Search
  • Follow NativePlanet
Share
» »ಶಿರಿಡಿಗೆ ತೆರಳುತ್ತಿದ್ದೀರಾ? ಹಾಗಾದರೆ ಈ ಪ್ರದೇಶಗಳನ್ನು ತಪ್ಪದೇ ಭೇಟಿ ನೀಡಿ ಬನ್ನಿ...

ಶಿರಿಡಿಗೆ ತೆರಳುತ್ತಿದ್ದೀರಾ? ಹಾಗಾದರೆ ಈ ಪ್ರದೇಶಗಳನ್ನು ತಪ್ಪದೇ ಭೇಟಿ ನೀಡಿ ಬನ್ನಿ...

ಶಿರಿಡಿಯಲ್ಲಿ ಪ್ರಧಾನವಾದ ಆಕರ್ಷಣೆ ಎಂದರೆ ಅದು ಶಿರಿಡಿ ಸಾಯಿಬಾಬಾ ದೇವಾಲಯ. ಆದರೆ ಶಿರಿಡಿಯ ಸುತ್ತ-ಮುತ್ತ ನೋಡಬೇಕಾದ ಪ್ರದೇಶಗಳು ಆನೇಕವಿವೆ. ಅವುಗಳಲ್ಲಿ ಮುಖ್ಯವಾದುವು ಎಂದರೆ ಅಜಂತ, ಎಲ್ಲೋರ ಗುಹೆಗಳು, ತ್ರಯಂಬಕೇಶ್ವರ, ಬೀಚ್‍ಗಳು, ಕೋಟೆಗಳು,

ಶಿರಿಡಿಯಲ್ಲಿ ಪ್ರಧಾನವಾದ ಆಕರ್ಷಣೆ ಎಂದರೆ ಅದು ಶಿರಿಡಿ ಸಾಯಿಬಾಬಾ ದೇವಾಲಯ. ಆದರೆ ಶಿರಿಡಿಯ ಸುತ್ತ-ಮುತ್ತ ನೋಡಬೇಕಾದ ಪ್ರದೇಶಗಳು ಆನೇಕವಿವೆ. ಅವುಗಳಲ್ಲಿ ಮುಖ್ಯವಾದುವು ಎಂದರೆ ಅಜಂತ, ಎಲ್ಲೋರ ಗುಹೆಗಳು, ತ್ರಯಂಬಕೇಶ್ವರ, ಬೀಚ್‍ಗಳು, ಕೋಟೆಗಳು, ಗಿರಿಧಾಮಗಳು ಮತ್ತು ವನ್ಯ ಪ್ರಾಣಿಗಳನ್ನು ಹೊಂದಿರುವ ಅಭಯಾರಣ್ಯಗಳನ್ನು ಕಾಣಬಹುದು. ನೀವು ಸತತ ಮೂರರಿಂದ ನಾಲ್ಕು ದಿನಗಳ ಕಾಲ ಶಿರಿಡಿ ಟ್ರಿಪ್ ಪ್ಲಾನ್ ಮಾಡುವುದಾದರೆ ಇವೆಲ್ಲಾ ತಾಣಗಳಿಗೆ ಭೇಟಿ ನೀಡಬಹುದು.

