Search
  • Follow NativePlanet
Share
» »ಗಟ್ಟಿಗನಿಗೂ ನೀರಿಳಿಸುವ ಬಂಡಾಜೆ ಟ್ರೆಕ್!

ಗಟ್ಟಿಗನಿಗೂ ನೀರಿಳಿಸುವ ಬಂಡಾಜೆ ಟ್ರೆಕ್!

ಬಂಡಾಜೆ ಟ್ರೆಕ್ ಅಥವಾ ಬಂಡಾಜೆ ಜಲಪಾತ ಸಾಕಷ್ಟು ಹೆಸರುವಾಸಿಯಾಗಿದ್ದು ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಡಾಜೆ ಹಳ್ಳಿಯ ಬಳಿಯಿದೆ

By Vijay

ಪ್ರಪ್ರಥಮವಾಗಿ ಪಶ್ಚಿಮ ಘಟ್ಟಗಳೆ ನೋಡಲು ಮನಮೋಹಕ. ದಟ್ಟವಾದ ಅರಣ್ಯಗಳು, ಕಲ್ಲು ಬಂಡೆಗಳ ಪರ್ವತ ಬೆಟ್ಟಗಳು, ಜುಳು ಜುಳು ಎಂದು ಕಾಡಿನಲ್ಲಿ ಹರಿಯುವ ತಾಜಾ ನೀರಿನ ಅಸಂಖ್ಯಾತ ಕೆರೆ ತೊರೆಗಳು, ವೈವಿಧ್ಯಮಯ ಜೀವಲೋಕ ಹಾಗೂ ಸಸ್ಯಲೋಕದಿಂದ ಕೂಡಿರುವ ಈ ಅಮೋಘ ತಾಣ ಭೂಮಾತೆಯ ಒಡಲಿನ ಅತ್ಯಮೂಲ್ಯ ರತ್ನದಂತಿದೆ.

ಆದರೆ ಇದು ಎಷ್ಟು ಸುಂದರವಾಗಿದೆಯೋ ಅಷ್ಟೆ ಕಷ್ಟಕರವಾದ ಕೆಲವು ಘಟ್ಟ ಪ್ರದೇಶಗಳನ್ನು, ಬೆಟ್ಟಗಳನ್ನು ಹೊಂದಿದೆ. ಈ ಘಟ್ಟಗಳಲ್ಲಿನ ಕೆಲವು ಅತಿ ನಯನ ಮನೋಹರವಾದ ಜಲಪಾತಗಳು ಎಲೆ ಮರೆಯ ಕಾಯಿಯಂತಿದ್ದು ಅವುಗಳ ಅಗಾಧ ಸೌಂದರ್ಯರಾಶಿಯನ್ನು ನೋಡಲು ಮಾನವ ಅತ್ಯಂತ ಕಷ್ಟಪಡಲೇಬೇಕು.

ಟ್ರೆಕ್ ಮಾಡಬಹುದಾದ ಕರ್ನಾಟಕದ ಪ್ರಮುಖ ಬೆಟ್ಟಗಳು!

ಹೌದು ಪಶ್ಚಿಮ ಘಟ್ಟಗಳ ನೂರಾರು ಸುಂದರ ಸ್ಥಳಗಳ ಪೈಕಿ ಬಂಡಾಜೆ ಜಲಪಾತವೂ ಸಹ ಒಂದು. ಆದರೆ ಈ ಜಲಪಾತದಾನಂದವನ್ನು ಮೇಲಿನಿಂದಲೆ ಪಡೆಯಬೇಕಾಗಿದ್ದು ಅದಕ್ಕಾಗಿ ಟ್ರೆಕ್ ಮಾಡಲೇಬೇಕು. ಅದನ್ನೆ ಬಂಡಾಜೆ ಟ್ರೆಕ್ ಅಥವಾ ಬಂಡಾಜೆ ಫಾಲ್ಸ್ ಟ್ರೆಕ್ ಎಂದು ಕರೆಯುತ್ತಾರೆ. ಈ ಚಾರಣದ ಕುರಿತು ವಿಶೇಷವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮಗೂ ಸಹ ಇಷ್ಟವಿದ್ದಲ್ಲಿ ಈ ಒಂದು ಸುಂದರ ಅನುಭವವನ್ನು ಒಮ್ಮೆ ಪಡೆದು ನೋಡಿ.

