Search
  • Follow NativePlanet
Share
» »700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಹೈದ್ರಾಬಾದ್‍ನಲ್ಲಿನ ಬಲ್ಕಂಪೇಟೆ ಎಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿದರೆ.. ಅಷ್ಟಾದಶ ಶಕ್ತಿಪೀಠವನ್ನು ದರ್ಶಿಸಿದ ಫಲ ಸಿಗುತ್ತದೆ ಎಂದು ನಂಬುತ್ತಾರೆ. ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳನ್ನು ಸಲುಹುವ ತಾಯಿಯಾದ ಎಲ್ಲಮ್ಮ..! 700 ವರ್ಷಗಳ ದೇವಾಲಯ ಇದಾ

ಹೈದ್ರಾಬಾದ್‍ನಲ್ಲಿನ ಬಲ್ಕಂಪೇಟೆ ಎಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿದರೆ.. ಅಷ್ಟಾದಶ ಶಕ್ತಿಪೀಠವನ್ನು ದರ್ಶಿಸಿದ ಫಲ ಸಿಗುತ್ತದೆ ಎಂದು ನಂಬುತ್ತಾರೆ. ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳನ್ನು ಸಲುಹುವ ತಾಯಿಯಾದ ಎಲ್ಲಮ್ಮ..! 700 ವರ್ಷಗಳ ದೇವಾಲಯ ಇದಾಗಿದೆ.

ಆ ಸಮಯದಲ್ಲಿ ಹೈದ್ರಾಬಾದ್ ನಗರವೇ ಇರಲಿಲ್ಲ. ಬಲ್ಕಂಪೇಟ ಎಂಬುದು ಒಂದು ಗ್ರಾಮ. ಸುತ್ತಲೂ ಹೊಲಗಳೇ. ಒಬ್ಬ ರೈತ ತನ್ನ ಹೊಲದಲ್ಲಿ ಬಾವಿಯನ್ನು ತೆಗೆಸುವಾಗ ಒಂದು ಬಂಡೆ ಕಲ್ಲು ಅಡ್ಡಾ ಬಂದ ಹಾಗೆ ಅನ್ನಿಸಿತಂತೆ. ಸೂಕ್ಷ್ಮವಾಗಿ ಗಮನಿಸಿದರೆ ದೇವಿಯ ಆಕೃತಿ..!. ಭಕ್ತಿಯಿಂದ ಆ ವಿಗ್ರಹವನ್ನು ತೆಗೆಯಲು ಪ್ರಯತ್ನಿಸಿದನು.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಬಲ್ಕಂ ಪೇಟೆ ಎಲ್ಲಮ್ಮ ದೇವಾಲಯ
ಹೈದ್ರಾಬಾದ್‍ನಲ್ಲಿನ ಬಲ್ಕಂಪೇಟೆ ಎಲ್ಲಮ್ಮ ದೇವಾಲಯವನ್ನು ದರ್ಶನ ಮಾಡಿದರೆ ಅಷ್ಟಾದಶ ಶಕ್ತಿಪೀಠವನ್ನು ದರ್ಶಿಸಿದ ಫಲ ಉಂಟಾಗುತ್ತದೆ ಎಂದು ಅನೇಕ ಮಂದಿ ಹೇಳುತ್ತಾರೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷಗಳ ಹಿಂದಿನ ಸಂಗತಿ
ಮುಗ್ಗುರುಮ್ಮಲ ಮೂಲಪುಟಮ್ಮ ಎಂದೇ ಬಣ್ಣಿಸುವ ಈ ತಾಯಿಯು ಸುಮಾರು 700 ವರ್ಷಗಳ ಹಿಂದೆ ದೊರೆತ ದೇವಿಯಾಗಿದ್ದಾಳೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಕುಗ್ರಾಮ
ಆ ಕಾಲದಲ್ಲಿ ಇನ್ನು ಹೈದ್ರಾಬಾದ್ ಎಂಬ ನಗರವೇ ಇರಲಿಲ್ಲವಂತೆ. ಬಲ್ಕಂಪೇಟೆ ಒಂದು ಕಾಲದಲ್ಲಿ ಕುಗ್ರಾಮವಾಗಿತ್ತು. ಸುತ್ತಲೂ ಹೊಲಗಳಿಂದ ಕಂಗೊಳಿಸುತ್ತಿತ್ತು. ಇಲ್ಲಿಯೇ ಈ ತಾಯಿಯು ದೊರೆತಳು.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಬಂಡೆಕಲ್ಲು
