» » ಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿ

ಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿ

Written By:

ನಮ್ಮ ಭಾರತ ದೇಶ ಅತ್ಯಂತ ಸುಂದರವಾದ ದೇಶ. ನಮ್ಮ ಸಂಸ್ಕøತಿಯೇ ಆಗಲಿ, ನಮ್ಮ ಭೌಗೋಳಿಕವೇ ಆಗಲಿ ಅದಕ್ಕೆ ಆದರದೇ ಆದ ಮಹತ್ವವಿದೆ. ಅದೇನೆ ಇರಲಿ ಭಾರತದಲ್ಲಿ ಹುಟ್ಟಿರುವ ನಾವೇ ಧನ್ಯ ಎಂಬ ಭಾವ ನಮ್ಮಲ್ಲಿ ಉಂಟಾಗುತ್ತದೆ.

ಕೆಲವು ಸ್ಥಳಗಳ ಬಗ್ಗೆ ಮಾತ್ರ ನಮಗೆ ತಿಳಿದಿರುತ್ತದೆ. ಹಾಗಾಗಿಯೇ ನಾವು ಆಗಾಗ ಭೇಟಿ ನೀಡಿದ್ದಲೇ ನೀಡುತ್ತಿರುತ್ತೇವೆ. ಆದರೆ ನಮಗೆ ತಿಳಿಯದ ಹಲವಾರು ಪ್ರದೇಶಗಳ ಬಗ್ಗೆ, ವಿಚಿತ್ರವಾದ ಸ್ಥಳಗಳ ಬಗ್ಗೆ ನಮಗೆ ತಿಳಿದೇ ಇರುವುದಿಲ್ಲ. ಏಕೆಂದರೆ ಅದರ ಬಗ್ಗೆ ಮಾಹಿತಿ ಇಲ್ಲದೇ ಇರುವುದೇ ಇದಕ್ಕೆ ಕಾರಣವಾಗಬಹುದು. ನೀವು ಎಂದೂ ಕೇಳಿದರ ಆ ತಾಣಗಳು ತನ್ನ ಆ ಸ್ಥಳಗಳಿಗೆ ಪ್ರವಾಸಿಗರನ್ನು ಕಾಯುತ್ತಾ ಇವೆ.

ಹಾಗಾದರೆ ಆ ಸ್ಥಳಗಳು ಯಾವುವು? ಅವುಗಳು ಎಲ್ಲಿವೆ? ಅವುಗಳ ವಿಶೇಷತೆ ಏನು? ಎಂಬುದರ ಬಗ್ಗೆ ತಿಳಿಯೋಣ. ಭಾರತದಲ್ಲಿ ವಿಚಿತ್ರವಾದ, ಕುತೂಹಲವಾದ, ಸುಂದರವಾದ ತಾಣಗಳನ್ನು ಒಮ್ಮೆ ನಮ್ಮ ಲೇಖನದ ಮೂಲಕ ತಿಳಿಯಿರಿ.

ಲೋಣಾರ್ ಕ್ರೇಟರ್

ಲೋಣಾರ್ ಕ್ರೇಟರ್

ಲೋಣಾರ್ ಕ್ರೇಟರ್ ಒಂದು ಅದ್ಭುತವಾದ ದೃಶ್ಯಗಳನ್ನು ನಮಗೆ ನೀಡುತ್ತದೆ. ಅದೆನೇಂದರೆ ಭೂಗರ್ಭ ಶಾಸ್ತ್ರಕಾರರ ಪ್ರಕಾರ ಈ ಗುಂಡಿಯು ಸುಮಾರು 25000 ರಿಂದ 6000 ವರ್ಷಗಳಷ್ಟು ಹಿಂದಿನದು ಎಂದು ಅಂದಾಜಿಸಲಾಗಿದೆ. ಆದರೆ 2010ರಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಇದರ ವಯಸ್ಸು 570000 ರಿಂದ 45000 ವರ್ಷಗಳು ಎಂದು ಹೇಳಲಾಗಿದೆ.

