» »ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ

ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ

Written By:

ಭಾರತ, ಪಾಕಿಸ್ತಾನಗಳನ್ನು ಪ್ರತ್ಯೇಕಿಸುವ, ಜನಮನಗಳಲ್ಲಿ ವಿಶೇಷ ಆಸಕ್ತಿ ಕೆರಳಿಸುವ ವಾಘಾ ಗಡಿಯನ್ನು ಹೊಂದಿರುವ ಪಂಜಾಬ್ ರಾಜ್ಯದ ಪ್ರಮುಖ ನಗರ ಅಮೃತಸರ, ಸಿಖ್ಖರ ಪಾಲಿನ ಪ್ರಮುಖ ತೀರ್ಥ ಕ್ಷೇತ್ರವಾಗಿಯೂ ಅಪಾರ ಖ್ಯಾತಿಗಳಿಸಿದೆ. ಅಷ್ಟೆ ಅಲ್ಲ ಐತಿಹಾಸಿಕ ಬರ್ಬರವಾಗಿ ಮಾಡಲಾದ ಜಲಿಯನ್ ವಾಲಾ ಬಾಗ್ ಹತ್ಯಾ ಕಾಂಡಕ್ಕೆ ಸಾಕ್ಷಿಯೂ ಆಗಿದೆ ಅಮೃತಸರ.

ವಿಶೇಷ ಲೇಖನ : ರಕ್ತಸಿಕ್ತ ಜಲಿಯನ್ ವಾಲಾ ಬಾಗ್

ಪಂಜಾಬ್ ರಾಜ್ಯದ ಅತಿ ದೊಡ್ಡ ನಗರಗಳಲ್ಲಿ ಒಂದಾದ ಅಮೃತಸರ ಭಾರತದ ವಾಯವ್ಯ ಭಾಗದಲ್ಲಿ ಉಪಸ್ಥಿತವಿದೆ. ಇದು ಸಿಖ್ ಸಮುದಾಯದವರ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ಕೇಂದ್ರವಾಗಿದೆ. ಈ ನಗರವನ್ನು ಪವಿತ್ರ 'ಅಮೃತ' ಎಂಬ ಸರೋವರದ ಗೌರವಾರ್ಥವಾಗಿ ಹೆಸರಿಸಲಾಗಿದೆ. 16ನೇ ಶತಮಾನದಲ್ಲಿ 4ನೇ ಸಿಖ್ ಗುರು ರಾಮದಾಸರಿಂದ ಈ ನಗರ ಸ್ಥಾಪಿತಗೊಂಡಿತು.

ವಿಶೇಷ ಲೇಖನ : ಭಾರತದ ಪ್ರಮುಖ ಧಾರ್ಮಿಕ ಕೇಂದ್ರ

ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾಗುವ ಮುನ್ನ ಅಂದರೆ 1947ನೇ ಇಸ್ವಿಗೆ ಮೊದಲು ವ್ಯಾಪಾರ ಹಾಗು ವಾಣಿಜ್ಯ ಕ್ಷೇತ್ರದಲ್ಲಿ ಈ ನಗರ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿತ್ತು. ಆ ಹೊತ್ತಿನಲ್ಲಿ ಪಂಜಾಬ್ ರಾಜ್ಯ ಇನ್ನೂ ವಿಭಜನೆಯಾಗಿರಲಿಲ್ಲ. ವಿಭಜನೆಗೊಂಡ ನಂತರ ಪೂರ್ವ ಭಾಗವು ಭಾರತ ಹಾಗೂ ಪಶ್ಚಿಮ ಗಡಿ ಭಾಗ ಪಾಕಿಸ್ತಾನದ ಪಾಲಾಯಿತು. ಇಂದು ಸಾಕಷ್ಟು ಕೈಗಾರಿಕೆಗಳು ನಗರವನ್ನು ಅಭಿವೃದ್ಧಿಗೊಳಿಸುತ್ತಿವೆ. ಅದರಲ್ಲಿ ಅಮೃತ್ಸರ ಪ್ರವಾಸೋದ್ಯಮವು ಸಹ ಒಂದಾಗಿದೆ.

