• Follow NativePlanet
Share
» »ಭಾರತದೇಶದಲ್ಲಿನ ಈ ದೇವಾಲಯಗಳು ನಿಮಗೆ ಗೊತ್ತ?

ಭಾರತದೇಶದಲ್ಲಿನ ಈ ದೇವಾಲಯಗಳು ನಿಮಗೆ ಗೊತ್ತ?

Posted By:

ಭಾರತದೇಶದಲ್ಲಿನ ದೇವಾಲಯಗಳನ್ನು ಹೆಚ್ಚಾಗಿ ರಾಜವಂಶಿಕರು ನಿರ್ಮಾಣ ಮಾಡಿರುವುದೇ. ಇವುಗಳಲ್ಲಿ ಕೆಲವು ಮಾತ್ರ ಅದ್ಭುತವಾದ ಕಟ್ಟಡಗಳು, ವಿಶ್ವ ಪಾರಂಪರಿಕ ಸಂಪತ್ತಾಗಿ ನಿಂತಿದೆ. ಭಾರತದಲ್ಲಿನ ಕೆಲವು ಪುರಾತನವಾದ ಮತ್ತು ಅದ್ಭುತವಾದ ದೇವಾಲಯದ ನಿರ್ಮಾಣಗಳನ್ನು ಒಮ್ಮೆ ಗಮನಿಸಿದರೆ...!

ಭಾರತದೇಶದಲ್ಲಿನ ಆಧ್ಯಾತ್ಮಿಕ ಕೇಂದ್ರಗಳಿಗೆ, ದೇವಾಲಯಗಳಿಗೇನು ಕಡಿಮೆ ಇಲ್ಲ. ಆ ಕಾಲದ ರಾಜರು, ರಾಜವಂಶಿಗರು ಅನೇಕ ದೇವಾಲಯವನ್ನು ನಿರ್ಮಾಣ ಮಾಡಿ ಪೋಷಣಾರ್ಥವಾಗಿ ಭೂಮಿಯನ್ನು ನೀಡುತ್ತಿದ್ದರು. ಆ ದಿನಗಳಲ್ಲಿ ಅತ್ಯಧಿಕ ಸಂಪತ್ತನ್ನು ಹೊಂದಿರುವ ದೇವಾಲಯವಾಗಿಯೂ ಕೂಡ ಇರುತ್ತಿತ್ತು. ಹಾಗಾದರೆ ಭಾರತದಲ್ಲಿನ ಆ ಪ್ರಖ್ಯಾತವಾದ ದೇವಾಲಯಗಳು ಯಾವುವು? ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಲೇಖನದ ಮೂಲಕ ತಿಳಿಯೋಣ.

1.ಬೃಹದೀಶ್ವರ ದೇವಾಲಯ

1.ಬೃಹದೀಶ್ವರ ದೇವಾಲಯ

PC:Nara J

ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯವನ್ನು ಚೋಳ ರಾಜನಾದ ರಾಜರಾಜ ಚೋಳನು ಕ್ರಿ.ಶ 1002 ರಲ್ಲಿ ನಿರ್ಮಾಣ ಮಾಡಿದನು. ಇದರಲ್ಲಿ ಪ್ರಧಾನವಾದ ದೈವವೆಂದರೆ ಮಹಾಶಿವನು. ಈ ದೇವಾಲಯವು ಅಷ್ಟದೀಪ ಕಲ್ಪಗಳ ವಿಗ್ರಹವನ್ನು ಹೊಂದಿರುವ ದೇವಾಲಯಗಳಲ್ಲಿ ಒಂದು. ಈ ಸುಂದರವಾದ ದೇವಾಲಯವು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಕೊಂಡಿದೆ.

