Search
  • Follow NativePlanet
Share
» »ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೀಗೆ ಪ್ರಯಾಣಿಸಿ

ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೀಗೆ ಪ್ರಯಾಣಿಸಿ

By Vijay

ಕಳೆದ ಕೆಲ ಲೆಖನಗಳಲ್ಲಿ ಬೆಂಗಳೂರಿನಿಂದ ಕೆಲ ಪ್ರಖ್ಯಾತಿ ಪ್ರವಾಸಿ ಸ್ಥಳಗಳಿಗೆ ಯಾವ ಮಾರ್ಗದ ಮೂಲಕ, ಆ ಮಾರ್ಗದ ಆಸು ಪಾಸಿನಲ್ಲಿರುವ ಏನೇಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತ ತಲುಪಬಹುದೆಂಬುದರ ಕುರಿತು ತಿಳಿಸಿರುವುದನ್ನು ಓದಿರುತ್ತೀರಿ ಎಂಬ ಆಶಯದಿಂದ ಅದೆ ಸರಣಿಯನ್ನು ಮುಂದುವರೆಸುತ್ತ, ಪ್ರಸ್ತುತ ಲೇಖನದಲ್ಲಿ ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೇಗೆ ಪ್ರಯಾಣಿಸಬಹುದೆಂಬುದರ ಕುರಿತು ತಿಳಿಸಲಾಗಿದೆ.

ಆಕರ್ಷಕ ಕೊಡುಗೆ : ಪ್ರತಿ ದೇಶೀಯ ವಿಮಾನ ಹಾರಾಟ ದರಗಳ ಮೇಲೆ 15% ರಷ್ಟು ಹಣ ಮರಳಿಪಡೆಯಿರಿ!

ಕನ್ಯಾಕುಮಾರಿ ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ನೆಲೆಸಿದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದ ಬಳಿಯಲ್ಲಿರುವುದು ವಿಶೇಷ. ಇದರ ವಾಯುವ್ಯ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಕೇರಳ ರಾಜ್ಯವಿದ್ದು, ತಿರುನೆಲ್ವೇಲಿ ಜಿಲ್ಲೆಯು ಇದರ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬರುತ್ತದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ.

ವಿಶೇಷ ಲೇಖನ : ಬೆಂಗಳೂರಿನಿಂದ ವರ್ಕಲಾ ತೀರಕ್ಕೆ ಹೀಗೆ ಪಯಣಿಸಿ

ವಿವೇಕಾನಂದ ಬಂಡೆ ಸ್ಮಾರಕ, ಕನ್ಯಾಕುಮಾರಿ ದೇವಸ್ಥಾನ, ಚಿತರಾಲ್ ಬೆಟ್ಟ ದೇವಸ್ಥಾನ, ಜೈನ ಸ್ಮಾರಕಗಳು, ನಾಗರಾಜ ದೇವಸ್ಥಾನ ಹಾಗೂ ಸುಬ್ರಹ್ಮಣ್ಯನ ದೇವಸ್ಥಾನಗಳಂತಹ ಅನೇಕ ಪವಿತ್ರ ದೇಗುಲ ಸನ್ನಿಧಿಗಳನ್ನು ಈ ತಾಣದಲ್ಲಿ ಕಾಣಬಹುದಾಗಿದೆ. ಅಲ್ಲದೆ ಇಲ್ಲಿ ದೊರೆಯುವ ಕಪ್ಪೆ ಚಿಪ್ಪುಗಳಿಂದ ಮಾಡಲಾಗಿರುವ ವೈವಿಧ್ಯಮಯ ಅಲಂಕಾರಿಕ ವಸ್ತುಗಳು ವಿಶೇಷವಾಗಿದ್ದು ನಿಮ್ಮ ಪ್ರೀತಿ ಪಾತ್ರದವರಿಗೆ ಕಾಣಿಕೆಯಾಗಿ ನೀಡಲು ಸಮಂಜಸವಾಗಿವೆ. ಹಾಗಾದರೆ ಬನ್ನಿ ಬಾಡಿಗೆ ಅಥವಾ ನಿಮ್ಮ ಸ್ವಂತ ಕಾರಿನ ಮೂಲಕ ಬೆಂಗಳೂರಿನಿಂದ ಕನ್ಯಾಕುಮಾರಿಯತ್ತ ಪ್ರಯಾಣ ಬೆಳೆಸೋಣ.

