Search
  • Follow NativePlanet
Share
» »ಬೆಂಗಳೂರಿನಲ್ಲಿ ಸಾಹಸಪ್ರಿಯರು ಇಷ್ಟಪಡುವಂತಹ ಕೆಲವು ಚಟುವಟಿಕೆಗಳು!

ಬೆಂಗಳೂರಿನಲ್ಲಿ ಸಾಹಸಪ್ರಿಯರು ಇಷ್ಟಪಡುವಂತಹ ಕೆಲವು ಚಟುವಟಿಕೆಗಳು!

ಭಾರತದ ಸಿಲಿಕಾನ್ ಮತ್ತು ಉದ್ಯಾನವನಗಳ ನಗರಿ ಎಂದು ಹೆಸರು ಪಡೆದಿರುವ ಬೆಂಗಳೂರು ದೇಶದ ಅತ್ಯಂತ ಮುಂದುವರಿದ ನಗರಗಳಲ್ಲಿ ಒಂದಾಗಿದೆ. ಆಹ್ಲಾದಕರ ಹವಾಮಾನ, ನೈಸರ್ಗಿಕ ಪರಿಸರ ಐತಿಹಾಸಿಕ ಸ್ಮಾರಕಗಳು ಇತ್ಯಾದಿಗಳನ್ನು ಒಳಗೊಂಡ ಬೆಂಗಳೂರು ದಕ್ಷಿಣ ಭಾರತದ ಹೆಚ್ಚಾಗಿ ಭೇಟಿಕೊಡುವ ಸ್ಥಳಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ ಹಲವಾರು ಸಾಹಸಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಬಹುದು ಎಂಬುದು ನಿಮಗೆ ಗೊತ್ತಿದೆಯೇ? ಹೌದು ನೀವೇನಾದರೂ ಸಾಹಸಪ್ರಿಯರು ಮತ್ತು ಕುತೂಹಲಭರಿತ ಮತ್ತು ರೋಮಾಂಚಕ ಸಾಹಸವನ್ನು ಮಾಡಲು ಬಯಸುವವರಾಗಿದ್ದಲ್ಲಿ, ಬೆಂಗಳೂರಿನ ಈ ಕೆಳಗಿನ ಸಾಹಸಮಯ ಚಟುವಟಿಕೆಗಳಲ್ಲಿ ನೀವು ಭಾಗಿಯಾಗಲೇ ಬೇಕು. ಇವುಗಳ ಬಗ್ಗೆ ಮಾಹಿತಿಯನ್ನು ಈ ಲೇಖವು ನೀಡುತ್ತದೆ.

1) ಜೋರ್ಬಿಂಗ್

ಜೋರ್ಬಿಂಗ್ ಎಂದರೆ ಸಾಮಾನ್ಯವಾಗಿ ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟ ಗೋಲಾಕಾರದ ವಸ್ತುವಿನೊಳಗೆ ಕುಳಿತು ಮೃದುವಾದ ದಿಬ್ಬದ ಕೆಳಗೆ ಉರುಳುವ ಒಂದು ಚಟುವಟಿಕೆಯಾಗಿದ್ದು, ಇದನ್ನು ನೀವು ಬೆಂಗಳೂರಿನ ಕೆಲವು ನೀರಿನ ಕೊಳದಲ್ಲಿ ಇಂತಹ ಅದ್ಭುತ ಚಟುವಟಿಕೆಗಳನ್ನು ಆನಂದಿಸಬಹುದು.ನೀವು ಗೋಲಾಕಾರದ ಚೆಂಡಿನೊಳಗೆ ಕೊಳದ ಮೇಲ್ಮೈಯಲ್ಲಿಆಟವಾಡುತ್ತಾ ಅಥವಾ ನಯವಾದ ದಿಬ್ಬಗಳಲ್ಲಿ ಉರುಳಲು ಬಯಸಿದರೆ, ನೀವು ಬೆಂಗಳೂರಿನಲ್ಲಿ ಜೋರ್ಬಿಂಗ್ ಅನ್ನು ಪ್ರಯತ್ನಿಸಬೇಕು. ಇದು ನಿಮಗೆ ಅವಿಸ್ಮರಣೀಯ ಅನುಭವಗಳನ್ನು ಒದಗಿಸುವ ಒಂದು ಚಟುವಟಿಕೆಯಾಗಿದೆ.