ಒಬ್ಬ ರೈತ ತನ್ನ ಹೊಲದಲ್ಲಿ ಬಾವಿಯನ್ನು ತೆಗೆಸುವಾಗ ಒಂದು ಬಂಡೆಕಲ್ಲು ಅಡ್ಡಾ ಬಂದಿತಂತೆ. ಆ ಅಡ್ಡ ಬಂದ ಕಲ್ಲು ಯಾವುದು ಎಂದು ನೋಡಿದರೆ ಅದು ಒಂದು ದೇವಿಯ ಶಿಲೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಶಿಲೆ
ಆ ಶಿಲೆಯನ್ನು ಭಕ್ತಿಯಿಂದ ಎತ್ತಲೂ ಹೋದರೆ ಸ್ವಲ್ಪವೂ ಕೂಡ ಎತ್ತಲು ಸಾಧ್ಯವಾಗಲಿಲ್ಲವಂತೆ. ಗ್ರಾಮದಲ್ಲಿನ ಜನರಿಗೆಲ್ಲಾ ಕರೆದುಕೊಂಡು ಬಂದನಂತೆ. ಆದರೂ ಸಾಧ್ಯವಾಗಲಿಲ್ಲ. ಕೊನೆಗೆ ಕೆಲವು ಶಿವ ಭಕ್ತರನ್ನು ಕರೆಸಿದನು. (ಶೈವ ಸಂಪ್ರದಾಯದಲ್ಲಿ ಇವರಿಗೆ ಹೆಚ್ಚು ಪ್ರಾಧಾನ್ಯತೆ ಇದೆ).

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ದೈವ ನಿರ್ಣಯ
ಇಲ್ಲಿಯೇ ನೆಲೆಸಿ ಪೂಜೆಗಳನ್ನು ಮಾಡಿಕೊಳ್ಳಬೇಕು ಎಂದು ದೇವಿಯ ಆಸೆಯಾಗಿರಬೇಕು ಎಂದು ಅಲ್ಲಿನ ಪ್ರಜೆಗಳು ಅಂದುಕೊಂಡರು. ದೈವನಿರ್ಣಯ ಬೇಡ ಎಂದು ಹೇಳುವವರು ನಾವು ಯಾರು? ಎಂದು ಅನೇಕ ಮಂದಿ ಸಲಹೆಯನ್ನು ನೀಡಿದರು.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಪೂಜೆಗಳು
ಈ ದೇವಿಯನ್ನು ರೇಣುಕಾದೇವಿ ಎಂದು ಗುರುತಿಸಿದವರು ಇವರೇ. ಮೂಲ ವಿಗ್ರಹವು ಬಾವಿಯಲ್ಲಿ ಇದ್ದುದ್ದರಿಂದ ಭಕ್ತ ಜನರು ಹೊರಗೆ ನಿಂತು ಪೂಜೆಗಳನ್ನು ಮಾಡುತ್ತಿದ್ದರು.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಮಹಿಮೆಗಳು
ಕೆಲವು ಕಾಲದ ನಂತರ, ರೇಣುಕಾ ಎಲ್ಲಮ್ಮ ಮಹಿಮೆಗಳು ಸುತ್ತಮುತ್ತಲ ಪ್ರದೇಶಗಳಿಗೂ ವಿಸ್ತರಿಸಿತು. ತದನಂತರ ಒಂದು ಚಿಕ್ಕದಾದ ದೇವಾಲಯವನ್ನು ಸ್ಥಾಪಿಸಿದರು.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಬೆಹಾಲೂಖಾನ್ ಗುಡಾ
ರಾಜಾ ಶಿವರಾಜ್ ಬಹದ್ದೂರ್ ಎಂಬ ಸಂಸ್ಥಾನಧೀಶನು ಈ ಪ್ರದೇಶವನ್ನು "ಬೆಹಾಲೂಖಾನ್ ಗೂಡಾ" ಎಂದು ಕರೆಯುತ್ತಿದ್ದರು ಎಂದು ಚಾರಿತ್ರಿಕವಾದ ಆಧಾರದ ಮೂಲಕ ತಿಳಿದುಬರುತ್ತದೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಬಲ್ಕಂ ಪೇಟೆ
ಬೆಹಾಲೂಖಾನ್...ಈ ಪ್ರದೇಶಕ್ಕೆ ಸುಭೇದಾರನಾಗಿರುತ್ತಾನೆ. ಆ ಹೆಸರು ಕಾಲಾನಂತರ ಬಲ್ಕಂಪೇಟೆ ಎಂದು ಮಾರ್ಪಟಾಗಿದೆ. ಎಲ್ಲಮ್ಮ ದೇವಿಯನ್ನು "ಬಲ್ಕಂಪೇಟೆ ಎಲ್ಲಮ್ಮ" ಎಂದೇ ಈ ತಾಯಿಯು ಸುಪ್ರಸಿದ್ಧವಾದಳು.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಹೇಮಲಾಂಬ
