
ನಲ್ಲತ್ತೂರು ತಮಿಳುನಾಡಿನಲ್ಲಿನ ಪ್ರಮುಖವಾದ ಪುಣ್ಯಕ್ಷೇತ್ರವಾದ ತಿರುತ್ತಣಿಗೆ ಸಮೀಪದಲ್ಲಿರುವ ಒಂದು ಚಿಕ್ಕದಾದ ಗ್ರಾಮ. ಇಲ್ಲಿರುವ ಆಂಜನೇಯಸ್ವಾಮಿಯನ್ನು ಸಾಕ್ಷಾತ್ತು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೂಹುರ್ತವನ್ನು ಇಟ್ಟ ಶ್ರೀ ಕೃಷ್ಣ ದೇವರಾಯರ ಗುರುವಾದ ವ್ಯಾಸರಾಯರು ಪ್ರತಿಷ್ಟಾಪಿಸಿದರು ಎಂದು ಹೇಳುತ್ತಾರೆ. ಈ ದೇವಾಲಯದಲ್ಲಿ ಆಂಜನೇಯನ ವಿಗ್ರಹವು ಉಳಿದ ಸ್ಥಳಗಳಿಗೆ ಹೋಲಿಸಿದರೆ ವಿಭಿನ್ನವಾಗಿ ಇರುವುದೇ ಅಲ್ಲದೆ, ಉತ್ತರ ದಿಕ್ಕಿಗೆ ಮುಖವನ್ನು ಮಾಡಿರುತ್ತದೆ.
ಈ ದರ್ಶನದಿಂದಾಗಿ ಶತ್ರುವಿನ ಮೇಲೆ ವಿಜಯದ ಜೊತೆಗೆ ಐಶ್ವರ್ಯವು ಕೂಡ ಒಲಿದುಬರುತ್ತದೆ ಎಂದು ಭಕ್ತರು ಅನೇಕ ಕಾಲದಿಂದ ನಂಬುತ್ತಾ ಬಂದಿದ್ದಾರೆ. ಹಾಗಾಗಿಯೇ ಕೇವಲ ತಮಿಳುನಾಡಿನಿಂದಲೇ ಅಲ್ಲದೇ ದೇಶದಲ್ಲಿನ ವಿವಿಧ ಪ್ರದೇಶಗಳಿಂದ ಕೂಡ ಹೆಚ್ಚಾಗಿ ಭಕ್ತರು ಇಲ್ಲಿಗೆ ಭೇಟಿ ನೀಡಿ ಸ್ವಾಮಿಯನ್ನು ದರ್ಶಿಸಿಕೊಳ್ಳುತ್ತಿರುತ್ತಾರೆ.
ಇಷ್ಟು ವಿಶೇಷತೆಯನ್ನು ಹೊಂದಿರುವ ಈ ದೇವಾಲಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆಯೋಣ.

1.ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ
ನಲ್ಲತ್ತೂರು ತಮಿಳುನಾಡಿನಲ್ಲಿನ ಪ್ರಮುಖವಾದ ಪುಣ್ಯಕ್ಷೇತ್ರವಾದ ತಿರುತ್ತಣಿಗೆ ಸಮೀಪದಲ್ಲಿರುವ ಒಂದು ಚಿಕ್ಕದಾದ ಗ್ರಾಮ. ಇಲ್ಲಿರುವ ಆಂಜನೇಯಸ್ವಾಮಿಯನ್ನು ಸಾಕ್ಷಾತ್ತು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೂಹುರ್ತವನ್ನು ಇಟ್ಟ ಶ್ರೀ ಕೃಷ್ಣ ದೇವರಾಯರ ಗುರುವಾದ ವ್ಯಾಸರಾಯರು ಪ್ರತಿಷ್ಟಾಪಿಸಿದರು ಎಂದು ಹೇಳುತ್ತಾರೆ.