2) ಪೇಂಟ್ ಬಾಲ್

ನಿಮ್ಮ ಎಲ್ಲಾ ಸ್ನೇಹಿತರು ಅಥವಾ ನಿಮ್ಮ ಇಡೀ ಕುಟುಂಬವನ್ನು ಒಂದೇ ಸ್ಥಳದಲ್ಲಿ ಸೇರಿಸಿಕೊಂಡು ಉತ್ಸಾಹ ಮತ್ತು ರೋಮಾಂಚಕ ಚಟುವಟಿಕೆಯನ್ನು ಆನಂದಿಸಬೇಕೆಂದಿರುವಿರಾ? ಹೌದು ಎಂದಾದಲ್ಲಿ, ಪೇಂಟ್ ಬಾಲ್ ಆಟವು ನಿಮನ್ನು ಆಕರ್ಷಿಸುತ್ತದೆ ಎನ್ನುವುದರಲ್ಲಿ ಬೇರೆ ಮಾತಿಲ್ಲ. ಇದೊಂದು ಆಸಕ್ತಿದಾಯಕ ಆಟವಾಗಿದ್ದು, ಇದರಲ್ಲಿ ನಿಮ್ಮ ಎದುರಾಳಿಗಳನ್ನು ಬಣ್ಣ ತುಂಬಿದ ಕ್ಯಾಪ್ಸೂಲ್ ಗಳಿಂದ ಹೊಡೆಯುವುದರ ಮೂಲಕ ಸೋಲಿಸಬೇಕು.

kwad biking

ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಈ ಆಟವು ಜಯಪ್ರಿಯ ಆಟಗಳಲ್ಲಿ ಒಂದಾದ ಕೌಂಟರ್ ಸ್ಟೈಕ್ ನ ಸರಳ ಆವೃತ್ತಿಯಾಗಿದೆ. ಈ ಆಟದಲ್ಲಿ ಹೇಗೆಂದರೆ ನೀವು ಆಟದಲ್ಲಿ ಸೋತವರು ಸಾಯುವುದಿಲ್ಲ ಆದರೆ ಹೊರ ಹಾಕಲ್ಪಡುತ್ತೀರಿ ಇದು ಈ ಆಟದ ನಿಯಮವಾಗಿದೆ. ಈ ಆಟವು ಯಾವ ವಯಸ್ಸಿನವರೂ ಬೇಕಾದರು ಆಡಬಹುದಾಗಿದ್ದು, ಈ ವಾರಾಂತ್ಯದ ರಜಾದಿನಗಳಲ್ಲಿ ಈ ಸುಂದರವಾದ ಆಟದಲ್ಲಿ ಒಮ್ಮೆ ಭಾಗಿಯಾಗಬಾರದೇಕೆ?

3) ಕ್ವಾಡ್ ಬೈಕಿಂಗ್

ಕ್ವಾಡ್ ಬೈಕಿಂಗ್ ಇಂದು ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಇದೊಂದು ಅದ್ಬುತವಾದ ಈ ಚಟುವಟಿಕೆಯಾಗಿದ್ದು ಇದರ ಆನಂದ ಪಡೆಯಲು ಇಂದು ದೇಶದಾದ್ಯಂತ ಹಲವಾರು ಸ್ಥಳಗಳನ್ನು ಕಾಣಬಹುದಾಗಿದೆ. ನೀವು ಉತ್ಸಾಹಿ ಹಾಗೂ ಸಾಹಸಿ ಬೈಕ್ ಸವಾರರಾಗಿದ್ದು, ಒರಟಾದ ಟ್ರ್ಯಾಕ್ ನಲ್ಲಿ ನಿಮ್ಮ ಬೈಕನ್ನು ವೇಗವಾಗಿ ಚಲಾಯಿಸುವ ಹಾಗೂ ಅದರ ರೋಮಾಂಚಕ ಅನುಭವವನ್ನು ಪಡೆಯುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ನೀವು ಯೋಚಿಸುತ್ತಿಲ್ಲವೆ?

