Search
  • Follow NativePlanet
Share
» »ಬೆಂಗಳೂರು ಕೋಟೆಯ ಹೆಬ್ಬಾಗಿಲಿಗೆ ಗರ್ಭಿಣಿ ಸ್ತ್ರೀ ಬಲಿಯಾದ ಕಾರಣವೇನು?

ಬೆಂಗಳೂರು ಕೋಟೆಯ ಹೆಬ್ಬಾಗಿಲಿಗೆ ಗರ್ಭಿಣಿ ಸ್ತ್ರೀ ಬಲಿಯಾದ ಕಾರಣವೇನು?

ನಮ್ಮ ಬೆಂಗಳೂರಿನಲ್ಲಿ ರಾಜ ಕೆಂಪೇಗೌಡರು ನಿರ್ಮಾಣ ಮಾಡಿದ ಒಂದು ಕೋಟೆ ಇದೆ ಎಂಬುದರ ಬಗ್ಗೆ ನಿಮಗೆ ಗೊತ್ತ? ಆ ಕೋಟೆಯ ಹಿಂದೆ ಒಂದು ಸ್ವಾರಸ್ಯಕರವಾದ ಕಥೆಯು ಕೂಡ ಇದೆ. ಬಲಿದಾನ ಎಂಬ ಪದ ನೀವು ಸಾಮಾನ್ಯವಾಗಿ ಕೇಳಿರಬಹುದು. ಅದು ದೇಶ ಪ್ರೇಮಕ್ಕೆ, ನಾ

ನಮ್ಮ ಬೆಂಗಳೂರಿನಲ್ಲಿ ರಾಜ ಕೆಂಪೇಗೌಡರು ನಿರ್ಮಾಣ ಮಾಡಿದ ಒಂದು ಕೋಟೆ ಇದೆ ಎಂಬುದರ ಬಗ್ಗೆ ನಿಮಗೆ ಗೊತ್ತ? ಆ ಕೋಟೆಯ ಹಿಂದೆ ಒಂದು ಸ್ವಾರಸ್ಯಕರವಾದ ಕಥೆಯು ಕೂಡ ಇದೆ. ಬಲಿದಾನ ಎಂಬ ಪದ ನೀವು ಸಾಮಾನ್ಯವಾಗಿ ಕೇಳಿರಬಹುದು. ಅದು ದೇಶ ಪ್ರೇಮಕ್ಕೆ, ನಾಡ ಪ್ರೇಮಕ್ಕೆ ಹಲವಾರು ಮಂದಿ ಮಾಹಿಮಾನ್ವಿತರು ನೀಡಿರುವ ಬಗ್ಗೆ ನಾವು ಕೇಳಿದ್ದೇವೆ.

ಶಕುನಿ ದೇವಾಲಯವೂ ಇದೆ ಎಂಬುದು ನಿಮಗೆ ಗೊತ್ತ?ಶಕುನಿ ದೇವಾಲಯವೂ ಇದೆ ಎಂಬುದು ನಿಮಗೆ ಗೊತ್ತ?

ಪ್ರತಿಯೊಂದು ಕೋಟೆಯ ಹಿಂದೆ ಕೋಟೆಯಷ್ಟೇ ದೊಡ್ಡದಾದ ಕಥೆ ಇರುತ್ತದೆ. ಸಾಮಾನ್ಯವಾಗಿ ಕೋಟೆಗಳೆಂದರೆಯೇ ಆಶ್ಚರ್ಯವೆನಿಸುತ್ತದೆ. ಕೋಟೆಯಲ್ಲಿ ಏನೆಲ್ಲಾ ಇರಬಹುದು ಎಂಬ ಕುತೂಹಲ ಇರುತ್ತದೆ. ಬೇರೆ ಬೇರೆ ಸ್ಥಳದ ಕೋಟೆಗಳಿಗೆ ಭೇಟಿ ನೀಡುವ ಮುನ್ನ ಒಮ್ಮೆ ನಮ್ಮ ಬೆಂಗಳೂರಿನಲ್ಲಿರುವ ಕೋಟೆಯನ್ನು ಕಂಡು ವಾರಾಂತ್ಯವನ್ನು ಕಳೆಯಿರಿ.