2.ಕೈಲಾಸನಾಥ ದೇವಾಲಯ

2.ಕೈಲಾಸನಾಥ ದೇವಾಲಯ

PC : Travelling Slacker

ಕೈಲಾಸನಾಥ ದೇವಾಲಯವು ಔರಂಗಾಬಾದ್ ಪಟ್ಟಣಕ್ಕೆ ಕೇವಲ 30 ಕಿ.ಮೀ ದೂರದಲ್ಲಿರುವ ಎಲ್ಲೊರಾ ಗುಹೆಗಳಲ್ಲಿದೆ. ದೊಡ್ಡ ಕಲ್ಲು ಬಂಡೆಯಿಂದ ಕೆತ್ತನೆಯನ್ನು ಮಾಡಿದ ಈ ಗುಹೆಗಳಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮದ ದೇವಾಲಯಗಳು, ಸನ್ಯಾಸಿ ಆಶ್ರಮಗಳು ಇವೆ. 16 ನೇ ಗುಹೆಯಲ್ಲಿರುವ ಕೈಲಾಸನಾಥ ದೇವಾಲಯವು 60.000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಿದರು. ಕೈಲಾಸನಾಥ ದೇವಾಲಯವು ಪ್ರಪಂಚದಲ್ಲಿಯೇ ಅತಿ ದೊಡ್ಡದಾದ ಏಕಶಿಲಾ ದೇವಾಲಯವಾಗಿದೆ.

3.ಚೆನ್ನಕೇಶವ ದೇವಾಲಯ

3.ಚೆನ್ನಕೇಶವ ದೇವಾಲಯ

PC:Dineshkannambadi

ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ಧಿಯನ್ನು ಹೊಂದಿರುವ ಚೆನ್ನಕೇಶವ ದೇವಾಲಯವು ಬೇಲೂರಿನಲ್ಲಿದೆ. ಈ ದೇವಾಲಯವನ್ನು ಮೃದುವಾದ ಕಲ್ಲನ್ನು ಉಪಯೋಗಿಸಿ ನಿರ್ಮಾಣ ಮಾಡಿದ್ದಾರೆ. ಹೊಯ್ಸಳ ವಿಷ್ಣುವರ್ಧನನು ಕ್ರಿ.ಶ 11 ನೇ ಶತಮಾನದಲ್ಲಿ ನಿರ್ಮಾಣ ಮಾಡಿದನು. ವಿಜಯನಗರ ಕಾಲದಲ್ಲಿಯೇ ದೇವಾಲಯದ ರಾಜಗೋಪುರಗಳು ನಿರ್ಮಾಣ ಮಾಡಲಾಯಿತು.

4.ತುಂಗನಾಥ ಮಂದಿರ

4.ತುಂಗನಾಥ ಮಂದಿರ

PC: Wikipedia

ತುಂಗನಾಥ ಮಂದಿರ, ಉತ್ತರಾಖಂಡ ರಾಜ್ಯದ ಚೋಪ್ತದಲ್ಲಿದೆ. ಈ ದೇವಾಲಯವು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಶಿವಾಲಯವಾಗಿ ಹೆಸರುವಾಸಿಯಾಗಿದೆ. ಇತಿಹಾಸದ ಪ್ರಕಾರ, ಪಾಂಡವರಲ್ಲಿ ಒಬ್ಬನಾದ ಅರ್ಜುನನು ಇದನ್ನು ನಿರ್ಮಾಣ ಮಾಡಿದನು. ದೇವಾಲಯದಲ್ಲಿ ತುಂಗನಾಥ (ಪಿಕ್ಸ್ ಲಾರ್ಡ್) ಅಲ್ಲದೇ ಇತರ ದೇವತಾ, ದೇವತೆಗಳ ಪ್ರತಿಮೆಗಳು ಕೂಡ ಇಲ್ಲಿವೆ.

5.ಆದಿ ಕುಂಭೇಶ್ವರರ್ ದೇವಾಲಯ

5.ಆದಿ ಕುಂಭೇಶ್ವರರ್ ದೇವಾಲಯ

PC:Arian Zwegers

ಆದಿ ಕುಂಭೇಶ್ವರರ್ ದೇವಾಲಯವು ತಮಿಳುನಾಡಿನಲ್ಲಿ ಕುಂಭಕೋಣಂ ಪಟ್ಟಣದಲ್ಲಿದೆ. ಇಲ್ಲಿನ ಪ್ರಧಾನವಾದ ದೈವ ಶಿವ. ಮಹಾಶಿವನನ್ನೇ ಕುಂಬೇಶ್ವರರ್ ಎಂದು ಕೂಡ ಕರೆಯುತ್ತಾರೆ. ಈ ದೇವಾಲಯವನ್ನು ಚೋಳರು ನಿರ್ಮಾಣ ಮಾಡಿದ ಹಾಗೆ ಹೇಳುತ್ತಾರೆ. 9 ಅಂತಸ್ತಿನ ಎತ್ತರವನ್ನು ಹೊಂದಿರುವ ರಾಜಗೋಪುರವು ದೇವಾಲಯದ ಪ್ರಧಾನವಾದ ಆಕರ್ಷಣೆಯಾಗಿದೆ.

