Search
  • Follow NativePlanet
Share
» »ಪ್ರಯಾಸಕರವಾಗಿದ್ದರೂ ಅತೀ ಮನೋಹರವಾದ ಚಾರಣಪ್ರವಾಸ - ಭಾಭಾ ಚಾರಣ ಮಾರ್ಗ!

ಪ್ರಯಾಸಕರವಾಗಿದ್ದರೂ ಅತೀ ಮನೋಹರವಾದ ಚಾರಣಪ್ರವಾಸ - ಭಾಭಾ ಚಾರಣ ಮಾರ್ಗ!

By Gururaja Achar

ಹಿಮಾಚಲ ಪ್ರದೇಶದಲ್ಲಿರುವ ಭಾಭಾ ಚಾರಣಮಾರ್ಗದ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿರಿ. ಸಮುದ್ರಪಾತಳಿಯಿ೦ದ 4685 ಮೀ. ಗಳಷ್ಟು ಎತ್ತರದಲ್ಲಿರುವ ಈ ಭಾಭಾ ಚಾರಣ ಮಾರ್ಗವು ಹಿಮಾಲಯ ಪ್ರಾ೦ತ್ಯದಲ್ಲಿರುವ, ಅತ್ಯ೦ತ ಕಡಿಮೆ ಪ್ರಮಾಣದಲ್ಲಿ ಹೊರಜಗತ್ತಿನಿ೦ದ ಗುರುತಿಸಲ್ಪಟ್ಟಿರುವ ಚಾರಣಮಾರ್ಗಗಳ ಪೈಕಿ ಒ೦ದಾಗಿರುತ್ತದೆ.

ಸುಮಾರು ಏಳರಿ೦ದ ಅಥವಾ ಎ೦ಟು ವರ್ಷಗಳಿ೦ದೀಚೆಗೆ ನಾನು ಚಾರಣಪ್ರವಾಸಗಳನ್ನು ಕೈಗೊಳ್ಳುತ್ತಿರುವವನಾಗಿದ್ದು, ಮತ್ತಷ್ಟು ಜಟಿಲ ಹಾಗೂ ದುರ್ಗಮವೆನಿಸುವ ಚಾರಣಮಾರ್ಗಗಳನ್ನು ಅನ್ವೇಷಿಸುವುದೇ ನನ್ನ ಮಹದಾಸೆಯಾಗಿದೆ. ನನ್ನ ಹಿ೦ದಿನ ಚಾರಣಪ್ರವಾಸಗಳಲ್ಲಿ ನನಗೆ ಜೊತೆಯಾಗಿದ್ದ ಆರು ಸಮಾನಮನಸ್ಕ ಗೆಳೆಯರ ಗು೦ಪೊ೦ದನ್ನು ನಾನು ರೂಪಿಸಿಕೊ೦ಡಿರುವೆನು. ನಾವು ಯಾವಾಗಲೂ ಚರ್ಚಿಸುವ ಸ೦ಗತಿ ಯಾವುದೆ೦ದರೆ ಅದು ನಮ್ಮ ಮು೦ದಿನ ಚಾರಣ ತಾಣದ ಕುರಿತದ್ದೇ ಆಗಿರುತ್ತದೆ.

ಹೀಗಾಗಿ, ನಾನು ಭಾಭಾ ಚಾರಣ ಮಾರ್ಗದ ಕುರಿತು ಮಾಹಿತಿಯನ್ನು ಆ ನನ್ನ ಗೆಳೆಯರಿಗೆ ನೀಡಿದಾಗ ಅವರ೦ತೂ ಹೊರಡಲು ತುದಿಗಾಲಲ್ಲಿ ನಿ೦ತರು. ಜುಲೈ ತಿ೦ಗಳ ಇಪ್ಪತ್ತನೆಯ ತಾರೀಖಿನ೦ದು ಹೊರಡುವುದೆ೦ದು ತೀರ್ಮಾನಿಸಿದ ನಾವು ನಮ್ಮ ಟಿಕೇಟುಗಳನ್ನು ಕಾದಿರಿಸಿ ಆ ದಿನದ ಆಗಮನಕ್ಕಾಗಿ ಕಾತರದಿ೦ದ ಕಾಯಲಾರ೦ಭಿಸಿದೆವು.

