Search
  • Follow NativePlanet
Share
» »ಮಳೆಗಾಲದಲ್ಲಿನ್ನೂ ವಿಶೇಷವಾಗಿ ಕಾಣುತ್ತದೆ ಬೇಕಲ್ ಕಡಲ ಕೋಟೆ

ಮಳೆಗಾಲದಲ್ಲಿನ್ನೂ ವಿಶೇಷವಾಗಿ ಕಾಣುತ್ತದೆ ಬೇಕಲ್ ಕಡಲ ಕೋಟೆ

By Vijay

ಕೋಟೆಗಳು ನಿಜಕ್ಕೂ ಹಿಂದಿನ ವೈಭವವನ್ನು ಸಾರುವ, ಕಥೆಗಳನ್ನು ಹೇಳುವ, ಘಟನೆಗಳನ್ನು ತಿಳಿಸುವ ಅದ್ಭುತ ರಚನೆಗಳಾಗಿವೆ. ಯುವಕರಿಗೆ ಅದರಲ್ಲೂ ವಿಶೇಷವಾಗಿ ಹದಿಹರೆಯದ ಮಕ್ಕಳಿಗೆ ಕೋಟೆಗಳಲ್ಲಿ ಸುತ್ತಾಡುವುದೆಂದರೆ ಬಲು ಇಷ್ಟ. ಆದರೆ ಕೋಟೆಗಳು ಎಷ್ಟು ವಿಶೇಷವಾಗಿರುತ್ತದೊ ಅಷ್ಟೆ ರೋಮಾಂಚಕವಾಗಿರುತ್ತದೆ.

ಹುಬ್ಬೇರಿಸುವಂತೆ ಮಾಡುವ ಕರ್ನಾಟಕದ ಭವ್ಯ ಕೋಟೆಗಳು

ಕೆಲವು ಕೋಟೆಗಳು ಎಷ್ಟು ಸುಂದರವಾಗಿವೆ ಎಂದರೆ ಸರ್ಕಾರವು ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರ್ವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲು ಮುಂದಾಗಿರುತ್ತವೆ. ಅಂತಹ ಒಂದು ರೋಮಾಂಚಕ ಕೋಟೆಗಳ ಪೈಕಿ ಬೇಕಲ್ ಕೋಟೆ ಸಹ ಒಂದು. ಇದರ ವಿಶೇಷತೆ ಎಂದರೆ ಒಂದೆಡೆ ಕೋಟೆಯಿದ್ದರೆ ಇನ್ನೊಂದೆಡೆ ಅದ್ಭುತವಾಗಿ ಕಂಡುಬರುವ ಅರಬ್ಬಿ ಸಮುದ್ರ ತೀರ.

ಯಾರಿಗೆ ತಾನೆ ಇಷ್ಟ ಇಲ್ಲಿ ಹೇಳಿ ಇಂತಹ ಸ್ಥಳಕ್ಕೆ ಪ್ರವಾಸ ಮಾಡಲು. ಕಡಲ ತೀರದ ಜೊತೆ ಹಳೆಯ ಗತ ವೈಭವ. ಅಷ್ಟೆ ಅಲ್ಲ, ಮೇಲೇರಿ ಸಮುದ್ರದ ವಿಶಾಲತೆ ಅನುಭವಿಸುವಂತಹ ಅವಕಾಶ. ನೀರಾಟವಾಡಿ ಕೋಟೆಯಲ್ಲಿ ಸುತ್ತಾಡುವಂತಹ ಆಸೆ, ಎಲ್ಲವೂ ನೆರವೇರುತ್ತದೆ ಈ ಕೋಟೆಯಲ್ಲಿ. ಹಾಗಾದರೆ ಲೆಖನದ ಮೂಲಕ ಇದರ ಕುರಿತು ತಿಳಿಯಿರಿ ಹಾಗೂ ಭೇಟಿ ನೀಡಲು ಇಂದೆ ಯೋಚಿಸಿ ಹಾಗೂ ಯೋಜಿಸಿ.

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಈ ಸುಂದರ ಕೋಟೆಯು ಸಾಕಷ್ಟು ಜನಪ್ರೀಯತೆಗಳಿಸುತ್ತಿದೆ. ಕಾರಣ ಇದರ ಸುತ್ತಮುತ್ತಲಿರುವ ಅದ್ಭುತ ಹಸಿರಿನ ಸೌಂದರ್ಯ ಅದೂ ಮಳೆಗಾಲದ ಸಮಯದಲ್ಲಿ ವಿಶೇಷವಾಗಿ. ಅದಕ್ಕೆ ಮತ್ತಷ್ಟು ಇಂಬು ನೀಡುವಂತಿದೆ ಅರಬ್ಬಿ ಸಮುದ್ರದ ಕಣ್ಮನ ಸೆಳೆಯುವ ನೋಟ.

