Search
  • Follow NativePlanet
Share
» »ಚಾರಣಿಗರ ಸ್ವರ್ಗ ಅಪ್ಸರ ವಿಹಾರ್; ‘ಅಪ್ಸರ’ ಹೆಸರು ಬರಲು ಕಾರಣವೇನು ಗೊತ್ತಾ?

ಚಾರಣಿಗರ ಸ್ವರ್ಗ ಅಪ್ಸರ ವಿಹಾರ್; ‘ಅಪ್ಸರ’ ಹೆಸರು ಬರಲು ಕಾರಣವೇನು ಗೊತ್ತಾ?

ಮಧ್ಯಪ್ರದೇಶದ ಏಕೈಕ ಗಿರಿಧಾಮ ಪಚ್ಮರ್ಹಿ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇದು ತನ್ನೊಡಲಲ್ಲಿ ಅನೇಕ ಬೆಟ್ಟಗಳು, ಹಸಿರು, ದೊಡ್ಡ ಜಲಪಾತಗಳನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡಿದಾಗ ನೀವು ನೋಡಲೇಬೇಕಾದ ಸ್ಥಳವೊಂದಿದೆ. ಅದೇ ಅಪ್ಸರ ವಿಹಾರ್. ಪಚ್ಮರ್ಹಿ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ 'ಅಪ್ಸರ ವಿಹಾರ್'. ಅಪ್ಸರ ವಿಹಾರ್ ಕ್ಷಣ ಮಾತ್ರದಲ್ಲಿ ಪ್ರವಾಸಿಗರನ್ನು ಗಮನ ಸೆಳೆಯುವ ಜಲಪಾತವಾಗಿದ್ದು, ಇದು ಸಿಲ್ವರ್ ಫಾಲ್ಸ್ ಬಳಿ ನೆಲೆಗೊಂಡಿದೆ. ಪಚ್ಮರ್ಹಿಯಲ್ಲಿರುವ ಜಲಪಾತಗಳಲ್ಲಿ ಇದು ಒಂದಾಗಿದ್ದು, ವಿಶೇಷವಾಗಿ ಸಾಹಸಿ ಪ್ರಿಯರು ಹೆಚ್ಚು ಇಷ್ಟಪಡುವ ಈ ಸ್ಥಳ ಪ್ರವಾಸಗರನ್ನು ಕೈ ಬೀಸಿ ಕರೆಯುತ್ತದೆ. ಪಚ್ಮರ್ಹಿಯ ಕಾಡಿನೊಳಗೆ ಇರುವ ಅಪ್ಸರ ವಿಹಾರ್ ಒಂದು ಸಣ್ಣ ಜಲಪಾತವಾಗಿದ್ದು, ಸುಮಾರು 30 ಅಡಿ ಎತ್ತರದಿಂದ ಕೆಳಗೆ ಬೀಳುತ್ತದೆ.

ಸ್ವಲ್ಪ ಸಮಯಗಳ ಕಾಲ ವಿರಾಮ ತೆಗೆದುಕೊಳ್ಳಲು ಬಯಸುವವರು, ನೀರಿನಲ್ಲಿ ಆಟವಾಡಲು ಬಯಸುವವರಿಗೆ ಇದು ಜನಪ್ರಿಯ ತಾಣವಾಗಿದೆ. ಆದರೆ ಜಲಪಾತದ ಅದ್ಭುತ ನೋಟವನ್ನು ವೀಕ್ಷಿಸಲು 1.5 ಕಿಲೋಮೀಟರ್ ಇಳಿಜಾರಿನ ಹಾದಿ ಚಾರಣ ಮಾಡಬೇಕು. ಇದು ರಜತ್ ಪ್ರಪತ್‌'ನಿಂದ ಒಂದು ಸಣ್ಣ ಚಾರಣವಾಗಿದೆ. ಮಳೆಗಾಲದ ಸಮಯದಲ್ಲಿ ಇದು ಧುಮ್ಮಿಕ್ಕಿ ಹರಿಯುವುದನ್ನು ನೋಡಲು ಎರಡು ಕಣ್ಣು ಸಾಲದು. ಜಲಪಾತವನ್ನು ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಹೆಸರು ಬರಲು ಕಾರಣವೇನು?