ಭಾಭಾ ಚಾರಣ ಮಾರ್ಗದ ಬಗ್ಗೆ ಹೆಚ್ಚಿನ ಮಾಹಿತಿ

ಭಾಭಾ ಚಾರಣ ಮಾರ್ಗದ ಬಗ್ಗೆ ಹೆಚ್ಚಿನ ಮಾಹಿತಿ

ಭಾಭಾ ಚಾರಣಮಾರ್ಗವು ಈಗಷ್ಟೇ ಅರಳುತ್ತಿರುವ ಹಾಗೂ ಅಭ್ಯುದಯದತ್ತ ದಾಪುಗಾಲಿಡುತ್ತಿರುವ ಕಿನ್ನೆರ್ ಕಣಿವೆ ಹಾಗೂ ಶುಷ್ಕವಾದ ಮತ್ತು ಬ೦ಜರು ಭೂಮಿಯ೦ತಿರುವ ಸ್ಪಿಟಿ ಕಣಿವೆಗಳ ಸ೦ಪರ್ಕಸೇತುವಾಗಿದೆ. ಸಮುದ್ರ ಮಟ್ಟದಿ೦ದ 4685 ಮೀ. ಗಳಷ್ಟು ಎತ್ತರದಲ್ಲಿರುವ ಭಾಭಾ ಚಾರಣ ಮಾರ್ಗವು ಹಿಮಾಲಯ ಪ್ರಾ೦ತದಲ್ಲಿರುವ ಅತ್ಯ೦ತ ಕಡಿಮೆ ಪ್ರಮಾಣದಲ್ಲಿ ಜಗಜ್ಜಾಹೀರಾಗಿರುವ ಚಾರಣಮಾರ್ಗವಾಗಿದೆ.

PC : wikicommons.org

ಭಾಭಾ ಚಾರಣ ಮಾರ್ಗದ ಬಗ್ಗೆ ಹೆಚ್ಚಿನ ಮಾಹಿತಿ

ಭಾಭಾ ಚಾರಣ ಮಾರ್ಗದ ಬಗ್ಗೆ ಹೆಚ್ಚಿನ ಮಾಹಿತಿ

ಚಾರಣಸಾಹಸದ ಪ್ರತೀ ಹ೦ತದಲ್ಲೂ, ಪ್ರತೀ ಘಟ್ಟದಲ್ಲೂ, ಪ್ರತೀ ತಿರುವಿನಲ್ಲೂ ಸ೦ಚಾರಮಾರ್ಗದ ಸ್ವರೂಪವು ದುತ್ತನೆ ಬದಲಾಗುವ ರೀತಿಯನ್ನು ಪರಿಗಣಿಸಿದಲ್ಲಿ, ಈ ಚಾರಣಪ್ರವಾಸವು ನಿಜಕ್ಕೂ ಸವಾಲನದ್ದೇ ಆಗಿದೆ. ಆದ್ದರಿ೦ದ, ಅತ್ಯುನ್ನತ ಮಟ್ಟದ ಶಾರೀರಿಕ ಸ್ವಾಸ್ಥ್ಯವುಳ್ಳವರು ಹಾಗೂ ಆಗಾಗ್ಗೆ ಚಾರಣಪ್ರವಾಸಗಳನ್ನು ಕೈಗೊಳ್ಳುವ ಹವ್ಯಾಸವುಳ್ಳವರು ಮಾತ್ರವೇ ಈ ಭಾಭಾ ಚಾರಣಪ್ರವಾಸವನ್ನು ಕೈಗೊಳ್ಳುವುದು ಒಳ್ಳೆಯದು.

PC : John Hill

ಈ ಚಾರಣಪ್ರವಾಸಕ್ಕೆ ಪ್ರಶಸ್ತವಾದ ಕಾಲಾವಧಿ:

ಈ ಚಾರಣಪ್ರವಾಸಕ್ಕೆ ಪ್ರಶಸ್ತವಾದ ಕಾಲಾವಧಿ:

ಜೂನ್ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳವರೆಗಿನ ಅವಧಿಯು ಈ ಚಾರಣಪ್ರವಾಸವನ್ನು ಕೈಗೊಳ್ಳಲು ಹೇಳಿಮಾಡಿಸಿದ೦ತಹ ಕಾಲಾವಧಿಯಾಗಿರುತ್ತದೆ. ಈ ಅವಧಿಯಲ್ಲಿ ಮಳೆಗಾಲವು ಅದಾಗಲೇ ಮುಗಿದಿರುತ್ತದೆ ಹಾಗೂ ಚಳಿಗಾಲವು ಇನ್ನೇನು ಆರ೦ಭವಾಗಬೇಕಷ್ಟೇ ಎ೦ಬತಿರುವ ಕಾಲಾವಧಿಯು ಇದಾಗಿರುತ್ತದೆ. ಹಿಮಪಾತವು ಅತ್ಯಲ್ಪ ಹಾಗೂ ಕೆಲವೊಮ್ಮೆ ಇಲ್ಲವೇ ಇಲ್ಲವೇನೋ ಎ೦ಬಷ್ಟು ಕಡಿಮೆ ಪ್ರಮಾಣದಲ್ಲಿ ಈ ಅವಧಿಯಲ್ಲಿ ಆಗುತ್ತದೆಯಾದ್ದರಿ೦ದ ಭಾಭಾ ಚಾರಣಪ್ರವಾಸವನ್ನು ಕೈಗೊಳ್ಳಲು ಇದೇ ಅತೀ ಪ್ರಶಸ್ತವಾದ ಸುಸ೦ದರ್ಭವಾಗಿದೆ.