ಚಿತ್ರಕೃಪೆ: Joseph D'Mello

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಕಡಲ ತೀರವು ಮಲೀನಗೊಂಡಿಲ್ಲ, ಚಿಕ್ಕ ಪುಟ್ಟ ಬಂಡೆಗಳ ಮೇಲೆ ಅಲೆಗಳು ಹಾಯುವಾಗ ಆ ಸಮಯದಲ್ಲಿ ಅಲ್ಲಿ ನಿಂತು ಅದರ ಆನಂದ ಪಡೇಯುವುದೆಂದರೆ ಬಹುತೇಕರಿಗೆ ಬಲು ಪ್ರೀತಿ. ಹೆಚ್ಚು ವಾಣಿಜ್ಯಿಕರಣಗೊಳ್ಳದಿರುವುದು ಮತ್ತೊಂದು ವಿಶೇಷತೆ. ಚಳಿಗಾಲ ಇಲ್ಲಿಗೆ ತೆರಳಲು ಪ್ರಶಸ್ತವಾಗಿದ್ದರೂ ಮಳೆಗಾಲದಲ್ಲಿ ಇದು ಸಿಂಗರಿಸಿಕೊಳ್ಳುವ ರೀತಿ ಮತ್ತಷ್ಟು ಮನಮೋಹಕವಾಗಿರುತ್ತದೆ.

ಚಿತ್ರಕೃಪೆ: Priyadarshini Rajendran

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಇತ್ತೀಚಿನ ಕೆಲ ವರ್ಷಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನೂ ಸಹ ಸೆಳೆಯುತ್ತಿದೆ. ಅಲ್ಲದೆ ಕೋಟೆಯು ಇನ್ನೂ ಸದೃಢವಾಗಿದ್ದು ಆಕರ್ಷಕ ರಚನೆಗಳಿಂದ ಕೂಡಿರುವುದು ಇತಿಹಾಸಪ್ರೀಯ ಪ್ರವಾಸಿಗರ ದೃಷ್ಟಿಯಿಂದ ಹೆಚ್ಚಿನ ಮನ್ನಣೆಗಳುಸಿದೆ.

ಚಿತ್ರಕೃಪೆ: Reji

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಕೋಟೆಯ ಮುಖ್ಯ ಗುಣ ಲಕ್ಷಣ ಎಂದರೆ ನೀರು ಸಂಗ್ರಹಿಸಿ ಶೇಖರಿಸಿಡಲು ನಿರ್ಮಿಸಲಾದ ನೀರಿನ ಟ್ಯಾಂಕ್ ಹಾಗೂ ಅದರೆಡೆಗೆ ತೆರಳಲು ನಿರ್ಮಿಸಲಾಗಿರುವ ಮೆಟ್ಟಿಲುಗಳು. ಇಂದಿಗೂ ಈ ರಚನೆ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Akshathkumar Shetty

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ವೀಕ್ಷಣಾ ಗೋಪುರ ಈ ಕೋಟೆಯ ಮತ್ತೊಂದು ಹೈಲೈಟ್. ಇಲ್ಲಿಂದ ಸುತ್ತಮುತ್ತಲಿನ ಹಲವು ಪಟ್ಟಣಗಳ ಹಾಗೂ ಅರಬ್ಬಿ ಸಮುದ್ರದ ಮನಸೆಳೆವಂತಹ ವಿಹಂಗಮ ನೋಟಗಳನ್ನು ಕಾಣಬಹುದು. ನೀವು ಪ್ರತಿಭೆಯುಳ್ಳವರಾಗಿದ್ದರೆ ಅತ್ಯುತ್ತಮ ಎನ್ನಬಹುದಾದ ಚಿತ್ರಗಳನ್ನು ಕ್ಲಿಕ್ಕಿಸಲು ವಿಫುಲವಾದ ಅವಕಾಶ ನಿಮಗಿಲ್ಲಿ ಲಭಿಸುತ್ತದೆ.