ಲೇಖನದಲ್ಲಿ ಬಳಸಲಾದ ಚಿತ್ರಗಳಿಗೆ ಚಿತ್ರಕೃಪೆ : Hemanth Kumar

ಹಾಗಾದರೆ ಹೋಗಿಬನ್ನಿ

ಹಾಗಾದರೆ ಹೋಗಿಬನ್ನಿ

ಮೊದಲನೇಯದಾಗಿ ನಿಮಗನಿಸುವಂತೆ ಇದು ಅಷ್ಟೊಂದು ಸರಳವಾದ ಟ್ರೆಕ್ ಅಲ್ಲವೆ ಅಲ್ಲ. ಸಾಕಷ್ಟು ಕಷ್ಟಗಳನ್ನು, ಅಡೆ-ತಡೆಗಳನ್ನು ನೀಡುವ ಚಾರಣ ಚಟುವಟಿಕೆ ಇದಾಗಿದೆ. ಅಲ್ಲದೆ ಈ ಒಂದು ಟ್ರೆಕ್ಕಿಗೆ ಮುಂಚಿತವಾಗಿಯೆ ಅನುಮತಿಯನ್ನು ಬೆಳ್ತಂಗಡಿ ಅರಣ್ಯ ಇಲಾಖೆಯ ರೇಂಜ್ ಅಧಿಕಾರಿಯಿಂದ ಪಡೆದಿರಬೇಕಾಗಿರುವುದು ಅವಶ್ಯಕವಾಗಿದೆ.

ಉತ್ತಮ ವಾತಾವರಣ

ಉತ್ತಮ ವಾತಾವರಣ

ಸಾಮಾನ್ಯವಾಗಿ ಚಳಿಗಾಲದ ಸಂದರ್ಭದಲ್ಲಿ ಈ ಟ್ರೆಕ್ ಅದ್ಭುತವಾದ ಅನುಭವವನ್ನು ನೀಡುತ್ತದೆ. ಈ ಟ್ರೆಕ್ ಅನ್ನು ಬಂಡಾಜೆ ಹಳ್ಳಿಯಿಂದ ಪ್ರಾರಂಭಿಸಬೇಕಾಗುತ್ತದೆ. ಬಂಡಾಜೆ ಹಳ್ಳಿಯು ಬಂಡಾಜೆ ಬೆಟ್ಟ ಹಾಗೂ ಬಂಡಾಜೆ ಜಲಪಾತದಿಂದಾಗಿ ಹೆಸರುವಾಸಿಯಾಗಿದೆ.

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಬಂಡಾಜೆ ಹಳ್ಳಿ. ಸಾಮಾನ್ಯವಾಗಿ ಈ ಚಾರಣ ಮಾಡುವವರು ಧರ್ಮಸ್ಥಳಕ್ಕೆ ತಲುಪಿ ಅಲ್ಲಿಂದ ಬಾಡಿಗೆ ಜೀಪುಗಳನ್ನು ಪಡೆದು ಒಂದು ಘಂಟೆಯಷ್ಟು ಪ್ರಯಾಣ ಬೆಳೆಸಿ ಬಂಡಾಜೆ ಹಳ್ಳಿಗೆ ತಲುಪುತ್ತಾರೆ.

