Search
  • Follow NativePlanet
Share
» »ಭಲೆ ಅಲೆಪ್ಪಿ ಎಂದಿಗೂ ಮರೆಯಲಾರೆ ನಿನ್ನ

ಭಲೆ ಅಲೆಪ್ಪಿ ಎಂದಿಗೂ ಮರೆಯಲಾರೆ ನಿನ್ನ

By Vijay

ವಿರಾಮದ ವೇಳೆಯನ್ನು ಆರಾಮಾಗಿ ಕಳೆಯುವುದಕ್ಕೊಂದು ಸ್ಥಳವನ್ನು ಹುಡುಕುತ್ತಿದ್ದರೆ, ಕೇರಳಾದ ಅಲೆಪ್ಪಿ ನಿಮಗಾಗಿ ಕಾದಿದೆ. ಒಂದು ಕಡೆ ಕಡಲು, ಕಡಲಿನಾಳದ ಹವಳಗಳು ತೇಲಿಬಂದು ಸೃಷ್ಟಿಸಿದ ಹವಳದ ದಂಡೆಗಳು... ಪಾಮ್ ಮರಗಳ ದಟ್ಟ ಕಾನು... ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಅಗಾಧ ಜಲಧಿ... ಹಿನ್ನೀರು! ಈ ಎಲ್ಲವೂ ಒಂದೇ ಕಡೆ ಕಲೆತು ಆಗಿದ್ದು ಅಲ್ಲೆಪ್ಪಿ.

ಐಸಿಸಿ ವಿಶ್ವ ಕಪ್ ಕೊಡುಗೆ : ಅಂತಾರಾಷ್ಟ್ರೀಯ ಫ್ಲೈಟುಗಳ ಮೇಲೆ 8000 ರೂ. ಕಡಿತ

ಇಂತಹ ಅದ್ಭುತ ಪ್ರಕೃತಿ ಸೌಂದರ್ಯದ ತವರಾಗಿರುವ ಅಲೆಪ್ಪಿ ಅಥವಾ ಮಲಯಾಳಂನಲ್ಲಿ ಕರೆಯಲಾಗುವ ಅಲಪುಳಾ "ಪೂರ್ವದ ವೆನಿಸ್" ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ನೀವೇನಾದರೂ ವನಿಸ್ ಪಟ್ಟಣಕ್ಕೆ ಭೇಟಿ ನೀಡಿದ್ದರೆ, ಈ ಪಟ್ಟಣಕ್ಕೆ ಸಂದ ಬಿರುದು ನಿಜಕ್ಕೂ ಅರ್ಥಪೂರ್ಣವಾದುದು ಎಂತಲೇ ಹೇಳುತ್ತೀರಿ. ನಿಮ್ಮೊಳಗೆ ಮಧುರವಾದ ಭಾವನೆಗಳನ್ನು ಈ ಪ್ರದೇಶ ಉದ್ದೀಪಿಸುತ್ತದೆ. ಕಲ್ಪನೆಗಳೆಲ್ಲವೂ ಸಾಕಾರಗೊಂಡಷ್ಟು ದಿಗ್ಭ್ರಮೆಗೊಳಿಸುವ ಶಕ್ತಿ ಇಲ್ಲಿಯ ಭೌಗೋಳಿಕ ರಚನೆಗೆ ಇದೆ.

ವಿಶೇಷ ಲೇಖನ : ಸಂದರ್ಶಿಸಲು ಮನ ಚಡಪಡಿಸುವ ಇಡುಕ್ಕಿ

ಅಲೆಪ್ಪಿಗೆ ಒಮ್ಮೆ ಬಂದು ಇಲ್ಲಿನ ಜಲಮಾರ್ಗಗಳಲ್ಲಿ ಸಂಚರಿಸಿದರೆ ಸಾಕು, ನೀವು ಆ ಕ್ಷಣಗಳನ್ನು ಜೀವಮಾನದಲ್ಲಿ ಮತ್ತಿನೆಂದೂ ಮರೆಯಲಾರಿರಿ! ಇಲ್ಲಿನ ಕಡಲ ತೀರ, ಸರೋವರಗಳು, ದೋಣಿ ಮನೆ ಇವೆಲ್ಲವೂ ನಿಮಗೆ ಹೊಸ ಕಲ್ಪನೆಯನ್ನೇ ಗರಿಗೆದರಿಸುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತ ಹಿನ್ನೀರಿನಲ್ಲಿ ದೋಣಿ ವಿಹಾರ ಮಾಡುತ್ತ ಜಗತ್ತೇ ಮರೆಯಬಹುದಾದಷ್ಟು ಅನುಭೂತಿ ನಿಮ್ಮದಾಗುತ್ತದೆ. ಅಲ್ಲದೆ ಪಟ್ಟಣದ ತುಂಬ ಇತರೆ ಆಕರ್ಷಣೆಗಳು ಹಾಗೂ ಪ್ರಮುಖ ದೇವಸ್ಥಾನಗಳನ್ನೂ ಸಹ ಕಾಣಬಹುದು.

ವಿಶೇಷ ಲೇಖನ : ತೆಕ್ಕಡಿ ಏನೀದರ ವಿಶೇಷತೆ?

