Search
  • Follow NativePlanet
Share
» »ಬೆಳಗಾವಿಯಿಂದ ಗೋವಾ ಒಂದು ಸುಂದರ ಪ್ರವಾಸ

ಬೆಳಗಾವಿಯಿಂದ ಗೋವಾ ಒಂದು ಸುಂದರ ಪ್ರವಾಸ

By Vijay

ಉತ್ತರ ಕರ್ನಾಟಕ ಭಾಗದ ಮಲೆನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ, ಬೆಂಗಳೂರಿನಷ್ಟೆ ಸಮನಾದ ಹಾಗೂ ಹಿತಕರವಾದ ವಾತಾವರಣ ಹೊಂದಿರುವ ಬೆಳಗಾವಿ ಮಹಾನಗರವು ಪ್ರವಾಸಿಗರಿಗೆ ಸಾಕಷ್ಟು ಸುಂದರ ಆಯ್ಕೆಗಳನ್ನು ಕೊಡುತ್ತದೆ. ಮಹಾರಾಷ್ಟ್ರದ ಕೊಲ್ಹಾಪುರವಾಗಲಿ ಇಲ್ಲವೆ ಗೋವಾದ ಕಡಲ ತೀರಗಳಾಗಲಿ ಬೆಳಗಾವಿಗೆ ಬಲು ಹತ್ತಿರ.

ವಿಮಾನ ಹಾರಾಟ ದರ ಹಾಗೂ ಪ್ರವಾಸಗಳ ಮೇಲೆ 50% ರ ವರೆಗೂ ಕಡಿತ, ತ್ವರೆ ಮಾಡಿ!


ವಿಶೇಷ ಲೇಖನ : ಬೆಳಗಾವಿ ಜಿಲ್ಲೆಯ ಆಕರ್ಷಣೆಗಳು

ಬೆಳಗಾವಿಯು ಗೋವಾಗೆ ಹತ್ತಿರದಲ್ಲಿರುವುದರಿಂದ ಸಾಮಾನ್ಯವಾಗಿ ಈ ಭಾಗದ ಜನರು ಆಗಾಗ ಗೋವಾಗೆ ಭೇಟಿ ನೀಡಲು ಸ್ನೇಹಿತರೊಂದಿಗೋ ಇಲ್ಲವೆ ಕುಟುಂಬ ಸಮೇತರಾಗಿ ಬಾಡಿಗೆ ಟ್ಯಾಕ್ಸಿ ಅಥವಾ ತಮ್ಮ ತಮ್ಮ ಕಾರುಗಳಲ್ಲಿ ಹೋಗುವುದು ಬಹಳ ಜನಪ್ರೀಯವಾಗಿದೆ. ಪ್ರಸ್ತುತ ಲೇಖನದ ಮೂಲಕ ಬೆಳಗಾವಿಯಿಂದ ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡುತ್ತ ಗೋವಾಗೆ ತಲುಪಿ ಅಲ್ಲಿಂದ ಬೇರೆ ಮಾರ್ಗದ ಮೂಲಕ ಮತ್ತೆ ಬೆಳಗಾವಿಗೆ ಹಿಂತಿರುಗುವ ಕುರಿತು ತಿಳಿಸುತ್ತದೆ.

ನೀವೆಂದಾದರೂ ಬೆಳಗಾವಿಗೆ ಭೇಟಿ ನೀಡಿದರೆ ಈ ಪ್ರವಾಸ ಮಾಡಲು ಮರೆಯದಿರಿ. ಬೆಳಗಾವಿಯಿಂದ ಗೋವಾ ಒಟ್ಟು 125 ಕಿ.ಮೀ ಗಳಷ್ಟು ದೂರವಿದೆ.

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿಯು ಬೆಂಗಳೂರಿನ ವಾಯವ್ಯ ದಿಕ್ಕಿನಲ್ಲಿದ್ದು ಸುಮಾರು 510 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನ ಜೊತೆಗೆ ಕರ್ನಾಟಕದ ಬಹುತೇಕ ಪಟ್ಟಣಗಳಿಂದ ಬೆಳಗಾವಿಗೆ ತೆರಳಲು ಬಸ್ಸುಗಳ ವ್ಯವಸ್ಥೆಯಿದ್ದು ಬೆಳಗಾವಿಯು ಉತ್ತಮವಾದ ರಸ್ತೆ ಜಾಲವನ್ನು ಹೊಂದಿದೆ. ಅಲ್ಲದೆ ಬೆಂಗಳೂರು, ಹುಬ್ಬಳ್ಳಿ ಮುಂತಾದೆಡೆಗಳಿಂದ ರೈಲುಗಳೂ ಕೂಡ ಬೆಳಗಾವಿಗೆ ಹೊರಡಲು ಲಭ್ಯವಿದೆ.