ಗೌಡರ ಮನೆ

ಗೌಡರ ಮನೆ

ಬಂಡಾಜೆ ಹಳ್ಳಿಯಲ್ಲಿರುವ ಗೌಡರ ಮನೆ ಈ ಚಾರಣಕ್ಕೆ ಮುಖ್ಯ ಕೇಂದ್ರ ಬಿಂದು. ಇಲ್ಲಿಂದಲೆ ಮಾರ್ಗದರ್ಶಿಯನ್ನೂ ಸಹ ಪಡೆಯಬಹುದು. ಮಾರ್ಗದರ್ಶಿಯಿದ್ದರೆ ಉತ್ತಮ. ಇಲ್ಲಿಂದಲೆ ಚಾರಣ ಕಾರ್ಯವು ಪ್ರಾರಂಭವಾಗುತ್ತದೆ.

ಬಸ್ಸಿನಲ್ಲಿ

ಬಸ್ಸಿನಲ್ಲಿ

ಇನ್ನೂ ಬಸ್ಸಿನಲ್ಲಿಯೆ ಪ್ರಯಾಣಿಸ ಬೇಕಿದ್ದರೆ ಧರ್ಮಸ್ಥಳಕ್ಕೆ ತಲುಪಿ ಅಲ್ಲಿಂದ ಉಜಿರೆಗೆ ಬಸ್ಸಿನಲ್ಲಿ ತೆರಳಬೇಕು. ಉಜಿರೆಯಿಂದ ಕೇವಲ ಒಂಭತ್ತು ಕಿ.ಮೀ ಗಳಷ್ಟು ದೂರದಲ್ಲಿರುವ ಬಂಡಾಜೆಗೆ ಬಾಡಿಗೆ ಜೀಪುಗಳ ಮೂಲಕ ತಲೂಪಬಹುದು.

ಧರ್ಮಸ್ಥಳ

ಧರ್ಮಸ್ಥಳ

ಗಮನವಿರಲಿ ನೀವು ಬೆಳಗಿನ ಉಪಹಾರವನ್ನು ಧರ್ಮಸ್ಥಳ ಇಲ್ಲವೆ ಉಜಿರೆಯಲ್ಲೆ ಮಾಡಬೇಕು. ನಂತರ ಅಲ್ಲಿಂದಲೆ ಮಧ್ಯಾಹ್ನದ ಊಟವನ್ನೂ ಸಹ ಪ್ಯಾಕ್ ಮಾಡಿಕೊಂಡರೆ ಉತ್ತಮ. ಮೊದ ಮೊದಲು ಚಾರಣ ಪ್ರಾರಂಭಿಸಿದಾಗ, ಇದು ಸಲೀಸಾಗಿದೆ ಎಂಬ ಅನುಭವ ಬರುತ್ತದೆ.

ನಂತರ ಕಷ್ಟ

ನಂತರ ಕಷ್ಟ

ನಂತರ ಮತ್ತೆ ಮತ್ತೆ ಏರಿದಂತೆ ನಿಧಾನವಾಗಿ ಅದರ ಕಷ್ಟಗಳು ಗೋಚರಿಸತೊಡಗುತ್ತವೆ. ಈ ಸಂದರ್ಭದಲ್ಲಿ ಚಾರ್ಮಡಿ ಘಾಟ್ ವ್ಯಾಪ್ತಿಯಲ್ಲಿರುವ ಚಾರಣ ಮಾರ್ಗ ಇದಾಗಿರುವುದರಿಂದ ಸಾಕಷ್ಟು ನಯನ ಮನೋಹರ ದೃಶ್ಯಾವಳಿಗಳನ್ನು ಕಾಣಬಹುದಾಗಿದೆ.

