» »ಎಲ್ಲರನ್ನು ಭಯಪಡಿಸುತ್ತಿರುವ ರೈಲ್ವೆ ಸ್ಟೇಷನ್‍ಗಳು

ಎಲ್ಲರನ್ನು ಭಯಪಡಿಸುತ್ತಿರುವ ರೈಲ್ವೆ ಸ್ಟೇಷನ್‍ಗಳು

Written By:

ಕೆಲವು ಸ್ಥಳಗಳು ನೋಡಲು ಎಷ್ಟು ಸುಂದರವಾಗಿರುತ್ತದೆಯೊ ಅಷ್ಟೇ ಭಯಾನಕವಾಗಿರುತ್ತದೆ ಕೂಡ. ಆ ಸ್ಥಳಗಳಿಗೆ ಕೆಲವೊಮ್ಮೆ ಒಳ್ಳೆಯ ಪ್ರಚಾರ ಹಬ್ಬಿದ್ದರೆ, ಇನ್ನು ಕೆಲವೊಮ್ಮೆ ಭಯಾನಕ ಸ್ಥಳವೆಂದು ಹಣೆ ಪಟ್ಟಿ ಹಾಕುತ್ತಾರೆ. ಆದರೆ ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಮಾತ್ರ ಅವರವರ ನಂಬಿಕೆಗೆ ಬಿಟ್ಟಿದ್ದು. ಪ್ರಸ್ತುತ ಲೇಖನದಲ್ಲಿ ಎಲ್ಲರನ್ನು ಭಯಪಡಿಸುತ್ತಿರುವ ಭಯಾನಕವಾದ ರೈಲ್ವೆ ನಿಲ್ದಾಣಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಈ ಕೋಟೆಯ ಒಳಹೋದವರು ಎಂದಿಗೂ ಹೋರಗೆ ಬರುವುದಿಲ್ಲ

ಪಶ್ಚಿಮ ಪೂರ್ವದ ಬಂಗಾಳದಲ್ಲಿನ ಪುರುಲಿಯಾ ಪ್ರದೇಶದಲ್ಲಿ ಮಾವೋವಾದಿಗಳ ಸ್ಥಳವೆಂದು ಹೇಳಲಾಗುತ್ತದೆ. ಬೆಗನ್ ಕೊಡೊರ್ ರೈಲ್ವೆ ನಿಲ್ದಾಣದಲ್ಲಿ ದಕ್ಷಿಣ ಪೂರ್ವದ ರೈಲ್ವೆ ಸಿಬ್ಬಂದಿಗಳು ಹಾಗು ಕೆಲಸಗಾರರು ಆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ನಿರಾಕರಿಸುತ್ತಾರೆ. ಏಕೆಂದರೆ ಈ ರೈಲ್ವೆ ನಿಲ್ದಾಣದ ಬಳಿ ಬಿಳಿ ಸೀರೆಯನ್ನು ಧರಿಸಿರುವ ಮಹಿಳೆಯು ಸಂಚಾರ ಮಾಡುತ್ತಾಳೆ ಎಂಬ ಪ್ರಚಾರ ಚಾಲ್ತಿಯಲ್ಲಿದೆ.

ಒಂದೇ ರಾತ್ರಿಯಲ್ಲಿ ಸ್ವತಃ ದೆವ್ವಗಳೇ ನಿರ್ಮಿಸಿದ ದೇವಾಲಯವಿದು

42 ವರ್ಷಗಳ ನಂತರ ಕಳೆದ ವರ್ಷ ಪುನಃ ತೆರೆಯಲಾಯಿತು. ಈ ರೈಲ್ವೆ ನಿಲ್ದಾಣದಲ್ಲಿ ಖಾಸಗಿಯಾಗಿ ಟಿಕೆಟ್‍ಗಳನ್ನು ಮಾರಾಟ ಮಾಟುವ ಹಕ್ಕನ್ನು ಡಲೂ ಮಹೋಟ್ ಎಂಬುವವನು ಮಾತ್ರವೇ ಇಲ್ಲಿ ಕೆಲಸ ಮಾಡುತ್ತಿದ್ದಾನೆ.