ಚಿತ್ರಕೃಪೆ: Kerala Tourism

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಈ ಕೋಟೆ ತಾಣದ ಅಗಾಧ ಜನಪ್ರೀಯತೆಗೆ ಕಾರಣವಾದ ಮತ್ತೊಂದು ಅಂಶವೆಂದರೆ ಇಲ್ಲಿ ಆವಾಗಾವಾಗ ಚಿತ್ರೀಕರಣಗಳು ನಡೆಯುವುದು. ನಿಮಗೆ ಮಣಿರತ್ನಂ ಅವರ ಬಾಂಬೆ ಚಿತ್ರದ "ಉಯಿರೇ ಉಯಿರೇ" ಎಂಬ ಅದ್ಭುತ ಹಾಡು ನೆನಪಿದೆಯೆ? ಹೌದು ಆ ಹಾಡಿನ ಚಿತ್ರೀಕರಣ ನಡೆದಿರುವುದು ಇದೇ ಬೇಕಲ್ ಕೋಟೆಯಲ್ಲಿ.

ಚಿತ್ರಕೃಪೆ: Anuradha Dissanyake

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಇಷ್ಟಾಗಿ ಈ ಕೋಟೆ ಇರುವುದು ಎಲ್ಲಿ ಗೊತ್ತೆ? ಕೇರಳದ ಕಾಸರಗೋಡಿನಲ್ಲಿ. ಕಾಸರಗೋಡು ಜಿಲ್ಲೆಯ ಬೇಕಲ್ ಎಂಬ ಗ್ರಾಮದಲ್ಲಿ ಈ ಕೋಟೆಯಿದೆ. ಇದರ ಹೆಗ್ಗಳಿಕೆಯೆಂದರೆ ಕೇರಳದಲ್ಲೆ ಅತಿ ದೊಡ್ಡದಾದ ಕೋಟೆ ಇದಾಗಿದೆ. ಹಾಗಾಗಿ ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ.

ಚಿತ್ರಕೃಪೆ: Sreejith K

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಕರ್ನಾಟಕದ ಮಂಗಳೂರಿನಿಂದ ಈ ಕೋಟೆಯು ಕೇವಲ 67 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ತೆರಳಲು ಎಲ್ಲ ರೀತಿಯ ಅನುಕೂಲಗಳಿವೆ. ರೈಲಿನ ಮುಖಾಂತರ ತಲುಪ್ಬೇಕೆಂದಿದ್ದಲ್ಲಿ ಮಂಗಳೂರು-ಪಾಲಕ್ಕಾಡ್ ರೈಲು ಮಾರ್ಗದಲ್ಲಿರುವ ಕನ್ಹಾನ್ ಗಡ್ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಹೊಂದಿದೆ. ಇಲ್ಲಿಂದ ಬೇಕಲ್ ಕೋಟೆ ಕೇವಲ 11 ಕಿ.ಮೀ ಗಳಷ್ಟು ಮಾತ್ರವೆ ದೂರವಿದೆ.

ಚಿತ್ರಕೃಪೆ: Kerala Tourism

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಕೋಟೆಯು ಒಟ್ಟಾರೆಯಾಗಿ 40 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿದ್ದು ಅತಿ ಸುಂದರವಾಗಿ ನಿರ್ವಹಿಸಲಾಗಿರುವ ಉದ್ಯಾನಗಳನ್ನು ಹೊಂದಿದೆ. ನಿಜಕ್ಕೂ ಈ ತಾಣವು ಗಲೀಜುಗೊಳ್ಳದೆ ಇರುವುದು ಹಾಗೂ ಉದ್ಯಾನವನ್ನು ಅತಿ ಸ್ವಚ್ಛವಾಗಿಟ್ಟಿರುವುದು ಇದರ ಜನಪ್ರೀಯತೆಗೆ ಮತ್ತೊಂದು ಕಾರಣವಾಗಿದೆ.

ಚಿತ್ರಕೃಪೆ: Reji

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಇನ್ನೂ ಇದರ ಸಂಕ್ಷಿಪ್ತ ಇತಿಹಾಸ ಏನು ಹೇಳುತ್ತದೆಂದರೆ : ಬೆದ್ನೊರೆಯ ಶಿವಪ್ಪ ನಾಯಕ ಅರಸನು 1650 ರಲ್ಲಿ ಈ ಕೋಟೆ ನಿರ್ಮಿಸಿದ್ದಾನೆ. ಹಲವು ರಾಜಾಡಳಿತಕ್ಕೆ ಒಳಪಟ್ಟ ಬೇಕಲ ಪಟ್ಟಣ ಹಾಗೂ ಅದರ ಕೋಟೆಯು ಮಲಬಾರ್ ಹಾಗೂ ತುಳುನಾಡು ಪ್ರದೇಶದ ಮುಖ್ಯ ಬಂದರು ಪಟ್ಟಣವಾಗಿ ಬೆಳೆಯಿತು.

