Search
  • Follow NativePlanet
Share
» »ಕಣ್ಣೋಟದಿಂದಲೆ ಮನಸೆಳೆವ ಅಣ್ಣಾಮಲೈ ಶ್ರೇಣಿ

ಕಣ್ಣೋಟದಿಂದಲೆ ಮನಸೆಳೆವ ಅಣ್ಣಾಮಲೈ ಶ್ರೇಣಿ

By Vijay

ಪಶ್ಚಿಮ ಹಾಗೂ ಪೂರ್ವ ಘಟ್ಟಗಳು ಸಂಧಿಸುವ ತಮಿಳುನಾಡಿನ ಬೆಟ್ಟ ಪ್ರದೇಶಗಳು ಹಾಗೂ ಕೇರಳದಲ್ಲಿ ಆವರಿಸಿರುವ ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಅನೇಕ ನಯನ ಮನೋಹರವಾದ ತಾಣಗಳಿದ್ದು ಪ್ರವಾಸಿಗರನ್ನು, ಪ್ರಕೃತಿ ಪ್ರೀಯರನ್ನು ಕೈಬಿಸಿ ಕರೆಯುವಂತಿವೆ.

ಇಲ್ಲಿನ ದಟ್ಟವಾದ ಕಾಡುಗಳು, ಹಚ್ಚ ಹಸಿರಿನ ಸಸ್ಯ ರಾಶಿ, ವೈವಿಧ್ಯಮಯ ಜೀವಸಂಪತ್ತು, ತಾಜಾ ನೀರಿನ ಕೆರೆ-ತೊರೆಗಳು ಸಹಜ ನೈಸರ್ಗಿಕ ರಚನೆಗಳಾಗಿದ್ದು ಪ್ರವಾಸಿಗರನ್ನು ಸದಾ ಆಕರ್ಷಿಸುತ್ತವೆ. ಹೀಗಾಗಿ ತಮಿಳುನಾಡು ಹಾಗೂ ಕೇರಳದ ಗಡಿಗಳಲ್ಲಿ ಸಾಕಷ್ಟು ಸೃಷ್ಟಿ ಸೌಂದರ್ಯದ ತಾಣಗಳಿವೆ.

ನಿಮಗಿಷ್ಟವಾಗಬಹುದಾದ : ಪೂರ್ವ ಘಟ್ಟಗಳ ಮಾದಕ ಆಕರ್ಷಣೆಗಳು

ಅಂತಹ ಕೆಲವು ವಿಶೇಷವಾದ ಸ್ಥಳಗಳ ಪೈಕಿ ಈ ಎರಡೂ ಜಿಲ್ಲೆಗಳ ಗಡಿಗಳಲ್ಲಿ ವಿಸ್ತಾರವಾಗಿ ವ್ಯಾಪಿಸಿಕೊಂಡಿರುವ ಅಣ್ಣಾಮಲೈ ಪರ್ವತ ಶ್ರೇಣಿಗಳ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಆನಮಲೈ, ಆನಮುಡಿ ಎಂದೆಲ್ಲ ಕರೆಯಲ್ಪಡುವ ಈ ಪರ್ವತ ಶ್ರೇಣಿಯು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ವಿಸ್ತಾರವಾಗಿ ಹಬ್ಬಿಕೊಂಡಿರುವ ಈ ಪರ್ವತ ಶ್ರೇಣಿಯು ಜೀವ ಸಂಕುಲ ಹಾಗೂ ಸಸ್ಯ ಸಂಪನ್ಮೂಲಗಳಿಂದ ಸಾಕಷ್ಟು ಶ್ರೀಮಂತವಾಗಿದ್ದು ಅಧ್ಯನಕಾರರನ್ನು, ಸಸ್ಯ ಶಾಸ್ತ್ರೀಯ, ಪ್ರಾಣಿ ಶಾಸ್ತ್ರೀಯ ವಿಜ್ಞಾನಿಗಳನ್ನು ಹಾಗೂ ಪ್ರಕೃತಿಪ್ರಿಯ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ.

