• Follow NativePlanet
Share
» »ಬೆಂಗ್ಳೂರು ಅಕ್ಕ ಪಕ್ಕ ಎಷ್ಟೆಲ್ಲಾ ವಾಟರ್ ಪಾರ್ಕ್ ಇದೆ ಗೊತ್ತಾ?

ಬೆಂಗ್ಳೂರು ಅಕ್ಕ ಪಕ್ಕ ಎಷ್ಟೆಲ್ಲಾ ವಾಟರ್ ಪಾರ್ಕ್ ಇದೆ ಗೊತ್ತಾ?

Posted By: Manjula Balaraj Tantry

ನೀರಿನಲ್ಲಿ ಆಡೋದಂದ್ರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟ. ವಾಟರ್ ಪಾರ್ಕ್‌ಗಾಗಿ ದೂರದ ರಾಜ್ಯಗಳಿಗೆ ಹೋಗುವುದಕ್ಕಿಂತ ನಮ್ಮ ಸಮೀಪ ಇರುವ ವಾಟರ್ ಪಾರ್ಕ್‌ಗಳಿಗೆ ಹೋಗೋದು ಬೆಸ್ಟ್ ಅಲ್ವಾ? ಹಾಗಾದ್ರೆ ಬೆಂಗಳೂರಿಗೆ ಸಮೀಪದಲ್ಲಿ ಎಷ್ಟೆಲ್ಲಾ ವಾಟರ್ ಪಾರ್ಕ್ ಇದೆ ನಿಮಗೆ ಗೊತ್ತಾ? ಗೊತ್ತಿಲ್ಲಂದ್ರೆ ಇಲ್ಲಿದೆ ನೋಡಿ ಲಿಸ್ಟ್

ವಂಡರ್ ಲಾ

ವಂಡರ್ ಲಾ

ಊ ಲಾ ಲಾ ವಂಡರ್ ಲಾ- ವಂಡರ್ ಲಾ ದಂತಹ ಅದ್ಬುತವಾದ ಪಾರ್ಕ್ ಗೆ ಹೋದ ನಂತರ ಇಲ್ಲಿಯ ಕೆಲವು ಸವಾರಿಗಳನ್ನು ಅಂದರೆ ಮೋಜಿನ ಚಟುವಟಿಕೆಗಳನ್ನು ಅನುಭವಿಸಿದ ನಂತರ ಈ ಒಂದು ಪದವು ಮನಸ್ಸಿಗೆ ಬರುವುದರಲ್ಲಿ ಸಂಶಯವಿಲ್ಲ. ಸುಮಾರು 30 ಹೆಕ್ಟೇರ್ ಭೂಪ್ರದೇಶದಲ್ಲಿ ಹರಡಿರುವ ವಂಡರ್ ಲಾ ಬೆಂಗಳೂರಿನ ಸಮೀಪವಿರುವ ಅತ್ಯಂತ ಪ್ರಸಿದ್ಧ ಮನೋರಂಜನಾ ಮತ್ತು ನೀರಿನ ಉದ್ಯಾನಗಳಲ್ಲಿ ಒಂದಾಗಿದೆ. ಮೈಸೂರು ರಸ್ತೆಗೆ ಹತ್ತಿರದಲ್ಲಿ ನೆಲೆಸಿರುವ ಇದು ಪ್ರಮುಖ ನಗರದಿಂದ ನೀವು ಬಿಡದಿಯ ಕಡೆಗೆ ಪ್ರಯಾಣಿಸಿದರೆ ಸುಲಭವಾಗಿ ತಲುಪಬಹುದಾಗಿದೆ ಈ ಸ್ಥಳವು ವಾರಾಂತ್ಯದಲ್ಲಿ ಜನಸಂದಣಿಯಿಂದ ತುಂಬಿ ತುಳುಕಿರುತ್ತದೆ. ನೀರಿನಲ್ಲಿ ವೇವ್ ಪೂಲ್, ವರ್ಟಿಕಲ್ ಜಲಪಾತ, ಮಳೆಯಲ್ಲಿ ನೃತ್ಯ ಮತ್ತು ಪ್ಲೇ ಕೊಳಗಳು ಅಥವಾ ಲೇಜೀ ಕೊಳದಲ್ಲಿ ಟೂಬ್ ಮೇಲೆ ಕುಳಿತು ತೇಲಾಡಬಹುದು.