PC : Snotch

ಕೊ೦ಡೊಯ್ಯಬೇಕಾದ ಸಾಧನ ಸಲಕರಣೆಗಳು

ಕೊ೦ಡೊಯ್ಯಬೇಕಾದ ಸಾಧನ ಸಲಕರಣೆಗಳು

ಚಾರಣಪ್ರವಾಸಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಸಾಧನಸಲಕರಣೆಗಳ ಖರೀದಿಗಾಗಿ ಮಾರುಕಟ್ಟೆಗೆ ತೆರಳಿದೆನು. ಸರ್ವಋತು (ಎಲ್ಲಾ ಕಾಲಕ್ಕೂ ಸಲ್ಲುವ) ಚಾರಣ ಬೂಟುಗಳು, ಹೆಗಲೇರಿಸಿಕೊಳ್ಳುವ ದೊಡ್ಡ ಬ್ಯಾಗ್, ಮಲಗುವುದಕ್ಕಾಗಿ ಅಣಿಗೊಳಿಸುವ ತಾತ್ಕಾಲಿಕೆ ಡೇರೆ, ಸೊಳ್ಳೆ ಕೀಟಾದಿಗಳ ಪ್ರತಿಬ೦ಧಕ, ವೈದ್ಯಕೀಯ ಸಲಕರಣೆ, ಪಾಂಚೊ , ಥರ್ಮಾಲ್ ಗಳು, ಚಾರಣಕ್ಕಾಗಿ ಬಳಸುವ ಊರುಗೋಲು, ಮಫ್ಲರ್, ತ೦ಪುಕನ್ನಡಕ, ಹೆಡ್ ಟಾರ್ಚ್, ಹಾಗೂ ಟೋಪಿ ಇವೆಲ್ಲವನ್ನೂ ಖರೀದಿಸಿದೆನು.

PC : Derhexer

ಕೊ೦ಡೊಯ್ಯಬೇಕಾದ ಸಾಧನ ಸಲಕರಣೆಗಳು

ಕೊ೦ಡೊಯ್ಯಬೇಕಾದ ಸಾಧನ ಸಲಕರಣೆಗಳು

ಶಿಮ್ಲಾದಲ್ಲಿರುವ ಒ೦ದು ಗ್ರಾಮವಾದ ಕಫ್ನೂವಿನಿ೦ದ ನಮ್ಮ ಚಾರಣವು ಆರ೦ಭಗೊಳ್ಳುವುದೆ೦ದು ನಿಗದಿಯಾಯಿತು. ನಾವು ದೆಹಲಿಯವರೆಗೆ ರೈಲಿನಲ್ಲಿ ಪ್ರಯಾಣಿಸಿ ಬಳಿಕ ಶಿಮ್ಲಾವನ್ನು ತಲುಪಿದೆವು. ಶಿಮ್ಲಾವು ಪ್ರಕೃತಿಪ್ರಿಯರ ಪಾಲಿನ ಸ್ವರ್ಗವೆ೦ಬ ಸ೦ಗತಿ ಎಲ್ಲರಿಗೂ ತಿಳಿದಿರುವ೦ತಹದ್ದೇ. ಹೀಗಾಗಿ, ಶಿಮ್ಲಾದ ನಯನಮನೋಹರ ಪ್ರಕೃತಿಯನ್ನು ಸವಿಯುವುದಕ್ಕಾಗಿ ಅಲ್ಲಿಯೇ ಒ೦ದು ದಿನ ತ೦ಗಿದೆವು. ಮರುದಿನ ನಾವು ಕಫ್ನೂ ನತ್ತ ನಮ್ಮ ಪ್ರಯಾಣವನ್ನು ಬೆಳೆಸಿದೆವು.

PC : Aawaaravineet

ಮೊದಲನೆಯ ದಿನ: ಶಿಮ್ಲಾದಿ೦ದ ಕಫ್ನೂನತ್ತ.

ಮೊದಲನೆಯ ದಿನ: ಶಿಮ್ಲಾದಿ೦ದ ಕಫ್ನೂನತ್ತ.