ಚಿತ್ರಕೃಪೆ: Thangaraj Kumaravel

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಪಶ್ಚಿಮಘಟ್ಟದ ಈ ಅದ್ಭುತ ಪರ್ವತ ಶ್ರೇಣಿಗೆ ಹೆಸರೂ ಸಹ ವಿಶೇಷವಾಗಿ ಬಂದಿದೆ. ಅಣ್ಣಾಮಲೆ ಎಂಬ ಹೆಸರು ತಮಿಳು ಮತ್ತು ಮಲಯಾಳಂ ಭಾಷೆಯ ಆನೈ ಎಂದರೆ ಆನೆ ಎಂಬುದರಿಂದಲೂ ಮಲೈ ಎಂದರೆ ಮಲೆ ಅಥವಾ ಕಾಡು ಎಂಬ ಶಬ್ಧಗಳಿಂದ ಉತ್ಪತ್ತಿಯಾಗಿದೆ.

ಚಿತ್ರಕೃಪೆ: Marcus334

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಈ ಸುಂದರ ಪರ್ವತ ಶ್ರೇಣಿಯ ಅತಿ ಎತ್ತರದ ಶಿಖರವೆಂದರೆ ಆನೆಮುಡಿ ಶಿಖರ. ಇದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಪಶ್ಚಿಮ ಘಟ್ಟದ ಈ ಪ್ರದೇಶವನ್ನು ಇತರ ಪ್ರದೇಶಗಳೊಂದಿಗೆ ವಿಶ್ವ ಪರಂಪರೆಯ ತಾಣವೆಂದು ಘೋಷಿಸುವ ಆಅಯ್ಕೆ ಸಮೀತಿಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಚಿತ್ರಕೃಪೆ: D momaya

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಈ ಅದ್ಭುತವಾದ ಪರ್ವತ ಶ್ರೇಣಿಯ ಸುತ್ತಮುತ್ತಲು ಏಳು ಬಗೆಯ ಕಾಡುಗಳನ್ನು ಕಾಣಬಹುದಾಗಿದೆ. ಅಲ್ಲದೆ ಕೆಳ ಸ್ತರದ ಭೂಪ್ರದೇಶಗಳಲ್ಲಿ ಸಾಕಷ್ಟು ಚಹಾ ಹಾಗೂ ಕಾಫಿ ತೋಟಗಳು ನಿರ್ಮಾಣಗೊಂಡು ಪ್ರದೇಶದ ಜನರಿಗೆ ವಾಣಿಜ್ಯಕರ್ವಾಗಿ ಅನುಕೂಲಕರವಾಗಿ ಮಾಡಿಕೊಟ್ಟಿದೆ.

ಚಿತ್ರಕೃಪೆ: Sankara Subramanian

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಈ ಪರ್ವತ ಶ್ರೇಣಿಯು ಚಿನ್ನಾರ್, ಪರಾಂಬಿಕುಲಂ, ಎರವಿಕುಲಂ ಹೀಗೆ ಹಲವಾರು ವನ್ಯಧಾಮಗಳಿಗೆ ಆಶ್ರಯ ಒದಗಿಸಿದ್ದು ಪ್ರಾಣಿ ಸಂಕುಲಗಳಿಂದ ಸಂಪದ್ಭರಿತವಾಗಿದೆ. ಆನೆಗಳು, ಚಿರತೆ, ಹುಲಿ, ಪ್ಯಾಂಗೋಲಿನ್, ಕರಡಿ, ಜಿಂಕೆ, ಗೌರ್, ಮಂಗ, ಮೊಸಳೆ, ಹಾರ್ನ್ ಬಿಲ್ ಹಕ್ಕಿ ಹೀಗೆ ಅನೇಕ ಬಗೆಯ ಜೀವಿಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Sankara Subramanian

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಅಪರೂಪವಾಗಿ ಕಂಡುಬರುವ ಬೂದು ಬಣ್ಣದ ಹಾರ್ನ್ ಬಿಲ್ ಹಕ್ಕಿ.