ಹನುಮಂತನ ಭಕ್ತರಾದ ವ್ಯಾಸರಾಯರಿಗೆ ತೀವ್ರವಾದ ಖಾಯಿಲೆ ಬಂದಿರುತ್ತದೆ. ಎಷ್ಟೇ ಮಂದಿ ವೈದ್ಯರಲ್ಲಿ ತೋರಿಸಿದರೂ ಕೂಡ ಪ್ರಯೋಜನವಾಗುವುದಿಲ್ಲ. ಇದರಿಂದಾಗಿ ಪ್ರಾಣದ ಮೇಲೆ ಆಸೆಯನ್ನು ಬಿಟ್ಟು ಆಂಜನೇಯನನ್ನು ಪ್ರಾರ್ಥಿಸುತ್ತಿರುತ್ತಾನೆ. ತನ್ನ ಖಾಯಿಲೆ ಗುಣವಾದರೆ ದೇಶದ ಯಾವುದೇ ಭಾಗದಲ್ಲಿ ಇಲ್ಲದ ಹಾಗೆ ವಿಗ್ರಹವನ್ನು ಪ್ರತಿಷ್ಪಾಪಿಸಿ ದೇವಾಲಯವನ್ನು ನಿರ್ಮಾಣ ಮಾಡುತ್ತೇನೆ ಎಂದು ಪ್ರಾರ್ಥಿಸುತ್ತಾನೆ.

2.ವ್ಯಾಸರಾಯರು
ವಿಚಿತ್ರವಾಗಿ ಕೆಲವು ದಿನಗಳಲ್ಲಿಯೇ ವ್ಯಾಸರಾಯರ ಖಾಯಿಲೆಯು ಪೂರ್ತಿಯಾಗಿ ಗುಣವಾಯಿತಂತೆ. ಇದರಿಂದಾಗಿ ತಾನು ಹೇಳಿದ ಪ್ರಕಾರ ತನ್ನ ಜೀವನದಲ್ಲಿ ದೇಶ ವ್ಯಾಪಕವಾಗಿ 754 ಆಂಜನೇಯ ಸ್ವಾಮಿ ದೇವಾಲಯವನನು ನಿರ್ಮಾಣ ಮಾಡುತ್ತಾನೆ. ಅವುಗಳಲ್ಲಿ ಹೆಚ್ಚು ಭಾಗವು ದಕ್ಷಿಣಾದಿ ರಾಷ್ಟ್ರದಲ್ಲಿಯೇ ಇವೆ.
ಹಾಗೆ ನಿರ್ಮಾಣ ಮಾಡಿದ ದೇವಾಲಯಗಳಲ್ಲಿ ಒಂದು ನಲ್ಲತ್ತೂರು ಆಂಜನೇಯಸ್ವಾಮಿ ದೇವಾಲಯ. ಇನ್ನು ಈ ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದ ಒಂದು ಕಥೆಯು ಕೂಡ ಪ್ರಚಾರದಲ್ಲಿದೆ.
ವ್ಯಾಸರಾಯರ ಸೇವಕರು ತಿರುಪತಿಯಲ್ಲಿ ಒಂದು ದೇವಾಲಯವನ್ನು ನಿರ್ಮಾಣ ಮಾಡಿ ಅದರಲ್ಲಿ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಟಾಪಿಸಬೇಕು ಎಂದು ಅಂದುಕೊಳ್ಳುತ್ತಾರೆ. ಇದಕ್ಕೆ ಅವಶ್ಯಕವಾದ ವಿಗ್ರಹವನ್ನು ತಿರುತ್ತನಿಯಿಂದ ತೆಗೆದುಕೊಂಡು ಹೋಗುವ ಸಮಯದಲ್ಲಿ ನಲ್ಲತ್ತೂರು ಎಂಬಲ್ಲಿಗೆ ನಿಲ್ಲುತ್ತಾರಂತೆ. ಆ ಸಮಯದಲ್ಲಿ ವಿಗ್ರಹವನ್ನು ಅಲ್ಲಿನ ಒಂದು ಮರದ ಕೆಳಗೆ ಇಟ್ಟು ಸ್ವಲ್ಪ ಸಮಯ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ. ತದನಂತರ ತಿರುಪತಿಗೆ ತೆರಳಲು ಸಮಯವಾಗುತ್ತಿದೆ ಎಂದು ವಿಗ್ರಹವನ್ನು ಅಲ್ಲಿಂದ ಕದಲಿಸಲು ತೆರಳುತ್ತಾರೆ.