ನೀವು ನೆಲದ ಮೇಲೆ ಆಟವಾಡಬೇಕೆಂದಿದ್ದಲ್ಲಿ ಇದಕ್ಕಾಗಿ ಪ್ರತ್ಯೇಕ ಟಿಕೇಟ್ ಖರೀದಿಸಬೇಕಾಗುತ್ತದೆ. ಕಡಿಮೆ ಉತ್ಸಾಹಿಗಳಿಗಾಗಿ ಲೇಸರ್ ಶೋ ಇದೆ ಅಥವಾ ಸಂಗೀತ ಶೋ ಇದ್ದು ಇದು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ನೀವೇ ನೋಡುವಂತೆ ಇಲ್ಲಿ ಎಲ್ಲರಿಗೋಸ್ಕರ ಏನಾದರೂ ಇದ್ದೇ ಇದೆ. ಲಾಕರ್ ಗಳು ಮಕ್ಕಳಿಗೆ ಆಟವಾಡುವ ಸ್ಥಳಗಳು, ಹೊಟೇಲುಗಳು ಮತ್ತು ಕೆಲವು ಮುಖ್ಯವಾದ ಆಂತರಿಕ ಸೌಲಭ್ಯಗಳ ಸೌಕರ್ಯವಿದೆ.

ವೇಳೆ: ಬೆಳಿಗ್ಗೆ 11 ರಿಂದ - ಸಾಯಂಕಾಲ 6 ರ ವರೆಗೆ ಕೆಲವು ಮುಖ್ಯ ದಿನಗಳಲ್ಲಿ ಬೆಳಿಗ್ಗೆ 11 ರಿಂದ - ಸಾಯಂಕಾಲ 7 ರವರೆಗೆ ತೆರೆದಿರುತ್ತದೆ.
ವಿಳಾಸ: 28 ನೇ ಕೆ. ಎಮ್, ಮೈಸೂರು ರಸ್ತೆ, ಬೆಂಗಳೂರು ಕರ್ನಾಟಕ 562109 (ಎಮ್ ಎ ಪಿ)
ದೂರವಾಣಿ: +91 80 2201 0333
ವೆಬ್ಸೈಟ್: wonderla.com

ನೀಲಾದ್ರಿ ಅಮ್ಯೂಸ್ ಮೆಂಟ್ ವಾಟರ್ ಪಾರ್ಕ್

ನೀಲಾದ್ರಿ ಅಮ್ಯೂಸ್ ಮೆಂಟ್ ವಾಟರ್ ಪಾರ್ಕ್

ಈ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಸುಮಾರು 50 ಬಗೆಯ ಸವಾರಿಗಳಿದ್ದು ಎಲ್ಲಾ ಪ್ರಾಯದವರಿಗೂ ಅನುಕೂಲವಾಗುವಂತಹ ಆಯ್ಕೆಗಳಿವೆ. ಇದು ಬೆಂಗಳೂರುನಗರದ ಹೊಸೂರು ರಸ್ತೆಯಲ್ಲಿ ನೆಲೆಸಿದ್ದು ಬೆಂಗಳೂರಿಗೆ ಹತ್ತಿರವಿರುವ ಈ ಅಮ್ಯೂಸ್ ಮೆಂಟ್ ಪಾರ್ಕ ಮತ್ತು ವಾಟರ್ ಪಾರ್ಕ್(ನೀರಿನ ಉದ್ಯಾನವನ) ಅತ್ಯಂತ ಹಳೆಯದಾದ ಪಾರ್ಕ್ ಆಗಿದೆ. ಇಲ್ಲಿ ಅಮ್ಯೂಸ್ ಮೆಂಟ್ ಮತ್ತು ವಿನೋದದ ಸವಾರಿಗಳು ಮಾತ್ರವಲ್ಲದೆ ಈ ಪಾರ್ಕ್ ನಲ್ಲಿ ಕೆಲವು ಆಟವಾಡುವ ವಲಗಳೂ ಇವೆ. ಆಂಫಿಥಿಯೆಟರ್, ಹೊಟೇಲು ಮತ್ತು ರೆಸ್ಟೋರೆಂಟ್ ಗಳನ್ನೂ ಇಲ್ಲಿ ಕಾಣಬಹುದಾಗಿದೆ.