ಅಮೃತಸರ ಹೋಟೆಲುಗಳು

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ವಾಘಾ ಗಡಿ : ಭಾರತದ ಪಂಜಾಬ್ ನಲ್ಲಿರುವ ಅಮೃತಸರ ಮತ್ತು ಪಾಕಿಸ್ತಾನದ ಪಂಜಾಬ್ ನಲ್ಲಿರುವ ಲಾಹೋರ್ ನಗರಗಳ ನಡುವೆ ವಾಘಾ ಬಾರ್ಡರ್ ಆರ್ಮಿ ಔಟ್ ಪೋಸ್ಟ್ ಉಪಸ್ಥಿತವಿದೆ. ಎರಡೂ ರಾಷ್ಟ್ರಗಳ ನಡುವಿನ ಸಂಪರ್ಕ ರಸ್ತೆಯಾಗಿರುವ ವಾಘಾ ಬಾರ್ಡರ್ ನ ಎರಡೂ ಬದಿಗಳಲ್ಲಿ ಬೃಹತ್ತಾದ ಕಟ್ಟಡಗಳಿವೆ. ಇಲ್ಲಿ ಜರುಗುವ "ಬೀಟಿಂಗ್ ರಿಟ್ರೀಟ್" ಅದ್ಭುತವಾಗಿದ್ದು ಅದನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Callaway d1nonly1

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಪ್ರತಿ ದಿನ ಜರುಗುವ ಈ ಅದ್ಭುತ ಚಟುವಟಿಕೆಯು ಸಾಮಾನ್ಯವಾಗಿ ಎರಡೂ ದೇಶಗಳ ಧ್ವಜಗಳನ್ನು ಕಡಿಮೆ ಸ್ತರದಲ್ಲಿ ಹಾರಿಸುವ ಚಟುವಟಿಕೆಯಾಗಿದೆ. ಈ ಸಂಪ್ರದಾಯವನ್ನು 1959 ರಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಎರಡೂ ದೇಶಗಳ ಆಯ್ದ ಸೈನಿಕರು ಇದನ್ನು ಅದ್ಭುತವಾಗಿ ವರ್ತಿಸುತ್ತ ನೆರವೇರಿಸುತ್ತಾರೆ. ಪಾಕಿಸ್ತಾನದ ಭಾಗದಿಂದ ತೆಗೆಯಲಾದ ಚಿತ್ರ.

ಚಿತ್ರಕೃಪೆ: Kamran Ali

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಗಡಿಕಾವಲು ದಳದ ಪ್ರವೇಶ ದ್ವಾರವನ್ನು ಸ್ವರ್ಣ ಜಯಂತಿ ಗೇಟ್ ಎಂದೂ ಸಹ ಕರೆಯುತ್ತಾರೆ. ಇಲ್ಲಿಂದ ಸಮೃದ್ಧವಾಗಿರುವ ಸುತ್ತಮುತ್ತಲಿನ ಪರಿಸರವನ್ನು ಕಾಣಬಹುದು. ಬೀಟಿಂಗ್ ರಿಟ್ರೀಟ್ ವೀಕ್ಷಿಸಲು ನೆರೆದಿರುವ ಅಪಾರವಾದ ಜನಸ್ತೋಮ.

ಚಿತ್ರಕೃಪೆ: Abigor

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಎರಡೂ ದೇಶಗಳ ಯೋಧರು ಸಮಾರಂಭದ ಸಮಾರೋಪದ ಸಂದರ್ಭದಲ್ಲಿ ಗೇಟುಗಳನ್ನು ಮುಚ್ಚುವುದಕ್ಕೂ ಮೊದಲು ಕೈ ಕುಲುಕುತ್ತಿರುವುದು. ಸಾಮಾನ್ಯವಾಗಿ ಈ ಚಟುವಟಿಕೆಯು ಪ್ರತಿ ದಿನ ಸೂರ್ಯಾಸ್ತದ ಸಂದರ್ಭದಲ್ಲಿ ನೆರವೇರುತ್ತದೆ.

