• Follow NativePlanet
Share
» »ಇಲ್ಲಿದೆ ಅಮರನಾಥ್ ದೇವಾಲಯದ ಹಿಮದ ರಹಸ್ಯ

ಇಲ್ಲಿದೆ ಅಮರನಾಥ್ ದೇವಾಲಯದ ಹಿಮದ ರಹಸ್ಯ

Written By:

ಅಮರನಾಥ್ ಹಿಂದೂಗಳ ಪ್ರಧಾನವಾದ ಯಾತ್ರಾ ಸ್ಥಳವಾಗಿದೆ. ಈ ಅಮರನಾಥ ಶಿವನಿಗೆ ಅರ್ಪಿತವಾದ ಒಂದು ಗುಹಾ ದೇವಾಲಯವಾಗಿದೆ. ಈ ಗುಹಾ ದೇವಾಲಯವಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ. ಈ ದೇವಾಲಯವನ್ನು ಸುಮಾರು 5000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ.

ಶ್ರೀ ನಗರದಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಅಮರನಾಥ್ ಪವಿತ್ರ ಕ್ಷೇತ್ರ ಭಾರತದಲ್ಲಿಯೇ ಪ್ರಧಾನವಾದ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಸಮುದ್ರ ಮಟ್ಟಕ್ಕೆ ಸುಮಾರು 3,888 ಮೀಟರ್ ಎತ್ತರದಲ್ಲಿರುವ ಈ ದೇವಾಲಯಕ್ಕೆ ಹಲವಾರು ದೇಶಗಳಿಂದ ಭಕ್ತರು ಭೇಟಿ ನೀಡುತ್ತಾರೆ.

ಮಂಜಿನಿಂದ ಸಹಜವಾಗಿ ಏರ್ಪಟ್ಟಿರುವ ಶಿವಲಿಂಗ ಇಲ್ಲಿನ ಮುಖ್ಯ ಆರ್ಕಷಣೆಯಾಗಿದೆ. ಈ ಪುಣ್ಯ ತೀರ್ಥಕ್ಷೇತ್ರಕ್ಕೆ ಹೆಸರು 2 ಹಿಂದಿ ಭಾಷೆಯ ಪದಗಳ ಮೂಲಕ ಬಂದಿದೆ. ಪ್ರಸ್ತುತ ಲೇಖನದ ಮೂಲಕ ಈ ತೀರ್ಥಕ್ಷೇತ್ರದ ಸ್ವಾರಸ್ಯಕರವಾದ ಮಹಿಮೆಯನ್ನು ತಿಳಿದುಕೊಳ್ಳೊಣ.....

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಹಿಂದೂ ಪುರಾಣಗಳ ಪ್ರಕಾರ ಶಿವನ ಪತ್ನಿಯಾದ ಪಾರ್ವತಿ ದೇವಿ ತನಗೆ ಅಮರತ್ವದ ಬಗ್ಗೆ ತಿಳಿಸು ಎಂದು ಶಿವನ್ನು ಕೇಳಿಕೊಂಡಳು. ಅದಕ್ಕೆ ಒಪ್ಪಿದ ಮಹಾಶಿವನು, ಅಮರತ್ವದ ಬಗ್ಗೆ ಯಾರ ಕಿವಿಗೂ ಬೀಳಬಾರದು ಎಂದು ಪಾರ್ವತಿ ದೇವಿಯನ್ನು ಹಿಮಾಲಯಕ್ಕೆ ಕರೆದುಕೊಂಡು ಹೋದನು.

