Search
  • Follow NativePlanet
Share
» »ಜೈಪುರದ ಬಾಪು ಬಜಾರ್‌ನಲ್ಲಿ ಚೌಕಾಶಿ ಮಾಡಿ ಶಾಪಿಂಗ್ ಮಾಡಿದ್ರೆ ಎಲ್ಲವೂ ಕಡಿಮೆ ಬೆಲೆಗೆ ಸಿಗುತ್ತೆ

ಜೈಪುರದ ಬಾಪು ಬಜಾರ್‌ನಲ್ಲಿ ಚೌಕಾಶಿ ಮಾಡಿ ಶಾಪಿಂಗ್ ಮಾಡಿದ್ರೆ ಎಲ್ಲವೂ ಕಡಿಮೆ ಬೆಲೆಗೆ ಸಿಗುತ್ತೆ

ರಾಜಸ್ಥಾನದ ರಾಜಧಾನಿಯಾದ ಜೈಪುರ್ ರಾಜ್ಯದ ಅತ್ಯುತ್ತಮ ಶಾಪಿಂಗ್ ತಾಣವಾಗಿದೆ. 'ಪಿಂಕ್ ಸಿಟಿ' ಎಂದು ಕರೆಯಲಾಗುವ ಜೈಪುರವು ಹಲವಾರು ಉತ್ಸಾಹಭರಿತ ಅಂಗಡಿಗಳು ಮತ್ತು ಮಾರುಕಟ್ಟೆಗಳಿಂದ ಕೂಡಿದೆ. ಹಿತ್ತಾಳೆ ಕೆಲಸದಿಂದ, ಅಮೂಲ್ಯವಾದ ಕಲ್ಲುಗಳು, ಜವಳಿ ಮತ್ತು ಹೆಚ್ಚಿನವುಗಳನ್ನು ಜೈಪುರದ ಪ್ರತಿ ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜೈಪುರದಲ್ಲಿ ಹಲವಾರು ಶಾಪಿಂಗ್ ಪ್ರದೇಶಗಳಿವೆ, ವರ್ಷಪೂರ್ತಿ ಸ್ಥಳೀಯರು ಮತ್ತು ಪ್ರವಾಸಿಗರು ಇಲ್ಲಿ ಶಾಪಿಂಗ್‌ಗಾಗಿ ಬರುತ್ತಿರುತ್ತಾರೆ.

 ಬಾಪು ಬಜಾರ್

ಬಾಪು ಬಜಾರ್

ರಾಜಸ್ಥಾನವು ಭಾರತದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಅರಮನೆಗಳು, ಕೋಟೆಗಳು, ಹವೇಲಿಗಳು, ನೈಸರ್ಗಿಕ ಸೌಂದರ್ಯ, ಶಾಪಿಂಗ್ ಪ್ರದೇಶಗಳು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಕಾಲಕಾಲಕ್ಕೆ ಆಕರ್ಷಿಸುತ್ತವೆ. ಬಾಪು ಬಜಾರ್ ಅತ್ಯಧಿಕ ಸಂಖ್ಯೆಯ ಖರೀದಿದಾರರನ್ನು ಹೊಂದಿದೆ.

ಎಲ್ಲಿದೆ ಬಾಪು ಬಜಾರ್

ಎಲ್ಲಿದೆ ಬಾಪು ಬಜಾರ್

PC: youtube
ಬಾಪು ಬಜಾರ್ ಜೈಪುರ ನಗರದ ಹೃದಯ ಭಾಗದಲ್ಲಿದೆ. ರಾಜಸ್ಥಾನಿ ಉತ್ಪನ್ನಗಳ ವೈವಿಧ್ಯತೆಯು ತನ್ನ ಆಕರ್ಷಣೆ ಮತ್ತು ಲಭ್ಯತೆಯೊಂದಿಗೆ ಬಜಾರ್ ಉತ್ತಮ ಶಾಪಿಂಗ್ ತಾಣವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳಲ್ಲಿನ ವೈವಿಧ್ಯತೆಯು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುತ್ತದೆ. ಖರೀದಿದಾರರು ಸಾಂಪ್ರದಾಯಿಕವಾದ ರಾಜಸ್ಥಾನಿ ಉತ್ಪನ್ನಗಳನ್ನು ಜವಳಿ, ಸುಗಂಧದ್ರವ್ಯಗಳು, ಒಂಟೆ ಚರ್ಮದಿಂದ ತಯಾರಿಸಿದ ಉತ್ಪನ್ನಗಳು ಮತ್ತು ಇನ್ನಿತರ ಉತ್ಪನ್ನಗಳನ್ನು ಖರೀದಿಸಬಹುದು.