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ಹಾಗಾದರೆ ಬನ್ನಿ ಮೊದಲಿಗೆ ಬೆಂಗಳೂರಿನಿಂದ ಪ್ರಯಾಣ ಪ್ರಾರಂಭಿಸಿ ಹೊಸೂರು, ಕೃಷ್ಣಗಿರಿ, ನಾಮಕ್ಕಲ್ ಮಾರ್ಗವಾಗಿ ಕೊನೆಯದಾಗಿ ಕನ್ಯಾಕುಮಾರಿಯನ್ನು ತಲುಪೋಣ.

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಪ್ರಾರಂಭವಾಗುವ ಈ ಪ್ರಯಾಣದಲ್ಲಿ ಮೊದಲಿಗೆ ತಮಿಳುನಾಡಿನ ಹೊಸೂರು ಮಾರ್ಗವಾಗಿ ಕೃಷ್ಣಗಿರಿಯನ್ನು ತಲುಪಬೇಕು. ಇದರ ಒಟ್ಟು ದೂರ ಸುಮಾರು 76 ಕಿ.ಮೀ ಗಳು. ಕೃಷ್ಣಗಿರಿಗೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಸಾಕಷ್ಟು ಪುರಾತನ ದೇವಾಲಯಗಳನ್ನು ನೋಡಬಹುದು. ಅಲ್ಲದೆ ಹಳೆಯದಾದ ಕೃಷ್ಣಗಿರಿ ಕೋಟೆ ಹಾಗೂ ಕೃಷ್ಣಗಿರಿ ಜಲಾಶಯವು ಜನಪ್ರೀಯ ಆಕರ್ಷಣೆಗಳಾಗಿವೆ.

ಚಿತ್ರಕೃಪೆ: Nagesh Kamath

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ನಂತರ ಕೃಷ್ಣಗಿರಿಯಿಂದ ರಾಜ್ಯ ಹೆದ್ದಾರಿ ಸಂಖ್ಯೆ7 ರ ಮೂಲಕ ಸಾಗುತ್ತ ಒಟ್ಟು 70 ಕಿ.ಮೀ ಕ್ರಮಿಸಿ ಧರ್ಮಪುರಿಯನ್ನು ತಲುಪಬೇಕು. ಧರ್ಮಪುರಿಯಲ್ಲಿ ಹೇಳಿಕೊಳ್ಳುವಂತಹ ಅಂತಹ ಆಕರ್ಷಣೆಗಳೇನು ಇಲ್ಲವಾದರೂ ಇಲ್ಲಿಂದ 45 ಕಿ.ಮೀ ಗಳಷ್ಟು ದೂರದಲ್ಲಿರುವ ಹೋಗೆನಕ್ಕಲ್ ಜಲಪಾತ ಮಾತ್ರ ಆಕರ್ಷಕ ತಾಣವಾಗಿದೆ. ಹೋಗೆನಕ್ಕಲ್ ಜಲಪಾತ ಕುರಿತು ಹೆಚ್ಚು ತಿಳಿಯಿರಿ.

ಚಿತ್ರಕೃಪೆ: Soham Banerjee

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ಧರ್ಮಪುರಿಯಿಂದ ನಂತರ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಪ್ರಯಾಣ ಮುಂದುವರೆಸುತ್ತ 65 ಕಿ.ಮೀ ಕ್ರಮಿಸಿದಾಗ ದೊರೆಯುವ ಪಟ್ಟಣ ಸೇಲಂ. ಸೇಲಂ, ತಮಿಳುನಾಡಿನ ಬೆಳೆಯುತ್ತಿರುವ ಪಟ್ಟಣವಾಗಿದ್ದು ಸಾಕಷ್ಟು ಕೈಗಾರಿಕೋದ್ಯಮಗಳು, ರಿಟೇಲ್ ಅಂಗಡಿ ಮುಗ್ಗಟ್ಟುಗಳು, ಶಾಪಿಂಗ್ ಮಾಲ್ ಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ ಸೇಲಂ ನಲ್ಲಿ ಕೊಟ್ಟೈ ಮಾರಯಮ್ಮನವರ ದೇವಾಲಯ, ಸುಗವನೇಶ್ವರರ್ ದೇವಾಲಯ, ಪೆರುಮಾಳ ದೇವಾಲಯ ಮುಂತಾದ ಪ್ರಸಿದ್ಧ ದೇವಾಲಯಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Ananth BS