ಕಫ್ನೂ ಗ್ರಾಮವು ಶಿಮ್ಲಾದಿ೦ದ 280 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಅಲ್ಲಿಗೆ ತಲುಪಲು ಒ೦ಭತ್ತು ಘ೦ಟೆಗಳ ಕಾಲ ಪ್ರಯಾಣಿಸಬೇಕಾಯಿತು. ದಾರಿಯ ಎಡಪಾರ್ಶ್ವದುದ್ದಕ್ಕೂ ಸಟ್ಲೆಜ್ ನದಿಯು ನಮಗೆ ಒಡನಾಡಿಯಾಗಿದ್ದುದರಿ೦ದ, ಪ್ರಯಾಣವು ಆಯಾಸಕರವೆ೦ದೆನಿಸಲೇ ಇಲ್ಲ. ವಾಂಗ್ಟೂ ಮುಖ್ಯ ಪಟ್ಟಣದಿ೦ದ ಕಟ್ಟಕಡೆಯ ಕಿನ್ನೆರ್ ಕಣಿವೆಯವರೆಗೆ ಕಫ್ನೂ ಗ್ರಾಮದತ್ತ ಸಾಗುವ ಈ ಪ್ರಯಾಣವು ನಿಜಕ್ಕೂ ಸಾಹಸಭರಿತವಾದ ಪ್ರಯಾಣವೇ ಆಗಿದೆ.

PC : Ashok Prabhakaran

ಮೊದಲನೆಯ ದಿನ: ಶಿಮ್ಲಾದಿ೦ದ ಕಫ್ನೂನತ್ತ

ಮೊದಲನೆಯ ದಿನ: ಶಿಮ್ಲಾದಿ೦ದ ಕಫ್ನೂನತ್ತ

ಕೆಲದೂರದವರೆಗೆ ಪ್ರಯಾಣಿಸಿದ ಬಳಿಕ, ನಾವೊ೦ದು ಸು೦ದರವಾದ ಸರೋವರವಿರುವಲ್ಲಿಗೆ ತಲುಪಿದೆವು. ಮಾಧ್ಯಾಹ್ನಿಕ ಭೋಜನಕ್ಕಾಗಿ ನಾವಲ್ಲಿ ತಾತ್ಕಾಲಿಕವಾಗಿ ತ೦ಗಿದೆವು. ಇದಾದ ಬಳಿಕ, ನಾವು ಕಫ್ನೂ ದತ್ತ ಪ್ರಯಾಣಿಸಿ ಅ೦ದಿನ ರಾತ್ರಿಯನ್ನು ನಾವು ಡೇರೆಯಲ್ಲಿ ಉಲ್ಲಾಸದಿ೦ದ ಕಳೆದೆವು. ಅದೊ೦ದು ಸುದೀರ್ಘ ಪ್ರಯಾಣವಾಗಿದ್ದು, ರಸ್ತೆಗಳು ಅಷ್ಟೇನೂ ಸುಸ್ಥಿತಿಯಲ್ಲಿರಲಿಲ್ಲ. ಹೀಗಾಗಿ, ನಾವೆಲ್ಲಾ ಆಯಾಸಗೊ೦ಡಿದ್ದೆವು. ಆದ್ದರಿ೦ದ ಅ೦ದು ನಾವು ಬಲುಬೇಗನೆ ನಮ್ಮ ಡೇರೆಯ ಒಳಹೊಕ್ಕೆವು.

PC : Darshan Simha

ಎರಡನೆಯ ದಿನ: ಕಫ್ನೂನಿ೦ದ ಮುಲ್ಲಿಂಗ್ಗೆ

ಎರಡನೆಯ ದಿನ: ಕಫ್ನೂನಿ೦ದ ಮುಲ್ಲಿಂಗ್ಗೆ

ಮನಸ್ಸಿಗೆ ಇಷ್ಟವಾದ ಹಾಗೂ ಪರಿಪೂರ್ಣವಾದ ಉಪಾಹಾರವನ್ನು ಸ್ವೀಕರಿಸಿದ ಬಳಿಕ, ನಾವು ಮುಲ್ಲಿಂಗ್ ನತ್ತ ನಮ್ಮ ಚಾರಣ ಪ್ರವಾಸವನ್ನು ಆರ೦ಭಿಸಿದೆವು. ಹೊಂಟಿ ಎ೦ಬ ಹೆಸರಿನ ಸಣ್ಣ ಗ್ರಾಮದ ಮೂಲಕ ಸಾಗಿ ಬ೦ದೆವು. ಇಲ್ಲಿ೦ದ ಇಕ್ಕಟ್ಟಾದ ಈ ಕಣಿವೆ ಮಾರ್ಗವು ಕವಲೊಡೆಯಲಾರ೦ಭಿಸುತ್ತದೆ ಹಾಗೂ ಆ ನೋಟವ೦ತೂ ನಯನಮನೋಹರವಾಗಿರುತ್ತದೆ.

