ಕಡಲ ತೀರಗಳಲ್ಲಿ ಸಮಯ ಕಳೆಯುವುದೆಂದರೆ ಆಗುವ ರೋಮಾಂಚನವೆ ಬೇರೆ. ಹಾಯಾಗಿ ಕುಳಿತುಕೊಳ್ಳಲು ಮರಳಿನ ರಾಶಿ, ಕಣ್ಣು ಚಾಚಿದಷ್ಟು ವಿಶಾಲವಾಗಿ ಹರಡಿರುವ ಸಮುದ್ರ, ಸಮುದ್ರ ನೀರಿನೊಳು ಆಡುತ್ತಿರುವವರನ್ನು ಗುಮ್ಮುತ್ತ ತೀರಕ್ಕೆ ಎಸೆಯುತ್ತಿರುವ ಅಲೆಗಳು, ಅಲ್ಲಲ್ಲಿ ದೊರಕುವ ಕುರುಕಲು ತಿಂಡಿ ಹಾಗೂ ತಂಪು ಪಾನೀಯಗಳು, ಇವುಗಳನ್ನು ಒಮ್ಮೆ ನೆನೆಸಿಕೊಂಡರೆ ಮನಸಿಗೆ ಆಗುವ ಆನಂದ ಅಷ್ಟಿಷ್ಟಲ್ಲ. ಸಮುದ್ರ ತೀರಗಳು ಅದೇನು ಮೋಡಿ ಮಾಡಿವೆಯೊ ಗೊತ್ತಿಲ್ಲ...ಕಿರಿಯರಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಸಮುದ್ರ ತೀರಗಳಿಗೆ ಹೊರಡುವುದೆಂದರೆ ಬಲು ಪ್ರೀತಿ.
ನಮ್ಮ ದೇಶದಲ್ಲಿ ಗುಜರಾತ್ ನಿಂದ ಹಿಡಿದು ತಮಿಳುನಾಡು ಮಾರ್ಗವಾಗಿ ಪಶ್ಚಿಮ ಬಂಗಾಳದವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಕಡಲ ಕಿನಾರೆಗಳು ಇರುವುದನ್ನು ಕಾಣಬಹುದು. ಆದರೆ ಗಮನಿಸ ಬೇಕಾದ ಒಂದು ಸಂಗತಿಯೆಂದರೆ ಪ್ರವಾಸಿ ದೃಷ್ಟಿಯಿಂದ ಎಲ್ಲ ಕಡಲ ತೀರಗಳು ಪ್ರಖ್ಯಾತವಾಗಿಲ್ಲ. ಪ್ರಸ್ತುತ ಹಲವು ಕಡಲ ತೀರಗಳು ಕಲುಶಿತಗೊಂಡಿರುವುದನ್ನು ಇಂದು ನಾವು ಕಾಣಬಹುದಾಗಿದೆ. ಇವುಗಳಲ್ಲಿ ಆಟವಾಡುವುದು ಹಾಗಿರಲಿ ನೀರಿನೊಳಗೆ ಇಳಿಯಲೂ ಕೂಡ ಸಾಕಷ್ಟು ಬೇಸರವಾಗುತ್ತದೆ. ಈ ರೀತಿಯಾಗಿ ಸಮುದ್ರದ ನೀರು ಕಲುಶಿತಗೊಳ್ಳುತ್ತಿರುವುದನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ಆದರೆ, ಪ್ರಸ್ತುತ ಲೇಖನವು ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ನಮ್ಮ ದೇಶದ ಹಲವು ರಾಜ್ಯಗಳಲ್ಲಿರುವ ಅತಿ ಸುಂದರ ಕಡಲ ತೀರಗಳ ಪರಿಚಯ ಮಾಡಿಸುತ್ತದೆ. ನಿಸ್ಸಂಶಯವಾಗಿ ಗೋವಾ ಅತಿ ಚಿಕ್ಕ ರಾಜ್ಯವಾದರೂ ಸಾಕಷ್ಟು ಸಂಖ್ಯೆಯಲ್ಲಿ ಆಕರ್ಷಣೀಯ ಬೀಚುಗಳನ್ನು ಹೊಂದಿರುವುದರಿಂದ ಈ ಲೇಖನದಲ್ಲಿ ದೊಡ್ಡದಾಗಿ ಕಾಣುತ್ತದೆ.