ಈ ಕೋಟೆಗೆ ನಾಡ ಪ್ರೇಮವೇ ಭದ್ರ ಬುನಾದಿಯಾಗಿ ನಿಂತಿದೆ. ಆ ನಾಡ ಪ್ರೇಮ ಯಾವುದು? ಯಾರು ನೀಡಿದರು? ಅದಕ್ಕೆ ಕಾರಣವಾದರೂ ಏನು? ಇಂಥಹ ಹಲವಾರು ಪ್ರೆಶ್ನೆಗಳಿಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ಯಾರು ನಿರ್ಮಾಣ ಮಾಡಿದರು?

ಯಾರು ನಿರ್ಮಾಣ ಮಾಡಿದರು?

ಬೆಂಗಳೂರಿನ ಕೋಟೆಯನ್ನು 1537 ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ ಕೆಂಪೇಗೌಡರು ನಿರ್ಮಾಣ ಮಾಡಿದರು. ಈ ಕೋಟೆಯನ್ನು ಕೆಂಪೇಗೌಡರು ಮಣ್ಣಿನಲ್ಲಿ ನಿರ್ಮಾಣ ಮಾಡಿದರು. ನಂತರ 1761 ರಲ್ಲಿ ಹೈದರ ಆಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ನಿರ್ಮಾಣ ಮಾಡಿದನು.

PC:Indrajit Roy

ಕೋಟೆಯ ಒಳಗೆ

ಕೋಟೆಯ ಒಳಗೆ

ಆ ಕಾಲದಲ್ಲಿ ಇದು ಬಯಲು ಸೀಮೆಯ ದೊಡ್ಡ ಕೋಟೆಯಾಗಿತ್ತು. ಅರಮನೆ ಆವರಣಕ್ಕೆ ಚಿಕ್ಕಪೇಟೆ ಮತ್ತು ದೊಡ್ಡಪೇಟೆ ಎಂಬ ಎರಡು ಪೇಟೆಗಳು ಇದ್ದವು. ಅಲ್ಲಿನ ಸುತ್ತಮುತ್ತ ಭೈರವೇಶ್ವರ ದೇವಾಲಯ, ಶ್ರೀ ವೆಂಕಟರಮಣನ ದೇವಾಲಯ, ಶ್ರೀ ರಂಗನಾಥನ ದೇವಾಲಯ, ಕಾಳಾಂಬ ದೇವಾಲಯ, ಕೋದಂಡ ಸ್ವಾಮಿ ದೇವಾಲಯಗಳನ್ನು ಕಾಣಬಹುದಾಗಿದೆ.

PC:Ibrahim Husain Meraj

ದೇವಾಲಯ

ದೇವಾಲಯ

ಕೋಟೆಯ ಒಳಗಿನ ದೇವಾಲಯಗಳೆಂದರೆ ಅದು ಧರ್ಮರಾಯ ಸ್ವಾಮಿ ದೇವಾಲಯ, ಕಾಳಮ್ಮ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಚೌಡೇಶ್ವರಿ ದೇವಾಲಯ, ವೆಂಕಟೇಶ್ವರ ಸ್ವಾಮಿ ದೇವಾಲಯ, ನರಸಿಂಹ ಸ್ವಾಮಿ ದೇವಾಲಯ, ಕೇಶವ ನಾಥ ಸ್ವಾಮಿ ದೇವಾಲಯ, ಬಸವೇಶ್ವರನ ದೇವಾಲಯ ಹೀಗೆ ಇನ್ನು ಹಲವಾರು ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ


PC:Pradhan V.