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಮಲೆನಾಡ ಮೈಸಿರಿಯ ಛಾಯೆಯಲ್ಲಿ ನೆಲೆಸಿರುವ ಕರ್ನಾಟಕದ ದೊಡ್ಡ ಮಹಾನಗರಗಳ ಪೈಕಿ ಒಂದಾದ ಬೆಳಗಾವಿಯು ರಭಸವಾಗಿ ಬೆಳೆಯುತ್ತಿರುವ ಜಿಲ್ಲಾ ಕೇಂದ್ರವಾಗಿದ್ದು ಹಲವಾರು ಅಗ್ರಗಣ್ಯ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಐಟಿ ಕಂಪನಿಗಳಿಗೆ ತವರಾಗಿದೆ. ನಮ್ಮ ಪ್ರಯಾಣದ ಆರಂಭವನ್ನು ಈ ನಗರದಿಂದ ಮಾಡೋಣ.

ಚಿತ್ರಕೃಪೆ: Mahant025

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಮೊದಲಿಗೆ ನಗರದ ಕ್ಲಬ್ ರಸ್ತೆಯಿಂದ ಹಿಂಡಲಗಾ ಮಾರ್ಗವಾಗಿ ಸಾವಂತವಾಡಿ ರಸ್ತೆಯ ಮೂಲಕ ಅಂಬೋಲಿಗೆ ಪ್ರಯಾಣಿಸಬೇಕು. ಬೆಳಗಾವಿಯಿಂದ ಅಂಬೋಲಿಯು 70 ಕಿ.ಮೀ ಗಳಷ್ಟು ದೂರದಲ್ಲಿದೆ. ಅಂಬೋಲಿಯು ಮಳೆಗಾಲ ಹಾಗೂ ಚಳಿಗಾಲದ ಸಂದರ್ಭದಲ್ಲಿ ಮೈನೆರೆದು ನಿಂತಿರುತ್ತದೆ. ಮುಂಜಾವಿನ ಮಂಜು ಹೊಗೆಯಂತೆ ಎಲ್ಲೆಡೆ ಪಸರಿಸಿರುತ್ತದೆ. ಚುಮು ಚುಮು ಚಳಿಯು ಮೈಕೈಗಳನ್ನು ಗಡ್ಅ ಗಡ ನಡುಗಿಸುತ್ತಿರುತ್ತದೆ. ಇದು ಅಂಬೋಲಿಯ ಮಹಿಮೆ.

ಚಿತ್ರಕೃಪೆ: Anshum Mandore

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಅಂಬೋಲಿಯಲ್ಲಿರುವ ಹಿರಣ್ಯಕೇಶಿ ದೇವಾಲಯ ಹಾಗೂ ಕೊಳ. ಈ ಒಂದು ಸ್ಥಳದಲ್ಲೆ ಹಿರಣ್ಯಕೇಶಿ ನದಿಯ ಮೂಲವಿದೆಯೆನ್ನಲಾಗಿದ್ದು ಈ ಪುರಾತನ ದೇಗುಲದಲ್ಲಿ ಶಿವನ ರೂಪವಾದ ಹಿರಣ್ಯಕೇಶ್ವರನನ್ನು ಪೂಜಿಸಲಾಗುತ್ತದೆ.

ಚಿತ್ರಕೃಪೆ: Nilesh2 str

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಅಂಬೋಲಿಯಲ್ಲಿರುವ ಮತ್ತೊಂದು ಪುರಾತನವಾದ ಆಂಜನೇಯನಿಗೆ ಮುಡಿಪಾದ ಹನುಮಾನ ಮಂದಿರ.

