Search
  • Follow NativePlanet
Share
» »ಅತ್ಯುತ್ತಮವಾದ ಸಾಹಸಮಯ ಚಟುವಟಿಕೆಗಳನ್ನು ಮಾಡಬಹುದಾದಂತಹ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳು.

ಅತ್ಯುತ್ತಮವಾದ ಸಾಹಸಮಯ ಚಟುವಟಿಕೆಗಳನ್ನು ಮಾಡಬಹುದಾದಂತಹ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳು.

ಅತ್ಯುತ್ತಮವಾದ ಸಾಹಸಮಯ ಚಟುವಟಿಕೆಗಳನ್ನು ಮಾಡಬಹುದಾದಂತಹ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳು.

ಮಳೆಗಾಲ ಹತ್ತಿರವಾಗುತ್ತಿದ್ದಂತೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಸುಂದರವಾಗುತ್ತಾ ಪ್ರಪಂಚದಾದ್ಯಂತದ ಸಾವಿರಾರು ಪ್ರಯಾಣಿಕರು ಮತ್ತು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತವೆ. ವಾರಾಂತ್ಯವನ್ನು ಬೆಂಗಳೂರಿನ ಸುತ್ತಮುತ್ತಲಿನಲ್ಲಿ ರೋಮಾಂಚಕವಾಗಿ ಕಳೆಯಬೇಕೆಂದಿರುವಿರಾ? ಹಾಗಿದ್ದಲ್ಲಿ, ಪ್ರವಾಸ ಪ್ರಿಯರು ಮತ್ತು ಸಾಹಸ ಪ್ರಿಯರಿಗಾಗಿ ಈ ಲೇಖನವು ಇವುಗಳ ಬಗ್ಗೆ ವಿವರಣೆ ನೀಡುತ್ತದೆ.
ಮಳೆಗಾಲದಲ್ಲಿ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಹಲವಾರು ನೈಸರ್ಗಿಕ ಪ್ರಕೃತಿಯ ಅದ್ಬುತಗಳಾದ ನದಿಗಳು, ಬೆಟ್ಟಗಳು, ಬಯಲುಗಳು , ಹುಲ್ಲುಗಾವಲುಗಳು, ಕಾಡುಗಳು ಮತ್ತು ಕಣಿವೆಗಳು ಸುಂದರವಾಗಿ ಕಂಗೊಳಿಸುತ್ತವೆ. ಇಂತಹ ಉತ್ತಮವಾದ ಸಮಯದಲ್ಲಿ ಪ್ರಕೃತಿಯ ಈ ಅದ್ಬುತ ಕೊಡುಗೆಗಳನ್ನು ಅನ್ವೇಷಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಹಾಗಿದ್ದಲ್ಲಿ ಬೆಂಗಳೂರಿನ ಸುತ್ತಮುತ್ತಲಿರುವ ಸುಂದರವಾದ ಪರಿಸರದಲ್ಲಿ ಸಾಹಸಿ ಚಟುವಟಿಕೆಗಳಲ್ಲಿ ಭಾಗವಹಿಸಲು ಇಚ್ಚಿಸುವಿರಾದಲ್ಲಿ ಇವುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಈ ಲೇಖನದಲ್ಲಿ ಓದಿ ತಿಳಿಯಿರಿ.

1.ರಾಕ್ ಕ್ಲೈಂಬಿಂಗ್

1.ರಾಕ್ ಕ್ಲೈಂಬಿಂಗ್

ಸಾಹಸಪ್ರಿಯರು ಆಯ್ಕೆ ಮಾಡುವಂತಹ ಅತ್ಯಂತ ಇಷ್ಟವಾದ ಚಟುವಟಿಕೆಗಳಲ್ಲಿ ರಾಕ್ ಕ್ಲೈಂಬಿಂಗ್ ಮುಖ್ಯವಾಗಿದೆ. ಪರ್ವತಗಳು, ಮತ್ತು ಬಂಡೆಗಳನ್ನೊಳಗೊಂಡ ಪರ್ವತಗಳನ್ನು ಹೊಂದಿದ ಭೂಮಿಯನ್ನು ಒಳಗೊಂಡ ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶಗಳು ರಾಕ್ ಕ್ಲೈಂಬಿಂಗ್ ಗೆ ಉತ್ತಮವಾದ ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ. ಆದುದರಿಂದ ಇದಕ್ಕಾಗಿ ರಾಜ್ಯದಾದ್ಯಂತದ ಹಲವಾರು ಪ್ರವಾಸಿಗರು ಮತ್ತು ಪ್ರಯಾಣಿಕರನ್ನು ಸೆಳೆಯುತ್ತದೆ.