ಈ ತಾಯಿಯನ್ನು ಹೇಮಲಾಂಬ ಎಂದು ಕೂಡ ಕರೆಯುತ್ತಾರೆ. ಹೇಮ ಎಂದರೆ ಬಂಗಾರ, ಅಂದರೆ ಬಂಗಾರದ ದೇವಿ ಎಂದು ಸಂಸ್ಕøತ ನಾಮ. ಗ್ರಾಮೀಣರ ವ್ಯವಹಾರದಲ್ಲಿ ಎಲ್ಲಮ್ಮಳಾಗಿ ಸ್ಥಿರವಾದಳು ಎಂದು ಪಂಡಿತರು ವಿಶ್ಲೇಷಿಸುತ್ತಾರೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಹಾವುಗಳು
ಇನ್ನು ರೇಣುಕ ಎಂಬ ಪದಕ್ಕೆ ಹುತ್ತ ಎಂಬ ಅರ್ಥ ಕೂಡ ಇದೆ. ಆ ಕಾಲದಲ್ಲಿ ದೇವಿಯ ದೇವಾಲಯದ ಪರಿಸರದಲ್ಲಿ ಅನೇಕ ಹುತ್ತಗಳು ಇತ್ತು ಎಂದು ಹೇಳಲಾಗುತ್ತದೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಪೂಜಾ ಸೇವೆಗಳು
ದೇವಾಲಯದ ರಾಜಗೋಪುರವು ದಕ್ಷಿಣದಲ್ಲಿ, ಪೂರ್ವ ಮುಖವಾಗಿ ಮಹಾಗಣಪತಿ ದರ್ಶನ ನೀಡುತ್ತಾನೆ. ಒಳಭಾಗದಲ್ಲಿ ಬರುವ ಭಕ್ತರಿಗೆ ಸ್ವಾಮಿಯು ನಿರ್ವಿಘ್ನಮಸ್ತು ಎಂದು ಆಶೀರ್ವಾದ ನೀಡುವ ಹಾಗೆ ಇರುತ್ತದೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಪದ್ಧತಿ
ಇಲ್ಲಿ ಪೋಚಮ್ಮತಲ್ಲಿ ಎಂದು ಕರೆಯುವ ಮತ್ತೊಂದು ದೇವಿಯು ಕೂಡ ನೆಲೆಸಿದ್ದಾಳೆ. ಈಕೆಯು ಕೂಡ ಇಲ್ಲಿ ಪೂಜೆಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ನವ ವಧುವರರು ಮದುವೆಯ ಬಟ್ಟೆಯಲ್ಲಿ ದರ್ಶಿಸಿಕೊಳ್ಳುವುದು ಪದ್ಧತಿ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಪೀಠಾಧಿಪತಿ ವೀರೂಪಾಕ್ಷಾನಂದ ಸ್ವಾಮಿ
ಸುಮಾರು ಎರಡು ದಶಕಗಳಿಂದ ಹಂಪಿ ಪೀಠಾಧಿಪತಿಯಾದ ವೀರೂಪಾಕ್ಷಾನಂದ ಸ್ವಾಮಿಯು ದೇವಾಲಯದ ಆವರಣದಲ್ಲಿ ನಾಗದೇವತೆಯನ್ನು ಪ್ರತಿಷ್ಟಾಪಿಸಿದರು.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

18 ಅಡಿಯ ರಾಜೇಶ್ವರಿ ದೇವಿಯ ವಿಗ್ರಹ
ನಿತ್ಯವು ನಾಗದೋಷ, ಕಾಲಸರ್ಪದೋಷದ ಪೂಜೆಗಳನ್ನು ನಡೆಯುತ್ತಿರುತ್ತವೆ. ಅಷ್ಟೇ ಅಲ್ಲ, 18 ಅಡಿಯ ಎತ್ತರವಾದ ರಾಜಾರಾಜೇಶ್ವರಿ ದೇವಿಯ ವಿಗ್ರಹವನ್ನು ಕೂಡ ಇಲ್ಲಿ ದರ್ಶನ ಮಾಡಿಕೊಳ್ಳಬಹುದು.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಮಹಾಪ್ರಸಾದ
ಪ್ರತಿ ಶುಕ್ರವಾರದಂದು ಎಲ್ಲಮ್ಮ ದೇವಾಲಯದಲ್ಲಿ ಅನ್ನದಾನ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಯಾವುದೇ ಭೇದ-ಭಾವವಿಲ್ಲದೇ ಎಲ್ಲರಿಗೂ ಭೋಜನವನ್ನು ಮಹಾ ಪ್ರಸಾದವಾಗಿ ನೀಡುತ್ತಾರೆ.