ಈ ಹೆಸರು ಬರಲು ಕಾರಣವೇನು?

ಅಪ್ಸರ ವಿಹಾರ್ ಅನ್ನು 'ಫೇರಿ ಪೂಲ್' ಎಂದೂ ಕರೆಯಲಾಗುತ್ತದೆ. ಕೊಳದಲ್ಲಿ ಈಜಬೇಕೆಂದು ಬಯಸುವವರಿಗೆ ಇದು ಸೂಕ್ತವಾದ ಸ್ಥಳವೆಂದು ಹೆಸರುವಾಸಿಯಾಗಿದೆ. ಜಲಪಾತವಿರುವ ಸ್ಥಳವು ಬೆಟ್ಟಗಳ ನಡುವೆ ಇದೆ. ನೀವು ಬಂಡೆಗಳ ಮೂಲಕ ದಾರಿ ಮಾಡಿಕೊಂಡು ಇಲ್ಲಿಗೆ ಬರುವುದು ಅದ್ಭುತ ಅನುಭವ ನೀಡುತ್ತದೆ. ಬ್ರಿಟಿಷರ ಆಳ್ವಿಕೆಯಲ್ಲಿ ಆಂಗ್ಲ ಮಹಿಳೆಯರು ಈ ಕೊಳಕ್ಕೆ ಆಗಾಗ್ಗೆ ಸ್ನಾನ ಮಾಡಲು ಬರುತ್ತಿದ್ದರು. ಸ್ಥಳೀಯರ ಕಣ್ಣಿಗೆ ಇವರು ಯಕ್ಷಿಣಿ ದೇವತೆಗಳ ತರಹ ಕಾಣುತ್ತಿದ್ದರು. ಆದ್ದರಿಂದ ಅವರು ಜಲಪಾತವನ್ನು ‘ಅಪ್ಸರ ವಿಹಾರ್' ಅಥವಾ ‘ಫೇರಿ ಪೂಲ್' ಎಂದು ಕರೆಯುತ್ತಾರೆ.

ಇಲ್ಲಿ ಏನೆಲ್ಲಾ ಮಾಡಬಹುದು?

ಇಲ್ಲಿ ಏನೆಲ್ಲಾ ಮಾಡಬಹುದು?

ಅಪ್ಸರ ವಿಹಾರ್ ಗೆ ಭೇಟಿ ಕೊಡುವಾಗ ನಿಮಗೆ ಒಂದು ರೀತಿ ರೋಚಕ ಅನುಭವ ಕೊಡುತ್ತದೆ. ಈ ಮೊದಲೇ ಹೇಳಿದ ಹಾಗೆ ಅಪ್ಸರಾ ವಿಹಾರವನ್ನು ತಲುಪಲು ನೀವು ಸ್ವಲ್ಪ ದೂರ ಟ್ರೆಕ್ಕಿಂಗ್ ಮಾಡಬೇಕು. ಇಲ್ಲಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಪಾಂಡವರ ಗುಹೆಗಳಿದ್ದು, ನೀವು ಈ ಸ್ಥಳವನ್ನು ನೋಡುವ ಮುನ್ನ ಮೊದಲು ಇಲ್ಲಿಗೆ ಬನ್ನಿ. ಕೊಳದಲ್ಲಿ ರಿಫ್ರೆಶ್ ಆಗಿ. ನಂತರ ಗುಹೆಗಳಿಗೆ ಭೇಟಿ ಕೊಡಿ. ಇಲ್ಲಿ ಅನೇಕ ಪುರಾತನ ವರ್ಣಚಿತ್ರಗಳನ್ನು ನೋಡಬಹುದು. ಆ ನಂತರ ಇಲ್ಲಿಂದ ಚಾರಣವು ನಿಮ್ಮನ್ನು ರಜತ್ ಪ್ರತಾಪ್ ಅಥವಾ ಸಿಲ್ವರ್ ಫಾಲ್ಸ್‌ ಕಡೆಗೆ ಕರೆದೊಯ್ಯುತ್ತದೆ. ಒಟ್ಟಾರೆ ಸಾತ್ಪುರದ ಬೆಟ್ಟಗಳಲ್ಲಿ ಚಾರಣ ಮಾಡುವುದು ಖಂಡಿತವಾಗಿಯೂ ನಿಮ್ಮನ್ನು ರೋಮಾಂಚನಗೊಳಿಸುತ್ತದೆ.