ಬನ್ನಿ ಪ್ರಸ್ತುತ ಲೇಖನದ ಮೂಲಕ ನಾವೂ ಕೂಡ ಒಮ್ಮೆ ಅಲೆಪ್ಪಿಯನ್ನು ಸುತ್ತೋಣ.

ಉಪಯುಕ್ತ ಕೊಂಡಿ : ಅಲೆಪ್ಪಿಯಲ್ಲಿರುವ ಹೋಟೆಲುಗಳು

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ದೋಣಿ ವಿಹಾರ: ವಿಶ್ವದ ನಾನಾ ಭಾಗಗಳಿಂದ ದೊಣಿ ವಿಹಾರಕ್ಕಾಗಿಯೇ ಜಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೋಣಿ ವಿಹಾರವನ್ನು ನಡೆಸುವುದಕ್ಕೆಂದೇ ಹಲವಾರು ಕ್ಲಬ್‌ಗಳು ಇಲ್ಲಿವೆ. ನೆಹರೂ ಟ್ರೋಫಿ ಹೆಸರಿನಲ್ಲಿ ಪ್ರತಿವರ್ಷವೂ ದೋಣಿವಿಹಾರ ಸ್ಫರ್ಧೆಯನ್ನೂ ನಡೆಸಿ, ರೋಲಿಂಗ್‌ ಟ್ರೋಫಿ ನೀಡಲಾಗುತ್ತದೆ. ಈ ವಿಶಿಷ್ಠ ಸ್ಪರ್ಧೆ ಕಳೆದ ಅರವತ್ತು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವುದು ವಿಶೇಷವಾಗಿದೆ.

ಚಿತ್ರಕೃಪೆ: Sarath Kuchi

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ನಿರ್ದಿಷ್ಟ ಗುರಿಯನ್ನು ಯಾರು ಮೊದಲು ತಲುಪುತ್ತಾರೆ? ಅವರ ಅನುಭವ, ಸಾಹಸ ಇತ್ಯಾಧಿಗಳನ್ನು ಪರಿಗಣಿಸಿ ಬಹುಮಾನ ವಿತರಿಸಲಾಗುತ್ತದೆ. ಪ್ರತೀ ವರ್ಷದ ಅಗಸ್ಟ್‌ ತಿಂಗಳ ಎರಡನೇ ಶನಿವಾರ ಈ ಪಂದ್ಯವನ್ನು ಆಯೋಜಿಸಲಾಗುತ್ತದೆ. ಇದನ್ನು ವೀಕ್ಷಿಸುವ ಸಲುವಾಗಿ ಲಕ್ಷಾಂತರ ಜನರು ಆಗಮಿಸುತ್ತಾರೆ.

ಚಿತ್ರಕೃಪೆ: Ronald Tagra

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ನೋಡುತ್ತಾ ನಿಂತರೆ ಮನಸ್ಸಿನಲ್ಲಿ ವಿದ್ಯುತ್‌ಸಂಚಾರ! ಅಂದಹಾಗೆ ಮಳೆಯ ವರಸೆ ಹೇಗಿದೆ ಎಂಬುದನ್ನು ಅವಲಂಬಿಸಿ ನೀವು ಅಲೆಪ್ಪಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು.

ಚಿತ್ರಕೃಪೆ: Ronald Tagra

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಕೇವಲ ದೋಣಿ ವಿಹಾರ, ಚಾರಣ, ಸ್ಥಳ ವೀಕ್ಷಣೆಗಳು ಅಲೆಪ್ಪಿ ಪ್ರವಾಸದ ಉದ್ದೇಶವಲ್ಲ, ಅಲೆಪ್ಪಿಯನ್ನು ಭೇಟಿ ಮಾಡಲುಅಧ್ಯಾತ್ಮಿಕ ಕಾರಣವೂ ಇದೆ. ಮನಸಿಗೆ ಮುದ ನೀಡುವ ಹಲವಾರು ಆಧ್ಯಾತ್ಮಿಕ ತಾಣಗಳ ನೆಲೆಬೀಡಾಗಿದೆ ಅಲೆಪ್ಪಿ. ದೇವಾಲಯಗಳ ಭೇಟಿಯ ಮೂಲಕ ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ಹುಡುಕುತ್ತಿದ್ದವರಾದರೆ ಖಂಡಿತವಾಗಿಯೂ ಆ ಖುಷಿ ನಿಮಗೆ ಇಲ್ಲಿ ಬಂದಾಗ ಸಿಗುತ್ತದೆ.

ಚಿತ್ರಕೃಪೆ: swifant

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಅಂಬಾಲಪುಳದ ಶ್ರೀಕೃಷ್ಣ ದೇವಸ್ಥಾನ, ಮುಲ್ಲಕ್ಕಲ್ಲಿನ ರಾಜೇಶ್ವರಿ ದೇವಸ್ಥಾನ, ಚೆಟ್ಟಿಕುಲಂಗರ ಭಗವತಿ ದೇವಾಲಯ, ಮನ್ನಾರಸಾಲಾದ ಶ್ರೀ ನಾಗರಾಜ ದೇವಾಲಯ, ಮತ್ತು ಎಡತುವಾ ಚರ್ಚ್‌, ಸೇಂಟ್ ಸೆಬಾಸ್ಟಿಯನ್ ಚರ್ಚ್, ಚಂಪಾಕುಲಮ್ ಚರ್ಚ್ ಮುಂತಾದವು ಇಲ್ಲಿಯ ಪ್ರಸಿಧ್ದ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳು. ಅಂಬಾಲಪುಳದ ಶ್ರೀಕೃಷ್ಣ ದೇವಸ್ಥಾನ.