ಲೋಣಾರ್ ಕ್ರೇಟರ್

ಲೋಣಾರ್ ಕ್ರೇಟರ್

ವೃತ್ತಾಕಾರದ ಈ ಗುಂಡಿಯ ವ್ಯಾಸವು ಸುಮಾರು 1.2 ಕಿ.ಮೀಗಳಷ್ಟಿದೆ.ಈ ಕೆರೆಯ ನೀರು ಸೇವಿಸಲು ಯೋಗ್ಯವಲ್ಲ. ಕೆಲವು ನಿರ್ಧಿಷ್ಟ ಜೀವಿಗಳನ್ನು ಹೊರತು ಪಡಿಸಿದರೆ ಇನ್ಯಾವ ಜಲಚರ ಇಲ್ಲಿ ಕಂಡು ಬರುವುದಿಲ್ಲ.

PC:Aditya Laghate

ಲೋಣಾರ್ ಕ್ರೇಟರ್

ಲೋಣಾರ್ ಕ್ರೇಟರ್

ವಿಜ್ಞಾನಿಗಳ ಪ್ರಕಾರ, ಈ ಗುಂಡಿಯು ಲಕ್ಷಾಂತರ ವರ್ಷಗಳ ಹಿಂದೆ ಸೌರ್ಯವ್ಯೂಹದಲ್ಲಿ ನಡೆದಿರುವ ಪ್ರಕ್ರಿಯೆಗಳಿಂದ ಉಂಟಾದ ಉಲ್ಕೆಗಳು ಅಪ್ಪಿಳಿಸಿದಾಗ ಉಂಟಾಗುವ ಕಂದಕವಾಗಿದೆ.


PC: V4vjk

ಲೋಣಾರ್ ಕ್ರೇಟರ್

ಲೋಣಾರ್ ಕ್ರೇಟರ್

ಲೋಣಾರ್ ಕೆರೆ ಎಂತಲೆ ಪ್ರಸಿದ್ಧಿ ಪಡೆದಿರುವ ಈ ಗುಂಡಿಯು ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಲೋಣಾರ್ ಎಂಬ ಪಟ್ಟಣದಲ್ಲಿದೆ. ಲೋಣಾರ್ ಮುಂಬೈ ಮಹಾನಗರದಿಂದ 550 ಕಿ.ಮೀ ಹಾಗೂ ಔರಂಗಾಬಾದ್ 160 ಕಿ.ಮೀ ದೂರದಲ್ಲಿದೆ.

PC:Akash Sharma

ಸೂಜಿ ಮನೆ ಕೇಂದ್ರ

ಸೂಜಿ ಮನೆ ಕೇಂದ್ರ

ಇದೊಂದು ವಿಶಿಷ್ಟ ವೀಕ್ಷಣಾ ಕೇಂದ್ರವಾಗಿದೆ. ದೂರದಿಂದ ಒಂದು ನಿರ್ದಿಷ್ಟ ಕೋನದಲ್ಲಿ ಇದನ್ನು ನೋಡಿದಾಗ ಸೂಜಿ ಮನೆಯಂತಹ ಆಕಾರದಲ್ಲಿ ಇದು ಕಂಡುಬರುವುದರಿಂದ ಇದಕ್ಕೆ ನೀಡಲ್ ಪಾಯಿಂಟ್ ಅಥವಾ ಸೂಜಿ ಮನೆ ಕೇಂದ್ರ ಎಂದು ಕರೆಯುತ್ತಾರೆ. ಇದೂ ಎಲಿಫಂಟ್ ಹೆಡ್ ಎಂತಲೂ ಸಹ ಕರೆಯಲ್ಪಡುತ್ತದೆ. ಮಹಾರಾಷ್ಟ್ರದ ಪ್ರಖ್ಯಾತ ಪ್ರವಾಸಿ ತಾಣವಾದ ಮಹಾಬಲೇಶ್ವರದಲ್ಲಿ ಈ ಆಕರ್ಷಣೆಯಿದೆ.