ಚಾರಣದ ಕುರಿತು ಚಿಕ್ಕ ಮಾಹಿತಿ

ಚಾರಣದ ಕುರಿತು ಚಿಕ್ಕ ಮಾಹಿತಿ

ಚಾರಣ ಮಾಡುವವರು ಅಪ್ಸರ ವಿಹಾರ್, ರಜತ್ ಪ್ರತಾಪ್, ಪಾಂಡವ ಗುಹೆಗಳನ್ನು ನೋಡಬಹುದಾಗಿದೆ. ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಇರದವರಿಗೆ ಗೈಡ್ ಇದ್ದರೆ ಒಳ್ಳೆಯದು. ಬೆಳಗ್ಗೆ 8:00 ಗಂಟೆಗೆ ಪಚ್ಮರ್ಹಿಯ ಬಸ್ ನಿಲ್ದಾಣಕ್ಕೆ ಬನ್ನಿ. ಇಲ್ಲಿ ಪಾನೀಯ ಅಥವಾ ಬೆಚ್ಚಗಿನ ಉಪಹಾರ ಸೇವಿಸಿ. 9 ಗಂಟೆಗೆ ಚಾರಣ ಪ್ರಾರಂಭವಾಗುವ ಮೊದಲು ನೀವು ಚಾರಣದ ಕುರಿತು ಮಾಹಿತಿ ಪಡೆದುಕೊಳ್ಳಿ. ಮಧ್ಯಾಹ್ನ 1:30 ರಿಂದ ಮಧ್ಯಾಹ್ನ 2:30 ಊಟದ ಸಮಯ. ಕೆಲವು ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಂಡು, 2:30 ರಿಂದ 4:30 ಅಪ್ಸರಾ ಕುಂಡ್, ಪಾಂಡವರ ಗುಹೆಗಳು ಮತ್ತು ರಜತ್ ಪ್ರತಾಪ್ / ಸಿಲ್ವರ್ ಫಾಲ್ಸ್‌ಗೆ ಜಂಗಲ್ ಟ್ರೆಕ್ಕಿಂಗ್ ಮಾಡುತ್ತಾ ಅರಣ್ಯದ ಪರಿಮಳವನ್ನು ಅನುಭವಿಸಿ. ಸಂಜೆ 5:00 ಗಂಟೆ ವೇಳೆಗೆ ಚಾರಣದ ಪ್ರಾರಂಭದ ಹಂತಕ್ಕೆ ಹಿಂತಿರುಗಿ. ಕೆಲವೊಮ್ಮೆ ಪ್ರಯಾಣದಲ್ಲಿ ಮೇಲೆ ಉಲ್ಲೇಖಿಸಲಾದ ಸಮಯಗಳು ಬದಲಾಗಬಹುದು.

ನಿಮ್ಮ ಜೊತೆ ಏನಿರಬೇಕು?

ನಿಮ್ಮ ಜೊತೆ ಏನಿರಬೇಕು?

