Search
  • Follow NativePlanet
Share
» »ಸಮುದ್ರದಾಳಕ್ಕೆ ಭೇಟಿ ನೀಡಬೇಕಾದರೆ ಒಮ್ಮೆ ಇಲ್ಲಿ ಭೇಟಿ ಕೊಡಿ

ಸಮುದ್ರದಾಳಕ್ಕೆ ಭೇಟಿ ನೀಡಬೇಕಾದರೆ ಒಮ್ಮೆ ಇಲ್ಲಿ ಭೇಟಿ ಕೊಡಿ

ಮೀನುಗಳು ಇರುವ ಅಕ್ವೇರಿಯಂ ಕಂಡರೆ ಅದೆನೋ ಸಂತಸ. ಮೀನುಗಳಲ್ಲಿ ನೂರಾರು ಜಾತಿಗಳಿದ್ದು, ಒಂದಕ್ಕಿಂತ ಒಂದು ಅದ್ಭುತವಾದ ಬಣ್ಣ ಹಾಗು ರೂಪವನ್ನು ಹೊಂದಿರುತ್ತದೆ. ಆ ಎಲ್ಲಾ ಜಾತಿಯ ಮೀನುಗಳನ್ನು ನೋಡಿದರೆ ಹೇಗೆ ಇರುತ್ತದೆ?. ಆ ಸಂತೋಷ ಬರೀ ಮಾತಿನಲ್ಲ

ಮೀನುಗಳು ಇರುವ ಅಕ್ವೇರಿಯಂ ಕಂಡರೆ ಅದೆನೋ ಸಂತಸ. ಮೀನುಗಳಲ್ಲಿ ನೂರಾರು ಜಾತಿಗಳಿದ್ದು, ಒಂದಕ್ಕಿಂತ ಒಂದು ಅದ್ಭುತವಾದ ಬಣ್ಣ ಹಾಗು ರೂಪವನ್ನು ಹೊಂದಿರುತ್ತದೆ. ಆ ಎಲ್ಲಾ ಜಾತಿಯ ಮೀನುಗಳನ್ನು ನೋಡಿದರೆ ಹೇಗೆ ಇರುತ್ತದೆ?. ಆ ಸಂತೋಷ ಬರೀ ಮಾತಿನಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಅದರಲ್ಲಿಯೂ ಮಕ್ಕಳಿಗೆ ಅತ್ಯಂತ ಪ್ರಿಯವಾದುದು ಎಂದೇ ಹೇಳಬಹುದು. ಸಾಮಾನ್ಯವಾಗಿ ಅಕ್ವೇರಿಯಂಗಳು ಇರುವುದನ್ನು ಕಂಡಿದ್ದೇವೆ.

ಆದರೆ ಒಂದು ದೊಡ್ಡ ಮೀನಿನ ಬಾಯಿಯಲ್ಲಿ ಅಕ್ವೇರಿಯಂ ಇರುವುದನ್ನು ಎಂದಾದರೂ ಕಂಡಿದ್ದೀರಾ? ಅಕ್ವೇರಿಯಂನ ಹೆಸರು ಏನು ಗೊತ್ತ? ಬಾಗ್-ಎ-ಬಹು ಎಂದು. ಈ ಅಕ್ವೇರಿಯಂನ ವಿಶೇಷತೆ ಏನು ಗೊತ್ತ? ಇದು ಭಾರತದೇಶದಲ್ಲಿಯೇ ಅಲ್ಲ, ಭಾರತದ ಉಪಖಂಡದಲ್ಲಿಯೇ ಅತ್ಯಂತ ದೊಡ್ಡ ಅಂಡರ್ ಗ್ರೌಂಡ್ ಅಕ್ವೇರಿಯಂ. ಅಂಡರ್ ಗೌಂಡ್ ಎಂದರೆ ಭೂಮಿಯ ಕೆಳಗೆ ಎಂಬ ಅರ್ಥವಾಗಿದೆ. ಇದನ್ನು ಮೀನುಗಳ ಮ್ಯೂಸಿಯಂ ಎಂದು ಸಹ ಕರೆಯುತ್ತಾರೆ.

ಬಾಗ್-ಎ-ಬಹು ಅಕ್ವೇರಿಯಂ

ಬಾಗ್-ಎ-ಬಹು ಅಕ್ವೇರಿಯಂ

ಇಲ್ಲಿನ ಅಕ್ವೇರಿಯಂ ಕಾಣಲು ಅತ್ಯಂತ ವಿಭಿನ್ನವಾಗಿರುತ್ತದೆ. ಇದನ್ನು ಮೀನಿನ ಆಕಾರದಲ್ಲಿ ನಿರ್ಮಾಣ ಮಾಡಿದ್ದಾರೆ. ಮೀನಿನ ಬಾಯಿಯ ಭಾಗದಿಂದ ಮೆಟ್ಟಿಲುಗಳಿಂದ ಇಳಿದರೆ ಅಲ್ಲಿ ಒಂದು ಗುಹೆ ಕಾಣಿಸುತ್ತದೆ. ಒಂದು ಗುಹೆಯಲ್ಲಿ ಅಕ್ವೇರಿಯಂ ಏರ್ಪಾಟು ಮಾಡಿದ್ದಾರೆ. ಇದರಲ್ಲಿ ಒಟ್ಟು 24 ಗುಹೆಗಳು ಇವೆಯಂತೆ.

