» »ನಂದಿಯು ತನ್ನನ್ನು ವಾಹನ ಮಾಡಿಕೋ ಎಂದು ಪರಮಶಿವನನ್ನು ಕುರಿತು ತಪಸ್ಸು ಮಾಡಿದ ಸ್ಥಳವಿದು.....

ನಂದಿಯು ತನ್ನನ್ನು ವಾಹನ ಮಾಡಿಕೋ ಎಂದು ಪರಮಶಿವನನ್ನು ಕುರಿತು ತಪಸ್ಸು ಮಾಡಿದ ಸ್ಥಳವಿದು.....

Posted By:

ಪರಮೇಶ್ವರನ ಗಣಗಳಲ್ಲಿ ನಂದೀಶ್ವರನು ಬಗ್ಗೆ ಪ್ರತ್ಯೇಕವಾಗಿ ಕೆಲವು ಪುರಾಣಗಳಲ್ಲಿ ಹೇಳಲಾಗಿದೆ.ಆತನು ಆ ಮಹಾಶ್ವೇರನ ಪರಮ ಭಕ್ತನಾಗಿ, ವಾಹನವಾಗಿ ನಮ್ಮ ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ.ಹಾಗಾಗಿಯೇ ಪ್ರತಿ ಶಿವಾಲಯದಲ್ಲಿಯೂ ಕೂಡ ನಂದೀಶ್ವರನ ವಿಗ್ರಹ ಇದ್ದೇ ಇರುತ್ತದೆ.ಅಂತಹ ನಂದೀಶ್ವರನು ದೇವಾಲಯಗಳಲ್ಲಿ ನವ ನಂದಿ ಕ್ಷೇತ್ರ ಕೂಡ ಒಂದು. ಆ ದೇವಾಲಯವು ಅತ್ಯಂತ ಪುರಾತನವಾದುದು.ಇನ್ನು ಆ ಕ್ಷೇತ್ರ ಎಲ್ಲಿದೆ. ಆ ಕ್ಷೇತ್ರದ ವಿಶೇಷತೆ ಏನು? ಆ ಕ್ಷೇತ್ರದ ಚರಿತ್ರೆ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮುಲಕ ತಿಳಿಯೋಣ.

ನವ ನಂದಿ ಕ್ಷೇತ್ರಗಳು ಎಲ್ಲಿದೆ ಗೊತ್ತ?

1.ಸ್ಥಳ ಪುರಾಣ

1.ಸ್ಥಳ ಪುರಾಣ

ಈ ನವನಂದಿ ದೇವಾಲಯವು ಆಂಧ್ರ ಪ್ರದೇಶದಲ್ಲಿದೆ. ಪೂರ್ವದಲ್ಲಿ ಪಾಂಡು ವಂಶಕ್ಕೆ ಸೇರಿದ ನಂದರಾಜರು ಆಳ್ವಿಕೆ ಮಾಡಿದ ಪ್ರದೇಶವನ್ನು ನಂದುಲ ರಾಜ್ಯ ಎಂದು ಕರೆಯಲಾಗುತ್ತಿತ್ತು. ಅದು ಕ್ರಮವಾಗಿ ನಂದ್ಯಾಲ ಎಂದು ಹೆಸರುವಾಸಿಯಾಯಿತು.

2.ಚಂದ್ರಗುಪ್ತ ಮೌರ್ಯ

2.ಚಂದ್ರಗುಪ್ತ ಮೌರ್ಯ

ತದನಂತರದ ಕಾಲದಲ್ಲಿ ಚಂದ್ರಗುಪ್ತ ಮೌರ್ಯನು ಇವರನ್ನು ಓಡಿಸಿ ಆ ಪ್ರದೇಶವನ್ನು ತನ್ನ ಅಧೀನದಲ್ಲಿ ತೆಗೆದುಕೊಂಡನು ಎಂಬುದನ್ನು ಅಲ್ಲಿನ ಕೆಲವು ಶಾಸನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

3.ಗೋವಿನ ಪಾಲಕರು

3.ಗೋವಿನ ಪಾಲಕರು

ನಂದರಾಜನ ಆಳ್ವಿಕೆಯ ಕಾಲದಲ್ಲಿ ಗೋವಿನ ಪಾಲಕರು ತಮ್ಮ ಬಳಿ ಇದ್ದ ಗೋವುಗಳನ್ನು ಕರೆದುಕೊಂಡು ಒಂದು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದರು.