ಚಿತ್ರಕೃಪೆ: Koshy Koshy

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ನಗರದ ಪ್ರಮುಖ ಆಕರ್ಷಣೆಯಾಗಿದೆ ಸ್ವರ್ಣ ಮಂದಿರ ಅರ್ಥಾತ್ ಗೋಲ್ಡನ್ ಟೆಂಪಲ್. ಇದನ್ನು ಶ್ರೀ ಹರಮಂದಿರ ಸಾಹೀಬ್ ಎಂತಲೂ ಕರೆಯುತ್ತಾರೆ. ವರ್ಷವಿಡೀ ಕೋಟ್ಯಂತರ ಭಕ್ತರು ಭೇಟಿ ನೀಡುವ ಪ್ರಮುಖ ಸ್ಥಳ ಇದಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಆಗಸದಲ್ಲಿ ಮಿಂಚುತ್ತಿರುವ ವಿವಿಧ ಚಿತ್ತಾರಗಳಲ್ಲಿ ಕಂಗೊಳಿಸುತ್ತಿರುವ ಸ್ವರ್ಣ ಮಂದಿರ.

ಚಿತ್ರಕೃಪೆ: gags9999

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತರಸದಲ್ಲಿ ಉಪಸ್ಥಿತವಿರುವ ಈ ಪವಿತ್ರ ಕ್ಷೇತ್ರದಲ್ಲಿ ಸಿಖ್ ಸಮುದಾಯದ 5ನೇ ಗುರು ಅರ್ಜುನ್ ದೇವಜೀ ಅವರು 16ನೇ ಶತಮಾನದ ಸಂದರ್ಭದಲ್ಲಿ ಇಲ್ಲಿ ಗುರುದ್ವಾರ ಕಟ್ಟಿಸಿದರು.

ಚಿತ್ರಕೃಪೆ: Rishabh Mathur

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಶಿಲೆಯಲ್ಲಿ ಕಟ್ಟಲಾಗಿರುವ ಎರಡು ಅಂತಸ್ತುಗಳುಳ್ಳ ಈ ಗುರುದ್ವಾರಾದ ಸುತ್ತಲೂ ಪವಿತ್ರ ನೀರಿನ ಕಲ್ಯಾಣಿ ಇದ್ದು ಅದನ್ನು ಅಮೃತ ಸರೋವರ ಎಂದು ಕರೆಯುತ್ತಾರೆ. ಸಿಖ್ಖರ ನಂಬಿಕೆಯನುಸಾರವಾಗಿ ಇಲ್ಲಿ ಮಿಂದೆದ್ದರೆ ಗುರುವಿನ ಕೃಪಾ ಕಟಾಕ್ಷ ದೊರೆಯುತ್ತದೆ.

ಚಿತ್ರಕೃಪೆ: Arian Zwegers

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಸಿಖ್ ಧರ್ಮೀಯರ ಪವಿತ್ರ ಗ್ರಂಥವಾದ ಆದಿ ಗ್ರಂಥವನ್ನು (ಗ್ರಂಥ ಸಾಹೀಬ್) ಈ ಗುರುದ್ವಾರಾದಲ್ಲಿ ಇಡಲಾಗಿರುವುದನ್ನು ಕಾಣಬಹುದು. ಈ ದೇಗುಲದ ನಾಲ್ಕು ದ್ವಾರಗಳು ಭ್ರಾತೃತ್ವ ಮತ್ತು ಸಮಾನತೆಯನ್ನು ಸೂಚಿಸುತ್ತವೆ. ಅಮೃತಸರಕ್ಕೆ ಭೇಟಿ ನೀಡುವ ದೇಶೀಯ ಮತ್ತು ವಿದೇಶೀಯ ಪ್ರವಾಸಿಗರಿಗೆ ಸಿಖ್ಖರ ಈ ಪವಿತ್ರ ಕ್ಷೇತ್ರಕ್ಕೆ ಖಂಡಿತವಾಗಿಯೂ ಭೇಟಿ ನೀಡಲೇಬೇಕು.