3.ಆಂಜನೇಯ ಸ್ವಾಮಿ ಕನಸ್ಸಿನಲ್ಲಿ ಕಾಣಿಸಿಕೊಂಡು
ಅವರು ಎಷ್ಟೇ ಪ್ರಯತ್ನ ಮಾಡಿದರು ಕುಡ ಅಲ್ಲಿನಿಂದ ವಿಗ್ರಹ ಮಾತ್ರ ಒಂದು ಇಂಚು ಕೂಡ ಕದಲುವುದಿಲ್ಲ. ಅಷ್ಟೇ ಅಲ್ಲ, ಅದೇ ಸಮಯದಲ್ಲಿ ವ್ಯಾಸರಾಯರಿಗೆ ಆಂಜನೇಯಸ್ವಾಮಿ ಕನಸ್ಸಿನಲ್ಲಿ ಕಾಣಿಸಿ ತಾನು ನಲ್ಲತ್ತೂರಿನಲ್ಲಿ ಇರುತ್ತೇನೆ ಎಂದು ತನಗೆ ಅಲ್ಲಿ ದೇವಾಲಯವನ್ನು ನಿರ್ಮಾಣ ಮಾಡು ಎಂದು ಸೂಚಿಸುತ್ತಾನೆ. ಹಾಗೆ ನಲ್ಲತ್ತೂರಿನಲ್ಲಿ ಆಂಜನೇಯಸ್ವಾಮಿಯ ದೇವಾಲಯವು ನಿರ್ಮಾಣವಾಯಿತು.
ಕೆಲವು ಕಾಲದ ನಂತರ ಈ ದೇವಾಲಯಕ್ಕೆ ಪೂಜಾದಿ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಕಾಲಕ್ರಮೇಣ ಈ ದೇವಾಲಯವು ಶಿಥಿಲವಾಗುತ್ತಾ ವಿಗ್ರಹವು ಕೂಡ ಮರಳಿನಲ್ಲಿ ಮುಚ್ಚುತ್ತಾ ಸಾಗಿದೆ.

4.ಚಕ್ರವರ್ತಿ ಎಂಬ ವ್ಯಾಪಾರಿಗೆ
ಈ ಕ್ರಮದಲ್ಲಿ ಕೆಲವು ಕಾಲದ ನಂತರ ಸ್ಥಳೀಯವಾಗಿದ್ದ ಚಕ್ರವರ್ತಿ ಎಂಬ ವ್ಯಾಪಾರಿ, ಆತನ ಪತ್ನಿಗೆ ಒಮ್ಮೆ ಆಂಜನೇಯಸ್ವಾಮಿಯು ಕನಸ್ಸಿನಲ್ಲಿ ಕಾಣಿಸಿಕೊಂಡು ತಾನು ಭೂಮಿಯಲ್ಲಿ ಅಡಗಿಕೊಂಡಿದ್ದೇನೆ, ತನ್ನನ್ನು ಬೆಳಕಿಗೆ ತಂದು ಪೂಜಿಸು ಎಂದು ಸೂಚಿಸುತ್ತಾನೆ. ಇದರಿಂದಾಗಿ ಆ ವಿಗ್ರಹವನ್ನು ಹುಡುಕಿ ಬೆಳಕಿಗೆ ತೆಗೆಸಿ ಪ್ರಸ್ತುತವಿರುವ ದೇವಾಲಯವನ್ನು ನಿರ್ಮಾಣ ಮಾಡಿದರು. ಈ ಘಟನೆ ನಡೆದು ಕೆಲವು ದಿನಗಳಲ್ಲಿಯೇ ಅವರ ವ್ಯಾಪಾರವು 3 ಪಟ್ಟು ಹೆಚ್ಚಾಗಿ, ಸಕಲ ಐಶ್ವರ್ಯವಂತರಾಗಿ ಮಾರ್ಪಾಟಾದರು ಎನ್ನಲಾಗಿದೆ.