ಜೇಡಗಳು

ಜೇಡಗಳು

ಶ್ರೀಮಂತ ಕೀಟ ಲೋಕದಿಂದ ಕೂಡಿರುವ ಈ ಮಾರ್ಗದಲ್ಲಿ ನಿಮ್ಮ ಕಣ್ಣುಗಳಿಗೆ ಸಾಕಷ್ಟು ಹಲವು ಬಗೆಯ ವಿವಿಧ ರೀತಿಯ ಕೀಟಗಳು ಕಂಡುಬರುತ್ತವೆ. ಕೆಲವು ಭಯ ಮೂಡಿಸುವಂತಿದ್ದರೆ ಇನ್ನೂ ಕೆಲವು ನೋಡಲು ಸಾಕಷ್ಟು ವಿಶೇಷವಾಗಿದ್ದು ಕ್ಷಣದಲ್ಲೆ ಆಕರ್ಷಿಸುತ್ತವೆ. ಈ ಸಮಯದಲ್ಲಿ ನಿಮ್ಮ ಕ್ಯಾಮೆರಾಗಳು ನಿಮ್ಮ ಸಹಾಯಕ್ಕೆ ಬರುತ್ತವೆ.

ಹುಷಾರು!

ಹುಷಾರು!

ಜೇಡಗಳು, ಹಾವುಗಳು ಹಾಗೂ ಜಿಗಣೆಗಳೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಕಂಡುಬರುತ್ತವೆ. ಈ ಮಾರ್ಗವು ಕಲ್ಲು ಬಂಡೆಗಳಲ್ಲದೆ, ಹುಲ್ಲುಗಾವಲಿನ, ಮುಳ್ಳು ಕಂಟಿಗಳ ಮಧ್ಯೆ ಸಾಗುವುದರಿಂದ ಸಾಕಷ್ಟು ಜಾಗರೂಕರಾಗಿರಬೇಕು.

ಪ್ರಥಮ ಚಿಕಿತ್ಸೆಯಿರಲಿ

ಪ್ರಥಮ ಚಿಕಿತ್ಸೆಯಿರಲಿ

ಇಲ್ಲಿ ಕಂಡುಬರುವ ಕೆಲವು ಕೀಟಗಳು ಸಾಕಷ್ಟು ಅಲರ್ಜಿಯಂತಹ ಪರಿಣಾಮಗಳನ್ನು ದೇಹಕ್ಕೆ ಉಂಟು ಮಾಡುವುದರಿಂದ ಮೊದಲ ಚಿಕಿತ್ಸೆಯ ಎಲ್ಲ ಔಷಧೋಪಚಾರಗಳು ನಿಮ್ಮಲ್ಲಿದ್ದರೆ ಬಲು ಉತ್ತಮ. ನಂತರ ಜಿಗಣೆಗಳು ಮೈಗೆ ಅಂಟಿ ಕೊಳ್ಳುವುದು ಸಾಮಾನ್ಯವಾಗಿ ಗಮನಕ್ಕೆ ಬರುವುದಿಲ್ಲ ಹಾಗಾಗಿ ಹೆಚ್ಚಾಗಿ ಎಚ್ಚರಿಕೆ ವಹಿಸಬೇಕು.

ಅಲ್ಲಲ್ಲಿ

ಅಲ್ಲಲ್ಲಿ

ಚಾರಣ ಮಾಡುವಾಗ ಅಲ್ಲಲ್ಲಿ ಬಂಡೆಗಳ ಮೇಲೆ ಹಳದಿ ಬಣ್ಣಗಳ ಮೂಲಕ ಮಾರ್ಗ ದರ್ಶನದ ಸನ್ಹೆಗಳನ್ನು ಮಾಡಿರುವುದನ್ನು ಕಾಣಬಹುದು. ಹಾಗಾಗಿ ಚಾರಣಿಗರು ಸರಿಯಾದ ಮಾರ್ಗದಲ್ಲೆ ಸಾಗುತ್ತಿದ್ದಾರೆ ಎಂಬ ನಿಶ್ಚಿಂತೆ ಉಂಟಾಗುತ್ತದೆ.