ಇಷ್ಟೇ ಅಲ್ಲ, ಟ್ರೆಕ್ಕಿಂಗ್ ವೈಲ್ಡ್ ಲೈಫ್ ಸಫಾರಿ ಮೊದಲಾದ ಸಾಹಸಗಳನ್ನು ಇಲ್ಲಿ ಅಸ್ವಾಧಿಸಬಹುದಾಗಿದೆ. ಹಾಗಾದರೆ ಶಿರಿಡಿ ಟ್ರಿಪ್‍ಗೆ ಸಿದ್ಧರಾಗಿ. ಶಿರಿಡಿ ಸಾಯಿಬಾಬಾ ದೇವಾಲಯವು ನಮ್ಮ ಭಾರತ ದೇಶದಲ್ಲಿಯೇ ಪ್ರಖ್ಯಾತಿ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಸಾಯಿಬಾಬಾ ಅವರ ಅಸ್ಥಿಕವನ್ನು ಇಟ್ಟಿದ್ದಾರೆ. ನಾಗಪುರಕ್ಕೆ ಸೇರಿದ ಕೋಟೀಶ್ವರನೊಬ್ಬ ಶ್ರೀ ಕೃಷ್ಣನಿಗಾಗಿ ಒಂದು ದೇವಾಲಯವನ್ನು ನಿರ್ಮಾಣ ಮಾಡಲು ಪ್ರಾರಂಭ ಮಾಡಿದನಂತೆ. ಆದರೆ 1918 ರಲ್ಲಿ ಸಾಯಿಬಾಬಾ ದೈವಸಾನಿಧ್ಯವನ್ನು ಹೊಂದಿ ಅಸ್ಥಿಕಗಳನ್ನು ದೇವಾಲಯದಲ್ಲಿ ಇಟ್ಟನಂತೆ. ಹಾಗಾಗಿ ನಿರ್ಮಾಣ ಮಾಡಿದ ಆ ದೇವಾಲಯವು ಶಿರಿಡಿ ಸಾಯಿಬಾಬಾ ದೇವಾಲಯವಾಗಿ ಪ್ರಸಿದ್ಧಿಯನ್ನು ಹೊಂದಿತು.

ಪ್ರಧಾನ ದೇವಾಲಯ

ಪ್ರಧಾನ ದೇವಾಲಯ

ಶಿರಿಡಿ ದೇವಾಲಯದಲ್ಲಿ ಬಾಬಾ ಅಸ್ಥಿಕವನ್ನು ಇಟ್ಟಿದ್ದಾರೆ. ನಾಗಪೂರ್‍ಕ್ಕೆ ಸೇರಿದ ಒಬ್ಬ ಕೋಟ್ಯಾಧಿಶ್ವರನು ಶ್ರೀ ಕೃಷ್ಣನಿಗಾಗಿ ಒಂದು ದೊಡ್ಡದಾದ ದೇವಾಲಯವನ್ನು ನಿರ್ಮಾಣ ಮಾಡಿದನು. ಆದರೆ 1918 ರಲ್ಲಿ ಸಾಯಿಬಾಬಾ ದೇವಾಲಯವಾಯಿತು. ಬಾಬಾ ಅವರ ಅಸ್ಥಿಕವನ್ನು ದೇವಾಲಯದಲ್ಲಿಯೇ ಇಟ್ಟಿದ್ದಾರೆ. ಹಾಗಾಗಿಯೇ ಶಿರಿಡಿ ಸಾಯಿಬಾಬಾ ದೇವಾಲಯ ಎಂದೇ ಪ್ರಪಂಚ ವ್ಯಾಪ್ತಿ ಪ್ರಖ್ಯಾತಿಯನ್ನು ಪಡೆದಿದೆ.

ಭೇಟಿ ನೀಡುವ ಸಮಯ : ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೇವಾಲಯಕ್ಕೆ ಭಕ್ತರಿಗೆ ಪ್ರವೇಶವಿರುತ್ತದೆ.

PC:brunda nagaraj

ದ್ವಾರಕಾಮಾಯಿ

ದ್ವಾರಕಾಮಾಯಿ

ಶಿರಿಡಿ ದೇವಾಲಯದ ಪ್ರವೇಶದ ಮಸೀದಿಯೇ ದ್ವಾರಕಾಮಾಯಿ. ಇದರಲ್ಲಿಯೇ ಬಾಬಾ ತಮ್ಮ ಹೆಚ್ಚು ಕಾಲ ಕಳೆದರಂತೆ. ಅಲ್ಲಿ ಪ್ರತಿ ದಿನ ಸಂಜೆ ಬಾಬಾ ದೀಪವನ್ನು ಬೆಳಗಿಸುತ್ತಿದ್ದರಂತೆ. ಇದರಲ್ಲಿಯೇ ಬಾಬಾರ ಫೋಟೋ, ಬಾಬಾ ಕುಳಿತುಕೊಳ್ಳಲು ಬಳಸುತ್ತಿದ್ದ ದೊಡ್ಡ ಕಲ್ಲುಬಂಡೆ, ಪಲ್ಲಕಿ ಮೊದಲಾದವು ಭಕ್ತರಿಗೆ ಆಕರ್ಷಿಸುತ್ತದೆ.