ಚಿತ್ರಕೃಪೆ: Balagopal.k

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಕ್ರಿಶ್ಚಿಯನ್ ಧರ್ಮ ಪ್ರಸಾರಕ್ಕಾಗಿ ದಕ್ಷಿಣ ಭಾರತಕ್ಕೆ ಬಂದಿದ್ದ ಸೇಂಟ್ ಥಾಮಸ್ ಇಲ್ಲಿ ಇಲ್ಲಿ ತಂಗಿದ್ದ ಎಂಬ ನಂಬಿಕೆಯೂ ಇಲ್ಲಿನ ಜನರಲ್ಲಿದೆ. ಬೌದ್ಧ ಧರ್ಮದ ಪ್ರೇರಣೆಗೂ ಈ ಪ್ರದೇಶ ಒಳಗಾಗಿದೆ. ಇಲ್ಲಿರುವ ಭೌಧ್ಧ ಸ್ಮಾರಕಗಳನ್ನು ಕೇರಳ ಸಂರಕ್ಷಿಸಿದೆ. ಕುರುಮಾಡಿ ಕುಟ್ಟನ್‌ ಪ್ರತಿಮೆ ಇಲ್ಲಿನ ಚಾರಿತ್ರಿಕ ವೈಭವವನ್ನು ನೆನಪುಮಾಡಿಕೊಡುತ್ತದೆ. ಇದಕ್ಕೆ ಧಾರ್ಮಿಕ ಲೇಪವೂ ಇದೆ.

ಚಿತ್ರಕೃಪೆ: Raj

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಕೇರಳದ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಅಲೆಪ್ಪಿಗೆ ಪ್ರಮುಖ ಸ್ಥಾನ. ಇಲ್ಲಿನ ಫಥಿರ್ಮನಾಲ್‌ ಎಂಬ ದ್ವೀಪ ಸರಣಿಯಂತೂ ಮನಮೋಹಕ. ಎಲ್ಲೆಲ್ಲಿಂದಲೋ ವಲಸೆ ಬಂದ ಹಕ್ಕಿಗಳು ಇಲ್ಲಿಯ ವೈವಿಧ್ಯತೆಯನ್ನು ಹೆಚ್ಚಿಸಿವೆ. ಇದು ಅಪರೂಪದ ಪಕ್ಷಿಗಳ ವಾಸಸ್ಥಾನವಾಗಿ ಗಮನ ಸೆಳೆಯುತ್ತದೆ. ನಿಮ್ಮ ಕೇರಳ ಪ್ರವಾಸದ ಅನುಭವದಲ್ಲಿ ಅಲ್ಲೆಪ್ಪಿ ಸದಾ ನೆನಪಿನಲ್ಲುಳಿಯುವಂತದ್ದು.

ಚಿತ್ರಕೃಪೆ: Saad Faruque

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ವೆಂಬನಾಡ್‌ ಸರೋವರ ಇಲ್ಲಿನ ಭೂ ವಿನ್ಯಾಸಕ್ಕೆ ಹೊಸ ಕಾಂತಿಯನ್ನು ನೀಡಿದಂತೆ ಭಾಸವಾಗುತ್ತದೆ. 'ಕೇರಳದ ಅನ್ನದ ಪಾತ್ರೆ' ಎಂದೇ ಹೆಸರಾದ ಈ ಪ್ರದೇಶಕ್ಕೆ ನೀವು ಖಂಡಿತವಾಗಿಯೂ ಭೇಟಿ ನೀಡಲೇ ಬೇಕು. ಆ ಪುಳಕ ನಿಮ್ಮನ್ನು ಬಹುಕಾಲ ಕಾಡುತ್ತದೆ. ನಿಮ್ಮ ರಜಾ ದಿನಗಳನ್ನು ಮತ್ತಷ್ಟು ಪರಿಪೂರ್ಣವಾಗಿಸುವ ಎಲ್ಲ ರೀತಿಯ ಪ್ರಾಕೃತಿಕ ಸಂಪತ್ತು ಇಲ್ಲಿ ನೆಲೆಸಿದೆ.

ಚಿತ್ರಕೃಪೆ: Rahuldb

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಆಲಪುಳಾವು ಪ್ರಾಚೀನ ವಸ್ತುಗಳಿಗೆ ಸಂಬಂಧಿಸಿದಂತೆ ಪ್ರಾಚೀನ ಗ್ರೀಸ್ ಮತ್ತು ರೋಮ್‌ನೊಂದಿಗೆ ಮತ್ತು ಮಧ್ಯಮ ಕಾಲಾವಧಿಯಲ್ಲಿ ಹಾಗೂ, ಭಾರತದ ಇತರ ಭಾಗಗಳೊಂದಿಗೆ ವ್ಯಾಪಾರ ಸಂಬಂಧವಗಳನ್ನು ಹೊಂದಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಪ್ರಸಿದ್ಧ ಚೆಟ್ಟಿಕುಲಂಗರ ದೇವಸ್ಥಾನವು ಆಲಪುಳಾ ಜಿಲ್ಲೆಯ ಮಾವೆಲಿಕ್ಕರದಲ್ಲಿದೆ. ಚೆಟ್ಟಿಕುಲಂಗರ ದೇವಿ ದೇವಸ್ಥಾನ.