ಬಂಡಾಜೆ ನದಿ

ಬಂಡಾಜೆ ನದಿ

ಹೀಗೆ ಕೆಲ ಹೊತ್ತು ಹಾಗೂ ಕೆಲ ದೂರ ಬೆಟ್ಟದ ಮೇಲೆ ಏರಿದಂತೆ ನಿಮ್ಮ ಕಣ್ಣುಗಳಿಗೆ ಮೊದಲು ಬೀಳುವುದೆ ಬಂಡಾಜೆ ನದಿ. ಇಪ್ಪತ್ತು ಅಡಿಗಳಷ್ಟು ಅಗಲವಾಗಿರುವ ಈ ನದಿ ಅಷ್ಟೊಂದು ಆಳವಾಗಿಲ್ಲ. ನಿಮ್ಮ ದಣಿವಾರಿಸಿಕೊಳ್ಳಲು ಈ ನದಿಯ ತಟದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಮತ್ತೆ ನಿಮ್ಮ ಪಯಣ ಮುಂದುವರಿಸಬಹುದು.

ಸುಧಾರಿಸಿಕೊಳ್ಳಿ

ಸುಧಾರಿಸಿಕೊಳ್ಳಿ

ಹೀಗೆ ದಣಿವಾರಿದ ನಂತರ ಚಾರಣವನ್ನು ಮತ್ತೆ ಪ್ರಾರಂಭಿಸಿ ಜಲಪಾತದತ್ತ ನಡೆಯ ಬೇಕು. ಈ ಸಂದರ್ಭದಲ್ಲಿ ದೂರದಿಂದ ಜಲಪಾತ ನೋಟವು ಅತ್ಯದ್ಭುತವಾಗಿ ಕಂಡುಬರುತ್ತದೆ. ನೀವು ಪಡುತ್ತಿರುವ ಪರಿಶ್ರಮ ಸಾರ್ಥಕವಾಗುತ್ತದೆ ಎಂಬ ಭಾವನೆ ನಿಮ್ಮ ಮನಗಳಲ್ಲಿ ಮೂಡಲಾರಂಭಿಸುತ್ತವೆ.

ಅದ್ಭುತ ನೋಟ

ಅದ್ಭುತ ನೋಟ

ಆಂಗ್ಲದಲ್ಲಿ "ಪೇಷನ್ಸ್ ಪೇಸ್" ಎನ್ನುವಂತೆ ನೀವು ಪಡುತ್ತಿರುವ ಪ್ರತಿ ಕಷ್ಟಗಳಿಗೂ ಬಡ್ಡಿ ಸಮೇತವಾಗಿ ಸೃಷ್ಟಿ ಸೌಂದರ್ಯವನ್ನು ಪ್ರಕೃತಿ ನಿಮಗೆ ಮೇಲೇರಿದ ಮೇಲೆ ನೀಡಿಯೆ ನೀಡುತ್ತದೆ. ಇಲ್ಲಿಯವರೆಗೆ ಹಾಗೊ ಹೀಗೊ ಬಂದ ನಿಮಗೆ ಕೊನೆಯದಾಗಿ ಕಂಡುಬರುತ್ತದೆ ಅತ್ಯಂತ ಮೊನಚಾದ ಬೆಟ್ಟ.

ಜಾಗರೂಕತೆಯಿಂದ!

ಜಾಗರೂಕತೆಯಿಂದ!

ಇಲ್ಲಿಂದ ಕೆಳಮುಖವಾಗಿ ಇಳಿಯಬೇಕು. ಒಮ್ಮೆ ಯೋಚಿಸಿ ಇದು 60 ಡಿಗ್ರಿಗಳಷೂ ಕೋನದಲ್ಲಿ ಬಾಗಿದೆ. ಹಾಗಾಗಿ ಸಾಕಷ್ಟು ಕಷ್ಟಕರವಾಗಿದೆ ಈ ಬೆಟ್ಟ. ಈ ಸಾಹಸಕ್ಕೆ ಕೈಹಾಕುವ ಮುಂಚೆ ನಿಮಗನುಕೂಲಕರವಾದ ಸ್ಥಳದಲ್ಲಿ ಕುಳಿತು ಕಟ್ಟಿಸಿಕೊಂಡು ಬಂದಂತಹ ಊಟವನ್ನು ಮಾಡಬಹುದು.

