾಣಗಳು ಯಾವುವೆಂದರೆ ದಿಲ್ವಾರಾ ಜೈನ ದೇವಾಲಯಗಳು, ಮೌಂಟ್ ಅಬು ವನ್ಯಜೀವಿ ಧಾಮ, ನಕ್ಕಿ ಸರೋವರ, ಅಚಲ್ ಘರ್, ಗುರು ಶಿಖರ್, ಟ್ರೆವರ್ ನ ಮೊಸಳೆ ಉದ್ಯಾನವನ. ಮೌಂಟ್ ಅಬು ವಿನಲ್ಲಿ ನೀವು ಹೇಗೆಲ್ಲಾ ರೋಮ್ಯಾಂಟಿಕ್ ಆದ ಕ್ಷಣಗಳನ್ನು ಅನುಭವಿಸಬಹುದು. ಇಲ್ಲಿಯೂ ಸಹ ನಿಮ್ಮ ಪ್ರೇಯಸಿಯೊಂದಿಗೆ ಏರ್ ಬಲೂನ್ ನಲ್ಲಿ ಆಕಾಶದಲ್ಲಿ ಹಾರಾಡಬಹುದು. ಸೂರ್ಯೋದಯ ಹಾಗು ಸೂರ್ಯಾಸ್ತದ ಸಮಯದಲ್ಲಿ ರೋಮ್ಯಾಂಟಿಕ್ ಆಗಿ ಬೋಟ್ ರೈಡ್ ಹೋಗಬಹುದು . ಜೋಡಿಗೆಳಿಗೆಂದೇ ಪ್ರಕೃತಿಯ ಮಧ್ಯದಲ್ಲಿ ತಲೆಯೆತ್ತಿರುವ ಮಲ್ಬೆರಿ ಟ್ರೀ ರೆಸ್ಟೋರೆಂಟ್ ನಲ್ಲಿ ಊಟ ಮಾಡಬಹುದು .ಬ್ರೈಡಲ್ ಪಾತ್ನಲ್ಲಿ ಅಕ್ಕ ಪಕ್ಕದ ಸುಂದರ ಮರ ಗಿಡಗಳೊಂದಿಗೆ ವಾಯುವಿಹಾರ ನಡೆಸುತ್ತ ಟ್ರೆಕಿಂಗ್ ನಿಮ್ಮ ಸಂಗಾತಿಯೊಂದಿಗೆ ಟ್ರೆಕಿಂಗ್ ಮಾಡಬಹುದು . ತ್ಯುತ್ತಮ ಹನಿಮೂನ್ ಹೋಟೆಲ್‌ಗಳೆಂದರೆ ಹೋಟೆಲ್ ಸಿಲ್ವರ್ ಓಕ್, ರತನ್ ವಿಲ್ಲಾಸ್, ಹೋಟೆಲ್ ಹಿಲ್ಟನ್ ಮತ್ತು ಹೋಟೆಲ್ ಹಿಲ್ಲೊಕ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X