ಕಡಲ ತೀರಗಳು:
ಅಂಡಮಾನ್ ಮತ್ತು ನಿಕೋಬಾರಿನ ಹ್ಯಾವ್ಲಾಕ್ ದ್ವೀಪದ ಪ್ರಸಿದ್ಧ ಆಕರ್ಷಣೆಯಾದ ರಾಧಾನಗರ ಕಡಲ ತೀರದ ನೋಟ.
ಚಿತ್ರಕೃಪೆ: Jpatokal

ಕಡಲ ತೀರಗಳು:
ರಾಧಾನಗರ ಕಡಲ ತೀರದ ಮತ್ತೊಂದು ಸುಂದರ ನೋಟ.
ಚಿತ್ರಕೃಪೆ: Shimjithsr

ಕಡಲ ತೀರಗಳು:
ಹ್ಯಾವ್ಲಾಕ್ ದ್ವೀಪದ ಎಲಿಫಂಟ್ ಕಡಲ ತೀರದ ಒಂದು ಸುಂದರ ನೋಟ.
ಚಿತ್ರಕೃಪೆ: Shimjithsr

ಕಡಲ ತೀರಗಳು:
ಸುಂದರವಾಗಿ ಕಂಗೊಳಿಸುವ ಅಂಡಮಾನ್ ಮತ್ತು ನಿಕೋಬಾರಿನ ಹ್ಯಾವ್ಲಾಕ್ ಕಡಲ ತೀರ.
ಚಿತ್ರಕೃಪೆ: Shimjithsr

ಕಡಲ ತೀರಗಳು:
ಗುಜರಾತಿನ ಮಾಂಡ್ವಿ ಪಟ್ಟಣದಲ್ಲಿರುವ ಪ್ರಸಿದ್ಧ ಆಕರ್ಷಣೆ ಮಾಂಡ್ವಿ ಕಡಲ ತೀರ.
ಚಿತ್ರಕೃಪೆ: Meena Kadri

ಕಡಲ ತೀರಗಳು:
ಗುಜರಾತ್ ರಾಜ್ಯದ ಪ್ರಖ್ಯಾತ ನಗರ ಸೂರತ್ ಬಳಿಯಿರುವ ಪ್ರವಾಸಿ ಆಕರ್ಷಣೆಯಾದ ಡುಮಾಸ್ ಕಡಲ ತೀರ.
ಚಿತ್ರಕೃಪೆ: Marwada

ಕಡಲ ತೀರಗಳು:
ಗುಜರಾತಿನ ವಿಸಾವಾಡಾದಲ್ಲಿರುವ ಅರೇಬಿಯನ್ ಕಡಲ ತೀರ.
ಚಿತ್ರಕೃಪೆ: Ashok modhvadia

ಕಡಲ ತೀರಗಳು:
ಗುಜರಾತ್ ರಾಜ್ಯದ ವಾಪಿ ಪಟ್ಟಣದ ಬಳಿಯಿರುವ ನರ್ಗೋಲೆ ಕಡಲ ತೀರ.
ಚಿತ್ರಕೃಪೆ: Nichalp

ಕಡಲ ತೀರಗಳು:
ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಕರಾವಳಿ ಪಟ್ಟಣವಾದ ಅಲಿಬಾಗ್ ನಲ್ಲಿರುವ ಕಡಲ ತೀರ.
ಚಿತ್ರಕೃಪೆ: Sobarwiki

ಕಡಲ ತೀರಗಳು:
ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿರುವ ಗುಹಾಘರ್ ಪಟ್ಟಣದ ಕಡಲ ತೀರ.
ಚಿತ್ರಕೃಪೆ: Joshi detroit

ಕಡಲ ತೀರಗಳು:
ಮಹಾರಾಷ್ಟ್ರದ ವೆಂಗುರ್ಲಾ ಕಡಲ ತೀರದಲ್ಲಿ ಕ್ರಿಕೆಟ ಆಟದ ರುಚಿಯನ್ನು ಸವಿಯುತ್ತಿರುವ ಮಕ್ಕಳು.
ಚಿತ್ರಕೃಪೆ: Ankur P

ಕಡಲ ತೀರಗಳು:
ಮಹಾರಾಷ್ಟ್ರದ ಮಾಳವನ್ ಪ್ರದೇಶದ ಕೊಂಕಣ ಭಾಗದಲ್ಲಿರುವ ತರ್ಕರ್ಲಿ ಕಡಲ ತೀರದ ನೋಟ.
ಚಿತ್ರಕೃಪೆ: Ankur P

ಕಡಲ ತೀರಗಳು:
ಮಹಾರಾಷ್ಟ್ರದ ಶ್ರೀವರ್ಧನದಲ್ಲಿರುವ ಕೊಂಡಿವಲಿ ಕಡಲ ತೀರ.
ಚಿತ್ರಕೃಪೆ: Ankur P

ಕಡಲ ತೀರಗಳು:
ಮುಂಬೈ ನಗರದಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಹರ್ನೈ ಕಡಲ ತೀರದ ನೋಟ.
ಚಿತ್ರಕೃಪೆ: Cj.samson