PC:: Naiju.mathew

ಕಪ್ಪೆ ಬಂಡೆ

ಕಪ್ಪೆ ಬಂಡೆ

ರಾಜಸ್ಥಾನದ ಏಕೈಕ ಗಿರಿಧಾಮ ಪ್ರದೇಶವಾದ ಮೌಂಟ್ ಅಬುವಿನಲ್ಲಿ ಈ ನೈಸರ್ಗಿಕ ಶಿಲೆಯನ್ನು ಕಾಣಬಹುದು. ಅಂದರೆ ಇದನ್ನು ಒಂದು ಕೋನದಿಂದ ನೋಡಿದಾಗ ಬೃಹದಾಕಾರದ ಮಂಡೂಕ ಅಥವಾ ಕಪ್ಪೆಯ ಹಾಗೆ ಕಾಣುವುದರಿಂದ ಇದಕ್ಕೆ ಕಪ್ಪೆ ಶಿಲೆ ಅಥವಾ ಟೋಡ್ ರಾಕ್ ಎಂದು ಕರೆಯುತ್ತಾರೆ. ಇದೂ ಸಹ ಪ್ರವಾಸಿಗರ ನೋಡಬಯಸುವ ಕೌತುಕಮಯ ರಚನೆಯಾಗಿದೆ.

PC:Kondephy

ಬೇಲಮ್ ಗುಹೆಗಳು

ಬೇಲಮ್ ಗುಹೆಗಳು

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಲಿಮಿಗುಂದ್ಲಾ ತಾಲೂಕಿನ ಬೇಲಮ್ ಹಳ್ಳಿಯಲ್ಲಿ ಕಂಡುಬರುವ ಬೇಲಮ್ ಗುಹೆಗಳು ಭಾರತ ಉಪಖಂಡದಲ್ಲೆ ಎರಡನೆಯ ಅತಿ ದೊಡ್ಡದಾದ ಗುಹೆಯಾಗಿದ್ದು, ಅತಿ ಉದ್ದನೆಯ ಗುಹೆ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ.

PC:PP Yoonus

ಬೇಲಮ್ ಗುಹೆಗಳು

ಬೇಲಮ್ ಗುಹೆಗಳು

3,229 ಮೀ.ಗಳಷ್ಟು ಉದ್ದವಿರುವ ಈ ಪ್ರಕೃತಿ ಸಹಜ ನಿರ್ಮಿತ ಗುಹೆಯು ಆಂಧ್ರದ ಕೊಲಿಮಿಗುಂದ್ಲಾ ತಾಲ್ಲೂಕಿನಿಂದ ಕೇವಲ 3 ಕಿ.ಮೀ ದೂರದಲ್ಲಿ ನೆಲೆಸಿದೆ. ಐತಿಹಾಸಿಕವಾಗಿಯೂ ಮಹತ್ವವನ್ನು ಪಡೆದಿರುವ ಈ ಗುಹೆಯ ಕುರಿತು ಸ್ಥಳೀಯರಿಗೆ ಗೊತ್ತಿದ್ದರೂ ಪುಸ್ತಕದಲ್ಲಿ ಮೊದಲು ದಾಖಲಿಸಿದ್ದು ಬ್ರಿಟೀಷ್ ಸಮೀಕ್ಷಕ (ಸರ್ವೇಯರ್) ರಾಬರ್ಟ್ ಬ್ರೂಸ್ ಫೂಟ್ ಅದೂ 1884 ರಲ್ಲಿ.