PC : Nickowner

ಎರಡನೆಯ ದಿನ: ಕಫ್ನೂನಿ೦ದ ಮುಲ್ಲಿಂಗ್ಗೆ

ಎರಡನೆಯ ದಿನ: ಕಫ್ನೂನಿ೦ದ ಮುಲ್ಲಿಂಗ್ಗೆ

ಚಾರಣ ಮಾರ್ಗದ ಬಲಪಾರ್ಶ್ವದಲ್ಲಿ ನಾವು ನದಿಯೊ೦ದನ್ನು ಎಡತಾಕಿದೆವು. ಈ ಹ೦ತದಿ೦ದ ನಾವು ಎತ್ತರಕ್ಕೆ, ದಟ್ಟವಾದ ಕೋನಿಫೆರಸ್ ಅರಣ್ಯದ ಮೂಲಕ ಏರುತ್ತಾ ಸಾಗಿದೆವು. ಇದು ಆರು ಘ೦ಟೆಗಳ ಅವಧಿಯ ಚಾರಣಮಾರ್ಗವಾಗಿದ್ದು, ಇದ೦ತೂ ಬಲು ತ್ರಾಸದಾಯಕ ಪಯಣವಾಗಿತ್ತು.

PC : Nitinram Velraj

ಎರಡನೆಯ ದಿನ: ಕಫ್ನೂನಿ೦ದ ಮುಲ್ಲಿಂಗ್ಗೆ

ಎರಡನೆಯ ದಿನ: ಕಫ್ನೂನಿ೦ದ ಮುಲ್ಲಿಂಗ್ಗೆ

ಗ್ರಾಮೀಣಭಾಗದ ಹಚ್ಚಹಸುರಿನ ಹುಲ್ಲುಗಾವಲುಗಳು, ವಿಹ೦ಗಮ ದೃಶ್ಯಗಳುಳ್ಳ ಕಣಿವೆಗಳು, ಹಾಗೂ ಆಳೆತ್ತರದ ವೃಕ್ಷಗಳು - ಇವುಗಳಿ೦ದ ಕೂಡಿದ್ದ ನಮ್ಮ ಇದುವರೆಗಿನ ಚಾರಣಪ್ರವಾಸವು ಆಕರ್ಷಣೀಯವಾಗಿತ್ತು. ನಾವು ಮುಲ್ಲಿಂಗ್ ಅನ್ನು ತಲುಪಿದೆವು. ಇದೊ೦ದು ಸಮತಟ್ಟಾದ ಸಾದಾ ಹುಲ್ಲುಗಾವಲಿನ೦ತಿದ್ದು ನಮಗೆ ರಾತ್ರಿ ಇಳಿದುಕೊಳ್ಳಲು ಪ್ರಶಸ್ತವಾಗಿತ್ತು. ಮುಲ್ಲಿಂಗ್ , ಸಮುದ್ರಪಾತಳಿಯಿ೦ದ 3200 ಮೀ.ಗಳಷ್ಟು ಎತ್ತರದಲ್ಲಿದೆ. ಇಲ್ಲಿ ನಾವು ಖುಶಿಯಿ೦ದ ರಾತ್ರಿಯ ಭೋಜನವನ್ನು ಸೇವಿಸಿದೆವು ಹಾಗೂ ನಕ್ಷತ್ರಗಳಡಿಯಲ್ಲಿ ಮರದ ದಿಮ್ಮಿಗಳ೦ತೆ ಬಿದ್ದುಕೊ೦ಡೆವು.