PC:Prabirghose

ಛಾವಡಿ

ಛಾವಡಿ

ದ್ವಾರಕಾಮಾಯಿ ಮಸೀದಿಗೆ ಸಮೀಪದಲ್ಲಿಯೇ ಒಂದು ಛಾವಡಿ ಇದೆ. ಇದೊಂದು ಚಿಕ್ಕದಾದ ಮನೆ. ಬಾಬಾ ಒಂದು ದಿನ ಬಿಟ್ಟು ಒಂದು ದಿನ ಇಲ್ಲಿಯೇ ನಿವಾಸಿಸುತ್ತಿದ್ದರಂತೆ. ದ್ವಾರಕಾಮಾಯಿಯಿಂದ ಛಾವಡಿಗೆ ಬಾಬಾರನ್ನು ಉತ್ಸವವನ್ನು ಮಾಡಿ ತೆಗೆದುಕೊಂಡು ಹೋಗುವ ಆಚಾರ ಇಂದಿಗೂ ಗುರುವಾರದಂದು ನಿರ್ವಹಿಸುತ್ತಾರೆ. ಈ ಚಿಕ್ಕದಾದ ಮನೆಯಲ್ಲಿ ಬಾಬಾ ಬಳಸುತ್ತಿದ್ದ ವಸ್ತುಗಳೆಲ್ಲಾ ಇಲ್ಲಿನ ಪ್ರಧಾನವಾದ ಆಕರ್ಷಣೆಯೇ ಆಗಿದೆ.

PC:: Raaj 3~commonswik

ಗುರುಸ್ಥಾನ

ಗುರುಸ್ಥಾನ

ಗುರುಸ್ಥಾನ ಎಂಬುದು ಬೇವಿನ ಮರದ ಪ್ರದೇಶ. ಬಾಬಾರನ್ನು ಮೊಟ್ಟ ಮೊದಲಬಾರಿಗೆ ಸ್ಥಳೀಯರು ನೋಡಿದ್ದು ಇಲ್ಲಿಯೇ. ಇಲ್ಲಿ ಭಕ್ತಿಯಿಂದ ತಮ್ಮ ಕೋರಿಕೆಗಳನ್ನು ಕೋರಿಕೊಂಡರೆ ಎಲ್ಲಾ ತರಹದ ರೋಗಗಳಿಂದ ವಿಮುಕ್ತಿ ಹೊಂದಬಹುದು ಎಂದು ಭಕ್ತರು ನಂಬುತ್ತಾರೆ. ಈ ಪ್ರದೇಶವನ್ನು ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಭಕ್ತರು ಭೇಟಿ ನೀಡಬಹುದು.

PC: Sai calling Shirdi

ಖಂಡೋಬಾ ದೇವಾಲಯ

ಖಂಡೋಬಾ ದೇವಾಲಯ

ಶಿರಿಡಿಯಲ್ಲಿನ ಅಹಮದ್ ನಗರ-ಕೋಪೆರ್ ಗಾನ್ ರಸ್ತೆ ಮಾರ್ಗದಲ್ಲಿರುವ ಪುರಾತನವಾದ ದೇವಾಲಯವೇ ಖಂಡೋಬಾ ದೇವಾಲಯ. ಇದೊಂದು ಶಿವಾಲಯವಾಗಿದ್ದು, ಈ ಗುಡಿಯಲ್ಲಿದ್ದ ಪೂಜಾರಿಯೇ ಬಾಬಾರನ್ನು "ಓಂ ಸಾಯಿ" ಎಂದು ಕರೆಯುತ್ತಿದ್ದರಂತೆ.