PC:Naga Praveena Sharma P

ಭೇಡಾಘಾಟಿನ ಅಮೃತಶಿಲೆಗಳು

ಭೇಡಾಘಾಟಿನ ಅಮೃತಶಿಲೆಗಳು

ಮಧ್ಯ ಪ್ರದೇಶದ ರಾಜ್ಯದ ಜಬಲಪುರ್ ನಗರದಿಂದ ಇಪ್ಪತ್ತು ಕಿ.ಮೀ ದೂರದಲ್ಲಿದೆ. ಭೇಡಾಘಾಟ್ ತನ್ನಲ್ಲಿರುವ ಧುಂವಾಧಾರ್ ಜಲಪಾತ ವಿಶೇಷವಾಗಿ ಕಂಡುಬರುವ ಅಮೃತ ಶಿಲೆಗಳ ಬಂಡೆಗಳಿಂದಾಗಿ ಗಮನಸೆಳೆಯುತ್ತದೆ. ನರ್ಮದಾ ನದಿಯ ಅದಿ ಬದಿಗಳಲ್ಲಿ ಈ ಅಮೃತಶಿಲೆಗಳ ಬಂಡೆಗಳು ಬಲು ವಿಶಿಷ್ಟವಾಗಿ ಗೋಚರಿಸುತ್ತವೆ.

PC:Hariya1234

ಬೊರಾ ಗುಹೆಗಳು

ಬೊರಾ ಗುಹೆಗಳು

ಅರಕು ಕಣಿವೆ, ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ತನ್ನಲ್ಲಿರುವ ನೈಸರ್ಗಿಕವಾಗಿ ನಿರ್ಮಿತವಾದ ವಿಸ್ಮಯಕಾರಿ ಗುಹೆಗಳಿಂದಾಗಿ ಗಮನ ಸೆಳೆಯುತ್ತದೆ. ಇವುಗಳನ್ನು ಬೊರಾ ಗುಹೆಗಳೆಂದು ಕರೆಯುತ್ತಾರೆ .


PC:Bhaskaranaidu

ಅಮರನಾಥ ಶಿವಲಿಂಗ

ಅಮರನಾಥ ಶಿವಲಿಂಗ

ಜಮ್ಮು ಕಾಶ್ಮೀರ ರಾಜ್ಯದಲ್ಲಿರುವ ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದೆ. ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದೆ ಒಂದು ವಿಸ್ಮಯಕಾರಿ ಅಂಶವಾಗಿದೆ. ಇದೊಂದು ನೈಸರ್ಗಿಕ ವಿಸ್ಮಯವೆ ಹೌದು.

PC:Gktambe

ಲೋಕ್ತಕ್ ಎಂಬ ತೇಲುವ ಕೆರೆ

ಲೋಕ್ತಕ್ ಎಂಬ ತೇಲುವ ಕೆರೆ

ಇದೊಂದು ರೀತಿಯಲ್ಲಿ "ತೇಲುವ ಕೆರೆ" ಎಂಬ ಬಿರುದನ್ನು ಪಡೆದಿದೆ. ಈ ರೀತಿಯ ಕೆರೆಯ ವಿಧದಲ್ಲಿ ಇದು ಜಗತ್ತಿನಲ್ಲೆ ಏಕೈಕ ಕೆರೆಯಾಗಿದ್ದು, ಅದರಲ್ಲೂ ಭಾರತದಲ್ಲಿರುವುದು ಹೆಮ್ಮೆಯ ವಿಚಾರ. ಭಾರತ ರಾಜ್ಯವಾದ ಮಣಿಪುರದ ಬಿಷ್ಣುಪುರ(ವಿಷ್ಣುಪುರ) ಜಿಲ್ಲೆಯಲ್ಲಿರುವ ಮೋಯಿರಾಂಗ್ ಎಂಬ ಪಟ್ಟಣದಲ್ಲಿ.