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಕ್ ಕ್ಲೈಂಬಿಂಗ್ ಗೆ ಸೂಕ್ತವಾದ ಸ್ಥಳಗಳಲ್ಲಿ ಸಾವಣದುರ್ಗ ಬೆಟ್ಟಗಳು, ಚಿತ್ರದುರ್ಗ, ಹಂಪಿಯಲ್ಲಿಯ ಕಲ್ಲಿನ ರಚನೆಗಳು, ಬಾದಾಮಿ ಪರ್ವತಗಳು ಮುಂತಾದವುಗಳು ಪ್ರಸಿದ್ದವಾಗಿದೆ. ನೀವು ಬೆಂಗಳೂರಿನ ಗಡಿ ದಾಟಿ ಹೋಗಲು ಇಷ್ಟಪಡದಿದ್ದಲ್ಲಿ, ಚಿತ್ರದುರ್ಗ ಮತ್ತು ಸಾವಣದುರ್ಗ ರಾಕ್ ಕ್ಲೈಂಬಿಂಗ್ ಗೆ ಅತ್ಯಂತ ಉತ್ತಮವಾದ ಪ್ರದೇಶಗಳಾಗಿವೆ. ಇಲ್ಲಿಯ ಸೊಂಪಾದ ಹಸಿರು ವಾತಾವರಣಗಳು ರಾಕ್ ಕ್ಲೈಂಬಿಂಗ್ ಪ್ರದೇಶಗಳಿಗೆ ಇನ್ನಷ್ಟು ಮೆರುಗನ್ನು ನೀಡುತ್ತವೆ . ಇಂತಹ ಎತ್ತರವಾದ ಕಲ್ಲಿನ ಬೆಟ್ಟಗಳನ್ನು ಹತ್ತುವ ಸವಾಲನ್ನು ಸ್ವೀಕರಿಸಲು ಸಿದ್ದರಾಗಿರುವಿರಾ?

2.ಟ್ರೆಕ್ಕಿಂಗ್ (ಚಾರಣ)

2.ಟ್ರೆಕ್ಕಿಂಗ್ (ಚಾರಣ)

ಟ್ರೆಕ್ಕಿಂಗ್ ಅಥವಾ ಚಾರಣ ಪ್ರಪಂಚದಾದ್ಯಂತದ ಸಾಹಸಪ್ರಿಯರು ಇಷ್ಟಪಡುವ ಮತ್ತು ಆಯ್ಕೆಮಾಡುವ ಅತ್ಯಂತ ಸಾಹಸಮಯ ಚಟುವಟಿಕೆಗಳಲ್ಲಿ ಒಂದಾಗಿದ್ದು ಯಾವುದೇ ಪರ್ವತ ಪ್ರದೇಶಗಳಲ್ಲಿಯೂ ಚಾರುಣಿಗರು ನೋಡಲು ಸಿಗುವುದು ಸಮಾನ್ಯವಾದ ದೃಶ್ಯವಾಗಿರುತ್ತದೆ. ನೀವು ಕೂಡಾ ಟ್ರಕ್ಕಿಂಗ್ ಪ್ರಿಯರಾಗಿದ್ದಲ್ಲಿ, ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶಗಳು ಇದಕ್ಕೆ ಸೂಕ್ತವಾದುದಾಗಿದ್ದು, ಇವುಗಳು ಹಲವಾರು ಪರ್ವತಗಳು, ಮತ್ತು ಒರಟಾದ ಭೂ ಪ್ರದೇಶಗಳೊಂದಿಗೆ ಟ್ರಕ್ಕಿಂಗ್ ದಾರಿಗಳನ್ನೂ ಹೊಂದಿದ್ದು ನಿಮ್ಮ ಟ್ರಕ್ಕಿಂಗ್ ಮಾಡುವ ಆಸೆಯನ್ನು ಪೂರೈಸುತ್ತವೆ.
ಮಳೆಗಾಲದ ಸಮಯದಲ್ಲಿ ಈ ಚಾರಣ ಮಾಡುವ ಸ್ಥಳಗಳು ದಟ್ಟವಾದ ಸಸ್ಯಗಳಿಂದ ಆವರಿಸಿಕೊಳ್ಳುತ್ತಾ ಸ್ವರ್ಗಸದೃಶವಾಗಿ ಕಾಣುತ್ತವೆ. ಇಂತಹ ವಾಸ್ತವಿಕ ಪರಿಸರದಲ್ಲಿ ಸಂಚರಿಸಲು ನೀವು ಬಯಸುವುದಿಲ್ಲವೆ? ಬೆಂಗಳೂರಿನ ಸುತ್ತಮುತ್ತ ಟ್ರಕ್ಕಿಂಗ್ ಮಾಡಬಹುದಾದ ಪ್ರದೇಶಗಳಲ್ಲಿ ರಾಮನಗರ, ಮಾಕಳಿದುರ್ಗಾ, ಅಂತರಗಂಗೆ, ನಂದಿಬೆಟ್ಟಗಳು, ಬಿ.ಆರ್ ಬೆಟ್ಟ, ಮತ್ತು ಸ್ಕಂದಗಿರಿ ಇತ್ಯಾದಿಗಳು ಪ್ರಮುಖವಾದವುಗಳಾಗಿವೆ. ಈ ಸ್ಥಳಗಳಲ್ಲಿ ನೀವು ಹಲವಾರು ಸುಂದರವಾದ ವನ್ಯಜೀವಿಗಳು ಮತ್ತು ವರ್ಣರಂಜಿತವಾದ ಪಕ್ಷಿಗಳನ್ನೂ ಕಾಣಬಹುದಾಗಿದೆ.