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ಸೇಲಂನಲ್ಲಿದಾಗ ಕೆಲ ಸಮಯಾವಕಾಶ ನಿಮಗಿದ್ದರೆ ಒಂದು ಸುಂದರ ತಾಣಕ್ಕೆ ಭೇಟಿ ನೀಡಬಹುದು. ಸೇಲಂ ಪಟ್ಟಣದಿಂದ ರಾಜ್ಯ ಹೆದ್ದಾರಿ ಸಂಖ್ಯೆ 188 ಅನ್ನು ಹಿಡಿದು ಕೇವಲ 30 ಕಿ.ಮೀ ಕ್ರಮಿಸಿದರೆ ಯೇರ್ಕಾಡ್ ಎಂಬ ಅಷ್ಟೊಂದಾಗಿ ಹೆಸರು ಕೇಳಲ್ಪಡದ ಆದರೆ ಸುಂದರವಾದ ಪರಿಸರ ಹೊಂದಿರುವ ಅದ್ಭುತ ಗಿರಿಧಾಮಕ್ಕೆ ಭೇಟಿ ನೀಡಬಹುದು. ಯೇರ್ಕಾಡ್ ಗಿರಿಧಾಮ

ಚಿತ್ರಕೃಪೆ: Thangaraj Kumaravel

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ಯೇರ್ಕಾಡ್ ಗಿರಿಧಾಮದ ಭೇಟಿಯ ನಂತರ ಮತ್ತೆ ಸೇಲಂ ಪಟ್ಟಣಕ್ಕೆ ಮರಳಿ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಏಳರಲ್ಲಿ ಪ್ರಯಾಣ ಮುಂದುವರೆಸುತ್ತ ನಾಮಕ್ಕಲ್ನೆಡೆ ಸಾಗಬಹುದು. ಸೇಲಂ ನಿಂದ ನಾಮಕ್ಕಲ್ ಕೇವಲ 57 ಕಿ.ಮೀ ಗಳಷ್ಟು ಅಂತರದಲ್ಲಿದೆ. ನಾಮಕ್ಕಲ್ ಒಂದು ಐತಿಹಾಸಿಕ ಪಟ್ಟಣವಾಗಿದ್ದು ಆಂಜನೇಯ ದೇವಸ್ಥಾನ, ನಾಮಕ್ಕಲ್ ಕೋಟೆ ಹೀಗೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ. ನಾಮಕ್ಕಲ್ ನ ಪ್ರಖ್ಯಾತ ಏಕ ಶಿಲೆಯಲ್ಲಿ ಕೆತ್ತಲಾದ ಆಂಜನೇಯ ದೇವಸ್ಥಾನದ ಆಂಜನೇಯನ ಪ್ರತಿಮೆ. (ನಾಮಕ್ಕಲ್ ಬೈಪಾಸ್ ಹೊಂದಿದ್ದು ಬೇಕಿದ್ದರೆ, ನಗರಕ್ಕೆ ಪ್ರವೇಶಿಸದೆ ನೇರವಾಗಿಯೂ ಸಹ ಸಾಗಬಹುದು.)

ಚಿತ್ರಕೃಪೆ: Booradleyp

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ನಾಮಕ್ಕಲ್ ಕೋಟೆ ಬಳಿಯಿರುವ ನಾಮಕ್ಕಲ್ ನ ಮತ್ತೊಂದು ಪ್ರಸಿದ್ಧ ಲಕ್ಷ್ಮಿ ನರಸಿಂಹರ ದೇವಸ್ಥಾನ.

ಚಿತ್ರಕೃಪೆ: Balajijagadesh

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ನಾಮಕ್ಕಲ್ ನಲ್ಲಿ ದೇಗುಲಗಳ ದರುಶನ ಮಾಡಿದ ನಂತರ ಇನ್ನೂ ಸಮಯವಿದೆ ಎಂಬಂತಾದರೆ ಸೇಲಂ-ನಾಮಕ್ಕಲ್-ತಿರುಚ್ಚಿ ರಸ್ತೆಯ ಮೇಲೆ ಸುಮಾರು 35 ಕಿ.ಮೀ ಕ್ರಮಿಸಿ ಅದ್ಭುತವಾದ ಕೊಲ್ಲಿ ಬೆಟ್ಟಗಳ ಪ್ರದೇಶಕ್ಕೆ ಒಂದು ವಿಸಿಟ್ ಹಾಕಬಹುದು. ಈ ಗಿರಿಶಿಖರದ ತುದಿ ತಲುಪಲು ಏನೀಲ್ಲವೆಂದರೂ 70 ಮೊನಚಾದ ಸುರುಳಿ ತಿರುವುಗಳನ್ನು (ಹೇರ್ ಪಿನ್ ಬೆಂಡ್ಸ್) ದಾಟಿ ಹೋಗಬೇಕು. ಅಷ್ಟೊಂದು ವಾಣಿಜ್ಯೀಕರಣಕ್ಕೊಳಪಡದ ಈ ಪ್ರದೇಶದಲ್ಲಿ ಸಹಜ ಪ್ರಕೃತಿ ಸೌಂದರ್ಯವನ್ನು ಆನಂದಿಸಬಹುದಾಗಿದೆ.