ಕಡಲ ತೀರಗಳು:
ಮುಂಬೈ ನಗರದಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಹರ್ನೈ ಕಡಲ ತೀರದ ವಿಶಾಲಕಾಯ ನೋಟ.
ಚಿತ್ರಕೃಪೆ: Altafalvi

ಕಡಲ ತೀರಗಳು:
ಮಹಾರಾಷ್ಟ್ರದ ಮಾಳ್ವಾನ್ ಪ್ರದೇಶದಲ್ಲಿರುವ ಸುನಾಮಿ ಐಲ್ಯಾಂಡ್ ಕಡಲ ತೀರ.
ಚಿತ್ರಕೃಪೆ: Rudolph.A.furtado

ಕಡಲ ತೀರಗಳು:
ಮುಂಬೈ ನಗರದ ಪ್ರಸಿದ್ಧ ಚೌಪಾಟಿ ಕಡಲ ತೀರ.
ಚಿತ್ರಕೃಪೆ: Sobarwiki

ಕಡಲ ತೀರಗಳು:
ಮುಂಬೈ ನಗರದ ಪ್ರಸಿದ್ಧ ಚೌಪಾಟಿ ಕಡಲ ತೀರ.
ಚಿತ್ರಕೃಪೆ: Nikkul

ಕಡಲ ತೀರಗಳು:
ಮುಂಬೈ ನಗರದ ಜುಹು ಕಡಲ ತೀರ. ಒಮ್ಮೆ ಅನಿರಿಕ್ಷಿತ ಘಟನೆಯಿಂದಾಗಿ ವಿಸ್ಡಮ್ ಎಂಬ ದೊಡ್ಡ ಹಡುಗು ದಂಡೆಯ ಮೇಲೆ ಬಂದ ದೃಶ್ಯ.
ಚಿತ್ರಕೃಪೆ: Sajeevkumarc

ಕಡಲ ತೀರಗಳು:
ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ಟೆರೆಖೋಲ್ ಕೋಟೆಯ ಬಳಿ ಸ್ಥಿತವಿರುವ ಟೆರೆಖೋಲ್ ಕಡಲ ತೀರ.
ಚಿತ್ರಕೃಪೆ: Mvkulkarni23

ಕಡಲ ತೀರಗಳು:
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೆಂಗುರ್ಲಾ ಬಳಿಯಿರುವ ವೇಳಾಘರ್ ಕಡಲ ತೀರ.
ಚಿತ್ರಕೃಪೆ: Nilesh2 str

ಕಡಲ ತೀರಗಳು:
ಮಹಾರಾಷ್ಟ್ರದ ವೆಂಗುರ್ಲಾ ಕಡಲ ತೀರದ ನೋಟ.
ಚಿತ್ರಕೃಪೆ: Nilesh Sutar

ಕಡಲ ತೀರಗಳು:
ಮಹಾರಾಷ್ಟ್ರದ ರೇಡಿ ಬಳಿಯಿರುವ ರೇಡಿ ಕಡಲ ತೀರ.
ಚಿತ್ರಕೃಪೆ: Nilesh2 str

ಕಡಲ ತೀರಗಳು:
ಸಂಜೆಯ ಸಮಯದಿ ಕಾರವಾರ ಕಡಲ ತೀರದ ಒಂದು ಸುಂದರ ನೋಟ.
ಚಿತ್ರಕೃಪೆ: Noronha3

ಕಡಲ ತೀರಗಳು:
ಗೋಕರ್ಣದ ಸುಪ್ರಸಿದ್ಧ ಓಂ ಕಡಲ ತೀರ.
ಚಿತ್ರಕೃಪೆ: Axis of eran

ಕಡಲ ತೀರಗಳು:
ಉಡುಪಿ ಬಳಿಯಿರುವ ಕಾಪು ಕಡಲ ತೀರದ ಒಂದು ನೋಟ.
ಚಿತ್ರಕೃಪೆ: Subhashish Panigrahi

ಕಡಲ ತೀರಗಳು:
ಕುಮಟಾ ಕಡಲ ತೀರದ ಒಂದು ನೋಟ.
ಚಿತ್ರಕೃಪೆ: Mangesh Nadkarni

ಕಡಲ ತೀರಗಳು:
ಮುರುಡೇಶ್ವರ ಕಡಲ ತೀರದ ಒಂದು ನೋಟ.
ಚಿತ್ರಕೃಪೆ: Yogesa

ಕಡಲ ತೀರಗಳು:
ಪ್ರಸಿದ್ಧ ಪ್ರವಾಸಿ ಕ್ಷೇತ್ರ ಮುರುಡೇಶ್ವರ ಕಡಲ ತೀರ.
ಚಿತ್ರಕೃಪೆ: RNM

ಕಡಲ ತೀರಗಳು:
ಮಂಗಳೂರು ಬಳಿಯಿರುವ ಪಣಂಬೂರು ಕಡಲ ತೀರ.
ಚಿತ್ರಕೃಪೆ: Premkudva

ಕಡಲ ತೀರಗಳು:
ಉಡುಪಿ ಬಳಿಯಿರುವ ಸೇಂಟ್ ಮೇರಿ ದ್ವೀಪದ ಮಲ್ಪೆ ಕಡಲ ತೀರ.
ಚಿತ್ರಕೃಪೆ: Subhashish Panigrahi