ಈ ಭಯಾನಕ ಹಳ್ಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಒಂದು ಜೀವಿಯು ಇರುವುದಿಲ್ಲ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಪಶ್ಚಿಮ ಬೆಂಗಾಲದಲ್ಲಿನ ಪುರಿಲಿಯಾ ಜಿಲ್ಲೆಯ ಹೆಡ್ ಕೌಟರ್ಸ್‍ನಲ್ಲಿ ಸುಮಾರು 43 ಕಿ.ಮೀ ದೂರದಲ್ಲಿನ ಬೆಗನ್ ಕೊಡೊರ್ ರೈಲ್ವೆ ಸ್ಟೇಷನ್‍ನನ್ನು 1967 ರಲ್ಲಿ ಮುಚ್ಚಿ ಹಾಕಿದರು. ಇದಕ್ಕೆ ಬಲವಾದ ಕಾರಣವೆನೆಂದರೆ ಆ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಉದ್ಯೋಗಿ ಒಮ್ಮೆ ಬಿಳಿ ಸೀರೆಯನ್ನು ಧರಿಸಿದ (ದೆವ್ವ) ಮಹಿಳೆಯನ್ನು ಪ್ಯಾಸೆಂಜರ್ ರೈಲಿನ ಹಿಂದೆ ಓಡಿ ಹೋಗುವುದನ್ನು ಕಂಡನಂತೆ.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಮರುದಿನ ಆ ರೈಲ್ವೆ ಉದ್ಯೋಗಿ ಮರಣ ಹೊಂದಿದನಂತೆ. ಈ ಸಂಘಟನೆ ಅಲ್ಲಿನ ಸಿಬ್ಬಂದಿಗಳಿಗೆ ಎಷ್ಟು ಭಯವು ಅವರಿಸಿತು ಎಂದರೆ ಆ ರೈಲ್ವೆ ನಿಲ್ದಾಣದ ಮಾಸ್ಟರ್ ಹಾಗು ಸಿಬ್ಬಂದಿಗಳೆಲ್ಲರೂ ಜಾಗ ಖಾಲಿ ಮಾಡಿದರಂತೆ.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಅಂದಿನಿಂದ ಆ ಸ್ಟೇಷನ್ನಿಗೆ ನಿಲ್ದಾಣವಾಗುತ್ತಿದ್ದ ರೈಲುಗಳೆಲ್ಲಾ ಆ ದಿನಗಳ ನಂತರ ಅತ್ಯಂತ ವೇಗವಾಗಿ ನಿಲ್ದಾಣ ಮಾಡದೇ ಹೋಗುತ್ತಿದ್ದವಂತೆ. ಇದರಿಂದಾಗಿ ಆ ಪ್ರದೇಶದಲ್ಲಿನ ಪ್ರಜೆಗಳು, ಮುಖ್ಯವಾಗಿ ರೈತರು ಹಲವಾರು ತೊಂದರೆಗಳನ್ನು ಅನುಭವಿಸಿದರು.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಯಾವುದೇ ಒಂದು ರೈಲ್ವೆ ನಿಲ್ದಾಣದಲ್ಲಿ ಹಲವಾರು ಜನಸಂಖ್ಯೆಯಲ್ಲಿ ತುಂಬಿರುತ್ತದೆ. ಆದರೆ ಈ ರೈಲ್ವೆ ನಿಲ್ದಾಣದ ಬಳಿ ಯಾವುದೇ ಒಂದು ಮನುಷ್ಯನು ಕೂಡ ಇರುವುದಿಲ್ಲ. ಈ ರೈಲ್ವೆ ಸ್ಟೇಷನ್ ಎಲ್ಲಾ ರೈಲ್ವೆ ಸ್ಟೇಷನ್‍ಗಳಿಗಿಂತ ಭಿನ್ನವಾದುದು.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಆ ರೈಲ್ವೆ ನಿಲ್ದಾಣವೆಂದರೆ ಪ್ರಯಾಣಿಕರ ಎದೆಯಲ್ಲಿ ಎದೆ ಬಡಿತ ಹೆಚ್ಚಾಗುತ್ತದೆ. ಅಲ್ಲಿ ಅಸ್ಪಷ್ಟವಾದ ಆತ್ಮಗಳ ಸಂಚಾರವಿದೆ ಎಂದು ಅಲ್ಲಿನ ಜನರು ನಂಬುತ್ತಾರೆ. ಇದು ಬೆಂಗಾಲದ ಪುರುಲಿಯಾ ಜಿಲ್ಲೆಯಿಂದ ಸುಮಾರು 40 ಕಿ.ಮೀ ದೂರದಲ್ಲಿ ಬೆಗನ್ ಕೊಡೊರ್ ರೈಲ್ವೆ ನಿಲ್ದಾಣವಾಗಿದೆ.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಇಲ್ಲಿನ ಆತ್ಮಗಳ ಸಂಚಾರದ ಬಗ್ಗೆ ತಿಳಿದ ರೈಲ್ವೆ ಸಿಬ್ಬಂದಿಗಳು ಅಲ್ಲಿ ಕೆಲಸ ಮಾಡಲು ಯಾವುದೇ ವ್ಯಕ್ತಿಯು ಧೈರ್ಯ ಮಾಡುತ್ತಿಲ್ಲ. ಈ ಸ್ಥಳದ ಬಗ್ಗೆ ತಿಳಿದು ಅವರೆಲ್ಲಾ ಕೆಲಸವನ್ನು ಬಿಟ್ಟು ಹೋಗುತ್ತಿದ್ದಾರೆ ಎನ್ನಲಾಗಿದೆ.