ಚಿತ್ರಕೃಪೆ: Ishan Manjrekar

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಅನಂತರ ಪ್ರಯಾಣ ಮುಂದುವರೆಸುತ್ತ ಅಂಬೋಲಿಯಿಂದ ಕೊಂಚ ದೂರದಲ್ಲಿರುವ ಅಂಬೋಲಿ ಜಲಪಾತ ತಾಣಕ್ಕೆ ಭೇಟಿ ನೀಡಬಹುದು. ರಸ್ತೆಯ ಒಂದು ಬದಿಯಲ್ಲಿ ಜಲಪಾತ ಇನ್ನೊಂದು ಬದಿಯಲ್ಲಿ ಕಣಿವೆ ನೋಡಲು ಬಲು ಸೊಗಸಾಗಿರುತ್ತದೆ. ಮಳೆಗಾಲದ ಸಮಯವು ಈ ಜಲಪಾತ ನೋಡಲು ಅತ್ಯಂತ ಪ್ರಶಸ್ತ ಸಮಯವಾಗಿರುತ್ತದೆ.

ಚಿತ್ರಕೃಪೆ: Ishan Manjrekar

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಅಂಬೋಲಿಯನ್ನು ದರ್ಶಿಸಿದ ಬಳಿಕ ಮಹಾರಾಷ್ಟ್ರ ರಾಜ್ಯ ಹೆದ್ದಾರಿ ಸಂಖ್ಯೆ ಒಂದರಲ್ಲಿ ಪ್ರಯಾಣ ಮುಂದುವರೆಸುತ್ತ ಸುಮಾರು 30 ಕಿ.ಮೀ ಕ್ರಮಿಸಿ ಸಾವಂತವಾಡಿ ಪಟ್ಟಣವನ್ನು ತಲುಪಬೇಕು. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ಈ ತಾಲೂಕು ಪ್ರದೇಶವು ಕೊಂಕಣಿ ಮಾಲವಾನಿ ಖಾದ್ಯಗಳಿಗೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Nilesh2 str

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಸಾವಂತವಾಡಿಯು ಕಲೆ ಹಾಗೂ ಕಲಾತ್ಮಕ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಶಿಲ್ಪಗ್ರಾಮವು ಇದಕ್ಕೆ ಕುರುಹಾಗಿ ನೆಲೆ ನಿಂತಿರುವುದನ್ನು ಕಾಣಬಹುದು.

ಚಿತ್ರಕೃಪೆ: Nilesh2 str

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಒಂದೊಮ್ಮೆ ಸಾವಂತವಾಡಿ ತೊರೆದ ನಂತರ ಮಹಾರಾಷ್ಟ್ರ ರಾಜ್ಯ ಹೆದ್ದಾರಿ ಸಂಖ್ಯೆ 123 ಮೂಲಕ ನೇರವಾಗಿ 33 ಕಿ.ಮೀ ಗಳಷ್ಟು ಕ್ರಮಿಸಿ ಗೋವಾ ರಾಜ್ಯ ಪ್ರವೇಶಿಸಬೇಕು. ಮೊದಲನೆಯದಾಗಿ ಗೋವಾದ ಅರಂಬೋಲದಲ್ಲಿರುವ ಅರಂಬೋಲ ಕಡಲ ತೀರಕ್ಕೆ ಭೇಟಿ ನೀಡಿ.

ಚಿತ್ರಕೃಪೆ: Ridinghag

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಅರಂಬೋಲ್ ಕಡಲ ತೀರದ ಸನೀಹದಲ್ಲೆ ಸಮುದ್ರ ನೀರು ಹಾಗೂ ತಾಜಾ ನೀರಿನ ಮಿಶ್ರಣ ಹೊಂದಿರುವ ದಟ್ಟ ಹಸಿರಿನ ಮಧ್ಯದಲ್ಲಿ ಸ್ಥಿತವಿರುವ ಸುಂದರ ಕೊಳವೊಂದನ್ನು ಕಾಣಬಹುದಾಗಿದೆ. ಜಿಪ್ಸಿ ಸಂಗೀತ ಹಾಗೂ ಅದರ ಮಿಶ್ರಣವನ್ನು ಕೆಳಬಯಸುವವರಿಗೆ ಅರಂಬೋಲ್ ಒಂದು ವರದಾನವೆಂದೆ ಹೇಳಬಹುದು.