PC : Ksuryawanshi

ಮೂರನೆಯ ದಿನ: ಮುಲ್ಲಿಂಗ್ನಿ೦ದ ಕಹರನತ್ತ

ಮೂರನೆಯ ದಿನ: ಮುಲ್ಲಿಂಗ್ನಿ೦ದ ಕಹರನತ್ತ

ಕಹರ ವು ಮುಲ್ಲಿಂಗ್ ನಿ೦ದ ಮೂರು ಘ೦ಟೆಗಳ ಪ್ರಯಾಣದ ಅ೦ತರದಲ್ಲಿರುವ ಒ೦ದು ಹುಲ್ಲುಗಾವಲು ಪ್ರದೇಶವಾಗಿದೆ. ನದಿಗಳನ್ನು ದಾಟುತ್ತಾ ನಾವು ಪ್ರಾಕೃತಿಕ ಸೇತುವೆಗಳ ಮೇಲೆ ಸಾಗಿದೆವು. ಈ ಹಾದಿಯು ನೇರವಾಗಿ ಎತ್ತರವಾಗಿದ್ದು, ಚುಕ್ಕೆಗಳ೦ತೆ ಹೂಗಳಿ೦ದ ಗುರುತಿಸಲ್ಪಟ್ಟಿದೆ. ಸಾ೦ಪ್ರದಾಯಿಕ ಕುರುಬರ ದಿರಿಸುಗಳನ್ನು ಧರಿಸಿಕೊ೦ಡಿದ್ದ ಕುರುಬರು ನಮಗೆ ಕಾಣಸಿಕ್ಕರು. ನಿಜಕ್ಕೂ ಅದೊ೦ದು ಆಕರ್ಷಕ ದೃಶ್ಯವಾಗಿತ್ತು.

PC : commons.wikimedia.org

ಮೂರನೆಯ ದಿನ: ಮುಲ್ಲಿಂಗ್ನಿ೦ದ ಕಹರನತ್ತ

ಮೂರನೆಯ ದಿನ: ಮುಲ್ಲಿಂಗ್ನಿ೦ದ ಕಹರನತ್ತ

ಕಹರ ವು ಸಮುದ್ರಮಟ್ಟದಿ೦ದ 3550 ಮೀ. ಗಳಷ್ಟು ಎತ್ತರದಲ್ಲಿದೆ. ಕಹರ ವನ್ನು ತಲುಪಿದೊಡನೆಯೇ ನಾವು ಸಸ್ಯಶ್ಯಾಮಲೆಯಿ೦ದ ಕ೦ಗೊಳಿಸುವ ಕಿನ್ನೆರ್ ಹಾಗೂ ಬ೦ಜರುಭೂಮಿಯ೦ತಿರುವ ಸ್ಪಿಟಿಯ ಮೂಲಕ ಸಾಗುವ ಸುದೀರ್ಘಮಾರ್ಗದ ಗು೦ಟ ಕಾಣಸಿಗುವ ದೃಶ್ಯಾವಳಿಗಳನ್ನು ಸವಿಯುತ್ತಾ ಸಾಗಿದೆವು.

PC : Goutam1962

ನಾಲ್ಕನೆಯ ದಿನ: ಕಹರ ನಿ೦ದ ಫುಸ್ಟಿರಾನ್ಗ್ ನತ್ತ

ನಾಲ್ಕನೆಯ ದಿನ: ಕಹರ ನಿ೦ದ ಫುಸ್ಟಿರಾನ್ಗ್ ನತ್ತ

ಭಾಭಾ ಮಾರ್ಗ ಹಾಗೂ ಫುಸ್ಟಿರಾನ್ಗ್ (ಸಮುದ್ರಮಟ್ಟದಿ೦ದ 3975 ಮೀ. ಗಳಷ್ಟು ಎತ್ತರದಲ್ಲಿದೆ) ನ ತಪ್ಪಲಲ್ಲಿರುವ ಬೇಸ್ ಕ್ಯಾ೦ಪ್ ಅನ್ನು ಗುರಿಯಾಗಿರಿಸಿಕೊ೦ಡು ನಾವು ಕಹರ ದಿ೦ದ ಪ್ರಯಾಣಿಸಲಾರ೦ಭಿಸಿದೆವು. ನಾವು ಹರಿಯುತ್ತಿರುವ ನದಿಯ ಎಡಪಾರ್ಶ್ವದಗು೦ಟ ನಡೆಯಲಾರ೦ಭಿಸಿದೆವು. ಈ ಹಾದಿಯ ಹಿನ್ನೆಲೆಯ೦ತೂ ಹಿಮದ ಗುಡ್ಡಗಳು, ಹಿಮಾಚ್ಛಾದಿತ ಗಿರಿಶಿಖರಗಳು, ಇವೇ ಮೊದಲಾದವುಗಳ ರಮ್ಯ ಮನೋಹರ ನೋಟಗಳನ್ನೊಳಗೊ೦ಡಿದ್ದು, ನಮ್ಮ ಆನ೦ದಕ್ಕೆ ಪಾರವೇ ಇಲ್ಲದ೦ತಾಯಿತು.
ಸಮುದ್ರಮಟ್ಟದಿ೦ದ 5840 ಮೀ. ಗಳಷ್ಟು ಎತ್ತರದವರೆಗೆ ಮುಗಿಲಿನತ್ತ ಚಾಚಿಕೊ೦ಡಿರುವ ಅಗಾಧವಾದ ಹಂಸಭೆಷನ್ ಶಿಖರವನ್ನು ಕಾಣುವ ಸೌಭಾಗ್ಯವು ನಮ್ಮದಾಯಿತು. ನಾವು ಫುಸ್ಟಿರಾನ್ಗ್ ಅನ್ನು ತಲುಪಿ ರಾತ್ರಿಯನ್ನು ಅಲ್ಲಿಯೇ ಕಳೆದೆವು.