ಚಿತ್ರಕೃಪೆ: Hellblazzer

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಆಲಪುಳವು ಪೂರ್ವದಲ್ಲಿ ಪತನಂತಿಟ್ಟ ಮತ್ತು ಕೊಟ್ಟಾಯಂ ಜಿಲ್ಲೆಗಳು, ದಕ್ಷಿಣದಲ್ಲಿ ಕೊಲ್ಲಂ ಜಿಲ್ಲೆ, ಉತ್ತರದಲ್ಲಿ ಎರ್ನಾಕುಲಂ ಜಿಲ್ಲೆ ಮತ್ತು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದಿಂದ ಸುತ್ತುವರಿದಿದೆ. ಅಲೆಪ್ಪಿ ಕಡಲ ತೀರದ ಬಯಲುಗಳು ಚತುಷ್ಕ ನಿಕ್ಷೇಪಗಳಿಂದ ರೂಪಿತವಾಗಿದೆ.

ಚಿತ್ರಕೃಪೆ: Pepe Pont

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಈ ಕಡಲ ತೀರವನ್ನು ಸಾಲುಸಾಲಾದ ಮರಳಿನ ರಾಶಿಗಳು ಮತ್ತು ಸಾಲುಬ್ಬುಗಳು ಪುನರಾವರ್ತನೆಯ ಹಿಂಚಲನೆ ಮತ್ತು ಅತಿಕ್ರಮಣದ ಘಟನೆಗಳಿಂದ ವೈಶಿಷ್ಟ್ಯವಾಗಿರಿಸಿದೆ. ಈ ಪ್ರದೇಶದ ಮಣ್ಣು ಸಾಮಾನ್ಯವಾಗಿ ಕಡಲ ತೀರದ ನೆರೆಮಣ್ಣು ಎಂದು ಕರೆಯಲಾಗುವ ಟ್ರೋಪೋಪ್ಸಾಮೆಂಟ್‌ಗಳು-ಟ್ರೋಪೋಫ್ಲುವೆಂಟ್‌ಗಳ ಸಮೂಹಕ್ಕೆ ಸೇರುತ್ತದೆ. ಅಲೆಪ್ಪಿ ಕಡಲ ತೀರದಲ್ಲೊಂದು ಸುಂದರ ಸಂಜೆ.

ಚಿತ್ರಕೃಪೆ: Vinoth Chandar

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ದಿವಾನ್ ರಾಜಾ ಕೇಶವದಾಸ್ ಅವರು ಆಲಪುಳಾವನ್ನು ಬಂದರು ಆಗಿ ಅಭಿವೃದ್ಧಿಗೊಳಿಸಿದ ತಕ್ಷಣ, ಪಟ್ಟಣವು ಟ್ರಾವಂಕೂರ್ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಬಂದರಿನಿಂದ ರಫ್ತು ಪ್ರವರ್ಧಮಾನಕ್ಕೆ ಬಂದಿತು. ಮೆಣಸುನಂತಹ ಸಾಂಬಾರ ಪದಾರ್ಥಗಳು ಮುಖ್ಯ ರಫ್ತು ವಸ್ತುಗಳಾಗಿದ್ದವು.

ಚಿತ್ರಕೃಪೆ: Saad Faruque

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಗುಜರಾತಿನಿಂದ ಬಹಳಷ್ಟು ವ್ಯಾಪಾರಸ್ಥರು ಇಲ್ಲಿ ಬಂದು ನೆಲೆಸುವ ಮೂಲಕ ಪಟ್ಟಣದಲ್ಲಿ ಇಂದಿಗೂ ಸಹ ಗುಜರಾತೀ ಸಮುದಾಯದ ಇರುವಿಕೆಗೆ ಕಾರಣರಾದರು. ಆಲಪುಳಾವು ತೆಂಗಿನ ನಾರಿನ ಉದ್ಯಮದ ಕೇಂದ್ರವಾಗಿದೆ. ನಂತರ ಸ್ಥಳೀಯ ಮತ್ತು ವಿಶ್ವ ಮಾರುಕಟ್ಟೆಗಾಗಿ ತೆಂಗಿನ ನಾರು (ತೆಂಗು ನಾರಿನಿಂದ ತಯಾರಿಸಲಾಗುವ ವಿವಿಧ ಪ್ರಕಾರದ ಹಗ್ಗ) ಪಟ್ಟಣದ ಪ್ರಮುಖ ಉತ್ಪನ್ನವಾಯಿತು.

