Search
  • Follow NativePlanet
Share
» »ಈ ಹಳ್ಳಿಯಲ್ಲಿದೆ 200 ಬಂಗಲೆ, ಇಲ್ಲಿ ಬಡವರೇ ಇಲ್ಲ ಎಲ್ಲರೂ ಶ್ರೀಮಂತರೇ

ಈ ಹಳ್ಳಿಯಲ್ಲಿದೆ 200 ಬಂಗಲೆ, ಇಲ್ಲಿ ಬಡವರೇ ಇಲ್ಲ ಎಲ್ಲರೂ ಶ್ರೀಮಂತರೇ

ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಡತನ ರೇಖೆಗಿಂತ ಕೆಳಗಿನ ಜೀವನ ಸಾಗಿಸುತ್ತಿದ್ದಾರೆ. ಆದರೆ ಬಡತನವೇ ಇಲ್ಲದ ಹಳ್ಳಿ ಕೂಡಾ ನಮ್ಮ ದೇಶದಲ್ಲಿದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಇಂದು ನಾವು ಅಂತಹದ್ದೇ ಒಂದು ಹಳ್ಳಿಯ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಅತ್ಯಂತ ಶ್ರೀಮಂತ ಹಳ್ಳಿ. ಹಾಗೂ ಇಲ್ಲಿ ಬಡವರೇ ಇಲ್ಲ. ಎಲ್ಲರೂ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಹಾಗಾದ್ರೆ ಅದು ಯಾವ ಹಳ್ಳಿ, ಯಾವ ರಾಜ್ಯದಲ್ಲಿದೆ ಎನ್ನುವುದನ್ನು ತಿಳಿಯೋಣ.

ಮಹಾರಾಷ್ಟ್ರದ ಒಂದು ಹಳ್ಳಿ

ಮಹಾರಾಷ್ಟ್ರದ ಒಂದು ಹಳ್ಳಿ

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಅತ್ಯಂತ ಶ್ರೀಮಂತ ನಗರವೆಂದರೆ ಮುಂಬೈ . ಇಲ್ಲಿ ಬಾಲಿವುಡ್‌ ಸ್ಟಾರ್‌ಗಳು ನೆಲೆಸುತ್ತಾರೆ. ಕೋಟ್ಯಾಧಿಪತಿಗಳೂ ನೆಲೆಸುತ್ತಾರೆ. ಇದು ಮಹಾರಾಷ್ಟ್ರದ ಭಾಗವೇ ಆಗಿದೆ. ಹಾಗಾಗಿ ಇದು ಭಾರತದಲ್ಲೇ ಅತ್ಯಂತ ಶ್ರೀಮತ ರಾಜ್ಯವಾಗಿದೆ. ಮುಂಬೈನ್ನು ಹೊರತುಪಡಿಸಿದರೆ ಬಡತನದ ಹಳ್ಳಿಗಳೂ ಇವೆ ಇಲ್ಲಿ. ಪ್ರತಿವರ್ಷ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಮಹಾರಾಷ್ಟ್ರದಲ್ಲಿ ಒಂದು ಸಣ್ಣ ಅತ್ಯಂತ ಶ್ರೀಮಂತ ಹಳ್ಳಿ ಕೂಡಾ ಇದೆ.

ನಮ್ಮ ರಾಜ್ಯದಲ್ಲಿರುವ ಏಷ್ಯಾದಲ್ಲೇ 2 ನೇ ದೊಡ್ಡ ಏಕಶಿಲಾ ಬೆಟ್ಟ ನೋಡಿದ್ದೀರಾ? ನಮ್ಮ ರಾಜ್ಯದಲ್ಲಿರುವ ಏಷ್ಯಾದಲ್ಲೇ 2 ನೇ ದೊಡ್ಡ ಏಕಶಿಲಾ ಬೆಟ್ಟ ನೋಡಿದ್ದೀರಾ?