PC:Sharada Prasad CS

ಮೋಯಿರಾಂಗ್

ಮೋಯಿರಾಂಗ್

ಒಂದು ಪ್ರವಾಸಿ ಮಹತ್ವವುಳ್ಳ ಪಟ್ಟಣವಾಗಿದ್ದು, ಮಣಿಪುರದ ರಾಜಧಾನಿಯಾದ ಇಂಫಾಲ್ ನಗರದ ದಕ್ಷಿಣಕ್ಕೆ 45 ಕಿ.ಮೀ ಗಳಷ್ಟು ದೂರದಲ್ಲಿದೆ. ಇನ್ನು ಈ ಪಟ್ಟಣದಲ್ಲಿರುವ ಲೋಕ್ತಕ್ ಕೆರೆಯು ಭಾರತದ ಅತಿ ದೊಡ್ಡ ಸಿಹಿ ನೀರಿನ ಕೆರೆಯಾಗಿದ್ದು ತೇಲುವ ಚಿಕ್ಕ ಚಿಕ್ಕ ಗುಡ್ಡೆಗಳನ್ನು ಒಳಗೊಂಡಿದೆ.

PC:Sharada Prasad CS

ಸಂತ ಮೇರಿಯ ಬಸಾಲ್ಟ್ ಶಿಲಾ ರಚನೆಗಳು

ಸಂತ ಮೇರಿಯ ಬಸಾಲ್ಟ್ ಶಿಲಾ ರಚನೆಗಳು

ಉಡುಪಿಯ ಮಲ್ಪೆ ಕಡಲ ತೀರ ಪ್ರದೇಶದಲ್ಲೆ ಕಂಡುಬರುವ ಸೇಂಟ್ ಮೇರಿಯ ದ್ವೀಪ ಸಮೂಹವು ಉಡೂಪಿಯ ಪ್ರೇಕ್ಷಣೀಯ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ಕಂಡುಬರುವ ಬಸಾಲ್ಟ್ ಶಿಲಾ ರಚನೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳಾಗಿವೆ. ಮಲ್ಪೆ ಕಡಲ ತೀರದಿಂದ ಆರು ಕಿ.ಮೀ ದೂರವಿರುವ ಈ ದ್ವೀಪ ಸಮೂಹಕ್ಕೆ ದೋಣಿಯಿಂದ ಮಾತ್ರವೆ ಹೋಗಲು ಸಾಧ್ಯ. ಇದನ್ನು ಕೋಕೋನಟ್ ದ್ವೀಪ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

PC:Arun Prabhu

ಡೈನೋಸಾರಸ್ ಶಿಲೆ

ಡೈನೋಸಾರಸ್ ಶಿಲೆ

ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿಯಿರುವ ಕುಂತಿ ಬೆಟ್ಟಗಳಲ್ಲಿನ ಒಂದು ಭಾಗ. ಇದನ್ನು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಆದಿ ಕಾಲದಲ್ಲಿದ್ದ ಡೈನೋಸಾರಸ್ ಎಂಬ ಪ್ರಾಣಿಯ ಮುಖವು ನೆನಪಿಗೆ ಬರುವಂತಿದೆಯಲ್ಲವೆ...

PC:Vinayraghavendra

ಚಿರಾಪುಂಜಿ

ಚಿರಾಪುಂಜಿ

ಭಾರತದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಮೇಘಾಲಯ ರಾಜ್ಯದ ಚಿರಾಪುಂಜಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಸೇತುವೆ ಒಂದು ನಿಸರ್ಗ ನಿರ್ಮಿತ. ಜಗತ್ತಿನಲ್ಲೆ ಅದ್ಭುತ ಅಚ್ಚರಿಯಾಗಿದೆ. ಮರದ ಬೇರುಗಳಿಂದ ತೂಗು ಸೇತುವೆಯ ಹಾಗೆ ತನ್ನಷ್ಟಕ್ಕೆ ತಾನೆ ನಿರ್ಮಾಣಗೊಂಡಿದ್ದು ಈ ಸೇತುವೆಯು ಇಂದಿಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಂದ ನಿರ್ಭಯವಾಗಿ ಬಳಸಲ್ಪಡುತ್ತದೆ.

PC:Arshiya Urveeja Bose

Please Wait while comments are loading...