ಕೋಟೆಗೆ 9 ಬಾಗಿಲುಗಳು

ಕೋಟೆಗೆ 9 ಬಾಗಿಲುಗಳು

ಈ ಬೆಂಗಳೂರಿನ ಅದ್ಭುತವಾದ ಕೋಟೆಗೆ 9 ಬಾಗಿಲುಗಳಿವೆ. ಹಾಗೆಯೇ ಇಲ್ಲಿ ಹಲವಾರು ಪೇಟೆಗಳನ್ನು ಕೂಡ ಒಳಗೊಂಡಿತ್ತು. ಇಲ್ಲಿನ ಪೇಟೆಗಳಲ್ಲೆವೂ ನಿರ್ಧಿಷ್ಟವಾದ ಜಾತಿಯ ಆಧಾರವಾಗಿ ಕೆಂಪೇಗೌಡರು ವಿಂಗಡಿಸಿದ್ದರು. ವೃತ್ತಿ ಹಿನ್ನೆಲೆಯ ಆ ವ್ಯವಸ್ಥೆ ಕೆಂಪೇಗೌಡರ ಕಾಲದಲ್ಲಿ ಸರಿಯಾಗಿಯೇ ಇತ್ತು. ಆಯಾ ಪಂಗಡಕ್ಕೆ ಸಂಬಂಧಿಸಿದ ದೇವಾಲಯಗಳು ಆಯಾ ಪ್ರದೇಶದಲ್ಲಿಯೇ ಇತ್ತು.

PC:Ibrahim Husain Meraj

ಬಲಿದಾನ

ಬಲಿದಾನ

ನಾಡ ಪ್ರಭುವಾದ ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂಗಳೂರು ಕೋಟೆಯ ನಿರ್ಮಾಣದ ಬಗ್ಗೆ ಹಲವಾರು ಕಥೆಗಳು ಇವೆ. ಇದೊಂದು ಹೃದಯವಿದ್ರಾಹಕವಾದ ಕಥೆಯು ಕೂಡ ಆಗಿದೆ. ಅದೇನೆಂದರೆ ಕೆಂಪೇಗೌಡರು ಕೋಟೆಯನ್ನು ನಿರ್ಮಾಣ ಮಾಡುವ ಸಮಯದಲ್ಲಿ ಕೋಟೆಯ ಮುಖ್ಯ ಬಾಗಿಲು ನಿಲ್ಲುತ್ತಿರಲಿಲ್ಲ. ಬೆಳಗ್ಗೆಯಿಂದ ಕಟ್ಟಿದ್ದು, ಸಂಜೆಗೆ ಬಿದ್ದು ಹೋಗುತ್ತಿತ್ತು.

PC:Ibrahim Husain Meraj

ಜ್ಯೋತಿಷ್ಯಿ

ಜ್ಯೋತಿಷ್ಯಿ

ಇದರ ಕಾರಣವನ್ನು ತಿಳಿಯಲು ಕೆಂಪೇಗೌಡರು ಜ್ಯೋತಿಷ್ಯಿಗಳ ಮೊರೆ ಹೋದರು. ಆಗ ಅವರು ಮಾನವ ರಕ್ತ ಪಿಪಾಸಿ ಮಹಾಭೂತದಲ್ಲಿ ಹೊಕ್ಕಿದ್ದಾಳೆ ಹಾಗಾಗಿಯೇ ಮುಖ್ಯ ಬಾಗಿಲು ನಿಲ್ಲುತ್ತಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಪರಿಷ್ಕಾರವೆನೆಂದರೆ ಗರ್ಭಿಣಿ ಸ್ತ್ರೀಯನ್ನು ಬಲಿ ನೀಡಿದರೆ ಬಾಗಿಲು ನಿಲ್ಲುತ್ತದೆ ಎಂದು ಶಾಸ್ತ್ರ ಹೇಳುತ್ತದೆ ಎಂದು ಸಲಹೆ ನೀಡಿದರು.