ಅಂಜನೇಲ್

ಅಂಜನೇಲ್

ಈ ಹಳ್ಳಿಯ ಜನಸಂಖ್ಯೆ ಸುಮಾರು 5000. ಇಲ್ಲಿನ ರೈತರು ರಾಜರಂತೆ ಜೀವನ ಸಾಗಿಸುತ್ತಿದ್ದಾರೆ. ಆ ಹಳ್ಳಿಯೇ ಅಂಜನೇಲ್. ಈ ಹಳ್ಳಿಯಲ್ಲಿ ಸುಮಾರು 200 ಬಂಗಲೆಗಳಿವೆ. ಇವು ಅಲ್ಲಿನ ರೈತರ ಐಷಾರಾಮಿ ಜೀವನವನ್ನು ಬಿಂಬಿಸುತ್ತದೆ. ಇಲ್ಲಿನ ರೈತರು ದಾಳಿಂಬೆ ಬೆಳೆಯನ್ನು ಬೆಳೆಯುತ್ತಾರೆ. ಇತ್ತೀಚಿಗೆ ಕಡಿಮೆ ಮಳೆಯಿಂದಾಗಿ ಅವರ ಬೆಳೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ.

50 ಲಕ್ಷ ರೂ. ಬೆಲೆಬಾಳುವ ಮನೆ

50 ಲಕ್ಷ ರೂ. ಬೆಲೆಬಾಳುವ ಮನೆ

ಇಲ್ಲಿನ ಪ್ರತಿಯೊಂದು ಮನೆಯವರೂ ರೈತರು. ಇಲ್ಲಿನ ಸುಮಾರು 200 ರೈತರ ಟರ್ನೋವರ್ ಸುಮಾರು 80 ಲಕ್ಷ ರೂ. ಸಾಮಾನ್ಯವಾಗಿ ಸಿಟಿಯಲ್ಲಿರುವ ಒಂದು ಸಣ್ಣ ಬ್ಯುಸಿನೆಸ್‌ ಮ್ಯಾನ್‌ನ ಸಮನಾಗಿ ಇಲ್ಲಿನ ರೈತರು ದುಡಿಯುತ್ತಿದ್ದಾರೆ.
ಇಲ್ಲಿರುವ ಅನೇಕ ಮನೆಗಳು 50 ಲಕ್ಷ ರೂ. ಹಾಗೂ ಅದಕ್ಕೂ ಅಧಿಕ ಬೆಲೆಬಾಳುವಂತಹದ್ದು.

ತಂದೂರಿ ಚಿಕನ್ ಅಲ್ಲ ತಂದೂರಿ ಚಹಾ ಟೇಸ್ಟ್ ಮಾಡಿತಂದೂರಿ ಚಿಕನ್ ಅಲ್ಲ ತಂದೂರಿ ಚಹಾ ಟೇಸ್ಟ್ ಮಾಡಿ

ಆಧುನಿಕ ಸೌಕರ್ಯ

ಆಧುನಿಕ ಸೌಕರ್ಯ

ಆ ಮನೆಯೊಳಗಿನ ವಸ್ತುಗಳೆಲ್ಲವೂ ಆಧುನಿಕ ಶೈಲಿಯವು. 48 ಇಂಚಿನ್ ಟಿವಿ, ಐಷಾರಾಮಿ ಸೋಫ, ಗೆಜೆಟ್‌ಗಳು ಹೀಗೆ ಪ್ರತಿಯೊಂದು ಆಧುನಿಕ ಸೌಕರ್ಯಗಳು ಇಲ್ಲಿ ಇವೆ. ಈ ಸಣ್ಣ ಹಳ್ಳಿಯಲ್ಲಿರುವ ಪ್ರತಿಯೊಂದು ಮನೆಯಲ್ಲೂ ಐಷಾರಾಮಿ ಕಾರುಗಳಿವೆ.

ದಿನಗೂಲಿಗೆ ದುಡಿಯುತ್ತಿದ್ದವರು

ದಿನಗೂಲಿಗೆ ದುಡಿಯುತ್ತಿದ್ದವರು

ಇಂದು ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿರುವ ಈ ರೈತರು ಹಿಂದೆ ದಿನಗೂಲಿಗಾಗಿ ದುಡಿಯುತ್ತಿದ್ದ ರೈರರಾಗಿದ್ದರು. 1972ರಲ್ಲಿ ಬರಗಾಲ ಬಂದ ನಂತರದಿಂದ ಜೀವನ ಬದಲಾಯಿತು. ಕೃಷಿ ಪಂದಾರಿ ಸ್ಕೀಮ್ ಅಡಿಯಲ್ಲಿ ನೀರು ಸಂಗ್ರಹಣ ಘಟಕವನ್ನು ಆರಂಭಿಸಲಾಯಿತು.