6.ಜಗತ್ ಪಿತ ಬ್ರಹ್ಮೇಶ್ವರ ಮಂದಿರ

6.ಜಗತ್ ಪಿತ ಬ್ರಹ್ಮೇಶ್ವರ ಮಂದಿರ

PC:Redtigerxyz

ಸೃಷ್ಟಿಕರ್ತ ಬ್ರಹ್ಮನಿಗೆ ದೇವಾಲಯಗಳು ಇರುವುದು ಅಪರೂಪ. ರಾಜಸ್ಥಾನದಲ್ಲಿನ ಪುಷ್ಕರ್ ಅವುಗಳಲ್ಲಿ ಒಂದು. 2000 ವರ್ಷಗಳ ಪುರಾತನವಾದ ಈ ದೇವಾಲಯವು ಕ್ರಿ.ಶ 14 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. 4 ಮುಖವನ್ನು ಹೊಂದಿರುವ ಹಾಗು ಕಮಲದಲ್ಲಿ ಕುಳಿತುಕೊಂಡಿರುವ ಬ್ರಹ್ಮದೇವನಿಗೆ ಒಂದು ಪಕ್ಕದಲ್ಲಿ ಗಾಯತ್ರಿ ದೇವಿ, ಮತ್ತೊಂದು ಭಾಗದಲ್ಲಿ ಸಾವಿತ್ರಿ ದೇವಿಗಳ ಚಿತ್ರವಿದೆ.

7.ಶ್ರೀ ವರದರಾಜ ಪೆರುಮಾಳ್ ದೇವಾಲಯ

7.ಶ್ರೀ ವರದರಾಜ ಪೆರುಮಾಳ್ ದೇವಾಲಯ

PC:Ssriram mt

ತಿರುನಲ್ವೆಲಿಯಲ್ಲಿ ಶ್ರೀ ವರದರಾಜ ಪೆರುಮಾಳ್ ದೇವಾಲಯವನ್ನು ಕೃಷ್ಣವರ್ಮ ರಾಜ ನಿರ್ಮಾಣ ಮಾಡಿದ್ದಾರೆ. ದೇವಾಲಯ ತಮಿತಬರನಿ ನದಿ ತೀರದಲ್ಲಿದೆ. ಈ ದೇವಾಲಯದಲ್ಲಿ ಪ್ರಧಾನವಾದ ಮೂಲ ವಿಗ್ರಹವನ್ನು "ಮೂಲವಾರ್" ಎಂದು ಕರೆಯುತ್ತಾರೆ. ಶ್ರೀ ವರದರಾಜ ಪೆರುಮಾಳ್ ದೇವಾಲಯದ ಪ್ರವೇಶ ಸಮಯವು ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಹಾಗು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಭೇಟಿ ನೀಡಬಹುದು.

8.ಸೂರ್ಯ ದೇವಾಲಯ

8.ಸೂರ್ಯ ದೇವಾಲಯ

PC:Tetraktys

ಭುವನೇಶ್ವರಕ್ಕೆ 60 ಕಿ.ಮೀ ದೂರದಲ್ಲಿರುವ ಕೊಣಾರ್ಕ್ ಸ್ಮಾರಕ ಕಟ್ಟಡಗಳು ಇರುವ ಸುಂದರವಾದ ಪಟ್ಟಣ. ಇಲ್ಲಿನ ಅತ್ಯಂತ ಆಕರ್ಷಣೀಯವಾದ ಸೂರ್ಯ ದೇವಾಲಯವನ್ನು ನೋಡುವುದಕ್ಕೆ ಪ್ರಪಂಚ ವ್ಯಾಪಕವಾಗಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇದನ್ನು ಕ್ರಿ. ಶ13 ನೇ ಶತಮಾನದಲ್ಲಿ ನರಸಿಂಹ ದೇವ ನಿರ್ಮಾಣ ಮಾಡಿದರು.