PC:Ibrahim Husain Meraj

ಚಿಂತೆ

ಚಿಂತೆ

ಈ ವಿಷಯವನ್ನು ತಿಳಿದ ಕೆಂಪೇಗೌಡರು ಚಿಂತೆ ಮಾಡುತ್ತಾರೆ. ಇದನ್ನು ಅರಿತ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಸ್ವ ಇಚ್ಛೆಯಿಂದ ರಾಜ್ಯದ ಸಲುವಾಗಿ ಬಾಗಿಲ ಬಳಿ ತನ್ನ ಪ್ರಾಣವನ್ನು ಅರ್ಪಣೆ ಮಾಡಿಕೊಂಡಳು ಎಂಬ ಕಟ್ಟು ಕಥೆ ಇದೆ.

PC:Benjamin Lewis Rice


ಸಮಾಧಿ

ಸಮಾಧಿ

ಆದರೆ ಕೆಂಪೇಗೌಡರ ಸೊಸೆಯನ್ನು ಕೋರಮಂಗಲದಲ್ಲಿ ಅವಳ ಸಮಾಧಿಯನ್ನು ಮಾಡಲಾಗಿದೆ. ಇದೊಂದು ಕಟ್ಟು ಕಥೆಯಾಗಿದೆ. ಏಕೆಂದರೆ ಬಾಗಿಲ ಬಳಿ ಮೃತಳಾದವಳನ್ನು ಅಲ್ಲಿ ಏಕೆ ಸಮಾಧಿ ಮಾಡುತ್ತಾರೆ. ಇನ್ನೊಂದು ಗಮನಿಸಬೇಕಾದ ಸಂಗತಿ ಏನೆಂದರೆ ಕೆಂಪೇಗೌಡರು ಈ ಕೋಟೆಯನ್ನು ನಿರ್ಮಾಣ ಮಾಡುವಾಗ ಆತನ ಮಗನ ವಯಸ್ಸು ಇನ್ನೂ 6 ವರ್ಷವಾಗಿತ್ತು.

PC:Ibrahim Husain Meraj

6 ವರ್ಷದ ಕಂದ

6 ವರ್ಷದ ಕಂದ

ಆ 6 ವರ್ಷದ ಕಂದನಿಗೆ ಆಗಲೇ ವಿವಾಹವಾಗಲು ಸಾಧ್ಯವೇ? ಆ ಸಮಯದಲ್ಲಿಯೇ ಪತ್ನಿ ಗರ್ಭಿಣಿಯಾಗಲು ಸಾಧ್ಯವೇ? ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಪ್ರಾಣವನ್ನು ಅರ್ಪಣೆ ಮಾಡಲು ಒಪ್ಪುಲು ಸಾಧ್ಯವೇ?

PC:Sanojaa Thiyagarajah


ಕುತಂತ್ರ

ಕುತಂತ್ರ

ಒಟ್ಟಿನಲ್ಲಿ ಕೋಟೆಗೆ ಬಲಿಯಾದವಳು ನಾಡಪ್ರಭು ಕೆಂಪೇಗೌಡರ ಸ್ವಂತ ಸೊಸೆಯಂತೂ ಅಲ್ಲ. ಹಾಗಾದರೆ ಯಾರು? ಇದಕ್ಕೆ ಇನ್ನೊಂದು ಕಥೆ ಕೂಡ ಇದೆ ಅದೇನೆಂದರೆ ಕೆಂಪೇಗೌಡರ ಹಿತಶತ್ರುಗಳು ಆತನ ಮನಸ್ಸನ್ನು ಘಾಸಿಗೊಳಿಸಲು ಕುತಂತ್ರದಿಂದ ಜ್ಯೋತ್ಯಿಷಿಗಳಿಂದ ಹೇಳಿಸಿರಬಹುದು ಎಂದು ನಂಬಲಾಗಿದೆ.