ಜೀವನ ರಹಸ್ಯ

ಜೀವನ ರಹಸ್ಯ

ಈ ಗುಹೆಗೆ ಪಾರ್ವತಿ ದೇವಿಗೆ ಕರೆದುಕೊಂಡು ಹೋಗಿ ಜೀವನದ ರಹಸ್ಯವನ್ನು ಪರಮಶಿವನು ಹೇಳುವ ಮೊದಲು ಹಿಮಾಲಯಕ್ಕೆ ತೆರಳುವ ಮಾರ್ಗದಲ್ಲಿ ಮಹಾಶಿವನು ತನ್ನ ತಲೆಯ ಮೇಲೆ ಇರುವ ಚಂದ್ರನನ್ನು ಚಂದನವಾರಿಯಲ್ಲಿ ಹಾಗು ತನ್ನ ನಂದಿಯನ್ನು ಪೆಹೆಲ್ಕಾನಲ್ಲಿ ಬಿಟ್ಟು ತೆರಳಿದನು ಎಂಬುದು ಪ್ರತೀತಿ.

ಗಣೇಶ

ಗಣೇಶ

ತನ್ನ ಮಗ ಗಣೇಶನನ್ನು ಮಹಾ ಗುಣಾಸ್ ಪರ್ವತದ ಮೇಲೆ ಹಾಗು ತನ್ನ ಸರ್ಪವನ್ನು ಸೇಶ್ ನಾಗ್‍ನಲ್ಲಿ ಬಿಟ್ಟನು. ನಂತರ ಮಹಾ ಶಿವನು ಪಂಚಭೂತಗಳನ್ನು ಪಂಚರತ್ನದಲ್ಲಿ ಬಿಟ್ಟು ತನ್ನ ಪತ್ನಿಯ ಜೊತೆ ಈ ಗುಹೆಗೆ ತೆರಳಿದನು ಎಂಬುದು ಒಂದು ನಂಬಿಕೆ.

ಸಮಸ್ತ ಜೀವರಾಶಿ ನಾಶ

ಸಮಸ್ತ ಜೀವರಾಶಿ ನಾಶ

ಹೀಗೆ ಗುಹೆಯಲ್ಲಿ ತೆರಳಿದ ಮಹಾಶಿವನು ತನ್ನ ಮಾತುಗಳನ್ನು ಯಾರು ಕೇಳಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಜ್ವಾಲೆಯನ್ನು ಉತ್ಪತ್ತಿ ಮಾಡಿ ಸಮಸ್ತ ಜೀವ ರಾಶಿಯನ್ನು ನಾಶಗೊಳಿಸಿದನು.

ಹಕ್ಕಿಗಳು

ಹಕ್ಕಿಗಳು

ಆದರೆ ಪರಮಶಿವನು ಗಮನಿಸದೇ ಇರುವ ಜಿಂಕೆ ಚರ್ಮದ ಕೆಳಗೆ 2 ಹಕ್ಕಿಗಳ ಮೊಟ್ಟೆಗಳು ಇದ್ದವು. ಇವುಗಳಿಗೆ ಯಾವುದೇ ಹಾನಿಯಾಗಲಿಲ್ಲ. ಈ ಎರಡು ಮೊಟ್ಟೆಗಳು ಶಿವನು ಪಾರ್ವತಿ ದೇವಿಗೆ ಜೀವನ ರಹಸ್ಯವನ್ನು ವಿವರಿಸುವಾಗ ಅವುಗಳು ಗುಪ್ತವಾಗಿ ಕೇಳಿಸಿಕೊಂಡವು.

ಮರುಜನ್ಮ

ಮರುಜನ್ಮ

ಅಮರನಾಥ ಗುಹೆ ಸೇರಿಕೊಳ್ಳುತ್ತಿದ್ದಂತೆ ಯಾತ್ರಿಕರು ಹಕ್ಕಿಗಳ ಜೋಡಿಯನ್ನು ಕಾಣಬಹುದು. ವ್ಯಾಪ್ತಿಯಲ್ಲಿನ ನಂಬಿಕೆಯ ಪ್ರಕಾರ ಶಿವನ ಮಾತುಗಳನ್ನು ಕಳ್ಳತನದಿಂದ ಕೇಳಿಸಿಕೊಂಡ ಆ 2 ಹಕ್ಕಿಗಳು ಮತ್ತೇ ಮತ್ತೇ ಜನಿಸುತ್ತಿದೆ. ಹಾಗಾಗಿಯೇ ಅವುಗಳು ಅಮರನಾಥ ಗುಹೆಯನ್ನು ತಮ್ಮ ನಿತ್ಯ ನಿವಾಸವಾಗಿ ಮಾಡಿಕೊಂಡಿದೆ.