9.ದಿಲ್ವಾರ ಜೈನ ದೇವಾಲಯ

9.ದಿಲ್ವಾರ ಜೈನ ದೇವಾಲಯ

PC:Malaiya

ದಿಲ್ವಾರ್ ಜೈನ ದೇವಾಲಯವು ರಾಜಸ್ಥಾನದಲ್ಲಿನ ಮೌಂಟ್ ಅಬು ಸಮೀಪದಲ್ಲಿದೆ. ರಾಜಸ್ಥಾನದಲ್ಲಿ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಜೈನ ದೇವಾಲಯವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದೆ. ಈ ದೇವಾಲಯವನ್ನು ಬಿಳಿ ಅಮೃತಶಿಲೆಯಿಂದ ಅತ್ಯಂತ ಸುಂದರವಾಗಿ ಕೆತ್ತನೆ ಮಾಡಿದ್ದಾರೆ.

10.ಪಂಚ ರತ್ನ ದೇವಾಲಯ

10.ಪಂಚ ರತ್ನ ದೇವಾಲಯ

PC:Jonoikobangali

ಪಶ್ಚಿಮ ಬೆಂಗಾಲ್‍ನಲ್ಲಿನ ಬಂಕೂರಾ ಪಟ್ಟಣದಲ್ಲಿ ಪಂಚ ರತ್ನ ದೇವಾಲಯವಿದೆ. ಇದನ್ನು ಕ್ರಿ.ಶ 1643 ವರ್ಷದಲ್ಲಿ ರಾಜ ರಘುನಾಥ ಸಿಂಘ ನಿರ್ಮಾಣ ಮಾಡಿದರು. ಸುಣ್ಣ ಹಾಗು ಇಟ್ಟಿಗೆಗಳ ಸಹಾಯದಿಂದ ನಿರ್ಮಾಣ ಮಾಡಿದ ಈ ಅದ್ಭುತ ಕಟ್ಟಡ ಬೆಂಗಾಲ್ ಪಾರಂಪರಿಕ ಸಂಪತ್ತಾಗಿದೆ. ದೇವಾಲಯದ ಗೋಡೆಯ ಮೇಲೆ ಧಾರ್ಮಿಕ, ಸಾಂಸ್ಕøತಿಕ ಕಥೆಗಳನ್ನು ಕೂಡ ಕಾಣಬಹುದು.

11.ಬಾದಾಮಿ ಗುಹೆ

11.ಬಾದಾಮಿ ಗುಹೆ

PC:Nilmoni Ghosh

ಬಾದಾಮಿ ಕರ್ನಾಟಕ ರಾಜ್ಯದಲ್ಲಿನ ಒಂದು ಪುರಾತನವಾದ ಪಟ್ಟಣ. ಚಾಳುಕ್ಯರು ಈ ಪ್ರದೇಶವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದರು. ಬಾದಾಮಿ ಹಾಗು ಅದರ ಗುಹೆಗಳು ಪ್ರಸಿದ್ಧಿ ಹೊಂದಿದೆ. ಇದರಲ್ಲಿ ಒಟ್ಟು 4 ಗುಹೆಗಳು ಇವೆ.

12.ವಿಠಲ ದೇವಾಲಯ

12.ವಿಠಲ ದೇವಾಲಯ

PC:Vinoth Chandar

ವಿಠಲ ದೇವಾಲಯವು ವಿಜಯನಗರ ಸಾಮ್ರಾಜ್ಯಕ್ಕೆ ರಾಜಧಾನಿಯಾದ ಹಂಪಿಯಲ್ಲಿದೆ. ಇದು ವಿಷ್ಣುಮೂರ್ತಿ ದೇವಾಲಯವಾಗಿದೆ. ಕ್ರಿ.ಶ 16 ನೇ ಶತಮಾನದಲ್ಲಿ 2 ನೇ ದೇವರಾಯ ರಾಜ ಈ ದೇವಾಲಯವನ್ನು ತುಂಗಭದ್ರ ನದಿ ತೀರದಲ್ಲಿ ನಿರ್ಮಾಣ ಮಾಡಿದನು. ಈ ದೇವಾಲಯದಲ್ಲಿ ಯಾವುದೇ ಸ್ತಂಭವನ್ನು ಮುಟ್ಟಿದರು ಕೂಡ ಸಂಗೀತವನ್ನು ಹಾಡುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