ಕಡಲ ತೀರಗಳು:
ಕರ್ನಾಟಕದಲ್ಲಿರುವ ಮರವಂತೆ ಕಡಲ ತೀರ.ಉಡುಪಿ - ಕುಂದಾಪುರದ ಮಧ್ಯದಲ್ಲಿ ಈ ಸಮುದ್ರ ತೀರವನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Rayabhari

ಕಡಲ ತೀರಗಳು:
ಗೋವಾದ ಪ್ರಖ್ಯಾತ ಬಾಗಾ ಕಡಲ ತೀರ.
ಚಿತ್ರಕೃಪೆ: Ramnath Bhat

ಕಡಲ ತೀರಗಳು:
ಗೋವಾದಲ್ಲಿ ಕಂಡುಬರುವ ಅಗೊಂಡಾ ಕಡಲ ತೀರ.
ಚಿತ್ರಕೃಪೆ: Sobarwiki

ಕಡಲ ತೀರಗಳು:
ಗೋವಾದ ಸುಪ್ರಸಿದ್ಧ ಕಲಂಗೂಟ್ ಕಡಲ ತೀರ.
ಚಿತ್ರಕೃಪೆ: Lian Chang

ಕಡಲ ತೀರಗಳು:
ಗೋವಾದ ಕ್ಯಾಂಡೋಲಿಮ್ ಕಡಲ ತೀರದ ನೋಟ.
ಚಿತ್ರಕೃಪೆ: FaizanAhmad21

ಕಡಲ ತೀರಗಳು:
ಗೋವಾದ ಚಪೋರಾ ಕೋಟೆ ಬಳಿಯಿರುವ ಚಪೋರಾ ಕಡಲ ತೀರ.

ಕಡಲ ತೀರಗಳು:
ಗೋವಾದಲ್ಲಿರುವ ಕೋಲ್ವಾ ಕಡಲ ದಂಡೆ.
ಚಿತ್ರಕೃಪೆ: Marwada

ಕಡಲ ತೀರಗಳು:
ಗೋವಾದ ಪ್ರಸಿದ್ಧ ವಾಗಾಟೋರ್ ಕಡಲ ತೀರದ ಒಂದು ನೋಟ.

ಕಡಲ ತೀರಗಳು:
ಗೋವಾದಲ್ಲಿರುವ ಅರಂಬೋಲ್ ಕಡಲ ತೀರ.

ಕಡಲ ತೀರಗಳು:
ಗೋವಾದಲ್ಲಿರುವ ಬೋಗ್ಮಾಲೊ ಕಡಲ ತೀರ.
ಚಿತ್ರಕೃಪೆ: KenWalker

ಕಡಲ ತೀರಗಳು:
ಪ್ರಖ್ಯಾತ ಪ್ರವಾಸಿ ತಾಣ ಗೋವಾದಲ್ಲಿರುವ ಡೋನಾ ಪೌಲಾ ಕಡಲ ತೀರ.
ಚಿತ್ರಕೃಪೆ: Sunandlopes

ಕಡಲ ತೀರಗಳು:
ಕೇರಳದ ಸುಂದರ ಪ್ರವಾಸಿ ತಾಣ ಅಲೆಪ್ಪಿ ಕಡಲ ತೀರ.
ಚಿತ್ರಕೃಪೆ: Kainjock

ಕಡಲ ತೀರಗಳು:
ಕೇರಳದ ಅಲೆಪ್ಪಿ ಜಿಲ್ಲೆಯಲ್ಲಿರುವ ಅಂಧಕರನಾಳಿ ಕಡಲ ತೀರದ ಒಂದು ಚಿತ್ರ.
ಚಿತ್ರಕೃಪೆ: Rojypala

ಕಡಲ ತೀರಗಳು:
ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ್ ಪಟ್ಟಣದ ಬೇಕಲ್ ಕಡಲ ತೀರ.
ಚಿತ್ರಕೃಪೆ: Soman