ಚಿತ್ರಕೃಪೆ: Connie Ma

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಆಲಪುಳಾವು ಇದೀಗ ಕೇರಳದಲ್ಲಿ ಹಿನ್ನೀರು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ. ಪ್ರವಾಸಿಗರನ್ನು ಹಳೆಯ ಜಲಮಾರ್ಗಗಳಲ್ಲಿ ಕೊಂಡೊಯ್ಯಲು "ಕೆಟ್ಟುವಲ್ಲಮ್" ಎಂದು ಸ್ಥಳೀಯವಾಗಿ ಕರೆಯಲ್ಪಡುವ ಮನೆ ದೋಣಿಗಳು ದಿನನಿತ್ಯದ ಆಧಾರದಲ್ಲಿ ಅಥವಾ ದೀರ್ಘಾವಧಿಯಲ್ಲೂ ಸಹ ಬಾಡಿಗೆಗೆ ಲಭ್ಯವಿರುತ್ತದೆ.

ಚಿತ್ರಕೃಪೆ: Saad Faruque

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಈ ಮನೆ ದೋಣಿಗಳು ಸಾಮಾನ್ಯವಾಗಿ ಎರಡು ಶಯನಗೃಹಗಳೊಂದಿಗೆ ಹೊಂದಿಕೊಂಡಂತೆ ಶೌಚಾಲಯಗಳನ್ನು ಹೊಂದಿರುತ್ತದೆ. ಕೆಲವು ದೋಣಿಗಳು ವಾತಾನುಕೂಲಿ ಸೌಲಭ್ಯವಿರುವ ಶಯನಗೃಹಗಳನ್ನು ಹೊಂದಿರುತ್ತವೆ. ನಿಯತ ಪ್ರವಾಸವು ಸಾಂಪ್ರದಾಯಿಕ ಕುಟ್ಟನಾಡು ಶೈಲಿಯಲ್ಲಿ ದೋಣಿಯಲ್ಲೇ ತಯಾರಿಸಿದ ಆಹಾರವನ್ನು ಒಳಗೊಂಡಿರುತ್ತದೆ. ಆಲಪುಳವು ಕೇರಳದಲ್ಲಿ ಅರಣ್ಯವನ್ನೇ ಹೊಂದಿರದ ಜಿಲ್ಲೆಯಾಗಿ ಅನನ್ಯತೆಯನ್ನು ಪಡೆದಿದೆ.

ಚಿತ್ರಕೃಪೆ: Saad Faruque

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಚಂಪಾಕುಲಂ ಚರ್ಚ್‌ ಕೇರಳದಲ್ಲಿರುವ ಪ್ರಮುಖ ಚರ್ಚುಗಳಲ್ಲಿ ಒಂದೆನಿಸಿದೆ. ಇದನ್ನು ನಿರ್ಮಿಸಿದ್ದು 427ನೇ ಇಸವಿಯಲ್ಲಿ ಎನ್ನುತ್ತದೆ ಐತಿಹಾಸಿಕ ದಾಖಲೆ. ಹಲವು ಸಂದರ್ಭಗಳಲ್ಲಿ ಈ ಚರ್ಚನ್ನು ನವೀಕರಣಗೊಳಿಸಲಾಗಿದೆ. ಸಂಪದ್ಭರಿತ ಹಸಿರು ಪರಿಸರದಲ್ಲಿ ಈ ಚರ್ಚು ಕಂಡುಬರುತ್ತದಾದ್ದರಿಂದ ಮನಮೋಹಕವೂ, ಭಕ್ತಿ ಪ್ರಧಾನಕವೂ ಆಗಿದೆ. ಈ ಚಚಿನ ಬಳಿ ಹಲವಾರಿ ಶಿಲಾ ಶಾಸನಗಳಿದ್ದು ಪ್ರತಿಯೊಂದೂ ಮಹತ್ವದ ಕಾಲಘಟ್ಟಗಳನ್ನು ದಾಖಲಿಸಿಟ್ಟುಕೊಂಡಿದೆ.

ಚಿತ್ರಕೃಪೆ: Bennyvk

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಎಡತುವಾ ಚರ್ಚ್ಅನ್ನು ಸೇಂಟ್‌ ಚರ್ಚ್ ಎಂದೂ ಕರೆಯುತ್ತಾರೆ. ಜಾರ್ಜ್ ಕ್ಯಾಥೊಲಿಕ್ ಚರ್ಚ್ ಅಥವಾ ಎಡತುವಾ ಪಲ್ಲಿ ಎಂದು ಮತ್ತಷ್ಟು ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವನ್ನು ಕ್ರಿಶ್ಚಿಯನ್ನರ ಪವಿತ್ರ ಯಾತ್ರಾ ಸ್ಥಳಗಳ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಅಪೂರ್ವ ವಾಸ್ತುಶಿಲ್ಪ ಇಲ್ಲಿಗೆ ಪ್ರವಾಸಿಗರನ್ನೂ ಸೆಳೆಯುತ್ತದೆ. ಸಮೀಪದಲ್ಲಿಯೇ ಪಂಬಾ ನದಿಯು ಹರಿಯುತ್ತದೆ. ಈ ಚರ್ಚಿಗೆ ಎರಡು ಶತಮಾನಗಳಷ್ಟು ಇತಿಹಾಸವಿದೆ. ಮಧ್ಯಯುಗದ ಯುರೋಪ್ ಚರ್ಚುಗಳನ್ನು ಹೋಲುವಂತೆ ಈ ಚರ್ಚನ್ನು ಕಟ್ಟಲಾಗಿದೆ. ಇಲ್ಲಿ ನಡೆಯುವ ಫೆಸ್ಟ್‌ ಕೇರಳದ ನಾನಾ ಭಾಗಗಳಿಂದ ಜನರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Johnchacks

