Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾವಂತವಾಡಿ » ಹವಾಮಾನ

ಸಾವಂತವಾಡಿ ಹವಾಮಾನ

ಸಾವಂತವಾಡಿಗೆ ಬೇಸಿಗೆಯ ನಂತರ ಹಾಗೂ ಮಳೆ ಆರಂಭವಾಗುವ ಮೊದಲು ಭೇಟಿ ನೀಡಲು ಸೂಕ್ತ ಸಮಯ. ಯೋಜನಾ ಬದ್ಧವಾಗಿ ನಿಮ್ಮ ಪ್ರವಾಸವನ್ನು ಸಿದ್ದಗೊಳಿಸಿದರೆ ಪಕ್ಕದಲ್ಲೆ ಇರುವ ಒಂದೆರಡು ದಿನ ಗೋವಾಗೂ ಹೋಗಿ ಬರಬಹುದು.

ಬೇಸಿಗೆಗಾಲ

ಸಮುದ್ರ ತೀರಕ್ಕೆ ಹತ್ತಿರದಲ್ಲೆ ಇರುವುದರಿಂದ ಸಾವಂತವಾಡಿಯಲ್ಲಿ ಗೋವಾದಲ್ಲಿ ಕಂಡು ಬರುವ ತಾಪಮಾನವೆ ಕಾಣಬಹುದು. ಗೋವಾ ಹಾಗೂ ಸುತ್ತಲಿನ ಸಾವಂತವಾಡಿಯಲ್ಲಿ ಪ್ರವಾಸ ಮಾಡುವವರಿಗೆ ಒಂದೆ ರೀತಿಯ ವಾತಾವರಣ ಕಂಡು ಬರುತ್ತದೆ. ಬೇಸಿಗೆಯ ಹಗಲಿನಲ್ಲಿ 28 ಡಿಗ್ರಿಯಿಂದ 35 ಡಿಗ್ರಿ ಸೆಲ್ಶಿಯಸ್ ವರೆಗೆ ತಾಪಮಾನವಿದ್ದು ರಾತ್ರಿಯಲ್ಲಿ ಸ್ವಲ್ಪ ತಂಪಾಗಿರುತ್ತದೆ.

ಮಳೆಗಾಲ

ಸಾವಂತವಾಡಿಯಲ್ಲಿ ಮಳೆಗಾಲ ಸಾಧಾರಣವಾಗಿದ್ದರೂ ಕಳೆದ ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿ ಕಂಡು ಬಂದಿದೆ. ಆದರೂ ರೈನ್ ಕೋಟ್ ಹಾಗೂ ಹವಾಯಿ ಸ್ಲಿಪ್ಪರುಗಳ ಅಗತ್ಯ ಅಷ್ಟಾಗಿ ಕಂಡುಬರುವುದಿಲ್ಲ.

ಚಳಿಗಾಲ

ಸಾವಂತವಾಡಿಯಲ್ಲಿ ವರ್ಷದ ಇಂತಿಂತ ತಿಂಗಳುಗಳಲ್ಲೆ ಚಳಿಗಾಲ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಹಗಲು ಹೊತ್ತಿನಲ್ಲಿ 18 ರಿಂದ 26 ಡಿಗ್ರಿ ಸೆಲ್ಶಿಯಸ್ ತಾಪಮಾನ ಇದ್ದೆ ಇರುತ್ತದೆ. ಈ ಪ್ರದೇಶ ಸಮುದ್ರ ತೀರಕ್ಕೆ ಹತ್ತಿರವಿರುವುದರಿಂದ ಮನೆ ಒಳಗೂ ಹೊರಗೂ ಶೆಕೆ ಇದ್ದೆ ಇರುತ್ತದೆ.