PC:Vishalnagula

ಲೇಂಡಿವನಂ

ಲೇಂಡಿವನಂ

ಲೇಂಡಿವನದಲ್ಲಿ ಬಾಬಾ ಧ್ಯಾನವನ್ನು ಮಾಡುತ್ತಿದ್ದರು. ಹಾಗೆಯೇ ಅಲ್ಲಿ ದೀಪವನ್ನು ಕೂಡ ಬೆಳಗಿಸುತ್ತಿದ್ದರು. ಬಾಬಾ ಬೆಳಸಿದ ಬೇವಿನ ಮರದ ಕೆಳಗೆ ಈ ಅಖಂಢ ಜ್ಯೋತಿ ಬೆಳಗುತ್ತಾ ಇರುತ್ತದೆ. ಈ ವನವು 24 ಗಂಟೆಗಳ ಕಾಲ ಯಾತ್ರಿಕರಿಗೆ ಭೇಟಿ ನೀಡಲು ಅವಕಾಶವನ್ನು ನೀಡಲಾಗುತ್ತದೆ.

PC: Satish Chaudhari Shirdi

ದಿಕ್ಷೀತ್ ವಾಡಾ ಮ್ಯೂಸಿಯಂ

ದಿಕ್ಷೀತ್ ವಾಡಾ ಮ್ಯೂಸಿಯಂ

ದಿಕ್ಷೀತ್ ವಾಡಾ ಮ್ಯೂಸಿಯಂ ಶಿರಿಡಿಯಲ್ಲಿರುವ ಚಿಕ್ಕ, ಆಸಕ್ತಿಕರವಾದ ಪ್ರದರ್ಶನಶಾಲೆಯಾಗಿದೆ. ಸಂಸ್ಥಾನ ಸಮುದಾಯದ ಮಧ್ಯದಲ್ಲಿರುವ ಈ ಮ್ಯೂಸಿಯಂನಲ್ಲಿ ಕೆಲವು ವಿಭಿನ್ನವಾದ ಬ್ಲಾಕ್ ಆಂಡ್ ವೈಟ್ ಬಾಬಾ ಫೋಟೋಗಳು, ಬಾಬಾ ಬಳಸುತ್ತಿದ್ದ ವಸ್ತ್ರಗಳು, ಅಡುಗೆ ಪಾತ್ರೆಗಳು, ನೀರಿನ ಗ್ಲಾಸುಗಳು, ಚಪ್ಪಲಿಗಳಂತಹ ಇತರ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

ಭೇಟಿಗೆ ಸಮಯ : ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯಾತ್ರಿಕರಿಗೆ ಪ್ರವೇಶವನ್ನು ನೀಡಲಾಗುತ್ತದೆ.

PC :Arunachalam Seshadri Reddy Seshu

ಶನಿ ಶಿಂಗನಾಪೂರ್

ಶನಿ ಶಿಂಗನಾಪೂರ್

ಶನಿ ಶಿಂಗನಾಪೂರ್‍ಗೆ ಶಿರಿಡಿಯಿಂದ ಸುಮಾರು 73 ಕಿ.ಮೀ ದೂರದಲ್ಲಿದೆ. ಇಲ್ಲಿ ಶನಿ ದೇವನ ದೇವಾಲಯ ಅತ್ಯಂತ ಪ್ರಸಿದ್ಧವಾದುದು. ಇಲ್ಲಿನ ವಿಭಿನ್ನತೆ ಏನೆಂದರೆ ಇಲ್ಲಿನ ಯಾವುದೇ ಮನೆಗೂ ಕೂಡ ಬಾಗಿಲುಗಳು ಇರುವುದಿಲ್ಲ. ಯಾರಾದರೂ ಇಲ್ಲಿ ಕಳ್ಳತನ ಮಾಡಿದರೆ ಅದೇ ದಿನ ಕುರುಡರಾಗುತ್ತಾರೆ ಎಂಬುದು ಅಲ್ಲಿನ ಪ್ರಜೆಗಳ ನಂಬಿಕೆಯಾಗಿದೆ. ಈ ಮಹಿಮಾನ್ವಿತವಾದ ದೇವಾಲಯವು ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಯಾತ್ರಿಕರಿಗೆ ಶನಿದೇವನ ದರ್ಶನವನ್ನು ನೀಡಲಾಗುತ್ತದೆ.