ಕುಟುಂಬದವರ ಜೊತೆಯಲ್ಲಿ ಕಾಲಕಳೆಯಬಹುದಾದ ಸ್ಥಳವಾದುದರಿಂದ ಇಲ್ಲಿ ಅನೇಕ ನೀರಿನಲ್ಲಿನ ಸವಾರಿಗಳೂ ಇವೆ. ವಾಟರ್ ಸ್ಲೈಡ್ ಮತ್ತು ಶಿಶುಗಳಿಗಾಗಿ ಚೂಟ್, ವೀಡಿಯೋ ಗೇಮ್ ವಲಯ, ಮತ್ತು ಮಕ್ಕಳಿಗಾಗಿ ಬೌನ್ಸಿಂಗ್ ಕಾಸ್ಟಲ್(ಕೋಟೆ) ಇತ್ಯಾದಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಪ್ರವೇಶ ಶುಲ್ಕ ಅಮ್ಯೂಸ್ಮೆಂಟ್ ಪಾರ್ಕ್: ವಯಸ್ಕರಿಗೆ ಪ್ರತಿ 40 ರೂ. ಪ್ರತಿ ಮಗುವಿಗೆ ಐ ಎನ್ ಆರ್ 30 / -
ಎಂಟ್ರಿ ಶುಲ್ಕ ವಾಟರ್ ಪಾರ್ಕ್: ಐ ಎನ್ ಆರ್ 75 / ವಯಸ್ಕ, ಐ ಎನ್ ಆರ್ 60- ಪ್ರತಿ ಮಗುವಿಗೆ
ಸಮಯ: ಸೋಮವಾರ ಮಂಗಳವಾರ ಬುಧ, ಗುರು, ಶುಕ್ರವಾರ - ಬೆಳಿಗ್ಗೆ 11: 00 - ಸಾಯಂಕಾಲ 6:00 . ಶನಿವಾರ ಮತ್ತು ಭಾನುವಾರ -ಬೆಳಿಗ್ಗೆ 11: 00 - ಸಾಯಂಕಾಲ 7:00 ರವರೆಗೆ
ವಿಳಾಸ: ಎಲೆಕ್ಟ್ರಾನಿ ಸಿಟಿ ಹಿಂಬಾಗ, ಬೆಂಗಳೂರು - 561229
ದೂರವಾಣಿ: 91 80 8522 633/ 2652 4390

ಇನ್ನೋವೇಟಿವ್ ಫಿಲಂ ಸಿಟಿ

ಇನ್ನೋವೇಟಿವ್ ಫಿಲಂ ಸಿಟಿ

ಇನ್ನೋವೇಟಿವ್ ಫಿಲಂ ಸಿಟಿ ಹೆಸರೇ ಸೂಚಿಸುವಂತೆ ಇದೊಂದು ಉತ್ತಮವಾದ ಸೃಜನಶೀಲ ಮತ್ತು ಥೀಮ್ ಪಾರ್ಕ್ ಎನಿಸಿದೆ. ಇಲ್ಲಿ ಮೇಣದ ವಸ್ತುಸಂಗ್ರಹಾಲಯ, ಸವಾರಿಗಳು, ಅನುಸ್ಥಾಪನ ಮತ್ತು ಕಾರ್ಟೂನ್ ನಗರ ಮುಂತಾದ ವಿಭಿನ್ನ ಚಟುವಟಿಕೆಗಳಿಗೆ ವಿಭಾಗಗಳನ್ನು ಒಳಗೊಂಡಿದೆ. ಮನೋರಂಜನೆಗೆ ಬೇಕಾದ ಸಮಗ್ರ ವಿಧಾನವನ್ನು ಇಲ್ಲಿ ಅಳವಡಿಸಲಾಗಿದೆ. ಚಲನಚಿತ್ರ ನಗರವು ನಂಬಲಸಾಧ್ಯವಾದ ರಿಪ್ಲೆಸ್ ಒಂದು ಕನ್ನಡಿ ಜಟಿಲ, ಕುದುರೆ ಸವಾರಿ ಪ್ರದೇಶ, ಆಕ್ವಾ ನಗರ ಮತ್ತು ಹೆಚ್ಚಿನವುಗಳನ್ನು ಹೊಂದಿದೆ. ಇದು ಮುಖ್ಯ ನಗರದಿಂದ 40 ಕಿ.ಮೀ ದೂರದಲ್ಲಿದ್ದು ಇಲ್ಲಿಗೆ ಪ್ರಯಾಣ ಮಾಡುವುದು ಒಂದು ಮೌಲ್ಯಯುತವಾದುದಾಗಿದೆ. ಈ ಸೃಜನಾತ್ಮಕ ಜಾಗದಲ್ಲಿ ಕೆಲವು ಗಂಟೆಗಳ ಕಾಲ ಜಿಫಿಯಲ್ಲಿ ಹಾದು ಹೋಗಬಹುದು.ಇದು ಬೆಂಗಳೂರಿನ ಬಳಿ ಇರುವ ಅತ್ಯಂತ ನವೀನ ಮಾದರಿಯ ಹಾಗೂ ಮನೋರಂಜನಾ ಮತ್ತು ನೀರಿನ ಉದ್ಯಾನವನಗಳಲ್ಲಿ ಒಂದಾಗಿದೆ.