ಈ 24 ಗುಹೆಗಳನ್ನು 3 ಭಾಗವಾಗಿ ವಿಭಜಿಸಲಾಗಿದೆ. ಮೊದಲ ಭಾಗದಲ್ಲಿ 2 ದೊಡ್ಡ ವಿಶಾಲವಾದ ಗುಹೆಗಳು ಇರುತ್ತದೆ. ಇದರಲ್ಲಿ ದೊಡ್ಡ ದೊಡ್ಡ ಸಮುದ್ರ ಮೀನುಗಳನ್ನು ಕಾಣಬಹುದು.

ಬಾಗ್-ಎ-ಬಹು ಅಕ್ವೇರಿಯಂ

ಬಾಗ್-ಎ-ಬಹು ಅಕ್ವೇರಿಯಂ

32 ನೇ ಭಾಗದಲ್ಲಿ 9 ಅಕ್ವೇರಿಯಂಯನ್ನು ಕಾಣಬಹುದು. ಇದರಲ್ಲಿ ಸಮುದ್ರದ ಜಲಚರಗಳನ್ನು ಕಾಣಬಹುದಾಗಿದೆ. ಇನ್ನು ಉಳಿದ 13 ಅಕ್ವೇರಿಯಂಗಳು 3 ನೇ ಭಾಗದಲ್ಲಿರುತ್ತದೆ. ಇದರಲ್ಲಿ ಉತ್ತಮ ಜಾತಿಯ ಮೀನುಗಳನ್ನು ಕಾಣಬಹುದಾಗಿದೆ. ಇಲ್ಲಿ ಒಟ್ಟು 500 ಕ್ಕಿಂತ ಹೆಚ್ಚು ದೇಶ, ವಿದೇಶಗಳ ವಿಭಿನ್ನ ಜಾತಿಯ ಮೀನುಗಳಿವೆ.

ಬಾಗ್-ಎ-ಬಹು ಅಕ್ವೇರಿಯಂ

ಬಾಗ್-ಎ-ಬಹು ಅಕ್ವೇರಿಯಂ

ಸಮುದ್ರದ ಒಳಭಾಗದಲ್ಲಿ ವಾತಾವರಣ ಯಾವ ರೀತಿ ಇರುತ್ತದೆಯೋ, ಅದೇ ರೀತಿ ಅಕ್ವೇರಿಯಂನ ಒಳಭಾಗದಲ್ಲಿಯೂ ಇರುತ್ತದೆ. ಇಲ್ಲಿ ದೊಡ್ಡ ದೊಡ್ಡ ಕಲ್ಲುಬಂಡೆಗಳು, ಶಂಖಗಳು, ಕವಡೆಗಳು ಇನ್ನು ಹಲವಾರು ಆಕರ್ಷಕವಾದುದನ್ನು ಇಲ್ಲಿ ಕಾಣಬಹುದು. ಸಮುದ್ರವನ್ನೇ ಕಾಣುತ್ತಿದ್ದೇವೆ ಎಂಬ ಅನುಭೂತಿ ನೀವು ಇಲ್ಲಿ ಪಡೆಯಬಹುದಾಗಿದೆ.

ಬಾಗ್-ಎ-ಬಹು ಅಕ್ವೇರಿಯಂ

ಬಾಗ್-ಎ-ಬಹು ಅಕ್ವೇರಿಯಂ

ಈ ಅಂಡರ್ ಗ್ರೌಂಡ್ ಅಕ್ವೇರಿಯಂ ಅನ್ನು 1995 ರಲ್ಲಿ ವಿದ್ಯಾರ್ಥಿಗಳಿಗೆ ಸಮುದ್ರ ಜಲಚರಗಳ ಮೇಲೆ ಉತ್ತಮವಾದ ಅವಗಹನೆ ಮೂಡಿಸುವ ಸಲುವಾಗಿ ಈ ವಿಧವಾದ ಅಕ್ವೇರಿಯಂ ಅನ್ನು ನಿರ್ಮಾಣ ಮಾಡಿದರು. ಅಕ್ವೇರಿಯಂನ ಗೋಡೆಗಳ ಮೇಲೆ ಸಮುದ್ರದ ಮೀನುಗಳಿಗೆ ಸಂಬಂಧಿಸಿದಂತೆ ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡಿದ್ದಾರೆ.