ಕಡಲ ತೀರಗಳು:
ತ್ರಿಶ್ಶೂರ್ ಜಿಲ್ಲೆಯ ಚಾವಕ್ಕಾಡ್ ನಲ್ಲಿರುವ ಚಾವಕ್ಕಾಡ್ ಕಡಲ ತೀರ.
ಚಿತ್ರಕೃಪೆ: Drajay1976

ಕಡಲ ತೀರಗಳು:
ಕೇರಳದ ಕೊಚ್ಚಿಯಲ್ಲಿರುವ ಚೆರೈ ಕಡಲ ತೀರದ ಒಂದು ನೋಟ.
ಚಿತ್ರಕೃಪೆ: Sabincp

ಕಡಲ ತೀರಗಳು:
ಕೇರಳದ ಕೊಚ್ಚಿ ನಗರದಲ್ಲಿರುವ ಕಡಲ ತೀರ.
ಚಿತ್ರಕೃಪೆ: Challiyan

ಕಡಲ ತೀರಗಳು:
ಕೋವಲಂನಲ್ಲಿರುವ ಸೂಮ್ದರ ಕೋವಲಂ ಕಡಲ ತೀರ.
ಚಿತ್ರಕೃಪೆ: BishkekRocks

ಕಡಲ ತೀರಗಳು:
ಕೇರಳದ ಕೋಳಿಕೋಡ್ ನಲ್ಲಿರುವ ಕಾಪ್ಪಾಡ್ ಕಡಲ ತೀರದ ಒಂದು ನೋಟ.
ಚಿತ್ರಕೃಪೆ: Dijaraj Nair

ಕಡಲ ತೀರಗಳು:
ಕಾಸರಗೋಡಿನಲ್ಲಿರುವ ಕಾಪ್ಪೀಲ್ ಕಡಲ ತೀರ.
ಚಿತ್ರಕೃಪೆ: Ikroos

ಕಡಲ ತೀರಗಳು:
ಕಣ್ಣೂರ್ ಬಳಿಯಿರುವ ಕೀಳುಣ್ಣಾ ಕಡಲ ತೀರ.
ಚಿತ್ರಕೃಪೆ: Ks.mini

ಕಡಲ ತೀರಗಳು:
ಕೇರಳದ ಕೊಲ್ಲಂನಲ್ಲಿರುವ ಸುಂದರ ಕಡಲ ತೀರದ ಮತ್ಸ್ಯ ಕನ್ಯೆಯ ಪ್ರತಿಮೆ.
ಚಿತ್ರಕೃಪೆ: Rajeev Nair

ಕಡಲ ತೀರಗಳು:
ಕೇರಳದ ಕೋಳಿಕೋಡ್ ಕಡಲ ತೀರದ ಸುಂದರ ನೋಟ.
ಚಿತ್ರಕೃಪೆ: Dhruvaraj S

ಕಡಲ ತೀರಗಳು:
ಕೇರಳದ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ಕೋವಲಂನಲ್ಲಿರುವ ಸುಂದರ ಕಡಲ ತೀರ.
ಚಿತ್ರಕೃಪೆ: mehul.antani

ಕಡಲ ತೀರಗಳು:
ಕೇರಳದ ಅಲೆಪ್ಪಿ ಬಳಿರುವ ಮಾರಾರಿ ಕಡಲ ತೀರದಿಂದ ಸೆರೆಹಿಡಿಯಲಾದ ಒಂದು ನೋಟ.
ಚಿತ್ರಕೃಪೆ: nborun

ಕಡಲ ತೀರಗಳು:
ಕೇರಳದ ಕಣ್ಣೂರು ಬಳಿಯಿರುವ ಮೀನ್ಕುಣ್ಣು ಕಡಲ ತೀರ.
ಚಿತ್ರಕೃಪೆ: Sreejithk2000

ಕಡಲ ತೀರಗಳು:
ಕಣ್ಣೂರ್ ಬಳಿಯಿರುವ ಮುಳಪ್ಪಿಳಂಗಾಡ್ ಕಡಲ ತೀರ. ಇದು ಅತಿ ಉದ್ದವಾದ ಸವಾರಿ ಮಾರ್ಗವನ್ನು ಹೊಂದಿದೆ.
ಚಿತ್ರಕೃಪೆ: Neon

ಕಡಲ ತೀರಗಳು:
ಕಣ್ಣೂರ್ ಬಳಿಯ ಪಯ್ಯಂಬಲಂ ಕಡಲ ತೀರದ ಸುಂದರ ಪಾಕ್ಷಿಕ ನೋಟ.
ಚಿತ್ರಕೃಪೆ: Nisheedh