ದಾಳಿಂಬೆ ಬೆಳೆ

ದಾಳಿಂಬೆ ಬೆಳೆ

ಈ ನೀರಿನ ಕೊರತೆಯಿಂದಾಗಿ ಹಳ್ಳಿಗರು ದಾಳಿಂಬೆ ಗಿಡವನ್ನು ನೆಡಲು ಪ್ರಾರಂಭಿಸಿದರು. ಉತ್ತಮ ಬೆಳೆಯು ಬಂದಿತು. ಈಗ ಪ್ರತಿಯೊಬ್ಬ ರೈತನು ತನ್ನದೇ ಆದ ದಾಳಿಂಬೆಯ ತೋಟವನ್ನು ಹೊಂದಿದ್ದಾನೆ. ಅವರು ಬಂಗಲೆಗಳನ್ನು ತೋಟದ ನಡುವೆಯೆ ನಿರ್ಮಿಸಿದ್ದಾರೆ. ದಿನಗೂಲಿಯ ಮೂಲಕ 2 ರೂ. ಗೆ ದುಡಿಯುತ್ತಿದ್ದ ರೈತರು ಈಗ ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ.

ಇಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ, ಇಂಟರ್ನೆಟ್ ಗೊತ್ತೇ ಇಲ್ಲ, 4,440 ಮೀ ಎತ್ತರದಲ್ಲಿದೆ ಒಂದು ಪೋಸ್ಟ್ ಆಫೀಸ್ ಇಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ, ಇಂಟರ್ನೆಟ್ ಗೊತ್ತೇ ಇಲ್ಲ, 4,440 ಮೀ ಎತ್ತರದಲ್ಲಿದೆ ಒಂದು ಪೋಸ್ಟ್ ಆಫೀಸ್

ನೀರಿನ ಕೊಳವೆ

ನೀರಿನ ಕೊಳವೆ

ಈ ಹಳ್ಳಿಯಲ್ಲಿ ಸುಮಾರು 700ನೀರಿನ ಕೊಳಗಳಿವೆ ಪ್ರತಿಯೊಂ ದು ಕೊಳದಲ್ಲೂ 300 ಲೀ.ಗಿಂತಲೂ ಹೆಚ್ಚಿನ ನೀರು ಸಂಗ್ರಹಿಸಿಡಲಾಗುತ್ತದೆ 10 ಸಾವಿರ ಎಕರೆ ಭೂಮಿಯಲ್ಲಿ 8 ಸಾವಿರ ಎಕಲೆ ಭೂಮಿಯಲ್ಲಿ ವ್ಯವಸಾಯ ಮಾಡಲಾಗುತ್ತಿದೆ. ದಾಳಿಂಬೆ ಬೆಳೆಯಿಂದ ಉತ್ತಮ ಇಳುವರಿಯೂ ಬರುತ್ತಿದೆ. ಹಾಗಾಗಿ ಇಲ್ಲಿನ ಪ್ರತಿಯೊಬ್ಬರೂ ಉತ್ತಮ ಜೀವನ ಸಾಗಿಸುತ್ತಿದ್ದಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಅಂಜನೇಲ್‌ಗೆ ಯಾವುದೇ ರೈಲು ನಿಲ್ದಾಣಗಳಿಲ್ಲ. ಅದಕ್ಕೆ ಸಮೀಪವಿರುವ ರೈಲು ನಿಲ್ದಾಣಗಳೆಂದರೆ ಸಂಗೋಲ್ ರೈಲು ನಿಲ್ದಾಣ.
ಸಂಗೋಲ್ ಹಾಗೂ ಆಟ್‌ಪಡಿಯಿಂದ ಸಾಕಷ್ಟು ಬಸ್‌ಗಳು ಅಂಜನೇಲ್‌ಗೆ ಚಲಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X