ಚಿತ್ರಕೃಪೆ: Sankara Subramanian

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಅಣ್ಣಮಲೈ ಬೆಟ್ಟಗಳು ಚಾರಣಗಳಂತಹ ಪ್ರವಾಸಿ ಚಟುವಟಿಕೆಗೆ ಹೆಚ್ಚು ಜನಪ್ರೀಯವಾಗಿದೆ. ಮಳೆಗಾಲದಲ್ಲಿ ಚಾರಣ ಕಷ್ಟಕರವಾಗಿದ್ದರೂ ಅತ್ಯದ್ಭುತವಾದ ಅನುಭವ ನೀಡುತ್ತದೆ. ಇದರ ಹೊರತಾಗಿ ಅಕ್ಟೋಬರ್ ನಿಂದ ಮೇ ಮಧ್ಯದವರೆಗಿನ ಸಮಯ ಇಲ್ಲಿಗೆ ಭೆಟಿ ನೀಡಲು ಅನುಕುಲಕರವಾಗಿದೆ.

ಚಿತ್ರಕೃಪೆ: Thangaraj Kumaravel

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ರಾಜ್ಯ ಹೆದ್ದಾರಿ ಸಂಖ್ಯೆ 17 ಈ ಪರ್ವತ ಶ್ರೇಣಿಯ ಮುಲಕ ಹಾದು ಹೋಗಿದೆ. ಉಡುಮಾಳಪೇಟ್ ಹಾಗೂ ಮುನ್ನಾರ್ ಮಧ್ಯದಲ್ಲಿನ ರಸ್ತೆ ಮಾರ್ಗವು ಅಣ್ಣಮಲೈ ಮೂಲಕ ಹಾದು ಹೋಗಿರುವುದರಿಂದ ಇದನ್ನು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Prateek Rungta

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿಯ ಭವ್ಯ ನೋಟ.

ಚಿತ್ರಕೃಪೆ: Prateek Rungta

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿಯ ವ್ಯಾಪ್ತಿಯಲ್ಲಿ ಬರುವ ಅಮರಾವತಿ ನದಿ ಜಲಾಶಯದ ವಿಹಂಗಮ ನೋಟ.

ಚಿತ್ರಕೃಪೆ: Dhruvaraj S

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿಗಳಲ್ಲಿರುವ ಧಾರ್ಮಿಕ ಮಹತ್ವವುಳ್ಳ ಅರುಣಾಚಲ ಬೆಟ್ಟ.

ಚಿತ್ರಕೃಪೆ: Poetseer

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈನಲ್ಲಿರುವ ಹುಲಿ ಮೀಸಲು ಪ್ರದೇಶ.

ಚಿತ್ರಕೃಪೆ: PP Yoonus

ಅಣ್ಣಾಮಲೈ ಪರ್ವತ ಶ್ರೇಣಿ:

ಅಣ್ಣಾಮಲೈ ಪರ್ವತ ಶ್ರೇಣಿ:

ಇದೊಂದು ವಿಶಿಷ್ಟ ರೀತಿಯ ಅಣಬೆ ಪ್ರಕಾರ. ಅಣ್ಣಾಮಲೈ ಪರ್ವತ ಶ್ರೇಣಿಗಳಲ್ಲಿ ಚಾರಣ ಮಾಡುವಾಗ ನಿಮ್ಮ ಅದೃಷ್ಟವಿದ್ದಲ್ಲಿ ನಿಮಗೆ ಕಾಣಸಿಗಬಹುದು.

ಚಿತ್ರಕೃಪೆ: PJeganathan

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more