ಕಡಲ ತೀರಗಳು:
ತಿರುವನಂತಪುರದಲ್ಲಿರುವ ಸುಂದರ "ಸಮುದ್ರ" ಕಡಲ ತೀರ.
ಚಿತ್ರಕೃಪೆ: MGA73bot2

ಕಡಲ ತೀರಗಳು:
ತಿರುವನಂತಪುರದಲ್ಲಿರುವ ಶಂಖುಮುಖಂ ಕಡಲ ತೀರ.
ಚಿತ್ರಕೃಪೆ: Vin.thomas

ಕಡಲ ತೀರಗಳು:
ತ್ರಿಶ್ಶೂರ್ ಬಳಿಯಿರುವ ಸ್ನೇಹತೀರ್ಥಂ ಕಡಲ ತಡಿಯ ಒಂದು ನೋಟ.
ಚಿತ್ರಕೃಪೆ: Edukeralam

ಕಡಲ ತೀರಗಳು:
ಕೇರಳದ ತಲಚೇರಿಯ ಮಲಬಾರ್ ಕರಾವಳಿ ತೀರದಲ್ಲಿರುವ ಒಂದು ಕಡಲ ತೀರ.
ಚಿತ್ರಕೃಪೆ: Premnath.T.Murkoth

ಕಡಲ ತೀರಗಳು:
ತ್ರಿಶ್ಶೂರ್ ನಲ್ಲಿರುವ ತಲಿಕುಲಂ ಹತ್ತಿರದ ಸ್ನೇಹತೀರ್ಥಂ ಕಡಲ ತೀರ.
ಚಿತ್ರಕೃಪೆ: Jpullokaran

ಕಡಲ ತೀರಗಳು:
ಕೇರಳದ ಕಣ್ಣೂರ್ ಬಳಿಯಿರುವ ತೊಟ್ಟಡ ಕಡಲ ತೀರ. ತೊಟ್ಟಡ ಹಿನ್ನೀರು ಸಮುದ್ರಕ್ಕೆ ಸೇರುತ್ತದೆ ಇಲ್ಲಿ.
ಚಿತ್ರಕೃಪೆ: Arjunmangol

ಕಡಲ ತೀರಗಳು:
ಕೇರಳದ ತ್ರಿಶ್ಶೂರ್ ನಲ್ಲಿರುವ ವದನಪಲ್ಲಿ ಕಡಲ ತೀರ.
ಚಿತ್ರಕೃಪೆ: Anojanto

ಕಡಲ ತೀರಗಳು:
ಕೇರಳದ ತಿರುವನಂತಪುರದಲ್ಲಿರುವ ಸುಂದರ ವರ್ಕಲಾ ಕಡಲ ತೀರ.
ಚಿತ್ರಕೃಪೆ: Kerala Tourism

ಕಡಲ ತೀರಗಳು:
ಚೆನ್ನೈ ನಗರದ ಸುಪ್ರಸಿದ್ಧ ಪ್ರವಾಸಿ ತಾಣ ಮರೀನಾ ಕಡಲ ತೀರ.
ಚಿತ್ರಕೃಪೆ: Nikhilb239

ಕಡಲ ತೀರಗಳು:
ಚೆನ್ನೈನ ಬೆಸಂಟ್ ನಗರ ಕಡಲ ತೀರ.
ಚಿತ್ರಕೃಪೆ: lensbug.chandru

ಕಡಲ ತೀರಗಳು:
ಚೆನ್ನೈನ ಒ.ಎಂ.ಆರ್ ರಸ್ತೆಯಲ್ಲಿರುವ ಕಡಲ ತೀರ.
ಚಿತ್ರಕೃಪೆ: Sailu.d18

ಕಡಲ ತೀರಗಳು:
ಸುಪ್ರಸಿದ್ಧ ಯಾತ್ರಾ ಕ್ಷೇತ್ರ ತಮಿಳುನಾಡಿನ ಕನ್ಯಾಕುಮಾರಿ ಕಡಲ ತೀರ.
ಚಿತ್ರಕೃಪೆ: Omyekiae