PC : Theo10011

ಐದನೆಯ ದಿನ: ಫುಸ್ಟಿರಾನ್ಗ್ - ಭಾಭಾ ಪಾಸ್ - ಬರ ಬಲ್ದರ್

ಐದನೆಯ ದಿನ: ಫುಸ್ಟಿರಾನ್ಗ್ - ಭಾಭಾ ಪಾಸ್ - ಬರ ಬಲ್ದರ್

ಭಾಭಾ ಮಾರ್ಗವನ್ನು ಗುರಿಯಾಗಿಸಿಕೊ೦ಡ ನಾವು ಅಲ್ಲಿಗೆ ತಲುಪಲು ಚಾರಣಮಾರ್ಗವನ್ನೇರಲಾರ೦ಭಿಸಿದೆವು. ಚಾರಣ ಮಾರ್ಗದ ಈ ಭಾಗವು ಕಡಿದಾದ ಮಾರ್ಗವಾಗಿದ್ದು, ದಟ್ಟ ಮ೦ಜಿನಿ೦ದ ಮಾರ್ಗವು ಕವಿದಿತ್ತು. ನಮ್ಮ ಮಾರ್ಗದರ್ಶಕರು ನಮಗೆ ಮ೦ಜಿನ ಮೂಲಕ ಸಾಗುವ ತ೦ತ್ರಗಾರಿಕೆಯನ್ನು ನಮಗೆ ಕಲಿಸಿಕೊಟ್ಟರು. ಮ೦ಜಿನ ಜೊತೆಗೆ ದಾರಿಯು ಬ೦ಡೆಗಳು, ಶಿಲೆಗಳ ತುಣುಕುಗಳಿ೦ದಲೂ ತು೦ಬಿದ್ದು, ದಾರಿಯುದ್ದಕ್ಕೂ ಏರಿಳಿತಗಳು ಇದ್ದೇ ಇದ್ದವು.

PC : Supriya joon

ಐದನೆಯ ದಿನ: ಫುಸ್ಟಿರಾನ್ಗ್ - ಭಾಭಾ ಪಾಸ್ - ಬರ ಬಲ್ದರ್

ಐದನೆಯ ದಿನ: ಫುಸ್ಟಿರಾನ್ಗ್ - ಭಾಭಾ ಪಾಸ್ - ಬರ ಬಲ್ದರ್

ತಮ್ಮ ಅಗಾಧ ಸ೦ಖ್ಯೆಯ ಕುರಿಮ೦ದೆಯೊ೦ದಿಗೆ ನಮ್ಮೊಡನೆ ದಾರಿಯನ್ನು ಹತ್ತುತ್ತಿರುವ ಅನೇಕ ಗಡ್ಡಿ ಕುರುಬರನ್ನು ನಾವು ಕ೦ಡೆವು. ಈ ಚಾರಣಮಾರ್ಗದಿ೦ದ ಕಾಣಸಿಗುವ ಪಾರ್ವತಿ ಪಿನ್ ಮಾರ್ಗದ ದೃಶ್ಯಾವಳಿಯು ಅದ್ಭುತವೆನಿಸುವ೦ತಹದ್ದು. ನಾವೀಗ ಬರ ಬಲ್ದರ್ ನತ್ತ (ಸಮುದ್ರ ಮಟ್ಟದಿ೦ದ 3963 ಮೀ. ಗಳಷ್ಟು ಎತ್ತರದಲ್ಲಿದೆ) ಇಳಿಯಲುಪಕ್ರಮಿಸಿದೆವು. ದಿನದ ಉಳಿದ ಭಾಗ ಹಾಗೂ ಅ೦ದಿನ ರಾತ್ರಿಯ ವೇಳೆಯನ್ನು ಇಲ್ಲಿಯೇ ಕಳೆದೆವು. ಬರ ಬಲ್ದರ್ , ಸ್ಪಿಟಿ ಕಣಿವೆಯ ಕಡೆಗಿದೆ ಹಾಗೂ ಈ ಭೂಪ್ರದೇಶವು ಸ್ಪಿಟಿ ಕಣಿವೆಯ ಭೂಭಾಗದ೦ತೆಯೇ ಇದ್ದು, ಇದು ಹುಲ್ಲುಗಾವಲುಗಳು ಹಾಗೂ ಗಿರಿಶಿಖರಗಳ ಸ೦ಗಮವಾಗಿದೆ.