ನಿಮಗೆ ಇಷ್ಟವಾದ ಕ್ವಾಡ್ ಬೈಕ್ ನ ಆಯ್ಕೆಯ ನಂತರ ಇಲ್ಲಿ ನಿಮಗೆ ರಕ್ಷಾ ಸೂಟ್ ಗಳನ್ನು ನೀಡಲಾಗುತ್ತದೆ. ಈ ಚಟುವಟಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಎಲ್ಲಾ ವಯೋಮಾನದ ಜನರಿಂದಲೂ ಭಾಗವಹಿಸಿ ಆನಂದಿಸಲ್ಪಡುತ್ತದೆ. ಆದುದರಿಂದ ಈ ವಾರಾಂತ್ಯದಲ್ಲಿ ಕಡಿದಾದ ಭೂಪ್ರದೇಶಗಳ ಮೂಲಕ ಸವಾರಿ ಮಾಡುವುದು ಮತ್ತು ಆಫ್-ರೋಡ್ ಟ್ರ್ಯಾಕ್‌ನ ರೋಚಕತೆಯನ್ನು ಅನ್ವೇಷಿಸುವ ಅನುಭವ ಹೇಗಿರಬಹುದು?

4) ವಾಲ್ ಕ್ಲೈಂಬಿಂಗ್

ರಾಕ್ ಕ್ಲೈಂಬಿಂಗ್ ಅಥವಾ ದೊಡ್ಡ ದೊಡ್ದ ಬಂಡೆಗಳನ್ನು ಹತ್ತುವ ಉತ್ಸಾಹಿಗಳು ನೀವಾಗಿದ್ದಲ್ಲಿ, ನಿಮಗಾಗಿ ಇಲ್ಲಿದೆ ಅಂತಹುದೇ ಒಂದು ಸಾಹಸಮಯವಾದ ಚಟುವಟಿಕೆ ಅದೇ ವಾಲ್ ಕ್ಲೈಂಬಿಂಗ್ ಅಥವಾ ಗೋಡೆ ಹತ್ತುವುದು. ಈ ಅನುಭವವು ನಿಮಗೆ ಪರ್ವತಗಳನ್ನು ಹತ್ತುವ ಅನುಭವವನ್ನು ನೀಡುವುದು. ಈ ಚಟುವಟಿಕೆಯನ್ನು ಸುಸಜ್ಜಿತವಾದ ಮತ್ತು ಅಪಾಯರಹಿತ ವಾತಾವರಣದಲ್ಲಿ ಒದಗಿಸಿಕೊಡಲಾಗುತ್ತದೆ. ಇಲ್ಲಿ ಹಿಡಿತಗಳನ್ನು ಹೊಂದಿರುವ ಗೋಡೆಗಳು ಕೃತಕವಾಗಿದ್ದು, ನೀವು ಹತ್ತಲು ಬೇಕಾಗಿರುವ ಸರಂಜಾಮುಗಳ ಸಹಾಯದಿಂದ ಈ ವಾಲ್ ಕ್ಲೈಂಬಿಂಗ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

ಮೇಲ್ನೋಟಕ್ಕೆ ಈ ಚಟುವಟಿಕೆಯು ಸುಲಭವಾಗಿರುತ್ತದೆಯಾದರೂ ಇದು ರಾಕ್ ಕ್ಲೈಂಬಿಂಗ್ ಗೆ ನಿಮ್ಮನ್ನು ಸಿದ್ದ ಪಡಿಸುತ್ತದೆ ಎನ್ನಬಹುದಾಗಿದೆ.