4.ಸಮೀಪದಲ್ಲಿನ ಹುತ್ತ

4.ಸಮೀಪದಲ್ಲಿನ ಹುತ್ತ

ಒಂದು ದಿನ ಗುಂಪಿನಲ್ಲಿದ್ದ ಒಂದು ಹಸು ಸಮೀಪದಲ್ಲಿಯೇ ಇದ್ದ ಹುತ್ತದ ಬಳಿ ಹೋಗಿ ತನ್ನಲ್ಲಿ ಹೊಂದಿದ್ದ ಹಾಲನ್ನು ಧಾರಾಕಾರವಾಗಿ ಸುರಿಸುತ್ತಿತ್ತು. ಹುತ್ತದಲ್ಲಿದ್ದ ಒಬ್ಬ ಬಾಲಕನು ಆ ಕ್ಷೀರವನ್ನು ಸ್ವೀಕರಿಸಿದನ್ನು ಕಂಡು ಪಶುಪಾಲಕನು ರಾಜನಿಗೆ ಈ ವಿಷಯವನ್ನು ತಿಳಿಸುತ್ತಾನೆ.

5.ಮಹಾರಾಜ

5.ಮಹಾರಾಜ

ಪಶುಪಾಲಕ ಹೇಳಿದ ಮಾತುನ್ನು ಕೇಳಿದ ಮಹಾರಾಜನು, ಆ ಅದ್ಭುತವಾದ ದೃಶ್ಯವನ್ನು ಕಾಣುವ ಸಲುವಾಗಿ ಆ ರಾಜನು ಅರಣ್ಯಕ್ಕೆ ಪ್ರವೇಶ ಮಾಡಿದನಂತೆ. ಎಂದಿನಂತೆ ಒಂದು ಹಸು ಹುತ್ತದ ಬಳಿ ಹೋಗಿ ಹಾಲನ್ನು ಸುರಿಸುತ್ತಿದ್ದ ದೃಶ್ಯವನ್ನು ಕಂಡ ರಾಜನು...

6.ಬಾಲಕನು ಅದೃಶ್ಯನಾದನು

6.ಬಾಲಕನು ಅದೃಶ್ಯನಾದನು

ಹಾಲನ್ನು ಸ್ವೀಕರಿಸುತ್ತಿದ್ದ ಬಾಲಕನನ್ನು ಇನ್ನಷ್ಟು ಸಮೀಪದಲ್ಲಿ ನೋಡಬೇಕು ಎಂದು ಕುತೂಹಲದಿಂದ ಮುಂದೆ ಹೋದದ್ದರಿಂದ ಇದರಿಂದ ಬೆದರಿದ ಗೋವು ಅಲ್ಲಿಂದ ಹೋದ ತಕ್ಷಣವೇ ಅಲ್ಲಿದ್ದ ಬಾಲಕನು ಕೂಡ ಅದೃಶ್ಯನಾಗುತ್ತಾನೆ.

7.ಸ್ವಪ್ನ ದರ್ಶನ

7.ಸ್ವಪ್ನ ದರ್ಶನ

ತನ್ನ ದುರಾದೃಷ್ಟಕ್ಕೆ ಚಿಂತಿಸುತ್ತಾ ನಿದ್ರೆಗೆ ಜಾರಿದ ನಂದ ರಾಜನಿಗೆ ಆ ದಿನ ರಾತ್ರಿ ಮಹೇಶ್ವರನು ಸ್ವಪ್ನದಲ್ಲಿ ದರ್ಶನವನ್ನು ಪ್ರಸಾದಿಸಿ ಆ ಬಾಲಕನು ತಾನೇ ಎಂದೂ, ಶಿಲಾದ ಮಹರ್ಷಿ ಮಗನಾದ ಮಹಾನಂದಿ ಇಲ್ಲಿ ತಪಸ್ಸು ಮಾಡಿ ತನ್ನ ವಾಹನವಾಗು ಎಂದು ವರವನ್ನು ಕೋರಿಕೊಂಡನು ಎಂದು ತಿಳಿಸಿದನು.