ಚಿತ್ರಕೃಪೆ: Giridhar Appaji Nag Y

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರದ ಲೋಹಘರ್ ಗೇಟ್ ನಲ್ಲಿ ಉಪಸ್ಥಿತವಿರುವ ದುರ್ಗಿಯಾನ ಮಂದಿರ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ತಾಯಿ ದುರ್ಗೆಗೆ ಸಮರ್ಪಿಸಲಾಗಿದೆ. ಲಕ್ಷ್ಮೀನಾರಾಯಣ ಮಂದಿರ ಎಂದೂ ಕರೆಯಲ್ಪಡುವ ಈ ಧಾರ್ಮಿಕ ಕಟ್ಟಡವನ್ನು 20ನೇ ಶತಮಾನದಲ್ಲಿ ಹರಸಾಯಿಮಲ್ ಕಪೂರ್ ಅವರು ಗೋಲ್ಡನ್ ಟೆಂಪಲ್ ನ ಪ್ರತಿಕೃತಿಯಾಗಿ ಕಟ್ಟಿಸಿದರು.

ಚಿತ್ರಕೃಪೆ: Guilhem Vellut

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಮಂದಿರದ ಸಂಕೀರ್ಣ ಹಲವು ಹಿಂದೂ ದೇವತೆಗಳಾದ ದುರ್ಗಾದೇವಿ, ಸೀತಾ ಮಾತಾ ಮತ್ತು ಹನುಮಂತನ ಪ್ರತಿಮೆಗಳನ್ನು ಒಳಗೊಂಡಿದೆ. ಈ ಮಂದಿರದ ಮಹತ್ವದ ಲಕ್ಷಣವೆಂದರೆ ಗೋಡೆಯ ಮೇಲೆ ಮಾತೆ ದುರ್ಗೆಯ ವಿವಿಧ ಅವತಾರವಿರುವ ನಾಜೂಕಿನ ಕೆತ್ತನೆಗಳು.

ಚಿತ್ರಕೃಪೆ: Poco a poco

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅನನ್ಯವಾದ ಗೋಥಿಕ್ ಹಾಗು ಮುಘಲ್ ಸಮ್ಮಿಲನದ ಕಟ್ಟಡದ ಶೈಲಿಯನ್ನು ಬಿಂಬಿಸುವ ಉದ್ಯಾನವನವೇ ಅಮೃತಸರದಲ್ಲಿರುವ ಕೈಸರ್ ಬಾಗ್. ಉದ್ಯಾನದಲ್ಲಿ ಸುಂದರವಾದ ಕೆತ್ತನೆಯ ಕಟ್ಟಡವಿದ್ದು ಅದರ ಮೂರು ಬದಿಗಳನ್ನು ಹಳದಿ ಬಣ್ಣದ ಇಟ್ಟಿಗೆಗಳಿಂದ ಕಟ್ಟಲಾಗಿದೆ. ಅಲ್ಲದೆ ಗುಂಪಾಗಿ ಕಾಣುವ ಗುಮ್ಮಟಗಳು ಮತ್ತು ಕಪೋಲಾಗಳು ಯಾತ್ರಿಕರಿಗೆ ಮೇಲಿಂದ ಮೇಲೆ ಭೇಟಿ ನೀಡುವಂತೆ ಪ್ರೇರೇಪಿಸುತ್ತವೆ. ಕೆಲ ಹೊತ್ತು ವಿಶ್ರಾಂತಿಗಾಗಿ ಇದು ಸೂಕ್ತವಾದ ಸ್ಥಳವಾಗಿದೆ.