ಚಿತ್ರಕೃಪೆ: Docku

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ಕೊಲ್ಲಿ ಬೆಟ್ಟಗಳಲ್ಲಿರುವ ಆಕಾಶಗಂಗಾ/ಕೊಲ್ಲಿ ಮಲೈ ಜಲಪಾತದ ಅದ್ಭುತ ದೃಶ್ಯ.

ಚಿತ್ರಕೃಪೆ: Docku

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ಕೊಲ್ಲಿ ಬೆಟ್ಟ ಪ್ರದೇಶದಲ್ಲಿರುವ ವಸಲೂರ್ಪಟ್ಟಿಯ ಸುಂದರವಾದ ಕೊಳ.

ಚಿತ್ರಕೃಪೆ: Karthickbala

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ಕೊಲ್ಲಿ ಬೆಟ್ಟದಲ್ಲಿರುವ, ಶಿವ ದೇವರಿಗೆ ಮುಡಿಪಾದ ಅರಪ್ಪಾಳೀಶ್ವರರ್ ದೇವಾಲಯ.

ಚಿತ್ರಕೃಪೆ: Karthickbala

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ನಂತರ ನಾಮಕ್ಕಲ್ ಗೆ ಮರಳಿ ಅಲ್ಲಿಂದ ಪುನಃ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಏಳರ ಮೂಲಕ ಪ್ರಯಾಣ ಮುಂದುವರೆಸುತ್ತ ಸುಮಾರು 57 ಕಿ.ಮೀ ಕ್ರಮಿಸಿ ಕರೂರ್ ಅನ್ನು ತಲುಪಬೇಕು. (ಇದೂ ಕೂಡ ಬೈಪಾಸ್ ರಸ್ತೆ ಹೊಂದಿದ್ದು ದೇವಾಲಯಕ್ಕೆ ಭೇಟಿ ನೀಡಲು ಇಷ್ಟವಿದ್ದಲ್ಲಿ ಮಾತ್ರ ಈ ಪಟ್ಟಣಕ್ಕೆ ತೆರಳಬಹುದು ) ಇಲ್ಲಿ ಪ್ರೇಕ್ಷಣೀಯ ಸ್ಥಳಗಳು ಕಂಡುಬರುವುದಿಲ್ಲ ಆದರೆ ಧಾರ್ಮಿಕವಾಗಿ ಕಲ್ಯಾಣ ಪಶುಪತೀಶ್ವರರ್ ದೇವಸ್ಥಾನವನ್ನು ಕರೂರಿನಲ್ಲಿ ಕಾಣಬಹುದು.

ಚಿತ್ರಕೃಪೆ: Balaji

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ಕರೂರಿನಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಮುಂದೆ ಸಾಗುತ್ತ ಸುಮಾರು 72 ಕಿ.ಮೀ ಕ್ರಮಿಸಿ ದಿಂಡುಕ್ಕಲ್ ಅನ್ನು ಪ್ರವೇಶಿಸಬಹುದು. ಇದು ಕೂಡ ನಿಮ್ಮ ಆಯ್ಕೆಯ ಮೇಲೆ ಬಿಟ್ಟಿದ್ದು. ದಿಂಡುಕ್ಕಲ್ ನಲ್ಲಿರುವ ವೇಣು ಹೋಟೆಲ್ ನಲ್ಲಿ ಬಿರಿಯಾನಿ ತಿನ್ನಲು ಮರೆಯದಿರಿ. ಅಲ್ಲದೆ ಇಲ್ಲಿಯೂ ಸಹ ಸಾಕಷ್ಟು ಗುಡಿ ಗುಂಡಾರಗಳನ್ನು ಕಾಣಬಹುದಾಗಿದ್ದು ನೀವು ಧಾರ್ಮಿಕ ಮನೋಭಾವದವರಾಗಿದ್ದರೆ ಭೇಟಿ ನೀಡಬಹುದು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: pelican