ಚಿತ್ರಕೃಪೆ: Elina López

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಅರಂಬೋಲಿನ ಮತ್ತೊಂದು ಆಕರ್ಷಣೆ ಎಂದರೆ ಹಣದ ಕಲ್ಲು ಅಥವಾ ಮನಿ ಸ್ಟೋನ್. ಇದನ್ನು ಅಮೇರೈಕನ್ ಕನ್ಸೆಪ್ಚುವಲ್ ಆಂಡ್ ಲ್ಯಾಂಡ್ ಆರ್ಟ್ ನ ಕಲಾಕಾರನಾದ ಜಾಸೆಕ್ ಟಿಲಿಕಿ ಎಂಬಾತನು ನಿರ್ಮಿಸಿದ್ದಾನೆ. ಇದರ ಮೇಲೆ ನಿಮಗಾದರೆ ನೀಡಿ, ನಿಮಗೆ ಅವಶ್ಯಕವಾಗಿದ್ದಲ್ಲಿ ತೆಗೆದುಕೊಳ್ಳಿ ಎಂಬರ್ಥ ಬರುವ ಆಂಗ್ಲ ಬರಹವನ್ನು ಬರೆಯಲಾಗಿದೆ. ಇದು ಯಾತ್ರಾ ಕ್ಷೇತ್ರವಾಗಿ ಜನಪ್ರೀಯವಾಗುತ್ತಿದೆ.

ಚಿತ್ರಕೃಪೆ: Tylicki

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ನಂತರ ಅರಂಬೋಲದಿಂದ ಆರು ಕಿ.ಮೀ ದೂರದಲ್ಲಿರುವ ಮ್ಯಾಂಡ್ರೇಮ್ ಬೀಚಿಗೆ ಭೇಟಿ ನೀಡಿ. ಉತ್ತರ ಗೋವಾದ ಮ್ಯಾಂಡ್ರೇಮ್ ಹಳ್ಳಿಯಲ್ಲಿರುವ ಈ ಸುಂದರ ಕಡಲ ತೀರವು ಒಂದು ಜನಪ್ರೀಯವಾದ ಪ್ರವಾಸಿ ಕೇಂದ್ರವಾಗಿದೆ.

ಚಿತ್ರಕೃಪೆ: Simon Alexander Jacob

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಮ್ಯಾಂಡ್ರೇಮ್ ಬೀಚಿನಿಂದ ಚಪೋರಾ ನ್ಬದಿ ದಾಟಿ ವಾಗಾಟೋರ್ ಪ್ರದೇಶದಲ್ಲಿರುವ ವಾಗಾತೋರ್ ಕಡಲ ತೀರಕ್ಕೆ ಭೇಟಿ ನೀಡಿ. ಕೆಂಬಣ್ಣದ ಮೊನಚಾದ ಬೆಟ್ಟ ಗುಡ್ಡಗಳಿಂದ ಸುತ್ತುವರೆದಿರುವ ವಾಗಾತೋರ್ ಕಡಲ ತೀರವು ಗೋವಾದ ಬಾರ್ಡೆಜ್ ತಾಲೂಕಿನಲ್ಲಿದೆ. ಇಲ್ಲಿ ಚಪೋರಾ ಕೋಟೆಯನ್ನೂ ಸಹ ನೋಡಬಹುದಾಗಿದೆ.

ಚಿತ್ರಕೃಪೆ: Zerohund

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ವಾಗಾತೋರ್ ದಕ್ಷಿಣಕ್ಕೆ ಹಿಪ್ಪಿಗಳ ಮೊದಲ ನೆಚ್ಚಿನ ತಾಣವಾದ ಅಂಜುನಾ ಕಡಲ ತೀರಕ್ಕೆ ಭೇಟಿ ನೀಡಿ. ವಾಗಾತೋರ್ ದಕ್ಷಿಣಕ್ಕೆ ಕೇವಲ 4 ಕಿ.ಮೀ ಗಳು ಮಾತ್ರವೆ.