PC: Booradleyp1

ನಾಸಿಕ್

ನಾಸಿಕ್

ನಾಸಿಕ್ ಶಿರಿಡಿಯಿಂದ ಸುಮಾರು 87 ಕಿ.ಮೀ ದೂರದಲ್ಲಿದೆ. ಈ ಪ್ರದೇಶವನ್ನು ಪವಿತ್ರವಾದ ನದಿಯಾಗಿ ಭಕ್ತರು ಭಾವಿಸುತ್ತಾರೆ. ಶ್ರೀ ರಾಮನು ತನ್ನ ವನವಾಸದ ಸಮಯದಲ್ಲಿ ಇಲ್ಲಿ ಕೆಲವು ಕಾಲಗಳು ಕಳೆದನು ಎಂಬುದಕ್ಕೆ ಈ ಪ್ರದೇಶವು ಪ್ರಸಿದ್ಧವಾಗಿದೆ. ಶ್ರೀರಾಮನಿಗೆ ಸಂಬಂಧಿಸಿದಂತೆ ಕೆಲವು ಗುರುತುಗಳು ಈ ಪ್ರದೇಶದಲ್ಲಿ ಕಾಣಿಸುತ್ತವೆ. ಈ ಪ್ರದೇಶದಲ್ಲಿ ಲಕ್ಷ್ಮಣನು ಸೂರ್ಪನಖಳ ಮೂಗನ್ನು (ನಾಸಿಕ) ವನ್ನು ಕತ್ತರಿಸಿದ ಕಾರಣವಾಗಿ ಈ ಪ್ರದೇಶಕ್ಕೆ ನಾಸಿಕ್ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ.

PC:Vishalnagula

ತ್ರಯಂಬಕೇಶ್ವರ ದೇವಾಲಯ

ತ್ರಯಂಬಕೇಶ್ವರ ದೇವಾಲಯ

ನಾಸಿಕ್‍ಗೆ ಸ್ವಲ್ಪ ದೂರದಲ್ಲಿರುವ ತ್ರಯಂಬಕೇಶ್ವರ ದೇವಾಲಯವು ದೇಶದಲ್ಲಿಯೇ ಅತ್ಯಂತ ಪ್ರಮುಖವಾದ ಜ್ಯೋತಿರ್‍ಲಿಂಗ ಕ್ಷೇತ್ರಗಳಲ್ಲಿ ಒಂದು. ಗೋದಾವರಿ ನದಿಯ ಜನ್ಮಸ್ಥಾನ ಕೂಡ ಇದೇ ಆಗಿದೆ.

PC:Rashmitha


ಪಂಚವಟಿ

ಪಂಚವಟಿ

ನಾಸಿಕ್‍ನಲ್ಲಿ ಮತ್ತೊಂದು ಪ್ರಧಾನವಾದ ಆಕರ್ಷಣೆ ಎಂದರೆ ಅದು "ಪಂಚವಟಿ". ಇಲ್ಲಿ ಶ್ರೀರಾಮನು, ಸೀತಾದೇವಿ ಕೆಲವು ಕಾಲಗಳು ಇದ್ದರು ಎಂದು ಹೇಳಲಾಗುತ್ತದೆ. ಪೂರ್ವದಲ್ಲಿ ಈ ಪ್ರದೇಶವನ್ನು ದಂಡಕಾರಣ್ಯವಾಗಿ ಅಭಿವರ್ಣಿಸುತ್ತಿದ್ದರು. ಇಲ್ಲಿ ರಾಮನ ದೇವಾಲಯ ಕೂಡ ಇದೆ. ಅದೇ ಇಂದು "ಕಾಲರಾಮ ದೇವಾಲಯ"ವಾಗಿ ಪ್ರಸಿದ್ಧಿಯನ್ನು ಹೊಂದಿದೆ.