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ದಿಂಡಿಗುಲ್ ನಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಏಳರಲ್ಲಿ ಪ್ರಯಾಣ ಮುಂದುವರೆಸುತ್ತ ಸುಮಾರು 86 ಕಿ.ಮೀ ಕ್ರಮಿಸಿದರೆ ಸಾಕು ಎಂದಿಗೂ ನಿದ್ರಿಸದ ನಗರಿ ಎಂಬ ಖ್ಯಾತಿ ಪಡೆದ, ಮೀನಾಕ್ಷಿ ಅಮ್ಮನವರ ದೇವಸ್ಥಾನಕ್ಕೆ ಪ್ರಖ್ಯಾತವಾಗಿರುವ ಮದುರೈ ನಗರವನ್ನು ತಲುಪಬೇಕು. ಈ ಮಾರ್ಗದಲ್ಲಿಯೂ ಸಹ ಬೈಪಾಸ್ ಮೂಲಕ ಕನ್ಯಾಕುಮಾರಿಯೆಡೆ ಸಾಗಬಹುದಾಗಿದ್ದರೂ ಮದುರೈ ಅನ್ನು ತಪ್ಪಿಸುವಂತಿಲ್ಲ. ಆದ್ದರಿಂದ ಮದುರೈ ಪ್ರವೇಶಿಸಿ ಆನಂದಮಯ ಸಮಯ ಕಳೆದು ನಂತರ ಪ್ರಯಾಣಿಸಬಹುದು. ಮದುರೈ ಕುರಿತು ತಿಳಿಯಿರಿ.

ಚಿತ್ರಕೃಪೆ: McKay Savage

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ನಂತರ ಮದುರೈನಿಂದ ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಕನ್ಯಾಕುಮಾರಿಯೆಡೆ ಪ್ರಯಾಣ ಮುಂದುವರೆಸುತ್ತ ಸುಮಾರು 165 ಕಿ.ಮೀ ಕ್ರಮಿಸಿ ತಿರುನೆಲ್ವೇಲಿಯನ್ನು ಪ್ರವೇಶಿಸಬಹುದು. ತಿರುನೆಲ್ವೇಲಿಯು ಒಂದು ಪ್ರಮುಖ ಪಟ್ಟಣವಾಗಿದ್ದು ಇದರ ಸುತ್ತ ಮುತ್ತಲು ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಕಾಣಬಹುದಾಗಿದೆ. ಇಲ್ಲಿಂದ 60 ಕಿ.ಮೀ ದೂರದಲ್ಲಿರುವ ಕುಟ್ರಾಲಂ ಜಲಪಾತವು ತಮಿಳುನಾಡು ರಾಜ್ಯದ ಪ್ರಮುಖ ಜಲಪಾತವಾಗಿದೆ.

ಚಿತ್ರಕೃಪೆ: Aronrusewelt

ಬೆಂಗಳೂರಿನಿಂದ ಕನ್ಯಾಕುಮಾರಿ:

ಬೆಂಗಳೂರಿನಿಂದ ಕನ್ಯಾಕುಮಾರಿ:

ನಂತರ ಕುಟ್ರಾಲಂ ನಿಂದ ಪ್ರಯಾಣ ಮುಂದುವರೆಸುತ್ತ ತಿರುನೆಲ್ವೇಲಿ - ಶೆಂಕೊಟ್ಟೈ ರಸ್ತೆ - ಚೇರಣಮಹಾದೇವಿ - ಪನಗುಡಿ ರಸ್ತೆಯ ಮೂಲಕ ರೊಸೆಮಿಯಾಪುರಂವರೆಗೆ ಚಲಿಸಿ ನಂತರ ಅಲ್ಲಿಂದ ಸ್ವಲ್ಪ ಮುಂದೆ ಸಾಗಿ ಮತ್ತೆ ರಾಷ್ಟ್ರೀಯ ಹೆದ್ದಾರಿ ಏಳನ್ನು ಸಂಪರ್ಕಿಸಿ ಕನ್ಯಾಕುಮಾರಿಯೆಡೆ ಪ್ರಯಾಣಿಸಬಹುದು. ಕುಟ್ರಾಲಂ ನಿಂದ ಕನ್ಯಾಕುಮಾರಿಯ ದೂರ ಒಟ್ಟು 125 ಕಿ.ಮೀ ಗಳು ಮಾತ್ರ. ಕನ್ಯಾಕುಮಾರಿಯ ಕುರಿತು ಸವಿವರವಾಗಿ ಇಲ್ಲಿ ತಿಳಿಯಿರಿ.

ಚಿತ್ರಕೃಪೆ: Premnath Thirumalaisamy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X