ಜಲಪಾತದ ಧುಮುಕುವ ಸ್ಥಳ

ಜಲಪಾತದ ಧುಮುಕುವ ಸ್ಥಳ

ತದ ನಂತರ ಜಲಪಾತದ ಸ್ಥಳಕ್ಕೆ ಕೆಳಮುಖವಾಗಿ ಇಳಿಯಬೇಕು. ಇಳಿಜಾರು ಹಾಗೂ ಜಾರುವಿಕೆ ಇರುವುದರಿಂದ ಹೆಚ್ಚಿನ ಎಚ್ಚರವಹಿಸಿ, ಅವಸರ ಪಡದೆ ಇಳಿಯಬೇಕು. ಈ ಸಮಯದಲ್ಲಿ ಭೂಮಿಯ ಮೇಲೆ ಒಳ್ಳೆಯ ಗ್ರಿಪ್ ಕೊಡುವ ಬೂಟುಗಳನ್ನೆ ಧರಿಸಿರಿ.

ನಯನಮನೋಹರ

ನಯನಮನೋಹರ

ಹೀಗೆ ಜಲಪಾತದ ತಾಣಕ್ಕೆ ಬಂದಾಗ ಭೋರ್ಗೆರೆವ ಆ ಜಲಪಾತವನ್ನು ಅದು ಎಲ್ಲಿಂದ ಧುಮುಕಲು ಪ್ರಾರಂಭಿಸುತ್ತದೊ ಅಲ್ಲಿಂದಲೆ ಅದ್ಭುತವಾಗಿ ಕಾಣಬಹುದು. ಅದಲ್ಲದೆ ಪ್ರದೇಶದಲ್ಲಿ ಹಲವಾರು ಇತರೆ ಚಿಕ್ಕ ಪುಟ್ಟ ಜಲಧಾರೆಗಳನ್ನೂ ಸಹ ಕಾಣಬಹುದು.

ಚಿತ್ರಕೃಪೆ: Sumesh Always

ತಾತ್ಕಾಲಿಕ ಟೆಂಟ್

ತಾತ್ಕಾಲಿಕ ಟೆಂಟ್

ಕ್ಯಾಂಪಿಂಗ್ ಅಥವಾ ವಸತಿ ಹೂಡಬಹುದಾಗಿದ್ದು ಜಲಪಾತದ ಹಿಂಭಾಗದಲ್ಲಿರುವ ತಟಸ್ಥ ಭೂಮಿಯ ಮೇಲೆ ನೀವು ಹೊತ್ತುಕೊಂಡು ತಂದ ತಾತ್ಕಾಲಿಕ ಕುಟಿರಗಳನ್ನು ಅಳವಡಿಸಿ, ಕಟ್ಟಿಗೆಗಳಿಗೆ ಬೆಂಕಿ ಹಾಕಿ ಅಲ್ಲಿಯೆ ನೂಡಲ್ಸ್ ನಂತಹ ಅಹಾರ ತಯಾರಿಸಿ ಸುಂದರವಾದ ಸಂಜೆ ಹಾಗೂ ರಾತ್ರಿ ಕಳೆಯಬಹುದು. ಮರುದಿನ ಅದೆ ಮಾರ್ಗದ ಮೂಲಕ ಬೆಟ್ಟ ಇಳಿದು ಸಾವಿರ ಸಾವಿರ ನೆನಪುಗಳನ್ನು ಹೊತ್ತುಕೊಂಡು ನಿಮ್ಮ ಮನೆಗಳಿಗೆ ತೆರಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X