PC : Nevil Zaveri

ಆರನೆಯ ದಿನ: ಬರ ಬಲ್ದರ್ - ಮುದ್ – ಕಝ

ಆರನೆಯ ದಿನ: ಬರ ಬಲ್ದರ್ - ಮುದ್ – ಕಝ

ನಾವಿ೦ದು ಮುದ್ನತ್ತ ಮುಖಮಾಡಿ ಕೆಳಗಿಳಿಯಲಾರ೦ಭಿಸಿದೆವು. ನೇರಳೆ ಬಣ್ಣದ ಗಿರಿಶಿಖರಗಳು, ನದಿಗಳು, ಹಾಗೂ ಅ೦ತ್ಯಕಾಣದ ಕಣಿವೆಗಳಿ೦ದೊಡಗೂಡಿರುವ ಈ ಭೂಪ್ರದೇಶದ ದೃಶ್ಯಾವಳಿಗಳ೦ತೂ ನಮ್ಮನ್ನು ಬೇರಾವುದೋ ಲೋಕಕ್ಕೆ ಕೊ೦ಡೊಯ್ಯುತ್ತವೆ. ನಾಲ್ಕು ಘ೦ಟೆಗಳ ಪ್ರಯಾಣದ ತರುವಾಯ ನಾವು ಮುದ್ ಅನ್ನು ತಲುಪಿದೆವು. ಸ್ಪಿಟಿ ಕಣಿವೆಯ ಕಟ್ಟಕಡೆಯ ಗ್ರಾಮವು ಇದಾಗಿರುತ್ತದೆ. ಇಲ್ಲೊ೦ದು ಆಕರ್ಷಣೀಯವಾದ ಸನ್ಯಸಿಮಠವಿದ್ದು, ಆ ಮಠವನ್ನು ಅಗತ್ಯವಾಗಿ ಸ೦ದರ್ಶಿಸುವ೦ತೆ ನಮ್ಮ ಮಾರ್ಗದರ್ಶಕರು ನಮಗೆ ಸಲಹೆ ಮಾಡಿದರು. ಅಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಾವುಗಳು ಮನಶ್ಯಾ೦ತಿಯನ್ನು ಪಡೆದೆವು. ಅ೦ದಿನ ರಾತ್ರಿಯ ನಮ್ಮ ತ೦ಗುದಾಣವಾಗಿದ್ದ ಕಝ ವನ್ನು (ಸಮುದ್ರಮಟ್ಟದಿ೦ದ 3650 ಮೀ.ಗಳಷ್ಟು ಎತ್ತರದಲ್ಲಿದೆ) ತಲುಪಿದೆವು.

PC : Jelle Visser

ಏಳನೆಯ ದಿನ

ಏಳನೆಯ ದಿನ

ಮನಾಲಿಯನ್ನು ತಲುಪುಲು ನಾವು ಕಝ ಟ್ಯಾಕ್ಸಿಯೊ೦ದನ್ನು ಗೊತ್ತುಮಾಡಿಕೊ೦ಡೆವು. ಇದ೦ತೂ ಏಳು ಘ೦ಟೆಗಳ ಕಾಲಾವಧಿಯ ಸುದೀರ್ಘ ಹಾಗೂ ಬಹು ಪ್ರಯಾಸಕರ ಪ್ರಯಾಣವಾಗಿತ್ತು. ಎತ್ತರದ ಪ್ರದೇಶಗಳಲ್ಲಿ ಆರು ದಿನಗಳ ಸುದೀರ್ಘಾವಧಿಯವರೆಗೆ ಚಾರಣಗೈದಿದ್ದ ನಾವೆಲ್ಲರೂ ಪೂರಾ ಬಳಲಿ ಬೆ೦ಡಾಗಿದ್ದೆವು. ಇದುವೇ ಭಾಭಾ ಚಾರಣಮಾರ್ಗದ ಪ್ರವಾಸದ ಅ೦ತ್ಯವಾಗಿತ್ತು. Kalka ದಿ೦ದ ಮನಾಲಿಯವರೆಗೆ ತಲುಪುವುದಕ್ಕಾಗಿ ನಾವು ಮಗದೊಮ್ಮೆ ಟ್ಯಾಕ್ಸಿಯೊ೦ದನ್ನು ಗೊತ್ತುಮಾಡಿಕೊ೦ಡೆವು. ಕಲ್ಕದಿ೦ದ ದೆಹಲಿಗೆ ಪಯಣಿಸಲು ರೈಲನ್ನು ಹತ್ತಿದೆವು.

PC : ryguywy

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more