5.ಬಾಲಾಂಜನೇಯಸ್ವಾಮಿ
ಇಲ್ಲಿರುವ ಆಂಜನೇಯಸ್ವಾಮಿಯ ಮುಖವು ಚಿಕ್ಕಬಾಲಕನ ಮುಖವನ್ನು ಹೋಲುತ್ತದೆ. ಅದ್ದರಿಂದಲೇ ಇಲ್ಲಿನ ಸ್ವಾಮಿಯನ್ನು ಬಾಲಾಂಜನೇಯಸ್ವಮಿ ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಈ ವಿಗ್ರಹದ ಬಾಲದ ಕೊನೆಯಲ್ಲಿ ಅಮೂಲ್ಯವಾದ ರತ್ನ ಇತ್ತು ಎನ್ನಲಾಗಿದೆ. ಪ್ರಸ್ತುತ ಆ ರತ್ನವನ್ನು ಯಾರಾದರೂ ಕದ್ದಿರಬಹುದು ಎಂದು ಅನುಮಾನಿಸಲಾಗಿದೆ. ಇಲ್ಲಿನ ಆಂಜನೇಯಸ್ವಾಮಿ ಉತ್ತರ ದಿಕ್ಕಿನಲ್ಲಿರುತ್ತದೆ. ಇಲ್ಲಿಗೆ ತಿರುಪತಿ ಉತ್ತರ ದಿಕ್ಕಿನಲ್ಲಿರುವುದು ಗಮನಾರ್ಹ.
ಸ್ವಾಮಿಯ ಬಲಭಾಗದಲ್ಲಿ ತಾಮ್ರದಿಂದ ತಯಾರಿಸಿದ ಅಭಯಮುದ್ರೆಯನ್ನು ಹೊಂದಿದ್ದರೆ, ಮತ್ತೊಂದು ಕೈಯಲ್ಲಿ ತಾವರೆಯ ಹೂವುನ್ನು ಹಿಡಿದ್ದಿದ್ದಾನೆ. ತಾವರೆ ಹೂವನ್ನು ಜ್ಞಾನಕ್ಕೆ, ಐಶ್ವರ್ಯಕ್ಕೆ, ವಿಜಯಕ್ಕೆ ಚಿಹ್ನೆ. ಹಾಗಾಗಿಯೇ ಸ್ವಾಮಿಯನ್ನು ಆರಾಧಿಸಿದರೆ ಅವೆಲ್ಲವೂ ಲಭಿಸುತ್ತದೆ ಎಂದು ಭಕ್ತರು ನಂಬುತ್ತಾರೆ.

6.ತಿರುತ್ತಣಿಯಿಂದ 182 ಕಿ.ಮೀ
ಪ್ರತಿ ಶುಕ್ರ ಹಾಗು ಶನಿವಾರದಂದು, ಶ್ರೀರಾಮನವಮಿ, ಉತ್ಸವಗಳ ಸಂದರ್ಭದಲ್ಲಿ, ಹನುಮಜಯಂತಿಯ ಸಂದರ್ಭಗಳಲ್ಲಿ ನಡೆಯುತ್ತವೆ. ತಿರುತ್ತಣಿಯಿಂದ ನಲ್ಲತ್ತೂರಿಗೆ 182 ಕಿ.ಮೀ ದೂರದಲ್ಲಿರುತ್ತದೆ. ಪ್ರಯಾಣ ಸಮಯವು 4 ಗಂಟೆ. ಸರ್ಕಾರಿ ಬಸ್ಸುಗಳು ಇದ್ದರು ಕೂಡ ಖಾಸಗಿ ಟ್ಯಾಕ್ಸಿಯ ಮೂಲಕ ತೆರಳುವುದು ಉತ್ತಮ. ನಲ್ಲತ್ತೂರಿನಲ್ಲಿ ವಸತಿ ಸೌಲಭ್ಯ ಅಷ್ಟಾಗಿ ಉತ್ತಮವಾಗಿಲ್ಲ. ಹಾಗಾಗಿಯೇ ದೇವಾಲಯ ದರ್ಶನದ ನಂತರ ಮತ್ತೆ ತಿರುತ್ತಣಿಗೆ ಮರಳಲೇಬೇಕು.