PC:Raja Ravi Varma

ಸೀತಾ ಗುಹೆ

ಸೀತಾ ಗುಹೆ

ಸೀತಾ ಗುಹೆಯು ನಾಸಿಕ್‍ನಲ್ಲಿ ನೋಡಬೇಕಾದ ಮತ್ತೊಂದು ಪ್ರಧಾನವಾದ ಆಕರ್ಷಣೆಯೇ ಆಗಿದೆ. ಈ ಪ್ರದೇಶದಿಂದಲೇ ರಾವಣಸಾರನು ಸೀತಾದೇವಿಯನ್ನು ಎತ್ತಿಕೊಂಡು ಹೋದನು. ಗುಹೆಯಲ್ಲಿ ತೆರಳಬೇಕಾದರೆ ಯಾತ್ರಿಕರು ತಲೆಯನ್ನು ಬಾಗಿಸಿ ಜಾಗ್ರತ್ತವಾಗಿ ಹೋಗಬೇಕು.

PC:Laurawtn

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

ದೂದ್ ಸಾಗರ್, ತಪೋವನ, ಆಂಜನೇರಿ ಪರ್ವತ, ಪಾಂಡವರ ಗುಹೆಗಳು, ಮುಕ್ತಿ ಧಾಮ ದೇವಾಲಯ, ಬಾಗೂನ್, ವೈನ್ ತೋಟಗಳು, ರಾಮ್ ಕೊಂಡ, ಮ್ಯೂಸಿಯಂ ಮೊದಲಾದವುಗಳನ್ನು ಕಾಣಬಹುದಾಗಿದೆ. ಆಸಕ್ತಿಕರವಾಗಿ ಇರುವ ಫಿಷಿಂಗ್, ಭೋಟ್‍ರೈಡಿಂಗ್, ರಾಕ್ ಕ್ಲೈಂಬಿಂಗ್, ಸ್ವಿಮ್ಮಿಂಗ್ ಮೊದಲಾದವುಗಳೆಲ್ಲಾ ನಾಸಿಕ್‍ನಲ್ಲಿ ಆನಂದಿಸಬಹುದು.


PC:Mahi29

ಔರಂಗಬಾದ್

ಔರಂಗಬಾದ್

ಶಿರಿಡಿಯಿಂದ ಔರಂಗಾಬಾದ್‍ಗೆ ಸುಮಾರು 104 ಕಿ.ಮೀ ದೂರದಲ್ಲಿದೆ. ಇಲ್ಲಿನ ಪ್ರಧಾನವಾದ ಆಕರ್ಷಣೆ ಎಂದರೆ ಬಿಬಿ ಕಾ ಮಕ್ ಬಾರಾ, ಗ್ರಿಶ್ನೇಶ್ವರ ದೇವಾಲಯ. ಈ ದೇವಾಲಯವು ಶಿವನ ಜ್ಯೋತಿರ್‍ಲಿಂಗ ಕ್ಷೇತ್ರವಾಗಿದೆ. ಬಿಬಿಕಾ ಮಕ್ ಬಾರಾ ಎಂಬ ಸ್ಮಾರಕ, ಔರಂಗಜೇಬನ ಕುಮಾರ ತನ್ನ ತಾಯಿ ಬೇಗಂ ರಬಿಯಾ ದುರಾನಿ ಜ್ಞಾಪಕಾರ್ಥವಾಗಿ ನಿರ್ಮಾಣ ಮಾಡಿದನು. ಇದು ತಾಜ್ ಮಹಲ್‍ನಂತಯೇ ಕಾಣುತ್ತದೆ.

ಈ ಸುಂದರವಾದ ಕಟ್ಟಡಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ.