ಚಿತ್ರಕೃಪೆ: Masood Ahmed

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ತಾಳಿಕೋಟೆಯ ಯುದ್ಧದ ನಂತರ ವಿಜಯ ನಗರ ಸಾಮ್ರಾಜ್ಯ ಬಲಹೀನವಾಗಿ ಕೆಳದಿಯ ನಾಯಕರು ಕಾಸರಗೋಡು ಸೇರಿ ತುಳುನಾಡಿನ ಹಲವು ಪ್ರದೇಶಗಳಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದರು. ಬೇಕಲ್ ಗ್ರಾಮವು ಕಡಲ ತೀರದಲ್ಲಿರುವುದರಿಂದ ಹಾಗೂ ಉತ್ತಮ ಬಂದರು ಪ್ರದೇಶವಾಗಿದ್ದುದರಿಂದ ಕೋಟೆ ನಿರ್ಮಿಸಲು ಹಿರಿಯ ವೆಂಕಟಪ್ಪ ನಾಯಕ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದನಾದರೂ ವೆಂಕಟಪ್ಪ ನಾಯಕ ಪೂರ್ಣಗೊಳಿಸಿದ.

ಚಿತ್ರಕೃಪೆ: Renjith Sasidharan

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಹೈದರ್ ಅಲಿ ಹಾಗೂ ಟಿಪ್ಪುವಿನ ಪ್ರಭಾವ, ಶಕ್ತಿ ಬೆಳೆಯುತ್ತಿದ್ದಂತೆ ಬೇಕಲ್ ಕೋಟೆಯು ಟಿಪ್ಪುವಿನ ತೆಕ್ಕೆಗೆ ಬಿದ್ದಿತು. ನಂತರ ಟಿಪ್ಪುವಿಗೆ ಈ ಕೋಟೆಯು ಅತಿ ಪ್ರಮುಖ ಸೈನ್ಯದ ಕೇಂದ್ರವಾಗಿ ಪಾತ್ರನಿರ್ವಹಿಸಿತು.

ಚಿತ್ರಕೃಪೆ: Joseph Lazer

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

ಕೊನೆಯದಾಗಿ 1799 ರಲ್ಲಿ ನಡೆದ ನಾಲ್ಕನೇಯ ಆಂಗ್ಲೊ-ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಹತ್ಯೆಯಾಗಿ ನಂತರ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯ ಅಧೀನಕ್ಕೆ ಈ ಬೇಕಲ್ ಕೋಟೆ ಒಳಪಟ್ಟಿತು. ಬೇಕಲ್ ಕೋಟೆಯಿಂದ ಅರಬ್ಬಿ ಸಮುದ್ರ ಕಂಡುಬರುವ ರೀತಿ.

ಚಿತ್ರಕೃಪೆ: Fahamidha jabeen

ಹಚ್ಚಹಸಿರಿನ ಬೇಕಲ್ ಕೋಟೆ:

ಹಚ್ಚಹಸಿರಿನ ಬೇಕಲ್ ಕೋಟೆ:

1992 ರಲ್ಲಿ ಭಾರತ ಸರ್ಕಾರವು ಬೇಕಲ್ ಕೋಟೆಯನ್ನು ವಿಶೇಷ ಪ್ರವಾಸಿ ಪ್ರದೇಶವಾಗಿ ಘೋಷಿಸಿದೆ. ನಂತರ ಇದನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ 1995 ರಲ್ಲಿ ಬೇಕಲ್ ಪ್ರವಾಸಿ ಅಭಿವೃದ್ಧಿ ನಿಗಮ (ಬೇಕಲ್ ಟೂರಿಸಂ ಡೆವೆಲಪ್ಮೆಂಟ್ ಕಾರ್ಪೊರೇಷನ್) ಅನ್ನು ಸ್ಥಾಪಿಸಲಾಯಿತು. ಹೀಗಾಗಿ ಇದು ಇಂದು ಅದ್ಭುತ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತಿದೆ.

ಚಿತ್ರಕೃಪೆ: Reji

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more