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಕರುಮಾಡಿ ಕುಟ್ಟನ್(ಕರುಮಾಡಿ ಒಂದು ಹುಡುಗನ ಹೆಸರು)ಒಬ್ಬ ಸಾಹಸಿಗನ ಹೆಸರು ಅವನು ಬೌದ್ಧ ಧರ್ಮದವನು. ಅವನಿಂದ ಭಾರತದಲ್ಲಿ ಬೌದ್ಧ ಧರ್ಮ ಕ್ರಮೇಣವಾಗಿ ಬೆಳೆಯಲು ಶುರುವಾಯಿತ್ತು. ಆವನ ಹೆಸರನ್ನೇ ಈ ಪ್ರದೇಶಕ್ಕಿಡಲಾಗಿದೆ. 9ನೇ ಶತಮಾನದಲ್ಲಿ ಕರುಮಾಡಿ ಈ ದೇವಸ್ಥಾನವನ್ನು ಕಟ್ಟಲಾಯಿತು. ಇಲ್ಲಿನ ವಿಗ್ರಹವನ್ನು ಗ್ರಾನೈಟಿನಿಂದ ಕೆತ್ತನೆ ಮಾಡಲಾಗಿದೆ. ಕೇರಳದಲ್ಲಿ ಇರುವ ಒಂದೇ ಒಂದೇ ಬೌದ್ಧಮತೀಯ ದೇವಸ್ಥಾನವಾಗಿದೆ.

ಚಿತ್ರಕೃಪೆ: Tootapi

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಅಲೆಪ್ಪಿಯಲ್ಲಿ ನೋಡಬಹುದಾದ ಮತ್ತೊಂದು ಆಕರ್ಷಣೆ ಕೃಷ್ಣಾಪುರಂ ಅರಮನೆ. 1950 ರಲ್ಲಿ ಕೇರಳದ ಪುರಾತತ್ವ ಇಲಾಖೆ ಹಳೆಯ ಅರಮನೆ ಸಂಪೂರ್ಣ ನೆಲಕಚ್ಚುವ ಮುನ್ನ ಅದರ ರಕ್ಷಣೆಗೆ ಮುಂದಾಗಿದ್ದರ ಪರಿಣಾಮ ಈಗಿನ ಸ್ವರೂಪದಲ್ಲಿ ಉಳಿದುಕೊಂಡಿದೆ. ಮೂರು ಹಂತದಲ್ಲಿ ತಲೆ ಎತ್ತಿ ನಿಂತಿರುವ ಈ ಭವ್ಯ ಅರಮನೆ ಪೂರ್ವ ಮತ್ತು ಪಶ್ಚಿಮದ ವಾಸ್ತು ಶೈಲಿಗಳನ್ನು ಒಳಗೊಂಡಿದೆ. ಅರಮನೆಯ ಆವರಣ ಸುಂದರವಾದ ಹುಲ್ಲುಹಾಸು, ಮನಸೆಳೆಯುವ ಕಾರಂಜಿ ಹಾಗೂ ನೀರಿನ ಕೊಳವನ್ನು ಒಳಗೊಂಡಿದೆ.

ಚಿತ್ರಕೃಪೆ: Appusviews

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಅಲೆಪ್ಪಿಯಲ್ಲಿರುವ ಮನ್ನಾರಸಾಲ್ ಶ್ರೀ ನಾಗರಾಜ ದೇವಾಲಯ ಕೇರಳದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ವಿಶ್ವದಾದ್ಯಂತ ಈ ದೇವಸ್ಥಾನಕ್ಕೆ ಭಕ್ತರಿದ್ದಾರೆ. ಕೇರಳದ ಶಕ್ತಿಕೇಂದ್ರ ಇದು. ಇಲ್ಲಿನ ಸ್ಥಳ ಪುರಾಣ ಅತ್ಯಂತ ಕುತೂಹಲಕಾರಿ. ಈ ದೇವಸ್ಥಾನಕ್ಕೆ ಪರಶುರಾಮ ಹಾಗೂ ವಿಷ್ಣುವಿನ ಕೃಪೆಯೂ ಇರುವುದಾಗಿ ನಂಬಿಕೆಯಿದೆ. ಹೆಚ್ಚಾಗಿ ಸಂತಾನ ಹೀನ ಹೆಣ್ಣುಮಕ್ಕಳು ಇಲ್ಲಿಗೆ ಬಂದು ಹರಕೆಹೊತ್ತುಕೊಳ್ಳುತ್ತಾರೆ. ಪ್ರತಿನಿತ್ಯವೂ ವಿಶೇಷ ಸಂಸ್ಕಾರಗಳು, ಶಾಸ್ತ್ರ ವಿಧಿಗಳು ಮತ್ತು ಸೇವೆಗಳು ಇಲ್ಲಿ ನಾಗರಾಜನನ್ನು ಸಂಪ್ರೀತಗೊಳಿಸುವ ಸಲುವಾಗಿಯೇ ನಡೆಯುತ್ತದೆ.