ಚಿತ್ರಕೃಪೆ: Aditya somani

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರದಲ್ಲಿರುವ ರಾಣಿ ಕಾ ಬಾಗ್ ಪ್ರದೇಶದಲ್ಲಿ ಮಾತಾ ಲಾಲ್ ದೇವಿಯ ದೇವಸ್ಥಾನವಿದೆ. 20ನೇ ಶತಮಾನದಲ್ಲಿದ್ದ ಸಂತ ಮಾತಾ ಲಾಲ್ ದೇವಿಗೆ ಈ ಮಂದಿರವನ್ನು ಸಮರ್ಪಿಸಲಾಗಿದ್ದು, ಭಕ್ತರು ಇವರಿಗೆ ಪೂಜ್ಯ ಮಾತಾಜಿ ಎಂದೂ ಸಹ ಕರೆಯುತ್ತಾರೆ. ನಗರದಲ್ಲಿರುವ ಹಿಂದೂಗಳ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಮಂದಿರದಕಟ್ಟಡವು ವಿನ್ಯಾಸದಲ್ಲಿ ಕಾತ್ರಾದಲ್ಲಿರುವ ಪ್ರಸಿದ್ಧ ವೈಷ್ಣೋದೇವಿ ಮಂದಿರವನ್ನು ಹೋಲುತ್ತದೆ. ಧಾರ್ಮಿಕ ಮಹತ್ವವುಳ್ಳ ಈ ಮಂದಿರಕ್ಕೆ ಜನರು ದೂರದೂರದಿಂದಲೂ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Poco a poco

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಶ್ರೀ ಅಕಾಲ್ ತಖ್ತ್ ಎಂದರೆ ಶಾಶ್ವತ ಸಿಂಹಾಸನ ಎಂದು ಅರ್ಥ. ಇದು ಖಲ್ಸಾ ಪಂಥದ ಅತ್ಯುನ್ನತ ಸ್ಥಾನವಾಗಿದ್ದು, ಸಿಖ್ ಧರ್ಮೀಯರ ಎಲ್ಲ ಆಧ್ಯಾತ್ಮಿಕ ಚಟುವಟಿಕೆಯ ಕೇಂದ್ರವಾಗಿದೆ. ಸಿಖ್ಖರ 6ನೇ ಧರ್ಮಗುರುವಾಗಿರುವ ಗುರು ಹರಗೋಬಿಂದ್ ಜೀ ಅವರು ನಿರ್ಮಿಸಿರುವ ಶ್ರೀ ಅಕಾಲ್ ತಖ್ತ್ ಅತ್ಯಂತ ಹಳೆಯದಾಗಿದ್ದು, ಭಾರತದಲ್ಲಿರುವ ಎಲ್ಲ ಐದು ತಖ್ತ್‌ಗಳಿಗಿಂತ ಶ್ರೇಷ್ಠವಾಗಿದೆ. ಹರಮಂದಿರ ಸಾಹೀಬ್ ಕಾಂಪ್ಲೆಕ್ಸ್ ನಲ್ಲಿ ಇರುವ ಶ್ರೀ ಅಕಾಲ್ ತಖ್ತ್ ಜಾಗವನ್ನು ಎಲ್ಲ ಸಿಖ್ಖರು ಸೇರಿದಂತೆ ಪ್ರವಾಸಿಗರು ಅಗತ್ಯವಾಗಿ ನೋಡಲೇಬೇಕಾದ ಪ್ರವಾಸಿ ತಾಣ.

ಚಿತ್ರಕೃಪೆ: Navroop Sehmi

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರದ ಸುಂದರ ರಾಮ್ ಬಾಗ್ ಗಾರ್ಡನ್ ನಲ್ಲಿ ಈ ಮಹಾರಾಜ ರಂಜಿತ್ ಸಿಂಗ್ ವಸ್ತುಸಂಗ್ರಹಾಲಯ ಇದೆ. ಮೊದಲಿಗೆ ರಾಜನ ಬೇಸಿಗೆ ಅರಮನೆಯಾಗಿದ್ದ ಇದನ್ನು ಈಗ ಮಹಾರಾಜ ರಂಜಿತ್ ಸಿಂಗ್ ನ ಪರಂಪರೆಯ ಆಸ್ತಿಯ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಸುಂದರವಾದ ಗಾರ್ಡನ್ ನಲ್ಲಿ ಉಪಸ್ಥಿತವಿರುವ ಇದರ ಪ್ರವೇಶ ದ್ವಾರ ಉತ್ತಮ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಈ ಮ್ಯೂಸಿಯಂ ಮುಘಲರ ಕಾಲಕ್ಕೆ ಸಂಬಂಧಿಸಿದ ಅನೇಕ ಆಯುಧಗಳು, ನಾಣ್ಯಗಳು, ಕೈಬರಹಗಳನ್ನು ಒಳಗೊಂಡಿದೆ. ಪಂಜಾಬನ್ನು ಆಳಿದವರ ಭಾವಚಿತ್ರಗಳು, ಪಂಜಾಬ್ ರಾಜರ ಮತ್ತು ದರ್ಬಾರ್ ಹಾಲಿನ ತೈಲವರ್ಣ ಚಿತ್ರಗಳು ಮನಸೆಳೆಯುತ್ತವೆ.