ಬಾಗ್-ಎ-ಬಹು ಅಕ್ವೇರಿಯಂ

ಬಾಗ್-ಎ-ಬಹು ಅಕ್ವೇರಿಯಂ

ಅಕ್ವೇರಿಯಂ ಎಲ್ಲಾ ನೋಡಿದ ನಂತರ ಮೀನಿನ ಬಾಲದಿಂದ ಹೊರಬರುವುದು ಮರೆಯಲಾಗದ ಅನುಭೂತಿ ಉಂಟುಮಾಡುತ್ತದೆ. ಸಮೀಪದಲ್ಲಿ ಬಾಹು ಕೋಟೆ ಹಾಗು ಅದರಲ್ಲಿನ ದೇವಾಲಯವನ್ನು ಕೂಡ ಕಾಣಬಹುದಾಗಿದೆ. ಬಾಗ್-ಎ-ಬಹು ಅಕ್ವೇರಿಯಂನ ಒಳಭಾಗದಲ್ಲಿ ತೆರಳಲು ಪ್ರವೇಶ ಶುಲ್ಕವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬಾಗ್-ಎ-ಬಹು ಅಕ್ವೇರಿಯಂ

ಬಾಗ್-ಎ-ಬಹು ಅಕ್ವೇರಿಯಂ

ಅಂದರೆ ಮಕ್ಕಳಿಗೆ 5 ರೂಪಾಯಿಗಳು, ದೊಡ್ಡವರಿಗೆ 10 ರೂಪಾಯಿಗಳನ್ನು ಪಾವತಿಸಿ ತೆರಳಬೇಕಾಗುತ್ತದೆ. ಇಲ್ಲಿ ಸಾಕಿದ ಪ್ರಾಣಿಗಳಿಗೆ ಪ್ರವೇಶವನ್ನು ನೀಡಲಾಗುವುದಿಲ್ಲ.

ಬಾಗ್-ಎ-ಬಹು ಅಕ್ವೇರಿಯಂ

ಬಾಗ್-ಎ-ಬಹು ಅಕ್ವೇರಿಯಂ

ವರ್ಷದಾದ್ಯಂತ ಈ ಮೀನಿನ ಅಕ್ವೇರಿಯಂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರತಿ ದಿನ ಬೆಳ್ಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅಕ್ವೇರಿಯಂಗೆ ಪ್ರವಾಸಿಗರಿಗೆ ಪ್ರವೇಶವಿರುತ್ತದೆ. ಈ ತಾಣಕ್ಕೆ ದೇಶ, ವಿದೇಶದಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ.

ಬಾಗ್-ಎ-ಬಹು ಅಕ್ವೇರಿಯಂ

ಬಾಗ್-ಎ-ಬಹು ಅಕ್ವೇರಿಯಂ

ಅಷ್ಟಕ್ಕೂ ಈ ಅಕ್ವೇರಿಯಂ ಇರುವುದಾದರೂ ಎಲ್ಲಿ ಎಂಬ ಪ್ರೆಶ್ನೆಗೆ ಉತ್ತರ ಜಮ್ಮು ಕಾಶ್ಮೀರದಲ್ಲಿ. ಈ ತಾಣಕ್ಕೆ ಭೇಟಿ ನೀಡುವ ಹಲವಾರು ಪ್ರವಾಸಿಗರು ಈ ಮೀನಿನ ಅಕ್ವೇರಿಯಂನಲ್ಲಿ ಕೆಲವು ಸಮುದ್ರ ವಿಹಾರ ಮಾಡಲು ಬಯಸುತ್ತಾರೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಾರ್ಯು ಮಾರ್ಗದ ಮೂಲಕ
ಜಮ್ಮುವಿನಲ್ಲಿ ವಿಮಾನ ನಿಲ್ದಾಣವಿದೆ. ಇಲ್ಲಿಗೆ ದೆಹಲಿ, ಬೆಂಗಳೂರುವಿನಂತಹ ಹಲವಾರು ಪ್ರದೇಶಗಳಿಂದ ವಿಮಾನಗಳು ಬರುತ್ತಿರುತ್ತವೆ.

ರೈಲು ಮಾರ್ಗದ ಮೂಲಕ
ಜಮ್ಮುವಿನಲ್ಲಿ ರೈಲ್ವೆ ನಿಲ್ದಾಣವಿದೆ. ಇದು ದೆಹಲಿ, ಚೆನ್ನೈ, ಬೆಂಗಳೂರು, ಪುಣೆಯಂತಹ ನಗರಗಳಿಂದ ರೈಲುಗಳು ತಿರುಗುತ್ತಾ ಇರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X