3.ಸ್ನೋರ್ಕ್ಲಿಂಗ್

3.ಸ್ನೋರ್ಕ್ಲಿಂಗ್

ನೀವು ನೀರಿನಲ್ಲಿ ಆಡಲು ಅಂಜಿಕೆ ಪಡದವರಾಗಿದ್ದಲ್ಲಿ, ಮಳೆಗಾಲದ ಸಮಯವು ಸ್ನೋರ್ಕ್ಲಿಂಗ್ ಆಡಲು ಸೂಕ್ತವಾದುದಾಗಿದೆ. ನೀರಿನ ಆಳದಲ್ಲಿಯ ಸೌಂದರ್ಯತೆಯನ್ನು ಸ್ನೋರ್ಕ್ಲಿಂಗ್ ಚಟುವಟಿಕೆಯಲ್ಲಿ ಉತ್ಸಾಹವಿರುವವರಿಗಲ್ಲದೆ ಬೇರೆ ಯಾರು ಅನುಭವಿಸಲು ಸಾಧ್ಯ? ಇದು ಬೆಂಗಳೂರಿನ ಸುತ್ತಮುತ್ತದಲ್ಲಿ ಅತ್ಯಂತ ಪ್ರಸಿದ್ದವಾದ ಚಟುವಟಿಕೆಯಾಗಿದೆ. ಇಲ್ಲಿಯ ಹಲವಾರು ಸ್ಥಳಗಳು ಮತ್ತು ಪ್ರಕೃತಿ ಶಿಬಿರಗಳು ಮತ್ತು ಅದರ ಹತ್ತಿರದ ಸರೋವರಗಳು, ನದಿಗಳು ಮತ್ತು ಇತರ ತೊರೆಗಳು ಅದರ ಸಂದರ್ಶಕರಿಗೆ ನೀರೊಳಗಿನ ಅದ್ಭುತಗಳನ್ನು ಅನ್ವೇಷಿಸುವ ಅವಕಾಶಗಳನ್ನು ನೀಡುತ್ತಿವೆ.
ನೀವೇಂದಿಗೂ ಸ್ನೋರ್ಕ್ಲಿಂಗ್ ನಂತಹ ಚಟುವಟಿಕೆಗಳನ್ನು ಇದುವರೆಗೂ ಪ್ರಯತ್ನಿಸದೇ ಇದ್ದಲ್ಲಿ, ಇಂತಹ ಅದ್ಬುತವಾದ ಚಟುವಟಿಕೆಯು ನಿಮಗೆ ಎಂದಿಗೂ ಮರೆಯಲಾರದ ಅನುಭವವನ್ನು ಖಂಡಿತವಾಗಿಯೂ ನೀಡುತ್ತದೆ. ನೀವು ಸ್ನೋರ್ಕ್ಲಿಂಗ್ ಗೆ ಹೋಗಬಹುದಾದ ಬೆಂಗಳೂರಿನ ಪ್ರಮುಖ ಸ್ಥಳಗಳೆಂದರೆ ಬನ್ನೇರುಘಟ್ಟ ನೇಚರ್ ಪಾರ್ಕ್ ಮತ್ತು ಭೀಮೇಶ್ವರಿ ನೇಚರ್ ಕ್ಯಾಂಪ್.