ಚಿತ್ರಕೃಪೆ: punjabmuseums.gov.in

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರದಿಂದ 22 ಕಿ.ಮೀ. ದೂರದಲ್ಲಿರುವ ತರ್ಣ್ ತಾರಣ್, ಒಂದು ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ. ಸಿಖ್ ಸಮುದಾಯದವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಈ ತರ್ಣ್ ತಾರಣ್ ಸಾಹೀಬ್, ಸಾಕಷ್ಟು ಐತಿಹಾಸಿಕ ಗುರುದ್ವಾರಗಳಿಗೆ ಮನೆಯಾಗಿದೆ. ಅದರಲ್ಲಿ ಪ್ರಮುಖವಾದುದೆಂದರೆ, ದರ್ಬಾರ್ ಸಾಹೀಬ್ ಶ್ರೀ ಅರ್ಜುನ್ ದೇವ್ ಜಿ. ಇಲ್ಲಿನ ತರ್ಣ್ ತಾರಣ್ ಪವಿತ್ರ ಸರೋವರ ವಿಶ್ವದಲ್ಲೇ ಅತಿದೊಡ್ಡ ಸರೋವರವೆನಿಸಿಕೊಂಡಿದೆ. ತರ್ಣ್ ತಾರಣ್ ಎಂಬ ಸರೋವರದ ಗೌರವಾರ್ಥವಾಗಿ ಈ ಪ್ರದೇಶಕ್ಕೆ ತರ್ಣ್ ತಾರಣ್ ನಗರ ಎಂದು ಹೆಸರಿಸಲಾಗಿದೆ.

ಚಿತ್ರಕೃಪೆ: Jujhar.pannu

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಪಂಜಾಬ್ ರಾಜ್ಯದ ಅಮೃತಸರ್ ಪಟ್ಟಣದಲ್ಲಿರುವ ಜಲಿಯನ್‍ವಾಲಾ ಬಾಗ್ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾರದಂತಹ ಒಂದು ಕಪ್ಪು ಅಧ್ಯಾಯ. ನಿಸ್ಸಹಾಯಕ, ಪ್ರಾಮಾಣಿಕ, ಮುಗ್ಧ ಯಾತ್ರಾರ್ಥಿಗಳನ್ನು ಕರುಣೆಯಿಲ್ಲದೆ ಬಂದೂಕಿನ ಗುಂಡುಗಳಿಂದ ಹೊಡೆದುರುಳಿಸಿದ್ದನ್ನು ಮೂಕ ಸಾಕ್ಷಿಯಾಗಿ ನಿಂತು ಕಂಡಿರುವ ಉದ್ಯಾನವೆ ಜಲಿಯನ್‍ವಾಲಾ ಬಾಗ್. ಇಂದು ರಾಷ್ಟ್ರೀಯ ಸ್ಮಾರಕವಾಗಿರುವ ಈ ಉದ್ಯಾನವು ಗತ ಕಾಲದಲ್ಲಿ ನಡೆದ ದುರದೃಷ್ಟಕರ ಹಾಗೂ ಅತಿ ಖಂಡನೀಯವಾದ ಹತ್ಯಾಕಾಂಡದ ಕಥೆಯನ್ನು ಭೇಟಿ ನೀಡುವ ಪ್ರವಾಸಿಗರಿಗೆ ಹೇಳುತ್ತಿದೆ. ಜಲಿಯನ್ ವಾಲಾ ಬಾಗ್ ಹೆಚ್ಚಿನ ವಿವರ

