Search
  • Follow NativePlanet
Share
» »ಚಾರ್ ಧಾಮಗಳಲ್ಲೊಂದಾದ ಬದರಿನಾಥ ಮತ್ತು ಅದರ ಸುತ್ತಮುತ್ತಲಿನ ಬಗ್ಗೆ ತಿಳಿಯೋಣ ಬನ್ನಿ!

ಚಾರ್ ಧಾಮಗಳಲ್ಲೊಂದಾದ ಬದರಿನಾಥ ಮತ್ತು ಅದರ ಸುತ್ತಮುತ್ತಲಿನ ಬಗ್ಗೆ ತಿಳಿಯೋಣ ಬನ್ನಿ!

ಬದರಿನಾಥ - ತೀರ್ಥಯಾತ್ರಾ ಸ್ಥಳಗಳು ಮತ್ತು ಅದ್ಭುತವಾದ ನೈಸರ್ಗಿಕ ವೈಭವಕ್ಕೆ ಸಾಕ್

ಉತ್ತರಾಖಂಡ್ ನಲ್ಲಿರುವ ಬದರಿನಾಥವು ಧಾರ್ಮಿಕ ತಾಣಗಳಿಂದಾಗಿ ವಿಶ್ವಪ್ರಸಿದ್ದಿಯನ್ನು ಹೊಂದಿದ್ದು, ಇದು ಧಾರ್ಮಿಕ ಮತ್ತು ಪೌರಾಣಿಕ ಕಥೆಗಳನ್ನು ತನ್ನ ಮೂಲೆ ಮೂಲೆಗಳಲ್ಲಿಯೂ ಕಲೆ ಹಾಕಿದೆ. ಬದರಿನಾಥವು ಪ್ರಸಿದ್ದ ಯಾತ್ರಾಸ್ಥಳವಾಗಿರುವುದರ ಜೊತೆಗೆ ಇಲ್ಲಿಯ ಸುಂದರವಾದ ನೈಸರ್ಗಿಕ ಸೆಳವು ಮತ್ತು ರಮಣೀಯ ದೃಶ್ಯಗಳಿಂದಾಗಿ ವಿಶ್ವದಾದ್ಯಂತದ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ.

ಸಮುದ್ರ ಮಟ್ಟದಿಂದ ಸುಮಾರು 3100 ಮೀಟರ್ ಎತ್ತರದ ಪರ್ವತದ ಮೇಲೆ ನೆಲೆಸಿರುವ ಈ ದೇವಾಲಯವು ಅಲಕಾನಂದ ನದಿ ದಡದಲ್ಲಿ ನೆಲೆಸಿದೆ. ಬದರಿನಾಥವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ದೇಶೀಯವಲ್ಲದ ನೈಸರ್ಗಿಕ ಸ್ಮಾರಕಗಳ ಛಾಯೆಯಲ್ಲಿ ಮಿಂದಂತೆ ಕಾಣುತ್ತದೆ. ಬದರಿನಾಥಕ್ಕೆ ಭೇಟಿ ಕೊಡಲು ಮತ್ತು ಈ ಪಟ್ಟಣದ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಕಳೆದುಹೋಗುತ್ತಾ ಬೆರಗುಗೊಳಿಸುವಂತಹ ಸ್ಥಳಗಳನ್ನು ಭೇಟಿ ಮಾಡುವುದನ್ನು ತಪ್ಪಿಸದಿರಿ!

ಬದರಿನಾಥದಲ್ಲಿ ಭೇಟಿ ಕೊಡಬಹುದಾದ ಸ್ಥಳಗಳು

ಬದರಿನಾಥ ದೇವಾಲಯ

ಬದರಿನಾಥ ದೇವಾಲಯ

ಹೆಸರೇ ಸೂಚಿಸುವಂತೆ ಬದರಿನಾಥದಲ್ಲಿ ಮುಖ್ಯವಾಗಿ ಭೇಟಿ ಕೊಡಬೇಕಾದ ಸ್ಥಳಗಳಲ್ಲಿ ಬದರಿನಾಥ ದೇವಾಲಯವು ಒಂದಾಗಿದ್ದು, ಇದು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿಯ ಚಾರ್ ಧಾಮ್ ಮತ್ತು ಚೋಟಾ ಚಾರ್ ಧಾಮ್ (ಸಣ್ಣ ಚಾರ್ ಧಾಮ)ಗಳು ಅತ್ಯಂತ ಹೆಸರುವಾಸಿಯಾಗಿದ್ದು, ಈ ದೇವಾಲಯಗಳು ಜಗತ್ತಿನಾದ್ಯಂತದ ಪ್ರವಾಸಿಗರು ಮತ್ತು ಭಕ್ತರುಗಳಿಂದ ತುಂಬಿ ತುಳುಕುತ್ತಿರುತ್ತದೆ. ಹಿಂದೂಗಳ ಪ್ರಮುಖ ಪೌರಾಣಿಕ ಪಾತ್ರ ಹಾಗೂ ದೇವರಾದ ಭಗವಾನ್ ವಿಷ್ಣುವನ್ನು ಪೂಜಿಸುವ ದೇವಾಲಯವನ್ನು ವಿವಿಧ ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತದೆ.