PC:Rizwanmahai

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

ಔರಂಗಬಾದ್‍ನಲ್ಲಿನ ಇತರ ಆಕರ್ಷಣೆಗಳು
ಕೊನ್ನಾಟ್, ಔರಂಗಬಾದ್ ಕೇವ್ಸ್, ಕುಲ್ಧಾರ, ಕಿಲ್ಲಾ ಅರಕ್, ನೌಕೊಂಡ ಪ್ಯಾಲೆಸ್, ಗುಲ್ ಮಂಡಿ ಮೊದಲಾದವುಗಳನ್ನು ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

PC:Niks887

ಅಜಂತಾ ಗುಹೆ

ಅಜಂತಾ ಗುಹೆ

ಶಿರಿಡಿಯಿಂದ ಅಜಂತಾ ಗುಹೆಗಳು ಸುಮಾರು 200 ಕಿ.ಮೀ ದೂರದಲ್ಲಿದೆ. ಔರಂಗಾಬಾದ್‍ನಿಂದ ಸುಮಾರು 96 ಕಿ.ಮೀ ದೂರದಲ್ಲಿ ಈ ಅದ್ಭುತವಾದ ಅಜಂತಾ ಗುಹೆಗಳು ಇವೆ. ಈ ಗುಹೆಗಳನ್ನು ಕ್ರಿ. ಶ 2 ನೇ ಶತಮಾನದ್ದು ಎಂದು ಗುರುತಿಸಲಾಗಿದೆ. ಇಲ್ಲಿ ಒಟ್ಟು 29 ಗುಹೆಗಳು ಇಲ್ಲಿವೆ. ಪ್ರತಿ ಒಂದು ಕೂಡ ಬುದ್ಧನ ಜೀವಿನಕತೆಗಳನ್ನು ಹೇಳುತ್ತವೆ.

PC:Ameya Clicks

ಎಲ್ಲೊರಾ ಗುಹೆಗಳು

ಎಲ್ಲೊರಾ ಗುಹೆಗಳು

ಶಿರಿಡಿಯಿಂದ ಸುಮಾರು 97 ಕಿ.ಮೀ ದೂರ, ಔರಂಗಬಾದ್‍ದಿಂದ ಸುಮಾರು 30 ಕಿ.ಮೀ ದೂರದಲ್ಲಿ ಅದ್ಭುತವಾದ ಎಲ್ಲೊರಾ ಗುಹೆಗಳು ಇವೆ. ಅಜಂತಾ, ಎಲ್ಲೊರಾ ಗುಹೆಗಳು ಇವೆರಡೂ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಕೊಂಡಿದೆ. ಎಲ್ಲೊರಾ ಒಟ್ಟು 34 ಗುಹೆಗಳ ಸಮುದಾಯವಾಗಿದ್ದರೆ, ಅವುಗಳಲ್ಲಿ 12 ಬುದ್ಧನಿಗೆ, 17 ಹಿಂದೂಗಳಿಗೆ, 5 ಜೈನರಿಗೆ ಸಂಬಂಧಿಸಿದ್ದೇ ಆಗಿವೆ. ಎಲ್ಲೊರಾದ ಪ್ರಧಾನವಾದ ಆಕರ್ಷಣೆ ಏನಂದರೆ ಏಕಶಿಲೆಯಿಂದ ಕೆತ್ತನೆ ಮಾಡಿರುವ ಕೈಲಾಸ ದೇವಾಲಯ.

PC:Kunal Mukherjee


ಪೂಣೆ

ಪೂಣೆ

ಪೂಣೆ ಶಿರಿಡಿಯಿಂದ ಸುಮಾರು 200 ಕಿ.ಮೀ ದೂರದಲ್ಲಿದೆ. ಇದು ಮರಾಠ ಯೋಧನಾದ ಛತ್ರಪತಿ ಶಿವಾಜಿಯ ಸ್ವಸ್ಥಳವೇ ಆಗಿದೆ. ಖಾನ್ ಪ್ಯಾಲೆಸ್, ಓಷೋ ಆಶ್ರಮ, ಪಾತಾಳೇಶ್ವರ ಗುಹಾಲಯ, ಟ್ರೈಬಲ್ ಮ್ಯೂಸಿಯಂ, ಕೋಟೆಗಳು, ಉದ್ಯಾನವನಗಳು ಮೊದಲಾದವುಗಳನ್ನು ಕಾಣಬಹುದಾಗಿದೆ. ಪ್ರಮುಖ ಗಿರಿಧಾಮಗಳೆಂದರೆ ಅವು ಖಂಡಾಲಾ, ಲೋನಾವಾಲಾ ಪುಣೆಗೆ ಸಮೀಪದಲ್ಲಿಯೇ ಇವೆ.