ಚಿತ್ರಕೃಪೆ: Dinesh Bareja

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ದಮ್ ದಮಿ ತಕ್ಸಾಲ್ ಎಂಬುದು ಸಿಖ್ಖರ ಅತಿ ಉನ್ನತ ಶೈಕ್ಷಣಿಕ ಶಿಕ್ಷಣವಾಗಿದೆ. ಅಮೃತಸರ ಪಟ್ಟಣದಿಂದ 25 ಕಿ.ಮೀ ದೂರದಲ್ಲಿ ಇದು ಸ್ಥಿತವಿದ್ದು, ಇದನ್ನು ದಮ್ ದಮಿ ಸಾಹೀಬ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಚೌಕ್ ಮೆಹ್ತಾ ಎಂಬ ಪ್ರದೇಶದಲ್ಲಿರುವ ಇದು ಸುಮಾರು 300 ವರ್ಷಗಳಷ್ಟು ಪುರಾತನವಾಗಿದ್ದು ಸಿಖ್ಖರ ಗುರುವಾದ ಗುರು ಗೋಬಿಂದ್ ಸಿಂಗರಿಂದ ಸ್ಥಾಪಿಸಲ್ಪಟ್ಟಿದೆ.

ಚಿತ್ರಕೃಪೆ: banmeet singh

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರದ ವಾಘಾ ಗಡಿಯ ಬಳಿ ಇರುವ ಭಾರತೀಯ ಗಡಿ ರಕ್ಷಣಾ ದಳದ ಕಚೇರಿ.

ಚಿತ್ರಕೃಪೆ: Vineet Timble

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ರಾಷ್ಟ್ರೀಯ ಹೆದ್ದಾರಿ ಎನ್ಎಚ್-1, ಗ್ರಾಂಡ್ ಟ್ರಂಕ್ ರಸ್ತೆಯಲ್ಲಿರುವ ಅಮೃತಸರವನ್ನು ಭಾರತದ ಇತರ ನಗರಗಳೊಂದಿಗೆ ಸುಲಭವಾಗಿ ಬೆಸೆಯುತ್ತದೆ. ಅಮೃತಸರದಿಂದ ಉತ್ತರ ಭಾರತದ ಪ್ರದೇಶಗಳಾದ ದೆಹಲಿ, ಚಂಡೀಗಢ ಹಾಗು ಜಮ್ಮುವಿಗೆ ಬಸ್ಸುಗಳ ಮತ್ತು ಟ್ಯಾಕ್ಸಿಗಳ ಉತ್ತಮ ವ್ಯವಸ್ಥೆಯಿದೆ. ಗ್ರ್ಯಾಂಡ್ ಟ್ರಂಕ್ (ಜಿಟಿ) ರಸ್ತೆ ಕೂಡ ಲಾಹೋರ್ ಮತ್ತು ಅಮೃತಸರಕ್ಕೆ ಸಂಪರ್ಕ ಕಲ್ಲಿಸುತ್ತದೆ.

ಚಿತ್ರಕೃಪೆ: Nagesh Kamath

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರ ಎಂಬ ರೋಮಾಂಚನಗೊಳಿಸುವ ಸ್ಥಳ:

ಅಮೃತಸರದ ರೈಲು ನಿಲ್ದಾಣದಿಂದ ಭಾರತದ ವಿವಿಧ ಭಾಗಗಳಿಗೆ ರೈಲು ಮುಖಾಂತರ ಉತ್ತಮ ಸಂಪರ್ಕವಿದೆ. ದೊಡ್ಡ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಹಾಗು ಜಮ್ಮುವಿಗೆ ಪ್ರತಿದಿನವೂ ರೈಲುಗಳು ಸಂಚರಿಸುತ್ತವೆ.

ಚಿತ್ರಕೃಪೆ: Har Gobind Singh Khalsa

Please Wait while comments are loading...