8.ಮಹಾಪುಣ್ಯ ತೀರ್ಥ

8.ಮಹಾಪುಣ್ಯ ತೀರ್ಥ

ಆತನ ಹೆಸರಿನ ಮೇಲೆ ಈ ಕ್ಷೇತ್ರ ಮಹಾ ಪುಣ್ಯತೀರ್ಥವಾಗಿ ಹೆಸರುವಾಸಿ ಹೊಂದಿ, ಹುತ್ತದಲ್ಲಿರುವ ತನ್ನ ರೂಪವನ್ನು ದೇವಾಲಯವಾಗಿ ನಿರ್ಮಾಣ ಮಾಡು ಎಂದು ಹೇಳಿದನು.

9.ದಿವ್ಯಸ್ಥಾನಗಳು

9.ದಿವ್ಯಸ್ಥಾನಗಳು

ಅಷ್ಟೇ ಅಲ್ಲ ನಿನ್ನ ರಾಜ್ಯದಲ್ಲಿ ಇನ್ನು 8 ದಿವ್ಯವಾದ ಸ್ಥಾನದಲ್ಲಿ ವಿವಿಧ ಕಾರಣಗಳಿಂದಾಗಿ ವಿವಿಧ ರೂಪದಲ್ಲಿ ನಂದಿ ಸಮೇತನಾಗಿ ನೆಲೆಸಿದ್ದೇನೆ ಎಂದು ಅವುಗಳನ್ನು ಕೂಡ ಪ್ರಜೆಗಳಿಗೆ ಆರಾಧಿಸಲು ಅನುಕೂಲ ಮಾಡಿಕೊಡು ಎಂದು ಅದೇಶಿಸಿದರು.

10.ದೇವಾಲಯ

10.ದೇವಾಲಯ

ಸ್ವಾಮಿ ಹೇಳಿದ ಮಾತುಗಳನ್ನು ಕೇಳಿದ ನಂದ ಮಹಾರಾಜನು ಅನಂದವಾಗಿ ಸರ್ವೇಶ್ವರ ಅನುಮತಿಯ ಪ್ರಕಾರ ಎಲ್ಲಾ ಕಡೆಯಲ್ಲಿಯೂ ದೇವಾಲಯವನ್ನು ನಿರ್ಮಾಣ ಮಾಡಿದನು.

11.ವಿಜಯನಗರ ರಾಜರು

11.ವಿಜಯನಗರ ರಾಜರು

ಈ ವಂಶದವರ ನಂತರ ಆಳ್ವಿಕೆ ಮಾಡಿದ ಚೋಳರು, ವಿಜಯನಗರ ರಾಜರು ಈ ದೇವಾಲಯಗಳನ್ನು ಅಭಿವೃದ್ಧಿ ಮಾಡಲು ಶ್ರಮಿಸಿದರು. ಈ ಎಲ್ಲಾ ರಾಜವಂಶಿಕರು ಈ ದೇವಾಲಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಎಂದು ನಂಬಲಾಗಿದೆ.

12.ನವನಂದಿ ಕ್ಷೇತ್ರಗಳ ಹೆಸರುಗಳು ಯಾವುವು ಗೊತ್ತ?

12.ನವನಂದಿ ಕ್ಷೇತ್ರಗಳ ಹೆಸರುಗಳು ಯಾವುವು ಗೊತ್ತ?

ಮಹಾನಂದಿ, ನಾಗನಂದಿ, ಸೋಮನಂದಿ, ಸೂರ್ಯನಂದಿ, ಶಿವನಂದಿ, ವಿಷ್ಣುನಂದಿ, ಗರುಡನಂದಿ ಮತ್ತು ವಿನಾಯಕ ನಂದಿ. ಈ ಕ್ಷೇತ್ರಗಳನ್ನೇ ನವನಂದಿ ಕ್ಷೇತ್ರ ಎಂದು ಕರೆಯುತ್ತಾರೆ.