PC:PENN

ನಾಡಭಕ್ತೆ ಸ್ತ್ರೀ

ನಾಡಭಕ್ತೆ ಸ್ತ್ರೀ

ಕೆಂಪೇಗೌಡರು ಮಾತ್ರ ಕೋಟೆಯ ಬಾಗಿಲು ನಿಲ್ಲದಿದ್ದರೂ ಪರವಾಗಿಲ್ಲ. ಆದರೆ ಆಮಾನುಷವಾದ ಸ್ತ್ರೀ ಹತ್ಯೆಗೆ ತಾನು ಒಪ್ಪುವುದಿಲ್ಲ ಎಂದು ಹೇಳುತ್ತಾರೆ. ಆದರೂ ಸಹ ಅವರ ಕೊರಗು ನಿಲ್ಲುವುದಿಲ್ಲ. ರಾಜನ ಈ ಕೊರಗನ್ನು ಕಂಡ ಓರ್ವ ಮಹಿಳೆಯು ರಾಜ್ಯದ ಹಿತಕ್ಕಾಗಿ ನಾಡಭಕ್ತೆ ಸ್ತ್ರೀಯೊಬ್ಬಳು ಬಲಿಯಾದಳಂತೆ ಎಂಬ ಕಥೆ ಕೂಡ ಈ ಕೋಟೆಗೆ ಇದೆ. ಈ ಕಥೆಗೆ ನಿದರ್ಶನ ಎಂಬಂತೆ ಹಲವಾರು ನಾಟಕಗಳು ಬಂದಿವೆ.

PC:PENN

ಇತಿಹಾಸಕಾರರು

ಇತಿಹಾಸಕಾರರು

ಈ ಕೋಟೆಯ ಕಥೆಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ನಿರ್ಧರಕ್ಕೆ ಇತಿಹಾಸಕಾರರೇ ಉತ್ತರ ನೀಡಬೇಕಾಗಿದೆ. ಅದೇನೆ ಇರಲಿ ನಮ್ಮ ಬೆಂಗಳೂರಿನ ಒಂದು ಐತಿಹಾಸಿಕವಾದ ಕೋಟೆಗೆ ಇಂಥಹ ಕಥೆ ಇದೆ ಎಂಬುದರ ಬಗ್ಗೆ ನಿಮಗೆ ಇಷ್ಟು ದಿನ ತಿಳಿದಿಲ್ಲ ಅನಿಸುತ್ತೆ ಅಲ್ಲವೇ? ಹಾಗಾದರೆ ಒಮ್ಮೆ ಈ ಕೋಟೆಗೆ ಭೇಟಿ ನೀಡಿ ಬನ್ನಿ.

PC:Ibrahim Husain Meraj

ಪ್ರವೇಶದ ಸಮಯ

ಪ್ರವೇಶದ ಸಮಯ

ಈ ಸುಂದರವಾದ ಕೋಟೆಗೆ ಭೇಟಿ ನೀಡಲು ಪ್ರವೇಶದ ಸಮಯವೆಂದರೆ ಅದು ಬೆಳಗ್ಗೆ 8:30 ರಿಂದ ಸಂಜೆ 5:30 ರವರಗೆ ತೆರೆದಿರಲಾಗುತ್ತದೆ. ಭಾನುವಾರದ ದಿನ ಬಿಟ್ಟು ಉಳಿದ ಎಲ್ಲಾ ದಿನವು ಪ್ರವಾಸಿಗರಿಗೆ ಪ್ರವೇಶವಿದೆ. ಇಲ್ಲಿ ಕೋಟೆಯ ಪ್ರವೇಶ ಶುಲ್ಕ ಕೇವಲ 5 ರೂಗಳು ಮಾತ್ರ.

PC:Ibrahim Husain Meraj

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X