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಅಲ್ಲಿ ಒಂದು ದಿನ ರೈಲ್ವೆ ಉದ್ಯೋಗಿ ರಾತ್ರಿ ಕೆಲಸ ನಿರ್ವಹಿಸುವಾಗ ಆ ರೈಲ್ವೆ ಸ್ಟೇಷನ್‍ನಲ್ಲಿ ರೈಲು ನಿಂತಿತು. ನಂತರ ಆ ರೈಲು ಯಥಾ ಪ್ರಕಾರ ಸ್ಟಾರ್ಟ್ ಆಯಿತು.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ತದನಂತರ ಕೆಲಸ ನಿರ್ವಹಿಸುತ್ತಿದ್ದ ಆ ಉದ್ಯೋಗಿಯು ಆ ರೈಲನ್ನು ನೋಡುತ್ತಿದ್ದ ಸಮಯದಲ್ಲಿ ರೈಲಿನ ಹಿಂದೆ ಕೂದಲು ಬಿಟ್ಟುಕೊಂಡ ಹಾಗು ಬಿಳಿ ಸೀರೆ ಧರಿಸಿದ ಮಹಿಳೆಯು ರೈಲಿನ ಹಿಂದೆ ಓಡುತ್ತಿರುವುದನ್ನು ಕಂಡನು.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಯಾರೊ ಪ್ರಯಾಣಿಕರಾಗಿರಬಹುದೆಂದು ತಡೆಯಲು ಪ್ರಯತ್ನ ಮಾಡಿದನು. ಆದರೆ ಆ ಸ್ತ್ರೀಯು ತಕ್ಷಣ ಮಾಯವಾದಳು. ಅಷ್ಟೇ ಆ ಉದ್ಯೋಗಿ ಹೃದಯ ಹಾಗೆಯೇ ನಿಂತು ಹೋಯಿತಂತೆ.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಆ ಸನ್ನಿವೇಶವನ್ನು ಹತ್ತಿರದಿಂದ ನೋಡಿದ ಆ ವ್ಯಕ್ತಿಯು ಮರುದಿನ ಆಕಸ್ಮಿಕವಾಗಿ ಮರಣ ಹೊಂದಿದನು. ಅದೇ ವಿಧವಾಗಿ ಹಲವಾರು ಮಂದಿ ಈ ಸನ್ನಿವೇಶದ ಅನುಭವ ಪಡೆದವರು ಕೂಡ ಅಲ್ಲಿ ಅನುಭವಿಸಿದ್ದಾರಂತೆ. ಹಾಗಾಗಿ ಜನರು, ಸಿಬ್ಬಂಧಿಗಳು ಕೂಡ ಅಲ್ಲಿ ಕೆಲಸ ಮಾಡಲು ಹೆದರುತ್ತಿದ್ದಾರಂತೆ.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಹೀಗಾಗಿ ಉದ್ಯೋಗಿಗಳು ಕೂಡ ಅಲ್ಲಿ ಕೆಲಸ ಮಾಡಲು ನಿರಾಕರಿಸಿದ ಕಾರಣ 1967 ರಲ್ಲಿ ಆ ಸ್ಟೇಷನ್ ಅನ್ನು ಪೂರ್ತಿಯಾಗಿ ಮುಚ್ಚಿ ಹಾಕಿದರು. ಮತ್ತೇ 2009 ರಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಆ ರೈಲ್ವೆ ನಿಲ್ದಾಣವನ್ನು ಪುನಃ ತೆರೆದರು. ಆದರೆ ಯಾವುದೇ ವ್ಯಕ್ತಿಗಳು ಅಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಅಲ್ಲಿನ ಎಲ್ಲಾ ಕೆಲಸಗಳನ್ನು ಆ ಖಾಸಗಿ ಏಜೆಂಟ್ ನೋಡಿಕೊಳ್ಳುತ್ತಿದ್ದಾನೆ. ಆ ರೈಲ್ವೆ ನಿಲ್ದಾಣದಲ್ಲಿ ಆ ಪ್ರಯಾಣಿಕರು ಹಗಲು ಹೊತ್ತು ಮಾತ್ರ ಇರುತ್ತಾರೆ.

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ಬೆಗನ್ ಕೊಡೊರ್ ರೈಲ್ವೆ ನಿಲ್ದಾಣ

ರಾತ್ರಿಯಾದರೆ ಸಾಕು ಎಲ್ಲರೂ ಜಾಗ ಖಾಲಿ ಮಾಡುತ್ತಾರೆ. ಆದರೆ ರೈಲ್ವೆ ಅಧಿಕಾರಿಗಳು ಮಾತ್ರ ಇವೆಲ್ಲಾ ನಿಜ ಅಲ್ಲವೆಂದೂ ಹಾಗು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಜನರಿಗೆ ಆ ಭಯ ಮಾತ್ರ ಇದುವರೆವಿಗೂ ಹೋಗಿಲ್ಲ. ಇದು ಒಂದು ಮಿಸ್ಟರಿಯಾಗಿಯೇ ಇಂದಿಗೂ ಉಳಿದಿದೆ.

Please Wait while comments are loading...