ನೀರಿನ ಬಾಟಲ್, ಟ್ರಯಲ್ ಮಿಕ್ಸ್, ಡ್ರೈ ಫ್ರೂಟ್ಸ್, ಚಾಕೊಲೇಟ್‌ಗಳು ಅಥವಾ ಎನರ್ಜಿ ಬಾರ್‌ಗಳು, ಟ್ರೆಕ್ಕಿಂಗ್ ಶೂಸ್ ಅಥವಾ ಹೈಕಿಂಗ್ ಬೂಟ್ಸ್, ಸ್ವೆಟರ್/ರೇನ್ ಕೋಟ್, ಹ್ಯಾಂಡ್ ಸ್ಯಾನಿಟೈಜರ್, ಟ್ರೆಕ್ ಪ್ಯಾಂಟ್ ಅಥವಾ ಪ್ಯಾಂಟ್ ನಿಮ್ಮ ಜೊತೆ ಇರಲಿ. ಚಟುವಟಿಕೆಗಳ ಸಮಯದಲ್ಲಿ ಅನಾನುಕೂಲ ಉಡುಪುಗಳನ್ನು (ಸೀರೆಗಳು ಇತ್ಯಾದಿ) ತಪ್ಪಿಸಿ. ಆಭರಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಕ್ಯಾಂಪ್‌ಸೈಟ್‌ಗೆ ಒಯ್ಯುವುದು ಸೂಕ್ತವಲ್ಲ. ಆವರಣದಲ್ಲಿ ಯಾವುದೇ ಧೂಮಪಾನ ಅಥವಾ ಮದ್ಯಪಾನವನ್ನು ಅನುಮತಿಸಲಾಗುವುದಿಲ್ಲ. ದಯವಿಟ್ಟು ಪ್ಲಾಸ್ಟಿಕ್ ಅನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಅಪ್ಸರ ಕುಂಡವು ಪಚ್ಮರ್ಹಿಯ ಸತ್ಪುರ ರಾಷ್ಟ್ರೀಯ ಉದ್ಯಾನವನದಲ್ಲಿದೆ. ನೀವು ಈ ಇದನ್ನು ಹತ್ತಿರದ ಪಟ್ಟಣವಾದ ಪಿಪಾರಿಯಾದಿಂದ ರಸ್ತೆಯ ಮೂಲಕ ತಲುಪಬಹುದು. ಪಿಪಾರಿಯಾ ರಸ್ತೆಗಳ ಮೂಲಕ ರಾಜ್ಯದ ಇತರ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪಿಪಾರಿಯಾದಲ್ಲಿ ರೈಲ್ವೆ ನಿಲ್ದಾಣ ಕೂಡ ಇದೆ. ಇಲ್ಲಿಂದ ಮಧ್ಯಪ್ರದೇಶದ ಉಳಿದ ನಗರಗಳಿಗೂ ಸಂಪರ್ಕವಿದೆ. ಹತ್ತಿರದ ವಿಮಾನ ನಿಲ್ದಾಣವು ಭೋಪಾಲ್‌ನಲ್ಲಿದೆ. ಅಲ್ಲಿಂದ ನೀವು ಪಿಪಾರಿಯಾವನ್ನು ತಲುಪಲು ಯಾವುದೇ ವಾಹನ ಅಥವಾ ರೈಲನ್ನು ತೆಗೆದುಕೊಳ್ಳಬಹುದು.

ಭೇಟಿ ನೀಡಲು ಉತ್ತಮ ಸೀಸನ್

ಭೇಟಿ ನೀಡಲು ಉತ್ತಮ ಸೀಸನ್

ಸೆಪ್ಟೆಂಬರ್ ನಿಂದ ಮಾರ್ಚ್ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಅಕ್ಟೋಬರ್‌ನಿಂದ ಫೆಬ್ರುವರಿಯು ಪಚ್ಮರ್ಹಿಯಲ್ಲಿ ಪೀಕ್ ಸೀಸನ್ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X