ಚಿತ್ರಕೃಪೆ: Roshan Sam

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಅಂಜುನಾ ಕಡಲ ತೀರದ ನಂತರ ಕಲಂಗೂಟ್ - ಬಾಗಾ ರಸ್ತೆಯ ಮೂಲಕ ಏಳು ಕಿ.ಮೀ ಕ್ರಮಿಸಿ ಪ್ರಸಿದ್ಧ ಕಲಂಗೂಟ್ ಕಡಲ ತೀರಕ್ಕೆ ಭೇಟಿ ನೀಡಿ. ಕಲಂಗೂಟ್ ಒಂದು ಪ್ರಸಿದ್ಧ ಕಡಲ ತೀರವಾಗಿದ್ದು ಸಾಕಷ್ಟು ಜನ ಪ್ರವಾಸಿಗರನ್ನು ಇಲ್ಲಿ ಕಾಣಬಹುದು. ಹಲವಾರು ಜಲ ಕ್ರೀಡೆಗಳೂ ಇಲ್ಲಿ ಲಭ್ಯ.

ಚಿತ್ರಕೃಪೆ: Uspn

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಕಲಂಗೂಟ್ ಭೇಟಿಯ ನಂತರ ಚಾಮ್ (Chogm) ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 17 ಬಳಸಿಕೊಂಡು 17 ಕಿ.ಮೀ ಕ್ರಮಿಸಿ ಗೋವಾದ ರಾಜಧಾನಿ ನಗರ ಪಣಜಿ ಅಥವಾ ಪಂಜಿಮ್ ಗೆ ಭೇಟಿ ನೀಡಿ. ಸಾಕಷ್ಟು ಚರ್ಚುಗಳು ಹಾಗೂ ದೇವಾಲಯಗಳನ್ನು ಪಣಜಿಯಲ್ಲಿ ನೋಡಬಹುದು.

ಚಿತ್ರಕೃಪೆ: Scott Dexter

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಪಣಜಿಯಲ್ಲಿ ಸಮಯವನ್ನು ಅದ್ಭುತವಾಗಿ ಕಳೆದ ನಂತರ ಪ್ರಯಾಣವನ್ನು ಮತ್ತೆ ಬೆಳಗಾವಿಯತ್ತ ಆರಂಭಿಸಬೇಕು. ಈ ಸಂದರ್ಭದಲ್ಲಿ ಬೆಳಗಾವಿಯನ್ನು ಬೇರೆ ಮಾರ್ಗದ ಮೂಲಕ ಇನ್ನೊಂದು ಆಕರ್ಷಕ ಸ್ಥಳವನ್ನು ನೋಡುವತ್ತ ಸಾಗಲಿ. ಅದುವೆ ಮ್ಹಾದೇಯಿ ವನ್ಯಜೀವಿ ಧಾಮ. ಇದು ಪಣಜಿಯಿಂದ 60 ಕಿ.ಮೀ ಗಳಷ್ಟು ದೂರವಿದ್ದು ರಾಜ್ಯ ಹೆದ್ದಾರಿ ಒಂದರ ಮೂಲಕ ಇಲ್ಲಿಗೆ ತೆರಳಿರಿ.

ಚಿತ್ರಕೃಪೆ: LRBurdak

ಬೆಳಗಾವಿ ಗೋವಾ ಬೆಳಗಾವಿ:

ಬೆಳಗಾವಿ ಗೋವಾ ಬೆಳಗಾವಿ:

ಮ್ಹಾದೇಯಿ ಒಂದು ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು ಗೋವಾದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದೆ. ಇದೊಂದು ಜೀವ ವೈವಿಧ್ಯಮಯ ತಾಣವಾಗಿದೆ. ಬಗೆ ಬಗೆಯ ಜೀವ ಜಂತುಗಳನ್ನು ಈ ಧಾಮದಲ್ಲಿ ಕಾಣಬಹುದು. ಈ ಅಭಯಾರಣ್ಯವನ್ನು ನೋಡಿದ ಬಳಿಕ ಬಂದ ಮಾರ್ಗದಲ್ಲಿ ಮತ್ತೆ ಹೊಂಡಾ ಪ್ರದೇಶದ ವರೆಗೆ ತೆರಳಿ ಅಲ್ಲಿಂದ ರಾಜ್ಯ ಹೆದ್ದಾರಿ 31 ರ ಮೂಲಕ ಸತಾರಿ, ಕಿನಾಯೆ ಮಾರ್ಗವಾಗಿ 107 ಕಿ.ಮೀ ಕ್ರಮಿಸಿ ಬೆಳಗಾವಿಯನ್ನು ತಲುಪಿರಿ.

ಚಿತ್ರಕೃಪೆ: Saleem Hameed

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more