ಸಮಯ: ಬೆಳಿಗ್ಗೆ 10 ರಿಂದ ಸಾಯಂಕಾಲ 7 ರವರೆಗೆ
ವಿಳಾಸ : 24 & 26 ಕೆ ಐ ಎ ಡಿ ಬಿ ಎಸ್ಟೇಟ್ಸ್, ಬಿರ್ ಮಂಗಳ ಕ್ರಾಸ್, ಬಿಡಲಿ ಕೈಗಾರಿಕಾ ಪ್ರದೇಶ, ಬೆಂಗಳೂರು 562109 (ಎಮ್ ಎ ಪಿ)
ದೂರವಾಣಿ: +91 80 2209 9999
ವೆಬ್ಸೈಟ್ : innovativefilmcity.in

ಲುಂಬಿನಿ ಗಾರ್ಡನ್ (ಉದ್ಯಾನವನ)

ಲುಂಬಿನಿ ಗಾರ್ಡನ್ (ಉದ್ಯಾನವನ)

ನಾಗಾವರ ಸರೋವರದ ದಡದಲ್ಲಿರುವ ಲುಂಬಿನಿ ಗಾರ್ಡನ್ ಯುವಕರಿಗೆ ಮತ್ತು ಮಧ್ಯವಯಸ್ಕರಿಗೆ ಸೂಕ್ತವಾದ ಮತ್ತು ಗಮನಾರ್ಹವಾಗಿ ಪ್ರಸಿದ್ದಿಯನ್ನು ಪಡೆಯುತ್ತಿರುವ ತಾಣವಾಗಿದೆ. ಇದಕ್ಕೆ ಹೆಚ್ಚಿನ ಮೆರುಗನ್ನು ತರುವುದೆ ಇಲ್ಲಿಯ ಭವ್ಯವಾದ ಸರೋವರದಿಂದಾಗಿ. ಟ್ರ್ಯಾಂಪೊಲೈನ್, ಕೊಲಂಬಸ್, ರೋಡಿಯೊ ಮತ್ತು ಬ್ರೇಕ್ ಡ್ಯಾನ್ಸ್ ನಂತಹ ಸವಾರಿಗಳು ಯುವಕರನ್ನು ಆಕರ್ಷಿಸುತ್ತದೆ. ವೇವ್ ಪೂಲ್ ಗಳು ಮತ್ತು ದೋಣಿ ಸವಾರಿಗಳು ಸರೋವರದಲ್ಲಿ ಆನಂದಿಸುವ ಇನ್ನೊಂದು ಪರ್ಯಾಯ ಮಾರ್ಗಗಳಾಗಿವೆ. ನೀವು ಪ್ರಶಾಂತ ರೀತಿಯಲ್ಲಿ ದೋಣಿ ವಿಹಾರ ಮಾಡಬಯಸುವಿರಾದಲ್ಲಿ ಅಥವಾ ಸದ್ದು ಗದ್ದಲಗಳಿಂದ ಕೂಡಿದ ವಿಹಾರ ಮಾಡುವಿರಾದಲ್ಲಿ ನೀವು ಎಲ್ಲವನ್ನೂ ಒಂದೇ ಛಾವಣಿಯಡಿಯಲ್ಲಿ ಪಡೆಯುವಿರಿ ಇದರ ಜೊತೆಗೆ ಉದ್ಯಾನವನವು ಹಲವಾರು ಪರಿಸರ ಸ್ನೇಹಿ ಉಪಕ್ರಮಗಳನ್ನು ಹೊಂದಿದೆ.