4.ಕ್ಯಾನೋಯಿಂಗ್ ಮತ್ತು ಕಯಾಕಿಂಗ್

ವಾರಾಂತ್ಯದ ರಜಾದಿನಗಳಲ್ಲಿ ಬೆಂಗಳೂರಿಗೆ ಹತ್ತಿರವಿರುವ ಸುಂದರವಾದ ಪ್ರದೇಶಗಳಲ್ಲಿ ಸಾಹಸಮಯ ಚಟುವಟಿಕೆಗಳನ್ನು ಮಾಡಲು ಯೋಚಿಸುತ್ತಿರುವಿರಾ? ಹಾಗಿದ್ದಲ್ಲಿ, ಕ್ಯಾನೊಯಿಂಗ್ ಮತ್ತು ಕಯಾಕಿಂಗ್ ನಿಮಗೆ ಅತ್ಯಂತ ಸೂಕ್ತವಾದ ಚಟುವಟಿಕೆಗಳಾಗಿವೆ. ಸೊಂಪಾದ ಸಸ್ಸ್ಯವರ್ಗದಿಂದ ಆವರಿಸಲ್ಪಟ್ಟ ಪ್ರಕೃತಿಯ ಜೊತೆಗೆ ನದಿಗಳ ಅಲೆಗಳಲ್ಲಿ ಪ್ಯಾಡ್ಲಿಂಗ್ ಮಾಡುವ ಅನುಭವವು ನಿಜವಾಗಿಯೂ ನಿಮ್ಮನ್ನು ಸುಂದರವಾದ ಜಗತ್ತಿಗೆ ಕೊಂಡೊಯ್ಯುವುದರಲ್ಲಿ ಸಂಶಯವೇ ಇಲ್ಲ.

ನಿಧಾನವಾಗಿ ನಿಮ್ಮ ಮನಸ್ಸಿಗೆ ಮುದ ನೀಡುವಂತಹ ಸುಂದರವಾದ ತೊರೆಗಳಲ್ಲಿ ದೋಣಿಗಳ ಮೂಲಕ ಚಲಿಸುತ್ತಾ ಮಾಡುವ ಕಯಾಕ್ ನಂತಹ ಚಟುವಟಿಕೆಯಲ್ಲಿ ಪ್ರಕೃತಿಯನ್ನು ಅನ್ವೇಷಿಸಲು ಇಷ್ಟಪಡದೇ ಇರಲು ಸಾಧ್ಯವೇ ? ಶರಾವತಿ ನದಿ, ದಾಂಡೇಲಿ ವೈಟ್ ವಾಟರ್ಸ್, ಭೀಮೇಶ್ವರಿ, ಬಾರಾಪೋಲ್, ಕಬಿನಿ ಮತ್ತು ಚಿಕ್ಕಮಗಳೂರು ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳು ದೋಣಿ ಮತ್ತು ಕಯಾಕಿಂಗ್ ಅನುಭವಗಳನ್ನು ನಿಮಗೆ ನೀಡುತ್ತವೆ.

