
ರಥಗಳು ಪುರಾತನ ಕಾಲದಲ್ಲಿ ರಾಜರುಗಳಿಂದ ಬಳಸಲ್ಪಡುತ್ತಿದ್ದ ವೇಗವಾಗಿ ಚಲಿಸುವ ಸಂಚಾರಿ ಮಾಧ್ಯಮಗಳಾಗಿದ್ದವು. ಋಗ್ವೇದದಲ್ಲಿಯೆ ರಥಗಳ ಕುರಿತು ಉಲ್ಲೇಖವಿರುವುದರಿಂದ ಭಾರತದಲ್ಲಿ ಅತಿ ಪುರಾತನ ಸಮಯದಿಂದಲೂ ರಥಗಳು ಚಾಲ್ತಿಯಲ್ಲಿದ್ದವು ಎಂದು ಹೇಳಬಹುದು.
ಹಿಂದೆ ಮುಖ್ಯವಾಗಿ ರಥಗಳನ್ನು ಯುದ್ಧಗಳಲ್ಲಿ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬೇಗನೆ ತೆರಳಲು ಬಳಸುತ್ತಿದ್ದರು. ಆದರೆ ಇಂದು ರಥಗಳು ಹಿಂದಿನ ವೈಭವ ನೆನಪಿಸುವ ರಚನೆಗಳಾಗಿದ್ದರೂ ಪ್ರಮುಖವಾಗಿ ದೇವಾಲಯಗಳ ಸ್ವತ್ತಾಗಿ ಆಯಾ ದೇವಾಲಯಗಳ ಮುಖ್ಯ ದೇವರ ಮೆರವಣಿಗೆಯ ಸಂದರ್ಭದಲ್ಲಿ ಬಳಸುವ ಮಾಧ್ಯಮಗಳಾಗಿವೆ.
ನಿಮಗಿಷ್ಟವಾಗಬಹುದಾದ : ವಿವಿಧ ಆಕಾರ ಗಾತ್ರಗಳ ಶಿವಲಿಂಗಗಳ ದರ್ಶನ
ನೀವು ಕೆಲ ದೇವಾಲಯಗಳಿಗೆ ಭೇಟಿ ನೀಡಿದ್ದಾಗ ಅವುಗಳ ಆವರಣದಲ್ಲಿ ಕಟ್ಟಿಗೆಗಳಿಂದ ಕಲಾತ್ಮಕವಾಗಿ ನಿರ್ಮಿಸಲಾದ ರಥಗಳನ್ನು ಗಮನಿಸಿರಬಹುದು. ವಾರ್ಷಿಕವಾಗಿ ನಡೆಯುವ ಉತ್ಸವ ಅಥವಾ ಜಾತ್ರೆಯಲ್ಲಿ ಆಯಾ ದೇವಾಲಯಗಳ ಮುಖ್ಯ ವಿಗ್ರಹದ ಉತ್ಸವ ಮೂರ್ತಿಯನ್ನು ಈ ರಥಗಳಲ್ಲಿ ಮೆರವಣಿಗೆಗೆಂದು ಕರೆದೊಯ್ಯುತ್ತಾರೆ. ಇದನ್ನು ರಥಯಾತ್ರೆ ಅಥವಾ ತೇರು ಎಳೆಯುವುದು ಎಂತಲೂ ಸಹ ಕರೆಯಲಾಗುತ್ತದೆ.
ಭಾರತದಲ್ಲಿ ಒಡಿಶಾ ರಾಜ್ಯದ ಜಗನ್ನಾಥ ಪುರಿಯು ಅತಿ ವಿಶಾಲವಾದ ರಥವನ್ನು ಹೊಂದಿದೆ. ತದನಂತರ ತಮಿಳುನಾಡಿನ ಚಿದಂಬರಂ, ತಿರುವಣ್ಣಾಮಲೈ, ಕೊಯಮತ್ತೂರಿನ ಕೋನಿಅಮ್ಮನವರ ದೇವಸ್ಥಾನ ಹೀಗೆ ಹಲವಾರು ದೇವಾಲಯಗಳು ರಥಗಳನ್ನು ಹೊಂದಿವೆ. ಕರ್ನಾಟಕದಲ್ಲೂ ಸಹ ಕೆಲವು ಧಾರ್ಮಿಕ ಆಕರ್ಷಣೆಯ ದೇವಾಲಯಗಳು ತಮ್ಮದೆ ಆದ ರಥಗಳನ್ನು ಹೊಂದಿದ್ದು ವಾರ್ಷಿಕವಾಗಿ ರಥೋತ್ಸವದಲ್ಲಿ ಬಳಸಲ್ಪಡುತ್ತವೆ. ಹಾಗಾದರೆ, ಬನ್ನಿ ಪ್ರಸ್ತುತ ಲೇಖನದ ಮೂಲಕ ಕರ್ನಾಟಕದ ಕೆಲವು ಸುಂದರ ರಥಗಳ ಚಿತ್ರಯಾತ್ರೆ ಮಾಡೋಣವೆ!