ಕಡಲ ತೀರಗಳು:
ರಾಮೇಶ್ವರಂನ ಧನುಷ್ಕೋಡಿ ಬಳಿಯಿರುವ ಸುಂದರ ಕಡಲ ತೀರ.
ಚಿತ್ರಕೃಪೆ: M.Mutta

ಕಡಲ ತೀರಗಳು:
ತಮಿಳುನಾಡಿನ ಮಹಾಬಲಿಪುರಂ ಕಡಲ ತೀರದ ಒಂದು ನೋಟ.
Arian Zwegers

ಕಡಲ ತೀರಗಳು:
ತಮಿಳುನಾಡಿನ ತೂತುಕುಡಿಯಲ್ಲಿರುವ ಮನಪ್ಪಾಡು ಕಡಲ ತೀರ.
Sa.balamurugan

ಕಡಲ ತೀರಗಳು:
ಜ್ಯೋತಿರ್ಲಿಂಗ ತಾಣ ಸುಪ್ರಸಿದ್ಧ ರಾಮೇಶ್ವರಂ ಕಡಲ ತೀರ.
Nsmohan

ಕಡಲ ತೀರಗಳು:
ತಮಿಳುನಾಡಿನ ತಿರುಚೆಂಡೂರ್ ಕಡಲ ತೀರದ ಮೋಹಕ ಸೂರ್ಯೋದಯ.
ಚಿತ್ರಕೃಪೆ: எஸ்ஸார்

ಕಡಲ ತೀರಗಳು:
ತಮಿಳುನಾಡಿನ ತೂತುಕುಡಿ ಕಡಲ ತೀರ ಸೂರ್ಯಾಸ್ತದ ವಿಹಂಗಮ ನೋಟ.
ಚಿತ್ರಕೃಪೆ: Ramkumar

ಕಡಲ ತೀರಗಳು:
ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಅಂತರ್ವೇದಿ ಕಡಲ ತೀರ.
ಚಿತ್ರಕೃಪೆ: Rajib Ghosh

ಕಡಲ ತೀರಗಳು:
ವೈಜಾಗ್ ಅಥವಾ ವಿಶಾಖಾಪಟ್ಟಣದಲ್ಲಿರುವ ಭೀಮಿಲಿ ಕಡಲ ತೀರದ ನೋಟ. ಮಹಾಭಾರತದ ಪ್ರಸಂಗವೊಂದನ್ನು ಅನಾವರಣಗೊಳಿಸುತ್ತಿರುವ ಪಾಂಡವರ ಬೊಂಬೆಗಳು.
ಚಿತ್ರಕೃಪೆ: Adityamadhav83

ಕಡಲ ತೀರಗಳು:
ಆಂಧ್ರದ ಕಾಕಿನಾಡಾ ಕಡಲ ತೀರ. ಸುಂದರವಾಗಿ ಅರಳಿದ ಮರಳಿನ ಕಲಾಕೃತಿ.
ಚಿತ್ರಕೃಪೆ: Palagiri

ಕಡಲ ತೀರಗಳು:
ಆಂಧ್ರದ ಪ್ರಕಾಶಂ ಜಿಲ್ಲೆಯಲ್ಲಿರುವ ಪಕಾಲಾ ಪಟ್ಟಣದ ಪಕಾಲಾ ಕಡಲ ತೀರ.
ಚಿತ್ರಕೃಪೆ: Maheedharg

ಕಡಲ ತೀರಗಳು:
ವೈಜಾಗ್ ಅಥವಾ ವಿಶಾಖಾಪಟ್ಟಣ ಜಿಲ್ಲೆಯಲ್ಲಿರುವ ವಡಾಪಾಲೇಮ್ ಕಡಲ ತೀರ.
ಚಿತ್ರಕೃಪೆ: Adityamadhav83

ಕಡಲ ತೀರಗಳು:
ವೈಜಾಗ್ ಅಥವಾ ವಿಶಾಖಾಪಟ್ಟಣದ ತೆನ್ನೆತಿ ಪಾರ್ಕ್ ಬಳಿಯ ಲಾವ್ಸನ್ಸ್ ಬೇ ಬೀಚ್.
ಚಿತ್ರಕೃಪೆ: Ravigopal Kesari

ಕಡಲ ತೀರಗಳು:
ವೈಜಾಗ್ ಅಥವಾ ವಿಶಾಖಾಪಟ್ಟಣದಲ್ಲಿರುವ ರಾಮ ಕೃಷ್ಣ ಕಡಲ ತೀರ.
ಚಿತ್ರಕೃಪೆ: Adityamadhav83

ಕಡಲ ತೀರಗಳು:
ವೈಜಾಗ್ ಅಥವಾ ವಿಶಾಖಾಪಟ್ಟಣದಲ್ಲಿರುವ ರಿಷಿಕೊಂಡ ಕಡಲ ತೀರದ ವಿಹಂಗಮ ನೋಟ.
ಚಿತ್ರಕೃಪೆ: Amit Chattopadhyay

ಕಡಲ ತೀರಗಳು:
ವಿಶಾಖಾಪಟ್ಟಣದಲ್ಲಿರುವ ಸಾಗರನಗರ ಕಡಲ ತೀರದ ನೋಟ.
ಚಿತ್ರಕೃಪೆ: Adityamadhav83

ಕಡಲ ತೀರಗಳು:
ವಿಶಾಖಾ ಪಟ್ಟಣದಲ್ಲಿರುವ ಗಂಗಾವರಂ ಬಳಿಯಿರುವ ಯರಾಡಾ ಕಡಲ ತೀರದ ನೋಟ.
ಚಿತ್ರಕೃಪೆ: Rajib Ghosh