13.9 ದೇವಾಲಯ

13.9 ದೇವಾಲಯ

ಈ 9 ದೇವಾಲಯದಲ್ಲಿ ಪ್ರಥಮನಂದಿ, ನಾಗನಂದಿ, ಸೋಮನಂದಿ ಎಂಬ 3 ದೇವಾಲುಗಳು ನಂದ್ಯಾಲ ಪಟ್ಟಣದಲ್ಲಿ ಇದ್ದು, ಮಹಾನಂದಿ, ಗರುಡನಂದಿ, ವಿನಾಯಕ ನಂದಿ ಎಂಬ 3 ದೇವಾಲಯಗಳು, ಮಹಾ ನಂದಿಯಲ್ಲಿ, ಸೂರ್ಯನಂದಿ, ಶಿವನಂದಿ, ವಿಷ್ಣುನಂದಿ ಎಂಬ 3 ದೇವಾಲಯಗಳು ಮಹಾನಂದಿಗೆ ನಂದ್ಯಾಲದಲ್ಲಿನ ಮಧ್ಯ ಮಾರ್ಗದಲ್ಲಿದೆ.

14.ಕ್ಷೇತ್ರಕ್ಕೆ ಭೇಟಿ

14.ಕ್ಷೇತ್ರಕ್ಕೆ ಭೇಟಿ

ಸೋಮವಾರ, ಪೌರ್ಣಮಿ, ಮಹಾಶಿವರಾತ್ರಿ, ತ್ರಯೋದಶಿ ದಿನಗಳಲ್ಲಿ ಬೆಳಗ್ಗೆಯಿಂದ ಸಂಜೆಯ ಸಮಯದ ಒಳಗೆ ಈ ನವನಂದಿಗಳ ಕ್ಷೇತ್ರಕ್ಕೆ ಭೇಟಿ ನೀಡಿದರೆ ಅತ್ಯಂತ ಶುಭವಾದುದು ಎಂದು ಭಕ್ತರು ಪರಿಗಣಿಸುತ್ತಾರೆ.

15.ಉತ್ಸವಗಳು

15.ಉತ್ಸವಗಳು

ಈ ನವನಂದಿ ದೇವಾಲಯದಲ್ಲಿ ಶಿವರಾತ್ರಿಯ ಸಮಯದಲ್ಲಿ ಎಲ್ಲಾ ಸ್ಥಳದಲ್ಲಿಯೂ ವಿಶೇಷವಾಗಿ ಉತ್ಸವಗಳನ್ನು ಮಾಡುತ್ತಾರೆ. ಆ ಸಮಯದಲ್ಲಿ ಅನೇಕ ಮಂದಿ ಭಕ್ತರು ಈ ದೇವಾಲಯದಲ್ಲಿ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ,

16.ಶ್ರೀ ಸಾಕ್ಷಿ ಮಲ್ಲಿಕಾರ್ಜುನ ಸ್ವಾಮಿ

16.ಶ್ರೀ ಸಾಕ್ಷಿ ಮಲ್ಲಿಕಾರ್ಜುನ ಸ್ವಾಮಿ

ಈ ನವನಂದಿ ಯಾತ್ರೆಗೆ ಹೊರಡುವ ಮಂಚೆ ನಂದ್ಯಾಲ ಪಟ್ಟಣದಲ್ಲಿನ ಶ್ರೀ ಸಾಕ್ಷಿ ಮಲ್ಲಿಕಾರ್ಜುನ ಸ್ವಾಮಿಯನ್ನು ದರ್ಶನ ಮಾಡಿದನಂತರವೇ ನವನಂದಿ ಕ್ಷೇತ್ರದ ಯಾತ್ರೆಯನ್ನು ಪ್ರಾರಂಭ ಮಾಡಿ.

17.ಹೇಗೆ ತೆರಳಬೇಕು?

17.ಹೇಗೆ ತೆರಳಬೇಕು?

ನಂದ್ಯಾಲಕ್ಕೆ ಅನೇಕ ಖಾಸಗಿ ಹಾಗು ಸರ್ಕಾರಿ ಬಸ್ಸುಗಳ ಮೂಲಕ ತೆರಳಬಹುದಾಗಿದೆ. ವಿಮಾನ, ರೈಲ್ವೆ ಮಾರ್ಗದ ಮುಲಕ ಸುಲಭವಾಗಿ ತಲುಪಬಹುದಾಗಿದೆ.