ಸಂಸ್ಕøತ ರಚನೆ

ಸಂಸ್ಕøತ ರಚನೆ

6 ನೇ ಶತಮಾನಕ್ಕೆ ಸೇರಿದ ಸಂಸ್ಕøತ ರಚನೆ ನೀಲ ಮಾತಾ ಪುರಾಣದಲ್ಲಿ ಈ ಪ್ರಸಿದ್ಧ ಯಾತ್ರ ಸ್ಥಳದ ಉಲ್ಲೇಖವಿದೆ. ಈ ಪುರಾಣಗಳು ಕಾಶ್ಮೀರಿಗಳ ಕರ್ಮಕಾಂಡವನ್ನು ಮತ್ತು ಅವರ ಸಂಸ್ಕøತಿ ಜೀವನ ಶೈಲಿಯನ್ನು ವಿವರಿಸುತ್ತದೆ.

ನೈಸರ್ಗಿಕ

ನೈಸರ್ಗಿಕ

ಇಲ್ಲಿನ ಅಮರಲಿಂಗವು ಕೃತಕವಾಗಿ ಅಲ್ಲದೆ ನೈರ್ಗಿಕವಾಗಿ ರೂಪುಗೊಂಡಂತಹ ಹಿಮದ ಶಿವಲಿಂಗವಾಗಿದೆ. ಈ ಶಿವಲಿಂಗವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಈ ಆಶ್ಚರ್ಯವನ್ನು ಕಾಣಲು ಹಾಗು ಶಿವನ ದರ್ಶನ ಪಡೆಯಲು ಇಲ್ಲಿಗೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ.

ಸೂಕ್ತವಾದ ಸಮಯ

ಸೂಕ್ತವಾದ ಸಮಯ

ಈ ಅಮರನಾಥ ದೇವಾಲಯಕ್ಕೆ ಯಾತ್ರೆ ಕೈಗೊಳ್ಳಲು ಸೂಕ್ತವಾದ ಸಮಯವೆಂದರೆ ಅದು ಜುಲೈ ಹಾಗು ಆಗಸ್ಟ್ ತಿಂಗಳಿನವರಗೆ ಹಾಗು ಮೇ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆವಿಗೂ ಸೂಕ್ತವಾದ ಸಮಯವಾಗಿದೆ.

ಭದ್ರತೆ

ಭದ್ರತೆ

ಭಾರತೀಯ ಪ್ಯಾರಮಿಲಿಟರಿ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯು ಕಟ್ಟುನಿಟ್ಟಿನ ರಕ್ಷಣೆಯನ್ನು ಈ ಸ್ಥಳಕ್ಕೆ ನೀಡುತ್ತಾರೆ. ಹಾಗಾಗಿ ಭಕ್ತರು ನಿಶ್ಚಿಂತೆಯಾಗಿ ಪರಮಶಿವನ ದರ್ಶನ ಭಾಗ್ಯವನ್ನು ಪಡೆಯಬಹುದಾಗಿದೆ.

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣ

ಅಮರನಾಥ ದೇವಾಲಯಕ್ಕೆ ತಲುಪಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಶ್ರೀನಗರ. ಇಲ್ಲಿಂದ ಅಮರನಾಥ್‍ಗೆ ಹಲವಾರು ಬಸ್ಸುಗಳ ಸೌಕರ್ಯಗಳಿವೆ. ಇಲ್ಲಿಂದ ಸುಮಾರು 72 ಕಿ.ಮೀ ದೂರದಲ್ಲಿ ಅಮರನಾಥ ದೇವಾಲಯವಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more