ಹಿಂದೂ ಧರ್ಮದವರಿಗೆ ಅತ್ಯಂತ ಪವಿತ್ರ ಹಾಗೂ ಪರಿಣಾಮಕಾರಿಯಾದ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಬದರಿನಾಥ ದೇವಾಲಯವು ಅಪಾರವಾದ ಆಧ್ಯಾತ್ಮಿಕ ಮಹತ್ವವನ್ನು ಪಡೆದಂತಹುದಾಗಿದೆ. ಮಾತ್ರವಲ್ಲದೆ ಇದಕ್ಕೆ ಸಂಬಂಧಿಸಿದ ಹಲವಾರು ನಿಮ್ಮ ಕುತೂಹಲ ಕೆರಳಿಸುವಂತಹ ಪುರಾಣದ ಕಥೆಗಳನ್ನು ಈ ಸ್ಥಳವು ಹೊಂದಿದೆ. ಈ ದೇವಾಲಯವು ಸೆಪ್ಟೆಂಬರ್ ನಲ್ಲಿ ವಾರ್ಷಿಕ ಜಾತ್ರೆಯನ್ನು ಆಯೋಜಿಸುತ್ತದೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಕರು ಮತ್ತು ಭಕ್ತರ ಪ್ರವಾಹ ಜಗತ್ತಿನ ಮೂಲೆ ಮೂಲೆಗಳಿಂದ ಹರಿದು ಬರುವುದನ್ನು ಕಾಣಬಹುದಾಗಿದೆ.

ಹೂವುಗಳ ಕಣಿವೆ

ಹೂವುಗಳ ಕಣಿವೆ

ಉದ್ದನೆಯ ವಿಶಾಲವಾದ ಹಸಿರಿನಿಂದ ಕೂಡಿದ ಅಲ್ಲೊಂದು ಇಲ್ಲೊಂದು ತಾಜಾ ಹೂವುಗಳ ಚುಕ್ಕೆಗಳಂತೆ ಕಾಣುವ, ಬದರಿನಾಥದ ಸಮೀಪದಲ್ಲಿರುವ ಹೂವುಗಳ ಕಣಿವೆಯು ನೋಡುವುದಕ್ಕೆ ಒಂದು ನಯನ ಮನೋಹರವಾದ ಸ್ವರ್ಗವೆನ್ನಬಹುದು! ಈ ಸ್ಥಳವು ದೂರವಿದ್ದು ತಲುಪಲು ಕಷ್ಟಕರವಾಗಿರುವುದರಿಂದ ಈ ಪ್ರವೇಶವು ಯಾವುದೇ ಮಾಲಿನ್ಯ ಅಥವಾ ಕಲಬೆರಕೆಗೆ ಒಳಗಾಗದೆ ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದ್ದು, ಈ ಕಾರಣಗಳಿಂದಾಗಿ ಈ ಸ್ಥಳವು ಬೆರಗುಗೊಳಿಸುವ ಸೌಂದರ್ಯವನ್ನು ಕಾಪಾಡಿಕೊಂಡಿದೆ ಎನ್ನಬಹುದು.