ಚಿತ್ರಕೃಪೆ: www.mannarasala.org

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

'ಕೇರಳದ ಅನ್ನದ ಬಟ್ಟಲು' ಎಂದೇ ಪ್ರಸಿದ್ದವಾದ ಸ್ಥಳ ಕುಟ್ಟನಾಡು. ದೇಶದ ಕೃಷಿ ಭೂಪಟದಲ್ಲಿಯೂ ಕುಟ್ಟನಾಡ್‌ ಗೆ ವಿಶೇಷ ಸ್ಥಾನವಿದೆ. ಅಚ್ಚನ್‌ ಕೋವಿಲ್‌, ಮನಿಮಾಲ, ಮೀನಾಚಿಲ್‌, ಮತ್ತು ಪಾಂಪ ಮುಂತಾದ ನದಿಗಳು ಇಲ್ಲಿನ ಕೃಷಿಕರಿಗೆ ಜೀವದಾಯಿನಿಗಳು. ಇಲ್ಲಿನ ಪ್ರಾಕೃತಿಕ ಸೊಬಗೂ ಮನಮೋಹಕವಾಗಿದೆ. ಇಲ್ಲಿನ ಜನರ ಜೀವನ ಶೈಲಿ ಅತ್ಯಂತ ಸರಳ. ಇಲ್ಲಿನ ನದಿಗಳಲ್ಲಿ ವಿಹಾರ ಮಾಡುವ ಆಸೆಯದ್ದರೆ, ಬಾಡಿಗೆ ದೋಣಿಗಳನ್ನು ಪಡೆದುಕೊಂಡು ಸುತ್ತಾಡಬಹುದು. ಅತ್ಯಂತ ಖುಷಿ ಕೊಡುವ ಸಂಗತಿಯೆಂದರೆ ಇಲ್ಲಿನ ಜನರು ನಮ್ಮೊಂದಿಗೆ ಆತ್ಮೀಯವಾಗಿ ಬೆರೆಯುತ್ತಾರೆ.

ಚಿತ್ರಕೃಪೆ: Zuhairali

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಅಲೆಪ್ಪಿಯಲ್ಲಿರುವ, ಪ್ರಾಚೀನ ಮಹಾಕಾವ್ಯ ಮಹಾಭಾರತದಲ್ಲಿಯೂ ಉಲ್ಲೇಖವಿರುವ ಕೇರಳದ ಪಾಂಡವರ ಶಿಲೆಯನ್ನು ನೀವು ನೋಡಲೇಬೇಕು. ಹಲವಾರು ಪೌರಾಣಿಕ ದಂತಕಥೆಗಳನ್ನು ಸಾರುವ ಈ ಪ್ರದೇಸ, ಇಲ್ಲಿನ ಗುಹೆಗಳನ್ನು ನೋಡುವುದೆಂದರೇ ಮನಸಿಗೆ ಪುಳಕ. ಕೌರವರೊಡನೆ ಕಟ್ಟಿದ ಪಂಥದಲ್ಲಿ ಸೋತ ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಪ್ರತೀತಿ. ಇಲ್ಲಿನ ಕಾಡುಗಳಲ್ಲಿ ಸತ್ತಾಡುತ್ತ, ಈ ಗುಹೆಯಲ್ಲಿಯೇ ಬಿಡಾರ ಹೂಡಿದ್ದರು ಎನ್ನುತ್ತದೆ ಸ್ಥಳ ಪುರಾಣ.

ಚಿತ್ರಕೃಪೆ: Gramam

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಪ್ರಮುಖವಾಗಿ ಅಲೆಪ್ಪಿ ಹಿನ್ನೀರಿನ ಪ್ರವಾಸೋದ್ಯಮಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದು, ದೋಣಿ ಮನೆಗಳು ಸಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರ ಮನ ತಣಿಸಲು ಕಾಯ್ದು ಕುಳಿತಿರುತ್ತವೆ. ಒಂದೊಮ್ಮೆ ಪ್ರಶಸ್ತ ಸಮಯ ಬಂದಿತೆಂದರೆ ಸಾಕು ನೀರಿನ ಮೇಲ್ಮೈ ಮೇಲೆ, ಎಲ್ಲೆಡೆ ಈ ಸುಂದರ ದೋಣಿ ಮನೆಗಳು ಕಾರುಬಾರನ್ನು ಕಾಣಬಹುದು.

ಚಿತ್ರಕೃಪೆ: McKay Savage

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಅಲೆಪ್ಪಿಯ ಸುಂದರ ಪರಿಸರದಲ್ಲಿ...."ಎಲ್ಲಿಗೋ ಪಯಣ....ಯಾವುದೋ ದಾರಿ"

ಚಿತ್ರಕೃಪೆ: Travelling Slacker

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಅಲೆಪ್ಪಿಯಲ್ಲಿ ಎಲ್ಲಿ ನೋಡಿದರಲ್ಲಿ ನೀರು...ಅಬ್ಬಾ ಅಂತು ಒಂದು ಕಟ್ಟೆಯಾದರೂ ಸಿಕ್ಕಿತಲ್ಲ...ಕಾಲ್ನಡಿಗೆಗೆಂದು.