PC:Ramnath Bhat

ನಾಂದೆಡ್

ನಾಂದೆಡ್

ಶಿರಿಡಿಯಿಂದ ನಾಂದೆಡ್‍ಗೆ ಸುಮಾರು 308 ಕಿ.ಮೀ ದೂರದಲ್ಲಿದೆ. ಇಲ್ಲಿ ಸಿಖ್‍ರ ಗುರುದ್ವಾರಗಳು ಎಷ್ಟೋ ಪ್ರಸಿದ್ಧಿ ಹೊಂದಿವೆ. ಹಜೂರ್ ಸಾಹಿಬ್ ಗುರುದ್ವಾರ, ನಾಂದೆಡೆ ಕೋಟೆ, ಉಂಕೇಶ್ವರ ದೇವಾಲಯ ನೀರಿನ ಕೊಳಗಳು, ಗೋವಿಂದ ಬಾಗ್ ಮೊದಲಾದವು ಇಲ್ಲಿ ನೋಡಬೇಕಾದ ಪ್ರವಾಸಿ ತಾಣಗಳು.

PC:Ajayveer


ನೋಡಬೇಕಾಗಿರುವ ಪ್ರದೇಶಗಳು

ನೋಡಬೇಕಾಗಿರುವ ಪ್ರದೇಶಗಳು

ಕೇವಲ ಇವುಗಳೇ ಅಲ್ಲ. ಶಿರಿಡಿ ಸುತ್ತಮುತ್ತ ಇನ್ನು ನೋಡಬೇಕಾಗಿರುವ ಆನೇಕ ಪ್ರದೇಶಗಳು ಎಷ್ಟೋ ಇವೆ. ಇವೆಲ್ಲವನ್ನು ಕಂಡು ಪ್ರವಾಸಿಗರು ಆನಂದಿಸಬಹುದು. ಹಾಗಾಗಿ ಶಿರಿಡಿಗೆ ತೆರಳುವ ಯಾತ್ರಿಕರು ಬಾಬಾರ ದರ್ಶನದ ಜೊತೆ ಜೊತೆಗೆ ಈ ಪ್ರದೇಶಗಳೆಲ್ಲಾ ನೋಡಿ ಬನ್ನಿ..!


PC:Satrughna

ಸಾಯಿ ನಗರ ಶಿರಿಡಿ

ಸಾಯಿ ನಗರ ಶಿರಿಡಿ

ಬಸ್ಸು ಮಾರ್ಗದ ಮೂಲಕ: ಹೈದ್ರಾಬಾದ್, ಬೆಂಗಳೂರು, ಮುಂಬೈ, ಪೂಣೆ, ನಾಂದೆಡ್ ಇನ್ನಿತರ ಪಟ್ಟಣಗಳಿಂದ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ಶಿರಿಡಿಗೆ ತೆರಳುತ್ತಿರುತ್ತವೆ.

ರೈಲು ಮಾರ್ಗದ ಮೂಲಕ: ಬೆಂಗಳೂರು, ಹೈದ್ರಾಬಾದ್, ಮುಂಬೈ ಮೊದಲಾದ ಇತರ ನಗರಗಳಿಂದ ಶಿರಿಡಿಗೆ ರೈಲುಗಳು ಸಂಪರ್ಕ ಸಾಧಿಸುತ್ತವೆ.

ವಾಯು ಮಾರ್ಗದ ಮೂಲಕ: ಮುಂಬೈ, ಪೂಣೆ, ಔರಂಗಾಬಾದ್, ನಾಸಿಕ್ ವಿಮಾನ ನಿಲ್ದಾಣಗಳು ಶಿರಿಡಿಗೆ ಸಮೀಪದ ವಿಮಾನ ನಿಲ್ದಾಣವೇ ಆಗಿದೆ.

PC: B S Srikanth

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X