ಕರ್ನಾಟಕದ ಸುಂದರ ರಥಗಳು:
ಕೆಲವು ಧಾರ್ಮಿಕ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ರಥೋತ್ಸವ ನಡೆಯುವುದು ಸಾಮಾನ್ಯ. ಆದರೆ ಕೃಷ್ಣ ಮಠದ ಖ್ಯಾತಿಯ ಉಡುಪಿಯಲ್ಲಿ ರಥೋತ್ಸವವನ್ನು ಅತ್ಯಂತ ವೈಭವಯುತವಾಗಿ ಮಾಡಿ ಆಚರಿಸುತ್ತಾರೆ. ವಿವಿಧ ರಥಗಳು ಉಡುಪಿಯಲ್ಲಿದ್ದು ಈ ಸಂದರ್ಭದಲ್ಲಿ ಸುಂದರವಾಗಿ ಸಿಂಗರಿಸಲ್ಪಡುತ್ತವೆ.
ಚಿತ್ರಕೃಪೆ: Rayabhari

ಕರ್ನಾಟಕದ ಸುಂದರ ರಥಗಳು:
ಉಡುಪಿಯ ಶ್ರೀಕೃಷ್ಣನಿಗೆ ಐದು ರಥಗಳಿವೆ. ದೊಡ್ಡದಾದ ಬ್ರಹ್ಮರಥ, ಮಧ್ಯಮ ರಥ, ಕಿನ್ಯೊ ರಥ (ಚಿಕ್ಕ), ಬೆಳ್ಳಿ ರಥ ಹಾಗೂ ಬಂಗಾರದ ರಥಗಳು.
ಚಿತ್ರಕೃಪೆ: Pradeep717

ಕರ್ನಾಟಕದ ಸುಂದರ ರಥಗಳು:
ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ದೇವಿ ದೇವಾಲಯದ ಬೃಹತ್ ರಥ ಅದೂ ಸಹ 1855 ರ ಸಮಯದಲ್ಲಿ.
ಚಿತ್ರಕೃಪೆ: wikimedia

ಕರ್ನಾಟಕದ ಸುಂದರ ರಥಗಳು:
ತುಂಗಾ ನದಿ ತಟದಲ್ಲಿರುವ ತೀರ್ಥಹಳ್ಳಿಯು ಎಳ್ಳವಮಾಸ್ಯೆ ಜಾತ್ರೆಗೆ ಹೆಚ್ಚು ಹೆಸರುವಾಸಿಯಾಗಿದೆ. ಈ ಸಂದರ್ಭದಲ್ಲಿ ಮೆರವಣಿಗೆಗೆ ಬಳಸಲಾಗುವ ರಾಮೇಶ್ವರ ದೇಗುಲದ ರಥ.
ಚಿತ್ರಕೃಪೆ: Manjeshpv

ಕರ್ನಾಟಕದ ಸುಂದರ ರಥಗಳು:
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರನ ರಥ. ಇದನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಗಾಧರೇಶ್ವರ ಸ್ವಾಮಿ ದೇವಾಲಯದಿಂದ ಪಡೆಯಲಾಗಿದೆ.
ಚಿತ್ರಕೃಪೆ: Gopal Venkatesan

ಕರ್ನಾಟಕದ ಸುಂದರ ರಥಗಳು:
ಶ್ರೀರಂಗಪಟ್ಟಣದಲ್ಲಿರುವ ಶ್ರೀರಂಗನ ದೇವಾಲಯದ ರಥ.
ಚಿತ್ರಕೃಪೆ: RanjithaRKRao

ಕರ್ನಾಟಕದ ಸುಂದರ ರಥಗಳು:
ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಮುಕಾಂಬಿಕೆಯ ಸನ್ನಿಧಿಯಲ್ಲಿರುವ ರಥ.
ಚಿತ್ರಕೃಪೆ: Ajaykuyiloor

ಕರ್ನಾಟಕದ ಸುಂದರ ರಥಗಳು:
ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥ.
ಚಿತ್ರಕೃಪೆ: Jean-Pierre Dalbéra