ಸಮಯ : ಬೆಳಿಗ್ಗೆ 11 ರಿಂದ - ಸಾಯಂಕಾಲ 7
ವಿಳಾಸ: ನಾಗಾವರ ಸರೋವರ, ಕೆ,ಆರ್ ಪುರಂ ರಿಂಗ್ ರೋಡ್, ಬೆಂಗಳೂರು- 560045(ಎಮ್ ಎ ಪಿ)
ದೂರವಾಣಿ: +91 93434 44646
ವೆಬ್ಸೈಟ್ : lumbinigardens.com

ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್

ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್

ಬೆಂಗಳೂರಿಗೆ ಹತ್ತಿರವಿರುವ ಅಮ್ಯೂಸ್ ಮೆಂಟ್ ಮತ್ತು ವಾಟರ್ ಪಾರ್ಕ್ ಗಳ ಪಟ್ಟಿಯಲ್ಲಿ ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ನ ಹೆಸರನ್ನು ಸೇರಿಸದೇ ಹೋದಲ್ಲಿ ಈ ಪಟ್ಟಿಯು ಅಪೂರ್ಣವೆನಿಸುವುದು. ಇದು ಬೆಂಗಳೂರು - ಮೈಸೂರು ರಾಜ್ಯ ಹೆದ್ದಾರಿಯಲ್ಲಿ ನೆಲೆಸಿದ್ದು ಸುಮಾರು 30 ಎಕರೆ ಜಾಗಗಳಲ್ಲಿ ಹರಡಿದೆ. ಇಲ್ಲಿ ನೆಲದ ಮೇಲೆ ಮಾಡುವ ಚಟುವಟಿಕೆಗಳು ಮತ್ತು ನೀರಿನಲ್ಲಿ ಆಟವಾಡುವ ಕ್ರೀಡೆಗಳು ಎಲ್ಲವನ್ನೂ ಹೊಂದಿದೆ . ಇಲ್ಲಿ ಆಟವಾಡಲು ಒಂದು ದಿನವೂ ಕಡಿಮೆಯೆನಿಸುವುದು. ನೆಲದಲ್ಲಿಯ ಕ್ರೀಡೆಗಳ ಜೊತೆಗೆ ಇಲ್ಲಿ ತೆರೆದ ಆಹಾರ ಮಳಿಗೆಗಳಿವೆ. ವಾಸ್ತವವಾದ ಸವಾರಿ ಮಾಡುವ ಪ್ರದೇಶ, ಮಕ್ಕಳ ವಲಯ ಮತ್ತು ಆಟವಾಡುವ ಸ್ಥಳಗಳು, ಸ್ನಾನಗೃಹಗಳು, ಮುಂತಾದವುಗಳನ್ನು ಹೊಂದಿದೆ ಅಲ್ಲದೆ ಬಟ್ಟೆ ಬದಲಿಸುವ ಕೋಣೆಗಳು, ಲಾಕರ್ ಗಳು, ಮತ್ತು ವೈದ್ಯಕೀಯ ಕಿಟ್ ಗಳು ಮುಂತಾದ ಸೌಕರ್ಯಗಳನ್ನೂ ಇಲ್ಲಿ ಒದಗಿಸಿಕೊಡಲಾಗುತ್ತದೆ.

ಸಮಯ : ಬೆಳಿಗ್ಗೆ 10.30 ಯಿಂದ ಸಾಯಂಕಾಲ6.00 ರ ವರೆಗೆ
ವಿಳಾಸ : ಆಫ್ ಕೆ ಆರ್ ಎಸ್ ರಸ್ತೆ, ಮೆಟಗಳ್ಳೀ, ಮೈಸೂರು- 570 016(ಎಮ್ ಎ ಪಿ)
ದೂರವಾಣಿ: +91 95900 80808 / 94485 57029
ವೆಬ್ಸೈಟ್ : grsfantasypark.com

Read more about: bangalore summer

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