5.ಪ್ಯಾರಾಗೈಡ್ಲಿಂಗ್

5.ಪ್ಯಾರಾಗೈಡ್ಲಿಂಗ್

ಪ್ಯಾರಾಗೈಡ್ಲಿಂಗ್ ಕರ್ನಾಟಕದಲ್ಲಿ ಹೊಸದಾಗಿ ಪರಿಚಯಿಸಲ್ಪಟ್ಟ ಸಾಹಸಮಯ ಚಟುವಟಿಕೆಗಳಲ್ಲೊಂದಾಗಿದೆ. ಪ್ಯಾರಗೈಡ್ಲಿಂಗ್ ನಂತಹ ಸುಂದರವಾದ ಅನುಭವವನ್ನು ಪಡೆಯಬಹುದಾದಂತಹ ಹಲವಾರು ಸ್ಥಳಗಳನ್ನು ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಕಾಣಬಹುದಾಗಿದೆ. ಬೆಂಗಳೂರಿನಿಂದ ತುಂಬಾ ದೂರ ಹೋಗಲು ನೀವು ಬಯಸುತ್ತಿಲ್ಲವಾದಲ್ಲಿ, ಬೆಂಗಳೂರಿನಿಂದ ಸುಮಾರು 60 ಕಿ.ಮೀ ಅಂತರದಲ್ಲಿರುವ ನಂದಿಬೆಟ್ಟಕ್ಕೆ ಹೋಗಬಹುದಾಗಿದ್ದು, ಈ ತಾಣದ ಸೌಂದರ್ಯತೆಯನ್ನು ಪ್ಯಾರಾಗೈಂಡ್ಲಿಂಗ್ ಮಾಡುತ್ತಾ ವೀಕ್ಷಿಸಬಹುದಾಗಿದೆ.

ಪ್ಯಾರಾಗೈಡ್ಲರ್ ಆಗಿ ಬೆಂಗಳೂರಿನ ಸುತ್ತಮುತ್ತಲಿನ ಸೌಂದರ್ಯತೆಯನ್ನು ವಿಭಿನ್ನ ದೃಷ್ಟಿ ಕೋನದಿಂದ ನೋಡುವ ಅನುಭವವನ್ನು ಈ ವಾರಾಂತ್ಯದಲ್ಲಿ ಕೈಗೊಂಡರೆ ಹೇಗಿರಬಹುದು?ನಂದಿ ಬೆಟ್ಟಗಳ ಹೊರತಾಗಿಯೂ ಕೂರ್ಗ ನ ಬೆಟ್ಟಗಳಲ್ಲಿಯೂ ಪ್ಯಾರಾಗೈಡ್ಲಿಂಗ್ ಅನುಭವವನ್ನು ಪಡೆಯಲು ಭೇಟಿ ಕೊಡಬಹುದಾಗಿದೆ.

6.ಕೇವಿಂಗ್ (ಗುಹೆಯೊಳಗೆ ಅನ್ವೇಷಣೆ)

6.ಕೇವಿಂಗ್ (ಗುಹೆಯೊಳಗೆ ಅನ್ವೇಷಣೆ)

ಬೆಂಗಳೂರಿನ ಸುತ್ತಮುತ್ತ ಹಲವಾರು ಸುಂದರವಾದ ಗುಹೆಗಳು ಇರುವ ಕಾರಣ ಈ ಋತುವಿನಲ್ಲಿ ಗುಹೆಯೊಳಗೆ ಅನ್ವೇಷಣೆ ಮಾಡುವ ಅನುಭವವನ್ನು ಪಡೆದರೆ ಹೇಗಿರಬಹುದು? ಕೇವಿಂಗ್ ಹಿಂದಿನ ಕಾಲದಿಂದಲೂ ಅತ್ಯಂತ ಮೆಚ್ಚಿನ ಸಾಹಸಿ ಚಟುವಟಿಕೆಗಳಲ್ಲಿ ಒಂದಾಗಿದೆ. ಈ ಅದ್ಭುತ ಅನುಭವವನ್ನು ನೀವು ಪಡೆಯಬಹುದಾದ ಪ್ರಮುಖ ಸ್ಥಳಗಳೆಂದರೆ ಅಂತರಗಂಗೆ ಗುಹೆಗಳು ಮತ್ತು ಬೆಲಂ ಗುಹೆಗಳು. ಕರ್ನಾಟಕ ಮತ್ತು ಇತರ ರಾಜ್ಯಗಳ ಗಾಢವಾದ ಕತ್ತಲಿನ ಮೂಲೆಗಳನ್ನು ಮತ್ತು ಅವುಗಳ ಆಳಗಳನ್ನು ಈ ಗುಹೆಗಳ ಮುಖಾಂತರ ಅನ್ವೇಷಿಸಲು ನೀವು ಬಯಸುವುದಿಲ್ಲವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X