ಯುನೆಸ್ಕೋ ವರ್ಲ್ಡ್ ನೆಟ್‌ವರ್ಕ್ ಆಫ್ ಬಯೋಸ್ಫಿಯರ್ ರಿಸರ್ವ್ಸ್‌ನ ಭಾಗವಾಗಿ ಘೋಷಿಸಲಾಗಿರುವ ಈ, ಹೂವುಗಳ ಕಣಿವೆಯು ಸುಮಾರು 520 ವಿವಿಧ ಹೂವಿನ ಜಾತಿಗಳನ್ನು ಹೊಂದಿದೆ. ಹೇರಳವಾದ ಸಸ್ಯ ಮತ್ತು ಪ್ರಾಣಿಗಳಿಂದ ತುಂಬಿರುವ ಕೆಲವು ಅಳಿವಿನಂಚಿನಲ್ಲಿರುವ ಹಿಮ ಚಿರತೆಗಳು, ವಿವಿಧ ಚಿಟ್ಟೆಗಳು ಮತ್ತು ಮುಂತಾದವುಗಳನ್ನು ಇಲ್ಲಿ ಕಾಣಬಹುದು. ಈ ಸ್ಥಳಕ್ಕೆ ಭೇಟಿ ಕೊಟ್ಟು ನಿಮ್ಮಲ್ಲಿರುವ ಛಾಯಾಗ್ರಾಹಕನನ್ನು ಬಡಿದೆಬ್ಬಿಸಿ ಮತ್ತು ಪ್ರಕೃತಿ ತಾಯಿಯ ಸಂಪೂರ್ಣತೆಯ ಸಂತೋಷ ಮತ್ತು ಸೌಂದರ್ಯವನ್ನು ಅನುಭವಿಸಿ ಧನ್ಯರಾಗಿ.

ಬಿಸಿನೀರಿನ ಬುಗ್ಗೆಗಳು (ಹಾಟ್ ಸ್ಪ್ರಿಂಗ್ಸ್)

ಬಿಸಿನೀರಿನ ಬುಗ್ಗೆಗಳು (ಹಾಟ್ ಸ್ಪ್ರಿಂಗ್ಸ್)

ಬದರಿನಾಥದಲ್ಲಿರುವ ಬಿಸಿನೀರಿನ ಬುಗ್ಗೆಗಳನ್ನು ಪವಿತ್ರ ಸ್ಥಳಗಳೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹಿಂದೂ ಧರ್ಮದ ಜನರಿಗೆ ಬಹಳ ಪವಿತ್ರವಾದುದಾಗಿದೆ. ತಪ್ತ್ ಕುಂಡ್, ಸೂರಜ್ ಕುಂಡ್ ಮತ್ತು ನಾರದ್ ಕುಂಡ್ ಎನ್ನುವ ಪ್ರಮುಖವಾದ ಮೂರು ಬಿಸಿನೀರಿನ ಬುಗ್ಗೆಗಳಿವೆ. ಬಿಸಿನೀರಿನ ಬುಗ್ಗೆಯು ಹೆಚ್ಚಿನ ಸಲ್ಫರ್ ಅಂಶವನ್ನು ಹೊಂದಿರುವ ನೈಸರ್ಗಿಕ ಕಾರಂಜಿಯಾಗಿದೆ ಮತ್ತು ಬಿಸಿಯಾದ ಗಂಧಕವುಳ್ಳ ನೀರು ದಿನದಲ್ಲಿ ತಾಪಮಾನವು ಏರಿದಂತೆ ಬಿಸಿಯಾಗುತ್ತದೆ.

ಬದರಿನಾಥವನ್ನು ಸುತ್ತುವರೆದಿರುವ ಈ ಬುಗ್ಗೆಗಳ ರಮಣೀಯ ವೈಭವಕ್ಕಾಗಿ ಇದನ್ನು ಜನಪ್ರಿಯ ಪ್ರವಾಸಿ ಹಾಟ್‌ಸ್ಪಾಟ್‌ ಗಳನ್ನಾಗಿ ಮಾಡಿವೆ. ಅಷ್ಟೇ ಅಲ್ಲದೆ ಈ ಬಿಸಿನೀರಿನ ಬುಗ್ಗೆಗಳ ನೀರಿಗೆ ರೋಗಗಳನ್ನು ಗುಣಪಡಿಸುವ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ ಆದ್ದರಿಂದ ಈ ಕೊಳಗಳಲ್ಲಿ ಸ್ನಾನ ಮಾಡುವುದು ಪವಿತ್ರ ಮತ್ತು ಧಾರ್ಮಿಕವೆಂದು ಪರಿಗಣಿಸಲಾಗಿದೆ. ಬಿಸಿನೀರಿನ ಬುಗ್ಗೆಗಳಲ್ಲಿ ಸ್ನಾನ ಮಾಡಲು ಪ್ರಪಂಚದಾದ್ಯಂತದ ಜನರು ಶುಭ ಸಂದರ್ಭಗಳಲ್ಲಿ ಭೇಟಿ ನೀಡಲು ಬರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X