ಎಲ್ಲಮ್ಮ ದೇವಿ ಕಲ್ಯಾಣೋತ್ಸವ
ವರ್ಷದಲ್ಲಿ ಆಷಾಢ ಮಾಸದಲ್ಲಿ ಮೊದಲ ಮಂಗಳವಾರದಂದು ಎಲ್ಲಮ್ಮ ದೇವಿ ಕಲ್ಯಾಣೋತ್ಸವವನ್ನು ಅತ್ಯಂತ ವೈಭವವಾಗಿ ನಿರ್ವಹಿಸುತ್ತಾರೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವವನ್ನು ನೋಡುವ ಸಲುವಾಗಿ ಮೂರು ಲೋಕದಿಂದಲೂ ದೇವತೆಗಳು ಇಳಿದು ಬರುತ್ತಾರೆ ಎಂದು ಪ್ರತೀತಿ ಇದೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಕೈಲಾಸಗಿರಿ
ಸುಮಾರು 5 ಲಕ್ಷಮಂದಿ ಜನರು ಪಾಲ್ಗೊಳ್ಳುತ್ತಾರೆ. ದೇಶದ ಅನೇಕ ಭಾಗಗಳಿಂದ ಬರುವ ಶಿವ ಭಕ್ತರು ಬಲ್ಕಂಪೇಟೆಯನ್ನು ಕೈಲಾಸಗಿರಿ ಎಂದೇ ಭಾವಿಸುತ್ತಾರೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ದುಷ್ಟಶಿಕ್ಷಣ-ಶಿಷ್ಟರಕ್ಷಣ
ರಥೋತ್ಸವವನ್ನು ನೋಡುವ ಸಲುವಾಗಿ 2 ಕಣ್ಣು ಸಾಲದು. ಈ ತಾಯಿಯನ್ನು ಉತ್ಸವದಲ್ಲಿ ಕಾಣುವ ಸಮಯದಲ್ಲಿ ದುಷ್ಟರಿಗೆ ಶಿಕ್ಷಣ ಹಾಗು ಶಿಷ್ಟರಿಗೆ ರಕ್ಷಣೆ ಎಂಬ ರೀತಿಯಲ್ಲಿ ಕಾಣುತ್ತಾಳೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ವಾದ್ಯಗಳು
ಕಲಾಕಾರರು ನೃತ್ಯವನ್ನು ಮಾಡುತ್ತಾ ಇರುತ್ತಾರೆ. ವಾದ್ಯಕಾರರು ಅನೇಕ ಬಗೆ ಬಗೆಯ ವಾದ್ಯಗಳನ್ನು ನುಡಿಸುತ್ತಾ ತಾಯಿಯ ಉತ್ಸವವನ್ನು ಮತ್ತಷ್ಟು ವಿಜೃಂಬಣೆಯಿಂದ ಆಚರಿಸುತ್ತಾರೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಜಲಧಾರೆ
ಈ ಎಲ್ಲಮ್ಮ ದೇವಿಯು ಸ್ವಯಂಭೂ ಮೂರ್ತಿಯಾಗಿದ್ದು, ತಾಯಿಯ ಶಿರಸ್ಸಿನ ಭಾಗದಿಂದ ನಿತ್ಯವು ಜಲಧಾರೆಯು ಪ್ರವಹಿಸುತ್ತಿರುತ್ತದೆ. ಆ ಪವಿತ್ರವಾದ ಜಲವನ್ನು ಭಕ್ತಜನರು ಮಹಾತೀರ್ಥವಾಗಿ ಸ್ವೀಕಾರ ಮಾಡುತ್ತಾರೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ತೀರ್ಥ