ಮಾರಾಟವಾಗುವ ವಸ್ತುಗಳು

ಮಾರಾಟವಾಗುವ ವಸ್ತುಗಳು

PC: youtube
ಜೈಪುರದ ಬಾಪು ಬಜಾರ್ ಮಾರುಕಟ್ಟೆಯಲ್ಲಿ ಕಂಡುಬರುವ ಮೊಜಾರಿ ಪಾದರಕ್ಷೆಗಳನ್ನು ಹೆಚ್ಚಾಗಿ ಮಾರಾಟಮಾಡಲಾಗುತ್ತದೆ.. ವಿಶಿಷ್ಟ ಕಸೂತಿ ಮಾದರಿಗಳನ್ನು ಹೊಂದಿರುವ ಈ ಶೂಗಳು ಅನೇಕ ಪ್ರವಾಸಿಗರಿಂದ ಆದ್ಯತೆ ಪಡೆದಿವೆ. ಈ ರೀತಿಯ ಪಾದರಕ್ಷೆಗಳು ಈ ರಾಜ್ಯಕ್ಕೆ ವಿಶಿಷ್ಟವಾಗಿದೆ. ಇವು ಭಾರತದ ಇತರ ಭಾಗಗಳಲ್ಲಿ ಮತ್ತು ಪ್ರಪಂಚದಲ್ಲೂ ಅಷ್ಟೇನೂ ಕಂಡುಬರುವುದಿಲ್ಲ. ಮೊಜಾರಿ ಬೂಟುಗಳನ್ನು ಒಂಟೆ ಚರ್ಮದಿಂದ ತಯಾರಿಸಲಾಗುತ್ತದೆ. ಶೂಗಳ ಕೈಗೆಟುಕುವ ಬೆಲೆಯು ಅಧಿಕ ಪ್ರಯೋಜನವಾಗಿ ಕಾರ್ಯನಿರ್ವಹಿಸುತ್ತದೆ..

ಕರಕುಶಲ ಉತ್ಪನ್ನಗಳು

ಕರಕುಶಲ ಉತ್ಪನ್ನಗಳು

PC: youtube
ಮೊಜರಿ ಬೂಟುಗಳನ್ನು ಹೊರತುಪಡಿಸಿ, ಚರ್ಮದ ಉತ್ಪನ್ನಗಳು ದುಬಾರಿಯಾಗಿದ್ದರೂ ಸಹ ಪ್ರವಾಸಿಗರ ನೆಚ್ಚಿನವುಗಳಾಗಿವೆ. ಬಾಪು ಬಜಾರ್‌ನಲ್ಲಿ ಲಭ್ಯವಿರುವ ಕರಕುಶಲ ಉತ್ಪನ್ನಗಳ ಜೊತೆಗೆ ಮರಳುಗಲ್ಲು ಮತ್ತು ಅಮೃತಶಿಲೆ ಉತ್ಪನ್ನಗಳು ರಾಜಸ್ಥಾನ ರಾಜ್ಯದ ಮೂಲತತ್ವವನ್ನು ಹೊರತರುತ್ತದೆ. ಈ ಪ್ರಸಿದ್ಧ ಬಜಾರ್‌ನಿಂದ ಖರೀದಿಸಬಹುದಾದ ಅತ್ಯುತ್ತಮ ಸ್ಮಾರಕ ವಸ್ತುಗಳು ಕರಕುಶಲ ವಸ್ತುಗಳಾಗಿವೆ.

 ಲಕ್ ಬಳೆಗಳು

ಲಕ್ ಬಳೆಗಳು

PC: youtube
ಲಕ್ ಬಳೆಗಳು, ಇದು ಮಣ್ಣಿನ ಮೇಲ್ಮೈ ಮತ್ತು ಕುಲುಮೆಗಳಲ್ಲಿ ತಯಾರಿಸಿದ ಸಾಂಪ್ರದಾಯಿಕ ಜೈಪುರಿ ಬಳೆಗಳಾಗಿವೆ. ಅವುಗಳು ರಾಜಸ್ಥಾನಿ ಉತ್ಪನ್ನವಾಗಿದೆ, ಮತ್ತು ಬೀದಿಗಳಲ್ಲಿ ಈ ಸಮಂಜಸವಾದ ಬಳೆಗಳನ್ನು ವರ್ಣಮಯವಾಗಿ ಲೇಪನ ಮಾಡಲಾಗುತ್ತದೆ. ನಿಮ್ಮ ಸಾಂಪ್ರದಾಯಿಕ ವಸ್ತ್ರಗಳಿಗೆ ಇಂತಹ ಬಳೆಗಳನ್ನು ಆಯ್ಕೆ ಮಾಡಬಹುದು.

 ಚೌಕಾಶಿ ಮಾಡಿ

ಚೌಕಾಶಿ ಮಾಡಿ

PC: youtube
ಬಾಪು ಬಜಾರ್‌ನ ಅಂಗಡಿಗಳಲ್ಲಿ ಚೌಕಾಶಿಗಳು ತುಂಬಾ ಸಾಮಾನ್ಯವಾಗಿದೆ. ಉತ್ತಮ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯಲು ಪ್ರವಾಸಿಗರು ಅಳವಡಿಸುವ ಒಂದು ಕೌಶಲವಾಗಿದೆ. ಬಾಪು ಬಜಾರ್‌ನಲ್ಲಿನ ಚೌಕಾಶಿಯು ಪ್ರವಾಸಿಗರಿಗೆ ಉತ್ತಮ ಖರೀದಿಗೆ ಸಹಾಯ ಮಾಡುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube
ಬಾಪು ಬಜಾರ್ ಚೌರಾ ರಾಸ್ತಾದಲ್ಲಿದೆ, ಇದು ರೈಲು ನಿಲ್ದಾಣದಿಂದ ಸುಮಾರು 4 ಕಿ.ಮೀ. ದೂರದಲ್ಲಿದೆ. ನಗರದ ಯಾವುದೇ ಭಾಗದಿಂದ ಖಾಸಗಿ ಕ್ಯಾಬಗಳನ್ನು ಅಥವಾ ಆಟೋ ರಿಕ್ಷಾಗಳನ್ನು ತೆಗೆದುಕೊಳ್ಳುವುದು ಸುಲಭದ ಮಾರ್ಗವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X