ಕಡಲ ತೀರಗಳು:
ಪಾಂಡಿಚೆರಿ ಕಡಲ ತೀರದ ಒಂದು ಮನಮೋಹಕ ನೋಟ.
ಚಿತ್ರಕೃಪೆ: Soham Banerjee

ಕಡಲ ತೀರಗಳು:
ಪಾಂಡಿಚೆರಿಯ ಪ್ರೊಮೆನೇಡ್ ಸಮುದ್ರ ತೀರದ ಒಂದು ನೋಟ.
ಚಿತ್ರಕೃಪೆ: NDSRAM

ಕಡಲ ತೀರಗಳು:
ಒಡಿಶಾದ ಕೋನಾರ್ಕ್ ಬಳಿಯಿರುವ ಚಂದ್ರಭಾಗ ಕಡಲ ತೀರದ ಸೂರ್ಯೋದಯ.
ಚಿತ್ರಕೃಪೆ: Jnanaranjan sahu

ಕಡಲ ತೀರಗಳು:
ಒಡಿಶಾ ರಾಜ್ಯದ ಪುರಿಯಲ್ಲಿರುವ ಒಂದು ಕಡಲ ತೀರ.
ಚಿತ್ರಕೃಪೆ: Wen-Yan King

ಕಡಲ ತೀರಗಳು:
ಒಡಿಶಾದ ಕೋನಾರ್ಕ್ ಬಳಿಯಿರುವ ರಾಮಚಂಡಿ ಕಡಲ ತೀರ.
ಚಿತ್ರಕೃಪೆ: Sujit kumar

ಕಡಲ ತೀರಗಳು:
ಒಡಿಶಾ ರಾಜ್ಯದ ಬಾಲೇಶ್ವರ ಜಿಲ್ಲೆಯಲ್ಲಿರುವ ತಲ್ಸಾರಿ ಕಡಲ ತೀರ.
ಚಿತ್ರಕೃಪೆ: Tuli 100986

ಕಡಲ ತೀರಗಳು:
ಪಶ್ಚಿಮ ಬಂಗಾಳದ ಹೊಸ ದಿಘಾದ ಕಡಲ ತೀರ.
ಚಿತ್ರಕೃಪೆ: Biswarup Ganguly

ಕಡಲ ತೀರಗಳು:
ಪಶ್ಚಿಮ ಬಂಗಾಳದ ಹಳೆಯ ದಿಘಾ ಬಳಿಯಿರುವ ಕಡಲ ದಂಡೆ.
ಚಿತ್ರಕೃಪೆ: Ne0Freedom

ಕಡಲ ತೀರಗಳು:
ಪಶ್ಚಿಮ ಬಂಗಾಳ ರಾಜ್ಯದ ದಿಘಾ ಹಳ್ಳಿಯಲ್ಲಿರುವ ಉದೈಪುರ್ ಕಡಲ ದಂಡೆ.
ಚಿತ್ರಕೃಪೆ: Biswarup Ganguly

ಕಡಲ ತೀರಗಳು:
ಪಶ್ಚಿಮ ಬಂಗಾಳ ರಾಜ್ಯದ ಪೂರ್ವ ಮಿಡ್ನಾಪುರ್ ನಲ್ಲಿರುವ ಮದನರಮಣಿ ಕಡಲ ತೀರ.
ಚಿತ್ರಕೃಪೆ: Joydeep

ಕಡಲ ತೀರಗಳು:
ಲಕ್ಷದ್ವೀಪದಲ್ಲಿರುವ ಕವರಟ್ಟಿ ಕಡಲ ತೀರದ ಸುಂದರ ನೋಟ.
ಚಿತ್ರಕೃಪೆ: Thejas

ಕಡಲ ತೀರಗಳು:
ದಮನ್ ಕೇಂದ್ರಾಡಳಿತ ಪ್ರದೇಶದಲ್ಲಿರುವ ದೇವ್ಕಾ ಕಡಲ ತೀರದ ನೋಟ.
ಚಿತ್ರಕೃಪೆ: Pradeep717

ಕಡಲ ತೀರಗಳು:
ಇದು ಕೇಂದ್ರಾಡಳಿತ ಪ್ರದೇಶವಾದ ದಾಮನ್ ಮತ್ತು ದೀವ್ ಗಳ ಪೈಕಿ ದಮನ್ ನಲ್ಲಿರುವ ಜಂಪೋರ್ ಕಡಲ ತೀರ.
ಚಿತ್ರಕೃಪೆ: Pradeep717


Click it and Unblock the Notifications




