ಚಿತ್ರಕೃಪೆ: Pepe Pont

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಅಲೆಪ್ಪಿ ಕೇವಲ ಹಿನ್ನೀರಿನ ತಾಣವಲ್ಲ. ಇಲ್ಲಿನ ಕಡಲ ತೀರವೂ ಸಹ ಅಷ್ಟೆ ಮನ ಮೋಹಕ. ದೋಣಿ ಮನೆಗಳಲ್ಲಿ ವಿಹರಿಸಿ ಸಾಕಾಗಿದ್ದರೆ ಹಾಯಾಗಿ ಬೀಚಿಗೊಮ್ಮೆ ಭೇಟಿ ನೀಡಿ, ಅರಬ್ಬಿ ಸಮುದ್ರದಲೆಗಳ ಸಂಗೀತವನ್ನೂ ಸಹ ಆಲಿಸಿ ಸಂತಸಪಡಬಹುದು.

ಚಿತ್ರಕೃಪೆ: Julia Maudlin

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಕ್ಯಾಮೆರಾ ಒಂದಿದ್ದರೆ ಸಾಕು ಎಲ್ಲರಿಗೂ ಛಾಯಾಗ್ರಾಹಕ ಕಲೆಯ ಹುಚ್ಚನ್ನು ಹಿಡಿಸುತ್ತದೆ, ಈ ಸುಂದರ ಅಲೆಪ್ಪಿ.

ಚಿತ್ರಕೃಪೆ: vincelaconte

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಸಾಮಾನ್ಯವಾಗಿ ಅಲೆಪ್ಪಿಯಲ್ಲಿ ವಿವಿಧ ಬಗೆಯ ದೋಣಿ ಮನೆಗಳು ಪ್ರವಾಸಿಗರಿಗೆಂದು ಬಾಡಿಗೆ ಮೇಲೆ ಲಭ್ಯವಿರುತ್ತದೆ. ಒಂದು ಕೋಣೆಯ, ಬಹು ಕೋಣೆಯ ಹೀಗೆ ವಿವಿಧ ದೋಣಿ ಮನೆಗಳನ್ನು ಪ್ರವಾಸಿಗರು ತಮ್ಮ ಅವಶ್ಯಕತೆಗಳನುಸಾರವಾಗಿ ವಿಹರಿಸಲು ಪಡೆಯಬಹುದಾಗಿದೆ. ಚಿತ್ರದಲ್ಲಿರುವುದು ಎರಡು ಕೋಣೆಗಳುಳ್ಳ ಒಂದು ದೋಣಿ ಮನೆ.

ಚಿತ್ರಕೃಪೆ: alleppey hotels

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಅಷ್ಟೆ ಏಕೆ, ವಿಶಾಲವಾದ ಸಭಾಂಗಣವುಳ್ಳ ದೋಣಿ ಮನೆಗಳೂ ಸಹ ಉದ್ಯಮಿ ಪ್ರವಾಸಿಗಳಿಗೆಂದು ಲಭ್ಯವಿರುತ್ತದೆ.

ಚಿತ್ರಕೃಪೆ: alleppey hotels

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಮೀನು ಹಿಡಿಯಲು ಕಾಯುತಿರುವ ಈ ಬೆಸ್ತನಂತೆ ಪ್ರವಾಸಿಗರಿಗಾಗಿ, ನಿಮಗಾಗಿ ಕಾಯುತಿದೆ ಅಲೆಪ್ಪಿ. ಅಲ್ಲೆಪ್ಪಿಗೆ ಹೊರಡಲು ನವೆಂಬರ್‌ನಿಂದ ಪೆಭ್ರುವರಿಯವರೆಗೂ ಸಕಾಲ. ಇಲ್ಲಿಗೆ ಬರುವುದಕ್ಕೆ ರೈಲು, ವಿಮಾನ ಮತ್ತು ಬಸ್‌ ವ್ಯವಸ್ಥೆಯನ್ನು ನೀವು ಅವಲಂಬಿಸಬಹುದು. ಅಲ್ಲೆಪ್ಪಿಯಲ್ಲಿ ವಿಮಾನ ನಿಲ್ದಾಣ ಇಲ್ಲದಿದ್ದರೂ ಕೆಲವೇ ನೂರು ಕಿ.ಮಿ ಅಂತರದಲ್ಲಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

ಚಿತ್ರಕೃಪೆ: Saad Faruque

ಭಲೆ ಭಲೆ ಅಲೆಪ್ಪಿ:

ಭಲೆ ಭಲೆ ಅಲೆಪ್ಪಿ:

ಅಲ್ಲದೆ ಕೊಚ್ಚಿ ಪಟ್ಟಣಕ್ಕೆ ದೇಶದ ಎಲ್ಲಾ ಮಹಾನಗರಗಳಿಂದ ರೈಲು ಸಂಪರ್ಕವಿದೆ ಹಾಗೂ ಕೊಚ್ಚಿಯಿಂದ ಅಲೆಪ್ಪಿಗೂ ಸಹ ರೈಲಿನ ಸಮ್ಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 47 ಈ ಪಟ್ಟಣದ ನಡುವೆಯಿಂದಲೇ ಹಾಯ್ದು ಹೋಗಿರುವುದುರಿಂದ ಸಾಕಷ್ಟು ಬಸ್‌ ಸೌಕರ್ಯವೂ ಇದೆ.

ಚಿತ್ರಕೃಪೆ: swifant

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X