ಕರ್ನಾಟಕದ ಸುಂದರ ರಥಗಳು:
ಹಂಪಿಯ ವಿಠ್ಠಲ ದೇವಸ್ಥಾನದ ಆವರಣದಲ್ಲಿರುವ ಕಲ್ಲಿನ ರಥವು ಅತ್ಯಂತ ಶ್ರೇಷ್ಠ ಕಲಾತ್ಮಕತೆಗೆ ಸಾಕ್ಷಿಯಾಗಿ ನಿಂತಿರುವ ರಚನೆಯಾಗಿದೆ.
ಚಿತ್ರಕೃಪೆ: Rajashree Raghavendra

ಕರ್ನಾಟಕದ ಸುಂದರ ರಥಗಳು:
ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿರುವ ಸುಂದರ ರಥ.
ಚಿತ್ರಕೃಪೆ: Ranjithsiji

ಕರ್ನಾಟಕದ ಸುಂದರ ರಥಗಳು:
ಇಂದು ಬಾದಾಮಿಯ ಚೋಳಚಗುಡ್ಡದ ಬನಶಂಕರಿ ಅಮ್ಮನವರ ದೇವಾಲಯದ ರಥ.
ಚಿತ್ರಕೃಪೆ: Arian Zwegers

ಕರ್ನಾಟಕದ ಸುಂದರ ರಥಗಳು:
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಪ್ರವಾಸಿ ಕೇಂದ್ರ ಮುರುಡೇಶ್ವರ ದೇವಾಲಯದ ರಥ.
ಚಿತ್ರಕೃಪೆ: Yogesa

ಕರ್ನಾಟಕದ ಸುಂದರ ರಥಗಳು:
ಬೆಂಗಳೂರಿನ ಅಲಸೂರು (ಹಲಸೂರು) ದೇವಾಲಯ ಆವರಣದಲ್ಲಿ ಹಿಂದೆ ಅಂದರೆ 1870 ರಲ್ಲಿ ನಿಲ್ಲಿಸಲಾಗಿದ್ದ ಜಗನ್ನಾಥನ ರಥ.
ಚಿತ್ರಕೃಪೆ: wikimedia

ಕರ್ನಾಟಕದ ಸುಂದರ ರಥಗಳು:
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಶ್ರೀ ಗುರು ಕೊಟ್ಟುರೇಶ್ವರ ದೇವಸ್ಥಾನದ ರಥ ಹಾಗೂ ರಥಯಾತ್ರೆ.
ಚಿತ್ರಕೃಪೆ: Amnbhushan

ಕರ್ನಾಟಕದ ಸುಂದರ ರಥಗಳು:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥ.
ಚಿತ್ರಕೃಪೆ: Soorajna

ಕರ್ನಾಟಕದ ಸುಂದರ ರಥಗಳು:
ಕರ್ನಾಟಕದ ಗೋಕರ್ಣದಲ್ಲಿರುವ ಗೋಕರ್ಣನಾಥೇಶ್ವರ ದೇವಾಲಯದ ಸಿಂಗರಿಸಲ್ಪಟ್ಟ ರಥ.
ಚಿತ್ರಕೃಪೆ: Kishisykes

ಕರ್ನಾಟಕದ ಸುಂದರ ರಥಗಳು:
ಕರ್ನಾಟಕದಲ್ಲಿರುವ ಮಲೆ ಮಹದೇಶ್ವರ ಬೆಟ್ಟ ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿರುವ ಕ್ಷೇತ್ರವಾಗಿದೆ. ಮಹದೇಶ್ವರನ ದೇವಾಲಯದ ರಥ.
ಚಿತ್ರಕೃಪೆ: Siddarth P Raj

ಕರ್ನಾಟಕದ ಸುಂದರ ರಥಗಳು:
ಶ್ರೀ ಮಾರಿಕಾಂಬ ದೇವಿಯ ರಥಯಾತ್ರೆ. ಗ್ರಾಮದೇವಿ ದ್ಯಾಮವ್ವನ ರಥೋತ್ಸವ ಎಂತಲೂ ಕರೆಯಲ್ಪಡುತ್ತದೆ. ದೇವಸ್ಥಾನದಿಂದ ಜಾತ್ರಾ ಗದ್ದುಗೆ ವರೆಗೆ ಶ್ರೀ ದೇವಿಯ ಪಯಣ.
ಚಿತ್ರಕೃಪೆ: mbraghumb

ಕರ್ನಾಟಕದ ಸುಂದರ ರಥಗಳು:
ಬೆಂಗಳೂರಿನ ಇಂದಿರಾನಗರದಲ್ಲಿರುವ ಸ್ವಾಮಿ ದೇವಾಲಯದ ರಥ.
ಚಿತ್ರಕೃಪೆ: Nicolas Mirguet