ಆ ತೀರ್ಥದಿಂದ ಮನೆಯನ್ನು ಶುದ್ಧಿ ಮಾಡಿಕೊಂಡರೆ ಭೂತ ಪ್ರೇತ ಪಿಶಾಚಿ, ದುಷ್ಟಶಕ್ತಿಗಳು ಓಡಿ ಹೋಗುತ್ತವೆ ಎಂಬುದು ಒಂದು ನಂಬಿಕೆ. ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ತೀರ್ಥ ಹಾಕಿಕೊಂಡರೆ ಅನೇಕ ಚರ್ಮರೋಗದ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂದು ನಂಬಲಾಗಿದೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಮಹಿಮೆಗಳು
ನೀರಿನಲ್ಲಿ ನೆಲೆಸಿರುವ ದೇವತೆಯಾದ್ದರಿಂದ, ಆ ದೇವಿಗೆ ಜಲದುರ್ಗಾ ಎಂದು ಕೂಡ ಆರಾಧಿಸುತ್ತಿದ್ದರು ಎಂದು ಹೇಳುತ್ತಾರೆ. ಬಲ್ಕಂ ಪೇಟೆ ಎಲ್ಲಮ್ಮ ಮಹಿಮೆಗಳನ್ನು ಭಕ್ತರು ಅನೇಕ ಕಥೆಗಳನ್ನು ಹೇಳುತ್ತಿರುತ್ತಾರೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ನೀತಾ ಅಂಬಾನಿ
ಕೆಲವು ತಿಂಗಳ ಹಿಂದೆ ರಿಲಯನ್ಸ್ ಗ್ರೂಪ್‍ನ ಮುಖೇಶ್ ಅಂಬಾನಿಯ ಪತ್ನಿಯಾದ ನೀತಾ ಅಂಬಾನಿ ಎಲ್ಲಮ್ಮ ದೇವಿಯನು ದರ್ಶಸಿಕೊಳ್ಳುವ ಸಲುವಾಗಿ ಭೇಟಿ ನೀಡಿದ್ದರು. ಈ ದೇವಾಲಯಕ್ಕೆ ಕೇವಲ ರಾಜ್ಯದಿಂದಲೇ ಅಲ್ಲದೇ ಭಾರತದ ವಿವಿಧ ಭಾಗಗಳಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಭಕ್ತರು
ನೂರಾರು ಪ್ರಜೆಗಳ ಸ್ವಪ್ನದಲ್ಲಿ ಸಾಕ್ಷಾತ್ಕರಿಸಿ ತನ್ನ ಹತ್ತಿರ ಕರೆಸಿಕೊಳ್ಳುವ ಮಹಿಮೆಯುಳ್ಳ ದೇವಿ ಇವಳು. ಅವರ ಕಷ್ಟವನ್ನು ತೊಲಗಿಸಿ, ಧನವಂತರನ್ನಾಗಿಸುತ್ತಾಳೆ.

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?

ಹೇಗೆ ತಲುಪಬೇಕು?
ಅಮಿರ್‍ಪೇಟೆಯಿಂದ ದೇವಾಲಯದ ಮೇಲೆ ಆಟೋಗಳು ಹೋಗುತ್ತಿರುತ್ತದೆ. ವಿಮಾನ ಮಾರ್ಗದ ಮೂಲಕ, ರೈಲ್ವೆ ಮಾರ್ಗದ ಮೂಲಕ, ಬಸ್ಸಿನ ಮೂಲಕ ಸುಲಭವಾಗಿ ಈ ತಾಯಿಯ ದೇವಾಲಯಕ್ಕೆ ಭೇಟಿ ನೀಡಬಹುದು. ಒಮ್ಮೆ ಭೇಟಿ ನೀಡಿ ದೇವಿಯ ಆಶೀರ್ವಾದವನ್ನು ಪಡೆದು ಬನ್ನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X