paint -ball in bangalore

ಆದುದರಿಂದ ಈ ವಾರಾಂತ್ಯವನ್ನು ರೋಮಾಂಚಕಾರಿಯಾಗಿ ಕಳೆಯಬೇಕಾದಲ್ಲಿ ಇಂತಹ ವಾಲ್ ಕ್ಲೈಂಬಿಂಗ್ ಇರುವ ಕಡೆ ಹೋಗಿ ಅದರ ಅನುಭವವನ್ನು ಪಡೆಯಿರಿ. ಬೆಂಗಳೂರಿನಲ್ಲಿ ಈ ಚಟುವಟಿಕೆಗಳನ್ನು ಹಲವಾರು ಕಡೆ ನೀವು ಆನಂದಿಸಬಹುದಾಗಿದೆ. ಅವುಗಳಲ್ಲಿ ಪ್ರಮುಖವಾದ ಸ್ಥಳಗಳೆಂದರೆ ಕಂಠೀರವ ಸ್ಟೇಡಿಯಂ ಮತ್ತು ಈಕ್ವಿಲಿಬ್ರಿಯಂ ಕ್ಲೈಂಬಿಂಗ್ ಸ್ಟೇಷನ್.

5) ಗೋ ಕಾರ್ಟಿಂಗ್

ರೇಸಿಂಗ್ ಮಾಡಲು ಇಷ್ಟಪಡುವಿರಾ? ಹೌದು, ಎಂದಾದರೆ ಬೆಂಗಳೂರು ಮತ್ತು ಅದರ ಸುತ್ತ ಮುತ್ತಲಿರುವ ಗೋ ಕಾರ್ಟಿಂಗ್ ಚಟುವಟಿಕೆ ನಡೆಯುವ ಸ್ಥಳಕ್ಕೆ ಭೇಟಿ ಕೊಡಿ ಹಾಗೂ ಈ ಚಟುವಟಿಕೆಯ ಅನುಭವವನ್ನು ನೀವು ತಪ್ಪಿಸಿಕೊಳ್ಳದಿರಿ. ವಾರಾಂತ್ಯದಲ್ಲಿ ರೇಸಿಂಗ್ ಉತ್ಸಾಹಿಗಳಿಗೆ ಈ ಚಟುವಟಿಕೆಯು ಅತ್ಯಂತ ಮೋಜುಕೊಡುವ ಅದ್ಭುತವಾದ ಆಟವಾಗಿದೆ.

ಮೂಲತಃವಾಗಿ ಗೋ ಕಾರ್ಟ್ ಎನ್ನುವುದು ಸಣ್ಣ ಒಂದು ವಾಹನವನ್ನು ಕೆಲವು ಸುತ್ತುಗಳಲ್ಲಿ ಓಡಿಸುವ ಆಟವಾಗಿರುತ್ತದೆ. ನೀವು ಸ್ನೇಹಿತರ ಗುಂಪನ್ನು ಹೊಂದಿದ್ದು ಅವರೊಂದಿಗೆ ಕೆಲವು ಸ್ಮರಣೀಯ ಮತ್ತು ರೋಮಾಂಚಕ ಸಮಯವನ್ನು ಕಳೆಯಲು ಬಯಸಿದರೆ ಈ ವಾರಾಂತ್ಯದಲ್ಲಿ ನಿಮ್ಮ ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಈ ಗೋಕಾರ್ಟಿಂಗ್ ನ ಅನುಭವವನ್ನು ಪಡೆಯಿರಿ.

ಇವುಗಳೆಲ್ಲ ಬೆಂಗಳೂರಿನಲ್ಲಿದ್ದಾಗ ಆನಂದಿಸಬಹುದಾದ ಕೆಲವು ಸಾಹಸಮಯ ಚಟುವಟಿಕೆಗಳಾಗಿವೆ. ವಾರಾಂತ್ಯವನ್ನು ಈಗಲೇ ಯೋಜಿಸಿ ಮತ್ತು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಆನಂದಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X